0

0

0

ಈ ಲೇಖನದಲ್ಲಿ

ಹೊಟ್ಟೆಯ ಬೊಜ್ಜು ನಿಮ್ಮ ಹೃದಯಕ್ಕೆ ತೊಂದರೆಯಾಗಬಹುದು
15

ಹೊಟ್ಟೆಯ ಬೊಜ್ಜು ನಿಮ್ಮ ಹೃದಯಕ್ಕೆ ತೊಂದರೆಯಾಗಬಹುದು

ಅಸಮರ್ಪಕ ಆಹಾರ ಸೇವನೆ ಹಾಗೂ  ಜಡ ಸ್ವಭಾವದ ಜೀವನಶೈಲಿ ಮತ್ತಿತರ ಕಾರಣಗಳಿಂದ  ಬರುವ ಹೊಟ್ಟೆಯ ಬೊಜ್ಜು ಹೆಚ್ಚೆಚ್ಚು ಜನರಲ್ಲಿ ಹೃದಯದ ಸಮಸ್ಯೆಗಳು ಮತ್ತು ಪಾಶ್ಚವಾಯು ಅಪಾಯ  ತಂದಿದೆ. 

ಹೊಟ್ಟೆಯ ಬೊಜ್ಜು ನಿಮ್ಮ ಹೃದಯಕ್ಕೆ ತೊಂದರೆಯಾಗಬಹುದು

 ಹೊಟ್ಟೆಯ ಬೊಜ್ಜು ಅಥವಾ ಕಿಬ್ಬೊಟ್ಟೆಯ ಸ್ಥೂಲಕಾಯತೆ ಇಂದು ತುಂಬಾ ಕಳವಳಕಾರಿ  ವಿಷಯವಾಗಿದೆ.  ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕಪ್ರೇರಿತ ಲಾಕ್‌ಡೌನ್‌ಗಳು ಮತ್ತು ನಂತರದ ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯ ಜನಪ್ರಿಯತೆಯು ಯುವ ಪೀಳಿಗೆ ಸೇರಿದಂತೆ ಎಲ್ಲರಲ್ಲೂ ಜಡ ಸ್ವಭಾವದ ಜೀವನಶೈಲಿಗೆ ಒತ್ತಾಸೆ ನೀಡಿದೆ. ಇದರ ಪರಿಣಾಮ , ತೂಕದಲ್ಲಿ ಹೆಚ್ಚಳ ಹಾಗೂ ಡೊಳ್ಳುಯ ಸ್ಥಿತಿ ಹೊಟ್ಟೆ ಜನರನ್ನು ಹೃದಯ ಸಮಸ್ಯೆಗಳು ಮತ್ತು ಪಾರ್ಶ್ವವಾಯುವಿನ ಅಪಾಯಕ್ಕೆ ತಳ್ಳಿದೆ. 

ಎರಡು ವರ್ಷಗಳಿಗೂ ಹೆಚ್ಚು ಕಾಲ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಬೆಂಗಳೂರಿನ 34-ವರ್ಷ ವಯಸ್ಸಿನ ಮಾಹಿತಿ ತಂತ್ರಜ್ಞಾನ  (ಐಟಿ) ಕ್ಷೇತ್ರದ ಉದ್ಯೋಗಿ ಶ್ರೀರಾಮ್ (ಕೋರಿಕೆಯ ಮೇರೆಗೆ ಹೆಸರು ಬದಲಾಯಿಸಲಾಗಿದೆ) ಬಿಡುವಿಲ್ಲದ ಕೆಲಸ ಮತ್ತು ಜಡಸ್ವಭಾವದ ಜೀವನಶೈಲಿ ಹೊಂದಿದ್ದರು. ಎರಡು ತಿಂಗಳ ಹಿಂದೆ, ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಧೂಮಪಾನಿಯಾಗಿದ್ದ ಅವರು,  ಶ್ವಾಸಕೋಶದ ಸಮಸ್ಯೆಯಿಂದಾಗಿ ತನ್ನ ದೈಹಿಕ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಭಾವಿಸಿದರು. ವೈದ್ಯರೊಬ್ಬರೊಂದಿಗೆ ಸಮಾಲೋಚನೆ ಮಾಡಿದ ನಂತರ ಶ್ರೀರಾಮ್‌ ಚಿಕಿತ್ಸೆಯನ್ನು ಪ್ರಾರಂಭಿಸಿದರು, ಆದರೆ ಔಷಧಿಗಳಿಂದ ಅವರಿಗೆ ಕ್ಷಣಿಕವಾಗಿ ಉಪಶಮನ ದೊರೆಯಿತು. ಉಸಿರಾಟದ ತೊಂದರೆಗಳಿಂದಾಗಿ ಅವರಿಗೆ ನಿದ್ರಿಸಲು ಕಷ್ಟವಾಗುತ್ತಿತ್ತು. 

