0

0

0

ಈ ಲೇಖನದಲ್ಲಿ

Mushrooms For Diabetics: ಮಧುಮೇಹ ನಿರ್ವಹಣೆಗೆ ಅಣಬೆಗಳು
5

Mushrooms For Diabetics: ಮಧುಮೇಹ ನಿರ್ವಹಣೆಗೆ ಅಣಬೆಗಳು

ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ, ಅಧಿಕ ಫೈಬರ್ ಅಂಶಗಳು ಮತ್ತು ಅಗತ್ಯ ಪೋಷಕಾಂಶಳಿಂದ ಸಮೃದ್ಧವಾಗಿರುವ ಅಣಬೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.

Mushrooms are a good option for people with diabetes as they have a low glycemic index and are packed with essential nutrients

ಸೇವನೆಗೆ ಯೋಗ್ಯವಾದ ಅಣಬೆಗಳು ಮಧುಮೇಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ರಕ್ತದಲ್ಲಿನ ಸಕ್ಕರೆಯ ಹಠಾತ್ ಏರಿಕೆಯನ್ನು ತಡೆಯುವ ಅಣಬೆಗಳು, ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವುದರ ಜೊತೆಗೆ, ಪೋಷಕಾಂಶಗಳ ಕಣಜಗಳೆನಿಸಿವೆ. ಆಕ್ಸಿಡೇಟಿವ್ ಒತ್ತಡವನ್ನು ಮತ್ತು ಇನ್ಸುಲಿನ್ ಚಟುವಟಿಕೆಯ ಮೇಲೆ ಅದರ ಪ್ರತಿಕೂಲ ಪರಿಣಾಮವನ್ನು ನಿಯಂತ್ರಣದಲ್ಲಿಡುವಲ್ಲಿ, ಈ ಅಣಬೆಗಳು ಬಹು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಅಣಬೆಗಳು ಕಡಿಮೆ ಗ್ಲೈಸೆಮಿಕ್ ಲೋಡ್ ಅನ್ನು ಹೊಂದಿವೆ ಎಂದು ತಜ್ಞರು ಸೂಚಿಸುತ್ತಾರೆ (ಸೇವನೆಯ ನಂತರ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿನ ನಿರೀಕ್ಷಿತ ಹೆಚ್ಚಳದ ಅಂದಾಜು), ಅಣಬೆಗಳ ಮಧುಮೇಹ-ನಿರೋಧಕ ಲಕ್ಷಣಗಳಲ್ಲಿ ಇದು ಪ್ರಮುಖವಾದುದು, ಹಾಗಾಗಿ ಇದು ಮಧುಮೇಹ ಸ್ನೇಹಿ ಆಹಾರದ ಒಂದು ಪರಿಪೂರ್ಣ ಘಟಕಾಂಶ ಎನಿಸಿಕೊಳ್ಳುತ್ತದೆ.

ಹೈದರಾಬಾದ್‌ನ ಕಾಮಿನೇನಿ ಆಸ್ಪತ್ರೆಗಳ ಎಂಡೋಕ್ರೈನಾಲಜಿಸ್ಟ್ ಡಾ ಸಂದೀಪ್ ರೆಡ್ಡಿ, “ಅಣಬೆಗಳು ಕಡಿಮೆ ಕ್ಯಾಲೋರಿಗಳ ಜೊತೆಗೆ, ವಿಟಮಿನ್ ಡಿ ಯ ಉತ್ತಮ ಮೂಲವಾಗಿವೆ, ಅಣಬೆ ಮಧುಮೇಹ ಇರುವವರಿಗೆ ಉತ್ತಮ ಆಯ್ಕೆಯಾಗಿದೆ. ಶಿಲೀಂಧ್ರಗಳ/ಅಣಬೆಗಳ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಮತ್ತು ಗ್ಲೈಸೆಮಿಕ್ ಲೋಡ್ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲ.  ಮಾತ್ರವಲ್ಲದೆ ಅಣಬೆಗಳಲ್ಲಿ ಕಾರ್ಬೋಹೈಡ್ರೇಟ್‌ ಪ್ರಮಾಣ ಕಡಿಮೆ ಇದ್ದು, ಅವು ಹೆಚ್ಚಿನ ಪ್ರೋಟೀನ್ ಮೂಲಗಳಾಗಿವೆ” ಎಂದು ಹೇಳುತ್ತಾರೆ.

