0

0

0

0

0

0

0

0

0

ಈ ಲೇಖನದಲ್ಲಿ

 ನಸ್ಯ, ಆಯುರ್ವೇದದ ಅಂತರ್ನಾಸಿಕ ಥೆರಪಿ
16

 ನಸ್ಯ, ಆಯುರ್ವೇದದ ಅಂತರ್ನಾಸಿಕ ಥೆರಪಿ

ನಸ್ಯ ಥೆರಪಿಯ ಮೂಲಕ ನಿಮ್ಮ ದೇಹವನ್ನು ಶುದ್ಧೀಕರಿಸುವುದು ಮತ್ತು ಪುನಃಶ್ಚೇತನಗೊಳಿಸುವುದು ಹೇಗೆ ಎಂಬುದರ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳಿ 

 ನಸ್ಯ- ಅಂತರ್ನಾಸಿಕ ಥೆರಪಿ

ಶುಭಾ ಸಜನ್ ಎಂಬವರು ಕೆಲವು ವರ್ಷಗಳಿಂದ ಮೂಗುಕಟ್ಟುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರು, ಜೀವನಶೈಲಿ ಮತ್ತು ಪರಿಸರದಲ್ಲಿನ ಕೆಲವು ಬದಲಾವಣೆಗಳು ಇದಕ್ಕೆ ಕಾರಣವಾಗಿದ್ದವು. ಎಷ್ಟೇ ಆವಿ ತೆಗೆದುಕೊಂಡರೂ ಅಥವಾ ರಾತ್ರಿ ಎಷ್ಟು ಬೇಗನೆ ಮಲಗಲು ಪ್ರಯತ್ನಿಸಿದರೂ, ಮರುದಿನ ಅವರ ಮೂಗುಕಟ್ಟುವಿಕೆ ಹಾಗೆಯೇ ಉಳಿಯುತ್ತಿತ್ತು. ಬೆಂಗಳೂರಿನ 48-ವರ್ಷದ ಈ ಗೃಹಿಣಿ ತಮ್ಮ ಕಟ್ಟಿದ ಮೂಗನ್ನು ಸರಿಪಡಿಸಲು ಮನೆಮದ್ದುಗಳನ್ನೇ ಬಳಸುತ್ತಿದ್ದರು, ಆದರೂ ಅವರಿಗೆ ಇದರಿಂದ ಯಾವ ಪ್ರಯೋಜನವೂ ಆಗದೇ ಶೀತ ಮತ್ತು ನೆಗಡಿ ದಿನನಿತ್ಯವೂ ಕಾಡುತ್ತಿತ್ತು. ಒಂದು ದಿನ ಅವರು ಆಯುರ್ವೇದ ವೈದ್ಯರನ್ನು ಭೇಟಿಯಾದಾಗ ವೈದ್ಯರು ಅವರಿಗೆ ಏಳು ದಿನಗಳ ನಸ್ಯ ಥೆರಪಿಯನ್ನು ಶಿಫಾರಸು ಮಾಡಿ ಕೆಲವು ಆಯುರ್ವೇದ ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸಿದರು.  

