0

0

0

ಈ ಲೇಖನದಲ್ಲಿ

ವೃದ್ಧರಲ್ಲಿ ಕಂಡುಬರುವ 7 ಸಾಮಾನ್ಯ ಹೃದಯ ಸಮಸ್ಯೆಗಳು 
25

ವೃದ್ಧರಲ್ಲಿ ಕಂಡುಬರುವ 7 ಸಾಮಾನ್ಯ ಹೃದಯ ಸಮಸ್ಯೆಗಳು 

ವಯಸ್ಸಾಗುತ್ತಿದ್ದಂತೆ ಹೃದಯದ ಕಾರ್ಯಕ್ಷಮತೆಯೂ ಕಡಿಮೆಯಾಗುತ್ತದೆ. 65 ವರ್ಷದ ಮೇಲಿನವರ ಹೃದಯದ ಆರೋಗ್ಯದ ಬಗ್ಗೆ ತಜ್ಞರು ಚರ್ಚಿಸುತ್ತಾರೆ 
ವೃದ್ಧರಲ್ಲಿ ಕಂಡುಬರುವ 7 ಸಾಮಾನ್ಯ ಹೃದಯ ಸಮಸ್ಯೆಗಳು 
ವೃದ್ಧರಲ್ಲಿ ಕಂಡುಬರುವ 7 ಸಾಮಾನ್ಯ ಹೃದಯ ಸಮಸ್ಯೆಗಳು

ವಯಸ್ಸಾದಂತೆ ಜ್ಞಾನ ವೃದ್ಧಿಯಾಗುತ್ತದೆ, ಜತೆಜತೆಗೆ ಹೃದಯದ ಸಮಸ್ಯೆಗಳೂ ಹೆಚ್ಚುತ್ತವೆ. ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ, ಹೃದಯಕ್ಕೂ ವಯಸ್ಸಾಗುತ್ತದೆ ಹಾಗೂ ಇದರ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ. ಇತರ ಅಂಗಾಂಗಗಳ ವಯಸ್ಸಾಗುವಿಕೆಯೂ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. 65 ವರ್ಷದ ಮೇಲಿನವರಲ್ಲಿ ತೀವ್ರ ಉಸಿರಾಟದ ತೊಂದರೆ, ಎದೆ ನೋವು ಅಥವಾ ತಲೆತಿರುಗುವಿಕೆಯಂಥ ಸಮಸ್ಯೆಗಳು ಆಗಾಗ್ಗೆ ಕಂಡುಬರುತ್ತಿದ್ದಲ್ಲಿ, ಇದು ಹೃದ್ರೋಗದ ಲಕ್ಷಣಗಳಾಗಿರಬಹುದು. ಮೇಲಾಗಿ, ವೃದ್ಧರಲ್ಲಿ ಕಾಣುವ ಅತ್ಯಂತ ಸಾಮಾನ್ಯ ಹೃದ್ರೋಗಗಳಲ್ಲಿ ಹೃದಯ ಬಡಿತದ ಮಂದಗತಿಯೂ ಒಂದಾಗಿದ್ದು, ಇದು ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. 

ವಯಸ್ಸಾಗುತ್ತಿದ್ದಂತೆ ನಿಮ್ಮ ಹೃದಯ ಹೇಗೆ ಬದಲಾಗುತ್ತದೆ? 

 “ಹೃದಯವು ಪ್ರತ್ಯೇಕವಲ್ಲ. ನರವ್ಯೂಹ, ಹೃದಯ, ರಕ್ತನಾಳಗಳು ಎಲ್ಲಕ್ಕೂ ವಯಸ್ಸಾಗುತ್ತದೆ. ವರ್ಷಗಳು ಕಳೆದಂತೆ ಸ್ನಾಯುಗಳು ಸೆಟೆದುಕೊಳ್ಳುತ್ತವೆ ಮತ್ತು ಅಷ್ಟಾಗಿ ಬಾಗುವುದಿಲ್ಲ, ಇದು ಹೃದಯದ ಪಂಪ್ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಮಣಿಪಾಲ್ ಹಾಸ್ಪಿಟಲ್‌ನ ಹೃದ್ರೋಗ ಸಲಹೆಗಾರರಾದ ಡಾ ಸುನಿಲ್ ದ್ವಿವೇದಿ ಅವರು ವಿವರಿಸುತ್ತಾರೆ. 

