0

0

0

ಈ ಲೇಖನದಲ್ಲಿ

Soup For Diabetes: ಸೂಪ್‌ಗಳನ್ನು ಸೇವಿಸಿ, ಮಧುಮೇಹವನ್ನು ನಿಭಾಯಿಸಿ 
32

Soup For Diabetes: ಸೂಪ್‌ಗಳನ್ನು ಸೇವಿಸಿ, ಮಧುಮೇಹವನ್ನು ನಿಭಾಯಿಸಿ 

ಫೈಬರ್, ಖನಿಜಗಳು ಮತ್ತು ಪ್ರೋಟೀನ್‌ಗಳನ್ನು ಹೊಂದಿರುವ ಸೂಪ್‌ಗಳು ಪರಿಪೂರ್ಣ ಮಧುಮೇಹ ಸ್ನೇಹಿ ಆಹಾರದ ಭಾಗವಾಗಿರಬಹುದು 

 ಮಧುಮೇಹ ಇರುವವರಿಗೆ ಸೂಪ್‌ ಸೇವನೆ

 ಮಧುಮೇಹ ಇರುವವರಿಗೆ ಸೂಪ್‌ ಸೇವನೆ ಬಹುಪಯೋಗಿ ಆಹಾರವೆಂದು ಪರಿಗಣಿಸಬಹುದು. ಮಧುಮೇಹ ಹೊಂದಿರುವವರಿಗೆ ಇದು ಹಸಿವನ್ನು ನೀಗಿಸಲು,  ಸಮತೋಲಿತ ಆಹಾರ ಮತ್ತು ನಿಯಂತ್ರಿತ ಆಹಾರಕ್ರಮವನ್ನು ಅಳವಡಿಸಿಕೊಳ್ಳಲು, ಸಂಜೆಯ ಸ್ನಾಕ್ಸ್ ಅಥವಾ ಒಂದು ಊಟಕ್ಕೆ ಸಮನಾಗಿರಬಹುದು 

  ಕಡಿಮೆ ಕಾರ್ಬೋಹೈಡ್ರೇಟ್‌ಗಳು, ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಕಡಿಮೆ ಕ್ಯಾಲೋರಿ ಹೊಂದಿರುವ ಸೂಪ್‌ಗಳು ಮಧುಮೇಹ ಇರುವವರಿಗೆ ಪರಿಪೂರ್ಣ ಮತ್ತು ಆರಾಮದಾಯಕ ಆಹಾರವಾಗಿರುತ್ತದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಆಂತರಿಕ ಔಷಧ ಮತ್ತು ಮಧುಮೇಹ ತಜ್ಞ ಡಾ.ಪ್ರಮೋದ್ ವಿ ಸತ್ಯ ಹೇಳುತ್ತಾರೆ. 

  ನೀವು ಸೂಪ್ ತಯಾರಿಸಲು ಬಳಸುವ ಪದಾರ್ಥಗಳ ಆಧಾರದ ಮೇಲೆ ಅದನ್ನು ಊಟದ ಬದಲಿಗೆ ಸೇವಿಸುವ ಹಾಗೆ, ಅಥವಾ ಸ್ನಾಕ್ಸ್ ಸಮಯದಲ್ಲಿ ಸೇವಿಸಬಹುದು” ಎಂದು ಬೆಂಗಳೂರು ಮೂಲದ ಪೌಷ್ಟಿಕತಜ್ಞೆ ನಿಧಿ ನಿಗಮ್ ಹೇಳುತ್ತಾರೆ. 

  ಮಧುಮೇಹ ಸ್ನೇಹಿ ಸೂಪ್‌ಗಳ ವಿಧಗಳು 

  1. ಪ್ರೋಟೀನ್-ಭರಿತ ಸೂಪ್‌ಗಳು 

ಚಿಕನ್ ಸೂಪ್ ಪ್ರೋಟೀನ್‌ನ ಉತ್ತಮ ಮೂಲವಾಗಿದ್ದರೂ, ತೂಕ ಇಳಿಸಿಕೊಳ್ಳಲು ಬಯಸುವ ಜನರು ಕಡಿಮೆ ಕೊಬ್ಬಿನ ಪನೀರ್ (ಕಾಟೇಜ್ ಚೀಸ್) ಅಥವಾ ತೋಫುವನ್ನು ಸೇರಿಸಬಹುದು. 