ಇಸಿಜಿ, ರಕ್ತ ಪರೀಕ್ಷೆಗಳು ಮತ್ತು ಆಂಜಿಯೋಗ್ರಾಮ್ ಮಾಡಿಸಿಕೊಂಡು ಹೆಚ್ಚಿನ ಪರೀಕ್ಷೆಯ ನಂತರ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕ್ಯಾಥೀಟರ್ ಅಥವಾ ನಳಿಕೆ ಬಳಸಿ ಹೃದಯ ಚಿಕಿತ್ಸೆಯ (ಇಂಟರ್‌ವೆನ್ಶನಲ್ ಕಾರ್ಡಿಯಾಲಜಿ) ಸಲಹೆಗಾರ (ಕನ್ಸಲ್ಟೆಂಟ್) ಆಗಿರುವ ಡಾ, ಪ್ರದೀಪ್ ಹಾರನಹಳ್ಳಿ ಅವರು ಶ್ರೀರಾಮ್ ಅವರ ಹೃದಯದ ರಕ್ತನಾಳದಲ್ಲಿ ಶೇಕಡಾ 95 ರಷ್ಟು ಬ್ಲಾಕೇಜ್ ಇರುವುದನ್ನು ಪತ್ತೆಹಚ್ಚಿದರು. ಹೀಗಾಗಿ ಶ್ರೀರಾಮ್ ಅವರು ಕೂಡಲೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. 

”ನನ್ನ ಜಡ ಸ್ವಭಾವದ  ಜೀವನಶೈಲಿ, ಕಿಬ್ಬೊಟ್ಟೆಯ ಬೊಜ್ಜು, ಆಹಾರ ಶೈಲಿ ಮತ್ತು ಧೂಮಪಾನದ ಅಭ್ಯಾಸಗಳು ಬ್ಲಾಕೇಜ್ ಆಗಲು ಕಾರಣಗಳೆಂದು ಡಾ. ಪ್ರದೀಪ್ ವಿವರಿಸಿದರು,” ಎನ್ನುತ್ತಾರೆ ಶ್ರೀರಾಮ್. “ನನ್ನ ಎತ್ತರಕ್ಕೆ ಅನುಗುಣವಾಗಿ, ನಾನು ಸುಮಾರು 75 ಕೆಜಿ ತೂಕ ಹೊಂದಿರಬೇಕಿತ್ತು, ಆದರೆ ನನ್ನ ತೂಕ ಸುಮಾರು 89 ಕೆಜಿ ಇತ್ತು. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ವೈದ್ಯರು ನನಗೆ ಸಲಹೆಯಿತ್ತರು,” ಎಂದು ಶ್ರೀರಾಮ್ಹೇಳುತ್ತಾರೆ. 

ಕಿಬ್ಬೊಟ್ಟೆಯ ಕೊಬ್ಬು ಎಂದರೇನು? 

ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಯು ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಮತ್ತು ನಾವು ಕರಗಿಸುವ ಕ್ಯಾಲೊರಿಗಳ ನಡುವಿನ ಅಸಮತೋಲನವಾಗಿದೆ ಎಂದು ಡಾ. ಹಾರನಹಳ್ಳಿ ಹೇಳುತ್ತಾರೆ. ಪ್ರಾಥಮಿಕವಾಗಿ, ಇದು ದೈಹಿಕ ಚಟುವಟಿಕೆಯ ಕೊರತೆ, ಜಡ ಜೀವನಶೈಲಿ ಮತ್ತು ಅಸಮರ್ಪಕ ಆಹಾರದಿಂದ ಉಂಟಾಗುತ್ತದೆ. 

ಭಾರತೀಯರಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೃದಯಾಘಾತದ ಅಪಾಯ ಸಂಭವವಿದೆ ಎಂದು ಶಾಸ್ತ್ರೋಕ್ತ ಪಠ್ಯಪುಸ್ತಕದ ವಿವರಣೆಯಾಗಿದ್ದರೂ ಪ್ರಾಯಶ: ಈ ಮಾಹಿತಿಯನ್ನು ಪರಿಷ್ಕರಿಸುವ ಸಮಯ ಸನ್ನಿಹಿತವಾಗಿದೆ. “ನಮ್ಮ ವೈದ್ಯಕೀಯ ಚಿಕಿತ್ಸೆಯ ಅನುಭವದಲ್ಲಿ 35 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಕೂಡಾ ಹೃದಯದ ಸಮಸ್ಯೆಗಳೊಂದಿಗೆ ಬರುವುದನ್ನು ನಾವು ನೋಡುತ್ತೇವೆ,” ಎಂದು ಅವರು ಹೇಳುತ್ತಾರೆ. “ತಮ್ಮ ದೈಹಿಕ ಚಟುವಟಿಕೆ ಮತ್ತು ಆಹಾರ ಕ್ರಮವನ್ನು ಸುಧಾರಿಸುವ ಮೂಲಕ ಅವರು ಹೊಟ್ಟೆಯ ಬೊಜ್ಜು ಕರಗಿಸುವ ಪ್ರಯತ್ನವನ್ನು ಮುಂದುವರಿಸಬೇಕು,” ಎಂದು ಅವರ ಸಲಹೆ. 

