0

0

0

ಈ ಲೇಖನದಲ್ಲಿ

ಆರು ಹೃದಯ-ಸ್ನೇಹಿ ಆಹಾರಗಳು
7

ಆರು ಹೃದಯ-ಸ್ನೇಹಿ ಆಹಾರಗಳು

ಹಣ್ಣು- ತರಕಾರಿಗಳು, ನಾರಿನಂಶ ಮತ್ತು ಕೊಬ್ಬುಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ 

ಆರು ಹೃದಯ-ಸ್ನೇಹಿ ಆಹಾರಗಳು

ಹೃದಯ ಸಮಸ್ಯೆಗಳಿರುವ ಜನರಿಗೆ, ವೈದ್ಯರು ಮತ್ತು ಪೌಷ್ಟಿಕಾಂಶ ತಜ್ಞರು ಹೆಚ್ಚು ನೈಸರ್ಗಿಕವಾದ ಮತ್ತು ಕಡಿಮೆ ಕೊಬ್ಬಿನ ಆಹಾರಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಯಾವುದೇ ಅಡೆತಡೆಯಿಲ್ಲದೆ ರಕ್ತವನ್ನು ಪಂಪ್ ಮಾಡಲು ಮತ್ತು ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸಲು, ಹೃದಯ ಸ್ನೇಹಿ, ಆರೋಗ್ಯಕರ ಆಹಾರಗಳು ಸಹಾಯ ಮಾಡುತ್ತವೆ. 

 “ಹೃದಯದ ಆರೋಗ್ಯಕ್ಕೆ, ಆಂಟಿಆಕ್ಸಿಡೆಂಟ್ ಹೀರಿಕೊಳ್ಳುವಿಕೆಗಾಗಿ, ಸೂಕ್ಷ್ಮ ಪೋಷಕಾಂಶ ಭರಿತ  ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ. ಇವು ರಕ್ತನಾಳಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತವೆಎಂದು ಬೆಂಗಳೂರು ಮೂಲದ ಆಹಾರ ತಜ್ಞ ರಂಜಿನಿ ರಾಮನ್ ಹೇಳುತ್ತಾರೆ 

ಆಹಾರದಲ್ಲಿ ಪೊಟ್ಯಾಸಿಯಮ್ನಂತಹ ಖನಿಜಗಳು ಮತ್ತು ಫೋಲೇಟ್ (ವಿಟಮಿನ್ ಬಿ -9) ಮತ್ತು ವಿಟಮಿನ್ ಸಿ ನಂತಹ ವಿಟಮಿನ್ಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ ಮಾತ್ರವಲ್ಲ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ರಕ್ಷಿಸುತ್ತದೆ ಎಂದು ಅವರು ವಿವರಿಸುತ್ತಾರೆ. 

ತಜ್ಞರ ಪ್ರಕಾರ, ಹೃದಯಕ್ಕೆ ಅದ್ಭುತ ಕಾರ್ಯಚಟುವಟಿಕೆಗೆ ಪೂರಕವದ ಕೆಲವು ನೈಸರ್ಗಿಕ ಆಹಾರಗಳು ಹೀಗಿವೆ: 

ಫೈಬರ್‌ ಭರಿತ ಸಂಪೂರ್ಣ ಧಾನ್ಯಗಳು: 

 “ಆಹಾರದಲ್ಲಿನ ನಾರಿನಂಶಗಳು ಜೀರ್ಣಕ್ರಿಯೆಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತದೆ. ನೀವು ಉತ್ತಮ ಜೀರ್ಣಕ್ರಿಯೆಯನ್ನು ಹೊಂದಿದ್ದರೆ, ಅನಗತ್ಯ ಮತ್ತು ಅನಾರೋಗ್ಯಕರ ಕೊಬ್ಬುಗಳು, ನಿಮ್ಮ ಅಪಧಮನಿಗಳು ಮತ್ತು ರಕ್ತನಾಳಗಳಲ್ಲಿ ಸಂಗ್ರಹವಾಗುವುದಿಲ್ಲ, ಆಹಾರದಲ್ಲಿನ ನಾರಿನ ಅಂಶಕರಗುವ ಮತ್ತು ಕರಗದ ಎರಡೂಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಎಂದು ದೀಪಲೇಖಾ ಬ್ಯಾನರ್ಜಿ ವಿವರಿಸುತ್ತಾರೆ. 

