0

0

0

ಈ ಲೇಖನದಲ್ಲಿ

Jaggery Benefits: ಬೆಲ್ಲ ಅಥವಾ ಸಕ್ಕರೆ, ಯಾವುದು ಪ್ರಯೋಜನಕಾರಿ
56

Jaggery Benefits: ಬೆಲ್ಲ ಅಥವಾ ಸಕ್ಕರೆ, ಯಾವುದು ಪ್ರಯೋಜನಕಾರಿ

ಬೆಲ್ಲ ಅದರ ಮೈಕ್ರೊ-ಮಿನರಲ್ ಅಂಶದಿಂದಾಗಿ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.  

ಬೆಲ್ಲ ಅಥವಾ ಸಕ್ಕರೆ, ಯಾವುದು ಪ್ರಯೋಜನಕಾರಿ

ಬೆಲ್ಲ ಅಥವಾ ಸಕ್ಕರೆ, ಪ್ರಶ್ನೆ ಬಂದರೆ ನಮ್ಮ ಒಲವು ಬೆಲ್ಲದ ಮೇಲೆಯೇ. ಅದು ಇಂದಿನದಲ್ಲ. ಬಾಯಾರಿಕೆ ಆದರೆ ನೀರಿನ ಜೊತೆ ಬೆಲ್ಲ ತಿನ್ನುವ ವಾಡಿಕೆ. ಶೀತವಿದ್ದಾಗ ಈರುಳ್ಳಿ ಜೊತೆ ಬೆಲ್ಲ ಸೇರಿಸಿ ತಿನ್ನುತ್ತಿದ್ದದ್ದು, ಚಳಿಗಾಲದಲ್ಲಿ ಬೆಚ್ಚಗಾಗಿರಲು ಬೆಲ್ಲ ಮತ್ತು ಶುಂಠಿಯನ್ನುಹಿರಿಯರು ಕೊಡುತ್ತಿದ್ದ ಬಾಲ್ಯದ ನೆನಪು. ಆಯುರ್ವೇದ ವೈದ್ಯರು ಕೂಡ ಬೆಲ್ಲವನ್ನು ದೇಹದ ಚಯಾಪಚಯವನ್ನು ಸುಧಾರಿಸಲು ಮತ್ತು ಒಳಗಿನಿಂದ ಬೆಚ್ಚಗಾಗಲು ಹೆಚ್ಚಿನ ಶಾಖವನ್ನು ಉತ್ಪಾದಿಸಲು ಸೇವಿಸಿ ಎಂದು ಸಲಹೆ ನೀಡುತ್ತಾರೆ. ಇದು ಶ್ವಾಸಕೋಶವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಉಸಿರಾಟದ ವ್ಯವಸ್ಥೆಯನ್ನು ರಕ್ಷಿಸುತ್ತದೆ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ. 

 1994 ರಲ್ಲಿ 90 ದಿನಗಳವರೆಗೆ 22 ಆರೋಗ್ಯಕರ ಅಲ್ಬಿನೋ ಇಲಿಗಳ ಮೇಲೆ ನಡೆಸಲಾದ  ಅಧ್ಯಯನದಲ್ಲಿ ಬೆಲ್ಲವು ಶ್ವಾಸಕೋಶದಿಂದ ಧೂಳಿನ ಕಣಗಳನ್ನು ತೆಗೆದುಹಾಕಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ತಿಳಿಸಲಾಗಿದೆ. 

 ಶ್ವಾಸಕೋಶದ ಮೂಲಕ ಹಾದುಹೋಗುವ ಧೂಳಿನ ಕಣಗಳ ವಿರುದ್ಧ ಹೋರಾಡುವ ರಕ್ಷಣಾ ಕಾರ್ಯವಿಧಾನವನ್ನು ಬೆಲ್ಲವು ದುಪಟ್ಟುಗೊಳಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದ್ದರಿಂದ, ಮುಖಗವಸುಗಳನ್ನು ಬಳಸುವ ಅಭ್ಯಾಸ ಜಾರಿಗೆ ಬರುವ ಮುಂಚೆ ಕಲ್ಲಿದ್ದಲು ಧೂಳಿನಿಂದ ರಕ್ಷಣೆ ಪಡೆಯಲು ಬೆಲ್ಲವನ್ನು ಬಳಸುವಂತೆ ಕಲ್ಲಿದ್ದಲು ಗಣಿ ಕಾರ್ಮಿಕರಿಗೆ ಶಿಫಾರಸ್ಸು ಮಾಡಲಾಗುತ್ತಿತ್ತು. ಆದರೂ, ಬೆಲ್ಲದ ಸೇವನೆ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಕುರಿತು ಮತ್ತು ಅದರ ಪ್ರಯೋಜನಗಳನ್ನು ಖಚಿತಪಡಿಸಲು ಮತ್ತಷ್ಟು ಅಧ್ಯಯನಗಳ ಅವಶ್ಯಕತೆಯಿದೆ. 