ಕಿಬ್ಬೊಟ್ಟೆಯ ಬೊಜ್ಜು ಸಾಮಾನ್ಯ ಸಮಸ್ಸೆ, ಎನ್ನುತ್ತಾರೆ, ಚೆನ್ನಯ್ ನಗರದ ಅಪೋಲ್ಲೊ ಆಸ್ಪತ್ರೆಗಳ ಹಿರಿಯ ಹೃದ್ರೋಗ ತಜ್ಞ ಸಲಹೆಗಾರ ಹಾಗೂ ಎಲೆಕ್ಟ್ರೋಫಿಸಿಯಾಲಜಿಸ್ಟ್ ಆಗಿರುವ ಡಾ. .ಎಂ. ಕಾರ್ತಿಗೇಶನ್ ಹೇಳುತ್ತಾರೆ. “ಇದು ಇನ್ಸುಲಿನ್ ಪ್ರತಿರೋಧಕ್ಕೆ, ಲಿಪಿಡೇಮಿಯಾ (ಕೊಲೆಸ್ಟೊರಾಲ್ ಮಟ್ಟದಲ್ಲಿ ಅಸಹಜತೆಗಳು) ಮತ್ತು ರಕ್ತದೊತ್ತಡಕ್ಕೆ ಕಾರಣವಾಗುತ್ತದೆಎಂದು ಅವರು ಹೇಳುತ್ತಾರೆ. “ ಎಲ್ಲಾ ಸಮಸ್ಯೆಗಳನ್ನು ಒಟ್ಟಾಗಿ ಚಯಾಪಚಯ ಸ್ಥಿತಿ (ಮೆಟಾಬಾಲಿಕ್ ಸಿಂಡ್ರೋಮ್) ಎಂದು ಕರೆಯಲಾಗುತ್ತದೆ. ಇದು ಹೃದಯಾಘಾತದ ಅಪಾಯದೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದೆ. ಅನಾರೋಗ್ಯಕರ ಆಹಾರ ಮತ್ತು ಜಡ ಜೀವನಶೈಲಿಯಿಂದಾಗಿ ಕಿಬ್ಬೊಟ್ಟೆಯ ಸ್ಥೂಲಕಾಯತೆಗೆ ಕಾರಣವಾಗಿದ್ದು, ಯುವ ಪೀಳಿಗೆ ಈಗ ಸಮಸ್ಯೆಗೆ ಹೆಚ್ಚಾಗಿ ಬಲಿಯಾಗುವ ಸಾಧ್ಯತೆಯಿದೆ,” ಎಂದು ಹೇಳುವ ಅವರು ಧೂಮಪಾನದಂತಹ ಇತರ ಅಂಶಗಳು ಕೂಡಾ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆಯೆಂದು ತಿಳಿಸುತ್ತಾರೆ. 

“ಪಾಶ್ಚಿಮಾತ್ಯ ದೇಶಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟವರು ಹೃದಯಾಘಾತಕ್ಕೆ ಒಳಗಾಗುತ್ತಿದ್ದರೆ, ಭಾರತದಲ್ಲಿ ನಾವು ಚಿಕ್ಕ ವಯಸ್ಸಿನಲ್ಲೂ ಇಂತಹ ಪ್ರಕರಣಗಳನ್ನು ಕಾಣುತ್ತೇವೆ,” ಎನ್ನುವ ಅವರು “ಮೂವತ್ತರ ಹರೆಯದವರಿಗೂ ಹೃದಯಾಘಾತವಾಗುತ್ತದೆ. ಕಿಬ್ಬೊಟ್ಟೆಯ ಬೊಜ್ಜು ಅಥವಾ ಮೆಟಾಬಾಲಿಕ್ ಸಿಂಡ್ರೋಮ್ ಇದಕ್ಕೆ ;ಪ್ರಮುಖ ಕಾರಣಗಳಲ್ಲೊಂದು’ ಎಂದು ವಿವರಿಸುತ್ತಾರೆ.

ಸ್ಥೂಲಕಾಯತೆ ಅಥವಾ ಬೊಜ್ಜು ನಿರ್ಧರಿಸುವ ಒಂದು ಮಾರ್ಗವೆಂದರೆ ಭೌತಿಕ ದ್ರವ್ಯರಾಶಿ ಸೂಚಿ, ಅಂದರೆ ವ್ಯಕ್ತಿಯ ಎತ್ತರವನ್ನು ತೂಕದ ವರ್ಗದಿಂದ ಭಾಗಿಸಿದಾಗ ಸಿಗುವ ಪರಿಮಾಣ. ಸ್ಥೂಲಕಾಯತೆಯನ್ನು ನಿರ್ಧರಿಸುವ ಇನ್ನೊಂದು ಮಾರ್ಗವೆಂದರೆ ಕಿಬ್ಬೊಟ್ಟೆಯ ವಕ್ರರೇಖೆ.  ಸಾಮಾನ್ಯವಾಗಿ ಏಷ್ಯಾದ ಪುರುಷರಲ್ಲಿ ಕಿಬ್ಬೊಟ್ಟೆಯ ವಕ್ರರೇಖೆಯು 40 ಅಂಗುಲಗಳಿಗಿಂತ (ಅಥವಾ 102 ಸೆಂ.ಮೀ.) ಹೆಚ್ಚಾಗಿದ್ದರೆ ಮತ್ತು ಏಷ್ಯಾದ ಮಹಿಳೆಯರಲ್ಲಿ ಇದು 35 ಅಂಗುಲಗಳಿಗಿಂತ (ಅಥವಾ 85 ಸೆಂ.ಮೀ.) ಹೆಚ್ಚಾಗಿದ್ದರೆ, ನಾವು ಅದನ್ನು ಬೊಜ್ಜು ಎಂದು ಕರೆಯುತ್ತೇವೆ,” ಎಂದು ಡಾ. ಹಾರನಹಳ್ಳಿ ಹೇಳುತ್ತಾರೆ. 

