0

0

0

ಈ ಲೇಖನದಲ್ಲಿ

ಗರ್ಭಾವಸ್ಥೆಯಲ್ಲಿ ಮಧುಮೇಹ ತಾಯಿಯ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ 
56

ಗರ್ಭಾವಸ್ಥೆಯಲ್ಲಿ ಮಧುಮೇಹ ತಾಯಿಯ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ 

ಕಾರ್ಬೋಹೈಡ್ರೇಟ್ ‌ಗಳನ್ನು ಕಡಿಮೆ ಮಾಡಲು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಚಟುವಟಿಕೆ ಮತ್ತು ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ವೈದ್ಯರು ಶಿಫಾರಸು ಮಾಡುತ್ತಾರೆ 

ಗರ್ಭಾವಸ್ಥೆಯಲ್ಲಿ ಮಧುಮೇಹ

 ಮುಂಬೈನಲ್ಲಿ ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ 32 ವರ್ಷದ ಕವಿತಾ (ಹೆಸರು ಬದಲಾಯಿಸಲಾಗಿದೆ) ಅವರಿಗೆ ತಮ್ಮ ಎರಡನೇ ಗರ್ಭಾವಸ್ಥೆಯಲ್ಲಿ ಮಧುಮೇಹ ಇರುವುದು ತಿಳಿಯಿತು. 

“ನಂಗೆ ಸ್ತ್ರೀರೋಗತಜ್ಞರು ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಿ, ಆಹಾರದಲ್ಲಿ ಸೊಪ್ಪು ತರಕಾರಿಗಳು ಮತ್ತು ಮೊಳಕೆಯೊಡೆದ ಹಸಿರು ಧಾನ್ಯಗಳನ್ನು ಹೆಚ್ಚೆಚ್ಚು ಸೇರಿಸುವಂತೆ ಮತ್ತು ಪ್ರತಿದಿನ 30 ನಿಮಿಷಗಳ ಕಾಲ ವಾಕಿಂಗ್ ಮಾಡಲು ಸಲಹೆ ನೀಡಿದರು. ನಾನು ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿದೆ.ಆಗ ನನ್ನ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಇದ್ದಕ್ಕಿದ್ದಂತೆ ಸುಧಾರಣೆ ಕಂಡುಬಂದಿತು. ಇದರಿಂದ ಬಹುಶಃ ಹೆಚ್ಚುವರಿ ಔಷಧಿಗಳಿಂದ ಪಾರಾಗಲು ಸಹಾಯವಾಯ್ತು. ಎರಡನೇ ತಪಾಸಣೆಯ ಸಮಯದಲ್ಲಿ ನನ್ನ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಸಾಮಾನ್ಯವಾಗಿತ್ತು ಮತ್ತು ನನಗೆ ನಾರ್ಮಲ್ ಡೆಲಿವರಿ ಆಯಿತು ಎಂದು ಅವರು ಹೇಳುತ್ತಾರೆ.   

ಗರ್ಭಾವಸ್ಥೆಯಲ್ಲಿ ಮಧುಮೇಹ: ತಾಯಿ ಮತ್ತು ಮಗು 

ಇದರಿಂದ ತಾಯಿಯ ಹಾಗೂ ನವಜಾತ ಶಿಶುವಿನ ಆರೋಗ್ಯದ ಮೇಲೆ ಪ್ರಭಾವ ಬೀರುವುದರಿಂದ ರಕ್ತದಲ್ಲಿನ-ಸಕ್ಕರೆ ಮಟ್ಟದ ನಿರ್ವಹಣೆಯು ಆದ್ಯತೆಯಾಗಿದೆ.

ಸ್ಟ್ಯಾನ್ಫೋರ್ಡ್ ಮೆಡಿಸಿನ್ ಚಿಲ್ಡ್ರನ್ಸ್ ಹೆಲ್ತ್ ಪ್ರಕಾರ, ಗರ್ಭಾವಸ್ಥೆಯಲ್ಲಿ, ಮಗು ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟ, ತಗ್ಗಿದ ಆಮ್ಲಜನಕದ ಮಟ್ಟ, ತಗ್ಗಿದ ಕಬ್ಬಿಣದ ಮಟ್ಟ, ಅಧಿಕ ರಕ್ತದೊತ್ತಡ, ಹೃದಯ ಹಿಗ್ಗುವಿಕೆ, ದುರ್ಬಲ ನರಮಂಡಲ ಮತ್ತು ಶ್ವಾಸಕೋಶದ ಬೆಳವಣಿಗೆಯಲ್ಲಿ ಹಿನ್ನಡೆಯನ್ನು ಅನುಭವಿಸಬಹುದು. ಮಧುಮೇಹಿ ತಾಯಂದಿರಿಗೆ ಜನಿಸುವ ಶಿಶುಗಳು ಮುಂದೆ ತಮ್ಮ ಜೀವನದಲ್ಲಿ ಮಧುಮೇಹ ಮತ್ತು ಸ್ಥೂಲಕಾಯತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. 

