
ಬೆಂಗಳೂರಿನ 30 ವರ್ಷದ ಮನು ಗೌಡ ಅವರು ಹಗಲು ಡೆಲಿವರಿ ಬಾಯ್ ಆಗಿದ್ದು, ರಾತ್ರಿ ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ದುಡಿಯುತ್ತಾರೆ. ಅವರ ಎರಡೂ ಕೆಲಸಗಳ ಕಾರಣದಿಂದ ಅವರು ಪೂರ್ತಿ ದಿನವನ್ನು ನಗರದ ಟ್ರಾಫಿಕ್-ತುಂಬಿದ ರಸ್ತೆಗಳಲ್ಲಿ ಕಳೆಯಬೇಕಾಗುತ್ತದೆ.
ಹ್ಯಾಪಿಯೆಸ್ಟ್ ಹೆಲ್ತ್‌ನೊಂದಿಗಿನ ಮಾತುಕತೆಯ ವೇಳೆ, ಗೌಡ ಅವರು ಹಲವಾರು ವರ್ಷಗಳಿಂದ ಮೈಗ್ರೇನ್‌ನಿಂದ ಬಳಲುತ್ತಿರುವುದನ್ನು ಬಹಿರಂಗಪಡಿಸಿದರು. ಕಳೆದ ಕೆಲವು ತಿಂಗಳುಗಳಿಂದ ಅವರಿಗೆ ಪ್ರಯಾಣಿಸುವಾಗ ದಿನಕ್ಕೆ ಒಮ್ಮೆಯಾದರೂ ಒಂದು ಬದಿಯ ತಲೆನೋವು ಕಾಡುತ್ತಿದೆ. ಅವರು ಇದನ್ನು ಔದ್ಯೋಗಿಕ ಅಪಾಯ ಎಂದು ಭಾವಿಸುತ್ತಾರೆ.
ಅವರಿಗೆ ತನ್ನ ಕಿವಿಗಳಲ್ಲಿ ಅನುರಣಿಸುವ ಮತ್ತು ಝೇಂಕರಿಸುವ ಶಬ್ದಗಳು ಕೇಳಿಸುತ್ತದೆ. ಟ್ರಾಫಿಕ್ ಗದ್ದಲಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದೇ ಇದಕ್ಕೆ ಕಾರಣವಾಗಿದೆ. “ವೈದ್ಯರು ಈ ಸ್ಥಿತಿಯನ್ನು 2020 ರಲ್ಲಿ ಟಿನ್ನಿಟಸ್ ಎಂದು ಗುರುತಿಸಿದರು” ಎಂದು ಅವರು ಹೇಳುತ್ತಾರೆ.
ಹೊರಾಂಗಣ ಗದ್ದಲದ ಮಟ್ಟಗಳಿಂದ ಬಾಧಿತರಾಗಿರುವ ಅನೇಕ ನಗರವಾಸಿಗಳಲ್ಲಿ ಗೌಡರು ಒಬ್ಬರಾಗಿದ್ದಾರೆ. “ಟ್ರಾಫಿಕ್ ಗದ್ದಲದಂತಹ ನಾವು ಜೀವಿಸುವ ಪರಿಸರದಲ್ಲಿನ ಶಬ್ಧಗಳು ವ್ಯಕ್ತಿಗಳಲ್ಲಿ ಮೈಗ್ರೇನ್ ದಾಳಿಯನ್ನು ಪ್ರಚೋದಿಸುತ್ತದೆ. ನಮ್ಮ ಸುತ್ತಲಿನ ಶಬ್ಧದ ಆವರ್ತನ ಮತ್ತು ಪ್ರಮಾಣದ ಬದಲಾವಣೆಗಳಿಂದ ಸಾಮಾನ್ಯ ತಲೆನೋವು ಕೂಡ ಉಂಟಾಗುತ್ತದೆ ”ಎಂದು ಗುರುಗ್ರಾಮ್‌ನ ಸಿಕೆ ಬಿರ್ಲಾ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲಿನ ಪ್ರಮುಖ ಸಲಹೆಗಾರ ಡಾ.ಅನಿಶ್ ಗುಪ್ತಾ ಹೇಳುತ್ತಾರೆ.
