ಹೆಚ್ಚಿನ ಪ್ರಮಾಣದ ಉಪ್ಪಿನ ಸೇವನೆ, ಕೇವಲ ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ತೊಂದರೆಗಳಲ್ಲದೇ ದೀರ್ಘಾವಧಿಯಲ್ಲಿ ಟೈಪ್ 2 ಮಧುಮೇಹವನ್ನು ಪ್ರಚೋದಿಸಬಹುದು.
USನ ತುಲೇನ್ ವಿಶ್ವವಿದ್ಯಾನಿಲಯದ ಸಂಶೋಧಕರ ಗುಂಪೊಂದು, ಹೆಚ್ಚುವರಿ ಉಪ್ಪನ್ನು ದೀರ್ಘಾವಧಿಯಲ್ಲಿ ಸೇವಿಸಿದರೆ ತೂಕ ಹೆಚ್ಚಾಗುವ ಅಪಾಯವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಹೊಟ್ಟೆಯ ಕೊಬ್ಬಿನ ಅಪಾಯವನ್ನು ಹೆಚ್ಚಿಸಿ ಅದರಿಂದ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಇದೆ ಎಂದು ತೀರ್ಮಾನಿಸಿದೆ. ಆಹಾರದಲ್ಲಿ ಉಪ್ಪನ್ನು ಹಾಕದವರಿಗಿಂತ, ಆಹಾರದಲ್ಲಿ ನಿಯಮಿತವಾಗಿ ಉಪ್ಪನ್ನು ಹೆಚ್ಚು ಸೇವಿಸುವವರಲ್ಲಿ ಟೈಪ್ 2 ಮಧುಮೇಹವನ್ನು ಅಭಿವೃದ್ಧಿಯಾಗುವ 39% ಹೆಚ್ಚಿನ ಅಪಾಯವಿರುತ್ತದೆ ಎಂದು ಅಧ್ಯಯನವು ತೀರ್ಮಾನಿಸಿದೆ. ಉಪ್ಪನ್ನು ಹೆಚ್ಚು ಬಾರಿ ಸೇರಿಸಿಕೊಂಡು ಆಹಾರ ಸೇವಿಸುವವರು ಅಪಾಯದ ಶೇಕಡಾವಾರು 20 ಅನ್ನು ಹೊಂದಿದ್ದರು. ತಮ್ಮ ಆಹಾರದಲ್ಲಿ ಉಪ್ಪನ್ನು ಅಪರೂಪವಾಗಿ ಬಳಸುವವವರಲ್ಲಿ ಈ ಅಪಾಯದ ಪ್ರಮಾಣ ಕಡಿಮೆ (13%) ಕಂಡುಬಂದಿದೆ.
“ಉಪ್ಪನ್ನು ಮಿತವಾಗಿ ಬಳಸುವುದರಿಂದ ಹೃದಯರಕ್ತನಾಳದ ಕಾಯಿಲೆಗಳು ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ನಮಗೆ ಈಗಾಗಲೇ ತಿಳಿದಿದೆ, ಆದರೆ ಈ ಅಧ್ಯಯನವು ಮೊದಲ ಬಾರಿಗೆ ಮೇಲುಪ್ಪು ಬಳಸದೇಇರುವುದು ಟೈಪ್ 2 ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ” ಎಂದು ಟುಲೇನ್ ಯೂನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಅಂಡ್ ಟ್ರಾಪಿಕಲ್ ಮೆಡಿಸಿನ್‌ನಲ್ಲಿ ರೀಜೆಂಟ್ಸ್ ಡಿಸ್ಟಿಂಗ್ವಿಶ್ಡ್ ಚೇರ್ ಮತ್ತು ಪ್ರೊಫೆಸರ್ ಮತ್ತು HCA ಯ ಪ್ರಮುಖ ಲೇಖಕರಾದ ಡಾ ಲು ಕಿ ಹೇಳುತ್ತಾರೆ