ಗರ್ಭಾವಸ್ಥೆಯಲ್ಲಿ ಮಧುಮೇಹ – ಅಪಾಯಕಾರಿ ಅಂಶಗಳು 

ಇನ್ಸುಲಿನ್ ಪ್ರತಿರೋಧ ಅಥವಾ ತಗ್ಗಿದ ಇನ್ಸುಲಿನ್ ಉತ್ಪಾದನೆಯು ಈ ಸ್ಥಿತಿಗೆ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿ ಜೆಸ್ಟೇಶನಲ್ ಡಯಾಬಿಟಿಸ್ ಮೆಲ್ಲಿಟಸ್ (ಜಿಡಿಎಂ) ಬೆಳವಣಿಗೆಯ ಸಾಧ್ಯತೆಗಳನ್ನು ಹೆಚ್ಚಿಸುವ ಇತರ ಅಂಶಗಳಲ್ಲಿ ಸ್ಥೂಲಕಾಯತೆ, ಟೈಪ್ 2 ಡಯಾಬಿಟಿಸ್ ಕುಟುಂಬದ ಇತಿಹಾಸ ಮತ್ತು ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ಕೂಡ ಸೇರಿವೆ.  

ಸಾಮಾನ್ಯ ಅಪಾಯದಲ್ಲಿರುವ ಮಹಿಳೆಯರಿಗೆ 24 ರಿಂದ 28 ವಾರಗಳ ಗರ್ಭಾವಸ್ಥೆಯಲ್ಲಿ GDM ಗಾಗಿ ಸ್ಕ್ರೀನಿಂಗ್ ಅನ್ನು ಸೂಚಿಸಲಾಗುತ್ತದೆ; ಹೆಚ್ಚಿನ ಅಪಾಯದಲ್ಲಿರುವವರನ್ನು ಸಾಮಾನ್ಯವಾಗಿ ಮೊದಲ ಪ್ರಸವಪೂರ್ವ ಪರೀಕ್ಷೆಯ ಸಮಯದಲ್ಲಿ ಪರೀಕ್ಷಿಸಲಾಗುತ್ತದೆ. 

GDM ಪ್ರಿಕ್ಲಾಂಪ್ಸಿಯಾ (ಗರ್ಭಿಣಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಅಧಿಕ ರಕ್ತದೊತ್ತಡದ ಸ್ಥಿತಿ), ಅಕಾಲಿಕ ಜನನ ಮತ್ತು  ಭ್ರೂಣದ ಅತಿಯಾದ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ, ಇದು ಜನ್ಮತಃ ಚರ್ಮದ ಸೀಳುವಿಕೆ, ಸಿಸೇರಿಯನ್ ಶಸ್ತ್ರಚಿಕಿತ್ಸೆ ಮತ್ತು ನವಜಾತ ಶಿಶುಗಳಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ತಾಯಿ ಹಾಗೂ ಮಗುವಿಗೆ ಹೆರಿಗೆಯ ಸಮಯದಲ್ಲಿ ತೊಡಕುಗಳಿಗೆ ಕಾರಣವಾಗಬಹುದು . 