ಓಟೋಲರಿಂಗೋಲಜಿಸ್ಟ್ (ಕಿವಿಗಂಟಲು ತಜ್ಞ) ಮತ್ತು ಡಾ. ಹ್ಯಾನ್ಸ್ ಸೆಂಟರ್ ಫಾರ್ ಇಎನ್‌ಟಿ, ಹಿಯರಿಂಗ್ ಕೇರ್ ಮತ್ತು ವರ್ಟಿಗೋ, ದೆಹಲಿಯ ಸಂಸ್ಥಾಪಕ ಡಾ. ಜಿತೇಂದ್ರ ಮೋಹನ್ ಹನ್ಸ್ ಅವರನ್ನು ಟ್ರಾಫಿಕ್ ಗದ್ದಲದಿಂದ ಬಾಧಿತವಾದ ಅಥವಾ ಯಂತ್ರಗಳ ಶಬ್ದದ ಮಟ್ಟ ಅಧಿಕವಾಗಿರುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವ 20 ರಿಂದ 30 ರೋಗಿಗಳಾದರೂ ಪ್ರತಿವಾರ ಭೇಟಿಮಾಡುತ್ತಾರೆ.
ಗದ್ದಲ ಮತ್ತು ಕಿವಿಯ ಆರೋಗ್ಯ
“ಹೆಚ್ಚಿನ ಡೆಸಿಬಲ್ ಮಟ್ಟಗಳು ಶ್ರವಣೇಂದ್ರಿಯ (ಶ್ರವಣ) ನರಗಳ ತುದಿಗಳನ್ನು ಹಾನಿಗೊಳಿಸುವುದರಿಂದ ಟ್ರಾಫಿಕ್ ಗದ್ದಲದಿಂದ ಬಾಧಿತರಾಗುವ ನಿತ್ಯ ಪ್ರಯಾಣಿಕರು ಶ್ರವಣ ನಷ್ಟದ ಅಪಾಯಕ್ಕೆ ಒಳಗಾಗುತ್ತಾರೆ. ಇದರಿಂದಾಗಿ ಹೆಚ್ಚಿನ ಆವರ್ತನಗಳ ಶ್ರವಣ ನಷ್ಟವುಂಟಾಗಿ ಇತರರ ಮಾತುಗಳನ್ನು ಅರ್ಥಮಾಡಿಕೊಳ್ಳಲು ಅಡ್ಡಿಯುಂಟಾಗುವುದಲ್ಲದೇ ಔಷಧಿ ಅಥವಾ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಲಾಗದ ಸಮಸ್ಯೆ ಉಂಟಾಗುತ್ತದೆ” ಎಂದು ಡಾ. ಗುಪ್ತಾ ಹೇಳುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಗದ್ದಲವು ನಿದ್ರಾಭಂಗಕ್ಕೆ ಕೂಡ ಕಾರಣವಾಗುತ್ತದೆ; ಮತ್ತು ಉತ್ತಮ ನಿದ್ರೆಯು ನಮ್ಮ ಕಿವಿಗಳಿಗೆ ಮಾತ್ರವಲ್ಲದೆ ಇಡೀ ದೇಹದ ಚೇತರಿಕೆಗೆ ಮಹತ್ವದ್ದಾಗಿದೆ, ನಿದ್ರಾಭಂಗವು ಮುಂದುವರಿದರೆ ಅದು ಹಲವಾರು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ ಎಂದು ಸೂಚಿಸುತ್ತದೆ.