ದೊಡ್ಡ ಹೊಟ್ಟೆಯು ಹೃದಯದ ಸಮಸ್ಯೆಗಳನ್ನು ಸೂಚಿಸುತ್ತದೆಯೇ? 

ಹೃದಯಾಘಾತಗಳಿಗೆ ಕಿಬ್ಬೊಟ್ಟೆಯ ಸ್ಥೂಲಕಾಯತೆಯನ್ನುಪ್ರಮುಖ ಅಪರಾಧಿಎಂದು ಡಾ. ಕಾರ್ತಿಗೇಶನ್ ಕರೆಯುತ್ತಾರೆ. “ಅಪಾಯದ ಅಂಶವನ್ನು ನಿವಾರಿಸದಿದ್ದರೆ ಮತ್ತು ಕಿಬ್ಬೊಟ್ಟೆಯ ಸ್ಥೂಲಕಾಯತೆ ಉಳಿದರೆ, ಅಂಥಹವರು ಮತ್ತೊಂದು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು,” ಎಂದು ಹೇಳಿಕಿಬ್ಬೊಟ್ಟೆಯ ಸ್ಥೂಲಕಾಯತೆ ಕರಗಿಸಲು ಮತ್ತು ಕಡಿಮೆ ಪೌಷ್ಟಿಕಾಂಶವುಳ್ಳ ಸಂಸ್ಕರಿತ ಆಹಾರ (ಜಂಕ್ ಫುಡ್) ತಿನ್ನುವುದನ್ನು ಕಡಿಮೆ ಮಾಡಲು ಮತ್ತು ನಡೆಯುವುದೇ ಮೊದಲಾದ ವ್ಯಾಯಾಮ ಮಾಡಲು ಮತ್ತು ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ನಿರಂತರ ಅಪಾಯವನ್ನು ಕಡಿಮೆಗೊಳಿಸಲು ನಾವು ರೋಗಿಗಳಿಗೆ ಸಲಹೆ ನೀಡುತ್ತೇವೆ,” ಎನ್ನುತ್ತಾರೆ. 

ಹೊಟ್ಟೆಯ ಬೊಜ್ಜು ಎಂದರೆ ಆಂತರಿಕ ಅಂಗಗಳನ್ನು ಸುತ್ತುವರೆಯುವ  ಕೊಬ್ಬಿನ ಅತ್ಯಂತ ಅಪಾಯಕಾರಿ ವಿಧವಾಗಿದೆಒಳಾಂಗಗಳ ಕೊಬ್ಬು (ಕಿಬ್ಬೊಟ್ಟೆಯ ಕುಳಿಯಲ್ಲಿ ಸಂಗ್ರಹವಾಗಿರುವ ಕೊಬ್ಬು) ದೇಹದ ಅಂಗಾಂಶಗಳ ಉರಿಯೂತ, ಹೆಚ್ಚಿನ ಲಿಪಿಡ್ (ಕೊಬ್ಬಿನ) ಮಟ್ಟ ಮತ್ತು ರಕ್ತನಾಳಗಳು ಕಿರಿದಾಗಿಸಲು ಕಾರಣವಾಗಬಹುದು. “ಹಾರ್ವರ್ಡ್ ಹೆಲ್ತ್” ಮಾಧ್ಯಮದ ಪ್ರಕಾರ, ಓರ್ವ ವ್ಯಕ್ತಿಯ ದೇಹದ ಒಟ್ಟು ಕೊಬ್ಬಿನಲ್ಲಿ ಶೇಕಡಾ 10 ರಷ್ಟು ಒಳಾಂಗಗಳ ಕೊಬ್ಬಾಗಿರುತ್ತದೆ. 

ಹೊಟ್ಟೆಯ ಬೊಜ್ಜು ಎಕ್ಟೋಪಿಕ್ ಕೊಬ್ಬಿನೊಂದಿಗೆ (ಯಕೃತ್ತು, ಹೃದಯ, ಮೇದೋಜ್ಜೀರಕ ಗ್ರಂಥಿ ಮತ್ತು ಸ್ನಾಯುಗಳಲ್ಲಿ ಸಂಗ್ರಹವಾದ ಕೊಬ್ಬು) ಸಂಬಂಧ ಹೊಂದಿದೆಇದು ಅಪಧಮನಿಕಾಠಿಣ್ಯ (ಅಥೆರೋಸ್ಕ್ಲೆರೋಸಿಸ್), ಪರಿಧಮನಿಯ ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. 

