0

0

0

ಈ ಲೇಖನದಲ್ಲಿ

ಮನೆಮದ್ದು ಸೇವಿಸುವ ಮುನ್ನ ಅವುಗಳ ಇತಿಮಿತಿಗಳನ್ನು ತಿಳಿದುಕೊಳ್ಳಿ
36

ಮನೆಮದ್ದು ಸೇವಿಸುವ ಮುನ್ನ ಅವುಗಳ ಇತಿಮಿತಿಗಳನ್ನು ತಿಳಿದುಕೊಳ್ಳಿ

ಮನೆಮದ್ದು”ಎಲ್ಲರಿಗೂ ಅಲ್ಲ” ಎನ್ನುವ  ಅವ್ಯಕ್ತ ಲೇಬಲ್ ಇರುತ್ತದೆ. ಅದರಬಳಕೆಯ ಮೊದಲು ಅವುಗಳ ಬಗ್ಗೆ ತಿಳಿದುಕೊಳ್ಳಿರಿ ಮತ್ತು  ಸುರಕ್ಷಿತವಾಗಿರಿ.

 

ಮನೆಮದ್ದು ಸೇವಿಸುವ ಮುನ್ನ

  ನಿಂಬೆಯಂತಹ ಸಾಮಾನ್ಯ ಮನೆಮದ್ದಿನ ವಸ್ತುವನ್ನು ಅಸಮರ್ಪಕವಾಗಿ ಬಳಸಿದರೆ ಒಳ್ಳೆಯದಕ್ಕಿಂತ ಹೆಚ್ಚು ಕೆಡುಕಾಗಬಹುದು!  ಹೌದು, ಅಡುಗೆ ಮತ್ತು ವೈದ್ಯಕೀಯ ಕಾರಣಗಳಿಗಾಗಿ ಪ್ರತೀ ಮನೆಯಲ್ಲಿ ನಿಂಬೆಯಷ್ಟು ಹೆಚ್ಚು ಬಳಸುವ ಹುಳಿಹಣ್ಣು ಬೇರೊಂದಿಲ್ಲ. ಯಾವುದೇ ಆಹಾರ ಘಟಕ/ಮಸಾಲೆ/ಗಿಡಮೂಲಿಕೆಯನ್ನು ಅವುಗಳ ಅಡ್ಡಪರಿಣಾಮಗಳನ್ನು ಅರಿತುಕೊಳ್ಲದೆ ಅಸಮರ್ಪಕವಾಗಿ ಅಥವಾ ದೀರ್ಘಕಾಲದಿಂದ ಬಳಸುತ್ತಿದ್ದರೆ, ಅವು ನಿಮ್ಮ ದೇಹಕ್ಕೆ ಹಾನಿಕಾರಕವಾಗಬಹುದು.   

ಕ್ಯಾನ್ಸರ್ (ಅರ್ಬುದ ರೋಗ) ಚಿಕಿತ್ಸೆಯ ನಂತರ ಮಹಿಳೆಯೊಬ್ಬರು ನಿಂಬೆಯನ್ನು ಮನೆಮದ್ದಾಗಿ ಉಪಯೋಗಿಸಿದ ನಂತರ ಅನುಭವಿಸಿದ ದುಷ್ಪರಿಣಾಮದ ಘಟನೆಯ ವಿವರ ಇಲ್ಲಿದೆ.  

ಕರ್ನಾಟಕದ ದಾವಣಗೆರೆಯ 56-ವರ್ಷ ವಯಸ್ಸಿನ ಸರೋಜಾ ರುದ್ರಪ್ಪ ಅವರಿಗೆ 2020 ರಲ್ಲಿ ಗರ್ಭಕಂಠದ (ಸರ್ವಿಕಲ್) ಕ್ಯಾನ್ಸರ್ ಕಾಯಿಲೆ ಇರುವುದಾಗಿ ಪತ್ತೆಯಾಗಿತ್ತು ಮತ್ತು ಕಿಮೋಥೆರಪಿ ಹಾಗೂ ರೇಡಿಯೋಥೆರಪಿ ಸಂಯೋಜನೆಯಿಂದ ಅವರಿಗೆ ಚಿಕಿತ್ಸೆ ನೀಡಲಾಯಿತು. ತಮ್ಮ ಚಿಕಿತ್ಸೆಯ ಸಂಪೂರ್ಣ ಅವಧಿಯ ನಂತರ ಆ ಮಹಿಳೆಯ  ಸ್ಥಿತಿ ಚೆನ್ನಾಗಿದ್ದರೂ, ತನ್ನ ಕುಟುಂಬದವರ ಮತ್ತು ಸ್ನೇಹಿತೆಯರ ಸಲಹೆ ಮೇರೆಗೆ ಮನೆಮದ್ದಿನ ಉಪಯೋಗ ಆರಂಭಿಸಲು ನಿರ್ಧರಿಸಿದರು.   

