0

0

0

ಈ ಲೇಖನದಲ್ಲಿ

healthy diet: ದೀಪಾವಳಿ ಸಿಹಿ ಅಪರಾಧ ಪ್ರಜ್ಞೆಯಿಲ್ಲದೆ ಸವಿಯಿರಿ
6

healthy diet: ದೀಪಾವಳಿ ಸಿಹಿ ಅಪರಾಧ ಪ್ರಜ್ಞೆಯಿಲ್ಲದೆ ಸವಿಯಿರಿ

ಹಬ್ಬದ ಸತ್ಕಾರಗಳಲ್ಲಿ ಪಾಲ್ಗೊಳ್ಳಲು ಕೆಲವು ಆರೋಗ್ಯಕರ ಮಾರ್ಗಗಳಿವೆ ಎಂದು ತಜ್ಞರು ಹೇಳುತ್ತಾರೆ 
ದೀಪಾವಳಿ ಸಿಹಿ ಅಪರಾಧ ಪ್ರಜ್ಞೆಯಿಲ್ಲದೆ ಸವಿಯಿರಿ
ಚಿತ್ರ: ಅನಂತ ಸುಬ್ರಹ್ಮಣ್ಯಂ ಕೆ

ದೀಪಾವಳಿಯು ಸಂತೋಷ ಮತ್ತು ಕಾಂತಿಯನ್ನು ತರುತ್ತದೆ. ಮನೆಗಳನ್ನು ಅಲಂಕರಿಸುವ ಸುಂದರವಾದ ದೀಪಗಳು ಮತ್ತು ಆಚರಣೆಗಳಿಗೆ ಸಿದ್ಧವಾಗಿರುವ ಅಲಂಕಾರಿಕ ದೀಪಗಳು, ಅಲ್ಲದೆ ಸಿಹಿತಿಂಡಿಗಳನ್ನು ತಯಾರಿಸುವುದು ಮತ್ತು ತಿಂಡಿಗಳನ್ನು ಹಂಚುವುದು ಈ ಹಬ್ಬದ ಅವಿಭಾಜ್ಯ ಅಂಗವಾಗಿದೆ. ಅದನ್ನು ನಾವು ತಪ್ಪಿಸಿಕೊಳ್ಳಬಾರದು. ಇಂದಿನ ದಿನಗಳಲ್ಲಿ ಇವುಗಳ ರುಚಿಯನ್ನು ಪಡೆಯಲು, ಬಣ್ಣಬಣ್ಣದ ಆಲ್-ಇನ್-ಒನ್ ಇರುವ ಬಗೆಬಗೆಯ ಪೆಟ್ಟಿಗೆಗಳಲ್ಲಿ ಎಲ್ಲವನ್ನೂ ಸೇರಿಸಿ ಇಡುತ್ತಾರೆ. 

ಈ ಎಲ್ಲಾ ಆಯ್ಕೆಗಳನ್ನು ಮಾಡುವ ಮೊದಲು ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಫಿಟ್ನೆಸ್ ಗೆ ತೊಂದರೆಯಾಗದೆ ಇರಲಿ ಎಂದು ಯೋಚಿಸುತ್ತೇವೆ. ಒಳ್ಳೆಯ ಸುದ್ದಿ ಏನೆಂದರೆ, ಸಾಂದರ್ಭಿಕವಾಗಿ, ಯಾವಾಗಲೋ ಒಮ್ಮೆ ಅಧಿಕ ಸೇವನೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ತಜ್ಞರು ಹೇಳುತ್ತಾರೆ. 

ಆದ್ದರಿಂದ ಈ ಹಬ್ಬವನ್ನು ಸವಿಯಲು, ಮತ್ತು ಆ ಅನುಭೂತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಆರೋಗ್ಯಕರ ಆಹಾರ ಸಲಹೆಗಳು ಇಲ್ಲಿವೆ. 

ಸ್ವಲ್ಪ ಜಾಗವನ್ನು ಸಿಹಿಗಾಗಿ ಉಳಿಸಿ! 