ಧ್ವನಿಯನ್ನು ಡೆಸಿಬಲ್ ಅಥವಾ dBಯಲ್ಲಿ ಅಳೆಯಲಾಗುತ್ತದೆ. ಶಬ್ಧದ ಮಟ್ಟ 45 dB ಗಿಂತ ಅಧಿಕವಾಗಿದ್ದರೆ ಅದು ನಿದ್ರಾಭಂಗಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಸಾಬೀತುಪಡಿಸಲಾಗಿದೆ. 40 dB ಶಬ್ದಕ್ಕೆ ಒಡ್ಡಿಕೊಂಡಾಗ 10 ಪ್ರತಿಶತ ವ್ಯಕ್ತಿಗಳು ದೀರ್ಘ ನಿದ್ರೆಯಿಂದ ಎಚ್ಚರಗೊಳ್ಳುವ ಸಂಭವನೀಯತೆ ಇದೆ; ಮತ್ತು ಸುಮಾರು 30 ಶೇಕಡಾ 70 dB ನಲ್ಲಿ ನಿದ್ರೆಯನ್ನು ಕಳೆದುಕೊಳ್ಳಬಹುದು. ಆದಾಗ್ಯೂ, ನಿದ್ರೆಯ ಪುನಶ್ಚೈತನ್ಯಕಾರಿ ಪ್ರಕ್ರಿಯೆಯನ್ನು ಹಾಗೆಯೇ ಕಾಪಾಡಿಕೊಳ್ಳಲು, 35 dB ಗಿಂತ ಕಡಿಮೆ ಶಬ್ಧ ಮಟ್ಟವನ್ನು ಶಿಫಾರಸು ಮಾಡಲಾಗಿದೆ.
ನಿತ್ಯ ಪ್ರಯಾಣಿಕರು ಸಾಧ್ಯವಾದಷ್ಟು ಗದ್ದಲದಿಂದ ದೂರವಿರುವುದು ಒಳಿತು ಎಂದು US ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಸಲಹೆ ನೀಡುತ್ತದೆ. ಕಾರಿನೊಳಗೆ ಕುಳಿತಾಗ ಆಗುವ ನಗರದ ಟ್ರಾಫಿಕ್ ಕಿರಿಕಿರಿಯು 80-85 dB ಆಗಿದ್ದರೆ, 95 dB ಯಷ್ಟು ಮೋಟಾರ್‌ಸೈಕಲ್ ಎಂಜಿನ್‌ಗಳನ್ನು ಪುನಃ ಸ್ಟಾರ್ಟ್ ಮಾಡುವ ಗದ್ದಲಕ್ಕೆ ಕೇವಲ 50 ನಿಮಿಷಗಳ ಕಾಲ ಒಡ್ಡಿಕೊಂಡರೆ ನಮ್ಮ ಶ್ರವಣ ಹಾನಿಗೊಳಾಗಾಗುತ್ತದೆ.
ಅನುಮೋದಿತ ಗದ್ದಲದ ಮಟ್ಟಗಳ ಕುರಿತ ಸಂಶೋಧನೆ
ನಗರ ವಸತಿ ಪ್ರದೇಶಗಳಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹಗಲಿಗೆ ಶಬ್ಧ ಮಿತಿಯನ್ನು ಗರಿಷ್ಠ 55 ಡೆಸಿಬಲ್ ಅಕೌಸ್ಟಿಕ್ ಮತ್ತು ರಾತ್ರಿಯ ಗರಿಷ್ಠ ಅನುಮತಿ ಮಿತಿಯನ್ನು 45 dB(A) ಗೆ ನಿಗದಿಪಡಿಸಿದೆ.
ಆದರೆ 2017 ರಲ್ಲಿ ಬೆಂಗಳೂರಿನಲ್ಲಿ ಅಳೆಯಲಾದ ಗದ್ದಲದ ಡೇಟಾವು 60 ಮತ್ತು 70 dB(A) ನಡುವೆ ಇದೆ. ಈ ಮಟ್ಟಕ್ಕೆ ಮನುಗೌಡ ದಿನೇ ದಿನೇ ಒಡ್ಡಿಕೊಳ್ಳುತ್ತಿದ್ದಾರೆ.
