0

0

0

ಈ ಲೇಖನದಲ್ಲಿ

Melon Seeds Benifits: ಮಧುಮೇಹ ನಿರ್ವಹಣೆಯಲ್ಲಿ ಕಲ್ಲಂಗಡಿ ಬೀಜಗಳು
6

Melon Seeds Benifits: ಮಧುಮೇಹ ನಿರ್ವಹಣೆಯಲ್ಲಿ ಕಲ್ಲಂಗಡಿ ಬೀಜಗಳು

ಒಮೆಗಾ-3 ಮತ್ತು ಒಮೆಗಾ-6 ಫ್ಯಾಟಿ ಆಮ್ಲಗಳ ಜೊತೆಗೆ ಈ ಹೃದಯ ಸ್ನೇಹಿ ಬೀಜಗಳು ನಾರಿನಂಶ ಮತ್ತು ಮ್ಯಾಗ್ನೇಷಿಯಂನಂತಹ ರಕ್ತದ ಸಕ್ಕರೆಯನ್ನು ನಿರ್ವಹಿಸುವ ಪೋಷಕಾಂಶಗಳನ್ನು ಹೇರಳವಾಗಿ ಹೊಂದಿದೆ.

 ಮಧುಮೇಹ ನಿರ್ವಹಣೆಯಲ್ಲಿ ಕಲ್ಲಂಗಡಿ ಬೀಜಗಳು

ಕಲ್ಲಂಗಡಿ ಹಣ್ಣಿನ ರಸದಲ್ಲಿರುವ ಸಕ್ಕರೆಯ ಅಂಶದಿಂದಾಗಿ ಮಧುಮೇಹಿಗಳು ಇದನ್ನು ಹಿತಮಿತವಾಗಿ ಸೇವಿಸುವುದು ಅಗತ್ಯ.  ಆದರೆ ಈ ಸಿಹಿಯಾದ ಹಣ್ಣಿನೊಳಗೆ ಹುದುಗಿರುವ ಬೀಜ ಮಧುಮೇಹ-ಸ್ನೇಹಿ ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಡುವ ಈ ಬೀಜಗಳು ಹೃದಯ ಸ್ನೇಹಿ ಮತ್ತು ಮಧುಮೇಹ ನಿರ್ವಹಿಸುವ ಅನೇಕ ಪೋಷಕಾಂಶಗಳನ್ನು ಒಳಗೊಂಡಿವೆ ಎಂದು ತಜ್ಞರು ಹೇಳುತ್ತಾರೆ.

“ಸಾಮಾನ್ಯವಾಗಿ ಅನೇಕ ಹಣ್ಣುಗಳ ಬೀಜಗಳು ಮೊಳಕೆಯೊಡೆದು ಗಿಡವಾಗುವ ಕಾರಣ ಅವುಗಳು ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿಂದ ಕೂಡಿರುತ್ತವೆ” ಎಂದು ಗೋವಾದ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ ಸಬ್ಯಸಾಚಿ ಮುಖೋಪಾಧ್ಯಾಯ್ ಅವರು ಹೇಳುತ್ತಾರೆ.

ತಜ್ಞರ ಪ್ರಕಾರ, ಕಲ್ಲಂಗಡಿ ಬೀಜಗಳು ಕಬ್ಬಿಣಾಂಶ, ನಾರಿನಂಶ ಮತ್ತು ಮ್ಯಾಗ್ನೇಷಿಯಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಇದರ ಹೊರತಾಗಿ ಉರಿಯೂತ ನಿರೋಧಕ ಗುಣಗಳನ್ನು ಹೊಂದಿರುವ ಆ್ಯಂಟಿಆಕ್ಸಿಡೆಂಟ್‌ಗಳು, ಜೊತೆಗೆ ವಿಟಮಿನ್ ಬಿ, ಸಿ ಮತ್ತು ಇ ಅನ್ನು ಹೇರಳವಾಗಿ ಹೊಂದಿದೆ.

