0

0

0

ಈ ಲೇಖನದಲ್ಲಿ

ಸೈಕ್ಲಿಂಗ್ ಅಥವಾ ವಾಕಿಂಗ್: ತೂಕ ಕಡಿಮೆಯಾಗೋಕೆ ಯಾವುದು ಬೆಸ್ಟ್? 
25

ಸೈಕ್ಲಿಂಗ್ ಅಥವಾ ವಾಕಿಂಗ್: ತೂಕ ಕಡಿಮೆಯಾಗೋಕೆ ಯಾವುದು ಬೆಸ್ಟ್? 

ಸೈಕ್ಲಿಂಗ್ ಮತ್ತು ವಾಕಿಂಗ್ ಎರಡೂ ಉತ್ತಮ ಹೃದಯರಕ್ತನಾಳದ ಚಟುವಟಿಕೆಗಳಾಗಿವೆ, ಎರಡೂ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ  
ಸೈಕ್ಲಿಂಗ್ ಅಥವಾ ವಾಕಿಂಗ್
ಚಿತ್ರ: ಅನಂತ ಸುಬ್ರಮಣ್ಯಂ ಕೆ/ಹ್ಯಾಪಿಯೆಸ್ಟ್ ಹೆಲ್ತ್

ಸೈಕ್ಲಿಂಗ್ ಅಥವಾ ವಾಕಿಂಗ್ ಜನರ ದೈನಂದಿನ ಪ್ರಯಾಣ ಭಾಗವಾಗಿದ್ದ ಕಾಲವಿತ್ತು. ಕಾಲಕ್ರಮೇಣ ಸೌಕರ್ಯಗಳು ಹೆಚ್ಚಾದಂತೆ ಅವುಗಳೀಗ ಹವ್ಯಾಸ ಅಥವಾ ವ್ಯಾಯಾಮದ ಭಾಗವಾಗಿ ಮಾರ್ಪಟ್ಟಿವೆ.  ಈಗಿನ ಕಾಲದಲ್ಲಿ ಜನರು ಜಡ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ತಜ್ಞರು ಈ ಚಟುವಟಿಕೆಗಳನ್ನು ದೈನಂದಿದ ದಿನಚರಿಯ ಭಾಗವಾಗಿಸಿಕೊಳ್ಳಲು ಶಿಫಾರಸು ಮಾಡುತ್ತಾರೆ. ಅವುಗಳನ್ನು ವ್ಯಾಯಾಮದ ಭಾಗವಾಗಿಸಿಕೊಳ್ಳುವುದು ಅಥವಾ ಕೆಲಸಗಳಿಗಾಗಿ ಪ್ರಯಾಣಿಸುವುದು ನಡೆಯುವುದು ಅಥವಾ ಸೈಕ್ಲಿಂಗ್ ಮಾಡುವುದು ಕೂಡ ಉತ್ತಮ ಆಯ್ಕೆಯಾಗಿದೆ.  

 ದೇಹದ ಮೇಲೆ ಈ ಎರಡು ಚಟುವಟಿಕೆಗಳ ಸಕಾರಾತ್ಮಕ ಪರಿಣಾಮವು ಒಂದೇ ಆಗಿರುತ್ತದೆ. ಆದರೆ ಈ ಚಟುವಟಿಕೆ ಮಾಡುವವರ ಡೈನಾಮಿಕ್ಸ್, ವ್ಯಾಯಾಮ ಶರೀರಶಾಸ್ತ್ರ ಮತ್ತು ಬಯೋಮೆಕಾನಿಕ್ಸ್, ಮತ್ತು ತಾಲೀಮು ಮತ್ತು ಕ್ಯಾಲೋರಿ ಸೇವನೆಯ ವಿಷಯದಲ್ಲಿ  ವಿಭಿನ್ನವಾಗಿ ಫಲಿತಾಂಶ ನೀಡುತ್ತದೆ. ಹಾಗಾಗಿ ನಮಗೆ ಉದ್ಭವಿಸುವ  ಪ್ರಮುಖ ಪ್ರಶ್ನೆ,  ಸೈಕ್ಲಿಂಗ್ ಅಥವಾ ವಾಕಿಂಗ್ — ಯಾವುದು ಉತ್ತಮ? 

