0

0

0

ಈ ಲೇಖನದಲ್ಲಿ

ಅರಿಶಿನದ ಹಾಲು ಕುಡಿದು ರೋಗನಿರೋಧಕತೆ, ನಿದ್ದೆ ಉತ್ತಮವಾಗಿಸಿಕೊಳ್ಳಿ  
3

ಅರಿಶಿನದ ಹಾಲು ಕುಡಿದು ರೋಗನಿರೋಧಕತೆ, ನಿದ್ದೆ ಉತ್ತಮವಾಗಿಸಿಕೊಳ್ಳಿ  

ನೀವು ದೇಹಕ್ಕೆ ಸೂಕ್ತವಾದ ಆಹಾರ ಸೇವಿಸಿದರೆ ಅದು ಪುನಶ್ಚೇತನಗೊಳ್ಳ್ಳುತ್ತದೆ, ಗುಣಮುಖವಾಗುತ್ತದೆ ಮತ್ತು ಸರಿಯಾಗುತ್ತದೆ.  ನಿಮ್ಮ ಮನ:ಸ್ಥಿತಿ, ಮೆದುಳು ಮತ್ತು ರೋಗನಿರೋಧಕತೆಗೆ ಅರಿಶಿನದ  ಹಾಲಿನ ಸ್ವಾಸ್ಥ್ಯ ಪ್ರಯೋಜನಗಳನ್ನು ಪಡೆಯಿರಿ. 

 ಅರಿಶಿನದ ಹಾಲು ಕುಡಿದು ರೋಗನಿರೋಧಕತೆ, ನಿದ್ದೆ ಉತ್ತಮವಾಗಿಸಿಕೊಳ್ಳಿ  

ಹಲವಾರು ಪ್ರಯೋಜನಗಳಿಂದ ಕೂಡಿದ್ದ ಅರಿಶಿನವನ್ನು ಪೌಷ್ಟಿಕಾಂಶಗಳಿಂದ ಸಮೃದ್ಧ ಆಹಾರ (ಸೂಪರ್‌ಫುಡ್) ಎಂದು ಪರಿಗಣಿಸಲಾಗಿದೆ. ಹಾಲು ಕೂಡಾ ಪೋಷಕಾಂಶಗಳಿಂದ ದಟ್ಟವಾದ ಆಹಾರವಾಗಿದ್ದು ಅನಾದಿ ಕಾಲದಿಂದಲೂ ಊಟದೊಂದಿಗೆ ಸೇರ್ಪಡೆಯಾಗಿದೆ.  ಒಂದು ದಿನ, ಯಾರೋ ಒಬ್ಬರು ಎರಡನ್ನೂ ಬೆರಸಿಕೊಂಡರು ಮತ್ತು ಅದಕ್ಕೆ ಸಿಕ್ಕ ಹೊಸ ಹೆಸರು – ಅರಿಶಿನದ ಹಾಲು. 

ಆದರೆ, ಮಲಗುವ ಮುನ್ನ ನಿಮ್ಮ ಅಜ್ಜಿಯು ಲೋಟ ತುಂಬಾ ಅರಿಶಿನ ಮಿಶ್ರಿತ ಹಾಲು ಕುಡಿಯಲು ನೀಡುತ್ತಿದ್ದದ್ದು ನಿಮಗೆ ನೆನಪಿದೆಯೇಇಲ್ಲವೇ ಹೊರಗೆ ಆಡಲು ಹೋದಾಗ ಗಾಯಗೊಂಡು ಮನೆಗೆ ಹಿಂದಿರುವಾಗ ನಿಮ್ಮ ಅಮ್ಮ ಗ್ಲಾಸ್ ತುಂಬಾ ಅರಶಿನದ ಹಾಲು ಕೊಟ್ಟಿದ್ದು ನೆನಪಿರಬೇಕಲ್ಲವೇನಿಜ, ಭಾರತೀಯ ಮನೆಗಳಲ್ಲಿ ಅರಿಶಿನ ಮಿಶ್ರಿತ ಹಾಲಿನ ಉಪಯೋಗ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಈ ಸಂಪ್ರದಾಯಿಕ ಪಾನೀಯದ  ಕುರಿತು ಪ್ರಚಲಿತವಾಗಿರುವ ಮೆಚ್ಚುಗೆಯ ಅನಿಸಿಕೆ ಏನೆಂದು ನಾವೂ ತಿಳಿದುಕೊಳ್ಳೋಣ. 