“ಈ ಬೀಜಗಳು ಆರೋಗ್ಯಕರ ಒಮೆಗಾ-3 ಮತ್ತು ಒಮೆಗಾ-6 ಫ್ಯಾಟಿ ಆಮ್ಲಗಳನ್ನು ಹೊಂದಿರುತ್ತವೆ. ಈ ಪೋಷಕಾಂಶಗಳು ಹೃದ್ರೋಗ, ಅಧಿಕರಕ್ತದೊತ್ತಡ, ಮಧುಮೇಹ ಮತ್ತು ಆಟೋಇಮ್ಯೂನ್ ರೋಗಗಳು ಅಲ್ಲದೇ ಮೂತ್ರಪಿಂಡದ ಸಮಸ್ಯೆ ಉಳ್ಳವರಿಗೂ ಪ್ರಯೋಜನಕಾರಿಯಾಗಿದೆ, ಅಲ್ಲದೇ ಅವುಗಳು ಕಡಿಮೆ ಕ್ಯಾಲರಿಗಳನ್ನು ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ಸ್ನ್ಯಾಕ್ ಆಗಿಯೂ ಬಳಸಬಹುದು” ಎನ್ನುತ್ತಾರೆ ಡಾ ಮುಖೋಪಾಧ್ಯಾಯ್.

ಹೃದಯದ ಆರೋಗ್ಯಕ್ಕೆ ಉತ್ತಮವಾದ ಕಲ್ಲಂಗಡಿ ಬೀಜಗಳು

ಕಲ್ಲಂಗಡಿ ಬೀಜಗಳನ್ನು ಆರೋಗ್ಯಕರ ಆಹಾರದ ಭಾಗವಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಅಧಿಕ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನೂ ಕಡಿಮೆಗೊಳಿಸುತ್ತದೆ. ಇವುಗಳು MUFA (ಮೋನೋಸ್ಯಾಚುರೇಟಡ್ ಫ್ಯಾಟಿ ಆಮ್ಲಗಳು) ಮತ್ತು PUFA (ಪಾಲಿಸ್ಯಾಚುರೇಟಡ್ ಫ್ಯಾಟಿ ಆಮ್ಲ)ಗಳನ್ನು ಹೊಂದಿದ್ದು, ಇವುಗಳು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಅನ್ನು ಕಡಿಮೆಗೊಳಿಸುತ್ತದೆ. ಇದರೊಂದಿಗೆ ಈ ಬೀಜಗಳಲ್ಲಿರುವ ಮ್ಯಾಗ್ನೇಷಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಎಂದು ಡಾ ಮುಖೋಪಾಧ್ಯಾಯ್ ಅವರು ಹೇಳುತ್ತಾರೆ.

360 ಡಿಗ್ರಿ ನ್ಯೂಟ್ರಿಕೇರ್ (ಇ-ಕ್ಲಿನಿಕ್) ಸಂಸ್ಥಾಪಕರು ಮತ್ತು ಆಹಾರತಜ್ಞರಾದ ದೀಪಲೇಖಾ ಬ್ಯಾನರ್ಜಿ ಅವರು ಹೇಳುವಂತೆ, ಈ ಬೀಜಗಳಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ವೇಸೋಡೈಲೇಟರ್‌ನಂತೆ (ರಕ್ತನಾಳಗಳನ್ನು ಹಿಗ್ಗಿಸುವುದು) ವರ್ತಿಸಿ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದರೊಂದಿಗೆ, ಕಲ್ಲಂಗಡಿ ಬೀಜಗಳಲ್ಲಿ ಇರುವ ಕಬ್ಬಿಣಾಂಶವು ರಕ್ತದ ಆಮ್ಲಜನಕ ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಇದರಲ್ಲಿರುವ ಸತು ಹೃದಯದಲ್ಲಿನ ಕ್ಯಾಲ್ಸಿಯಂ ಚಲನೆಯನ್ನು ನಿಯಂತ್ರಿಸುತ್ತದೆ.

ಟೈಪ್ 2 ಮಧುಮೇಹ ಹೊಂದಿರುವ ವ್ಯಕ್ತಿಗಳು ಹೃದ್ರೋಗಕ್ಕೆ ಈಡಾಗುವ ಅಪಾಯ ಹೆಚ್ಚು. ಕಲ್ಲಂಗಡಿ ಬೀಜಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಆಕ್ಸಿಡೀಕರಣ ಮತ್ತು ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗುವುದನ್ನು ತಡೆಗಟ್ಟಿ ಹೃದ್ರೋಗ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ ಎಂದು ಹೈದರಾಬಾದಿನ ಕಮಿನೇನಿ ಹಾಸ್ಪಿಟಲ್ಸ್‌ನಲ್ಲಿ ಎಂಡೋಕ್ರೈನಾಲಾಜಿಸ್ಟ್ ಆಗಿರುವ ಡಾ ಸಂದೀಪ್ ರೆಡ್ಡಿಯವರು ಹೇಳುತ್ತಾರೆ.

