0

0

0

ವಿಷಯಗಳಿಗೆ ಹೋಗು

ವ್ಯಾಯಾಮದ ನಂತರದ ಸ್ನಾಯು ನೋವಿಗೆ ಲ್ಯಾಕ್ಟಿಕ್ ಆಮ್ಲ ಕಾರಣವಲ್ಲ
3

ವ್ಯಾಯಾಮದ ನಂತರದ ಸ್ನಾಯು ನೋವಿಗೆ ಲ್ಯಾಕ್ಟಿಕ್ ಆಮ್ಲ ಕಾರಣವಲ್ಲ

ವ್ಯಾಯಾಮ ಮಾಡುವಾಗ ಸ್ನಾಯುಗಳನ್ನು ಅವುಗಳ ಮಿತಿಗಿಂತ ಹೆಚ್ಚು ಬಳಸಿದಾಗ, ಸ್ನಾಯುಗಳು ಸಣ್ಣದಾಗಿ ಒಡೆಯುವ ಪರಿಣಾಮವಾಗಿ ವ್ಯಾಯಾಮದ ನಂತರ ಸ್ನಾಯು ನೋವು ಮತ್ತು ದಣಿವು ಉಂಟಾಗುತ್ತದೆ.

ವ್ಯಾಯಾಮ ಮಾಡುವಾಗ ಸ್ನಾಯುಗಳನ್ನು ಅವುಗಳ ಮಿತಿಗಿಂತ ಹೆಚ್ಚು ಬಳಸಿದಾಗ, ಸ್ನಾಯುಗಳು ಸಣ್ಣದಾಗಿ ಒಡೆಯುವ ಪರಿಣಾಮವಾಗಿ ವ್ಯಾಯಾಮದ ನಂತರ ಸ್ನಾಯು ನೋವು ಮತ್ತು ದಣಿವು ಉಂಟಾಗುತ್ತದೆ. ವ್ಯಾಯಾಮದ ನಂತರದ ಸ್ನಾಯುವಿನ ಆಯಾಸ ಮತ್ತು ನೋವಿಗೆ ಸಾಮಾನ್ಯವಾಗಿ ಲ್ಯಾಕ್ಟಿಕ್ ಆಮ್ಲ ಕಾರಣ ಎಂದು  ಹೇಳಲಾಗುತ್ತದೆ, ಆದರೆ ತಜ್ಞರ ಪ್ರಕಾರ  ಮತ್ತು ಇತರ ಸಂಶೋಧನೆಗಳಲ್ಲಿ ಇದು ಸಾಬೀತುಗೊಂಡಿಲ್ಲ.

“ದೈಹಿಕ ಚಟುವಟಿಕೆಯ ಸಮಯದಲ್ಲಿ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಸ್ನಾಯುಗಳಲ್ಲಿ ಆಯಾಸ ಮತ್ತು ನರಗಳ ತುದಿಗಳ ಅತಿಸೂಕ್ಷ್ಮತೆ ಉಂಟಾಗುತ್ತದೆ, ಇದು ನರಮಂಡಲಕ್ಕೆ ಹೆಚ್ಚು ಸಂಬಂಧ ಹೊಂದಿರುತ್ತದೆ” ಎಂದು ಮುಂಬೈನ ಸರ್ HN ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಕ್ರೀಡಾ ಮತ್ತು ವ್ಯಾಯಾಮ ಔಷಧ ಸಮಾಲೋಚಕರಾದ, ಕ್ರಿಸ್ಟೋಫರ್ ಪೆಡ್ರಾ ಹೇಳುತ್ತಾರೆ. “ಆದರೆ, ವ್ಯಾಯಾಮದ ನಂತರ ಸ್ವಲ್ಪ ಸಮಯದವರೆಗೆ ನೋವಿನ ಅನುಭವ ಇರುತ್ತದೆ, ಇದು ಸಾಮಾನ್ಯವಾಗಿ 24 ರಿಂದ 72 ಗಂಟೆಗಳ ನಡುವೆ ತೀವ್ರವಾಗಿರಬಹುದು, ಇದನ್ನು DOMS – Delayed onset muscle soreness ಎಂದು ಕರೆಯಲಾಗುತ್ತದೆ [ವಿಳಂಬವಾಗಿ ಆರಂಭವಾಗುವ ಸ್ನಾಯು ನೋವು]. ಸಾಮಾನ್ಯವಾಗಿ ಸೂಕ್ಷ್ಮ ಸ್ನಾಯುಗಳಿಗೆ ಆಗುವ ಹಾನಿಯ ಕಾರಣದಿಂದ ಈ ನೋವು ಕಾಣಿಸಿಕೊಳ್ಳುತ್ತದೆ [ಸ್ನಾಯುಗಳಲ್ಲಿ ಆಗುವ ಸಣ್ಣ ಮಟ್ಟದ ಒಡೆಯುವಿಕೆ] ಅಂದರೆ ವ್ಯಾಯಾಮದ ಅವಧಿಯಲ್ಲಿ ನೀವು ಅವುಗಳನ್ನು ಬಲವಾಗಿ ತಳ್ಳಿದಾಗ ಈ ರೀತಿ ಆಗುತ್ತದೆ, ನಂತರ ನಿಮ್ಮ ದೇಹದ ಭಾಗವು, ಹೊಂದಿಕೊಳ್ಳುತ್ತಾ, ಬಲಗೊಳ್ಳುತ್ತ ಹೋದಂತೆಲ್ಲಾ, ಬಲವಾದ ಸ್ನಾಯುವಿನ ಫೈಬರ್‌ಗಳನ್ನು ಉತ್ಪಾದಿಸುತ್ತದೆ” ಎಂದು ಅವರು ಹೇಳುತ್ತಾರೆ.