ಸೈಕ್ಲಿಂಗ್ ಅಥವಾ ವಾಕಿಂಗ್ : ಪ್ರಯೋಜನಗಳು 

ಸೈಕ್ಲಿಂಗ್ ಮತ್ತು ವಾಕಿಂಗ್ ಎರಡನ್ನೂ ಚಟುವಟಿಕೆಗಳಾಗಿ ವರ್ಗೀಕರಿಸಲಾಗಿದೆ ಮತ್ತು ಇವುಗಳಲ್ಲಿ ಆರೋಗ್ಯ ಪ್ರಯೋಜನಗಳಿವೆ. ಇವು ಹೃದಯರಕ್ತನಾಳದ ಫಿಟ್‌ನೆಸ್ ಅನ್ನು ಸುಧಾರಿಸುತ್ತದೆ, ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ, ಮನಸ್ಥಿತಿ ಮತ್ತು ಮಾನಸಿಕ ಯೋಗಕ್ಷೇಮ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ.  ಹೃದ್ರೋಗ ಮತ್ತು ಮಧುಮೇಹದಂತಹ ದೀರ್ಘಕಾಲದ ಪರಿಸ್ಥಿತಿಗಳ ಸಂಭಾವ್ಯ ಅಪಾಯಗಳನ್ನು ಕಡಿಮೆ ಮಾಡುತ್ತದೆ.  

 “ಸೈಕ್ಲಿಂಗ್ ನಿಮ್ಮ ಸಹಿಷ್ಣುತೆಯ ಮಟ್ಟವನ್ನು ನಿರ್ಮಿಸುತ್ತದೆ. ಇದು ಹೃದಯ ಮತ್ತು ಶ್ವಾಸಕೋಶಕ್ಕೂ ಒಳ್ಳೆಯದು. ಇದು ರಕ್ತದ ಹರಿವು ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕ್ವಾಡ್ರೈಸ್ಪ್ಸ್ ಅಥವಾ ಕ್ವಾಡ್ಗಳ ಬಲವನ್ನು ಹೆಚ್ಚಿಸುತ್ತದೆ.” ಎಂದು ಬೆಂಗಳೂರಿನ ದಿ ಔಟ್‌ಫಿಟ್ ಜಿಮ್‌ನ ಫಿಟ್‌ನೆಸ್ ತರಬೇತುದಾರರಾದ ದೀಕ್ಷಿತ್ ಗೌಡ ಹಂಚಿಕೊಳ್ಳುತ್ತಾರೆ. 

 ಸೈಕ್ಲಿಂಗ್ ಮಾಡಿದರೆ ಪ್ರಾಥಮಿಕವಾಗಿ ಕ್ವಾಡ್ಗಳು, ಮಂಡಿರಜ್ಜುಗಳು ಮತ್ತು ಕಾಲ್ವ್ಸ್ ಹೀಗೆ ಕಾಲಿನ ಸ್ನಾಯುಗಳನ್ನು ಕೆಲಸ ಮಾಡುತ್ತದೆ. ಮತ್ತೊಂದೆಡೆ, ವಾಕಿಂಗ್, ದೇಹದ ಕೆಳಭಾಗ, ಕೋರ್ ಮತ್ತು ಸ್ವಲ್ಪ ಮಟ್ಟಿಗೆ ಮೇಲಿನ ದೇಹದ ಸ್ನಾಯುಗಳನ್ನು ಒಳಗೊಂಡಂತೆ ವಿಶಾಲವಾದ ಸ್ನಾಯುಗಳನ್ನು ತೊಡಗಿಸುತ್ತದೆ. ನೀವು ಪೂರ್ಣ-ದೇಹದ (ಫುಲ್ ಬಾಡಿ ಫಿಟ್ನೆಸ್) ತಾಲೀಮುಗಾಗಿ ಹುಡುಕುತ್ತಿದ್ದರೆ, ವಾಕಿಂಗ್ ಹೆಚ್ಚು ಪರಿಣಾಮಕಾರಿಯಾಗಿದೆ ಏಕೆಂದರೆ ಅದು ಅನೇಕ ಸ್ನಾಯು ಗುಂಪುಗಳನ್ನು ತೊಡಗಿಸುತ್ತದೆ. 