 “ದೇಹದಲ್ಲಿನ  ಹೆಚ್ಚಿದ ಕೊಬ್ಬಿನ ಅಂಗಾಂಶಗಳು ದೇಹದಲ್ಲಿ ಉರಿಯೂತದ ಮೂಲವಾಗಿದೆ ಮತ್ತು  ಪ್ರತಿಯಾಗಿ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ,” ಎಂದು ಡಾ. ಹಾರನಹಳ್ಳಿ ವಿವರಿಸುತ್ತಾರೆ. “ಹೊಟ್ಟೆಯ ಬೊಜ್ಜಿನ ದ್ವಿತೀಯ ಪರಿಣಾಮವೆಂದರೆ ದೇಹದ ತೂಕ. ದೇಹದ ತೂಕದಲ್ಲಿನ ಹೆಚ್ಚಳವು ರಕ್ತದೊತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ನಿಮ್ಮ ತೂಕದಲ್ಲಿ ಪ್ರತೀ 10 ಕೆಜಿ ಹೆಚ್ಚಳವಾದ ಹಾಗೆ ರಕ್ತದೊತ್ತಡವು 3 ರಿಂದ 4 ಎಂಎಂಹೆಚ್ಜಿ-ಗಳಷ್ಟು (mmHg ) ಹೆಚ್ಚಾಗುತ್ತದೆ ಮತ್ತು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಶೇಕಡಾ 12 ರಷ್ಟು ಹೆಚ್ಚಾಗುತ್ತದೆ,” ಎಂದು ಅವರು ಹೇಳುತ್ತಾರೆ. 

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಪ್ರಕಟಿಸುವ ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಹಾನಿಯೆ ಮೊಹಮ್ಮದಿ, ಜೋಯಲ್ ಓಮ್, ಆಂಡ್ರಿಯಾ ಡಿಸ್ಕಾಸ್ಸಿಯಾಟಿ ಮತ್ತು ಇತರರುಹೃದಯ ಸ್ನಾಯುವಿನ ಊತದ (ಮಯೋಕಾರ್ಡಿಯಲ್ ಇನ್ಫ್ರಾಕ್ಷನ್) ನಂತರ ಕಿಬ್ಬೊಟ್ಟೆಯ ಬೊಜ್ಜು ಮತ್ತು ಮರುಕಳಿಸುವ ಅಪಧಮನಿಕಾಠಿಣ್ಯದ (ಅಥೆರೋಸ್ಕ್ಲೆರೋಟಿಕ್) ಕಾಯಿಲೆಯ ಅಪಾಯ” ಎಂಬ 2020 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಕಿಬ್ಬೊಟ್ಟೆಯ ಬೊಜ್ಜು ಹೊಂದಿರುವವರು ಪುನರಾವರ್ತಿತ ಹೃದಯಾಘಾತಕ್ಕೆ ಒಳಗಾಗುವ ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ತಿಳಿದುಬಂದಿದೆ. 

 ನಮ್ಮ ಅಧ್ಯಯನದಲ್ಲಿ, ಕಿಬ್ಬೊಟ್ಟೆಯ ಸ್ಥೂಲಕಾಯತೆಯ ಮಟ್ಟಗಳನ್ನು ಹೆಚ್ಚಾಗಿ ಹೊಂದಿರುವ ರೋಗಿಗಳಿಗೆ ಸಾಂಪ್ರದಾಯಿಕ ಅಪಾಯದ ಅಂಶಗಳಾದ ಅಧಿಕ ರಕ್ತದೊತ್ತಡ ನಿರೋಧಕ, ಮಧುಮೇಹ ಔಷಧಿಗಳು ಮತ್ತು ಲಿಪಿಡ್ಗಳನ್ನು ಕಡೆಮೆಗೊಳಿಸುವಂತಹ ಚಿಕಿತ್ಸೆಯ ನಂತರವೂ ಕಿಬ್ಬೊಟ್ಟೆಯ ಸ್ಥೂಲಕಾಯತೆಗೆ ಸಂಬಂಧಿಸಿದ ಸಮಸ್ಯೆಗಳು ಅಧಿಕವಾಗಿ ಮರಕಳಿಸುವ ಸಾಧ್ಯತೆಯಿತ್ತು,” ಎಂದು ಸಂಶೋಧಕ ಮೊಹಮ್ಮದಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸ್ಥೂಲಕಾಯತೆ ಮತ್ತು ಹೃದ್ರೋಗದ ನಡುವಿನ ಸಂಬಂಧ 

 ಹೃದಯರಕ್ತನಾಳದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು, ಮಧುಮೇಹ, ಕೊಲೆಸ್ಟ್ರಾಲ್, ರಕ್ತದೊತ್ತಡದ ನಿರ್ವಹಣೆ ಹಾಗೂ ಹೊಟ್ಟೆಯ ಬೊಜ್ಜು ಕರಗಿಸುವುದು ಬಹಳ ಮುಖ್ಯ ಎಂದು ಡಾ. ಹಾರನಹಳ್ಳಿ ಹೇಳುತ್ತಾರೆ. ಏಕೆ ಎಂಬುದು ಇಲ್ಲಿದೆ: 