CDC ಡೇಟಾವು ಶ್ರವಣ ಆರೋಗ್ಯದ ಮೇಲೆ ಶಬ್ದ ಮಾಲಿನ್ಯದ ಪರಿಣಾಮವನ್ನು ತೋರಿಸುತ್ತದೆ. 25 ವರ್ಷ ವಯಸ್ಸಿನ ವ್ಯಕ್ತಿ 60 dB(A) ಗಿಂತ ಹೆಚ್ಚಿನ ಶಬ್ದದ ಮಟ್ಟಕ್ಕೆ ಒಡ್ಡಿಕೊಳ್ಳುವುದು ವ್ಯಕ್ತಿಯ ಕಿವಿಯ ಕಾರ್ಯವನ್ನು ಅಕಾಲಿಕವಾಗಿ ಮಂದವಾಗಿಸಬಹುದು, CDC ಅಂಕಿಅಂಶಗಳ ಪ್ರಕಾರ ಇದು 50 ವರ್ಷ ವಯಸ್ಸಿನಲ್ಲಿ ಅಥವಾ ಅವರ ವಯಸ್ಸಿನ ಎರಡು ಪಟ್ಟು ಹೆಚ್ಚು ವಯಸ್ಸಿನಲ್ಲಿ ಉಂಟಾಗುವ ರೀತಿಯ ಶ್ರವಣ ಕ್ಷೀಣತೆಗೆ ಕಾರಣವಾಗುವ ಸಾಧ್ಯತೆಯಿದೆ.
ಗದ್ದಲಕ್ಕೆ ಒಡ್ಡಿಕೊಳ್ಳುವುದು ಮತ್ತು ಒಟ್ಟಾರೆ ಆರೋಗ್ಯ
ಗದ್ದಲದಿಂದಾಗಿ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ದೇಹಕ್ಕೆ ಆಮ್ಲಜನಕದ ಕೊರತೆಯುಂಟಾಗುತ್ತದೆ. ಇದು ಪ್ರಮುಖವಾಗಿ ಕಿವಿಗಳ ಶಬ್ದ-ಸಂಬಂಧಿತ ಅಸ್ವಸ್ಥತೆಗಳ ಪೂರ್ವಭಾವಿ ಅಂಶವಾಗಿರುವುದಷ್ಟೇ ಅಲ್ಲದೇ ಮೆದುಳು, ಹೃದಯ, ದೃಷ್ಟಿ ಮತ್ತು ಚರ್ಮದ ಮುಂಚಿತ ಸುಕ್ಕುಗಳಿಗೂ ಕಾರಣವಾಗುತ್ತದೆ ಎಂದು ಡಾ. ಹ್ಯಾನ್ಸ್ ಹೇಳುತ್ತಾರೆ.
ಇವಿಷ್ಟೇ ಅಲ್ಲದೇ, ದೈನಂದಿನ ಟ್ರಾಫಿಕ್ ಗದ್ದಲಕ್ಕೆ ಒಡ್ಡಿಕೊಳ್ಳುವುದರಿಂದ ಆತಂಕ, ಒತ್ತಡ, ನಿದ್ರಾ ಭಂಗ, ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ತೊಂದರೆಗಳು ಉಂಟಾಗುತ್ತವೆ ಎಂದು ಡಾ.ಗುಪ್ತಾ ಹೇಳುತ್ತಾರೆ. ಗದ್ದಲವು ಮಕ್ಕಳ ದೈನಂದಿನ ಕಾರ್ಯಗಳು ಮತ್ತು ಚಟುವಟಿಕೆಗಳನ್ನು ನಡೆಸುವ ಸಾಮರ್ಥ್ಯಕ್ಕೆ ಅಡ್ಡಿಯುಂಟುಮಾಡುವ ಜೊತೆಗೆ ಕಳಪೆ ಓದುವ ಸಾಮರ್ಥ್ಯ ಮತ್ತು ಕಳಪೆ ಶಾಲಾ ಕಾರ್ಯಕ್ಷಮತೆಗೆ ಕಾರಣವಾಗಬಹುದು.
ಸುರಕ್ಷಿತ ಧ್ವನಿ ಮಟ್ಟಗಳು ಎಷ್ಟಿರಬೇಕು?