 “ಕ್ವಾಡ್ರೈಸ್ಪ್ಸ್ ಗ್ಯಾಸ್ಟ್ರೊಕ್ನೆಮಿಯಸ್ ಸ್ನಾಯು (ಕಾಲು ಸ್ನಾಯು ಭಂಗಿ ಮತ್ತು ಎಚ್ಚರದಲ್ಲಿ ಹೆಚ್ಚು ತೊಡಗಿಸಿಕೊಂಡಿದೆ) ಎರಡೂ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ನಡೆಯುವಾಗ, ನೀವು ಚುರುಕಾಗಿ ನಡೆಯುತ್ತಿದ್ದರೆ ಅಥವಾ ಹೆಚ್ಚಿನ ವೇಗದಲ್ಲಿ ಚಲಿಸದಿದ್ದರೆ ಈ ಸ್ನಾಯುಗಳಲ್ಲಿ ಕಡಿಮೆ ಬಳಕೆಯಾಗುತ್ತದೆ. ಸೈಕ್ಲಿಂಗ್‌ನಲ್ಲಿ, ಲೋಡ್ ಪ್ರಾಥಮಿಕವಾಗಿ ಕ್ವಾಡ್‌ಗಳ ಮೇಲೆ ಇರುತ್ತದೆ” ಎಂದು ದೀಕ್ಷಿತ್ ಗೌಡ ತಿಳಿಸುತ್ತಾರೆ.  

 ತೂಕ ಕಡಿಮೆ ಮಾಡಲು ಸೈಕ್ಲಿಂಗ್ ಮತ್ತು ವಾಕಿಂಗ್ 

ಸೈಕ್ಲಿಂಗ್ ಮತ್ತು ವಾಕಿಂಗ್ ಎರಡರ ಕ್ಯಾಲೋರಿ ಬರ್ನಿಂಗ್  ಸಾಮರ್ಥ್ಯವು ಅವುಗಳ ಅವಧಿ, ತೀವ್ರತೆ ಮತ್ತು ವೈಯಕ್ತಿಕ ಫಿಟ್‌ನೆಸ್ ಮಟ್ಟಗಳು ಸೇರಿದಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಹೆಚ್ಚಿನ-ತೀವ್ರತೆಯ ಸೈಕ್ಲಿಂಗ್ ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು, ಇದು ಚಟುವಟಿಕೆಯ ಸಮಯದಲ್ಲಿ ಹೆಚ್ಚು ಕೊಬ್ಬು ನಷ್ಟಕ್ಕೆ ಕಾರಣವಾಗುತ್ತದೆ. ಸತತವಾಗಿ ಮತ್ತು ದೀರ್ಘಾವಧಿಯವರೆಗೆ ನಡೆಯುವಾಗ ಕೊಬ್ಬು ನಷ್ಟಕ್ಕೆ ವಾಕಿಂಗ್ ಪರಿಣಾಮಕಾರಿಯಾಗಿದೆ. 

  “ವಾಕಿಂಗ್ ಮತ್ತು ಸೈಕ್ಲಿಂಗ್ ಎರಡೂ ಕೊಬ್ಬನ್ನು ಸುಡಲು ಕೊಡುಗೆ ನೀಡುತ್ತವೆ. “ಅವು ಏರೋಬಿಕ್ ವ್ಯಾಯಾಮಗಳಾಗಿವೆ, ಅದು ಕೊಬ್ಬಿನಂತೆ ಸಂಗ್ರಹಿಸಲಾದ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.”” ಎಂದು ಬೆಂಗಳೂರಿನ FITTR ನಲ್ಲಿ ಫಿಟ್‌ನೆಸ್ ತರಬೇತುದಾರರು ಮತ್ತು ಪೌಷ್ಟಿಕತಜ್ಞರಾದ ಬಿಸ್ವಜಿತ್ ಸಾಹೂ ಹೇಳುತ್ತಾರೆ.  

 ನಿರ್ದಿಷ್ಟವಾಗಿ ಹೊಟ್ಟೆಯ ಕೊಬ್ಬನ್ನು ಗುರಿಯಾಗಿಸಲು, ವ್ಯಾಯಾಮದೊಂದಿಗೆ ಕಡಿಮೆ ಕ್ಯಾಲೋರಿ ಇರುವ  ಆಹಾರವನ್ನು ನಿರ್ವಹಿಸುವುದು ಮುಖ್ಯವಾಗಿದೆ. ಹೆಚ್ಚಿನ ತೀವ್ರತೆಯ ಸೈಕ್ಲಿಂಗ್ ಕ್ಯಾಲೊರಿಗಳನ್ನು ಬರ್ನ್ ಮಾಡುವಲ್ಲಿ ಸ್ವಲ್ಪ ಹೆಚ್ಚು ಪರಿಣಾಮಕಾರಿ ಎನ್ನಿಸಬಹುದು. ಆದರೆ ಕೊಬ್ಬಿನ ನಷ್ಟಕ್ಕೆ ಸ್ಥಿರತೆ ಹೆಚ್ಚು ಮುಖ್ಯವಾಗಿದೆ ಎನ್ನುವುದನ್ನು ಗಮನಿಸಬೇಕು.  