ಮಶ್ರೂಮ್ ಸೂಪ್ ಮತ್ತು ಬ್ರೊಕೊಲಿ, ಸೂಪ್ ಮಾಡಲು ಉತ್ತಮ ಆಯ್ಕೆ.  ಏಕೆಂದರೆ ಇವೆರಡೂ ಕಡಿಮೆ GI(ಗ್ಲೈಸೆಮಿಕ್ ಇಂಡೆಕ್ಸ್) ಹೊಂದಿರುವ ಪದಾರ್ಥಗಳಾಗಿದ್ದು  ಫೈಬರ್, ಖನಿಜಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳನ್ನು ಸಮೃದ್ಧವಾಗಿ ಹೊಂದಿವೆ” ಎಂದು ನಿಗಮ್ ಹೇಳುತ್ತಾರೆ. 

  1. ಫೈಬರ್ ಭರಿತ ಸೂಪ್‌ಗಳು

ಫೈಬರ್ ಅಂಶಗಳನ್ನು ಹೆಚ್ಚು ಹೊಂದಿರುವ ಸೂಪ್‌ಗಾಗಿ ಟೊಮೆಟೊ, ಪಾಲಕ್ ಮತ್ತು ಕ್ಯಾರೆಟ್ ಸೇರಿಸಿ ತಯಾರಿಸಬಹುದು.  ನಿಗಮ್ ಅವರ ಸಲಹೆಗಳ ಪ್ರಕಾರ ಕುದಿಸಿದ ಈ ಮಿಶ್ರಿತ ಪೌಷ್ಟಿಕಾಂಶದ ಸೂಪ್ ಅನ್ನು ಉಪ್ಪು, ಮೆಣಸು ಮತ್ತು ನಿಂಬೆ ರಸದೊಂದಿಗೆ ಸೇವಿಸಬಹುದು. ಆದರೆ ನೀವು ತರಕಾರಿಗಳನ್ನು ಬ್ಲಾಂಚ್(ಕುದಿಸುವ ಪ್ರಕ್ರಿಯೆ) ಮಾಡಿದಾಗ, ಐದು ನಿಮಿಷಗಳಿಗಿಂತ ಹೆಚ್ಚು ಕಾಲ ಕುದಿಸಿದರೆ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತವೆ. 

ನೀವು ಸೂಪ್‌ಗಳಲ್ಲಿ ತರಕಾರಿಗಳನ್ನು ಬ್ಲಾಂಚ್ ಮಾಡಿದ ನೀರನ್ನು ಬಳಸಲು ಪ್ರಯತ್ನಿಸಿ ಇದರಿಂದ ನೀವು ಗರಿಷ್ಠ ಜೀವಸತ್ವಗಳನ್ನು ಪಡೆಯುತ್ತೀರಿ 

  ಮಸೂರ್ ದಾಲ್, ಅಣಬೆಗಳು ಮತ್ತು ಸೊಪ್ಪಿನಂತಹ ಪಿಷ್ಟರಹಿತ ತರಕಾರಿಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದ್ದು, ಇವುಗಳಲ್ಲಿ ಆಹಾರದ ಫೈಬರ್‌ನಲ್ಲಿ ಸಮೃದ್ಧವಾಗಿರುತ್ತವೆ ಎಂದು ಡಾ ಸತ್ಯ ಹೇಳುತ್ತಾರೆ 

 ಪೌಷ್ಟಿಕಾಂಶ ಹೊಂದಿರುವ ಸೂಪ್ ಊಟಕ್ಕೆ ಸೇವಿಸಿ  

  “ಮಧುಮೇಹದಿಂದ ಬಳಲುತ್ತಿರುವವರಿಗೆ ಸಂಜೆಯ ನಂತರ ಭಾರೀ ಭೋಜನ ಅಥವಾ ಆಹಾರದ ಬದಲಿಗೆ ಮ್ಯಾಕ್ರೋ ಮತ್ತು ಮೈಕ್ರೋನ್ಯೂಟ್ರಿಯೆಂಟ್-ಸಮೃದ್ಧ ಸೂಪ್ ಉತ್ತಮ ಆಯ್ಕೆ” ಎನ್ನುತ್ತಾರೆ ಬೆಂಗಳೂರು ಮೂಲದ ಆಹಾರ ತಜ್ಞ ದೀಪಲೇಖಾ ಬ್ಯಾನರ್ಜಿ. 