DOMS ಮತ್ತು ಲ್ಯಾಕ್ಟಿಕ್ ಆಮ್ಲ

ತೀವ್ರವಾದ ವ್ಯಾಯಾಮದ ಸಮಯದಲ್ಲಿ ಸಾಕಷ್ಟು ಆಮ್ಲಜನಕವಿಲ್ಲದೆ ಸ್ನಾಯುಗಳು ಕಷ್ಟಪಟ್ಟು ಕೆಲಸ ಮಾಡಿದಾಗ ಲ್ಯಾಕ್ಟಿಕ್ ಆಮ್ಲ ಉತ್ಪತ್ತಿಯಾಗುತ್ತದೆ. DOMS ಅಥವಾ ವ್ಯಾಯಾಮದ ನಂತರದ ಸ್ನಾಯುವಿನ ಆಯಾಸಕ್ಕೆ ಇದೇ ಕಾರಣ ಎಂದು ನಂಬಲಾಗಿದೆ. ಆದರೆ ವಿವಿಧ ಸಂಶೋಧನಾ ಅಧ್ಯಯನಗಳು ಈ ಕಲ್ಪನೆಯನ್ನು ನಿರಾಕರಿಸಿವೆ. ವ್ಯಾಯಾಮದ ಅವಧಿಯಲ್ಲಿ ಉತ್ಪತ್ತಿಯಾಗುವ ಲ್ಯಾಕ್ಟಿಕ್ ಆಮ್ಲವು ನಿಮ್ಮ ಸ್ನಾಯುಗಳಿಂದ ತ್ವರಿತವಾಗಿ ತೆರವುಗೊಳ್ಳುತ್ತದೆ ಮತ್ತು ರಕ್ತ ಪರಿಚಲನೆಯಲ್ಲಿ ಸೇರಿಕೊಳ್ಳುತ್ತದೆ. ನಿಮ್ಮ ಉಸಿರಿನಲ್ಲಿ ಸೇರಿಕೊಂಡ ಅದನ್ನು ಶಕ್ತಿಯಾಗಿಯೂ ಬಳಸಬಹುದು – ಎಂಬ ವಾದವೂ ಇದೆ.

“ನೀವು ಸಕ್ರಿಯರಾಗಿರುವಾಗ, ನಿಮ್ಮ ಜೀವಕೋಶಗಳು ಶಕ್ತಿಗಾಗಿ ಗ್ಲೂಕೋಸ್ ಅನ್ನು ವಿಭಜಿಸುತ್ತವೆ. ಆದರೆ, ಆ ಪ್ರಕ್ರಿಯೆಯ ‘ತ್ಯಾಜ್ಯ ಉತ್ಪನ್ನ’ ಎನಿಸಿಕೊಂಡಿರುವ “ಲ್ಯಾಕ್ಟೇಟ್” ತನ್ನದೇ ಆದ ಶಕ್ತಿಯನ್ನು ಉತ್ಪಾದಿಸುತ್ತದೆ” – ಎಂದು ಪೆಡ್ರಾ ಹೇಳುತ್ತಾರೆ. “ನಿಮ್ಮ ಮೆದುಳು, ಯಕೃತ್ತು, ಸ್ನಾಯುಗಳು ಮತ್ತು ಹೃದಯದಂತಹ ಕೆಲವು ಅಂಗಗಳು ಆ ಲ್ಯಾಕ್ಟೇಟ್ ಅಣುಗಳನ್ನು ಶಕ್ತಿಗಾಗಿ ನೇರವಾಗಿ ಬಳಸಿಕೊಳ್ಳಬಹುದು. ಜೊತೆಗೆ, ಅವನ್ನು ಮತ್ತೆ ಯಕೃತ್ತಿಗೆ ಸಾಗಿಸಬಹುದು ಮತ್ತು ಪೈರುವೇಟ್ ಆಗಿ ಪರಿವರ್ತಿಸಬಹುದು [ಗ್ಲೂಕೋಸ್ ಚಯಾಪಚಯ ಕ್ರಿಯೆಯ ಉಪಉತ್ಪನ್ನ] ಮತ್ತು ನಂತರ ಅದು ಪರಿಚಲನೆಯಲ್ಲಿ ಗ್ಲೂಕೋಸ್‌ ಆಗಿ ಸೇರಿಕೊಳ್ಳಬಹುದು. ಆದ್ದರಿಂದ, ಇದು ನಿಮ್ಮ ಶರೀರದಿಂದ ಅಥವಾ ಶಾರೀರಿಕ ಪ್ರಕ್ರಿಯೆಯಿಂದ ತೆರವುಗೊಳಿಸಬೇಕಾದ ವಿಷಯವಲ್ಲ” – ಎಂದು ಅವರು ವಿವರಿಸುತ್ತಾರೆ.