“ಎಂದಿಗೂ ಊಟವನ್ನು ಬಿಡಬೇಡಿ” ಎಂದು ಬೆಂಗಳೂರಿನ ಕ್ಲಿನಿಕಲ್ ಡಯೆಟಿಷಿಯನ್ ರುತುಜಾ ಜೋಶಿ ಹೇಳುತ್ತಾರೆ.  ಹಬ್ಬದ ಸಂತೋಷವನ್ನು ಸರಿದೂಗಿಸಲುಕೆಲವೊಮ್ಮೆ ನಾವು ಊಟವನ್ನು ಬಿಟ್ಟುಬಿಡುತ್ತೇವೆ. ಈ ಅಭ್ಯಾಸವು ನಮ್ಮ ಇನ್ಸುಲಿನ್ ನಿಯಂತ್ರಣದ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು ಎಂದು ಜೋಶಿ ಹೇಳುತ್ತಾರೆ. ಅದರ ಬದಲಾಗಿ ದೀಪಾವಳಿ ಸಿಹಿತಿಂಡಿಗಳಿಗಾಗಿ ನಮ್ಮ ತಟ್ಟೆಯ ಸ್ವಲ್ಪವೇ ಸ್ವಲ್ಪ ಭಾಗವನ್ನು ಉಳಿಸಿಕೊಳ್ಳಲು ಅವರು ಶಿಫಾರಸು ಮಾಡುತ್ತಾರೆ. ಹೀಗೆ ಮಾಡುವುದರಿಂದ ಸಿಹಿತಿಂಡಿಗಳ ಸೇವನೆ ಪ್ರಮಾಣ ಮತ್ತು ತಿಂಡಿಗಳಿಗೆ ಸಮಯವನ್ನು ನಿಗದಿಪಡಿಸುವುದರಿಂದ ಮಿತಿಮೀರಿದ ಸೇವನೆಯನ್ನು ತಡೆಯಲು ಸಹಾಯ ಮಾಡುತ್ತದೆ. 

ಜೋಶಿಯವರ ಪ್ರಕಾರ, ಸಿಹಿಯ ಸಂಪೂರ್ಣ ತುಂಡನ್ನು ಒಮ್ಮೆಲೇ ತಿನ್ನುವುದು ಪ್ರತಿ ಕೆಲವು ಗಂಟೆಗಳಿಗೊಮ್ಮೆ ಟಿಟ್‌ಬಿಟ್‌ಗಳನ್ನು ಹೊಂದುವುದಕ್ಕಿಂತ ಉತ್ತಮವಾಗಿದೆ, ಏಕೆಂದರೆ ಇದು ತೃಪ್ತಿಯನ್ನು ನೀಡುತ್ತದೆ ಮತ್ತು ಹೆಚ್ಚುವರಿ ಸೇವನೆಯನ್ನು ತಡೆಯುತ್ತದೆ.ಆದರೂ ಕೇವಲ ಒಂದನ್ನೇ ತಿಂದು ನಿಲ್ಲಿಸುವುದು ಅಷ್ಟು ಸುಲಭವಲ್ಲ. 

ಹಣ್ಣುಗಳು ಮತ್ತು ತರಕಾರಿಗಳಿಗೆ ಹೆಚ್ಚಿನ ಸ್ಥಳಾವಕಾಶ ಉಳಿಸಿಕೊಳ್ಳಿ  

“ತಾಜಾ ಹಣ್ಣುಗಳು, ತರಕಾರಿಗಳು ಮತ್ತು ನೇರ ಪ್ರೋಟೀನ್ಗಳನ್ನು ತಿನ್ನುವುದರಿಂದ ಕಡುಬಯಕೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ” ಎಂದು ಮುಂಬೈನ ಫಿಟ್ಜೆನಿಕ್ಸ್ ಸಂಸ್ಥಾಪಕಿ ಮತ್ತು ಸಲಹೆಗಾರರಾದ ಸ್ಮೃತಿ ಮಿಶ್ರಾ ಹೇಳುತ್ತಾರೆ. ಸೇಬುಗಳು, ಪೇರಳೆಗಳು ಮತ್ತು ಬೆರ್ರಿ ಹಣ್ಣುಗಳು ಫೈಬರ್‌ನ ಸಮೃದ್ಧ ಮೂಲವಾಗಿವೆ. ಅದು ನಮ್ಮನ್ನು ಹೆಚ್ಚು ಕಾಲ ಪೂರ್ಣವಾಗಿರಿಸುತ್ತದೆ ಎಂದು ಅವರು ಹೇಳುತ್ತಾರೆ. ಕ್ವಿನೋವಾ ಬ್ರೌನ್ ರೈಸ್ ಮತ್ತು ರಾಗಿಯಂತಹ ಧಾನ್ಯಗಳನ್ನು ಸಹ ಆಹಾರದಲ್ಲಿ ಹೊಂದಬಹುದು, ಅವುಗಳು ತುಂಬುವ ಅನುಭವ ನೀಡುವುದರ ಜೊತೆ ಪೋಷಕಾಂಶಗಳು ಹೆಚ್ಚಿರುತ್ತವೆ. 

ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವು ಕಡಿಮೆ ಸಂತೃಪ್ತಿ ನೀಡುತ್ತವೆ, ಹಾಗಾಗಿ ಅತಿಯಾಗಿ ತಿನ್ನುವುದಕ್ಕೆ ಕಾರಣವಾಗುತ್ತದೆ ಎಂದು ಸೂಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರೋಟೀನ್ಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿರುವವುಗಳನ್ನು ಸೇವಿಸಿದರೆ ದೀರ್ಘಕಾಲದವರೆಗೆ ಅವು ನಮ್ಮನ್ನು ಪೂರ್ಣವಾಗಿ ಇರಿಸಿ, ಸಂತೃಪ್ತವಾಗಿರಿಸುತ್ತವೆ. ಇದು ಹೆಚ್ಚುವರಿ ಕ್ಯಾಲೋರಿ ಸೇವನೆಯನ್ನು ತಡೆಯುತ್ತದೆ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. 

ನಾವು ಹೆಚ್ಚು ಸಿಹಿತಿಂಡಿಗಳನ್ನು ಹಂಬಲಿಸುವಾಗ ಆರೋಗ್ಯಕರ ಆಯ್ಕೆಯಾದ ಡಾರ್ಕ್ ಚಾಕೊಲೇಟ್‌ಗಳನ್ನು ಸಹ ಆರಿಸಿಕೊಳ್ಳಬಹುದು ಎಂದು ಮಿಶ್ರಾ ಹೇಳುತ್ತಾರೆ. 

ಗೆಲುವಿಗಾಗಿ ಮನೆಯಲ್ಲಿಯೇ ಸಿಹಿ ತಯಾರಿಸಿ! 

ದೀಪಾವಳಿ ಸಿಹಿತಿಂಡಿಗಳನ್ನು ಮತ್ತು ತಿಂಡಿಗಳನ್ನು ಮಿತವಾಗಿ ಸೇವಿಸುವ ಮೂಲಕ ಮಧುಮೇಹವನ್ನು ನಿರ್ವಹಿಸಬಹುದು ಮತ್ತು ನಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು . ಆದರೆ ಹೆಚ್ಚಿನ ಸೇವನೆಯಿಂದ  ಸಾಮಾನ್ಯವಾಗಿ ರಕ್ತದಲ್ಲಿನ ಸಕ್ಕರೆಯ ಸ್ಪೈಕ್‌ಗಳಿಗೆ ಕಾರಣವಾಗಬಹುದು, ಇದು ಮಧುಮೇಹ ಹೊಂದಿರುವ ಜನರಿಗೆ ಹಾನಿಕಾರಕವಾಗಿ, ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು ಎಂದು ಮಿಶ್ರಾ ಹೇಳುತ್ತಾರೆ. 

“ಇದು ನಿಮಗೆ ದಣಿದ ಭಾವನೆಯನ್ನು ಉಂಟುಮಾಡಬಹುದು” ಎಂದು ಜೋಶಿ ಹೇಳುತ್ತಾರೆ. ನಾವು ಹೆಚ್ಚಿನ ಸಕ್ಕರೆ ಪದಾರ್ಥಗಳನ್ನು ಸೇವಿಸಿದಾಗ, ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನಮ್ಮ ದೇಹವು ಹೆಚ್ಚು ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತದೆ. ಇನ್ಸುಲಿನ್ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿರುತ್ತದೆ ಎಂದರೆ ಅದು ಕೆಲವೊಮ್ಮೆ ಸಾಮಾನ್ಯ ಮಟ್ಟಕ್ಕಿಂತ ಕೆಳಗಿಳಿಯಬಹುದು. ಇದು ಆಯಾಸ, ಕಿರಿಕಿರಿ ಮತ್ತು ಹೆಚ್ಚು ಸಕ್ಕರೆಯ ಕಡುಬಯಕೆಗಳಿಗೆ ಕಾರಣವಾಗುವ ಕಡಿಮೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉಂಟುಮಾಡಬಹುದು. 

ಮನೆಯಲ್ಲಿ ಸಿಹಿತಿಂಡಿಗಳನ್ನು ತಯಾರಿಸುವುದರಿಂದ ಅವುಗಳಿಗೆ ಸೇರಿಸುವ ಸಕ್ಕರೆ ಮತ್ತು ಉಪ್ಪಿನ ಪ್ರಮಾಣವನ್ನು ಸರಿಹೊಂದಿಸಬಹುದು ಮತ್ತು ನಿಯಂತ್ರಿಸಬಹುದು ಎಂದು ಮಿಶ್ರಾ ಹೇಳುತ್ತಾರೆ. “ಮಾರುಕಟ್ಟೆಯಲ್ಲಿ ಖರೀದಿಸಿದ ಸಿಹಿತಿಂಡಿಗಳನ್ನು ತಿನ್ನುವುದನ್ನು ಮಿತಿಗೊಳಿಸಿ ಏಕೆಂದರೆ ಅವುಗಳು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಟ್ರಾನ್ಸ್-ಕೊಬ್ಬುಗಳಲ್ಲಿ ಹೆಚ್ಚಾಗಿ ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ” ಎನ್ನುವುದು ಅವರ ಅಭಿಪ್ರಾಯ.  

ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳಲ್ಲಿ ಒಳ್ಳೆಯ ವಿಷಯವೆಂದರೆ ನೀವು ಆರೋಗ್ಯಕರ ಪರ್ಯಾಯ ಪದಾರ್ಥಗಳನ್ನು ಆಯ್ಕೆ ಮಾಡಬಹುದು. ಉದಾಹರಣೆಗೆ ಮೈದಾ ಬದಲಿಗೆ ಸಂಪೂರ್ಣ ಧಾನ್ಯದ ಹಿಟ್ಟನ್ನು ಬಳಸಬಹುದು.  

ಸಂಸ್ಕರಿಸಿದ ಹಿಟ್ಟು ಅಥವಾ ಬೇಕರಿ ಉತ್ಪನ್ನಗಳಲ್ಲಿ ಫೈಬರ್ ಸಮೃದ್ಧವಾಗಿರುವುದಿಲ್ಲ ಎಂದು ಜೋಶಿ ಹೇಳುತ್ತಾರೆ. ಅವುಗಳ ಅತಿಯಾದ ಸೇವನೆಯಿಂದ ಮಲಬದ್ಧತೆಯಂತಹ ಕರುಳಿನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ಜೋಶಿಯವರು ನಮ್ಮ ಆಹಾರದಲ್ಲಿ ಮಜ್ಜಿಗೆ ಸೇರಿಸಲು ಸಲಹೆ ನೀಡುತ್ತಾರೆ. ಮಿಶ್ರಾ ಅವರು ಮೊಸರು ಮತ್ತು ಮೊಸರು ಮತ್ತು ನಾರಿನಂಶವಿರುವ ಮಸೂರ ಮತ್ತು ಧಾನ್ಯಗಳಂತಹ ಪ್ರೋಬಯಾಟಿಕ್-ಭರಿತ ಆಹಾರವನ್ನು ಶಿಫಾರಸು ಮಾಡುತ್ತಾರೆ. “ನೀವು ಆರೋಗ್ಯಕರ ಜೀರ್ಣಕ್ರಿಯೆಗಾಗಿ ಶುಂಠಿ, ಪುದೀನ, ಜೀರಿಗೆ, ಫೆನ್ನೆಲ್ ಬೀಜಗಳು, ಪಪ್ಪಾಯಿ ಮತ್ತು ಸಾವಯವ ಅಲೋವೆರಾ ರಸವನ್ನು ಸೇರಿಸಬಹುದು” ಎಂದು ಮಿಶ್ರಾ ಹೇಳುತ್ತಾರೆ. 

ದೀಪಾವಳಿ ನಂತರದಲ್ಲಿ ಡಿಟಾಕ್ಸ್ 

ದೀಪಾವಳಿ ಮುಗಿಯುತ್ತಿದ್ದಂತೆ,ನಿಮಗೆ ನೀವೇ ನಕಾರಾತ್ಮಕವಾಗಿ ಮಾತನಾಡಿಕೊಳ್ಳುವುದನ್ನು ತಪ್ಪಿಸಬೇಕು ಮತ್ತು ದೀರ್ಘಕಾಲೀನ ಅಭ್ಯಾಸಗಳತ್ತ ಗಮನ ಹರಿಸಬೇಕು ಎಂದು ಮಿಶ್ರಾ ಹೇಳುತ್ತಾರೆ. ಇದು ಪ್ರತಿದಿನ ಸಮತೋಲಿತ ಆಹಾರವನ್ನು ನಿರ್ವಹಿಸುವುದನ್ನು ಒಳಗೊಂಡಿರುತ್ತದೆ. ” ರೋಸ್ಟ್ ಮಾಡಿದ ಕೋಳಿ, ತೋಫು, ಅಥವಾ ಟೆಂಪೆ, ಮತ್ತು ಬೀನ್ಸ್, ಹಸಿರು ಎಲೆಗಳ ತರಕಾರಿಗಳು, ಧಾನ್ಯಗಳು ಮತ್ತು ಸಂಸ್ಕರಿಸಿದ ಧಾನ್ಯಗಳ ಮೇಲೆ ರಾಗಿ ಮುಂತಾದ ನೇರ ಪ್ರೋಟೀನ್‌ನ ಮೂಲಗಳನ್ನು ಸೇರಿಸಿಕೊಳ್ಳಿ ” ಎಂದು ಮಿಶ್ರಾ ಸಲಹೆ ನೀಡುತ್ತಾರೆ.   