ಅರಿಶಿನದ ಹಾಲಿನ ಬಗ್ಗೆ ಮಾಹಿತಿ  

ಅದು ಬಹಳಷ್ಟು ಮಂದಿ ಸೇವಿಸುವ ಸಂಪ್ರದಾಯಿಕ ಆಹಾರ ವಿಧಾನ. ಕ್ಯಾಫೀನ್‌ರಹಿತವಾಗಿದ್ದು, ಅರಿಶಿನದಿಂದ ತಯಾರಿಸಲಾದ ಈ ಗಿಡಮೂಲಿಕೆಯ (ಹರ್ಬಲ್) ಪಾನೀಯವನ್ನು ನಿಮಗೆ ಇಷ್ಟವಾದ ಹಾಲಿನೊಂದಿಗೆ ಕುಡಿಯಬಹುದು. ಜನರು ಇತರ ಪದಾರ್ಥಗಳನ್ನು ಬೆರಸಿ, ಗಿಡಮೂಲಿಕೆಗಳೊಂದಿಗೆ ಶುಂಠಿ, ಕರಿಮೆಣಸು, ಲವಂಗ, ಏಲಕ್ಕಿ ಮುಂತಾದ ಮಸಾಲೆಗಳನ್ನು ಹಾಗೂ ತುಪ್ಪವನ್ನು ಸೇರಿಸಿ ವೈಶಿಷ್ಟ್ಯದಾಯಕ ಪಾನೀಯವನ್ನಾಗಿ ಮಾಡಿಕೊಳ್ಳುತ್ತಾರೆ. 

ಅರಿಶಿನದ ಹಾಲನ್ನು ಒಳಗೊಂಡ ಉತ್ತಮ ಸಮತೋಲನದ ಆಹಾರದಿಂದ ನಿದ್ದೆಯ ಗುಣಮಟ್ಟ ಸುಧಾರಿಸುತ್ತದೆ,” ಎನ್ನುತ್ತಾರೆ ಚೆನ್ನಯ್ ಮಹಾನಗರದ ಆಹಾರತಜ್ಞೆ ಮತ್ತು ಪ್ರಮಾಣೀಕೃತ ಮಧುಮೇಹರೋಗ ಶಿಕ್ಷಣತಜ್ಞೆ ಆಗಿರುವ ಸೋನಿಯಾ ವೇಲಾರ್ಸನ್. 

ಅರಿಶಿನದ ಹಾಲನ್ನು ಬಿಸಿ ಪಾನೀಯವಾಗಿ ಉಪಯೋಗಿಸುವುದು ಸಂಪ್ರದಾಯವಾಗಿದ್ದರೂ, ಅದನ್ನು ತಂಪಾದ ಪಾನೀಯವನ್ನಾಗಿಯೂ ಸೇವಿಸಬಹುದು. ಅದು  ಕೀಲುನೋವು, ಉರಿಯೂತ ಮತ್ತು ಹೆಚ್ಚಾಗಿರುವ ಒತ್ತಡಗಳೇ ಮೊದಲಾದ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ನಾವೇ ಮಾಡಬಹುದಾದ ಸುಲಭವಾದ ಪಾನಕ. ಅದರಿಂದಾಗಿ ಸುಖಕರ ನಿದ್ದೆ ಮತ್ತು ಮಾನಸಿಕ ವಿಶ್ರಾಂತಿ ಪಡೆಯಲೂ ಸಾಧ್ಯ, ಎನ್ನುತ್ತಾರೆ ಚಂಡೀಘಡ್ ನಗರದ ಲೇಖಕಿ, ವಾಗ್ಮಿ ಹಾಗೂ ಆಯುರ್ವೇದ ಸಲಹೆಗಾರ್ತಿ ಆಗಿರುವ ಡಾ. ಸೋನಿಕಾ ಕೃಷ್ಣನ್. 