ಹೃದ್ರೋಗದ ಕೌಟುಂಬಿಕ ಹಿನ್ನೆಲೆ ಇಲ್ಲದ ಆರೋಗ್ಯಕರ ಜನರಲ್ಲಿ, 65 ವರ್ಷದ ನಂತರ ವಯೋ-ಸಂಬಂಧಿ ತೊಡಕುಗಳು ಹೃದಯದ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುತ್ತವೆ ಎಂಬುದು ತಜ್ಞರ ಮಾತು. ಹೃದ್ರೋಗದ ಅತ್ಯಂತ ಸಾಮಾನ್ಯ ಮತ್ತು ಬದಲಾಯಿಸಲಾಗದ ಅಪಾಯಕಾರಿ ಅಂಶವೆಂದರೆ, ವಯಸ್ಸು. ವಯೋ-ಸಂಬಂಧಿ ಹೃದ್ರೋಗಗಳನ್ನು ಮೂರು ವಿಶಾಲ ವರ್ಗಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ, ಹೃದಯದ ವಹನ ವ್ಯವಸ್ಥೆ, ಅದರ ಪಂಪಿಗ್ ಸಾಮರ್ಥ್ಯ ಮತ್ತು ಕವಾಟ ಸಂಬಂಧಿ ಸಮಸ್ಯೆಗಳು ಎಂದು ಬೆಂಗಳೂರಿನ ಅಪೋಲೋ ಹಾಸ್ಪಿಟಲ್ಸ್‌ನ ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯೋಲಾಜಿಸ್ಟ್ ಆಗಿರುವ ಡಾ ಅಭಿಜಿತ್ ವಿಲಾಸ್ ಕುಲಕರ್ಣಿ ಅವರು ಹೇಳುತ್ತಾರೆ. 

ವೈದ್ಯರು ಹೃದ್ರೋಗದ ನಿರ್ಣಯವನ್ನು ಹೇಗೆ ಮಾಡುತ್ತಾರೆ? 

ವೃದ್ಧರಲ್ಲಿ ಕಾರ್ಡಿನಲ್ ಲಕ್ಷಣಗಳು ಒಂದೇ ರೀತಿ ಇರುವುದರಿಂದ ಹೃದ್ರೋಗದ ನಿರ್ಣಯ ಮಾಡುವುದು ಕಷ್ಟಕರ. ಕಾರ್ಡಿನಲ್ ಲಕ್ಷಣಗಳು, ಉಸಿರಾಟದ ತೊಂದರೆ, ಆಂಜಿನಾ ಅಥವಾ ಎದೆನೋವು, ಮೂರ್ಛೆ (ಪ್ರಜ್ಞೆ ಕಳೆದುಕೊಳ್ಳುವುದು), ತಲೆತಿರುಗುವಿಕೆ ಮತ್ತು ಎಡಿಮಾ (ಪಾದಗಳು ಊದಿಕೊಳ್ಳುವುದು) ಅನ್ನು ಒಳಗೊಂಡಿದೆ. ಸಾಮಾನ್ಯವಾಗಿ ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯು ಈ ಯಾವುದಾದರೂ ಒಂದು ಲಕ್ಷಣದೊಂದಿಗೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸಮಸ್ಯೆಯನ್ನು ನಿಖರವಾಗಿ ತಿಳಿದುಕೊಳ್ಳಲು ಇಲೆಕ್ಟ್ರೋಕಾರ್ಡಿಯೋಗ್ರಾಂ (ECG) ಮತ್ತು ಇಕೋಕಾರ್ಡಿಯೋಗ್ರಾಂ ಮಾಡುವ ಮೂಲಕ ಆರಂಭಿಕ ಪರಿಶೀಲನೆಯನ್ನು ನಡೆಸುವುದು ಮುಖ್ಯವಾಗುತ್ತದೆ. ಇದರೊಂದಿಗೆ ನಾವು ಸಮಸ್ಯೆಯನ್ನು ತಿಳಿದುಕೊಳ್ಳಬಹುದು ಮತ್ತು ಹೃದಯದ ಯಾವ ಭಾಗಕ್ಕೆ ತೊಂದರೆಯಾಗಿದೆ ಎಂಬುದನ್ನು ಗುರುತಿಸಿ ಮುಂದೆ ಎದುರಿಸಬಹುದಾದ ತುರ್ತುಪರಿಸ್ಥಿತಿಯನ್ನು ತಡೆಗಟ್ಟಬಹುದು ಎಂದು ಅವರು ಹೇಳುತ್ತಾರೆ. 

