0

0

0

ವಿಷಯಗಳಿಗೆ ಹೋಗು

ಗೇಮಿಂಗ್ ಮತ್ತು ಆನ್‌ಲೈನ್ – ಅಂತರ್ಜಾಲದ ಕರಾಳ ಮುಖ
1

ಗೇಮಿಂಗ್ ಮತ್ತು ಆನ್‌ಲೈನ್ – ಅಂತರ್ಜಾಲದ ಕರಾಳ ಮುಖ

ಗೇಮಿಂಗ್ ಮತ್ತು ಆನ್‌ಲೈನ್ ಜೂಜಾಟವು ಹದಿಹರೆಯದವವರು ಮತ್ತು ಯುವ ಜನತೆಯಲ್ಲಿ ಹೊಸ ಚಟವಾಗುತ್ತಿದೆ

ಗೇಮಿಂಗ್ ಮತ್ತು ಆನ್‌ಲೈನ್

24 ವರ್ಷದ ಆ ವ್ಯಕ್ತಿ, ಮಂದ ಬೆಳಕಿನ ಆ ಕೋಣೆಯೊಳಗೆ ಗಂಟೆಗಟ್ಟಲೆ ಕಳೆಯುತ್ತಿದ್ದ, ಆತನ ಕಂಪ್ಯೂಟರ್ ಮುಂಭಾಗದಲ್ಲಿ ಸಿಗರೇಟ್ ಪ್ಯಾಕ್‌ಗಳು ಮತ್ತು ಕೇಬಲ್‌ಗಳು ಚೆಲ್ಲಾಪಿಲ್ಲಿಯಾಗಿ ಚದುರಿದ್ದವು. ಅವನಿಗೆ ತೀವ್ರ ಗೇಮಿಂಗ್ ಮತ್ತು ಜೂಜಿನ ಚಟ ಇತ್ತು. ಆತನಿಗೆ ಆನ್‌ಲೈನ್ ಆಟಗಳ ಚಟ ಎಷ್ಟಿತ್ತೆಂದರೆ, ಆತ ಸ್ನಾನ ಮಾಡುತ್ತಿರಲಿಲ್ಲ, ಗಡ್ಡ ಬೋಳಿಸುತ್ತಿರಲಿಲ್ಲ, ಮಾತನಾಡಲು ಯಾರಾದರೂ ಆತನ ಕೋಣೆಗೆ ಪ್ರವೇಶಿಸಲು ಪ್ರಯತ್ನಿಸಿದಾಗಲೆಲ್ಲ ಆತ ಅಗ್ರೆಸೀವ್ ಆಗುತ್ತಿದ್ದ.

ಈತ ಮುಂಬೈನಲ್ಲಿ ನೆಲೆಸಿರುವ ವ್ಯಕ್ತಿ, ಬಾಲ್ಯದಿಂದಲೂ ಆನ್‌ಲೈನ್ ಆಟಗಳ ಬಗ್ಗೆ ಅತ್ಯಾಸಕ್ತಿ ಇದ್ದು,  ಆತನ ಹದಿಹರೆಯದಲ್ಲಿ ಅದು ಚಟವಾಗಿ ಮಾರ್ಪಟ್ಟಿತು. ಪೋಷಕರಿಗೆ ಆರಂಭಿಕ ಹಂತದಲ್ಲಿ ಚಟವನ್ನು ಗುರುತಿಸಲು ಸಾಧ್ಯವಾಗಲಿಲ್ಲ, ಅದು ನಂತರ ಆನ್‌ಲೈನ್ ಜೂಜಿನ ವ್ಯಸನಿಯಾಗಲು ಕಾರಣವಾಯಿತು.