ಗರ್ಭಧಾರಣೆಯೊಂದಿಗೆ ಎರಡು ವಿಧದ ಮಧುಮೇಹದ ನಂಟಿದೆ: 

  • ಮಧುಮೇಹಿ ಮಹಿಳೆ ಗರ್ಭಿಣಿಯಾದಾಗ ಓವರ್ಟ್ ಡಯಾಬಿಟಿಸ್ (ಗರ್ಭವತಿಯರಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಮಧುಮೇಹ ಸ್ಥಿತಿ) ಉಂಟಾಗುತ್ತದೆ. ಇಂತಹ ಗರ್ಭವತಿ ಹೃದಯ ದೋಷ, ಬೆನ್ನುಹುರಿ ದೋಷ ಅಥವಾ ಇತರ ವೈಪರೀತ್ಯಗಳಿರುವ ಮಗುವನ್ನು ಹೆರುವ ಸಾಧ್ಯತೆಯಿರುತ್ತದೆ.
  • ಹಾರ್ಮೋನ್ ಅಸಮತೋಲನ ಮತ್ತು ಇನ್ಸುಲಿನ್ ಪ್ರತಿರೋಧದಿಂದಾಗಿ ಗರ್ಭಾವಸ್ಥೆಯ ಐದನೇ ಅಥವಾ ಆರನೇ ತಿಂಗಳಲ್ಲಿ GDM ಕಾಣಿಸಿಕೊಳ್ಳುತ್ತದೆ. ಇದರ ಪರಿಣಾಮಗಳಲ್ಲಿ ಅಧಿಕ ತೂಕದ ಮಗುವಿನ ಜನನ (ಮ್ಯಾಕ್ರೋಸೋಮಿಯಾ), ಹೆರಿಗೆಯ ಸಮಯದಲ್ಲಿ ತಾಯಿಗೆ ಅಧಿಕ ರಕ್ತದೊತ್ತಡ ಮತ್ತು ಗರ್ಭಾಶಯದೊಳಗೆ ಭ್ರೂಣದ ಸಾವು ಸೇರಿವೆ. ಸಾಮಾನ್ಯವಾಗಿ ವೈದ್ಯರು ಆಹಾರದ ಬದಲಾವಣೆಯ ಜೊತೆಗೆ ಸಂಭಾವ್ಯ ಚಿಕಿತ್ಸೆಯ ರೂಪದಲ್ಲಿ ಇನ್ಸುಲಿನ್ ತೆಗೆದುಕೊಳ್ಳುವುದನ್ನು ಶಿಫಾರಸು ಮಾಡುತ್ತಾರೆ.

ಆಗಾಗ್ಗೆ ಹೆರಿಗೆಯ ನಂತರ ಕೂಡಲೇ ತಾಯಿಯ ಗ್ಲೂಕೋಸ್ ಸಹಿಷ್ಣುತೆಯು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಜೆಸ್ಟೇಶನಲ್ ಡಯಾಬಿಟಿಸ್ ಹೊಂದಿರುವ ಮಹಿಳೆಯರಲ್ಲಿ ನಂತರದ ಜೀವನದಲ್ಲಿ ಟೈಪ್ 2 ಮಧುಮೇಹವನ್ನು ಹೊಂದುವ ಅಪಾಯ ಹೆಚ್ಚಿರುತ್ತದೆ.  

GDM ಇಲ್ಲದ ತಾಯಂದಿರ ಮಕ್ಕಳಿಗೆ ಹೋಲಿಸಿದರೆ ಜೆಸ್ಟೇಶನಲ್ ಡಯಾಬಿಟಿಸ್ ಹೊಂದಿರುವ ತಾಯಂದಿರ ಮಕ್ಕಳು ಬೊಜ್ಜು, ಮೆಟಾಬಾಲಿಕ್ ಸಿಂಡ್ರೋಮ್, ಟೈಪ್ 2 ಮಧುಮೇಹ ಮತ್ತು ದುರ್ಬಲ ಇನ್ಸುಲಿನ್ ಸಂವೇದನೆ ಮತ್ತು ಸ್ರವಿಸುವಿಕೆಯ ಅಪಾಯವನ್ನು ಎರಡರಿಂದ ಎಂಟು ಪಟ್ಟು ಹೆಚ್ಚು ಹೊಂದಿರುತ್ತಾರೆ. 