ಮಸಾಜ್ ಟೇಬಲ್ ಮೇಲೆ ನನ್ನನ್ನು ಮಲಗಿಸಿ, ನನ್ನ ಮುಖಕ್ಕೆ ಆವಿಯನ್ನು ನೀಡಲಾಯಿತು. ನನ್ನ ಚಿಕಿತ್ಸಕರು ತುಳಸಿ ಎಲೆಯ ಪರಿಮಳ ಹೊಂದಿರುವ ಹಿತವಾದ ಎಣ್ಣೆಯಿಂದ ನನ್ನ ತಲೆ, ಕುತ್ತಿಗೆ ಮತ್ತು ಭುಜಗಳಿಗೆ ಹಗುರವಾಗಿ ಮಸಾಜ್ ಮಾಡಿದರು ಎಂದು ಸಜನ್ ವಿವರಿಸುತ್ತಾರೆ. ಚಿಕಿತ್ಸಕರು ಅವರ ಕುತ್ತಿಗೆಯ ಹಿಂಭಾಗದಲ್ಲಿ ಬೆಚ್ಚಗಿನ ಟವೆಲ್ ಅನ್ನು ಇರಿಸಿ ಅವರ ತಲೆಯನ್ನು ಹಿಂದಕ್ಕೆ ಬಾಗಿಸಿ ಮೂರು ಹನಿಗಳಷ್ಟು ಪುನಶ್ಚೇತನಗೊಳಿಸುವ ಎಣ್ಣೆಯನ್ನು ಅವರ ಬಲ ಮೂಗಿನ ಹೊಳ್ಳೆಗೆ ಹಾಕಿದರು. ಅವರು ನನ್ನ ಮುಖಕ್ಕೆ ಮಸಾಜ್ ಮಾಡುವಾಗ ನಾನು ಮೂಗಿನ ಮೂಲಕ ಉಸಿರೆಳೆದುಕೊಂಡು ಬಾಯಿಯ ಮೂಲಕ ಉಸಿರನ್ನು ಬಿಡುತ್ತಿದ್ದೆ, ನಂತರ ಎಡಮೂಗಿನ ಹೊಳ್ಳೆಯಲ್ಲಿ ಈ ಪ್ರಕ್ರಿಯೆ ಮುಂದುವರಿಯಿತು ಎಂದು ಸಜನ್ ಹೇಳಿದರು. ಚಿಕಿತ್ಸೆಯ ನಂತರ ಅವರ ಕಟ್ಟಿದ ಮೂಗು ತೆರೆದುಕೊಂಡಿತು ಹಾಗೂ ನಂತರದ ಕೆಲವು ವಾರಗಳು ಆಹಾರ ನುಂಗಲು ಸಮಸ್ಯೆಯಾಗಲಿಲ್ಲ. 

ನಸ್ಯ ಕ್ರಿಯೆ ಎಂದರೇನು? 

ನಸ್ಯ ಅಥವಾ ನಸ್ಯ ಕ್ರಿಯೆ ಎಂದರೆವಿವಿಧ ಔಷಧೀಯ ತೈಲಗಳು, ಪುಡಿಗಳು ಅಥವಾ ಗಿಡಮೂಲಿಕೆಗಳು, ತುಪ್ಪ ಮತ್ತು ಔಷಧೀಯ ಕಷಾಯ ಹಾಗೂ ಹಾಲನ್ನು ಮೂಗಿನ ಮೂಲಕ ಬಳಕೆ ಮಾಡುವುದು. ಇದು ಪಂಚಕರ್ಮದಲ್ಲಿನ ಶುದ್ಧೀಕರಿಸುವ ಕಾರ್ಯವಿಧಾನವಾಗಿದ್ದು, ಮೂಗಿನ ಹೊಳ್ಳೆಗಳಲ್ಲಿ ಗಿಡಮೂಲಿಕೆಗಳ ತೈಲವನ್ನು ಹಾಕಿ ಅದು ಮೂಗಿನ ಕುಹರದಲ್ಲಿ ಮತ್ತು ಬಾಯಿಯೊಳಗೆ ಹರಿಯುವಂತೆ ಮಾಡಲಾಗುತ್ತದೆ. 

ನಸ್ಯವು ಮೂಗಿನ ಕುಹರವನ್ನು ತೆರವುಗೊಳಿಸಲು ಮತ್ತು ಶ್ವಾಸಕೋಶದ ಮೇಲ್ಭಾಗವನ್ನು ಬಲಪಡಿಸಲು ಸಹಕಾರಿ ಎನ್ನುತ್ತಾರೆ ಉತ್ತರಪ್ರದೇಶದ ಎಸ್‌ಸಿಪಿಎಂ ಆಯುರ್ವೇದ ವೈದ್ಯಕೀಯ ಕಾಲೇಜಿನ ಪಂಚಕರ್ಮ ವಿಭಾಗದ ಸಹಾಯಕ ಪ್ರ್ಯಾಧ್ಯಾಪಕರಾದ ಡಾ ಗೋಪಿಲ್‌ದೇವ್. 