“ಆತ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ ಮತ್ತು ತನ್ನ ಇತರ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿದ್ದಾನೆ. ಕೇವಲ ವಿಡಿಯೋ ಗೇಮ್‌ಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಿದ್ದ ಆತ, ಅನೇಕ ಜೂಜಿನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾನೆ, ಅಲ್ಲಿ ಹಣವನ್ನು ಹೂಡುತ್ತಾನೆ ಮತ್ತು ಅವುಗಳನ್ನು ಕಳೆದುಕೊಳ್ಳುತ್ತಾನೆ. ಮನೆಯಲ್ಲಿ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಿದ್ದ ಅವನು ತನ್ನ ಕುಟುಂಬದೊಂದಿಗೆ ಮಾತುಕತೆಯನ್ನು ನಿಲ್ಲಿಸಿದ್ದಾನೆ” ಎಂದು ಮುಂಬೈನ ಫೋರ್ಟಿಸ್ ಆಸ್ಪತ್ರೆಯ ಮನೋವೈದ್ಯ ಡಾ. ಫ್ಯಾಬಿಯನ್ ಅಲ್ಮೀಡಿಯಾ ಹೇಳುತ್ತಾರೆ.

ಅವನ ಪೋಷಕರು ಅವನನ್ನು ಮನೋವೈದ್ಯರ ಬಳಿಗೆ ಕರೆದೊಯ್ದರು, ಆದರೆ ಆತ ವೈದ್ಯರ ಸಲಹೆಯ ಅನುಸರಣೆಯನ್ನೇ ಮಾಡಲಿಲ್ಲ. ಈ ಕಾರಣದಿಂದ ಚಟವು ಇನ್ನಷ್ಟು ಹದಗೆಟ್ಟಿತು. “ಆತನ ಪರಿಸ್ಥಿತಿಯು ಇನ್ನಷ್ಟು ತೀವ್ರಗೊಂಡ ಕಾರಣ ಆತನನ್ನು ವ್ಯಸನಮುಕ್ತ ಕೇಂದ್ರಕ್ಕೆ ಕಳುಹಿಸಬೇಕಾಯಿತು” ಎಂದು ಡಾ ಅಲ್ಮೀಡಿಯಾ ಹೇಳುತ್ತಾರೆ.

ಗೇಮಿಂಗ್ ರೂಪದಲ್ಲಿ ಆನ್‌ಲೈನ್ ಜೂಜಾಟ

“ಜೂಜು ಎಂದರೆ ತಾವು ಬಯಸಿದ ಅತ್ಯುತ್ತಮವಾದುದನ್ನು ಪಡೆಯುವ ಭರವಸೆಯಿಂದ ಅಪಾಯಕ್ಕೆ ಒಡ್ಡಿಕೊಳ್ಳುವುದು. ವೀಡಿಯೊ ಗೇಮಿಂಗ್ ಮತ್ತು ಆನ್‌ಲೈನ್ ಜೂಜಿನ ನಡುವಿನ ಸಂಬಂಧವನ್ನು ಅನೇಕ ಅಧ್ಯಯನಗಳಲ್ಲಿ ಪರಿಶೀಲಿಸಲಾಗಿದೆ. ವೀಡಿಯೊ ಗೇಮಿಂಗ್ ಮತ್ತು ಆನ್‌ಲೈನ್ ಜೂಜಾಟ ಎರಡರಲ್ಲೂ ತೊಡಗಿಸಿಕೊಂಡವರಲ್ಲೂ ಸಮಾನ ನಡವಳಿಕೆಗಳನ್ನು ಗಮನಿಸಲಾಗಿದೆ, ಅಂದರೆ ಇವರು ಹಠಾತ್ ಪ್ರವೃತ್ತಿ ಮತ್ತು ಹೆಚ್ಚಿನ ಮಾನಸಿಕ ಸಮಸ್ಯೆಗಳನ್ನು ಹೊಂದಿರುತ್ತಾರೆ” ಎಂದು ಹೈದರಾಬಾದಿನ ಕಾಮಿನೇನಿ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಸೈಕಿಯಾಟ್ರಿಸ್ಟ್ ಡಾ.ಗೌತಮಿ ನಾಗಾಭಿರವ ಅವರು ಹೇಳುತ್ತಾರೆ.