ನಿರ್ವಹಣೆ  

ಸಿಹಿತಿಂಡಿಗಳು, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳ ಸೇವನೆಯನ್ನು ಮಿತಿಗೊಳಿಸಬೇಕು ಎಂಬುದು ಜಿಡಿಎಂ ಹೊಂದಿರುವ ಮಹಿಳೆಗೆ ತಮ್ಮ ಮೊದಲ ಸಲಹೆಯೆಂದು ಕೇರಳದ ಕೊಟ್ಟಾಯಂನ ಕ್ಯಾರಿಟಾಸ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರಾದ ಡಾ.ರೆಜಿ ದಿವಾಕರ್ ಅವರು ಹ್ಯಾಪಿಯೆಸ್ಟ್ ಹೆಲ್ತ್ಗೆ ಹೇಳುತ್ತಾರೆ. "ಅಲ್ಲದೆ, ನಾವು ದಿನನಿತ್ಯದ ವ್ಯಾಯಾಮ ಮಾಡುವಂತೆ ಹೇಳುತ್ತೇವೆ. ಏಕೆಂದರೆ ತಾಯಿಯ ರಕ್ತದಲ್ಲಿನ ಸಕ್ಕರೆಯ ಅಂಶ ಅನಿಯಂತ್ರಿತವಾಗಿದ್ದರೆ, ಜನಿಸುವ ಮಗುವಿನ ತೂಕವು ಹೆಚ್ಚಾಗಬಹುದು. ಇದು ತಾಯಿಯ ರಕ್ತದೊತ್ತಡದಲ್ಲಿ ಹೆಚ್ಚಳ ಮತ್ತು ಆಮ್ನಿಯೋಟಿಕ್ ದ್ರವದ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಹೆರಿಗೆಯ ಸಮಯದಲ್ಲಿ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸುತ್ತಾರೆ. 

ಚೆನೈನ ಸೂರಜ್ ಆಸ್ಪತ್ರೆಯ ಹಿರಿಯ ಸಲಹೆಗಾರರು, ಸ್ತ್ರೀರೋಗ ತಜ್ಞರಾದ ಡಾ ಚಿತ್ರಾ ದೇವಿ ಅವರ ಪ್ರಕಾರ ದೈಹಿಕ ಚಟುವಟಿಕೆ ಮತ್ತು ಆಹಾರದ ಮಾರ್ಪಾಡು ಗರ್ಭಾವಸ್ಥೆಯಲ್ಲಿ ಮಾಡಲು ಉತ್ತಮ ಜೀವನಶೈಲಿ ಬದಲಾವಣೆಗಳಾಗಿವೆ. “ನಿರ್ದಿಷ್ಟವಾಗಿ, ನಾವು ಪ್ರತಿದಿನ ಕನಿಷ್ಟ 40 ನಿಮಿಷಗಳ ಕಾಲ ವಾಕಿಂಗ್ ಮತ್ತು ದೇಹದ ಮೇಲ್ಭಾಗದ ವ್ಯಾಯಾಮವನ್ನು ಸೂಚಿಸುತ್ತೇವೆ. ಆಹಾರದ ಮಾರ್ಪಾಡು ಅಂದರೆ, ಜಂಕ್ ಫುಡ್ ಮತ್ತು ಎಣ್ಣೆಯುಕ್ತ ಆಹಾರಗಳನ್ನು ಸೇವಿಸದಂತೆ ನಾವು ಸಲಹೆ ನೀಡುತ್ತೇವೆ ಮತ್ತು ಹಸಿರು ಸೊಪ್ಪಿನ ತರಕಾರಿಗಳು ಮತ್ತು ಆರೋಗ್ಯಕರ ಆಹಾರಗಳ ಸೇವನೆಯನ್ನು ಹೆಚ್ಚಿಸುವಂತೆ ಸೂಚಿಸುತ್ತೇವೆ. ಎಲ್ಲಾ ಜೀವನಶೈಲಿ ಬದಲಾವಣೆಗಳು ಮತ್ತು ತೂಕ ನಷ್ಟದ ಕುರಿತು ಗರ್ಭಧಾರಣೆಯ ಮೊದಲು, ಪೂರ್ವಭಾವಿ ಸಮಾಲೋಚನೆಯ ಸಮಯದಲ್ಲಿ ಸಲಹೆ ನೀಡಬೇಕು. ಏಕೆಂದರೆ GDM ಇಲ್ಲದಿರುವ ಮಹಿಳೆಯರಿಗೆ ಹೋಲಿಸಿದಲ್ಲಿ GDM ಹೊಂದಿರುವ ಮಹಿಳೆಯರಲ್ಲಿ ಸಹಜ ಹೆರಿಗೆ (normal deliveries)  ಸ್ವಲ್ಪ ಹೆಚ್ಚು ಕಷ್ಟದಾಯಕವಾಗಬಹುದುಎಂದು ಅವರು ಹೇಳುತ್ತಾರೆ. 