ಬಹುಧಾನ್ಯದ ಹಿಟ್ಟುಗಳನ್ನು ಬಳಸುವುದಕ್ಕೆ ಬದಲಾಗಿ ಓಟ್ಸ್ ಮತ್ತು ಜೋಳ, ಬಾಜ್ರಾ, ನವಣೆ, ರಾಗಿ, ಕಾಡುಗೋಧಿಯಂತಹ ನಾರಿನಂಶ ಭರಿತ ಸಂಕೀರ್ಣ ಕಾರ್ಬೋಹೈಡ್ರೇಟ್ಯುಕ್ತ ಆಹಾರಗಳನ್ನು ಸೇವಿಸುವುದು ಉತ್ತಮ. ಅಕ್ಕಿಅದರಲ್ಲೂ ವಿಶೇಷವಾಗಿ ಕೆಂಪಕ್ಕಿಯ ಸೇವನೆ ಬಹಳ ಯೋಗ್ಯ ಎಂದು ಅವರು ಹೇಳುತ್ತಾರೆ  

ಓಟ್ಸ್ ಮತ್ತು ಸಿರಿಧಾನ್ಯಗಳಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಅಥೆರೋಸ್ಕ್ಲಿರೋಸಿಸ್ ಅಪಾಯ ಉಂಟು ಮಾಡುವ ಟ್ರೈಗ್ಲಿಸರೈಡ್ಅಥವಾ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ವಿವರಿಸುತ್ತಾರೆ. 

ಹಣ್ಣುಗಳು 

ಹಣ್ಣುಗಳಲ್ಲಿ ಕಿತ್ತಳೆ, ಕಲ್ಲಂಗಡಿ, ದ್ರಾಕ್ಷಿ, ಬೆಣ್ಣೆಹಣ್ಣು, ಸೇಬು ಇತ್ಯಾದಿ ಸಂಪೂರ್ಣ ಹಣ್ಣುಗಳನ್ನು ಹೃದಯ ಸ್ನೇಹಿ ಹಣ್ಣುಗಳೆಂದು ಶಿಫಾರಸು ಮಾಡಲಾಗುತ್ತದೆ. 

ಹಣ್ಣುಗಳಲ್ಲಿ ಹೆಚ್ಚಿನವು ವಿಟಮಿನ್, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿವೆ. ಹೃದ್ರೋಗಿಗಳು ಮಧುಮೇಹ ಅಥವಾ ಸ್ಥೂಲಕಾಯದಂತಹ ಸಹ-ರೋಗ ಪರಿಸ್ಥಿತಿಗಳನ್ನು ಹೊಂದಿದ್ದರೆ, ಅವರು ಮೊದಲು ತಮ್ಮ ಆಹಾರ ತಜ್ಞರನ್ನು ಸಂಪರ್ಕಿಸಬೇಕು. ಸೇಬು ಮತ್ತು ಸೀಬೆಯಂತಹ ಹಣ್ಣುಗಳನ್ನು ಸೇವಿಸಬಹುದು, ಆದರೆ ಮಧುಮೇಹ ಇರುವವರು ಮಾವಿನಹಣ್ಣು ಮತ್ತು ದ್ರಾಕ್ಷಿಯಂತಹ ಹಣ್ಣುಗಳನ್ನು ಸೇವಿಸಬಾರದುಎಂದು ಬ್ಯಾನರ್ಜಿ ಸಲಹೆ ನೀಡುತ್ತಾರೆ. 

ಹಣ್ಣುಗಳನ್ನು ಜ್ಯೂಸ್ ಮಾಡುವ ಬದಲು ಸಿಪ್ಪೆಯೊಂದಿಗೆ ತಿನ್ನುವುದು ಉತ್ತಮ, ಇದರಿಂದ ಹಣ್ಣಿನ ಸಿಪ್ಪೆಯಲ್ಲಿರುವ ನಾರಿನಂಶವೂ ಸಿಗುತ್ತದೆ ಎಂದು ರಾಮನ್ ಹೇಳುತ್ತಾರೆ.   

ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ಯಾವುದನ್ನು ಸೇವಿಸಬಾರದು ಎಂಬುದನ್ನು ಸೂಚಿಸಲು ನಿಮ್ಮ ಆಹಾರ ತಜ್ಞರು ಅತ್ಯುತ್ತಮ ವ್ಯಕ್ತಿಯಾಗಿರುತ್ತಾರೆ. ಹಣ್ಣುಗಳು ಸೂಕ್ಷ್ಮಪೋಷಕಾಂಶಗಳು ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳನ್ನು ಸಹ ಹೊಂದಿರುತ್ತವೆ, ಇವು ಹೃದಯಕ್ಕೆ ಆರೋಗ್ಯಕರಎಂದು ಬ್ಯಾನರ್ಜಿ ಹೇಳುತ್ತಾರೆ 

ಸಂಕೀರ್ಣ ಕಾರ್ಬೋಹೈಡ್ರೇಟ್ಭರಿತ ತರಕಾರಿಗಳು 

ನಿಮ್ಮ ಆಹಾರದ ಪಟ್ಟಿಯಲ್ಲಿ ಬಹಳಷ್ಟು ಬಣ್ಣ-ಬಣ್ಣದ ಹಣ್ಣು- ತರಕಾರಿಗಳನ್ನು ಸೇರಿಸಲು ವೈದ್ಯರು ಮತ್ತು ಪೌಷ್ಟಿಕಾಂಶ ತಜ್ಞರು ಶಿಫಾರಸು ಮಾಡುತ್ತಾರೆ. “ಶಾಖಾಹಾರದ ಪ್ರಮಾಣವು ಕಾರ್ಬೋಹೈಡ್ರೇಟ್ಗಳ ಭಾಗಕ್ಕಿಂತ ಹೆಚ್ಚಾಗಿರಬೇಕುಎಂದು ರಾಮನ್ ಹೇಳುತ್ತಾರೆ.  

ನಿಮ್ಮ ಊಟವು ಸಾಕಷ್ಟು ಟೊಮೆಟೊಗಳು, ನೇರಳೆ ಎಲೆಕೋಸು, ಹಸಿರು ಸೊಪ್ಪು- ತರಕಾರಿಗಳು, ಬೀಟ್ರೂಟ್‌ಗಳು ಮತ್ತು ಕ್ಯಾರೆಟ್‌ಗಳನ್ನು ಸೆರಿಸಿರುವ ಸಲಾಡ್‌ಗಳನ್ನು ಒಳಗೊಂಡಿರಬೇಕು. ಈ ಆಹಾರಗಳು ಹಸಿವನ್ನು ತೃಪ್ತಿಕರವಾಗಿ ನೀಗಿಸುತ್ತವೆ ಮತ್ತು ಸರಿಯಾದ ದೇಹ ತೂಕ ಮತ್ತು ಲಿಪಿಡ್ಗಳ ಮಟ್ಟವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆಎಂದು ರಾಮನ್ ಸೂಚಿಸುತ್ತಾರೆ. ಬ್ಯಾನರ್ಜಿ ಅವರು ಗೆಡ್ಡೆ ತರಕಾರಿಗಳಿಗಿಂತ ಹಸಿರು ಸೊಪ್ಪು-ತರಕಾರಿಗಳನ್ನು ಹೆಚ್ಚು ಸೇವಿಸುವಂತೆ ಶಿಫಾರಸು ಮಾಡುತ್ತಾರೆ. 

ನೀವು ರೊಟ್ಟಿ ಅಥವಾ ಅಕ್ಕಿಯಂತಹ ಕಾರ್ಬೋಹೈಡ್ರೇಟ್ಗಳ ಜೊತೆಗೆ, ಗೆಡ್ಡೆ-ಗೆಣಸು ಮತ್ತು ಪಿಷ್ಟ ತರಕಾರಿಗಳನ್ನು ಸೇವಿಸಿದರೆ ಕಾರ್ಬೋ ಹೈಡ್ರೇಟ್ ಪ್ರಮಾಣವು ದ್ವಿಗುಣಗೊಳ್ಳುತ್ತದೆಎಂದು ಅವರು ವಿವರಿಸುತ್ತಾರೆ. ನೀವು ಅವುಗಳನ್ನು ಸೇವಿಸುತ್ತಿದ್ದರೆ, ಸೇವನೆಯ ಪ್ರಮಾಣವನ್ನು ಗಮನಿಸುವುದು ಉತ್ತಮ. ಗರಿಷ್ಠ ಪ್ರಯೋಜನಗಳಿಗಾಗಿ ಸ್ವಲ್ಪ ಎಣ್ಣೆಯಲ್ಲಿ ತರಕಾರಿಗಳನ್ನು ಉಗಿ ಬರಿಸಿ, ಕುದಿಸಿ ಅಥವಾ ಹುರಿದು ಸೇವಿಸಬಹುದು” ಎನ್ನುತ್ತಾರೆ. 