ಅರಿಶಿನದ ಹಾಲಿನ ಕುರಿತು ಒಂದು ಗ್ರಹಿಕೆ 

ಪರಂಪರಾಗತವಾದ ಚೀನಿ ಔಷಧಿ ಮತ್ತು ಆಯುರ್ವೇದದ ಮಿಶ್ರಣವು ಅರಿಶಿನದ ಚಹಾ ಮತ್ತು ಅದರೊಂದಿಗೆ ತೆಂಗಿನ ಬೆಣ್ಣೆ, ಗೋಜಿ ಹಣ್ಣುಗಳು ಹಾಗೂ ಕರಿಮೆಣಸು ಉದ್ಭವಿಸಲು ಕಾರಣವಾಗಿದೆ. ಅರಿಶಿನದ ಹಾಲಿನ ಮಾರುಕಟ್ಟೆಯು ಉತ್ಕರ್ಷವಾಗುತ್ತಿದೆವೆಗನ್ ಅಥವಾ ಸಸ್ಯಾಹಾರಿ  (ಬಾದಾಮಿ, ಸೋಯಾ ಹಾಗೂ ತೆಂಗಿನ ಹಾಲು), ಪ್ಯಾಲಿಯೊ ಆಹಾರ ಕ್ರಮ ಹಾಗೂ ಕಚ್ಚಾ ಅಥವಾ ಸಂಸ್ಕರಿಸದ ರೂಪದಲ್ಲೂ ಲಭ್ಯವಿದೆ.  ಪ್ಯಾಕೇಜ್ ಅಥವಾ ರಕ್ಷಣಾತ್ಮಕ ಹೊದಿಕೆಯಲ್ಲಿ ಸಿಗುವ ಅರಿಶಿನ ಆಧಾರಿತ ಪಾನೀಯಗಳ ಮಾರುಕಟ್ಟೆಯ ಪಾಲು 2021 ರಿಂದ 2026 ತನಕ ಅಮೇರಿಕದ 446.08 ಮಿಲಿಯ ಡಾಲರ್‌ಗಳಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ 

ನನ್ನ ಮಗ ಸ್ಕೇಟಿಂಗ್ ಮತ್ತು ಬಾಸ್ಕೆಟ್‌ಬಾಲ್ ಆಟಗಳ ತರಬೇತಿಗೆ (ಕೋಚಿಂಗ್) ಹೋಗುತ್ತಾನೆ. ಆದ್ದರಿಂದ ಅವನ ರೋಗನಿರೋಧಕ ಶಕ್ತಿ ಮತ್ತು ಬಲ ಹೆಚ್ಚಿಸಲು, ನಾನು ಅವನಿಗೆ ನಿಯಮಿತವಾಗಿ ಮಸಾಲೆಯುಕ್ತ ಅರಿಶಿನ ಹಾಲನ್ನು ಕೊಡುತ್ತೇನೆ.  ಅದು ನನ್ನ ಅಜ್ಜಿ ಕೊಡುತ್ತಿರುವ ಅರಿಶಿನ ಹಾಲಿನ ನೆನಪು ತರುತ್ತಿದೆ. ಅದು ನಮ್ಮ ಪ್ರತೀ ರಾತ್ರಿ ಸಮಯದ ಮೆಚ್ಚಿನ ಪಾನೀಯವಾಗಿತ್ತು,” ಎನ್ನುತ್ತಾರೆ ದಿವ್ಯಾ ಅನುರೂಪ್ಬೆಂಗಳೂರಿನಲ್ಲಿ ನೆಲೆಸಿದ ಇ-ಕಾಮರ್ಸ್ ವ್ಯವಸ್ಥಾಪಕಿ ಹಾಗೂ 7-ವರ್ಷದ ಹುಡುಗನ ತಾಯಿ. 

ಆಯುರ್ವೇದ ರೋಗನಿರೋಧಕ ವರ್ಧನೆಯ ಕ್ರಮಗಳ ಅಂಗವಾಗಿ, ಭಾರತ ಸರಕಾರದ ಆಯುಷ್ ಮಂತ್ರಾಲಯವು ದಿನಕ್ಕೊಮ್ಮೆ ಅಥವಾ ಎರಡು ಬಾರಿ 150 ಮಿಲಿ ಲೀಟರ್ ಬಿಸಿ ಹಾಲಿನೊದಿಗೆ ಅರ್ಧ ಚಹಾಚಮಚದಷ್ಟು ಅರಿಶಿನ ಪುಡಿ ಸೇವಿಸುವಂತೆ ಶಿಫಾರಸು ಮಾಡುತ್ತಿದೆ. 