ದಿ ಫಿಸಿಶಿಯನ್ ಅಂಡ್ ಸ್ಪೋರ್ಟ್ಸ್‌ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧದಲ್ಲಿ, ಶ್ವೇನ್ JA ಮತ್ತು ಇತರರು ಲ್ಯಾಕ್ಟಿಕ್ ಆಮ್ಲದ ಉತ್ಪತ್ತಿಯಿಂದಾಗಿ ಓಟದ ನಂತರ DOMS ಉಂಟಾಗುತ್ತದೆ ಎಂಬ ಕಲ್ಪನೆಯ ನಿಖರತೆಯನ್ನು ಪರೀಕ್ಷಿಸಿದ್ದಾರೆ. ಭಾಗವಹಿಸುವವರ ರಕ್ತದ ಲ್ಯಾಕ್ಟಿಕ್ ಆಮ್ಲದ ಮಟ್ಟವನ್ನು ಟ್ರೆಡ್‌ಮಿಲ್‌ನಲ್ಲಿ ಓಡುವ ಮೊದಲು, ಓಡುವ ಸಮಯದಲ್ಲಿ ಮತ್ತು ನಂತರ ಅಳೆಯಲಾಗುತ್ತದೆ (ಎರಡೂ ಮಟ್ಟ ಮತ್ತು ಕುಸಿತ). ಹೆಚ್ಚುವರಿಯಾಗಿ, ಓಟದ ನಂತರ ವಿವಿಧ ಸಮಯದ ಮಧ್ಯಂತರಗಳಲ್ಲಿ (24, 48 ಮತ್ತು 72 ಗಂಟೆಗಳ) ಸ್ನಾಯು ನೋವನ್ನು ರೇಟ್ ಮಾಡಲು ಅವರನ್ನು ಕೇಳಲಾಯಿತು. ನೋವು ಉಂಟಾದ ಹೊರತಾಗಿಯೂ ಓಟಗಾರರಲ್ಲಿ ಲ್ಯಾಕ್ಟಿಕ್ ಆಮ್ಲದ ಸಾಂದ್ರತೆ ಹೆಚ್ಚಾಗಲಿಲ್ಲ, ಈ ಫಲಿತಾಂಶವು ವ್ಯಾಯಾಮ-ಪ್ರೇರಿತ DOMS ಗೆ ಸಂಬಂಧಿಸಿಲ್ಲ ಎಂಬ ಅಂಶವನ್ನು ಸೂಚಿಸುತ್ತದೆ.

ಮಸಾಜ್ ಮತ್ತು ಲ್ಯಾಕ್ಟಿಕ್ ಆಮ್ಲ

ಮಸಾಜ್‌ಗಳು ರಕ್ತದ ಹರಿವನ್ನು ಸುಧಾರಿಸುವ ಮೂಲಕ ಮತ್ತು ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಸ್ನಾಯುವಿಗೆ ನೋವಿನಿಂದ ವಿಶ್ರಾಂತಿ ಮತ್ತು ತಾತ್ಕಾಲಿಕ ಪರಿಹಾರವನ್ನು ನೀಡಬಹುದಾದರೂ, ಅವು ಸ್ನಾಯುಗಳಿಂದ ಲ್ಯಾಕ್ಟಿಕ್ ಆಮ್ಲವನ್ನು ಪರಿಣಾಮಕಾರಿಯಾಗಿ ತೆರವುಗೊಳಿಸುತ್ತವೆ ಎಂಬ ಕಲ್ಪನೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