ಆರೋಗ್ಯಕರ ಉತ್ತಮ ಕೊಬ್ಬುಗಳು 

ಹೃದಯ ಸ್ನೇಹಿಆರೋಗ್ಯಕರ ಆಹಾರಕ್ಕಾಗಿ, ಆರೋಗ್ಯಕರ ಕೊಬ್ಬುಗಳು ಮತ್ತು ಅನಾರೋಗ್ಯಕರ ಕೊಬ್ಬುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಬಹಳ ಆವಶ್ಯಕ. ಆರೋಗ್ಯಕರ ಕೊಬ್ಬಿನ ಭಾಗಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. “ಬೀಜಗಳು (ಬಾದಾಮಿ, ವಾಲ್ನಟ್ಸ್, ಪಿಸ್ತಾ), ಕಾಳು/ಬೀಜಗಳು (ಚಿಯಾ, ಅಗಸೆ), ಕೊಬ್ಬಿನ ಮೀನು ಇತ್ಯಾದಿಗಳ ರೂಪದಲ್ಲಿ ಆರೋಗ್ಯಕರ ಕೊಬ್ಬನ್ನು ಸೇವಿಸುವ ಮೂಲಕ ಹೃದಯವನ್ನು ಮತ್ತಷ್ಟು ರಕ್ಷಿಸಬಹುದು ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು [HDL] ಹೆಚ್ಚಿಸಬಹುದುಎಂದು ರಾಮನ್ ಹೇಳುತ್ತಾರೆ. 

ಹೃದಯದ ಉತ್ತಮ ಆರೋಗ್ಯಕ್ಕಾಗಿ ಸಂಸ್ಕರಿಸಿದ ಎಣ್ಣೆಗಳು, ಬೆಣ್ಣೆ ಮತ್ತು ಇತರ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳಂತಹ ಅನಾರೋಗ್ಯಕರ ಕೊಬ್ಬುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಎಂದು ರಾಮನ್ ಹೇಳುತ್ತಾರೆ.  

ಬೀಜ ಆಧಾರಿತ ತೈಲಗಳಲ್ಲಿ (ಎಳ್ಳು ಮತ್ತು ಸಾಸಿವೆ ಎಣ್ಣೆಯಂತಹವು) ಒಮೆಗಾ 3 ಮತ್ತು ಒಮೆಗಾ 6 ರಲ್ಲಿ ಸಮೃದ್ಧವಾಗಿದೆ ಎಂದು ಕಂಡುಬಂದಿದೆ. ಹೃದಯ ಆರೋಗ್ಯಕ್ಕೆ ಉತ್ತಮವೆನಿಸಿರುವ ಇಂತಹ ಎಣ್ಣೆಗಳನ್ನು ಅಡುಗೆಯಲ್ಲಿ ಪರ್ಯಾಯವಾಗಿ ಬಳಸಬಹುದು.  

ಶುದ್ಧ ತುಪ್ಪವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಆಮ್ಲೀಯತೆ ಅಥವಾ ಎದೆಯುರಿಯನ್ನು ದೂರ ಇಡುತ್ತದೆ ಎಂದು ಬ್ಯಾನರ್ಜಿ ಹೇಳುತ್ತಾರೆ. ಅದರೆ ನೀವು ಸೇವಿಸುವ ಪ್ರಮಾಣದ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಅತಿಯಾಗಿ ಸೇವಿಸಬಾರದು. 

ಮೊಟ್ಟೆ 

ಮೊಟ್ಟೆಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಇದಕ್ಕೆ ಕಾರಣ ಮೊಟ್ಟೆಯಲ್ಲಿರುವ ಬೀಟೈನ್ ಎಂಬ ಸಂಯುಕ್ತವಾಗಿದೆ. ಇದು ರಕ್ತದಲ್ಲಿನ ಹೋಮೋಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ (ಅಂದರೆ ಹೃದಯದ ಕಾಯಿಲೆಗೆ ಸಂಬಂಧಿಸಿದ ಅಮೈನೋ ಆಮ್ಲಗಳ ಅಧಿಕ ಮಟ್ಟಗಳು). ರಕ್ತದಲ್ಲಿ ಕಡಿಮೆ ಪ್ಲಾಸ್ಮಾ ಹೋಮೋಸಿಸ್ಟೈನ್ ಸಾಂದ್ರತೆಗಳು ಇದ್ದಾಗ, ಹೃದಯದ ಕಾಯಿಲೆಯ ಅಪಾಯವೂ ಕಡಿಮೆ ಇರುತ್ತದೆಎಂದು ದೆಹಲಿ ಮೂಲದ ಪೌಷ್ಟಿಕಾಂಶ ತಜ್ಞೆ ಕವಿತಾ ದೇವಗನ್ ಅವರು ಹೇಳುತ್ತಾರೆ. 