 ಯಾವುದು ಹೆಚ್ಚು ಶಕ್ತಿ ನೀಡುತ್ತದೆ? 

ವಾಕಿಂಗ್ ಮತ್ತು ಸೈಕ್ಲಿಂಗ್ ಸ್ನಾಯುಗಳ ಸಹಿಷ್ಣುತೆ ಮತ್ತು ಶಕ್ತಿಯನ್ನು ಸುಧಾರಿಸಲು, ವಿಶೇಷವಾಗಿ ಕೆಳಗಿನ ದೇಹ ಮತ್ತು ಕೋರ್ನಲ್ಲಿ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಆದರೆ ಸ್ನಾಯುಗಳ ಬಲವನ್ನು (ಮಸಲ್ ಬಿಲ್ಡ್)  ನಿರ್ಮಿಸುವುದು ನಿಮ್ಮ ಗುರಿಯಾಗಿದ್ದರೆ, ಸೈಕ್ಲಿಂಗ್ ಮತ್ತು ವಾಕಿಂಗ್ ಪರಿಣಾಮಕಾರಿಯಾಗಿರುವುದಿಲ್ಲ ಏಕೆಂದರೆ ಅವುಗಳು ಹೃದಯರಕ್ತನಾಳದ ಫಿಟ್ನೆಸ್ ಮತ್ತು ಸಹಿಷ್ಣುತೆಯ ಮೇಲೆ ಕೇಂದ್ರೀಕರಿಸುತ್ತವೆ. ಅಂತಹ ಗುರಿಯನ್ನು ಸಾಧಿಸಲು ತೂಕ ಅಥವಾ ಪ್ರತಿರೋಧ ತರಬೇತಿಯೊಂದಿಗೆ ಸಾಮರ್ಥ್ಯ ತರಬೇತಿ ವ್ಯಾಯಾಮಗಳು ಹೆಚ್ಚು ಸೂಕ್ತವಾಗಿವೆ. 

 ಸೈಕ್ಲಿಂಗ್ ಮತ್ತು ನಡಿಗೆಯಂತಹ ಸೌಮ್ಯವಾದ ವ್ಯಾಯಾಮಗಳೊಂದಿಗೆ ಕಾಲಿನ ಸ್ನಾಯುಗಳು ಅಭಿವೃದ್ಧಿ ಹೊಂದುತ್ತವೆಯಾದರೂ, ತಜ್ಞರು ಅದನ್ನು ಉತ್ತಮ ತೂಕದ ತರಬೇತಿ ದಿನಚರಿಯೊಂದಿಗೆ ಮಿಶ್ರಣ ಮಾಡಲು ಶಿಫಾರಸು ಮಾಡುತ್ತಾರೆ. ಇದು ಶಕ್ತಿ (ಸ್ಟ್ರೆಂಥ್) ಮತ್ತು ಹೃದಯರಕ್ತನಾಳದ ಫಿಟ್ನೆಸ್ ಎರಡರಲ್ಲೂ ದೇಹದ ಒಟ್ಟಾರೆ ಬೆಳವಣಿಗೆಯನ್ನು ಖಾತ್ರಿಗೊಳಿಸುತ್ತದೆ. 

 ಗಾಯದಿಂದ ಚೇತರಿಸಿಕೊಳ್ಳುವಾಗ ಯಾವ ಚಟುವಟಿಕೆ ಉತ್ತಮ? 

ಗಾಯದ ನಂತರ ಯಾವುದೇ ದೈಹಿಕ ಚಟುವಟಿಕೆಯನ್ನು ಪ್ರಾರಂಭಿಸುವ ಮೊದಲು  ವೈದ್ಯರ ಸಲಹೆ ಕೇಳಬೇಕು. ಗಾಯದಿಂದ ಚೇತರಿಸಿಕೊಂಡ ನಂತರ ಸೈಕ್ಲಿಂಗ್ ಮತ್ತು ವಾಕಿಂಗ್ ನಡುವಿನ ಆಯ್ಕೆಯು ಗಾಯದ ಸ್ವರೂಪವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ವಾಕಿಂಗ್ ಕಡಿಮೆ ಪರಿಣಾಮ ಬೀರುತ್ತದೆ ಮತ್ತು ಪುನರಾರಂಭಿಸಲು ಸುರಕ್ಷಿತ ಆಯ್ಕೆಯಾಗಿರಬಹುದು. ಎಂದು ಸಾಹೂ ಹೇಳುತ್ತಾರೆ. ಮೊಣಕಾಲಿನ ಅಂಗಾಂಶಕ್ಕೆ ಗಾಯಗಳಿಂದ ಚೇತರಿಸಿಕೊಳ್ಳುವವರಿಗೆ ಅಥವಾ ಮೊಣಕಾಲು ಗಾಯಗೊಂಡರೆ ಸೈಕ್ಲಿಂಗ್ ಅನ್ನು ಸಹ ಬಳಸಿಕೊಳ್ಳಬಹುದು 

 ಯಾವ ಚಟುವಟಿಕೆಯು ನಿಮ್ಮ ದಿನಚರಿಯ ಭಾಗವಾಗಬೇಕು? 

