0

0

0

ಈ ಲೇಖನದಲ್ಲಿ

ಮಧುಮೇಹ ನಿರ್ವಹಣೆಯಲ್ಲಿ ಅರಿಶಿನ
61

ಮಧುಮೇಹ ನಿರ್ವಹಣೆಯಲ್ಲಿ ಅರಿಶಿನ

ಅರಿಶಿನದಲ್ಲಿರುವ ಕರ್ಕ್ಯುಮಿನ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ನಾಳೀಯ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಮಧುಮೇಹ ನಿರ್ವಹಣೆಯಲ್ಲಿ ಅರಿಶಿನ

ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸಲ ಕೇವಲ ಔಷಧಿಗಳು, ಸಕ್ರಿಯ ಜೀವನಶೈಲಿ ಮತ್ತು ಫೈಬರ್-ಸಮೃದ್ಧ ಆಹಾರಕ್ರಮವಲ್ಲದೇ ಕೆಲವು ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಆರಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.  

  ಕರ್ಕ್ಯುಮಿನ್ ಅಥವಾ ಕರ್ಕುಮಾ ಲಾಂಗಾ ಉರಿಯೂತದ (anti-inflammatory) ಆ್ಯಂಟಿ-ಆಕ್ಸಿಡೇಟಿವ್ ಮತ್ತು ಕೊಲೆಸ್ಟ್ರಾಲ್-ಹೋರಾಟದ ಸಾಮರ್ಥ್ಯಗಳೊಂದಿಗೆ ರಕ್ತದಲ್ಲಿನ ಸಕ್ಕರೆಯ ಅತ್ಯುತ್ತಮ ಮಟ್ಟವನ್ನು ಕಾಪಾಡಿಕೊಳ್ಳಲು ನಮ್ಮ ದೇಹದಲ್ಲಿ ಪರಿಪೂರ್ಣ ವಾತಾವರಣವನ್ನು ಸೃಷ್ಟಿಸುತ್ತದೆ. ಅರಿಶಿನ ಕರ್ಕ್ಯುಮಿನ್ ಹೊಂದಿರುವ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ.

  ಕರ್ಕ್ಯುಮಿನ್: ರಕ್ತದ ಗ್ಲೂಕೋಸ್ ನಿಯಂತ್ರಕ ಅರಿಶಿನ

ಹೈಪೊಗ್ಲಿಸಿಮಿಕ್ (ಕಡಿಮೆ ರಕ್ತದಲ್ಲಿನ ಸಕ್ಕರೆಯನ್ನು ಉಂಟುಮಾಡುವ) ಪರಿಣಾಮದಿಂದಾಗಿ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ ಕರ್ಕ್ಯುಮಿನ್ ಎಂಬ ಸಕ್ರಿಯ ಘಟಕದ ಉಪಸ್ಥಿತಿ ಅರಿಶಿನದಲ್ಲಿದೆ ಎನ್ನುತ್ತಾರೆ ತಜ್ಞರು.  

“ಇದು ಉತ್ಕರ್ಷಣ ನಿರೋಧಕಗಳ (anti-bacterial properties) ಜೊತೆಗೆ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಜೀವಕೋಶದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ” ಎಂದು ಬೆಂಗಳೂರು ಮೂಲದ ಆಹಾರ ತಜ್ಞರು ಮತ್ತು ಪೋಷಣೆ ಚಿಕಿತ್ಸಕರಾದ (nutrition therapist.) ರಂಜನಿ ರಾಮನ್ ಹೇಳುತ್ತಾರೆ. 