  ಮಧುಮೇಹಿಗಳು ಲೆಂಟಿಲ್ ಆಧಾರಿತ ಸೂಪ್‌ಗಳು, ಚಿಕನ್ ಬೆಲ್ ಪೆಪರ್ ಸೂಪ್, ರಾಜ್ಮಾ (ಕಿಡ್ನಿ ಬೀನ್ಸ್) ಸೂಪ್, ಮಶ್ರೂಮ್ ಡಿಲ್ ಸೂಪ್, ಕಡಲೆ ಚಿಕನ್ ಮತ್ತು ಎಲೆಕೋಸು ಸೂಪ್‌ನಂತಹ ಪೌಷ್ಟಿಕ ಸೂಪ್‌ಗಳನ್ನು ಸೇವಿಸಬಹುದು.  

  ಸರಿಯಾಗಿ ತಯಾರಿಸಿದ ಸೂಪ್ (ಬೇಯಿಸಿದ ಪದಾರ್ಥಗಳನ್ನು ಹೊರತುಪಡಿಸಿ ತಯಾರಿಸಿದ ದ್ರವರೂಪದ ಸೂಪ್ಹಗುರವಾಗಿರುತ್ತದೆ ಮತ್ತು ಊಟದ ಮೊದಲು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಬರೀ ಸೂಪ್ ಬೇಡ ಎನಿಸಿದರೆ ನೀವು ಅದಕ್ಕೆ ಕೆಲವು ಆರೋಗ್ಯಕರ ನಟ್ಸ್ ಸೇರಿಸಬಹುದು, ಇದರಿಂದ ಶುಗರ್ ಸ್ಪೈಕ್ ನಿಧಾನವಾಗಿರುತ್ತದೆ ಮತ್ತು ನೀವು ಹಸಿವಿನ ಪ್ರಮಾಣ ಕಡಿಮೆಯಾದ ಭಾವನೆ ಬರುತ್ತದೆ ” ಎಂದು ನಿಗಮ್ ಹೇಳುತ್ತಾರೆ. 

ಮಿನೆಸ್ಟ್ರೋನ್, ಟೊಮೆಟೊ ಬ್ರೋತ್ ಇರುವ  ಇಟಾಲಿಯನ್ ಸೂಪ್ ಮತ್ತು ಕಡಿಮೆ GI ಹೊಂದಿರುವ ಮ್ಯಾಕರೋನಿ ಒಂದು ಆರೋಗ್ಯಕರ ಊಟವಾಗಿ ಪರಿಗಣಿಸಬಹುದು. ಸುಮಾರು 250 ಮಿಲಿ ಇರುವ ಒಂದು ಬೌಲ್ ಸೂಪ್ ತಯಾರಿಸುವಾಗ ಸುಮಾರು 200 ಗ್ರಾಂ ಸಣ್ಣದಾಗಿ ಹೆಚ್ಚಿದ ತರಕಾರಿಗಳು ಮತ್ತು ಕಡಿಮೆ GI ಇರುವ  30 ಗ್ರಾಂ ಮ್ಯಾಕರೋನಿಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಈ ಸೂಪ್ ಬೇಸ್ ಆಗಿ ಸುಮಾರು 100 ಗ್ರಾಂ ಟೊಮೆಟೊಗಳನ್ನು ಹೊಂದಿರುತ್ತದೆ.  

  “ಈರುಳ್ಳಿ, ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ, ಹೂಕೋಸು, ವಿವಿಧ ಬೆಲ್ ಪೆಪರ್ ಮತ್ತು ಕೊತ್ತಂಬರಿ ಮುಂತಾದ ಪಿಷ್ಟರಹಿತ ತರಕಾರಿಗಳನ್ನು ಸೂಪ್‌ನಲ್ಲಿ ಬಳಸಬಹುದು” ಎಂದು ನಿಗಮ್ ಹೇಳುತ್ತಾರೆ. 

  ಮಧುಮೇಹ ಇರುವವರಿಗೆ ಪ್ರಯೋಜನಕಾರಿಯಾಗಬಲ್ಲ ಮತ್ತೊಂದು ಆಹಾರ ಪದಾರ್ಥ ಎಂದರೆ ರಾಗಿ. “ರಾಗಿಯು ಫೈಬರ್, ಪ್ರೋಟೀನ್ ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ . ರಾಗಿ ಬಳಸಿ ಸೂಪ್ ತಯಾರಿಸುವಾಗ ರಾಗಿ ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ಹುರಿದು ನಂತರ ಎರಡನ್ನೂ ಒಟ್ಟಿಗೆ ಬೇಯಿಸಿ, ಕುದಿಸಿ ಸೂಪ್ ತಯಾರಿಸಿ” ಎಂದು ನಿಗಮ್ ಸೂಚಿಸುತ್ತಾರೆ. 