  • ಹೊಟ್ಟೆಯ ಬೊಜ್ಜು ಅಸಾಮಾನ್ಯ ಕೊಲೆಸ್ಟ್ರಾಲ್ ಮಟ್ಟಗಳಿಗೆ ಕಾರಣವಾಗಬಹುದು. ಅದು ಉತ್ತಮ ಕೊಲೆಸ್ಟ್ರಾಲ್ ಮಟ್ಟ ಕಡಿಮೆಮಾಡುತ್ತದ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹಾಗೂ ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಹೆಚ್ಚಿಸುತ್ತದೆ.  ಎಚ್‌ಡಿಎಲ್ ಅಥವಾ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಿ ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ಬೊಜ್ಜು ಹೊಂದಿರುವವರಿಗೆ ದೇಹಕ್ಕೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸಲು ಹೆಚ್ಚಿನ ರಕ್ತದ ಅಗತ್ಯವಿರುವುದರಿಂದ ಇದು ರಕ್ತದೊತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡವು ಹೃದಯಾಘಾತಗಳಿಗೆ ಅಪಾಯಕಾರಿ ಅಂಶವಾಗಿದೆ. 
  • ಕಿಬ್ಬೊಟ್ಟೆಯ ಬೊಜ್ಜು ಹೊಂದಿರುವವರು ಮಧುಮೇಹದಿಂದ ಭಾದಿತರಾಗುವ ಹೆಚ್ಚಿನ ಅಪಾಯದಲ್ಲಿರುತ್ತರೆ, ಆದ್ದರಿಂದ ಅವರಿಗೆ ಹೃದ್ರೋಗ ಬರುವುದು  ಎರಡರಿಂದ ನಾಲ್ಕು ಪಟ್ಟು ಹೆಚ್ಚಿನ ಸಂಭವವಿದೆ. 
  • ಇದು ಒಳಾಂಗ ಮತ್ತು ಸೊಂಟದ (ಎಕ್ಟೋಪಿಕ್) ಕೊಬ್ಬಿನೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದು ಅದರಿಂದ ಆಂತರಿಕ ಅಂಗಗಳ ಮೇಲೆ ಕೊಬ್ಬು ಶೇಖರಣೆ ಮತ್ತು ಉರಿಯೂತ ಉಂಟಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. 

ಹೊಟ್ಟೆಯ ಬೊಜ್ಜು ಮತ್ತು ಹೃದಯಾಘಾತದ ಅಪಾಯ 

ಕಿಬ್ಬೊಟ್ಟೆಯ ಬೊಜ್ಜು ಹೃದಯಾಘಾತಕಗಳು ಮರುಕಳಿಸುವ ಅಪಾಯಕಾರಿ ಅಂಶವಾಗಿದೆ ಎಂಬುದನ್ನು ತಜ್ಞರು ಒಪ್ಪುತ್ತಾರೆ ಮತ್ತು ಹೃದಯಾಘಾತದಿಂದ ಆಗಿರುವವರು ಆಘಾತವಾದ ನಂತರ ತಕ್ಷಣವೇ ದೈಹಿಕ ಚಟುವಟಿಕೆಯಲ್ಲಿ ತೊಡಗುವುದು ಸೂಕ್ತವಲ್ಲ ಹಾಗೂ ಚೇತರಿಸಿಕೊಳ್ಳಲು ಸಮಯ ನೀಡುವುದು ಮತ್ತು ಹೃದಯಕ್ಕೆ ವಿಶ್ರಾಂತಿ ನೀಡುವುದು ಮಹತ್ವದ್ದು ಎಂದು ಅವರು ಹೇಳುತ್ತಾರೆ. 

ಸ್ಥಿರವಾದ ಚೇತರಿಕೆ ತಕ್ಷಣದ ಗುರಿಯಾಗಿದೆ ಎನ್ನುತ್ತಾರೆ ಡಾ. ಹಾರನಹಳ್ಳಿ. “ಹೃದಯಾಘಾತವು ನಿಮ್ಮ ಹೃದಯದ ಸ್ನಾಯುವಿನ ಗಾಯವಾಗಿದೆ ಮತ್ತು ಅದು ಗುಣವಾಗಲು ಸಮಯ ತೆಗೆದುಕೊಳ್ಳುತ್ತದೆ,” ಎಂದು ಅವರು ಹೇಳುತ್ತಾರೆ. “ಗುಣವಾಗುವ ಹಂತದಲ್ಲಿ  ನೆಂಬಲ ನೀಡುವುದು  ದೀರ್ಘಕಾಲೀನ ಮತ್ತು ಮಧ್ಯಂತರ ಚೇತರಿಕೆಯ ಗುರಿಗಳನ್ನು ಹೊಂದಲು ಮಹತ್ವದ್ದಾಗಿದೆ.  ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ಹೃದಯವು ಗುಣವಾಗಲು ಬಿಡುವುದು ಮೊದಲ ಆದ್ಯತೆಯಾಗಿರಬೇಕು. ತೂಕ ಇಳಿಸಿಕೊಳ್ಳಲು ಮತ್ತು ಕಿಬ್ಬೊಟ್ಟೆಯ ಸುತ್ತಳತೆಯನ್ನು ಕಡಿಮೆ ಮಾಡಲು ದೈಹಿಕ ಚಟುವಟಿಕೆಗಳು ಅಥವಾ ಆಹಾರ ಕ್ರಮಗಳನ್ನು ಕ್ರಮೇಣ ಪ್ರಾರಂಭಿಸಿ ಮುಂದುವರಿಸುವುದರಿಂದ ಮತ್ತೊಂದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ,” ಎಂದು ಅವರು ವಿವರಿಸುತ್ತಾರೆ. 