  ಡಯಾಬಿಟಿಸ್ ಕೇರ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ (ಸೋಮ್ಲಾಕ್ ಚುಂಗ್‌ಸಮರ್ನ್ ಮತ್ತು ಇತರರು,2012), ಪ್ರಿಡಿಯಾಬಿಟಿಕ್ ಇರುವವರಲ್ಲ  9 ತಿಂಗಳ ಕರ್ಕ್ಯುಮಿನ್ ಸೇವನೆಯಿಂದ  ಟೈಪ್ 2 ಮಧುಮೇಹವಿದ್ದ ಪ್ರಿಡಿಯಾಬಿಟಿಕ್ ವ್ಯಕ್ತಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆಯಾಗಿತ್ತು. ಅಲ್ಲದೇ, ಕರ್ಕ್ಯುಮಿನ್ ಚಿಕಿತ್ಸೆಯಿಂದ  β- ಕೋಶಗಳ (ಇನ್ಸುಲಿನ್ ತಯಾರಿಸುವ ಬೀಟಾ ಕೋಶಗಳು) ಒಟ್ಟಾರೆ ಕಾರ್ಯವನ್ನು ಸುಧಾರಿಸಿತು. ಅಡ್ಡ ಪರಿಣಾಮವೂ ಅತೀ ಕಡಿಮೆಯಿತ್ತು. 

ಕರ್ಕ್ಯುಮಿನಾಯ್ಡ್ಸ್ (Curcuminoids), ಅರಿಶಿನ ಸಸ್ಯದಲ್ಲಿನ ಕರ್ಕ್ಯುಮಿನ್‌ನಿಂದ ಪಡೆದ ಸಸ್ಯ ಚಯಾಪಚಯ ಕ್ರಿಯೆಗಳ ಗುಂಪು, ಅರಿಶಿನವು ನಾಳೀಯ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪರಿಗಣಿಸಲಾಗಿದೆ.”ಅರಿಶಿನವು ದೇಹದ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ, ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಮಧುಮೇಹವಿರುವವರಿಗೆ ಮೂತ್ರಪಿಂಡದ ತೊಂದರೆಗಳ ಸಾಧ್ಯತೆ ಇರುವುದರಿಂದ ಅರಿಶಿನವು ಮೂತ್ರಪಿಂಡದ ಆರೋಗ್ಯಕ್ಕೂ ಒಳ್ಳೆಯದು. ಇದು ಪರೋಕ್ಷವಾಗಿ ಪ್ರಯೋಜನಕಾರಿಯಾಗಿದೆ” ಎಂದು ಅಪೋಲೋ ಆಸ್ಪತ್ರೆಯ ಮುಖ್ಯ ಪೌಷ್ಟಿಕತಜ್ಞರಾದ ಡಾ ಪ್ರಿಯಾಂಕಾ ರೋಹಟಗಿ ಹೇಳುತ್ತಾರೆ. 

ಮಧುಮೇಹದ ವಿರುದ್ಧ ಹೋರಾಡಲು ಅರಿಶಿನ:  

ಮೊದಲಿನಿಂದಲೇ ನಾನು ಅರಿಶಿನವನ್ನು ಹಲ್ದಿ-ದೂಧ್ (ಅರಿಶಿನ ಹಾಲು) ರೂಪದಲ್ಲಿ ಸೇವಿಸುತ್ತಿದ್ದೇನೆ ಈಗ ಅದಕ್ಕೆ “ಟರ್ಮರಿಕ್ ಲ್ಯಾಟೆಯಂತಹ ಅಲಂಕಾರಿಕ ಹೆಸರು ನೀಡಲಾಗಿದೆಯಷ್ಟೇ” ಎಂದು ಮುಂಬೈ ಮೂಲದ ಸಪ್ತಾಯುಜೆನೇರಿಯನ್ ಶಬ್ನಮ್ ಕೊಹ್ಲಿ ವಿವರಿಸುತ್ತಾರೆ. ಅವರು 2007 ರಿಂದ ಮಧುಮೇಹದೊಂದಿಗೆ ಬದುಕುತ್ತಿದ್ದಾರೆ. 

