0

0

0

0

0

0

0

0

0

ಈ ಲೇಖನದಲ್ಲಿ

ಸಿಹಿಗೆಣಸಿನ ಹಲ್ವಾ- ಆರೋಗ್ಯಕರ ಅಂಶ ಬೋನಸ್ 
1

ಸಿಹಿಗೆಣಸಿನ ಹಲ್ವಾ- ಆರೋಗ್ಯಕರ ಅಂಶ ಬೋನಸ್ 

ಈ ವಾರಾಂತ್ಯದಲ್ಲಿ ಒಂದು ಆರೋಗ್ಯಕರ ಸಿಹಿತನಿಸಿನ ರೆಸಿಪಿ ನಿಮಗಾಗಿ ಕಾಯುತ್ತಿದೆ. 
ಈ ವಾರಾಂತ್ಯದಲ್ಲಿ ಒಂದು ಆರೋಗ್ಯಕರ ಸಿಹಿತನಿಸಿನ ರೆಸಿಪಿ ನಿಮಗಾಗಿ ಕಾಯುತ್ತಿದೆ.
 

 ಭಾನುವಾರ ಮಧ್ಯಾಹ್ನ ಹೊಟ್ಟೆ ತುಂಬ ಊಟದ ನಂತರ ಸಿಹಿಭಕ್ಷ್ಯದ ಸೇವನೆ ಅವಶ್ಯ. ಆದರೆ, ಕಠಿಣ ಆರೋಗ್ಯ ಪರಿಸ್ಥಿತಿಯಲ್ಲಿ ಜನಪ್ರಿಯ ಸಿಹಿತಿನಿಸುಗಳು ಅಧಿಕ ಕ್ಯಾಲೊರಿಭರಿತ ಮತ್ತು ಸಕ್ಕರೆಯುಕ್ತ ಪರ್ಯಾಯಗಳೇ ಆಗಿವೆ. ಹೀಗಿರುವಾಗ ನಿಮ್ಮ ಕ್ಯಾಲೋರಿ ಮಿತಿಗೆ ಹೊಂದುವಂತಹ ತಿಂಡಿಯೊಂದರನ್ನು ನಾವೀಗ ನಿಮಗೆ ಹೇಳಿದರೆ ಹೇಗೆ? ಸ್ವಾದಿಷ್ಟಕರ ಹಾಗೂ ಆರೋಗ್ಯಭರಿತವಾದ ಸಿಹಿಗೆಣಸಿನ ಹಲ್ವಾ ನಿಮ್ಮ ಈ ದ್ವಂದ್ವಕ್ಕೆ ಪರಿಹಾರ. 

ಇವುಗಳು ಕಡಿಮೆ ಕಾರ್ಬೋಹೈಡ್ರೇಟ್‌ಗಳು ಮತ್ತು ಪೊಟ್ಯಾಸಿಯಂ, ವಿಟಮಿನ್ ಸಿ ಹಾಗೂ ವಿಟಮಿನ್ ಎ ಒಳಗೊಂಡು, ಹೆಚ್ಚಿನ ಖನಿಜಗಳನ್ನು ಹೊಂದಿದ್ದು ಎಲ್ಲಾ ವಯಸ್ಸಿನವರಿಗೂ ಉತ್ತಮವಾಗಿದೆ. ಸಾಮಾನ್ಯವಾಗಿ ಪಿಷ್ಟಭರಿತ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಇತರ ಗೆಡ್ಡೆಗೆಣಸುಗಳಿಗೆ ಹೋಲಿಸಿದರೆ ಕಂದು ಸಿಪ್ಪೆಯ ಸಿಹಿಗೆಣಸು ತುಸು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. (ಆಹಾರಗಳು ಎಷ್ಟು ಬೇಗನೆ ಜೀರ್ಣವಾಗುತ್ತದೆ ಎಂದು ಸೂಚಿಸುತ್ತದೆ). 