 ಬೆಲ್ಲ ಉತ್ತಮ ಆಯ್ಕೆಯೇ? 

ಆರೋಗ್ಯಕರ ಸಕ್ಕರೆ-ಪರ್ಯಾಯಗಳ ಕೂಗು ಹೆಚ್ಚುತ್ತಿದ್ದಂತೆ, ಬೆಲ್ಲವು ಮತ್ತೆ ನೆರವಿಗೆ ಬರುತ್ತದೆ. ಬೆಲ್ಲವು ಸಂಸ್ಕರಿಸಿದ ಸಕ್ಕರೆಯಷ್ಟೇ ಕ್ಯಾಲೊರಿಗಳನ್ನು ಹೊಂದಿದ್ದರೂ, ಇದರಲ್ಲಿ  ಸೋಡಿಯಂ, ಪೊಟ್ಯಾಸಿಯಮ್, ಕಬ್ಬಿಣ, ಉತ್ಕರ್ಷಣ ನಿರೋಧಕಗಳು ಮತ್ತು ಹೆಚ್ಚಿನವುಗಳಿಂದ ತುಂಬಿರುತ್ತದೆ, ಇದು ಆರೋಗ್ಯಕರ ಆಯ್ಕೆಯಾಗಿದೆ. 

  ಪುಣೆಯ ಆಹಾರ ತಂತ್ರಜ್ಞ ಮತ್ತು ಆಯುರ್ವೇದ ಪೌಷ್ಟಿಕತಜ್ಞರಾದ ಸುಧೀರ್ ಸೂರ್ಯವಂಶಿ, “ಬೆಲ್ಲವು ಮ್ಯಾಂಗನೀಸ್, ಸೆಲೆನಿಯಮ್ ಮತ್ತು ಫಾಸ್ಪರಸ್‌ನಂತಹ ಹಲವಾರು ಸೂಕ್ಷ್ಮ ಖನಿಜಗಳ ಮೂಲವಾಗಿದೆ. ಬೆಲ್ಲ ಕಬ್ಬಿಣದ ಉತ್ತಮ ಮೂಲವಾಗಿದೆ. ಈ ಕಬ್ಬಿಣದ ಅಂಶವು ಬೆಲ್ಲವನ್ನು ತಯಾರಿಸುವಾಗ ಕಬ್ಬಿನ ರಸವನ್ನು ಕುದಿಸಲು ಬಳಸುವ ಕಬ್ಬಿಣದ ಪಾತ್ರೆಗಳಿಂದ ಬರುತ್ತದೆ” ಎಂದು ಹೇಳುತ್ತಾರೆ 

ನ್ಯಾಷನಲ್ ಜರ್ನಲ್ ಆಫ್ ಫಿಸಿಯಾಲಜಿ, ಫಾರ್ಮಸಿ ಮತ್ತು ಫಾರ್ಮಕಾಲಜಿಯಲ್ಲಿ ಪ್ರಕಟವಾದ 2018 ರ ಅಧ್ಯಯನವು ರಕ್ತಹೀನತೆಯನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಬೆಲ್ಲದ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಿದೆ (ದೇಹದಲ್ಲಿ ಕೆಂಪು ರಕ್ತ ಕಣಗಳ ಮಟ್ಟವು ಇಳಿಯುವ ಸ್ಥಿತಿ). ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ದೇಹಕ್ಕೆ ಕಬ್ಬಿಣವು ಪ್ರಮುಖ ಅಂಶವಾಗಿದೆ. 

  ಸಂಶೋಧಕರು 50 ಮಹಿಳೆಯರನ್ನು ಒಳಗೊಂಡ ತಂಡವನ್ನು 8 ವಾರಗಳ ಕಾಲ ಅಧ್ಯಯನ ಮಾಡಿದರು.  ಅಲ್ಲಿ ಅವರಿಗೆ ಪ್ರತಿದಿನ 5 ಗ್ರಾಂ ಬೆಲ್ಲ ಮತ್ತು 5 ಗ್ರಾಂ ಒಣದ್ರಾಕ್ಷಿ ನೀಡಲಾಯಿತು. ಅವರ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂತು ಎಂದು ಅಧ್ಯಯನವು ತೀರ್ಮಾನಿಸಿತು. 