ದೀಪಾವಳಿಯ ನಂತರದ ನಿರ್ವಿಶೀಕರಣಕ್ಕಾಗಿ(ಡಿಟಾಕ್ಸ್) ಆಹಾರದಲ್ಲಿ ಗ್ರೀನ್ ಟೀ, ಕಾಫಿ, ಆಪಲ್ ಸೈಡರ್ ವಿನೆಗರ್, ದಾಲ್ಚಿನ್ನಿ, seaweed/ಪಾಚಿ ಮತ್ತು ಚಿಯಾ ಬೀಜಗಳನ್ನು ಸೇರಿಸಬಹುದು ಎಂದು ತಜ್ಞರು ಹೇಳುತ್ತಾರೆ. 

ಗಟ್ ಆರೋಗ್ಯಕ್ಕಾಗಿ ಮಿಶ್ರಾ ಅವರು ವಿವಿಧ ಸ್ಮೂಥಿಗಳು ಮತ್ತು ಓಟ್ಸ್ ಪಾಕವಿಧಾನಗಳನ್ನು ಶಿಫಾರಸು ಮಾಡುತ್ತಾರೆ. “ಹಮ್ಮಸ್‌ನೊಂದಿಗೆ ಕೆಲವು ಹೋಳು ಸೌತೆಕಾಯಿ ಮತ್ತು ಕ್ಯಾರೆಟ್ ಸ್ಟಿಕ್ ಅನ್ನು ಅಥವಾ ಮಧ್ಯಂತರದಲ್ಲಿ  ತಿಂಡಿಗಳಂತೆ ಒಂದು ಹಿಡಿ ಬೀಜಗಳನ್ನು ಆನಂದಿಸಬಹುದು  

ಸಂಪೂರ್ಣ ಆಹಾರಗಳು , ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಕೇಂದ್ರೀಕರಿಸಿ ಮತ್ತು ಸಾಕಷ್ಟು ನೀರು ಮತ್ತು ಗಿಡಮೂಲಿಕೆ ಚಹಾಗಳನ್ನು ಕುಡಿಯಿರಿ. ದೀಪಾವಳಿಯ ನಂತರ ಉಲ್ಲಾಸದಿಂದಿರಲು ನಿಮಗೆ ಸಹಾಯ ಮಾಡುತ್ತವೆ ಎನ್ನುತ್ತಾರೆ ಮಿಶ್ರಾ. 

ತಜ್ಞರಿಂದ ಆರೋಗ್ಯಕರ ಆಹಾರ ಸಲಹೆಗಳು: 

  • ರಾತ್ರಿಯ ಊಟವನ್ನು ಲಘುವಾಗಿ ಇರಿಸಿ. ತಡರಾತ್ರಿಯಲ್ಲಿ ಏನನ್ನೂ ತಿನ್ನುವುದನ್ನು ತಪ್ಪಿಸಿ 
  • ಅಭ್ಯಾಸದ ಭಾಗವಾಗಿ ಸಣ್ಣ ಪ್ಲೇಟ್‌ಗಳು/ಬೌಲ್‌ಗಳನ್ನು ಬಳಸುವ ಮೂಲಕ ಭಾಗದ ಗಾತ್ರವನ್ನು ನಿಯಂತ್ರಿಸಿ 
  • ಪ್ರತಿದಿನ ಎರಡು-ಮೂರು ಲೀಟರ್ ನೀರಿನಿಂದ ಹೈಡ್ರೇಟೆಡ್ ಆಗಿರಿ. ಖನಿಜಗಳಿಂದ ಸಮೃದ್ಧವಾಗಿರುವ ತೆಂಗಿನ ನೀರನ್ನು ನಿಯಮಿತವಾಗಿ ಸೇವಿಸಿ 
  • ಕಡುಬಯಕೆಗಳನ್ನು ತಪ್ಪಿಸಲು ನಿಮ್ಮ ಊಟವನ್ನು ಸಮಯಕ್ಕೆ ತಿನ್ನಿರಿ 
  • ಹಬ್ಬ ಹರಿದಿನಗಳಲ್ಲಿಯೂ ನಿಮ್ಮ ವ್ಯಾಯಾಮವನ್ನು ಮುಂದುವರಿಸಿ 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

4 × three =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