ಸಂಶೋಧಕರ ಪ್ರಕಾರ, ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಮೂತ್ರಪಿಂಡದ ಸಮಸ್ಯೆಗಳಿಂದ ಮುಕ್ತವಾಗಿರುವ ಯುಕೆ ಬಯೋಬ್ಯಾಂಕ್‌ನ 402,982 ಭಾಗವಹಿಸುವವರ ಆರೋಗ್ಯ ಡೇಟಾವನ್ನು ವಿಶ್ಲೇಷಿಸಲಾಗಿದ್ದು, ಅವರ ದೈನಂದಿನ ಮಾದರಿ ಮತ್ತು ಉಪ್ಪಿನ ಸೇವನೆಯ ಆವರ್ತನದೊಂದಿಗೆ ತುಲನೆ ಮಾಡಲಾಗಿತ್ತು. ಈ ಅಧ್ಯಯನದ ತೀರ್ಮಾನಗಳನ್ನು ಪೀರ್-ರಿವ್ಯೂಡ್ ಮೇಯೊ ಕ್ಲಿನಿಕ್ ಪ್ರೊಸೀಡಿಂಗ್ಸ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಉಪ್ಪು ಮತ್ತು ಟೈಪ್ 2 ಮಧುಮೇಹದ ನಡುವಿನ ಸಂಬಂಧವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ ಎಂದು ಹೇಳಲಾಗಿದೆ.
11.8 ವರ್ಷಗಳ ಅಧ್ಯಯನದ ನಂತರ, 402,982 ಭಾಗವಹಿಸಿದವರಲ್ಲಿ ಕನಿಷ್ಠ 13,000 ಜನರು ಟೈಪ್ 2 ಮಧುಮೇಹ ಕಂಡುಬಂದಿತ್ತು ಎಂದು ಅಧ್ಯಯನವು ತೀರ್ಮಾನಿಸಿದೆ. ಆಹಾರದ ಮಾದರಿಗಳು ಮತ್ತು ಅವರ ಆರೋಗ್ಯ ಸ್ಥಿತಿಗಳಲ್ಲಿನ ಇತರ ವ್ಯತ್ಯಾಸಗಳನ್ನು ಸಹ ನಿಕಟವಾಗಿ ಮತ್ತು ಗಮನಿಸಿ, ಅಧ್ಯಯನದ ಆರಂಭದಲ್ಲಿ ದಾಖಲಾದ ಬೇಸ್ HbA1C ರೀಡಿಂಗ್‌ನಿಂದ ವ್ಯತ್ಯಾಸಗಳನ್ನು ಪರಿಗಣಿಸಲಾಗಿದೆ. DASH ಆಹಾರಕ್ರಮವನ್ನು ಅನುಸರಿಸುವರಲ್ಲಿ ಅಂದರೆ ಹೆಚ್ಚು ಹಣ್ಣುಗಳು, ತರಕಾರಿಗಳು ಮತ್ತು ನೈಸರ್ಗಿಕ ಸೂಕ್ಷ್ಮ ಪೋಷಕಾಂಶಗಳನ್ನು ಸೇವಿಸಿ, ಉಪ್ಪು ಮತ್ತು ಸಕ್ಕರೆಯ ಪ್ರಮಾಣವನ್ನು ಕಡಿಮೆಮಾಡಿದವರಲ್ಲಿ ಗಮನಿಸಿದಾಗ ಉತ್ತಮ ಆರೋಗ್ಯ ಸ್ಥಿತಿಯನ್ನು ಹೊಂದಿರುವುದು ಕಂಡುಬಂದಿದೆ.
ಟೈಪ್ 2 ಡಯಾಬಿಟಿಸ್‌ನ ಉತ್ತಮ ನಿರ್ವಹಣೆಗಾಗಿ ವರ್ತನೆಯ ಮಧ್ಯಸ್ಥಿಕೆಗಳಲ್ಲಿ ಉಪ್ಪಿನ ಸೇವನೆಯ ಕಡಿತವನ್ನು ಸಹ ಸೇರಿಸಬೇಕು ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ .
ಉಪ್ಪಿನ ಸೇವನೆ ಮತ್ತು ಮಧುಮೇಹದ ನಡುವಿನ ಸಂಬಂಧ
ಅಧ್ಯಯನದ ಪ್ರಮುಖ ಆವಿಷ್ಕಾರಗಳಲ್ಲಿ ತಿಳಿದುಬಂದ ಒಂದು ವಿಷಯವೆಂದರೆ ಅದು ಉಪ್ಪಿನ ಸೇವನೆ ಮತ್ತು ದೇಹದ ತೂಕದ ನಡುವಿನ ಸಂಬಂಧ. ಅದರಲ್ಲೂ ವಿಶೇಷವಾಗಿ ಸೊಂಟ ಮತ್ತು ಹೊಟ್ಟೆಯ ಸುತ್ತದ ನಡುವೆ ಇರುವ ಸಂಬಂಧವನ್ನು ತಿಳಿಸುತ್ತದೆ. ಕಾಕತಾಳೀಯವಾಗಿ, ಹೆಚ್ಚುವರಿ ಕಿಬ್ಬೊಟ್ಟೆಯ ಕೊಬ್ಬು ಕೂಡ ಟೈಪ್ 2 ಮಧುಮೇಹದ ಅಪಾಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನುತ್ತಾರೆ ತಜ್ಞರು.
ಸಂಶೋಧಕರ ಪ್ರಕಾರ ಹೆಚ್ಚು ಉಪ್ಪು ಸೇವಿಸುವುದರಿಂದ ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಆಕ್ರಮಣಕ್ಕೆ ಕಾರಣವಾಗುವ ಅಂಶಗಳಾದ ದೇಹದಲ್ಲಿನ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಗಣನೀಯವಾಗಿ ಹೆಚ್ಚುತ್ತದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಅಂತಃಸ್ರಾವಶಾಸ್ತ್ರದ(endocrinology) ಸಹ ಪ್ರಾಧ್ಯಾಪಕರಾದ ಡಾ.ಬೆಲಿಂಡಾ ಜಾರ್ಜ್ ಅವರು, ಉಪ್ಪಿನ ಅಧಿಕ ಸೇವನೆ ದೇಹದ ತೂಕ ಹೆಚ್ಚಳಕ್ಕೆ ನೇರವಾಗಿ ಸಂಬಂಧಿಸಿದೆ ಮತ್ತು ಇದು ಅಧಿಕ ರಕ್ತದೊತ್ತಡಕ್ಕೆ(hypertension) ಕಾರಣವಾಗುತ್ತದೆ ಎಂದು ಹೇಳುತ್ತಾರೆ.
“ದೇಹದಲ್ಲಿ ಹೆಚ್ಚಿನ ಉಪ್ಪು ಇದ್ದಾಗ ಅದು ಹೆಚ್ಚು ನೀರಿನ ಧಾರಣಕ್ಕೆ(water retention) ಕಾರಣವಾಗಬಹುದು ಮತ್ತು ಈ ನೀರಿನ ತೂಕವು ದೇಹದ ತೂಕಕ್ಕೆ ಸೇರಿಕೊಳ್ಳುತ್ತದೆ. ಬೊಜ್ಜು ಮತ್ತು ಅಧಿಕ ರಕ್ತದೊತ್ತಡವು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸಲು ನೇರವಾದ ಅಂಶಗಳಾಗಿವೆ, ”
ಉಪ್ಪಿನ ಸೇವನೆಯಿಂದ ಅಧಿಕ ರಕ್ತದೊತ್ತಡ ಹೆಚ್ಚುತ್ತದೆ ಎಂದು ಡಾ.ಬೆಲಿಂಡಾ ಜಾರ್ಜ್ ಅವರು ಹೇಳುತ್ತಾರೆ.
.ಬೊಜ್ಜು, ಸಾಕಷ್ಟು ದೈಹಿಕ ಚಟುವಟಿಕೆ ಇಲ್ಲದಿರುವುದು ಮತ್ತು ಅನಾರೋಗ್ಯಕರ ಆಹಾರಕ್ರಮದಿಂದ ಟೈಪ್ 2 ಡಯಾಬಿಟಿಸ್ ಮತ್ತು ಹೈಪರ್ ಟೆನ್ಷನ್ ಒಟ್ಟಿಗೆ ಸಹ ಅಸ್ತಿತ್ವದಲ್ಲಿದೆ ಎಂದು ಅಧ್ಯಯನವು ಹೇಳುತ್ತದೆ.