US ಪರಿಸರ ಸಂರಕ್ಷಣಾ ಸಂಸ್ಥೆ ಮತ್ತು WHO ಶಬ್ದ-ಪ್ರೇರಿತ ಶ್ರವಣ ನಷ್ಟವನ್ನು ತಡೆಗಟ್ಟಲು 70 dBA ಗಿಂತ ಕಡಿಮೆ ಪರಿಸರದ ಶಬ್ದಗಳನ್ನು 24 ಗಂಟೆಗಳ ಕಾಲ (ಅಥವಾ ಎಂಟು ಗಂಟೆಗಳಲ್ಲಿ 75 dBA) ನಿರ್ವಹಿಸಲು ಶಿಫಾರಸು ಮಾಡುತ್ತದೆ.
ತಮ್ಮ ಸುತ್ತಲಿನ ಶಬ್ದವನ್ನು ಅಳೆಯಲು ಎಲ್ಲರಿಗೂ ಸಾಧ್ಯವಾಗದಿರಬಹುದು. ಈ ಸಮಸ್ಯೆಗೆ ಪರಿಹಾರವನ್ನು ಒದಗಿಸಲು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಕ್ಯುಪೇಷನಲ್ ಸೇಫ್ಟಿ ಅಂಡ್ ಹೆಲ್ತ್ ಸೌಂಡ್ ಲೆವೆಲ್ ಮೀಟರ್‌ಗಳನ್ನು (SLMಗಳು) ರಚಿಸಿದೆ. ಅಂತಹ ಒಂದು SLM ಸಂಸ್ಥೆಯ ಅಪ್ಲಿಕೇಶನ್ ಆಗಿದೆ ಮತ್ತು ವಿಶೇಷವಾಗಿ iOS ಗಾಗಿ ಬಳಸಲಾಗುತ್ತದೆ.
“80 dB ಗಿಂತ ಹೆಚ್ಚಿನ ಶಬ್ಧಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಗರಿಷ್ಠ ಅನುಮತಿಸಲಾದ ಮಟ್ಟ ವಾರಕ್ಕೆ ಐದು ದಿನಗಳಿಗೆ ಎಂಟು ಗಂಟೆಗಳವರೆಗೆ 80 dB ವರೆಗೆ ಆಗಿದೆ. ಕೆಲಸದ ಸ್ಥಳದಲ್ಲಿ ಇದಕ್ಕಿಂತ ಹೆಚ್ಚಿನ ಶಬ್ಧವಿದ್ದರೆ, ಶ್ರವಣ ಸಂರಕ್ಷಣಾ ನಿಯಮಾವಳಿಗಳನ್ನು ಪ್ರಾರಂಭಿಸಬೇಕು ” ಎಂದು ಡಾ ಗುಪ್ತಾ ಸಲಹೆ ನೀಡುತ್ತಾರೆ.
ಗದ್ದಲದ ಪರಿಣಾಮಗಳ ನಿರ್ವಹಣೆಗಾಗಿ ನಿಯಮಾವಳಿಗಳು
ಪಾಲಿಸಬೇಕಾದ ಮೊದಲ ನಿಯಮಾವಳಿ ಎಂದರೆ ಗದ್ದಲದ ಟ್ರಾಫಿಕ್‌ಗೆ ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡುವುದು. ಗೌಡರು ತಮ್ಮ ಗದ್ದಲಕ್ಕೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ನವೀನ ಶಿಫ್ಟ್ ಸರದಿ ಯೋಜನೆಯ ಪ್ರಕಾರ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಸಮ ದಿನಗಳಲ್ಲಿ ಮಧ್ಯಾಹ್ನ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಮತ್ತು ಬೆಸ ದಿನಗಳಲ್ಲಿ ರಾತ್ರಿ ಬಾಡಿಗೆ ಬೈಕ್ ಕ್ಯಾಪ್ಟನ್ ಆಗಿ ಕೆಲಸ ಮಾಡಿದರು.
“ನನ್ನ ಟಿನ್ನಿಟಸ್ ಸಮಸ್ಯೆ ಇನ್ನೂ ಸರಿಯಾಗಿಲ್ಲ, ಆದರೆ ತಲೆನೋವಿನ ಆವರ್ತನ ಕಡಿಮೆಯಾಗಿದೆ” ಎಂದು ಗೌಡ ಹೇಳುತ್ತಾರೆ.