“ಅಣಬೆಗಳು ಕರಗುವ ಮತ್ತು ಕರಗದ ಫೈಬರ್ ಎರಡನ್ನೂ ಒಳಗೊಂಡಿರುತ್ತವೆ, ಇದು ರಕ್ತದಲ್ಲಿನ ಸಕ್ಕರೆಯ ಹಠಾತ್ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ಸೇವನೆಯ ನಂತರ ಸಂತೃಪ್ತ ಭಾವನೆಯನ್ನು ನೀಡುತ್ತದೆ” ಎಂದು ಕೊಚ್ಚಿಯ ಕನ್ಸಲ್ಟೆಂಟ್ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಡಾ ಮುಮ್ತಾಜ್ ಖಾಲಿದ್ ಇಸ್ಮಾಯಿಲ್ ಅವರು ಹೇಳುತ್ತಾರೆ.

ಅಣಬೆಗಳು ಮತ್ತು ಮಧುಮೇಹ ನಿರ್ವಹಣೆ

“ಅಣಬೆಗಳು ಫಾಸ್ಫೇಟ್, ಮೆಗ್ನೀಸಿಯಮ್ ಮತ್ತು ಸೆಲೆನಿಯಮ್‌ಗಳಿಂದ ಸಮೃದ್ಧವಾಗಿವೆ. ಅಣಬೆಗಳನ್ನು ಮಧುಮೇಹ ನಿರ್ವಹಣೆಗೆ ಉತ್ತಮ ಎಂದು ಪರಿಗಣಿಸಲಾಗಿದೆ. ಆದರೆ, ಅತಿಯಾದ ಸೆಲೆನಿಯಮ್ ಸೇವನೆಯು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ, ಮಿತವಾಗಿ ಸೇವಿಸುವುದು ಆವಶ್ಯಕ. ಅಣಬೆಗಳು ಬೀಟಾ-ಗ್ಲೂಕನ್ ಅನ್ನು ಸಹ ಒಳಗೊಂಡಿರುತ್ತವೆ, ಇದು ಜಠರದಲ್ಲಿ ಆಹಾರ ಕರಗುವುದನ್ನು ಮತ್ತು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ವಿಳಂಬಗೊಳಿಸುವ ನಾರಿನ ಅಂಶ” ಎಂದು ಎಂದು ಡಾ ರೆಡ್ಡಿ ಅವರು ಹೇಳುತ್ತಾರೆ.

ಅಣಬೆಗಳು ಸತುವಿನ ಸತ್ವವನ್ನು ಕೂಡ ಹೊಂದಿರುತ್ತವೆ; ಸತು, ಗ್ಲುಕೋಸ್ ಚಯಾಪಚಯ ಕ್ರಿಯೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತದೆ ಎಂದು ಅವರು ವಿವರಿಸುತ್ತಾರೆ. ಸಾಮಾನ್ಯವಾಗಿ, 100 ಗ್ರಾಂ ಅಣಬೆಯಲ್ಲಿ ಸುಮಾರು 1.4 ಮಿಲಿಗ್ರಾಂ ಸತು ಇರುತ್ತವೆ. ಆದರೆ, ವೈವಿದ್ಯತೆಯನ್ನು ಅವಲಂಬಿಸಿ, ಸತುವಿನ ಪ್ರಮಾಣವು ಬದಲಾಗಬಹುದು. ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವುದರ ಜೊತೆಗೆ, ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಸ್ರವಿಸುವಿಕೆಯನ್ನು ಸುಧಾರಿಸುವಲ್ಲಿ ಸತುವು ಪ್ರಮುಖ ಪಾತ್ರವನ್ನು ವಹಿಸುತ್ತದೆ, ಇದು ಮಧುಮೇಹ ಹೊಂದಿರುವ ಜನರಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುವ ನಿರ್ಣಾಯಕ ಅಂಶವಾಗಿದೆ.