“ನಿಮ್ಮ ದೇಹವು ಹೋಮಿಯೋಸ್ಟಾಸಿಸ್ ಸ್ಥಿತಿಯನ್ನು ನಿರ್ವಹಿಸುತ್ತದೆ, ನಿಮ್ಮ ರಕ್ತಪ್ರವಾಹದಲ್ಲಿ ನಿರ್ದಿಷ್ಟ ಮಟ್ಟದ ಲ್ಯಾಕ್ಟೇಟ್ ಅನ್ನು ಉಳಿಸಿಕೊಳ್ಳುತ್ತದೆ. ಸಬ್‌ಮ್ಯಾಕ್ಸಿಮಲ್ ವ್ಯಾಯಾಮದ ಸಂದರ್ಭದಲ್ಲಿ ಇದು ಅದರ ಸಾಮಾನ್ಯ ಸಾಂದ್ರತೆಯನ್ನು ಹಲವು ಪಟ್ಟು ಹೆಚ್ಚಿಸಬಹುದು” ಎಂದು ಪೆಡ್ರಾ ಹೇಳುತ್ತಾರೆ.

ರಕ್ತ ಪರಿಚಲನೆ ಮತ್ತು ಚಯಾಪಚಯ ಕ್ರಿಯೆಯಂತಹ ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ಲ್ಯಾಕ್ಟಿಕ್ ಆಮ್ಲವನ್ನು ಸಾಮಾನ್ಯವಾಗಿ ದೇಹದಿಂದ ತೆರವುಗೊಳಿಸಲಾಗುತ್ತದೆ. ” ದೇಹದಲ್ಲಿ ಲ್ಯಾಕ್ಟಿಕ್ ಆಮ್ಲದ ಇರುವಿಕೆ ಆರೋಗ್ಯಕರವಲ್ಲ ಎಂದು ನಂಬಿರುವ ಜನರು, ಲ್ಯಾಕ್ಟಿಕ್ ಆಮ್ಲವನ್ನು ಹೊರಹಾಕಲು ಮಸಾಜ್ ಮತ್ತು ಇತರ ತಂತ್ರಗಳನ್ನು ಅವಲಂಬಿಸಿದ್ದಾರೆ, ಆದರೆ ಇದು ನಿಜವಲ್ಲ. ನಿಮ್ಮ ದೇಹವು ಅಧಿಕ ಲ್ಯಾಕ್ಟೇಟ್ ಸಾಂದ್ರತೆಯನ್ನು ಶಕ್ತಿಯಾಗಿ ಬಳಸುವ ಮೂಲಕ ಅಥವಾ ನಿಮ್ಮ ತಾಲೀಮು ಅವಧಿಯ ಸುಮಾರು ಒಂದು ಗಂಟೆಯ ನಂತರ ಅದನ್ನು ತೆರವುಗೊಳಿಸುವ ಮೂಲಕ ಅದರ ಸಾಮಾನ್ಯ ವಿಶ್ರಾಂತಿ ಮಟ್ಟಕ್ಕೆ ಇಳಿಸುತ್ತದೆ” ಪೆಡ್ರಾ ಹೇಳುತ್ತಾರೆ.

ಸಾರಾಂಶ

  • ತಜ್ಞರು ಮತ್ತು ಸಂಶೋಧನೆಯ ಪ್ರಕಾರ, ವ್ಯಾಯಾಮದ ನಂತರ ಸ್ನಾಯು ನೋವು ಮತ್ತು ಆಯಾಸಕ್ಕೆ ಲ್ಯಾಕ್ಟಿಕ್ ಆಮ್ಲವು ಕಾರಣವಾಗಿರುವುದಿಲ್ಲ.
  • ಲ್ಯಾಕ್ಟೇಟ್ ತನ್ನದೇ ಆದ ಶಕ್ತಿಯನ್ನು ಉತ್ಪಾದಿಸುತ್ತದೆ, ಇದನ್ನು ಮೆದುಳು, ಯಕೃತ್ತು, ಸ್ನಾಯುಗಳು ಮತ್ತು ಹೃದಯದಂತಹ ಹಲವಾರು ಅಂಗಗಳು ಬಳಸಿಕೊಳ್ಳಬಹುದು.
  • ಮಸಾಜ್‌ನಿಂದ ಲ್ಯಾಕ್ಟಿಕ್ ಆಮ್ಲದ ಮೇಲೆ ಪರಿಣಾಮವಾಗದು. ರಕ್ತ ಪರಿಚಲನೆ ಮತ್ತು ಚಯಾಪಚಯ ಕ್ರಿಯೆಯಂತಹ ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ಲ್ಯಾಕ್ಟಿಕ್ ಆಮ್ಲವನ್ನು ದೇಹದಿಂದ ತೆರವುಗೊಳಿಸಬಹುದು.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