  ಸಂದೇಶಗಳನ್ನು ರವಾನಿಸುವಾಗ ವೇದಿಕೆಯೊಂದರಲ್ಲಿ ಬಂದ ಸಂದೇಶವೊಂದರಲ್ಲಿ ಕ್ಯಾನ್ಸರ್ ತೊಲಗಿಸಲು ನಿಂಬೆರಸವನ್ನು ನಿಯಮಿತವಾಗಿ ಸೇವಿಸುವುದು ನೆರವಾಗುತ್ತದೆ ಎಂದು ಹೇಳಲಾಗಿತ್ತು. ಅದನ್ನು ಓದಿದ  ನಂತರ ಅವರು ಒಂದು ತಿಂಗಳ ಕಾಲ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ನಿಂಬೆರಸ ಕುಡಿಯಲು ಪ್ರಾರಂಭಿಸಿದರು. ಆರಂಭದಲ್ಲಿ ಅವರಿಗೆ  ಚೆನ್ನಾಗಿರುವ ಅನುಭವವಾಗಿ, ಹಸಿವು ಕೂಡಾ ಸುಧಾರಿಸಿತು.  ಆದರೆ ದಿನ ಕಳೆದಂತೆ ಅದೇನೋ ವಿಚಿತ್ರ ಜುಮ್ಮೆನಿಸುವ ಸಂವೇದನೆಯ ಅನುಭವವಾಗಿ, ಆಹಾರವನ್ನು ಜಗಿಯಲೂ ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಹೊಟ್ಟೆಯಲ್ಲಿ ವಿಪರೀತ ಉರಿಯುವ ಅನುಭವ ಶುರುವಾಯಿತು.  

ಅವರು ವೈದ್ಯರನ್ನು ಭೇಟಿಯಾದಾಗ, ಅವರಿಗೆ ಗ್ಯಾಸ್ಟ್ರೋಸೊಫೇಜಿಲ್ ರಿಪ್ಲಕ್ಸ್ ರೋಗ (ಜಿಇಅರ್‌ಡಿ) ಅರ್ಥಾತ್ ಜೀರ್ಣಕಾರಿ ಕಾಯಿಲೆ ಹಾಗೂ ಹಲ್ಲು ಹಾಗೂ ಒಸಡುಗಳ ಸವೆತದ ಸಮಸ್ಯೆ ಇರುವುದು ಪತ್ತೆಯಾಯಿತು. 

‘“ಸಿಕ್ಕಾಪಟ್ಟೆಯಾಗಿ ನಿಂಬೆರಸ ಕುಡಿಯುವುದನ್ನು ಪ್ರಾರಂಭಿಸುವ ಮೊದಲು ನಾನು ವೈದ್ಯರೊಂದಿಗೆ ಸಮಾಲೋಚಿಸಬೇಕಾಗಿತ್ತು.  ನಾನು ಚೆನ್ನಾಗಿದ್ದರೂ, ಉತ್ತಮ ಆರೋಗ್ಯದ ದೃಷ್ಟಿಯಿಂದ ಕೆಲವು ಹಾನಿಕಾರಕವಲ್ಲ ಎನ್ನಬಹುದಾದ ಮನೆಮದ್ದುಗಳನ್ನು ಉಪಯೋಗಿಸಲು ಇಷ್ಟಪಟ್ಟೆ. ಆದರೆ ಅದು ತೀರಾ ಅಪಾಯಕಾರಿಯಾಯಿತು.  ನನಗೀಗ ಆಹಾರವನ್ನು ಜಗಿಯಲು ಕೂಡಾ ಆಗುತ್ತಿಲ್ಲ, ಅದರಲ್ಲೂ ಬಿಸಿಯಾದುದನ್ನು ಸೇವಿಸುವುದು ಕಷ್ಟವಾಗುತ್ತಿದೆ ಮತ್ತು ಉರಿಯೂತದ ಸಂವೇದನೆಯಾಗುತ್ತಿದೆ,” ಎಂದು ಹೇಳುತ್ತಾರೆ ಸರೋಜಾ ರುದ್ರಪ್ಪ.  