ಅರಿಶಿನದ ಬಗ್ಗೆ ಒಂದಿಷ್ಟು   

ಅರಿಶಿನವು ಕಡು ಹಳದಿ-ಕೇಸರಿ ವರ್ಣದ ಬೇರಾಗಿದ್ದು ನಾವು ಮಾಡುವ ಮೇಲೋಗರ ಅಥವಾ ಸಾರಿಗೆ ಬಣ್ಣ ಹಾಗೂ ರುಚಿ ನೀಡುತ್ತದೆ.  ಅದರ ವೈದ್ಯಕೀಯ ಗುಣಗಳಿಂದಾಗಿ ಬಹಳಷ್ಟು ವರ್ಷಗಳಿಂದ ಅದನ್ನು ಇಷ್ಟಪಡಲಾಗುತ್ತಿದೆ. ಅರಿಶಿನದಲ್ಲಿ ಕರ್ಕ್ಯುಮಿನ್ ಎನ್ನುವ ಸಂಯುಕ್ತವಿದ್ದು, ಅದಕ್ಕೆ ರೋಗನಿರೋಧಕ ಅಥವಾ ಪ್ರತಿರಕ್ಷಣಾ ಗುಣಲಕ್ಷಣಗಳಿದ್ದು ಅದು ಉತ್ಕರ್ಷಣ ನಿರೋಧಕವಾಗಿದೆ 

ಅರಿಶಿನದಲ್ಲಿ ರೋಗನಿರೋಧಕ ಅಥವಾ ಪ್ರತಿರಕ್ಷಣಾ ಗುಣಲಕ್ಷಣಗಳನ್ನು ಹೆಚ್ಚಿಸುವ ಸಾಮರ್ಥ್ಯದೊಂದಿಗೆ, ಉರಿಯೂತ-ವಿರೋಧಿ ಗುಣಗಳಿರುವುದು ಹಲವಾರು ಅಧ್ಯಯನಗಳಲ್ಲಿ ತಿಳಿದುಬಂದಿದೆ.  ಇದರಿಂದಾಗಿ ಮೆದುಳಿನ ಕ್ರಿಯೆಗಳಿಗೆ ಬಲ ದೊರೆಯುತ್ತಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುತ್ತಿದೆ ಹಾಗೂ ಹೃದಯದ ಆರೋಗ್ಯ ಉತ್ತಮವಾಗುತ್ತಿದೆ. ಕರ್ಕ್ಯುಮಿನ್ ಉತ್ತಮವಾದ ಖಿನ್ನತೆ-ನಿರೋಧಕವಾಗಿದೆ ಹಾಗೂ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. 

ಒಂದು ಆಸಕ್ತಿದಾಯಕ ಚರಿತ್ರೆ 

ಅರಿಶಿನದ ಹಾಲು ಪ್ರಾಯಶ: ಕಾಫಿ ಪಾನೀಯ ಮಂದಿರದಲ್ಲಿ ಓರ್ವ ಬುದ್ಧಿವಂತ ಕಾಫಿ ತಯಾರಕನು (ಬರಿಸ್ಟಾ) ಆವಿಷ್ಕಾರ ಮಾಡಿರುವಂತಹ ನವೀನ ಹಾಗೂ ಫ್ಯಾಶನಿನ (ಟ್ರೆಂಡಿ) ಪಾನೀಯ ಆಗಿರಹುದು. ಆದರೆ, ನೂರಾರು ವರ್ಷಗಳಿಂದ ಅದು ಬಳಕೆಯಲ್ಲಿದೆ.  ಭಾರತದ ಪುರಾತನ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಬಂಗಾರದ ಹಾಲನ್ನು ಓಜಸ್ಸು (ಚೈತನ್ಯ ಮತ್ತು ಹುರುಪು)  ಉತ್ತೇಜನಗೊಳಿಸಲು ಶಿಫಾರಸು ಮಾಡಲಾಗುತ್ತಿದೆ.  