ವೃದ್ಧರಲ್ಲಿ ಸಾಮಾನ್ಯವಾಗಿ ಕಂಡುಬರುವ ಹೃದಯದ ಸಮಸ್ಯೆಗಳು ಯಾವುವು? 

 1. ಬ್ರಾಡಿಕಾರ್ಡಿಯಾ (ಹೃದಯ ಬಡಿತದ ಮಂದಗತಿ) 

ಹೃದಯ ಬಡಿತದ ಮಂದಗತಿ ಅಥವಾ ಬ್ರಾಡಿಕಾರ್ಡಿಯಾ ಅತ್ಯಂತ ಸಾಮಾನ್ಯ ವಯೋಸಹಜ ಸ್ಥಿತಿಯಾಗಿದೆ. ಹೃದಯದ ಸ್ನಾಯುಗಳು ಮತ್ತು ದೇಹದ ವಿದ್ಯುತ್ ಪ್ರಚೋದನೆಗಳ ನಡುವೆ ಸರಿಯಾದ ಸಮನ್ವಯವಿಲ್ಲದಿದ್ದಾಗ, ಹೃದಯದ ಪಂಪ್ ಮಾಡುವಿಕೆಯ ಮೇಲೆ ಪರಿಣಾಮ ಬೀರಿ ಇದು ಉಂಟಾಗುತ್ತದೆ. ಇದರಿಂದಾಗಿ ಸುಸ್ತಾಗುವುದು ಮತ್ತು ತಲೆತಿರುಗುವುದು ಅಥವಾ ಪ್ರಜ್ಞಾಹೀನತೆ ಉಂಟಾಗುತ್ತದೆ. ಕೆಲವೊಮ್ಮೆ, ವಯಸ್ಸಾದವರು ಇದ್ದಕ್ಕಿದ್ದಂತೆ ಪ್ರಜ್ಞಾಹೀನರಾಗಿ ಬೀಳುತ್ತಾರೆ, ಮತ್ತು ಎದ್ದ ನಂತರ ಗೊಂದಲಕ್ಕೊಳಗಾಗುತ್ತಾರೆ. ಹೃದಯ ಬಡಿತದ ಗತಿಯು ತುಂಬಾ ನಿಧಾನವಾದಾಗ ಈ ಸ್ಥಿತಿ ಉಂಟಾಗುತ್ತದೆ ಎಂದು ಡಾ ಕುಲಕರ್ಣಿ ಹೇಳುತ್ತಾರೆ. 

2.ಹೃತ್ಕರ್ಣದ ಕಂಪನ (ಏಟ್ರಿಯಲ್ ಫೈಬ್ರಿಲೇಶನ್) 

ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ, ಹೃದಯದ ವ್ಯವಸ್ಥೆಯ ಮೇಲೂ ಇದರ ಪರಿಣಾಮ ಬೀರುತ್ತದೆ. ಹೃದಯದ ಎಲೆಕ್ಟ್ರಿಕಲ್ ಸಿಸ್ಟಮ್ ಕ್ಷೀಣಿಸಲು ಪ್ರಾರಂಭವಾಗುತ್ತದೆ, ಹೀಗಾಗುವಾಗ ಹೃದಯ ಬಡಿತದ ಗತಿ ಒಂದೋ ಹೆಚ್ಚುತ್ತದೆ ಇಲ್ಲವೇ ಕಡಿಮೆಯಾಗುತ್ತದೆ. ಹೃತ್ಕರ್ಣದ ಕಂಪನ ಮೇಲಿನ ಕವಾಟದ ಮಿಡಿತದ ಅನಿಯಮಿತತೆ, ಅತ್ಯಂತ ಸಾಮಾನ್ಯವಾದ ಮಿಡಿತದ ಸಮಸ್ಯೆಯಾಗಿದೆ. ಇದು ಹೃದಯ ವೈಫಲ್ಯತೆ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಹುದು ಎಂದು ಡಾ ದ್ವಿವೇದಿಯವರು ಹೇಳುತ್ತಾರೆ. 