ಡಾ. ಗುಪ್ತಾ ಅವರು ಗೌಡ ಅಥವಾ ಕಚೇರಿ ಪ್ರಯಾಣಿಕರು ಗದ್ದಲದ ಹಾನಿಕಾರಕ ಪರಿಣಾಮಗಳನ್ನು ನಿರ್ವಹಿಸಲು ಅನುಸರಿಸಬಹುದಾದ ಕೆಲವು ಅಭ್ಯಾಸಗಳನ್ನು ಈ ಕೆಳಗಿನಂತೆ ಶಿಫಾರಸು ಮಾಡುತ್ತಾರೆ:
- ತುಲನಾತ್ಮಕವಾಗಿ ಶಾಂತವಾದ ಪ್ರದೇಶವನ್ನು ಹುಡುಕಿ ಮತ್ತು ಆ ಪರಿಸರದಲ್ಲಿ ಪ್ರತಿದಿನ ಸ್ವಲ್ಪ ಸಮಯವನ್ನು ಕಳೆಯಿರಿ.
- ಜೋರಾದ ಶಬ್ದಗಳು ನಿಮ್ಮ ಕಿವಿಗೆ ತಾಗುವ ತೀವ್ರತೆಯನ್ನು ಕಡಿಮೆ ಮಾಡಲು ಇಯರ್‌ಮಫ್‌ಗಳು ಅಥವಾ ಮೆತ್ತಗಿನ ಹೆಲ್ಮೆಟ್‌ಗಳಂತಹ ರಕ್ಷಣಾತ್ಮಕ ಸಾಧನವನ್ನು ಧರಿಸಿ.
- ನಾಲ್ಕು ಚಕ್ರಗಳ ವಾಹನದ ಮೂಲಕ ಪ್ರಯಾಣಿಸುವ ವ್ಯಕ್ತಿಗಳು ಕಿಟಕಿಗಳನ್ನು ಮುಚ್ಚಿಕೊಳ್ಳುವುದು ಉತ್ತಮ.
- ಹಾರ್ನ್ ಮಾಡುವುದನ್ನು ನಿಲ್ಲಿಸಿ ಮತ್ತು ವಾಹನಗಳ ವೇಗವನ್ನು ಹಠಾತ್ ಹೆಚ್ಚಿಸುವುದನ್ನು ತಪ್ಪಿಸಿ.
- ಕಡಿಮೆ ಟ್ರಾಫಿಕ್ ಮತ್ತು ಆದ್ದರಿಂದ ಕಡಿಮೆ ಗದ್ದಲದ ಮಾರ್ಗಗಳ ಮೂಲಕ ಪ್ರಯಾಣಿಸಲು ಪ್ರಯತ್ನಿಸಿ.
- ವಾಹನಗಳಲ್ಲಿ ತಾಂತ್ರಿಕ ಸುಧಾರಣೆಯನ್ನು ಆಯ್ಕೆಮಾಡಿ ಮತ್ತು ನಿಯಮಿತವಾಗಿ ಅವುಗಳ ಸರ್ವಿಸ್ ಅನ್ನು ಮಾಡಿಸಿ ಮತ್ತು ಅವುಗಳು ಘರ್ಷಣೆಯಿಲ್ಲದೆ ನಯವಾಗಿ ಚಲಿಸುವಂತೆ ನೋಡಿಕೊಳ್ಳಿ:
- ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು ನೀವು ನಿಮ್ಮಿಂದ ಸಾಧ್ಯವಾದಷ್ಟು ಕೊಡುಗೆಯನ್ನು ನೀಡಿದ್ದೀರಿ.
- ನಿಮ್ಮ ವಾಹನಗಳಿಗೆ ಸೂಕ್ತವಾದ, ಕಾನೂನುಬದ್ಧವಾಗಿ ಅನುಮತಿಸಲಾದ ಸೈಲೆನ್ಸರ್‌ಗಳನ್ನು ಬಳಸಿ ಮತ್ತು ಖರೀದಿಯ ನಂತರದ ಸೇರ್ಪಡೆಗಳನ್ನು ಮಾಡದಿರಿ.