ಸೂಪ್‌ಗಳನ್ನು ಸೇವಿಸುವ ಸಮಯ:  

 ಬ್ಯಾನರ್ಜಿಯವರ ಪ್ರಕಾರ, ನಿಮಗೆ ಅತಿಯಾಗಿ ಹಸಿವು ಬಾಧಿಸುತ್ತಿದ್ದರೆ ಊಟದ ನಡುವೆ ಸೂಪ್‌ಗಳನ್ನು ಸೇವಿಸುವುದು ಒಳ್ಳೆಯದು. 

  ಸೂಪ್ ಉತ್ತಮ ಸಂಜೆಯ ಸ್ನಾಕ್ಸ್ ಆಗಬಹುದು. ಊಟದ ಮೊದಲೇ ಸೂಪ್ ಸೇವಿಸುವುದರಿಂದ ಊಟದ ಸಮಯದಲ್ಲಿ ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯಕಾರಿ ಎನ್ನುತ್ತಾರೆ ನಿಗಮ್.  

  ಮಧ್ಯಾಹ್ನದ ಭೋಜನದ ಸಮಯದಲ್ಲಿ ಸೂಪ್ ಸೇವಿಸುವುದರಿಂದ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳಿಂದ ದೂರವಿರಬಹುದು ಮತ್ತು  ಊಟದ ಪ್ರಮಾಣವನ್ನು ನಿಯಂತ್ರಿಸಬಹುದು ಎನ್ನುವುದು ನಿಗಮ್ ಅವರ ಅಭಿಪ್ರಾಯ.  

  ರಾತ್ರಿಯ ಊಟವಾಗಿ ಸೂಪ್ ಸೇವಿಸುವುದರಿಂದ ಹೊಟ್ಟೆಯು ಹಗುರವಾಗಿರುತ್ತದೆ ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. 

  ಮಸೂರ್ ದಾಲ್, ಬೇಳೆಕಾಳುಗಳು, ಕೋಳಿ ಮತ್ತು ಸಮುದ್ರಾಹಾರಗಳು ಪ್ರೋಟೀನ್‌ಗಳ ಕೆಲವು ಉತ್ತಮ ಮೂಲಗಳಾಗಿವೆ ಮತ್ತು ಸೂಪ್‌ಗಳಲ್ಲಿ ಇವುಗಳನ್ನು ಸೇರಿಸಿದಾಗ ಈ ಪದಾರ್ಥಗಳು ಸ್ನಾಯುಗಳನ್ನು ಬಲಪಡಿಸಲು ಮತ್ತು  ಸ್ಟ್ಯಾಮಿನಾ ಹೆಚ್ಚಿಸಲು ಸಹಾಯ ಮಾಡುತ್ತದೆ. ಇವುಗಳಲ್ಲಿ ಕ್ಯಾಲೋರಿ ಅಂಶವು ಕಡಿಮೆಯಾಗಿದ್ದು ಅದು ತೂಕ ಹೆಚ್ಚಾಗಲು ಕಾರಣವಾಗುವುದಿಲ್ಲ” ಎಂದು ಬ್ಯಾನರ್ಜಿ ಹೇಳುತ್ತಾರೆ. ಇದು ತೃಪ್ತಿಯಾದಂತೆ ಭಾವನೆ ಮೂಡಿಸುವುದಲ್ಲದೆ ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. 

  ಬಾರ್ಲಿ, ಅಕ್ಕಿ ಮತ್ತು ಸ್ಪಾಗೆಟ್ಟಿಯಂತಹ ಕಾರ್ಬೋಹೈಡ್ರೇಟ್‌ಗಳನ್ನು ಸೂಪ್‌ಗಳಲ್ಲಿ ಸೇರಿಸುವುದರಿಂದ ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಬ್ಯಾನರ್ಜಿ ವಿವರಿಸುತ್ತಾರೆ. 

  ಕೆಂಪು ಅಕ್ಕಿ, ಕಂದು ಅಕ್ಕಿ ಅಥವಾ ರಾಗಿ (ರಾಗಿ, ಬಾಜ್ರಾ, ಜೋಳ, ಫಾಕ್ಸ್‌ಟೈಲ್‌ನಂತಹ) ನಂತಹ ಸಂಕೀರ್ಣ ಕಾರ್ಬ್‌ಗಳನ್ನು ಸೇರಿಸುವುದರಿಂದ ಹೆಚ್ಚು ಅಗತ್ಯವಿರುವ ಫೈಬರ್ ಮತ್ತು ಖನಿಜಗಳನ್ನು ನೀಡುತ್ತದೆ. ಹೆಚ್ಚಿನ ಫೈಬರ್ ಅಂಶವು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ” ಎಂದು ಬ್ಯಾನರ್ಜಿ ಹೇಳುತ್ತಾರೆ. 

  ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ರಾತ್ರಿಯಲ್ಲಿ ಕಡಿಮೆ ಸಕ್ಕರೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ (ರಾತ್ರಿಯ ಹೈಪೊಗ್ಲಿಸಿಮಿಯಾ)” ಎಂದು ಡಾ ಸತ್ಯ ಹೇಳುತ್ತಾರೆ. 

ತರಕಾರಿಗಳು ಮತ್ತು ಗಿಡಮೂಲಿಕೆಗಳೊಂದಿಗೆ ತಯಾರಿಸಿದ ಸೂಪ್‌ಗಳು ವಿಟಮಿನ್‌ಗಳು ಮತ್ತು ಖನಿಜಗಳ ಸೇವನೆಯನ್ನು ಹೆಚ್ಚಿಸುತ್ತವೆ ಮತ್ತು ಊಟದ ಉತ್ಕರ್ಷಣ ನಿರೋಧಕ ಅಂಶವನ್ನು ಹೆಚ್ಚಿಸುತ್ತವೆ. 

 ಮಧುಮೇಹ ಇರುವವರಿಗೆ ಎಚ್ಚರಿಕೆಯ ಮಾತು 

ನಿಮ್ಮ ಆಹಾರದ ಭಾಗವಾಗಿ ಸೂಪ್‌ಗಳನ್ನು ಸೇರಿಸುವಾಗ, ವಿಶೇಷವಾಗಿ ರಾತ್ರಿಯ ಊಟದ ಸಮಯದಲ್ಲಿ ಸಹಾಯಕವಾಗಬಹುದು ಹೆಚ್ಚಿನ ಫೈಬರ್ ಆಹಾರಗಳು ರಾತ್ರಿಯಲ್ಲಿ ಹೊಟ್ಟೆಯ ಪೂರ್ಣತೆಯನ್ನು ಉಂಟುಮಾಡುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.  ಅಲ್ಲದೆ, ಮಧುಮೇಹ ಹೊಂದಿರುವ ಜನರು ಕಾರ್ನ್‌ಸ್ಟಾರ್ಚ್ ಅನ್ನು ದಪ್ಪವಾಗಿಸುವ ಏಜೆಂಟ್‌ನಂತೆ ಬಳಸುವ ಸೂಪ್‌ಗಳನ್ನು ತಪ್ಪಿಸಬೇಕು ಏಕೆಂದರೆ ಅದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ  ಎಂದು ಡಾ ಸತ್ಯ ಹೇಳುತ್ತಾರೆ.  

  ಸಾರಾಂಶ:  

ಮಧುಮೇಹಿಗಳು ಸೇವಿಸುವ ಸೂಪ್‌ಗಳಲ್ಲಿ  ಒಮೆಗಾ -3 ಫ್ಯಾಟಿ ಆಸಿಡ್ ಸಮೃದ್ಧವಾಗಿರುವ ನಾರಿನ ತರಕಾರಿಗಳು, ಪ್ರೋಟೀನ್ಗಳು ಮತ್ತು ಬೀಜಗಳ ಉತ್ತಮ ಅಂಶಗಳು ಇರಬೇಕು.  ಸೂಪ್‌ಗಳನ್ನು ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟ ಅಥವಾ ಊಟದ ನಡುವಿನ ಅಂತರದಲ್ಲಿ ಲಘು ಆಹಾರವಾಗಿ ಸೇವಿಸುವುದು ಉತ್ತಮ.  ತರಕಾರಿಗಳು ಅಥವಾ ಪ್ರೋಟೀನ್‌ಗಳೊಂದಿಗೆ ಸೂಪ್‌ಗಳನ್ನು ಓವರ್‌ಲೋಡ್ ಮಾಡುವ ಮೊದಲು ನೀವು ಸರಿಯಾದ ಪ್ರಮಾಣದ ಪದಾರ್ಥಗಳನ್ನು ಆಯ್ಕೆ ಮಾಡಲು ಆಹಾರ ತಜ್ಞರನ್ನು ಸಂಪರ್ಕಿಸಿ. 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

three × three =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