ಅಣಬೆಗಳಲ್ಲಿ ಕಂಡುಬರುವ ಪ್ರಮುಖ ಸಂಯುಕ್ತವಾದ ಪಾಲಿಸ್ಯಾಕರೈಡ್‌ಗಳು ಮಧುಮೇಹ ನಿರೋಧಕ ಗುಣಗಳನ್ನು ಹೊಂದಿರಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಗ್ಲೂಕೋಸ್ ಹೀರಿಕೊಳ್ಳುವಿಕೆಯ ಕ್ಷಮತೆಯನ್ನು ಕಡಿಮೆ ಮಾಡುವ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವ ಆಂಟಿ-ಹೈಪರ್‌ಗ್ಲೈಸೆಮಿಕ್ ಪರಿಣಾಮವನ್ನು ಅಣಬೆಗಳು ಹೊಂದಿವೆ.

ಅಣಬೆಗಳು ಎರ್ಗೋಥಿಯೋನಿನ್ ಮತ್ತು ಗ್ಲುಟಾಥಿಯೋನ್‌ನಂತಹ ಉತ್ಕರ್ಷಣ ನಿರೋಧಕ ಅಂಶಗಳಿಂದ ತುಂಬಿದ್ದು, ಈ ಅಂಶಗಳು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಆಕ್ಸಿಡೇಟಿವ್ ಒತ್ತಡವು ಪರಿಧಮನಿಯ ಕಾಯಿಲೆ, ಮಧುಮೇಹ ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

“ಅಣಬೆಗಳು ಪೊಟ್ಯಾಸಿಯಮ್ ಮತ್ತು ಫೋಲೇಟ್‌ನಂತಹ ಪ್ರಮುಖ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿವೆ.  ಫೋಲಿಕ್ ಆಮ್ಲವು ಗ್ಲೈಸೆಮಿಕ್ ನಿಯಂತ್ರಣವನ್ನು ಸುಧಾರಿಸುವ ಮೂಲಕ ಮಧುಮೇಹ ನಿರ್ವಹಣೆಗೆ ಸಹಾಯ ಮಾಡುತ್ತದೆ. 100 ಗ್ರಾಂ ಅಣಬೆ ಸುಮಾರು 318 ಮಿಲಿಗ್ರಾಂ ಪೊಟ್ಯಾಸಿಯಮ್ ಮತ್ತು ಸುಮಾರು 8 ಮೈಕ್ರೋಗ್ರಾಂಗಳಷ್ಟು ಫೋಲೇಟ್ (ಫೋಲಿಕ್ ಆಮ್ಲ) ಅನ್ನು ಹೊಂದಿರುತ್ತದೆ” ಎಂದು ಡಾ ಇಸ್ಮಾಯಿಲ್ ಅವರು ಹೇಳುತ್ತಾರೆ.

ಮಧುಮೇಹ ನಿರ್ವಹಣೆಗೆ ಯಾವ ಅಣಬೆ ಸಹಾಯ ಮಾಡುತ್ತದೆ?

“ವಿವಿಧ ಬಗೆಯ ಅಣಬೆಗಳಿವೆ, ಕಾಡಿನಲ್ಲಿ ಬೆಳೆದ ಅಣಬೆಗಳು ಉತ್ತಮ ಖನಿಜಾಂಶವನ್ನು ಹೊಂದಿರುತ್ತವೆ. ಸಿಂಪಿ ಅಣಬೆಗಳು ಸಹ ಉತ್ತಮ ಆಯ್ಕೆಯಾಗಿದೆ, ಏಕೆಂದರೆ ಅವುಗಳು ತಮ್ಮ ಮಧುಮೇಹ-ನಿರೋಧಕ ಗುಣಲಕ್ಷಣಗಳು ಮತ್ತು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳಿಗೆ ಹೆಸರುವಾಸಿಯಾಗಿವೆ. ಇದರ ಜೊತೆಗೆ, ಈ ಅಣಬೆಗಳಲ್ಲಿ ಇರುವ ಅಧಿಕ ಪ್ರೋಟೀನ್ ಮತ್ತು ಕಡಿಮೆ ಕಾರ್ಬ್ ಅಂಶದಿಂದಾಗಿ, ಸಿಂಪಿ ಅಣಬೆಗಳು ಇನ್ಸುಲಿನ್ ಮಟ್ಟವನ್ನು ಸಮಸ್ಥಿತಿಯಲ್ಲಿಡಲು ಇವು ಪ್ರಯೋಜನಕಾರಿ” ಎಂದು ಡಾ ರೆಡ್ಡಿ ಹೇಳುತ್ತಾರೆ.