ಬ್ಯಾನರ್ಜಿಯವರ ಪ್ರಕಾರ, ಮೊಟ್ಟೆಗಳು ಪೌಷ್ಟಿಕಾಂಶದಿಂದ ತುಂಬಿರುತ್ತವೆ, ಆದರೆ ಪ್ರೋಟೀನ್ ಸೇವನೆಯ ವಿಷಯಕ್ಕೆ ಬಂದಾಗ ಒಬ್ಬ ವ್ಯಕ್ತಿಯು ಅವನ ಅಥವಾ ಅವಳ ತೂಕ, ಎತ್ತರ ಮತ್ತು ಸ್ಥಿತಿಗೆ ಅನುಗುಣವಾಗಿ ಸೇವಿಸುವ ಪ್ರಮಾಣವು ಮುಖ್ಯವಾಗಿರುತ್ತದೆ. 

ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನ: 

ಹೃದ್ರೋಗಿಗಳು ಟೋನ್ಡ್ ಅಥವಾ ಕೆನೆ ತೆಗೆದ ಹಾಲಿನ ಉತ್ಪನ್ನಗಳನ್ನು ಸೇವಿಸುವುದು ಉತ್ತಮ. ಮನೆಯಲ್ಲಿ ಕಡಿಮೆ ಕೊಬ್ಬಿನ ಹಾಲನ್ನು ಬಳಸಿ ಪನೀರ್, ಮೊಸರು ಮತ್ತು ಮಜ್ಜಿಗೆ ಮಾಡಿಕೊಳ್ಳಬಹುದು ಎಂದು ಬ್ಯಾನರ್ಜಿ ಹೇಳುತ್ತಾರೆ 

ಹೃದಯಸ್ನೇಹಿ, ನೈಸರ್ಗಿಕ ಆಹಾರಗಳ ಹೊರತಾಗಿ, ಹೃದಯದ ಆರೋಗ್ಯಕ್ಕೆ ಪೂರಕವಾದ ಮತ್ತೊಂದು ಪ್ರಮುಖ ಅಂಶವೆಂದರೆ, ಯಥೇಚ್ಛವಾಗಿ ನೀರು ಕುಡಿಯುವುದು, ಪ್ರತಿದಿನ ಎರಡರಿಂದ ಮೂರು ಲೀಟರ್ ನೀರು ಕುಡಿಯುವುದು, ಆರೋಗ್ಯಕರ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಹೃದಯವು ಸರಿಯಾಗಿ ಕೆಲಸ ಮಾಡಲು ಶಕ್ತಗೊಳಿಸುತ್ತದೆ ಎಂದು ಬ್ಯಾನರ್ಜಿ ಹೇಳುತ್ತಾರೆ. 

ಸಾರಾಂಶ 

ಆರೋಗ್ಯಕರ ಆಹಾರವು ನಿಮ್ಮ ಹೃದಯ ಕ್ಷೇಮದ ಅತ್ಯವಶ್ಯಕ ಅಂಶವಾಗಿದೆ. ಆಹಾರದ ಮೂಲಕ ಹೃದಯದ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಅಧಿಕ ನಾರಿನಂಶಯುಕ್ತಸಂಕೀರ್ಣ ಕಾರ್ಬೋಹೈಡ್ರೇಟ್ಭರಿತ ಆಹಾರದ ಸೇವನೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ತಜ್ಞರು ಸೂಚಿಸುತ್ತಾರೆ. ಎಲ್ಲಾ ಕೊಬ್ಬುಗಳು ಹೃದಯಕ್ಕೆ ಕೆಟ್ಟದ್ದಲ್ಲ, ಹೃದಯದ ಸರಿಯಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ಉತ್ತಮ ಕೊಬ್ಬುಗಳನ್ನು ಆಹಾರದಲ್ಲಿ ಸೇರಿಸಬೇಕು ಎಂದು ಆಹಾರ ತಜ್ಞರು ಸೂಚಿಸುತ್ತಾರೆ. 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

five × five =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