ಕಲ್ಲಂಗಡಿ ಬೀಜಗಳು ಮಧುಮೇಹ ನಿರ್ವಹಣೆಯಲ್ಲಿ ಹೇಗೆ ಸಹಾಯ ಮಾಡುತ್ತವೆ 

ಕಲ್ಲಂಗಡಿ ಬೀಜಗಳು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ, ಆದ್ದರಿಂದ ಮಧುಮೇಹ ಹೊಂದಿರುವವರಿಗೆ ಇದು ಉತ್ತಮ ಸ್ನ್ಯಾಕ್. ಇವುಗಳು ಇನ್ಸುಲಿನ್ ಸಂವೇದನೆಯನ್ನು (ನಿಮ್ಮ ಕೋಶಗಳು ಇನ್ಸುಲಿನ್‌ಗೆ ಪ್ರತಿಕ್ರಿಯಿಸುವ ಬಗೆ) ಸುಧಾರಿಸುವಲ್ಲಿ ನೆರವಾಗುತ್ತದೆ. ಮ್ಯಗ್ನೇಷಿಯಂ ಕೂಡಾ ಕಾರ್ಬೋಹೈಡ್ರೇಟ್ ಚಯಾಪಚಯವನ್ನು ನಿಯಂತ್ರಿಸಲು ನೆರವಾಗುತ್ತದೆ, ಇದರಿಂದ ರಕ್ತದ ಸಕ್ಕರೆಯ ಮಟ್ಟ ನಿಯಂತ್ರಿಸಲ್ಪಡುತ್ತದೆ ಎಂದು ಬ್ಯಾನರ್ಜಿ ವಿವರಿಸುತ್ತಾರೆ. “ಇನ್ಸುಲಿನ್ ಬಿಡುಗಡೆ ಮತ್ತು ಕಾರ್ಬೋಹೈಡ್ರೇಟ್ ಚಯಾಪಚಯಕ್ಕೆ ಈ ಮ್ಯಾಗ್ನೇಷಿಯಂ ಅಗತ್ಯ ಸೂಕ್ಷ್ಮ ಪೋಷಕಾಂಶವಾಗಿದೆ” ಎನ್ನುತ್ತಾರೆ ಡಾ ರೆಡ್ಡಿ.

ಮಧುಮೇಹ ಹೊಂದಿರುವವರು ಕಲ್ಲಂಗಡಿ ಹಣ್ಣು ಮತ್ತು ಬೀಜಗಳನ್ನು ಮಿತವಾಗಿ ಸೇವಿಸಬಹುದು ಎಂದು ತಜ್ಞರು ಹೇಳುತ್ತಾರೆ. ಕಲ್ಲಂಗಡಿ ಹಣ್ಣು  ಗ್ಲೂಕೋಸ್ ಅಧಿಕ ಅನ್ನು ಹೊಂದಿದೆ ಆದರೆ, ಇದರ ಗ್ಲೈಸೆಮಿಕ್ ಅಂಶವು (ಸೇವಿಸಿದ ನಂತರ ರಕ್ತದ ಗ್ಲೂಕೋಸ್ ಮಟ್ಟದಲ್ಲಿ ನಿರೀಕ್ಷಿತ ಹೆಚ್ಚಳವನ್ನು ಅಂದಾಜಿಸುತ್ತದೆ) ಕಡಿಮೆ ಇದ್ದು, ಇದು ಅಧಿಕ ನೀರಿನಂಶವನ್ನೂ ಹೊಂದಿದೆ. ಆದರೆ, ಕಲ್ಲಂಗಡಿ ಹಣ್ಣಿನ ರಸದೊಂದಿಗೆ ಸಕ್ಕರೆಯನ್ನು ಸೇರಿಸಬಾರದು ಎಂದು ಡಾ ರೆಡ್ಡಿಯವರು ಹೇಳುತ್ತಾರೆ.