ಮೂಗಿನ ಹೊಳ್ಳೆಗಳು ದೇಹದಲ್ಲಿನ ಪ್ರಾಣದ (ಉಸಿರು) ಮಾರ್ಗವಾಗಿದೆ. ದೇಹವನ್ನು ಸಮತೋಲನದಲ್ಲಿಡಲು ವ್ಯಕ್ತಿಯು ಮೂಗಿನ ಹೊಳ್ಳೆಗಳು ಮತ್ತು ಮೂಗಿನ ನಾಳದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು,” ಎಂದು ಕೇರಳದ ಕೊಚ್ಚಿಯಲ್ಲಿನ ಇಂದೀವರಂ ಆಯುರ್ವೇದ ಕ್ಲಿನಿಕ್‌ನ ಪಂಚಕರ್ಮ ತಜ್ಞರಾದ ಡಾ ಅನಖಾ ವೇಣುಗೋಪಾಲ್ ಹೇಳುತ್ತಾರೆ. 

ನಸ್ಯ ಕ್ರಿಯೆಯು ತಲೆ ಮತ್ತು ಕುತ್ತಿಗೆಯಿಂದ ಹೆಚ್ಚಿನ ಶ್ಲೇಷ್ಮವನ್ನು ಶುದ್ಧೀಕರಿಸುತ್ತದೆ. ನಸ್ಯ ಕ್ರಿಯೆ ಸೈನಸಸ್, ದೀರ್ಘಕಾಲದ ಸೈನಸೈಟಿಸ್, ತಲೆನೋವು, ಅಲರ್ಜಿಗಳು ಮತ್ತು ಕಿವಿಯ ಸೋಂಕುಗಳು, ಪದೇ ಪದೇ ಉಂಟಾಗುವ ಶೀತ, ಜ್ವರ, ಮೈಗ್ರೇನ್‌, ಕಿವಿ ಮೊರೆತ ಮತ್ತು ಭುಜನೋವನ್ನು ಪರಿಹರಿಸಲು ಸಹಕಾರಿಯಾಗಿದೆ. ಈ ಕ್ರಿಯೆ ಒತ್ತಡ ನಿವಾರಿಸಲು, ನಿದ್ರಾಹೀನತೆ ಮತ್ತು ಭಾವನಾತ್ಮಕ ಒತ್ತಡವನ್ನು ತೊಡೆದುಹಾಕುವಲ್ಲಿಯೂ ಸಹಕಾರಿಯಾಗಿದೆ ಎಂದು ಡಾ ವೇಣುಗೋಪಾಲ್ ವಿವರಿಸುತ್ತಾರೆ.  

ಫ್ರಂಟಿಯರ್ಸ್‌ ಇನ್ ಫಾರ್ಮಾಕಾಲಜಿಯಲ್ಲಿ ಪ್ರಕಟವಾದ 2020ಅಧ್ಯಯನದಲ್ಲಿ ಮೂಗಿನಲ್ಲಿ ಔಷಧಿ ಹಾಕುವುದರಿಂದ ಆಲ್ಝಿಮರ್ ಖಾಯಿಲೆ, ಅಪಸ್ಮಾರ, ಪಾರ್ಕಿನ್ಸನ್ ಕಾಯಿಲೆ ಮತ್ತು ಬೆಲ್ಸ್ ಪಾಲ್ಸಿ ಮುಂತಾದ ನರರೋಗಗಳನ್ನು ನಿರ್ವಹಿಸುವಲ್ಲಿ ಭರವಸೆಯ ಫಲಿತಾಂಶವನ್ನು ನೀಡಬಹುದು ಎಂಬುದು ಕಂಡುಬಂದಿದೆ. 