ಚೇತರಿಸಿಕೊಳ್ಳಲು ನಾಲ್ಕರಿಂದ ಆರು ವಾರಗಳು ಬೇಕಾಗಬಹುದು ಮತ್ತು ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ ಜನರಿಗೆ ವ್ಯಾಯಾಮ ಮಾಡಲು ಸಲಹೆ ನೀಡಲಾಗುತ್ತದೆ, ಎಂದು ಡಾ. ಕಾರ್ತಿಗೇಶನ್ ಹೇಳುತ್ತಾರೆ.  “ಆಹಾರಕ್ರಮದಲ್ಲಿ ಬದಲಾವಣೆಗಳನ್ನು ತಕ್ಷಣವೇ ಮಾಡಬಹುದು, ಆದರೆ ನಿಯಮಿತ ದೈಹಿಕ ಚಟುವಟಿಕೆಯನ್ನು ಅವರ ವೈದ್ಯರ ಸಲಹೆಯ ಮೇರೆಗೆ ಒತ್ತಡ ಪರೀಕ್ಷೆಯ ನಂತರ ಪ್ರಾರಂಭಿಸಬಹುದು, ಇದರಿಂದ ಅವರ ಹೃದಯದ ಪಂಪಿಂಗ್ ಮತ್ತು ದೈಹಿಕ ಸಾಮರ್ಥ್ಯವನ್ನು ನಿರ್ಧಾರವಾಗುತ್ತದೆ,” ಎನ್ನುತ್ತಾರೆ ಡಾ. ಕಾರ್ತಿಗೇಶನ್. 

ಆದರೆ ಪ್ರತಿಯೊಂದು ಪ್ರಕರಣವೂ ವಿಭಿನ್ನವಾಗಿರುತ್ತದೆ. “ಎಲ್ಲಾ ಹೃದಯಾಘಾತಗಳು ಒಂದೇ ಸಮನಾಗಿರುವುದಿಲ್ಲ ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಒಂದೇ ರೀತಿಯ ಸ್ಥಿತಿಯಲ್ಲಿರುವುದಿಲ್ಲ,” ಎಂದು ಡಾ. ಹಾರನಹಳ್ಳಿ ಹೇಳುತ್ತಾರೆ. “ಕೆಲವೊಂದು ತೀವ್ರವಾಗಿರಬಹುದಾಗಿದ್ದರೂ ಕೆಲವೊಂದು ಪ್ರಕರಣಗಳು ಆರಂಭಿಕ ಹಂತದಲ್ಲೇ ಸೂಕ್ತ ಸಹಾಯ ಪಡೆದರೆ ತುಂಬಾ ಸ್ಥಿರವಾಗಿರಬಹುದು. ಒಬ್ಬ ವ್ಯಕ್ತಿಯು ಸರಿಸುಮಾರು ಎರಡು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಅದರ ನಂತರ ಪರಿಸ್ಥಿತಿಯನ್ನು ಲಘುವಾಗಿ ತೆಗೆದುಕೊಳ್ಳಬಹುದುಅದರ ನಂತರ, ಅವರು ತಮ್ಮ ದೈನಂದಿನ ಚಟುವಟಿಕೆಯನ್ನು ಪುನರಾರಂಭಿಸಬಹುದು ಮತ್ತು ಕ್ರಮೇಣ ತಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಚಟುವಟಿಕೆಗಳನ್ನು ಹೆಚ್ಚಿಸಬಹುದು,” ಎಂದು ಡಾ ಹಾರನಹಳ್ಳಿ ಸೂಚಿಸುತ್ತಾರೆ. 

ತಾನೀಗ ದೈಹಿಕವಾಗಿ ಹೆಚ್ಚು ಸಕ್ರಿಯರಾಗಲು ನಿರ್ಧರಿಸಿದ್ದು, ಮಿತ  ಪ್ರಮಾಣದಲ್ಲಿ ಸ್ವಲ್ಪ ನಡಿಗೆಯನ್ನೂ ಆರಂಭಿಸಿರುವುದಾಗಿ ಐಟಿ ಕ್ಷೇತ್ರದ ಉದ್ಯೋಗಿ ಶ್ರೀರಾಮ್ ಹೇಳುತ್ತಾರೆ. . “ನಾನು ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಅದಕ್ಕಾಗಿ ತೀವ್ರವಾದ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳದಂತೆ ವೈದ್ಯರು ನನಗೆ ಸಲಹೆ ನೀಡಿದ್ದಾರೆ,” ಎಂದು ಅವರು ತಿಳಿಸುತ್ತಾರೆ. 