ಪೇ-ಟು-ವಿನ್ ಗೇಮಿಂಗ್ ಎನ್ನುವುದು ಇ-ಪ್ಲೇಯರ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಸಾಮಾನ್ಯ ರೀತಿಯ ವೀಡಿಯೊ ಗೇಮ್, ಈ ಆಟದಲ್ಲಿ ಮುಂದುವರಿಯಲು ಅವರು ಪಾವತಿಸಬೇಕಾಗುತ್ತದೆ. ಜರ್ನಲ್ ಆಫ್ ಗ್ಯಾಂಬ್ಲಿಂಗ್ ಸ್ಟಡೀಸ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಪೇ-ಟು-ವಿನ್ ಗೇಮಿಂಗ್ ಮತ್ತು ಜೂಜಿನೊಂದಿಗಿನ ಅದರ ಪರಸ್ಪರ ಸಂಬಂಧ: ಎಂಬ ಶೀರ್ಷಿಕೆಯ ಅಧ್ಯಯನವು,  ಈ ಆಟಗಳಲ್ಲಿ ಪಾವತಿಗಳ ಆವರ್ತನ ಮತ್ತು ಮೌಲ್ಯವು ಅನಿಯಮಿತವಾಗಿರುತ್ತದೆ ಮತ್ತು ಪಾವತಿಗಳನ್ನು ಆಟಗಾರರಿಗೆ ಲಿಂಕ್ ಮಾಡಲಾಗಿರುತ್ತದೆ. ಆಟದಲ್ಲಿನ ಸ್ಪರ್ಧಾತ್ಮಕತೆ ಅಥವಾ ಮುಂದುವರಿಯುವಿಕೆಯು, ಜೂಜಿನಲ್ಲಿ ಇರುವಂತೆಯೇ, ಸಂಭಾವ್ಯ, ಸಮಸ್ಯಾತ್ಮಕ ನಡವಳಿಕೆಯನ್ನು ಹೆಚ್ಚಿಸುತ್ತವೆ ಎಂದು ಹೇಳುತ್ತದೆ.

ಪೇ-ಟು-ವಿನ್ ಗೇಮ್‌ಗಳಲ್ಲಿ ಭಾಗವಹಿಸುವ 81 ಪ್ರತಿಶತದಷ್ಟು ಜನರು, ಕನಿಷ್ಠ ಒಂದು ಪಾವತಿಯನ್ನು ಮಾಡಿರುತ್ತಾರೆ,  ಆಟದಲ್ಲಿ ಮುಂದುವರಿಯಲು ಅವರು ಹಾಗೆ ಮಾಡುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಪೇ-ಟು-ವಿನ್ ಗೇಮರುಗಳು ಅಂದರೆ ಜೂಜಿನತ್ತ ವಿಶೇಷ ಆಕರ್ಷಣೆಯನ್ನು ಹೊಂದಿರುವ ವಿಶಿಷ್ಟ ಗ್ರಾಹಕ ಗುಂಪು. ಪೇ-ಟು-ವಿನ್ ಗೇಮಿಂಗ್ ಮತ್ತು ಜೂಜಿನ ಆಟಗಳಿಗಿರುವ ಸಾಮಾನ್ಯ ಆಧಾರವೆಂದರೆ ಮತ್ತೆ ಮತ್ತೆ ಪಾವತಿಯಾಗುವ ಅನುಕೂಲ.