ಮೈಮೆನ್‌ಸಿಂಗ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಸಿಂಪಿ ಅಣಬೆಗಳ ಮಧುಮೇಹ-ನಿರೋಧಕ ಗುಣಲಕ್ಷಣಗಳನ್ನು ಪರೀಕ್ಷಿಸಿದೆ. ಈ ಅಧ್ಯಯನವು  ಮಧುಮೇಹ ಹೊಂದಿದ್ದ 89 ವ್ಯಕ್ತಿಗಳನ್ನು ಒಳಗೊಂಡಿತ್ತು. ಅವರಿಗೆ ಒಂದು ವಾರದವರೆಗೆ ಸಿಂಪಿ ಅಣಬೆಯ ಸಾರವನ್ನು ನೀಡಲಾಯಿತು. ಮುಂದಿನ ವಾರದಲ್ಲಿ ಸೇವನೆಯನ್ನು ನಿಲ್ಲಿಸಲಾಯಿತು ಮತ್ತು ಅದರ ನಂತರ ವಾರದಲ್ಲಿ ಮರುಪ್ರಾರಂಭಿಸಲಾಯಿತು. ಪ್ರಯೋಗಾರ್ಥಿಗಳು ಸಾರವನ್ನು ಸೇವಿಸಿದ ಎರಡು ವಾರಗಳಲ್ಲಿ ವ್ಯಕ್ತಿಗಳ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗಿತ್ತು ಎಂದು ಫಲಿತಾಂಶಗಳು ತೋರಿಸಿವೆ.

ಆಹಾರ ಕ್ರಮದಲ್ಲಿ ಅಣಬೆಗಳನ್ನು ಸೇರಿಸುವುದು

 “ ಅಣಬೆಗಳು – ವಿಶೇಷವಾಗಿ ಬಟನ್ ಅಣಬೆಗಳು (ಅತ್ಯಂತ ವ್ಯಾಪಕವಾಗಿ ಸೇವಿಸುವ ಅಣಬೆಯ ವಿಧ) – ಮಧುಮೇಹ ಹೊಂದಿರುವ ಜನರು ತಮ್ಮ ಆಹಾರದಲ್ಲಿ ಸೇರಿಸಲು ಉತ್ತಮ ಆಯ್ಕೆಯಾಗಿದೆ ಏಕೆಂದರೆ ಅವುಗಳು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿರುತ್ತವೆ. 100 ಗ್ರಾಂ ಬಟನ್ ಅಣಬೆಗಳು ಸರಿಸುಮಾರು 27.49 ಕ್ಯಾಲರಿಗಳನ್ನು ಹೊಂದಿರುತ್ತವೆ” ಎಂದು ಡಾ ಇಸ್ಮಾಯಿಲ್ ಹೇಳುತ್ತಾರೆ.

ನಿಮ್ಮ ಆಹಾರದಲ್ಲಿ ಅಣಬೆಗಳನ್ನು ಸೇರಿಸುವ ಕೆಲವು ವಿಧಾನಗಳನ್ನು ಅವರು ಸೂಚಿಸುತ್ತಾರೆ:

  • ಪೌಷ್ಟಿಕ ಆಮ್ಲೆಟ್ ಅನ್ನು ತಯಾರಿಸಲು ಅಣಬೆಗಳನ್ನು ಮೊಟ್ಟೆಗಳೊಂದಿಗೆ ಸೇರಿಸಬಹುದು. ಅವುಗಳನ್ನು ಸ್ಯಾಂಡ್‌ವಿಚ್‌ಗಳು ಅಥವಾ ಅವುಗಳ ಪದರಗಳಲ್ಲಿ ಸೇರಿಸಬಹುದು.
  • ಮಧುಮೇಹ ಇರುವವರು ಅಣಬೆಗಳು ಮತ್ತು ತಾಜಾ ಹಸಿರು ಬಟಾಣಿಯನ್ನು ಸೇರಿಸಿ ಸೇವಿಸುವುದು ಉತ್ತಮ, ಇದು ಕಡಿಮೆ ಕ್ಯಾಲೋರಿ ಮತ್ತು ಫೈಬರ್-ಭರಿತ ಆಹಾರ.
  • ಬೀನ್ಸ್ ಮತ್ತು ಕ್ಯಾರೆಟ್ ಜೊತೆಗೆ ಅಣಬೆಗಳನ್ನು ಸೂಪ್‌ಗಳಲ್ಲಿ ಸೇರಿಸಿಕೊಳ್ಳಬಹುದು.