ನಿಮ್ಮ ಆಹಾರದಲ್ಲಿ ಕಲ್ಲಂಗಡಿ ಬೀಜಗಳನ್ನು ಸೇರಿಸುವುದು

ಬಿಳಿ ಮತ್ತು ಕಪ್ಪು ಕಲ್ಲಂಗಡಿ ಬೀಜಗಳ ಸೇವನೆಯು ಸುರಕ್ಷಿತ ಎಂದು ಬ್ಯಾನರ್ಜಿ ಹೇಳುತ್ತಾರೆ. ಈ ಬೀಜಗಳು ನಾವು ಸಾಮಾನ್ಯವಾಗಿ ಸೇವಿಸುವ ಆಹಾರಗಳಾದ ಅನ್ನ, ಚಪಾತಿ ಅಥವಾ ಇತರ ತರಕಾರಿಗಳಲ್ಲಿ ಇಲ್ಲದಿರುವ ಸೂಕ್ಷ್ಮ ಪೋಷಕಾಂಶವನ್ನು ಅಧಿಕವಾಗಿ ಹೊಂದಿದೆ. ಆದ್ದರಿಂದ ಇದು ನಿಮ್ಮ ಆಹಾರಕ್ಕೆ ಉತ್ತಮ ಸೇರ್ಪಡೆಯಾಗಬಹುದು ಎಂದು ಡಾ ರೆಡ್ಡಿ ಹೇಳುತ್ತಾರೆ. ಕಲ್ಲಂಗಡಿ ಬೀಜಗಳನ್ನು ಹಸಿಯಾಗಿ ಅಥವಾ ಹುರಿದು ತಿನ್ನಬಹುದು. ಇವುಗಳನ್ನು ಹಣ್ಣಿನಿಂದ ಬೇರ್ಪಡಿಸಿ ಒಣಗಿಸಲಾಗುತ್ತದೆ. ಒಣಗಿದ ನಂತರ ಈ ಬೀಜಗಳನ್ನು ಸಲಾಡ್‌ಗಳು ಮತ್ತು ಸ್ಯಾಂಡ್‌ವಿಚ್‌ಗಳಲ್ಲಿ ಬಳಸಬಹುದು ಅಥವಾ ಸ್ನ್ಯಾಕ್ ಆಗಿ ಸೇವಿಸಬಹುದು

ಸಾರಾಂಶ

ಕಲ್ಲಂಗಡಿ ಬೀಜಗಳು ಖನಿಜಾಂಶ ಮತ್ತು ಆ್ಯಂಟಿಆಕ್ಸಿಡೆಂಟ್‌ಭರಿತವಾಗಿದ್ದು ಹೃದ್ರೋಗ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ ಹಾಗೂ ಬೊಜ್ಜಿನ ಸಮಸ್ಯೆ ಇರುವವರಿಗೆ ಉತ್ತಮವಾಗಿದೆ.

ಈ ಬೀಜಗಳಲ್ಲಿನ ಮ್ಯಾಗ್ನೇಷಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರೊಂದಿಗೆ, ಕಬ್ಬಿಣಾಂಶವು ರಕ್ತದ ಆಮ್ಲಜನಕ ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಸತು ಹೃದಯದಲ್ಲಿನ ಕ್ಯಾಲ್ಸಿಯಂ ಚಲನೆಯನ್ನು ನಿಯಂತ್ರಿಸಲು ನೆರವಾಗುತ್ತದೆ.

ಈ ಬೀಜಗಳು ಇನ್ಸುಲಿನ್ ನಿರೋಧಕತೆಯನ್ನು ಸುಧಾರಿಸುವುದಲ್ಲದೇ ಕಾರ್ಬೋಹೈಡ್ರೇಟ್ ಚಯಾಪಚಯವನ್ನು ನಿಯಂತ್ರಿಸಿ ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ.

ಕಲ್ಲಂಗಡಿ ಬೀಜಗಳನ್ನು ಸ್ನ್ಯಾಕ್‌ನಂತೆ ಸೇವಿಸಬಹುದು. ಇದರೊಂದಿಗೆ ಅವುಗಳನ್ನು ಒಣಗಿಸಿ ಸಲಾಡ್‌ಗಳು ಮತ್ತು ಸ್ಯಾಂಡ್‌ವಿಚ್‌ಗಳಲ್ಲಿ ಬಳಸಬಹುದು.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

three × 5 =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