ಗೇಮಿಂಗ್ ಮತ್ತು ಜೂಜಿನ ಪರಿಣಾಮಗಳು

“ಗೇಮಿಂಗ್ ಚಟ ಹೊಂದಿರುವ ವ್ಯಕ್ತಿಗಳು ಮೊಬೈಲ್ ಅಥವಾ ಕಂಪ್ಯೂಟರ್‌ಗೆ ಹೆಚ್ಚು ಅಂಟಿಕೊಂಡಿರುತ್ತಾರೆ ಮತ್ತು ಅದು ಅವರ ಆದ್ಯತೆಯಾಗುತ್ತದೆ. ಅವರು ರಾತ್ರಿಯಿಡೀ ಆಟಗಳನ್ನು ಆಡುವುದರಿಂದ ಅವರ ನಿದ್ರೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಗೇಮಿಂಗ್ ವ್ಯಸನಿಗಳ ಕಣ್ಣುಗಳ ಸುತ್ತಲು ಕಪ್ಪು ವಲಯ ಬೆಳೆದು, ಕಣ್ಣು ಕೆಂಪು ಬಣ್ಣಕ್ಕೆ ತಿರುಗುತ್ತವೆ, ಇವು ಆರಂಭಿಕ ವ್ಯಸನದ ಕೆಲವು ಗಮನಾರ್ಹ ಲಕ್ಷಣಗಳಾಗಿವೆ. ಅವರು ತಮ್ಮ ಸುತ್ತಲಿನ ಜನರಿಗಿಂತ ಹೆಚ್ಚಾಗಿ ಗೇಮಿಂಗ್‌ಗೆ ಆದ್ಯತೆ ನೀಡುವುದರಿಂದ ಅವರ ಸಂಬಂಧಗಳ ಮೇಲೂ ಇದರ ಪರಿಣಾಮ ಉಂಟಾಗುತ್ತದೆ.  ಅವರ ಪೂರ್ತಿ ಗಮನ ಮತ್ತು ಚಿತ್ತವು ಗೇಮಿಂಗ್ ಮೇಲೆ ಇರುತ್ತದೆ ಮತ್ತು ಅವರ ಮನಸ್ಥಿತಿಯು ಆಗಾಗ ಬದಲಾಗುತ್ತಿರುತ್ತದೆ. ಅವರು ತಮ್ಮನ್ನು ತಾವು ನಿರ್ಲಕ್ಷಿಸಲು ಪ್ರಾರಂಭಿಸುತ್ತಾರೆ, ದೈನಂದಿನ ಚಟುವಟಿಕೆಗಳಾದ ಆಹಾರ, ಸ್ನಾನ, ಗಡ್ಡ ಬೋಳಿಸುವುದು, ಸ್ನೇಹಿತರನ್ನು ಭೇಟಿಯಾಗುವುದು ಮತ್ತು ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸುವುದನ್ನು ಬಿಟ್ಟುಬಿಡುತ್ತಾರೆ” ಎಂದು ಡಾ ಅಲ್ಮೀಡಿಯಾ ಹೇಳುತ್ತಾರೆ.

ತೀವ್ರತರವಾದ ವ್ಯಸನದ ಪ್ರಕರಣಗಳಲ್ಲಿ, ಅವರಲ್ಲಿ ವರ್ತನೆಯ ಬದಲಾವಣೆಗಳು, ಖಿನ್ನತೆ, ಆತಂಕ ಮತ್ತು ಅಗ್ರೆಸೀವ್‌ನಂತಹ ಲಕ್ಷಣಗಳು ಕಂಡುಬರಬಹುದು.

ಯುವಜನರಲ್ಲಿ ಅಸ್ವಸ್ಥತೆಗೆ ಕಾರಣವಾಗಿರುವ ವಿಡಿಯೋ ಗೇಮ್ ಬಳಕೆಯ ಕುರಿತಾದ ಅಧ್ಯಯನವು, ಈ ರೀತಿಯ ಆಟಗಳಲ್ಲಿ ಹೆಚ್ಚು ತೊಡಗಿಕೊಳ್ಳುವುದರಿಂದ, ಸಾಮಾಜಿಕ ಸಾಮರ್ಥ್ಯ ತಗ್ಗುವುದು ಮಾತ್ರವಲ್ಲ, ಆಟದಿಂದ ದೊರಕುವ ಅಧಿಕ ಮಟ್ಟದ ಪ್ರಚೋದನೆಯು ಆಟಗಾರನಿಗೆ ರೋಗಕಾರಕ ಅಪಾಯಕಾರಿ ಅಂಶವಾಗಿ ಪರಿಣಮಿಸುತ್ತದೆ ಎಂದು ಅಧ್ಯಯನವು ಹೇಳುತ್ತದೆ.  ಖಿನ್ನತೆ, ಆತಂಕ, ಸಾಮಾಜಿಕ ಭಯಗಳು, ಶೈಕ್ಷಣಿಕ ಕಾರ್ಯಕ್ಷಮತೆ ಕುಸಿಯುವುದು ಇವು ರೋಗಕಾರಕ ಗೇಮಿಂಗ್‌ನ ಕೆಟ್ಟ ಪರಿಣಾಮಗಳು.