 ಮುಂಬೈ ಮೂಲದ ಮಾಜಿ ಶಿಕ್ಷಣ ತಜ್ಞರಾದ ಕೊಹ್ಲಿ, ಮಧುಮೇಹ ಸ್ನೇಹಿ ಆಹಾರದ ಭಾಗವಾಗಿ ಅರಿಶಿನವನ್ನು ಅವರ ಪೌಷ್ಟಿಕತಜ್ಞರು ಶಿಫಾರಸು ಮಾಡಿದ ನಂತರ ಅದನ್ನು ಸೇವಿಸಲು ಪ್ರಾರಂಭಿಸಿದರು.  ಈಗ ಅವರು ಮಲಗುವ ಮೊದಲು  ಅರಿಶಿನದ ಹಾಲನ್ನು ಸೇವಿಸುತ್ತಾರೆ.  

“ಹಾಲು ಮತ್ತು ಸಕ್ಕರೆ ಹಾಕಿದ ಚಹಾ ಬದಲು ನಾನು ಅರಿಶಿನ ಚಹಾವನ್ನು (ತಾಜಾವಾಗಿ ತುರಿದ ಅರಿಶಿನವನ್ನು ನೀರಿನಲ್ಲಿ ಕುದಿಸಿ) ವಾರಕ್ಕೆ ಮೂರು ಬಾರಿ ಕುಡಿಯಲು ಪ್ರಾರಂಭಿಸಿದೆ. ಒಂದು ಚಿಟಿಕೆ ಕರಿಮೆಣಸನ್ನು ಅದಕ್ಕೆ ಸೇರಿಸಿದರೆ ಅರಿಶಿನವು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾನು ಇತ್ತೀಚೆಗೆ ಕಲಿತಿದ್ದೇನೆ, ಹಾಗಾಗಿ ನಾನು ಅದನ್ನು ಮಾಡಲು ಪ್ರಾರಂಭಿಸಿದೆ, ”ಎಂದು ಕೊಹ್ಲಿ ಹೇಳುತ್ತಾರೆ. 

 ಮಧುಮೇಹಿಯಾಗಿರುವ ಅವರು ಸಾಮಾನ್ಯವಾಗಿ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಏನು ತಿನ್ನುತ್ತಾರೆ ಎಂಬುದರ ಬಗ್ಗೆ ಗಮನ ನೀಡುತ್ತಾರೆ. ತಮ್ಮ ನಿಯಂತ್ರಿತ ಆಹಾರ ಮತ್ತು ವ್ಯಾಯಾಮ ಯೋಜನೆಯ ಹೊರತಾಗಿ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಅರಿಶಿನವು ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಕೊಹ್ಲಿಯವರು ಪ್ರಾಮಾಣಿಕವಾಗಿ ನಂಬುತ್ತಾರೆ. 