ಹೃತ್ಕರ್ಣದ ಕಂಪನವು ಹೃದಯದಲ್ಲಿ ಅನೇಕ ಸಣ್ಣ ಸಣ್ಣ ಕ್ಲಾಟ್‌ಗಳು ಉಂಟಾಗಲು ಕಾರಣವಾಗುತ್ತದೆ. ವ್ಯತ್ಯಾಸಗೊಂಡ ಹೃದಯ ಬಡಿತದ ಗತಿಯಿಂದಾಗಿ ವ್ಯಕ್ತಿಯಲ್ಲಿ ಹೃದಯದ ಕಾರ್ಯ ಕ್ಷೀಣಿಸುವುದು ಅಥವಾ ರಕ್ತದ ಹರಿವು ನಿಧಾನವಾಗುವುದು ಉಂಟಾಗುತ್ತದೆ ಮತ್ತು ಇದು ಪ್ರಜ್ಞಾಹೀನತೆ ಅಥವಾ ಟ್ರಾನ್ಸಿಯೆಂಟ್ ಇಸ್ಕೆಮಿಕ್ ಅಟ್ಯಾಕ್‌ಗೆ (TIA) ಕಾರಣವಾಗುತ್ತದೆ. 

 1. ಟ್ರಾನ್ಸಿಯೆಂಟ್ ಇಸ್ಕೆಮಿ ಆಟ್ಯಾಕ್ಸ್ (ಕ್ಷಣಿಕ ರಕ್ತದ ಕೊರತೆಯ ಆಘಾತ)

ಮೆದುಳಿನ ರಕ್ತಪೂರೈಕೆಯಲ್ಲಿ ಸಂಕ್ಷಿಪ್ತವಾದ ಅಡಚಣೆಯುಂಟಾದಾಗ ವ್ಯಕ್ತಿಯು TIA ಗೆ ಒಳಗಾಗಬಹುದು. ಕೊಲೆಸ್ಟ್ರಾಲ್‌ನಿಂದಾಗಿ ಮೆದುಳಿನ ರಕ್ತದ ಪೂರೈಕೆಯಲ್ಲಿ ಅಡಚಣೆಯಾದಾಗ ಈ ತೊಡಕು ಉಂಟಾಗುತ್ತದೆ. ಇದು ಹೃದಯಾಘಾತದಂತೆಯೇ ಇರುತ್ತದೆ ಎಂದು ಡಾ ದ್ವಿವೇದಿ ಹೇಳುತ್ತಾರೆ. 

 1. ಸೋರುವ ಹೃದಯ ಕವಾಟ (ಲೀಕಿ ಹಾರ್ಟ್ ವಾಲ್ವ್)

 ವೃದ್ಧರಲ್ಲಿ ಕಾಣಬಹುದಾದ ಇನ್ನೊಂದು ಸಾಮಾನ್ಯ ಸಮಸ್ಯೆಯೆಂದರೆ ಹೃದಯದ ಕವಾಟುಗಳು ಕ್ಷೀಣಿಸುವುದು, ಇದರಿಂದಾಗಿ ಕವಾಟಗಳು ಕಿರಿದಾಗಿ ಸೋರುವಿಕೆ ಉಂಟಾಗುತ್ತದೆ. ಕ್ಯಾಲ್ಸಿಫಿಕೇಶನ್‌ನಿಂದಾಗಿ ಮಹಾಪಧಮನಿ ಮತ್ತು ಮಿಟ್ರಲ್ ಕವಾಟಗಳ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಸ್ಥಿತಿಗಳನ್ನು ಅನುಕ್ರಮವಾಗಿ ಏರೋಟಿಕ್ ವಾಲ್ವ್ ಸ್ಟನೋಸಿಸ್ ಮತ್ತು ಮಿಟ್ರಲ್ ವಾಲ್ವ್ ರೆಗ್ರುಗಿರೇಶನ್ ಅಥವಾ ಸೋರುವ ಹೃದಯ ಕವಾಟ ಎಂದು ಕರೆಯಲಾಗುತ್ತದೆ. ಕವಾಟದಲ್ಲಿ ಕ್ಯಾಲ್ಸಿಯಂ ಸಂಗ್ರಣೆಯಾದಾಗ, ಇದು ಕವಾಟಗಳ ಸಹಜ ಕಾರ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ, ಇದರಿಂದಾಗಿ ಹೃದಯವು ಸಂಕೋಚನಗೊಂಡಾಗ ಕವಾಟಗಳು ತೆರೆದುಕೊಳ್ಳಲು ಕಷ್ಟವಾಗುತ್ತದೆ ಎಂದು ಡಾ ಕುಲಕರ್ಣಿ ಹೇಳುತ್ತಾರೆ.  