ಗಿಡಮೂಲಿಕೆಗಳ ವಿಧ ಮತ್ತು ಬಳಸುವ ವಸ್ತುಗಳನ್ನಾಧರಿಸಿ ನಸ್ಯದಲ್ಲಿ ಅನೇಕ ವಿಧಗಳಿವೆ. ಅವುಗಳೆಂದರೆ, ವಿರೇಚನ ನಸ್ಯ (ಶುದ್ಧೀಕರಿಸುವ ವಿಧ),  ಬ್ರಹ್ಮನ ನಸ್ಯ(ಪೌಷ್ಟಿಕಾಂಶದ ವಿಧ), ಶಮನ ನಸ್ಯ (ಶಾಮಕ ನಸ್ಯ). ಸೋಂಕು ಅಥವಾ ಉರಿಯೂತ, ತಲೆನೋವು ಮತ್ತು ಜ್ವರದಿಂದಾಗಿ ತೀವ್ರವಾದ ಮೂಗುಕಟ್ಟುವಿಕೆ ಇರುವಾಗ ನಸ್ಯಕ್ರಿಯೆಯನ್ನು ಶಿಫಾರಸು ಮಾಡಲಾಗುವುದಿಲ್ಲ. ಗರ್ಭಿಣಿ ಮಹಿಳೆಯರು ಕೂಡಾ ನಸ್ಯದಿಂದ ದೂರವಿರಬೇಕು ಎಂದು ಡಾ ವೇಣುಗೋಪಾಲ್ ಹೇಳುತ್ತಾರೆ. 

ನಸ್ಯ ಕ್ರಿಯೆ, ನೀವೇ ಮಾಡಿ ನೋಡಿ 

ಡಾ ಗೋಪಿಲ್‌ದೇವ್ ಪ್ರಕಾರ, ನಸ್ಯವನ್ನು ತಲೆ ಮತ್ತು ಕುತ್ತಿಗೆಯ ಸಮಸ್ಯೆಯನ್ನು ತಡೆಗಟ್ಟಲು, ನಿವಾರಿಸಲು, ರಕ್ಷಿಸಲು ಬಳಸಬಹುದಾಗಿದೆ. ಪುನಃಶ್ಚೇತನದ ಪರಿಣಾಮಕ್ಕಾಗಿ ನಸ್ಯ ಕ್ರಿಯೆಯನ್ನು ದಿನಚರಿಯ ಭಾಗವಾಗಿ ಮಾಡಬಹುದು. 

ಎರಡು ಹನಿಗಳಷ್ಟು ಎಳ್ಳೆಣ್ಣೆ, ತುಪ್ಪ ಅಥವಾ ಅನುತೈಲವನ್ನು (ಬಹುವಿಧದ ಗಿಡಮೂಲಿಕೆಗಳಿಂದ ತಯಾರಿಸಲಾದ ಎಣ್ಣೆ)ಪ್ರತಿದಿನ ಮೂಗಿಗೆ ಬಿಡುವುದು ಸಾಮಾನ್ಯ ರೂಪದ ನಸ್ಯ. ಆಯುರ್ವೇದ ತಜ್ಞರು, ಮಸಾಜ್, ಆವಿ ಚಿಕಿತ್ಸೆಯಂಥ ಹೆಚ್ಚಿನ ಕ್ರಿಯೆಗಳೊಂದಿಗೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಿರುವ ಮೂಲಿಕೆಗಳ ನಸ್ಯ ಎಣ್ಣೆಯನ್ನು ಬಳಸಿಕೊಂಡು ಇದನ್ನು ನಡೆಸುತ್ತಾರೆ. 

ನಸ್ಯವನ್ನು ಮನೆಯಲ್ಲೇ ಅಭ್ಯಾಸ ಮಾಡುವುದಾದರೆ, ಎಣ್ಣೆ ಅಥವಾ ಅನು ತೈಲದ ಬಾಟಲಿಯನ್ನು ನೇರವಾಗಿ ಬಿಸಿ ಮಾಡದೇ ಬಿಸಿನೀರಿನಲ್ಲಿ ಇಟ್ಟು ಬೆಚ್ಚಗೆ ಮಾಡಿ ಉಪಯೋಗಿಸಲು ಪ್ರಾರಂಭಿಸಬೇಕು. 