 ಅರಿಶಿನದ ಅಡ್ಡಪರಿಣಾಮಗಳು 

  • ನಮ್ಮ ಆಹಾರದಲ್ಲಿ ಹೆಚ್ಚಿನ ಅರಿಶಿನ ಸೇರಿಸಿದರೆ ಕೆಲವು ದುಷ್ಪರಿಣಾಮಗಳಿವೆ ಎನ್ನುತ್ತಾರೆ ರಾಜನ್.  
  • “ಅರಿಶಿನವು ಆಕ್ಸಲೇಟ್ (ಸಸ್ಯಗಳಲ್ಲಿ ಕಂಡುಬರುವ ಖನಿಜ ಬಂಧಕ ಸಾವಯವ ಆಮ್ಲ) ಅಂಶವನ್ನು ಹೊಂದಿರುವುದರಿಂದ, ಹೆಚ್ಚು ಅರಿಶಿನವು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸಬಹುದು” ಎಂದು ಅವರು ಎಚ್ಚರಿಸಿದ್ದಾರೆ. ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ ಪರಿಣಾಮದಿಂದಾಗಿ, ಮಧುಮೇಹಿಗಳು ಅಧಿಕವಾಗಿ ಸೇವಿಸಿದರೆ, ಅದು ಹೈಪೊಗ್ಲಿಸಿಮಿಯಾ (ಕಡಿಮೆ ರಕ್ತದ ಸಕ್ಕರೆ) ಗೆ ಕಾರಣವಾಗಬಹುದು. 
  • “ಎಲ್ಲಾ ವಯಸ್ಕರು ನೈಸರ್ಗಿಕ ರೂಪದಲ್ಲಿ ಪ್ರತಿದಿನ ಸೇವಿಸಿದರೆ 500mg ನಿಂದ 1500mg ಅರಿಶಿನ ಸಾಕು” ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. 
  • ಅರಿಶಿನವನ್ನು ಆಗಾಗ್ಗೆ ಮತ್ತು ದೊಡ್ಡ ಪ್ರಮಾಣದಲ್ಲಿ ಸೇವಿಸುವ ಮೊದಲು ಆಹಾರ ತಜ್ಞರನ್ನು ಸಂಪರ್ಕಿಸಬೇಕು ಎಂದು ಡಾ ರೋಹಟಗಿ ಹೇಳುತ್ತಾರೆ. 

  ಆಹಾರದಲ್ಲಿ ಅರಿಶಿನವನ್ನು ಬಳಸಲು ಸರಿಯಾದ ಮಾರ್ಗ 

 ಪೌಷ್ಟಿಕತಜ್ಞರಾದ ರಾಮನ್ ಅವರು ಮನೆಯಲ್ಲಿ ತಯಾರಿಸುವ  ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ಅರಿಶಿನವು ಅತ್ಯಗತ್ಯ ಅಂಶವಾಗಿದೆ. ಹಾಗಾಗಿ  ಆಹಾರದಲ್ಲಿ ಹಸಿ ಅಥವಾ ಪುಡಿಮಾಡಿದ ಅರಿಶಿನವನ್ನು ಸೇರಿಸುವುದು ಒಳ್ಳೆಯದು ಎಂದು ಹೇಳುತ್ತಾರೆ. 

  “ತುಪ್ಪ, ಕೋಲ್ಡ್ ಪ್ರೆಸ್ಡ್ ಎಣ್ಣೆಗಳು ಮುಂತಾದ ಆರೋಗ್ಯಕರ ಕೊಬ್ಬಿನೊಂದಿಗೆ ಸೇರಿಸಿ ಸೇವಿಸಿದಾಗ ಅರಿಶಿನವು ಉತ್ತಮವಾಗಿ ಹೀರಲ್ಪಡುತ್ತದೆ” ಎಂದು ಅವರು ವಿವರಿಸುತ್ತಾರೆ. 

 ಅರಿಶಿನದಲ್ಲಿ ಅತ್ಯುತ್ತಮವಾದುದನ್ನು ಹೊರತರುವ ಮತ್ತೊಂದು ಅಂಶವೆಂದರೆ ಮೆಣಸು. “ಕಾಳುಮೆಣಸು ಪೈಪರಿನ್ (ಪ್ರಯೋಜನಕಾರಿ ನೈಸರ್ಗಿಕ ಸಾವಯವ ಸಂಯುಕ್ತ) ಎಂಬ ಸಂಯುಕ್ತಗಳನ್ನು ಹೊಂದಿದೆ. ಇದನ್ನು ಅರಿಶಿನದೊಂದಿಗೆ ಸೇರಿಸಿದಾಗ ಕರ್ಕ್ಯುಮಿನ್‌ನ ಜೈವಿಕ ಲಭ್ಯತೆಯನ್ನು (ದೇಹದಿಂದ ಹೀರಿಕೊಳ್ಳುವ ಮತ್ತು ಬಳಸುವ ಸಾಮರ್ಥ್ಯ) ಹೆಚ್ಚಿಸುತ್ತದೆ” ಎಂದು ರಾಮನ್ ವಿವರಿಸುತ್ತಾರೆ. 