ತುಮಕೂರಿನ ಇನ್ನೋರ್ವ ಮಹಿಳೆಯೂ ಮನೆಮದ್ದು ಸೇವಿಸಿ ಅಂತಹುದೇ ಅನುಭವಕ್ಕೆ ತುತ್ತಾದರು.  

ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿರುವ 53-ವರ್ಷದ ಲಲಿತಾ ಶಿವಕುಮಾರ್, ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ತನ್ನ ಪತಿ ಕೋವಿಡ್ ಪಾಸಿಟಿವ್ ಆದಾಗ ಮನೆಮದ್ದುಗಳನ್ನು ಹುಡುಕಲು ಆರಂಭಿಸಿದರು. ಅವರ ಸ್ನೇಹಿತೆಯೊಬ್ಬರು ಮೂಗಿನ ಎರಡೂ ಹೊಳ್ಳೆಗಳಲ್ಲಿ ನಿಂಬೆರಸದ ಹನಿಗಳನ್ನು ನಿಯಮಿತವಾಗಿ ಹಾಕುವಂತೆ ನೀಡಿದ ಸಲಹೆಯನ್ನು ಅವರು ಶ್ರದ್ಧೆಯಿಂದ  ಪಾಲಿಸಿದರು.  ಕೇವಲ ಮೂರು ದಿನಗಳಲ್ಲಿ ಅವರಿಗೂ ಉರಿಯೂತದ ಭಾವನೆ ಮತ್ತು ವಾಕರಿಕೆ ಬರಲು ಪ್ರಾರಂಭವಾಯಿತು.  

ಈ ರೋಗಲಕ್ಷಣಗಳು ಸ್ವಲ್ಪ ದಿನಗಳಲ್ಲಿ ಶಮನವಾಗಬಹುದೆಂದು ಅವರು ಭಾವಿಸಿದ್ದರು. ಆದರೆ ದಿನಗಳು ಕಳೆದು ತಿಂಗಳುಗಳಾದರೂ ರೋಗಲಕ್ಷಣಗಳು ಮಾತ್ರ ಹೆಚ್ಚುತ್ತಲೇ ಹೋದವು. ವಾಸನೆಯ ಗ್ರಹಿಕೆ (ಅನೋಸ್ಮಿಯಾ) ತಿಳಿಯದಷ್ಟರ ಮಟ್ಟಿಗೆ ಅವರ ಪರಿಸ್ಥಿತಿ ತಲುಪಿತ್ತು.  ಕಟುವಾದ ಮತ್ತು ಬಲವಾದ ವಾಸನೆ ಕೂಡಾ ಅವರಿಗೆ ತಿಳಿಯುತ್ತಿರಲಿಲ್ಲ.  ಅಂತಿಮವಾಗಿ ಅವರು ಕಿವಿ-ಮೂಗು-ಗಂಟಲು (ಇಎನ್‌ಟಿ) ತಜ್ಞ ವೈದ್ಯರಲ್ಲಿ ತಪಾಸಣೆಗೆ ಹೋದರು ಮತ್ತೆ ಸುಮಾರು  ಮೂರು ತಿಂಗಳುಗಳ ಚಿಕಿತ್ಸೆಯ ನಂತರ ಅವರ ಘ್ರಾಣ ಶಕ್ತಿ ಸಾವಕಾಶವಾಗಿ ಮರುಕಳಿಸಲು ಪ್ರಾರಂಭವಾಯಿತು.  