5.ಪರಿಧಮನಿಯ ಅಸ್ವಸ್ಥತೆ (ಕೊರೋನರಿ ಆರ್ಟರಿ ಡಿಸೀಸ್) 

ವಯಸ್ಸಾಗುವಿಕೆಯಿಂದಾಗಿ, ಹೃದಯದಲ್ಲಿ ಕೊಲೆಸ್ಟ್ರಾಲ್ ಮತ್ತು ಕ್ಯಾಲ್ಸಿಯಂ ಶೇಖರಣೆ ಉಂಟಾಗುತ್ತದೆ, ಇದು ರಕ್ತದ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಗೊಂಡಾಗ ಹೃದಯಕ್ಕೆ ರಕ್ತ ಪೂರೈಸುವ ಅಪಧಮನಿಗಳು ಕಿರಿದಾಗಿ ಪರಿಧಮನಿಯ ಕಾಯಿಲೆಗೆ ಕಾರಣವಾಗುತ್ತದೆ. ಇದು ಕೆಲವೊಮ್ಮೆ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ, ಇನ್ನೂ ಕೆಲವು ಸಂದರ್ಭಗಳಲ್ಲಿ ಇದು ಎದೆ ನೋವು ಅಥವಾ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಡಾ ದ್ವಿವೇದಿ ಹೇಳುತ್ತಾರೆ. 

ನಮ್ಮ ದೇಹಕ್ಕೆ ರಕ್ತವನ್ನು ಪೂರೈಕೆ ಮಾಡುವ ರಕ್ತನಾಳಗಳ ಸ್ಥಿತಿಸ್ಥಾಪಕತ್ವವೂ ಕಡಿಮೆಯಾಗುತ್ತದೆ. ಇದು ನಮ್ಯತೆಯನ್ನು ಕಳೆದುಕೊಂಡು ಸಿಸ್ಟಾಲಿಕ್ ಬ್ಲಡ್ ಪ್ರೆಶರ್, ಡಯಾಸ್ಟಾಲಿಕ್ ಬ್ಲಡ್ ಪ್ರೆಶರ್‌ಗಿಂತ ಹೆಚ್ಚಾಗಲು ಕಾರಣವಾಗುತ್ತದೆ. 

 1. ಬ್ರೋಕನ್ ಹಾರ್ಟ್ ಸಿಂಡ್ರೋಮ್

ಬ್ರೋಕನ್ ಹಾರ್ಟ್ ಸಿಂಡ್ರೋಮ್ ಭಾವನಾತ್ಮಕ ಒತ್ತಡದಿಂದಾಗಿ ಉಂಟಾಗುತ್ತದೆ ಎಂದು ಡಾ ದ್ವಿವೇದಿ ಹೇಳುತ್ತಾರೆ. ಇದು ವೃದ್ಧರು ತಮ್ಮ ಸಂಗಾತಿಯನ್ನು ಕಳೆದುಕೊಳ್ಳುವಾಗ ಉಂಟಾಗಬಹುದು. ಖಿನ್ನತೆಯು ಹೃದಯ ವೈಫಲ್ಯ ಅಥವಾ ಮಿಡಿತದಲ್ಲಿ ಅಡ್ಡಿ ಅಥವಾ ಹೃದಯಾಘಾತ ಮುಂತಾದ ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. 


 1. ಹೃದಯ ವೈಫಲ್ಯ

ವಯಸ್ಸಾಗುವಿಕೆಯಿಂದ ಹೃದಯದ ಸ್ನಾಯು ಸೆಟೆದುಕೊಳ್ಳುತ್ತದೆ. ಇದರ ಪರಿಣಾಮವಾಗಿ, ಹೃದಯ ಚೆನ್ನಾಗಿ ಪಂಪ್ ಮಾಡಿದರೂ ಸರಿಯಾಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಕಾರ್ಡಿಯಾಕ್ ಫೈಬ್ರೋಸಿಸ್‌ನಿಂದಾಗಿ ದೇಹದ ಇತರ ಭಾಗಗಳಿಂದ ರಕ್ತವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ದೇಹದಲ್ಲಿ ಊತಕ್ಕೆ ಕಾರಣವಾಗುತ್ತದೆ, ಇದರಿಂದಾಗಿ ಪ್ರಿಸರ್ವ್ಡ್ ಇಜೆಕ್ಷನ್ ಫ್ರಾಕ್ಷನ್ ಉಂಟಾಗಿ ಹೃದಯದ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಡಾ ದ್ವಿವೇದಿ ಹೇಳುತ್ತಾರೆ. ಹೃದಯದ ಇತರ ಎಲ್ಲಾ ಸ್ಥಿತಿಗಳೂ ಹೃದಯ ವೈಫಲ್ಯಗಳಂತಹ ತೀವ್ರ ತೊಡಕುಗಳಿಗೆ ಕಾರಣವಾಗುತ್ತದೆ. 