 ಹೆಚ್ಚಿನ ಕ್ಲಿನಿಕಲ್ ಅಧ್ಯಯನಗಳು ಅಗತ್ಯವಿದೆ 

“ಅರಿಶಿನವು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹದಲ್ಲಿ ತೂಕವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದಿರಬಹುದು, ಇದು ಎಷ್ಟು ಸತ್ಯ ಎಂದು ಖಚಿತಪಡಿಸಲು ಇನ್ನೂ ಹೆಚ್ಚಿನ ವೈದ್ಯಕೀಯ ಅಧ್ಯಯನಗಳು ಅಗತ್ಯವಿದೆ” ಎಂದು ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ಆಂತರಿಕ ಔಷಧ ಮತ್ತು ಮಧುಮೇಹದ ಹಿರಿಯ ಸಲಹೆಗಾರರಾದ ಡಾ ಸುಬ್ರತಾ ದಾಸ್ ತಿಳಿಸಿದ್ದಾರೆ.  

 ಮಧುಮೇಹಕ್ಕೆ ಅರಿಶಿನ ಬಳಕೆಗೆ ಸಲಹೆಗಳು 

  • ಅಧಿಕವಾದ ಅರಿಶಿನ ಸೇವನೆಯನ್ನು ತಪ್ಪಿಸಿ ಏಕೆಂದರೆ ಇದು ತಲೆನೋವು ಮತ್ತು ವಾಕರಿಕೆ ಮುಂತಾದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು 
  • ಯಾವುದಕ್ಕೂ ಮೊದಲು ಅರಿಶಿನವನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ. ಆಗ ಯಾವುದೇ ಅಲರ್ಜಿಯನ್ನು ಪ್ರಚೋದಿಸುವುದಿಲ್ಲ. 
  • ಹೆಚ್ಚಿನ ಆರೋಗ್ಯ ಪ್ರಯೋಜನಗಳಿಗಾಗಿ ಅರಿಶಿನವನ್ನು ಕರಿಮೆಣಸಿನೊಂದಿಗೆ ಸೇರಿಸಿ 
  • ನೈಸರ್ಗಿಕ ಅರಿಶಿನವನ್ನು ಆರಿಸಿಕೊಳ್ಳಿ ಮತ್ತು ಯಾವುದೇ ಅರಿಶಿನ ಪೂರಕಗಳನ್ನು ಪ್ರಾರಂಭಿಸುವ ಮೊದಲು ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ. 

  ಸಾರಾಂಶ:  

ಮಧುಮೇಹವಿರುವವರು ಆಹಾರದಲ್ಲಿ ಹಸಿ ಅಥವಾ ಪುಡಿ ಮಾಡಿದ ಅರಿಶಿನವನ್ನು ಸೇರಿಸುವುದರಿಂದ ಇನ್ಸುಲಿನ್ ಉತ್ಪಾದಿಸುವ ಬೀಟಾ ಕೋಶಗಳು ಮತ್ತು ಮಧುಮೇಹಿಗಳಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. 

ಅದರ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳ ಹೊರತಾಗಿ, ಅರಿಶಿನವು ಕರ್ಕ್ಯುಮಿನ್ ಅನ್ನು ಸಹ ಹೊಂದಿದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಲೇಖನ
ಜಾಗತಿಕವಾಗಿ ಕನಿಷ್ಠ 5.4 ಲಕ್ಷ ಹೃದಯ ಸಂಬಂಧಿ ಸಾವುಗಳಿಗೆ ಟ್ರಾನ್ಸ್-ಫ್ಯಾಟಿ ಆಸಿಡ್‌ಗಳಿಂದ ತುಂಬಿದ ಸಂಸ್ಕರಿಸಿದ ಆಹಾರ ಕಾರಣ ಎಂದು ಭಾರತ ಸರ್ಕಾರ ಹೇಳುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