“ಜೂಜಾಟವು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ತೊಳಲಾಟ ಆತಂಕ, ಖಿನ್ನತೆ, ಮೈಗ್ರೇನ್, ಒಬ್ಸೆಸಿವ್ ಡಿಸಾರ್ಡರ್‌ಗಳು, ಕರುಳಿನ ಅಸ್ವಸ್ಥತೆಗಳು ಮತ್ತು ವ್ಯಕ್ತಿತ್ವದ ಅಸಹಜತೆಗಳಂತಹ ಸಮಸ್ಯೆಗಳು ಜೂಜುಕೋರರಲ್ಲಿ ಕಂಡುಬರುತ್ತವೆ. ವ್ಯಕ್ತಿಯಲ್ಲಿ ಈಗಾಗಲೇ ಇರುವ ಮಾನಸಿಕ ಆರೋಗ್ಯ ತೊಂದರೆಗಳು ಜೂಜಾಟದಿಂದಾಗಿ ಬಿಗಡಾಯಿಸುತ್ತವೆ. ವಿಶೇಷವಾಗಿ ಕೆಲವು ವ್ಯಕ್ತಿಗಳಲ್ಲಿ ಅವರು ಹತಾಶೆಯಲ್ಲಿರುವಾಗ, ಸ್ವಯಂ-ಹಾನಿ ಮತ್ತು ಆತ್ಮಹತ್ಯಾ ಆಲೋಚನೆಗಳಿಗೆ ಮತ್ತು ಮಾದಕ ವ್ಯಸನಗಳಿಗೆ ಕಾರಣವಾಗಬಹುದು,” ಎಂದು ಡಾ.ನಾಗಭೀರವ ಅವರು ಹೇಳುತ್ತಾರೆ.

ಆನ್‌ಲೈನ್ ಮತ್ತು ಆಫ್‌ಲೈನ್ ಜೂಜಿನ ನಡುವಿನ ವ್ಯತ್ಯಾಸ

“ಆನ್‌ಲೈನ್ ಕ್ಯಾಸಿನೊಗಳು ಲೈವ್ ಕ್ಯಾಸಿನೊ ಆಟಗಳನ್ನು ಮತ್ತು ವಾಸ್ತವಿಕ ಗೇಮಿಂಗ್ ಅನುಭವವನ್ನು ನೀಡುವುದರೊಂದಿಗೆ, ಸುಲಭವಾಗಿ ಆಟದಲ್ಲಿ ತೊಡಗಲು ಸಾಧ್ಯ ಅನ್ನುವ ಕಾರಣಕ್ಕಾಗಿ ಆಟಗಾರರು ಆನ್‌ಲೈನ್‌ಗಿಂತ ಆಫ್‌ಲೈನ್‌ಗೆ ಆದ್ಯತೆ ನೀಡುತ್ತಾರೆ. ಆದರೆ ಕೆಲವರು ಆನ್ ಲೈನ್ ನಲ್ಲಿ ಸಿಗದಿರುವ ಆಹಾರ-ಪಾನೀಯ,  ಉತ್ಸಾಹ ಮತ್ತು ಸಮಾಜಿಕ ವಾತಾವರಣದ ಆ ಅನುಭವವನ್ನು ಪಡೆಯಲು ಆಫ್ ಲೈನ್ ಕ್ಯಾಸಿನೋಗಳನ್ನು ಬಯಸುತ್ತಾರೆ. ಜವಾಬ್ದಾರಿಯುತ ಜೂಜಿನ ವೈಶಿಷ್ಟ್ಯಗಳ ನೆಲೆಯಲ್ಲಿ ಆನ್‌ಲೈನ್ ಕ್ಯಾಸಿನೊಗಳು ಉತ್ತಮವಾಗಿವೆ. ನಿಮ್ಮ ಬೆಟ್ಟಿಂಗ್ ಮೊತ್ತ, ಆಟದ ಸಮಯ, ಠೇವಣಿ ಮತ್ತು ಇತರವುಗಳನ್ನು ನೀವು ಮಿತಿಗೊಳಿಸಬಹುದಾದ ಹಲವು ವೈಶಿಷ್ಟ್ಯಗಳನ್ನು ಅವು ಹೊಂದಿವೆ. ಅಂತಹ ಅಂಶಗಳು ಆಫ್‌ಲೈನ್ ಕ್ಯಾಸಿನೊಗಳಲ್ಲಿ ಲಭ್ಯವಿಲ್ಲ” ಎಂದು ಎಂದು ಡಾ ನಾಗಾಭಿರವ ಅವರು ಹೇಳುತ್ತಾರೆ.