ತಾನು ಕಣ್ಣುಮುಚ್ಚಿ ಯಾರೋ ಹೇಳಿದ ಮನೆಮದ್ದು ಬಳಸಿದ್ದು ತಪ್ಪೆಂದು ಈಗ ಅವರಿಗೆ ಅನಿಸುತ್ತಿದೆ.  “ನಾನು ಸ್ವಲ್ಪ ಆಲೋಚನೆ ಮಾಡಬೇಕಿತ್ತು ಹಾಗೂ ವೈದ್ಯೆಯಾಗಿರುವ ನನ್ನ ಮಗಳ ಅಭಿಪ್ರಾಯವನ್ನು ಮೊದಲು ಪಡೆಯಬೇಕಿತ್ತು. ನನಗೆ ಸುಮಾರು  ಮೂರು ತಿಂಗಳುಗಳ ವರೆಗೆ ಯಾವುದೇ ಘ್ರಾಣ ಶಕ್ತಿಯೇ ನಷ್ಟವಾಗಿತ್ತು. ಅದೀಗ ಸ್ವಲ್ಪ ಸುಧಾರಿಸಿದೆ.”  

ಇಂತಹ ಸನ್ನಿವೇಶಗಳಲ್ಲಿ ನೆನಪಿಡಬೇಕಾದ ತಳಮಟ್ಟದ ಮಾತೆಂದರೆ ತಜ್ಞರೊಂದಿಗೆ ಸಮಾಲೋಚನೆ ನಡೆಸದೆ ಮನೆಮದ್ದಿನ ಹೆಸರಿನಲ್ಲಿ ಏನನ್ನೋ ಸೇವಿಸಿದರೆ ಅಪಾಯಕ್ಕೀಡಾಗಬಹುದು.  ನಾವು ದಿನಾಲೂ ಉಪಯೋಗಿಸುವ ಹಣ್ಣಹಂಪಲು/ತರಕಾರಿಗಳು ಸಹಾ  ಮನೆಮದ್ದಿನ ಹೆಸರಿನಲ್ಲಿ ಸೇವಿಸಿದರೆ ದುಷ್ಪರಿಣಾಮ ಉಂಟಾಗಬಹುದು.  

ಮನೆಮದ್ದು ಎಂದರೇನು?

ಸಾಮಾನ್ಯ ಕಾಯಿಲೆಗಳಿಂದ ವಾಸಿಯಾಗಲು ಮನೆಯಲ್ಲೇ ಲಭಿಸುವ ನೈಸರ್ಗಿಕ ಪದಾರ್ಥಗಳನ್ನು ಬಳಸುವುದೇ ಮನೆಮದ್ದು ಎಂದು ಕರೆಯಲ್ಪಡುತ್ತದೆ. ನೈಸರ್ಗಿಕ ಪದಾರ್ಥಗಳಲ್ಲಿ ಅಡುಗೆಮನೆಯಲ್ಲಿರುವ ಮಸಾಲೆಗಳು, ಮನೆಯ ಉದ್ಯಾನದಲ್ಲಿರುವ ಗಿಡಮೂಲಿಕೆ ಅಥವಾ ಯಾವುದೇ ಹಣ್ಣಹಂಪಲುಗಳು ಅಥವಾ ತರಕಾರಿಗಳು ಸಹಾ ಸೇರಿವೆ.  

  ತಜ್ಞರು ಹೀಗೆ ಹೇಳುತ್ತಾರೆ   

ಕರ್ನಾಟಕದ ಹಾಸನದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಪ್ರಕಾಶ್ ಹೆಗ್ಡೆ ಹೇಳುವುದು ಹೀಗೆ: ಎಲ್ಲಾ ಔಷಧಗಳ (ಅಥವಾ ಮನೆಮದ್ದುಗಳು) ಉಪಯೋಗದ ಉದ್ದೇಶ ಸೀಮಿತ ಅವಧಿಗೆ ಮತ್ತು ಸೂಕ್ತವಾದ ಪ್ರಮಾಣದಲ್ಲಿ ಮಾತ್ರ.. ಇದನ್ನು ಪಾಲಿಸದಿದ್ದರೆ ಪರಿಸ್ಥಿತಿ ಉಲ್ಭಣವಾಗಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ/ ಅರೋಗ್ಯ ಬಯಸುವವರಿಗೆ ತಿಳುವಳಿಕೆ ನೀಡುವುದರಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳುತ್ತಾರೆ.  