ಓಜಸ್ಸು” ಅರ್ಥಾತ್ ಸಂಸ್ಕೃತದಲ್ಲಿ ಚೈತನ್ಯ ಎಂದು ಕರೆಯಲ್ಪಡುವುದು ಅವಶ್ಯಕವಾದ ಜೀವನದ ಶಕ್ತಿ.  ಸಂಪ್ರದಾಯಿಕವಾಗಿ ಅರಿಶಿನದ ಹಾಲು ಎಂದೇ ಕರೆಯಲ್ಪಡುವ ಈ ಪಾನೀಯವು ಚೈತನ್ಯ ಕಾಪಾಡಲು ಮತ್ತು  ಪ್ರತಿರಕ್ಷಣಾ ವ್ಯವಸ್ಥೆಯ ನಿರ್ವಹಣೆಗೆ ನೆರವಾಗುತ್ತಿದೆ.  ಓಜಸ್ಸು ದೇಹದ ಜೀವನಾಂಶದ ಅಗತ್ಯಗಳಿಗೆ ಪೂರಕವಾಗುವುದರೊಂದಿಗೆ, ಮನಸ್ಸಿನ ಸ್ಪಷ್ಟತೆ ಹಾಗೂ ಭಾವನಾತ್ಮಕ ಸ್ಥಿರತೆಗೂ  ಸಹಕಾರಿಯಾಗುತ್ತದೆ. 

ಅರಿಶಿನದ ಹಾಲು ಹೇಗೆ ತಯಾರಿಸುವುದು– ಅದು ಬಹಳ ಸುಲಭ! 

   ಈ ಅರಿಶಿನದ ಹಾಲಿನ ಆರೋಗ್ಯಕರ ರೂಪವನ್ನು ಪ್ರಯತ್ನಿಸಿ.  ಈ ವಿಧಾನದಲ್ಲಿ ನಾವು ಸಸ್ಯಮೂಲದ ಹಾಲನ್ನು ಸೇರಿಸಿದ್ದೇವೆ.  ನೀವು ನಿಮಗೆ ಇಷ್ಟವಾದ ರೂಪವನ್ನು ಆರಿಸಿಕೊಳ್ಳಬಹುದು. 

ಬೇಕಾದ ಪದಾರ್ಥಗಳು: 

ತೆಂಗಿನ ಅಥವಾ ಬಾದಾಮಿ ಹಾಲು – 1 ಕಪ್ 

ಅರಿಶಿನ ಪುಡಿ ಅಥವಾ ಪುಡಿ ಮಾಡಿದ ಅರಿಶಿನ – 1 ಟೀಸ್ಪೂನ್ 

ಶುಂಠಿ – ½ ಟೀಸ್ಪೂನ್ 

ಕರಿಮೆಣಸು – 3 ಅಥವಾ 4 

ಏಲಕ್ಕಿ ಬೀಜಕೋಶ – 3 ಅಥವಾ 4 

ಲವಂಗ –1 

ಪುಡಿಮಾಡಿದ ಖರ್ಜೂರ –1 

ತುಪ್ಪ ½ ಟೀಸ್ಪೂನ್ 

ಮಾಡುವ ವಿಧಾನ:  

ಹಾಲನ್ನು ಕಡಿಮೆ ಉರಿಯಲ್ಲಿ  ಕಾಯಿಸಿ, ಆದರೆ ಕುದಿಯಲು ಬಿಡಬೇಡಿ. 

ಹಾಲು ಬಿಸಿಯಾದ ನಂತರ, ಎಲ್ಲಾ ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಪುಡಿಮಾಡಿದ ಖರ್ಜೂರ ಹಾಕಿ. ಕಡಿಮೆ ಉರಿಯಲ್ಲಿ 5 ನಿಮಿಷ ಕಾಲ ತಳಮಳಿಸಲು ಬಿಡಿ. 

ತುಪ್ಪವನ್ನು ಸೇರಿಸಿ ಚಹಾ ಕೆನೆಯಂತೆ ಆಗುವ ತನಕ ಮೆತ್ತಗೆ ಕಲಕಿಸಿ. ಈಗ ಹಾಲನ್ನು ಕಪ್‌ಗೆ ಹಾಕಿಕೊಳ್ಳಿ. 