ಗೇಮಿಂಗ್ ಮತ್ತು ಜೂಜಿನ ಚಿಕಿತ್ಸೆ

“ಗೇಮಿಂಗ್ ಚಟ ಹೆಚ್ಚಾಗಿ ಯುವಕರಲ್ಲಿ ಕಂಡು ಬಂದರೆ, ಜೂಜಾಟವು ಯುವಕರಿಗಿಂತ ಹಿರಿಯ ವಯಸ್ಕರಲ್ಲಿ ಹೆಚ್ಚು ಕಂಡುಬರುತ್ತದೆ ಸಣ್ಣ ಪ್ರಮಾಣದಲ್ಲಿ ಗೇಮಿಂಗ್ ಚಟ ಹೊಂದಿರುವ ಯುವಕರನ್ನು ಸಲಹೆ ಮತ್ತು ನಡವಳಿಕೆಯ ಬದಲಾವಣೆಗಳ ಮೂಲಕ ಸರಿಪಡಿಸಬಹುದು. ಮಧ್ಯಮದಿಂದ ತೀವ್ರ ವ್ಯಸನ ಹೊಂದಿರುವವರು, ವ್ಯಸನದಿಂದ ಮುಕ್ತರಾಗಲು ಔಷಧಿಗಳ ಅಗತ್ಯವಿರುತ್ತದೆ ಮತ್ತು ಗೇಮಿಂಗ್ ಅನ್ನು ತೊರೆಯಲು ವ್ಯಸನ ಮುಕ್ತ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ” ಎಂದು ಡಾ ಅಲ್ಮೀಡಿಯಾ ಹೇಳುತ್ತಾರೆ.

“ಹೆಚ್ಚಿನ ಜನರು ತಾವು ವ್ಯಸನಿಗಳಾಗಿದ್ದೇವೆ ಎಂದು ಒಪ್ಪಿಕೊಳ್ಳದ ಕಾರಣ ಕಂಪಲ್ಸಿವ್ ಜೂಜಿನ ಚಿಕಿತ್ಸೆಯು ಬಹಳ ಕಷ್ಟಕರವಾಗಿರುತ್ತದೆ ಮತ್ತು ನಿಧಾನಗೊಳ್ಳುತ್ತದೆ. ತಮಗಿರುವ ಸಮಸ್ಯೆಯನ್ನು ಒಪ್ಪಿಕೊಳ್ಳುವುದು ಚಿಕಿತ್ಸೆಯ ಬಹು ಮಹತ್ವದ ಅಂಶ. ಗ್ಯಾಂಬ್ಲರ್ಸ್ ಅನಾನಿಮಸ್, ಔಷಧಿಗಳು ಮತ್ತು ಚಿಕಿತ್ಸೆ – ಹೀಗೆ ಚಿಕಿತ್ಸೆಗೆ ಸಹಾಯ ಮಾಡುವಂತಹ 12-ಹಂತದ ಕಾರ್ಯಕ್ರಮವಿದ್ದು, ಸರಿಯಾದ ಚಿಕಿತ್ಸೆಯ ಮೂಲಕ ಜೂಜಿನ ಚಟವನ್ನು ನಿಭಾಯಿಸಬಹುದು” ಎಂದು ಡಾ ನಾಗಾಭಿರವ ಹೇಳುತ್ತಾರೆ.

 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