  ಗಿಡಮೂಲಿಕೆಗಳ ಪೂರಕವಸ್ತುಗಳನ್ನು ಆಹಾರದೊಂದಿಗೆ ಹೆಚ್ಚುವರಿಯಾಗಿ ಸೇವಿಸುವ ಕುರಿತು ಮೈಸೂರಿನ ಜೆ‌ಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕ ಹಾಗೂ ಸಂಶೋಧಕರಾಗಿರುವ ಡಾ.  ಸತೀಶ್ ಪೈ ಎಚ್ಚರಿಕೆ ನೀಡುತ್ತಾರೆ. 

“ಔಷಧಗಳು ಮತ್ತು ಆಹಾರ ಎರಡು ವಿಭಿನ್ನ ವಸ್ತುಗಳು. ಆಹಾರ ನಮಗೆ ಪೌಷ್ಟಿಕಾಂಶಗಳನ್ನು ನೀಡಿದರೆ, ಔಷಧಿಗಳು ವಿವಿಧ ಕಾಯಿಲೆಗಳಿಗೆ ಉಪಶಮನ ನೀಡಲು ಉದ್ದೇಶಿತವಾಗಿವೆ.  ಆರೋಗ್ಯ ಸ್ಥಿತಿಗತಿ, ಜೀರ್ಣಿಸುವ ಸಾಮರ್ಥ್ಯ, ವಯಸ್ಸು, ವ್ಯಕ್ತಿಯ ಶಕ್ತಿ ಮತ್ತು ಋತುಮಾನ ಮೊದಲಾದ ವಿವಿಧ ಅಂಶಗಳನ್ನು ಪರಿಗಣಿಸಿ ಔಷಧಿ ನೀಡಲಾಗುತ್ತಿದೆ.”  

  ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧಿಗಳೊಂದಿಗೆ ಮನೆಮದ್ದುಗಳು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುವುದರ ಕುರಿತು ಡಾ.ಪೈ ಎಚ್ಚರಿಸುತ್ತಾರೆ.  

  ಸ್ವಯಂ ಔಷಧ ಸೇವನೆ ಮಾಡಬಾರದು ಎಂದು ಮೈಸೂರಿನ ಶ್ರೀ ರಂಗ ಆಯುರ್ವೇದ ಚಿಕಿತ್ಸಾ ಮಂದಿರದ ಹಿರಿಯ ಸಲಹೆಗಾರರಾಗಿರುವ ಡಾ. ಪ್ರಸನ್ನ ವೇಂಕಟೇಶ್ ಹೇಳುತ್ತಾರೆ.  ಅದರ ಬದಲಿಗೆ, ಔಷಧ ಸೇವಿಸುವ ಕುರಿತು ಮತ್ತು ಗಿಡಮೂಲಿಕೆಗಳ ಉತ್ಪನ್ನಗಳ ಸರಿಯಾದ ಬಳಕೆಯ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯುವುದು ಒಳ್ಳೆಯದು.  

  ಗಿಡಮೂಲಿಕೆಗಳ ಬಗ್ಗೆ ಆಸಕ್ತಿ ಮತ್ತು ಗಿಡಮೂಲಿಕೆಗಳು ಹಾಗೂ ಅವುಗಳ ಉತ್ಪನ್ನಗಳ ಬಗ್ಗೆ ತಿಳುವಳಿಕೆ ಹೆಚ್ಚಿಸುವುದರಿಂದ ಜನರ ಬದುಕಿನಲ್ಲಿ ಬಹಳ ಪರಿಣಾಮವಾಗಿದೆ. ಗಿಡಮೂಲಿಕೆಯ ಔಷಧಿಗಳು ಮತ್ತು ಉತ್ಪನ್ನಗಳು ಸುರಕ್ಷಿತವೆಂದು ಜನರೇ ಸ್ವತ: ನಿರ್ಧರಿಸಿ ಅವುಗಳಿಂದ ಯಾವುದೇ ಹಾನಿಯಿಲ್ಲ ಎಂಬ ಭಾವನೆಯಿಂದ ತಾವೇ ನೇರವಾಗಿ ಖರೀದಿಸಲು ಹೋಗುತ್ತಾರೆ. ಆದರೆ, ಹಾಗೆ ಮಾಡುವುದರಿಂದ ಅವರು ತಮ್ಮ ಆರೋಗ್ಯವನ್ನು ಅಪಾಯಕ್ಕೆ ಒಡ್ಡುತ್ತಾರೆ.  