ವಯಸ್ಕರು ದಿನಕ್ಕೆ 400 ರಿಂದ 600 ಮಿಲಿಗ್ರಾಂಗಳಷ್ಟು ಅರಿಶಿನವನ್ನು ಸುರಕ್ಷಿತವಾಗಿ ಸೇವಿಸಬಹುದು ಮತ್ತು ದಿನಕ್ಕೆ ಒಂದು ಟೀಸ್ಪೂನ್ ಅರಿಶಿನ ಸೇವಿಸುವುದರಿಂದ ಪ್ರಯೋಜನಗಳು ಪ್ರಾರಂಭವಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. 

 “ನಾನು ಅರಿಶಿನ ಮಿಶ್ರಿತ ಹಾಲು ಸೇವಿಸುತ್ತಿದ್ದು, ಅದು ನನ್ನ ಆರೋಗ್ಯ ಮತ್ತು ತ್ವಚೆಗೆ ಉಪಯುಕ್ತವಾಗುತ್ತಿದೆ ಎನ್ನುವುದನ್ನು ಕಂಡುಕೊಂಡಿದ್ದೇನೆ.  ಮನೆಯಲ್ಲೇ ತಯಾರಿಸಿದ ಅರಿಶಿನದ ‘ಲಟ್ಟೆ’ ಪಾನೀಯ ರುಚಿಕರವಾಗಿರುತ್ತೆ ಮಾತ್ರವಲ್ಲದೆ ಖರ್ಚು ಕೂಡಾ ಕಡಿಮೆ,” ಎನ್ನುತ್ತಾರೆ 57-ವರ್ಷ ವಯಸ್ಸಿನ ಪಶ್ಚಿಮ ಬಂಗಾಳದ ಕೋಲ್ಕತ್ತಾದ ನಿವಾಸಿ ಆಗಿರುವ ವೈದಿಕ ಜ್ಯೋತಿಷಿ ರೂಪಾ ಸೆನ್. 

ಸುಲಭ ಹೀರುವಿಕೆಗಾಗಿ ಕರಿಮೆಣಸು ಮತ್ತು ಕೊಬ್ಬಿನೊಂದಿಗೆ ಸೇರಿಸಿದ ಅರಿಶಿನ.   

 ಅರಿಶಿನದ ಕ್ರಿಯಾತ್ಮಕ ಘಟಕವಾದ ಕರ್ಕ್ಯುಮಿನ್ ಸಂಯುಕ್ತವು ಕೊಬ್ಬು ಮತ್ತು ಕರಿಮೆಣಸಿನೊಂದಿಗೆ ಸೇರಿಸಿಕೊಂಡರೆ ಬಹಳ ಸುಲಭವಾಗಿ ಹೀರುತ್ತದೆ.  ಕರಿಮೆಣಸಿನಲ್ಲಿ ಲಭ್ಯವಿರುವ ಪೈಪರೀನ್ ಎಂಬ ಘಟಕವನ್ನುಅರಿಶಿನದೊಂದಿಗೆ ಸೇರಿಸಿದಾಗ ಕರ್ಕ್ಯುಮಿನ್-ನ ಹೀರುವಿಕೆಯು ಹೆಚ್ಚಾಗುತ್ತದೆ ಎಂದು ಅಧ್ಯಯನದಿಂದ  ಸಿದ್ಧವಾಗಿದೆ. 

ಕೊಬ್ಬಿಗೆ (ಒಳ್ಳೆಯ ಕೊಬ್ಬು)  ಸಂಬಂಧಿಸಿದಂತೆ, ಆಯುರ್ವೇದ ವೈದ್ಯರು ಹೆಚ್ಚಾಗಿ ಅರಿಶಿನವನ್ನು ಅದರ ಹೀರುವಿಕೆಯನ್ನು ಹೆಚ್ಚು ಪರಿಣಾಮಕಾರಿಗೊಳಿಸಲು (ಹಾಲಿನಲ್ಲಿ ಸಿಗುವ) ಕೊಬ್ಬಿನೊಂದಿಗೆ ಸೇರಿಸುತ್ತಾರೆ, ಏಕೆಂದರೆ ಕರ್ಕ್ಯುಮಿನ್ ಸಂಯುಕ್ತವು ನೀರಿನಲ್ಲಿ ಕರಗುವ ಫೈಟೊನ್ಯೂಟ್ರಿಯೆಂಟ್ ಪೋಷಕಾಂಶವಲ್ಲ. 