” ದಿನಕ್ಕೆ ಸುಮಾರು 200 ಗ್ರಾಂನಷ್ಟು ಸೂಕ್ತ ಪ್ರಮಾಣದಲ್ಲಿ ಅಣಬೆಯನ್ನು ಸೇವಿಸಬಹುದು” ಎಂದು ಡಾ ರೆಡ್ಡಿ ಹೇಳುತ್ತಾರೆ.

ಹಸಿ ಅಣಬೆಗಳನ್ನು ಸೇವಿಸಬಾರದು:

“ಅಣಬೆಗಳನ್ನು ಎಂದಿಗೂ ಹಸಿಯಾಗಿ ಅಥವಾ ಬೇಯಿಸದೆ ಸೇವಿಸಬಾರದು. ಅಣಬೆಗಳನ್ನು ಯಾವಾಗಲೂ ಬೇಯಿಸಿಯೇ ಸೇವಿಸಬೇಕು, ಮಾತ್ರವಲ್ಲ ಅಣಬೆಗಳಿಗೆ ಅಲರ್ಜಿ ಇರುವವರು ಅವುಗಳನ್ನು ಸೇವಿಸಬಾರದು” ಎಂದು ಡಾ ಇಸ್ಮಾಯಿಲ್ ಎಚ್ಚರಿಸುತ್ತಾರೆ.

ಸುರಕ್ಷತೆ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು, ಅಣಬೆಗಳನ್ನು ಉಪಯೋಗಿಸುವ ಮೊದಲು ಯಾವಾಗಲೂ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು ಎಂದು ಡಾ ಇಸ್ಮಾಯಿಲ್ ಶಿಫಾರಸು ಮಾಡುತ್ತಾರೆ. ಸಾಮಾನ್ಯವಾಗಿ ಅಣಬೆಗಳು ಎರಡರಿಂದ ಮೂರು ದಿನಗಳ ವರೆಗಿನ ಕಡಿಮೆ ಬಾಳಿಕೆ ಅಥವಾ ತಾಜಾತನವನ್ನು ಹೊಂದಿರುತ್ತವೆ, ಹಾಳಾಗುವುದನ್ನು ತಪ್ಪಿಸಲು ಆ ಸಮಯದ ಮಿತಿಯೊಳಗೆ ಅವುಗಳನ್ನು ಸೇವಿಸಬೇಕು ಎಂದು ಅವರು ಕಿವಿಮಾತು ಹೇಳುತ್ತಾರೆ.

ಸಾರಾಂಶ:

ಮಧುಮೇಹ ನಿರ್ವಹಣೆಯ ಒಂದು ಪ್ರಮುಖ ಅಂಶ ಅಂದರೆ ಮಧುಮೇಹ ಸ್ನೇಹಿ ಆಹಾರವನ್ನು ಅನುಸರಿಸುವುದು. ಈ ನಿಟ್ಟಿನಲ್ಲಿ ಕಡಿಮೆ ಕ್ಯಾಲೋರಿ ಅಂಶ, ಸಮೃದ್ಧ ಪೋಷಕಾಂಶಗಳು ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದ ಕಾರಣಕ್ಕಾಗಿ ಅಣಬೆಗಳನ್ನು ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಅವುಗಳನ್ನು ಎಂದಿಗೂ ಹಸಿಯಾಗಿ ಸೇವಿಸಬಾರದು. ಮೊಟ್ಟೆಯ ಬಿಳಿಭಾಗದೊಂದಿಗೆ ಅಣಬೆಗಳನ್ನು ಸೇರಿಸಿ ಪೌಷ್ಟಿಕ ಆಮ್ಲೆಟ್ ತಯಾರಿಸಬಹುದು. ಸ್ಯಾಂಡ್‌ವಿಚ್‌ಗಳು ಮತ್ತು ಸೂಪ್‌ಗಳಲ್ಲಿ ಅಣಬೆಗಳನ್ನು ಸೇರಿಸಿಕೊಳ್ಳಬಹುದು.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

five × 4 =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