ಗರ್ಭಾವಸ್ಥೆಯಲ್ಲಿ ತೂಕವನ್ನು ತಗ್ಗಿಸಲು ಮತ್ತು ತೂಕ ನಷ್ಟ ಪ್ರಯತ್ನಗಳನ್ನು ತಪ್ಪಿಸಲು ಮತ್ತು ವ್ಯಾಯಾಮದಿಂದ ಪಾರಾಗಲು ಗರ್ಭಧಾರಣೆಯ ಮೊದಲಿನ ಸಿದ್ಧತೆಗಳು ಸಹ ಮುಖ್ಯವಾಗಿವೆ. ತಾಯಂದಿರಾಗಲು ಬಯಸುವ ಮಹಿಳೆಯರಿಗೆ ತಂತ್ರವನ್ನು ಶಿಫಾರಸು ಮಾಡಲಾಗಿದೆ ಏಕೆಂದರೆ ಇದು ದೇಹವು ಇನ್ಸುಲಿನ್ ಉತ್ತಮ ಬಳಕೆಗೆ ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಾಮಾನ್ಯಮಟ್ಟಕ್ಕೆ ಇಳಿಸುತ್ತದೆ. ಅಲ್ಲದೆ, ಗರ್ಭಾವಸ್ಥೆಯಲ್ಲಿ, ಮಗು ಆರೋಗ್ಯಕರವಾಗಿರಲು ಮಹಿಳೆಯರು ತೂಕವನ್ನು ಹೆಚ್ಚಿಸಿಕೊಳ್ಳಬೇಕು. ಅದೇ ಸಮಯದಲ್ಲಿ, ಕಡಿಮೆ ಅವಧಿಯಲ್ಲಿ ಹೆಚ್ಚು ತೂಕ ಹೆಚ್ಚಿದರೆ ಮಧುಮೇಹ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. 

 ಸಾರಾಂಶ  

ಗರ್ಭಾವಸ್ಥೆಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಮುಖ್ಯ ವಿಷಯವಾಗಿದೆ. ಗರ್ಭಾವಸ್ಥೆಯಲ್ಲಿ ಮಧುಮೇಹ ಕಾಣಿಸಿಕೊಳ್ಳುವುದನ್ನು  ಜೆಸ್ಟೇಶನಲ್ ಡಯಾಬಿಟಿಸ್ ಎಂದು ಕರೆಯಲಾಗುತ್ತದೆ. ಆರೋಗ್ಯಕರ ಜೀವನಶೈಲಿ ಮತ್ತು ಆಹಾರವನ್ನು ಅಳವಡಿಸಿಕೊಳ್ಳದಿದ್ದರೆ ಅಂತಿಮವಾಗಿ ಮಧುಮೇಹದ ಸ್ಥಿತಿ  ಹಲವಾರು ಮಹಿಳೆಯರಲ್ಲಿ ಪೂರ್ಣ ಪ್ರಮಾಣದ ಟೈಪ್ 2 ಮಧುಮೇಹವಾಗಿ ಅಭಿವೃದ್ಧಿಯಾಗಬಹುದು. ಜೆಸ್ಟೇಶನಲ್ ಡಯಾಬಿಟಿಸ್ ನವಜಾತ ಶಿಶುಗಳಿಗೆ ಅಪಾಯಕಾರಿಯಾಗಿರುತ್ತದೆ, ಇಂತಹ ಶಿಶುಗಳು ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ಹೃದಯ ರಕ್ತನಾಳದ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುವ ಹೆಚ್ಚಿನ ಅಪಾಯಕ್ಕೆ ಒಳಗಾಗಬಹುದು ಎಂದು ತಜ್ಞರು ಹೇಳುತ್ತಾರೆ.  

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಲೇಖನ
ಜಾಗತಿಕವಾಗಿ ಕನಿಷ್ಠ 5.4 ಲಕ್ಷ ಹೃದಯ ಸಂಬಂಧಿ ಸಾವುಗಳಿಗೆ ಟ್ರಾನ್ಸ್-ಫ್ಯಾಟಿ ಆಸಿಡ್‌ಗಳಿಂದ ತುಂಬಿದ ಸಂಸ್ಕರಿಸಿದ ಆಹಾರ ಕಾರಣ ಎಂದು ಭಾರತ ಸರ್ಕಾರ ಹೇಳುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