  • ತಲೆಯನ್ನು ತುಸು ಹಿಂದಕ್ಕೆ ಬಾಗಿಸಿ ಆರಾಮವಾಗಿ ಕುಳಿತುಕೊಳ್ಳಿ 
  • ಅದೇ ಎಣ್ಣೆಯಿಂದ ನಿಮ್ಮ ಮುಖವನ್ನು ಮೃದುವಾಗಿ ಮಸಾಜ್ ಮಾಡಿ 
  • ಡ್ರಾಪರ್ ಅನ್ನು ಬಲ ಮೂಗಿನ ಹೊಳ್ಳೆಗೆ ನೇರವಾಗಿ ಹಿಡಿದು ಹನಿಗಳನ್ನು ಮೂಗಿಗೆ ಬಿಡಿ 
  • ದೀರ್ಘವಾಗಿ ಉಸಿರೆಳೆದುಕೊಂಡು ಇದೇ ಪ್ರಕ್ರಿಯೆಯನ್ನು ಎಡಮೂಗಿನ ಹೊಳ್ಳೆಗೂ ಮಾಡಿ. ಎರಡು ನಿಮಿಷ ಹಾಗೇ ಕುಳಿತುಕೊಳ್ಳಿ. 

ಎಣ್ಣೆಯನ್ನು ಮೂಗಿಗೆ ಹಾಕಿದಾಗ, ಅದು ಬಾಯಿಯಲ್ಲಿ ಬರಬಹುದು. ಆ ಎಣ್ಣೆಯನ್ನು (ಮತ್ತು ಶ್ಲೇಷ್ಮವನ್ನು) ನುಂಗಬಾರದು, ಆದರೆ ಉಗುಳಬೇಕು. ಈ ವಿಧಾನವು ಹೆಚ್ಚಿನ ಕಫವನ್ನು ಹೊರಹಾಕಲು ಮತ್ತು ಮೇಲಿನ ಮತ್ತು ಕೆಳಗಿನ ಶ್ವಾಸನಾಳಗಳನ್ನು ತೆರವುಗೊಳಿಸಲು ನೆರವಾಗುತ್ತದೆ. 

ಸೂಕ್ತ ಸಮಯ ಯಾವುದು? 

ಹೊಸಬರಿಗೆ ನಸ್ಯ ಅಹಿತಕರ ಎನಿಸಬಹುದು, ಆದರೆ ಈ ವಿಧಾನವು ಒಂದು ವಾರದೊಳಗೆ ರೂಢಿಯಾಗುತ್ತದೆ. ಔಷಧಿಯ ರುಚಿಯು ಹೊಟ್ಟೆತೊಳೆಸುವಂತೆ ಮಾಡಬಹುದಾದ ಕಾರಣ ಇದನ್ನು ಖಾಲಿ ಹೊಟ್ಟೆಯಲ್ಲಿ ಮಾಡುವುದು ಉತ್ತಮ. ಕಫ ಪ್ರಕೃತಿಯುಳ್ಳವರಿಗೆ (ಜಲ ಅಂಶ) ನಸ್ಯವನ್ನು ಬೆಳಗಿನ ಸಮಯದಲ್ಲಿ ಮಾಡಬೇಕು. ಆದರೆ ಪಿತ್ತ ಪ್ರಕೃತಿಯುಳ್ಳವರು (ಅಗ್ನಿ ಅಂಶ) ಇದನ್ನು ಮಧ್ಯಾಹ್ನ ಮತ್ತು ವಾತ ಪ್ರಕೃತಿಯುಳ್ಳವರು (ವಾಯು ಅಂಶ) ಇದನ್ನು ಸಂಜೆ ಹೊತ್ತಿನಲ್ಲಿ ಮಾಡಬೇಕು. ರಾತ್ರಿ ಹೊತ್ತಿನಲ್ಲಿ ಮಾಡುವುದು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದಾದ ಕಾರಣ ಈ ವಿಧಾನವನ್ನು ರಾತ್ರಿಯಲ್ಲಿ ಮಾಡಬಾರದು. 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