ಚಟುವಟಿಕೆಯು ನಿಮ್ಮ ದೈನಂದಿನ ದಿನಚರಿಯ ಭಾಗವಾಗಿದೆಯೇ ಎಂಬುದರಲ್ಲಿ ಅನುಕೂಲಕರ ಅಂಶವು ವೈಯಕ್ತಿಕ ಆದ್ಯತೆಗಳು ಮತ್ತು ಸಂದರ್ಭಗಳನ್ನು ಅವಲಂಬಿಸಿರುತ್ತದೆ. “ನಡಿಗೆಯು ಸಾಮಾನ್ಯವಾಗಿ ಸುಲಭ ಮತ್ತು ಹೆಚ್ಚಿನ ಸಲಕರಣೆಗಳ ಅಗತ್ಯವಿರುವುದಿಲ್ಲ ಮತ್ತು ಅದನ್ನು ನೀವು ಎಲ್ಲಿ ಬೇಕಾದರೂ ಮಾಡಬಹುದು.  ಆದರೆ ಸೈಕ್ಲಿಂಗ್‌ಗೆ ಸೈಕಲ್ (ಬೈಕ್) ಮತ್ತು ಕೆಲವು ಸಂದರ್ಭಗಳಲ್ಲಿ ನಿರ್ದಿಷ್ಟ ಭೂಪ್ರದೇಶ ಅಥವಾ ಮೂಲಸೌಕರ್ಯ ಬೇಕಾಗಬಹುದು.  ಸ್ಥಳ ಮತ್ತು ವೈಯಕ್ತಿಕ ಆದ್ಯತೆಗಳನ್ನು ಅವಲಂಬಿಸಿ ಎರಡೂ ಅನುಕೂಲಕರವಾಗಿರುತ್ತದೆ. 

  ಸಾರಾಂಶ  

  • ಸೈಕ್ಲಿಂಗ್ ಮತ್ತು ವಾಕಿಂಗ್ ಉತ್ತಮ ಫಿಟ್‌ನೆಸ್ ಚಟುವಟಿಕೆಗಳಾಗಿವೆ 
  • ಇದು ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಮಧುಮೇಹದಂತಹ ದೀರ್ಘಕಾಲದ ಪರಿಸ್ಥಿತಿಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. 
  • ಸೈಕ್ಲಿಂಗ್ ಮತ್ತು ವಾಕಿಂಗ್ ಎರಡರಲ್ಲೂ ಕ್ಯಾಲೋರಿ ಬರ್ನ್ ಮಾಡುವ ಅವಧಿ, ತೀವ್ರತೆ, ವೈಯಕ್ತಿಕ ಫಿಟ್‌ನೆಸ್ ಮಟ್ಟಗಳು ಮತ್ತು ಸ್ಥಿರತೆ ಸೇರಿದಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. 
  • ಸುಧಾರಿತ ಸ್ನಾಯುವಿನ ಶಕ್ತಿ ಮತ್ತು ಸಹಿಷ್ಣುತೆಯ ಗುರಿಯನ್ನು ಹೊಂದಿರುವವರು ನಿಯಮಿತವಾದ ವಾಕಿಂಗ್ ಮತ್ತು ಸೈಕ್ಲಿಂಗ್ ಜೊತೆಗೆ ತೂಕದ ತರಬೇತಿ ದಿನಚರಿಯನ್ನು ಒಳಗೊಂಡಿರಬೇಕು. 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಲೇಖನ
ಜಾಗತಿಕವಾಗಿ ಕನಿಷ್ಠ 5.4 ಲಕ್ಷ ಹೃದಯ ಸಂಬಂಧಿ ಸಾವುಗಳಿಗೆ ಟ್ರಾನ್ಸ್-ಫ್ಯಾಟಿ ಆಸಿಡ್‌ಗಳಿಂದ ತುಂಬಿದ ಸಂಸ್ಕರಿಸಿದ ಆಹಾರ ಕಾರಣ ಎಂದು ಭಾರತ ಸರ್ಕಾರ ಹೇಳುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