 ವೃದ್ಧರ ಹೃದಯ ಸಮಸ್ಯೆಗಳಿಗೆ ಮುನ್ನೆಚ್ಚರಿಕೆಗಳು 

ಪ್ರತಿ ಐದು ವರ್ಷಗಳಿಗೊಮ್ಮೆ ಚಯಾಪಚಯ ದರವು ಕಡಿಮೆಯಾಗುವಂತೆ ದೇಹವು ವಿನ್ಯಾಸಗೊಂಡಿರುತ್ತದೆ, ಇದರಿಂದ ನಿಮಗೆ ವಯಸ್ಸಾಗುತ್ತಿದ್ದಂತೆ, ನಿಮ್ಮ ತೂಕವು ಹೆಚ್ಚಾಗುತ್ತದೆ. ಹಾಗಾಗಿ, ನಿಮಗೆ ಈಗ ಸೂಕ್ತವಾಗುವ ವ್ಯಾಯಾಮಗಳು ಮತ್ತು ಆಹಾರಕ್ರಮ ಅಥವಾ ಕ್ಯಾಲೊರಿ ಸೇವನೆಯು ಆ ಸಮಯದಲ್ಲಿ ಸೂಕ್ತವಾಗುವುದಿಲ್ಲ- ಪ್ರತಿ ಐದು ವರ್ಷಗಳಿಗೊಮ್ಮೆ ಅವುಗಳನ್ನು ಬದಲಾಯಿಸಬೇಕಾಗುತ್ತದೆ ಎಂದು ದ್ವಿವೇದಿಯವರು ವಿವರಿಸುತ್ತಾರೆ. 

ಇವಿಷ್ಟೇ ಅಲ್ಲದೇ ಆರೋಗ್ಯಕರ ಜೀವನಶೈಲಿಯು ತುಂಬಾ ಮುಖ್ಯ ಮತ್ತು ಇದನ್ನು ಜೀವನದ ಆರಂಭದಿಂದಲೇ ಅಳವಡಿಸಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ನೀವು ಬೇಗನೆ ಅಳವಡಿಸಿಕೊಂಡಲ್ಲಿ ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತೀರಿ. ಹೃದಯ ಸಂಬಂಧಿ ಸಮಸ್ಯೆಗಳನ್ನು ಮುಂದೂಡಲು ತಜ್ಞರು ಈ ಕೆಳಗಿನ ಸಲಹೆಗಳನ್ನು ನೀಡುತ್ತಾರೆ: 

 • ಅಪಾಯಕಾರಿ ಅಂಶಗಳಾದ ಕೊಲೆಸ್ಟ್ರಾಲ್, ಬಿಪಿ ಮತ್ತು ಮಧುಮೇಹವನ್ನು ನಿರ್ವಹಿಸುವುದು 
 • ನಿಯಮಿತವಾಗಿ ತಪಾಸಣೆಗಳನ್ನು ಮಾಡಿಸಿಕೊಳ್ಳವುದು 
 • ಸಕ್ರಿಯ ಜೀವನಶೈಲಿಯನ್ನು ನಿರ್ವಹಿಸುವುದು 
 • ಒತ್ತಡ ಕಡಿಮೆ ಮಾಡುವುದು 
 • ನಿಯಮಿತ ವ್ಯಾಯಾಮ ಮಾಡುವುದು 
 • ಧೂಮಪಾನ ಮತ್ತು ಮದ್ಯಪಾನ ಮಾಡದಿರುವುದು 
 • ಚೆನ್ನಾಗಿ ನಿದ್ರಿಸುವುದು. 

 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

3 + two =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