ಬೆಲ್ಲ ಫೋಲೇಟ್‌ನಲ್ಲಿ ಸಮೃದ್ಧ ಮೂಲವಾಗಿದೆ. ಇದು ಕಬ್ಬಿಣದ ಜೊತೆಗೆ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವ ಮತ್ತೊಂದು ಪ್ರಮುಖ ಅಂಶವಾಗಿದೆ. ಕಬ್ಬಿಣ ಮತ್ತು ಫೋಲೇಟ್ ಎರಡರ ಉಪಸ್ಥಿತಿಯು ರಕ್ತಹೀನತೆಯನ್ನು ನಿರ್ವಹಿಸಲು ಪರಿಣಾಮಕಾರಿ ಸಾಧನವಾಗಿದೆ. 

  “ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ಅಥವಾ ಅಸ್ವಸ್ಥರಾಗಿದ್ದಾಗ ಬೆಲ್ಲ ಸೇವಿಸಿದರೆ ತಕ್ಷಣೆಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಆದರೆ ಬೆಲ್ಲದಲ್ಲಿ ಹೆಚ್ಚು ಕ್ಯಾಲೋರಿಗಳಿರುವುದರಿಂದ  ಕನಿಷ್ಠ ಪ್ರಮಾಣದಲ್ಲಿ (5 ಗ್ರಾಂ) ಸೇವಿಸಬೇಕು” ಎಂದು ಹೈದರಾಬಾದ್‌ನ ಕ್ರೀಡಾ ಪೌಷ್ಟಿಕತಜ್ಞರಾದ ಸ್ವಸ್ತಿ ಉಪಾಧ್ಯಾಯ ಹೇಳುತ್ತಾರೆ. 

100 ಗ್ರಾಂ ಬೆಲ್ಲಕ್ಕೆ ಪೌಷ್ಟಿಕಾಂಶದ ಮೌಲ್ಯಗಳು 

Nutrient Amount
ಕ್ಯಾಲೋರಿ 354 Kcal
ಪ್ರೋಟೀನ್ 1.85g
ಕಬ್ಬಿಣ 4.63mg
ಫೊಲೇಟ್ 14.4µg
Carotenoids (Vitamin A precursor)ಕ್ಯಾರೊಟಿನಾಯ್ಡ್ಗಳು 18.49µg
ಪೊಟ್ಯಾಸಿಯಮ್ 488mg
ಮೆಗ್ನೀಸಿಯಮ್  115mg

  ಆಯುರ್ವೇದದ ಪ್ರಕಾರ ಬೆಲ್ಲ  

ಸಂಸ್ಕೃತದಲ್ಲಿ ಬೆಲ್ಲ ಅಕಾ ಗುಡಾ, ಆರೋಗ್ಯ ನಿರ್ವಹಣೆಗೆ ಆಯುರ್ವೇದ ವಿಧಾನಗಳಲ್ಲಿ ಬಹಳ ಮುಖ್ಯವಾದ ಅಂಶವೆಂದು ಪರಿಗಣಿಸಲಾಗಿದೆ. ಆಯುರ್ವೇದ ವೈದ್ಯರ ಪ್ರಕಾರ ಇದು ಹೃದಯ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು ಎಂದು ತಿಳಿಸಲಾಗಿದೆ. 

  ಸೂರ್ಯವಂಶಿ ಅವರು ಮಲಬದ್ಧತೆಯನ್ನು ನಿಗ್ರಹಿಸಲು ಊಟದ ನಂತರ ಬೆಲ್ಲದ ಸಣ್ಣ ತುಂಡನ್ನು ಸೇವಿಸಲು ಸೂಚಿಸುತ್ತಾರೆ. “ಇದರಲ್ಲಿ ಫೈಬರ್ (ಇನ್ಯುಲಿನ್) ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ” ಎನ್ನುತ್ತಾರೆ.  

  ರೋಗನಿರೋಧಕ ಶಕ್ತಿ ಹೆಚ್ಚಿಸಲು ಸೇವಿಸುವ  ಬ್ರಾಹ್ಮಿಗ್ರಿಡಾ ಮತ್ತು ಚವನಪ್ರಾಶದಂತಹ ಗಿಡಮೂಲಿಕೆಗಳ ಜಾಮ್‌ಗಳಲ್ಲಿ ಇರುವ (ಜ್ಞಾಪಕಶಕ್ತಿಗೆ ಸಹಾಯ ಮಾಡುತ್ತದೆ), ಬೆಲ್ಲ ಅವುಗಳನ್ನು ಸಿಹಿ ಮಾಡುವುದಲ್ಲದೇ ಪೌಷ್ಟಿಕಾಂಶದ ಮೌಲ್ಯವನ್ನು ಸೇರಿಸುತ್ತದೆ.  