ಹೊಟ್ಟೆಯ ಬೊಜ್ಜು ಒಂದು ಸ್ವತಂತ್ರ ಅಪಾಯದ ಅಂಶವಾಗಿದೆ. ಸಾಮಾನ್ಯ ಸನ್ನಿವೇಶಗಳಲ್ಲಿಜನರು ವಯಸ್ಸಾದಂತೆ ಸ್ನಾಯುವಿನ ದ್ರವ್ಯರಾಶಿಯನ್ನು ಕಳೆದುಕೊಳ್ಳುವುದು ಸಾಧ್ಯವಾಗಿದ್ದು, ದೇಹದಲ್ಲಿ ಕೊಬ್ಬನ್ನು ಶೇಖರಿಸಿಕೊಂಡರೂ, ಆದರ್ಶವೆನಿಸುವಷ್ಟು ದೇಹದ ಸೂಕ್ತ ತೂಕವನ್ನು ಕಾಪಾಡಿಕೊಳ್ಳುತ್ತಾರೆ. “ಕೇವಲ ದೇಹದ ಆದರ್ಶಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದರಿಂದ ಅಪಾಯದ ಭಯ ಹೋಯಿತು ಎನ್ನುವಂತಿಲ್ಲ,” ಎಂದು ಎಚ್ಚರಿಸುತ್ತಾರೆ ಡಾ. ಹಾರನಹಳ್ಳಿ. “ಸ್ನಾಯುವಿನ ದ್ರವ್ಯರಾಶಿಯ ನಷ್ಟದ ಪರಿಣಾಮವಾಗಿ ಕೊಬ್ಬಿನ ಸಂಗ್ರಹಣೆ ಆಗಿದೆ ಎಂಬುದನ್ನು ನಾವು ಗಮನಿಸಬೇಕು. ಕಿಬ್ಬೊಟ್ಟೆಯ ಸಾಮಾನ್ಯ ತೂಕದ ಹೊರತಾಗಿಯೂ ಸಾಮಾನ್ಯ ತೂಕದ ಹೊರತಾಗಿಯೂ, ಸ್ಥೂಲಕಾಯತೆಯನ್ನು ಹೊಂದಿರುವವರು ಕಡಿಮೆ ಕಿಬ್ಬೊಟ್ಟೆಯ ಸ್ಥೂಲಕಾಯತೆ ಹೊಂದಿರುವವರಿಗಿಂತಲೂ ಹೆಚ್ಚಿನ ಹೃದಯಾಘಾತದ ಅಪಾಯ ಹೊಂದಿರುತ್ತಾರೆ,” ಎನ್ನುತ್ತಾರೆ ಡಾ. ಹಾರನಹಳ್ಳಿ. 

ಕಿಬ್ಬೊಟ್ಟೆಯ ಬೊಜ್ಜಿನಿಂದ ಪೀಡಿತರಾಗಿದ್ದು ಹೃದಯದ ಬ್ಲಾಕೇಜ್ ಇದ್ದುದರಿಂದ ನಡೆಯಲು ಕಷ್ಟಪಡುತ್ತಿದ್ದ 52 ವರ್ಷದ ಗೃಹಿಣಿಯ ಘಟನೆಯನ್ನು ಡಾ. ಹಾರನಹಳ್ಳಿ ನೆನಪಿಸಿಕೊಳ್ಳುತ್ತಾರೆ.  ತನ್ನ ಸಮಸ್ಯೆಯಿಂದಾಗಿ ಇನ್ನಷ್ಟು ದೈಹಿಕವಾಗಿ ನಿಷ್ಕ್ರಿಯರಾದ ಅವರಿಗೆ ದೇಹದ ತೂಕದಲ್ಲಿ ಹೆಚ್ಚಳಕ್ಕೆ ಕಾರಣವಾಯಿತ್ತು ಮತ್ತು ಅವರ ಮೊಣಕಾಲು ಮತ್ತು ಪಾದದ ಕೀಲುಗಳ ಮೇಲೆ ಪರಿಣಾಮ ಬೀರಿತು. ನಡೆಯುವಾಗ ಅವರಿಗೆ ಉಸಿರಾಟದಲ್ಲಿ ತೊಂದರೆ ಉಂಟಾಗುವ ಅನುಭವವಾಗುತ್ತಿತ್ತು, ಎನ್ನುತ್ತಾರೆ ಅವರು. 

 ತನ್ನ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಡಾ. ಹಾರನಹಳ್ಳಿ ಅವರನ್ನು ಸಂಪರ್ಕಿಸಿದ ಮಹಿಳೆಗೆ ಆಂಜಿಯೋಪ್ಲ್ಯಾಸ್ಟಿ ಮಾಡಬೇಕಾಯಿತು. “ಗುಣಮುಖರಾದ ನಂತರ, ಅವರು ತಮ್ಮ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿಕೊಂಡರು ಮತ್ತು ಆರು ತಿಂಗಳಲ್ಲಿ 20 ಕೆಜಿ ಕಡಿಮೆ ಮಾಡುವಲ್ಲಿ ಯಶಸ್ವಿಯಾದರು, ಇದರಿಂದಾಗಿ ಅವರ ಮೊಣಕಾಲು ಮತ್ತು ಪಾದದ ಕೀಲುಗಳು ಸಹಾ  ಸುಧಾರಿಸಿಕೊಂಡಿತು,” ಎಂದು ವೈದ್ಯರು ಹೇಳುತ್ತಾರೆ. 

 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

two + 1 =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