“ಇನ್ಸುಲಿನ್ ಪ್ರತಿರೋಧದಂತಹ ಸಾಮಾನ್ಯ ಮೂಲ ಕಾರಣದಿಂದಲೂ ಟೈಪ್ 2 ಡಯಾಬಿಟಿಸ್ ಮತ್ತು ಹೈಪರ್ ಟೆನ್ಷನ್ ಬರಬಹುದು” ಎನ್ನುವುದು ಜಾರ್ಜ್ ಅವರ ಅಭಿಪ್ರಾಯವಾಗಿದೆ.
(hypertension) ಅಧಿಕ ರಕ್ತದೊತ್ತಡದ ಕುರಿತು WHO ವರದಿ
ಡಬ್ಲ್ಯುಎಚ್‌ಒ/ WHO ಇತ್ತೀಚೆಗೆ ಅಧಿಕ ರಕ್ತದೊತ್ತಡದ ಕುರಿತು ತನ್ನ ಮೊದಲ ಜಾಗತಿಕ ವರದಿಯನ್ನು ಬಿಡುಗಡೆ ಮಾಡಿತು. ಪ್ರಪಂಚದಾದ್ಯಂತ ಹೃದಯರಕ್ತನಾಳದ ಪರಿಸ್ಥಿತಿಗಳಿಂದಾಗಿ ಒಟ್ಟು 10.8 ಮಿಲಿಯನ್ ಸಾವುಗಳಲ್ಲಿ ಕನಿಷ್ಠ 2 ಮಿಲಿಯನ್ ನಷ್ಟು ಸೋಡಿಯಂ ಸೇವನೆಯಿಂದ ಉಂಟಾಗುವ ಅಧಿಕ ರಕ್ತದೊತ್ತಡ ಕಾರಣವಾಗಿದೆ ಎಂದು ಆ ವರದಿಯಲ್ಲಿ ಹೈಲೈಟ್ ಮಾಡಲಾಗಿದೆ. ಹೀಗಾಗಿ WHO, ಆಹಾರದ ಉಪ್ಪಿನ ಸೇವನೆಯನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಕರೆ ನೀಡಿತು, ಅನಿಯಂತ್ರಿತ ಮಧುಮೇಹ ಹೊಂದಿರುವವರಲ್ಲಿ ಬಹುಪಾಲು ಜನ ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ ಮತ್ತು ಅದರ ಪ್ರತಿಯಾಗಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಎರಡೂ ಸಾಮಾನ್ಯ ಲಿಂಕ್ ಅನ್ನು ಹಂಚಿಕೊಳ್ಳುತ್ತವೆ ಎಂದು ವರದಿಯು ಹೇಳುತ್ತದೆ.
ಹೈಪರ್ಗ್ಲೈಸೀಮಿಯಾ – ಮಧುಮೇಹ ಹೊಂದಿರುವವರಲ್ಲಿ ಅಕಾಲಿಕ ಮರಣ ಮತ್ತು ಅಂಗವೈಕಲ್ಯದೊಂದಿಗೆ ಹೆಚ್ಚು ಬಲವಾಗಿ ಸಂಬಂಧಿಸಿದ ಅಪಾಯಕಾರಿ ಅಂಶಗಳಾಗಿವೆ” ಎಂದು WHO ವರದಿ ಹೇಳುತ್ತದೆ.