  ಮನಸ್ಸಿನಲ್ಲಿ ಇಡಬೇಕಾದ ವಿಷಯಗಳು

  • ಮನೆಮದ್ದುಗಳು ತಾತ್ಕಾಲಿಕ ಉಪಶಮನ ಪಡೆಯಲಷ್ಟೇ ಸರಿ.
  • ನೆಗಡಿ, ಕೆಮ್ಮು, ತಲೆನೋವು, ಹೊಟ್ಟೆನೋವು, ಸಣ್ಣಪುಟ್ಟ ಸುಟ್ಟ ಗಾಯಗಳು ಮತ್ತು ಕತ್ತರಿಸಿದ ಗಾಯಗಳೇ ಮೊದಲಾದ ಸಾಮಾನ್ಯ ಕಾಯಿಲೆಗಳಿಗಷ್ಟೇ ಮನೆಮದ್ದು ಉಪಯೋಗಿಸಿ.
  • ಸಮಸ್ಯೆ ಶಮನವಾಗದಿದ್ದರೆ, ವೈದ್ಯರನ್ನು ಭೇಟಿ ಮಾಡಿ, ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ ಪಡೆಯುವುದು ಕಡ್ಡಾಯ.
  • ಗಂಭೀರ ಕಾಯಿಲೆಗಳಿಗೆ ಅಥವಾ ದೀರ್ಘ ಕಾಲಕ್ಕೆ ಸ್ವಯಂ ಔಷಧವನ್ನು ಸೇವಿಸಬಾರದು.
  • ಗರ್ಭಿಣಿ ಅಥವಾ ಹಾಲುಣಿಸುವವರು ಮನೆಮದ್ದು ಉಪಯೋಗಿಸಲೇಬಾರದು.
  • ಮಕ್ಕಳು ಮತ್ತು ವಯಸ್ಕರ ಬಗ್ಗೆ ಹೆಚ್ಚುವರಿ ಕಾಳಜಿ ವಹಿಸಿಕೊಳ್ಳಬೇಕು.
  • ಒಬ್ಬರಿಗೆ ಪ್ರಯೋಜನವಾದ ಮನೆಮದ್ದು ಇನ್ನೊಬ್ಬರಿಗೂ ಪ್ರಯೋಜನವಾಗಬೇಕಿಲ್ಲ.
  • ಮಾಹಿತಿ ಪಡೆದುಕೊಳ್ಳಿ, ಪೂರ್ವಾಗ್ರಹವಿಲ್ಲದ ಮತ್ತು ವೈಜ್ಞಾನಿಕ ಮೂಲಗಳಿಂದ ತಿಳಿದುಕೊಳ್ಳಿ.
  •   ಸ್ವಯಂ-ಔಷಧ ಸೇವನಾ ಕ್ರಮವನ್ನು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ.
  • ಯಾವುದೇ ದುಷ್ಪರಿಣಾಮ ಮತ್ತು ಅಸ್ವಸ್ಥತೆ ಉಂಟಾದರೆ, ತಕ್ಷಣ ಮನೆಮದ್ದು ಬಳಕೆ ನಿಲ್ಲಿಸಿ, ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಲೇಖನ
ಜಾಗತಿಕವಾಗಿ ಕನಿಷ್ಠ 5.4 ಲಕ್ಷ ಹೃದಯ ಸಂಬಂಧಿ ಸಾವುಗಳಿಗೆ ಟ್ರಾನ್ಸ್-ಫ್ಯಾಟಿ ಆಸಿಡ್‌ಗಳಿಂದ ತುಂಬಿದ ಸಂಸ್ಕರಿಸಿದ ಆಹಾರ ಕಾರಣ ಎಂದು ಭಾರತ ಸರ್ಕಾರ ಹೇಳುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