ಅರಿಶಿನ ಹಾಲು ಸೇವಿಸಲು ಸೂಕ್ತ ಸಮಯ 

ಅರಿಶಿನದ ಹಾಲು ಕುಡಿಯಲು ಸಮಯವೆಂದು ನಿರ್ಧಿಷ್ಟಪಡಿಸಲಾಗುವುದಿಲ್ಲ ಅರಿಶಿನದ ಹಾಲಿನಲ್ಲಿ ಕೆಫೀನ್ ಇರದಿರುವುದರಿಂದ ನೀವು ದಿನದ ಯಾವುದೇ ಸಮಯದಲ್ಲಾದರೂ ಅದನ್ನು ಸೇವಿಸಬಹುದಾಗಿದ್ದರೂ, ಇಳಿಸಂಜೆ ಹೊತ್ತಿನಲ್ಲಿ ಕುಡಿದರೆ, ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಇರಬೇಕಾಗುತ್ತೆ ಎಂಬ ಆತಂಕದಿಂದಿರಬೇಕಿಲ್ಲ. ಆದರೆ, ದಿನಕ್ಕೆ ಮೂರಕ್ಕಿಂತ ಹೆಚ್ಚು ಕಪ್ ಕುಡಿಯುವುದು ಹಾನಿಕಾರಕವಾಗಬಹುದು, ಎಂದು ವೇಲಾರ್ಸನ್ ಹೇಳುತ್ತಾರೆ. 

ಅರಿಶಿನದ ಹಾಲು – ಯಾರು ಕುಡಿಯಬಾರದು  

 ಅರಿಶಿನವು ನೈಸರ್ಗಿಕವಾದ ಗಿಡಮೂಲಿಕೆಯಾಗಿದ್ದು, ಹೆಚ್ಚಿನ ಜನರು ಅದನ್ನು ಸೇವಿಸುವುದು ಸುರಕ್ಷಿತ. ಆದರೆ, ಅದರ ಉಪಯೋಗವು ಸುರಕ್ಷಿತವಾಗುವಂತೆ ನೋಡಿಕೊಳ್ಳಲು ಸ್ವಲ್ಪ ಎಚ್ಚರಿಕೆ ವಹಿಸಿಕೊಳ್ಳುವುದು ಅಗತ್ಯ. ಗರ್ಭಿಣಿಯರು ಮತ್ತು ಹಾಲುಣಿಸುವವರಿಗೆ ಅರಿಶಿನದ ಹಾಲಿನ ಸೇವನೆ ಅಸುರಕ್ಷಿತವಾಗಬಹುದು. ಉರಿಯೂತ ಶಮನಗೊಳಿಸಲು, ರಕ್ತವನ್ನು ತೆಳುಗೊಳಿಸುವ ಹಾಗೂ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಗೊಳಿಸಲು ನೀಡುವ ಅಮ್ಲಸ್ಥಗಿತದ ಔಷಧಗಳೊಂದಿಗೆ ಅರಿಶಿನವು ಮಧ್ಯಪ್ರವೇಶವಾಗಬಹುದು. ಪಿತ್ತಕೋಶದ ಕಲ್ಲುಗಳ ಅಥವಾ ಇತರ ಪಿತ್ತಜನಕಾಂಗದ ಕಾಯಿಲೆಯುಳ್ಳವರು ಅತಿಯಾಗಿ ಅರಿಶಿನದ ಹಾಲು ಕುಡಿಯದಿರುವುದು ಒಳ್ಳೆಯದು, ಎಂದು ಹೇಳುತ್ತಾರೆ  ವೇಲಾರ್ಸನ್. 

ಪೂರ್ವ ನಿರಾಕರಣೆ:  ನಿಮ್ಮ ಆಹಾರ ಕ್ರಮದಲ್ಲಿ ನವೀನ ಆಹಾರಗಳನ್ನು ಸೇರಿಸಿಕೊಳ್ಳುವ ಮೊದಲು ಯಾವಾಗಲೂ ಮಾನ್ಯತೆ ಪಡೆದ ಪೌಷ್ಟಿಕ ತಜ್ಞರ ಅಥವಾ  ಆಹಾರ  ತಜ್ಞರ ಸಲಹೆ ಪಡೆದುಕೊಳ್ಳಿ. 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

one + one =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