ಕೆಲವರಲ್ಲಿ, ವಿಶೇಷವಾಗಿ ಭಾರತೀಯರು, ಮಧುಮೇಹ ನಿರ್ವಹಣೆಯು ಕೇವಲ ಸಕ್ಕರೆ-ಭರಿತ ಆಹಾರವನ್ನು ಮಾತ್ರ ಕಡಿಮೆ ಸೇವಿಸಬೇಕು ಎಂದು ನಂಬುತ್ತಾರೆ. ಅವರು ಹೆಚ್ಚು ಉಪ್ಪಿನ ಅಂಶವಿರುವ ಆಹಾರಗಳ ಸೇವನೆಯನ್ನು ನಿಯಂತ್ರಿಸುವುದಿಲ್ಲ – ವಿಶೇಷವಾಗಿ ನಮ್ಕೀನ್ ನಂತಹ ಕುರುಕಲು ತಿಂಡಿಗಳು ಆವರ ಮಧುಮೇಹ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು” ಎಂದು ಡಾ ಬೆಲಿಂಡಾ ಗಮನ ಸೆಳೆಯುತ್ತಾರೆ.
ಮಧುಮೇಹ ಮತ್ತು ಪರಿಧಮನಿಯ ಹೃದಯ ಕಾಯಿಲೆಯಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹರಡುವಿಕೆಗೆ ಪ್ರಮುಖ ಅಂಶವೆಂದರೆ ಕೊಬ್ಬು, ಉಪ್ಪು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರಗಳು ಎಂದು ಸೂಚಿಸಲಾಗಿದೆ.
ಉಪ್ಪಿನ ಸೇವನೆ ಕಡಿಮೆ ಮಾಡುವುದು ಹೇಗೆ
ದೈನಂದಿನ ಆಹಾರದಲ್ಲಿ ಅಗತ್ಯವಾದ ಖನಿಜಗಳು ಮತ್ತು ಇತರ ಮ್ಯಾಕ್ರೋನ್ಯೂಟ್ರಿಯಂಟ್‌ಗಳ ಜೊತೆಗೆ ಹೆಚ್ಚಿನ ಫೈಬರ್ – ಮತ್ತು ಪ್ರೋಟೀನ್-ಭರಿತ ಆಹಾರವನ್ನು ಸೇರಿಸಲು ಕರೆ ನೀಡುತ್ತದೆ . ಉಪ್ಪಿನ ಮೇಲೆ ಸುಲಭವಾಗಿ ಹೋಗುವುದು ಮತ್ತು ಹೆಚ್ಚು ಪೊಟ್ಯಾಸಿಯಮ್- ಮತ್ತು ನೈಟ್ರೇಟ್-ಭರಿತ ಹಸಿರು ಎಲೆಗಳ ತರಕಾರಿಗಳು ಮತ್ತು ಹಣ್ಣುಗಳನ್ನು ಆಹಾರದಲ್ಲಿ ಆರಿಸಿಕೊಳ್ಳುವುದು ನಾಳೀಯ ಆರೋಗ್ಯ ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹ ಮತ್ತು ಹೃದಯದ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅದು ನಿರ್ದಿಷ್ಟವಾಗಿ ಸೂಚಿಸುತ್ತದೆ.
ಸಾರಾಂಶ:
ಇತ್ತೀಚಿನ ಸಂಶೋಧನಾ ಲೇಖನವು ಆಹಾರದಲ್ಲಿ ಹೆಚ್ಚುವರಿ ಉಪ್ಪನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸೂಚಿಸಿದೆ. ಒಂದು ದಶಕದಿಂದ ಯುಕೆ ಬಯೋಬ್ಯಾಂಕ್ ಸಮೂಹದಿಂದ 400,000 ಕ್ಕೂ ಹೆಚ್ಚು ಜನರ ಆರೋಗ್ಯ ಡೇಟಾವನ್ನು ಮತ್ತು ಅವರ ಆಹಾರ ಪದ್ಧತಿಗಳನ್ನು ವಿಶ್ಲೇಷಿಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ . ಲೇಖನವು ಮಧುಮೇಹ ಮತ್ತು ಉಪ್ಪಿನ ಸೇವನೆಯ ನಡುವಿನ ಸಂಬಂಧದ ಕುರಿತು ಹೆಚ್ಚಿನ ಸಂಶೋಧನೆಗೆ ಕರೆ ನೀಡುತ್ತದೆ ಮತ್ತು ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು ಟೈಪ್ 2 ಮಧುಮೇಹದ ಆಕ್ರಮಣವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