  ಬೆಲ್ಲದ ಬಣ್ಣ, ಗಮನಿಸುವುದು ಮುಖ್ಯ  

ಬೆಲ್ಲದ ಗಾಢ ಕಂದು ಬಣ್ಣವು ಕಾಕಂಬಿ (ದಪ್ಪ ಕಂದು ಪೇಸ್ಟ್) ನಿಂದ ಬರುತ್ತದೆ, ಬಿಳಿ ಸಕ್ಕರೆ ಮಾಡಲು ಇದನ್ನು ಸಂಸ್ಕರಿಸಲಾಗುತ್ತದೆ. ಕಾಕಂಬಿ ಅದರ ಸೂಕ್ಷ್ಮ ಪೋಷಕಾಂಶದ ಅಂಶಕ್ಕೆ ಕೊಡುಗೆ ನೀಡುವುದರಿಂದ, ಬೆಲ್ಲವನ್ನು ಸಂಸ್ಕರಿಸಿದ ಸಕ್ಕರೆಯ ಆರೋಗ್ಯಕರ ಪರ್ಯಾಯವಾಗಿ ಸ್ವೀಕರಿಸಲಾಗುತ್ತದೆ. 

  ಬೆಲ್ಲವು ಘನ, ಅರೆ-ಘನ ಮತ್ತು ದ್ರವ ಎಂಬ ಮೂರು ರೂಪಗಳಲ್ಲಿ ಬರುತ್ತದೆ. ವಾಣಿಜ್ಯ ಕಾರಣಗಳಿಂದ ತಿಳಿ ಚಿನ್ನದ ಹಳದಿ ಬಣ್ಣವನ್ನು ನೀಡಲು ಗಂಧಕದಿಂದ ಬ್ಲೀಚ್ ಮಾಡಲಾಗುತ್ತದೆ. “ಯಾವುದೇ ರಾಸಾಯನಿಕ ಚಿಕಿತ್ಸೆಗೆ ಒಳಗಾಗದ ಬೆಲ್ಲದ ಗಾಢ ಕಂದು ಬಣ್ಣದ ಘನ ಬೆಲ್ಲ ಸೇವಿಸಲು ಉತ್ತಮ ರೂಪವಾಗಿದೆ” ಎಂದು ಸೂರ್ಯವಂಶಿ ಹೇಳುತ್ತಾರೆ. 

  ಪ್ರಯೋಜನಗಳನ್ನು ಬದಿಗಿಟ್ಟು ನೋಡುವುದಾದರೆ, ಉಪಾಧ್ಯಾಯರು ಬೆಲ್ಲವನ್ನು ಬುದ್ದಿಪೂರ್ವಕವಾಗಿ ಬಳಸಲು ಎಚ್ಚರಿಸಿದ್ದಾರೆ. “ಏನೇ ಹೇಳಿದರೂ, ಬೆಲ್ಲವು ಮುಖ್ಯವಾಗಿ ಸುಕ್ರೋಸ್ ಮತ್ತು ಫ್ರಕ್ಟೋಸ್ (ಸರಳ ಕಾರ್ಬ್ಸ್)  ಒದಗಿಸುತ್ತದೆ ಮತ್ತು ಆದ್ದರಿಂದ ಸ್ಥೂಲಕಾಯತೆ, CVD (ಹೃದಯರಕ್ತನಾಳದ ಕಾಯಿಲೆ) ಮತ್ತು ಮಧುಮೇಹದಂತಹ ಜೀವನಶೈಲಿಯ ಅಸ್ವಸ್ಥತೆಗಳನ್ನು ತಪ್ಪಿಸಲು ಆಹಾರದಲ್ಲಿ ಕನಿಷ್ಠವಾಗಿ ಸೇರಿಸಬೇಕು” ಎಂದು ಅವರು ಹೇಳುತ್ತಾರೆ. 

 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಲೇಖನ
ಜಾಗತಿಕವಾಗಿ ಕನಿಷ್ಠ 5.4 ಲಕ್ಷ ಹೃದಯ ಸಂಬಂಧಿ ಸಾವುಗಳಿಗೆ ಟ್ರಾನ್ಸ್-ಫ್ಯಾಟಿ ಆಸಿಡ್‌ಗಳಿಂದ ತುಂಬಿದ ಸಂಸ್ಕರಿಸಿದ ಆಹಾರ ಕಾರಣ ಎಂದು ಭಾರತ ಸರ್ಕಾರ ಹೇಳುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