ಸಿಹಿಗೆಣಸನ್ನು ಹಬೆಯಲ್ಲಿ ಅಥವಾ ಕುಕ್ಕರ್‌ನಲ್ಲಿ ಬೇಯಿಸಿದಾಗ, ಅದರ ಪಿಷ್ಟದ ಅಂಶವು ನಿರೋಧಕ ಪಿಷ್ಟವಾಗಿ (ಪಚನ ನಿರೋಧಕ ಕಾರ್ಬೋಹೈಡ್ರೇಟ್‌ಗಳು) ಪರಿವರ್ತನೆಗೊಳ್ಳುತ್ತವೆ, ಇವುಗಳು ನಾರಿನಂತೆ ನಿಧಾನವಾಗಿ ಪಚನಗೊಳ್ಳುತ್ತವೆ ಮತ್ತು ರಕ್ತದ ಸಕ್ಕರೆಯ ಮಟ್ಟ ಹೆಚ್ಚಾಗುವುದಿಲ್ಲ. ಇದು ವಿಶೇಷವಾಗಿ ಮಕ್ಕಳಲ್ಲಿ ಮೆದುಳಿನ ಕಾರ್ಯಗಳಿಗೆ ನೆರವಾಗುವ ಮತ್ತು ಅನುಕೂಲವಾಗುವಂತಹ ನಾರಿನಂಶವನ್ನು ಅಧಿಕವಾಗಿ ಹೊಂದಿದೆಎನ್ನುತ್ತಾರೆ ಪುದುಚೆರಿಯ ಜವಾಹರ್‌ಲಾಲ್ ಇನ್ಸ್‌ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುವೇಟ್ ಮೆಡಿಕಲ್ ಎಜುಕೇಶನ್ ಆಂಡ್ ರಿಸರ್ಚ್‌ನ ಸಹಾಯಕ ಡಯೆಟಿಷನ್ ಆಗಿರುವ ಅಂಕಿತಾ ದೆಬ್ಬರ್ಮ. 

ಈ ಪೊಟ್ಯಾಸಿಯಂ-ಭರಿತ ಸಿಹಿಗೆಣಸು ಹೃದಯದ ಆರೋಗ್ಯಮತ್ತು ನಮ್ಮಮೂತ್ರಪಿಂಡಗಳಿಗೆ ಉತ್ತಮ. ಪೊಟ್ಯಾಶಿಯಂ ಹೆಚ್ಚುವರಿ ಸೋಡಿಯಂ ಅನ್ನು ಸಮತೋಲನಗೊಳಿಸುತ್ತದೆ ಎಂಬುದು ಸಾಮಾನ್ಯವಾಗಿ ತಿಳಿದಿರುವ ವಿಷಯ. ಇದರೊಂದಿಗೆ, ದೇಹದ ದ್ರವ, ತಾಪಮಾನ ಮತ್ತು ರಕ್ತದೊತ್ತಡ ಸಮತೋಲನವನ್ನು ಸಂರಕ್ಷಿಸಲು ಅತ್ಯಗತ್ಯ. ಕಂದು ಸಿಪ್ಪೆಯ ಸಿಹಿಗೆಣಸು ಹೆಚ್ಚಿನ ಬೀಟಾ ಕ್ಯಾರೋಟಿನ್ ಅಂಶವನ್ನು (ವಿಟಮಿನ್ ಎ) ಹೊಂದಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಅದರಲ್ಲೂ ವಯಸ್ಸಾದಂತೆ ಬರುವ ದೃಷ್ಟಿಹೀನತೆಗೆ ಪ್ರಯೋಜನಕಾರಿ.  

ಸಿಹಿಗೆಣಸು ಅಧಿಕ ಪಿಷ್ಟ ಹೊಂದಿರುವುದರಿಂದ ಆದರೆ ಮಧುಮೇಹ ಹೊಂದಿರುವವರು ಮತ್ತು ಇತರ ಚಯಾಪಚಯ ಅಸ್ವಸ್ಥತೆಗಳನ್ನು ಹೊಂದಿರುವವರು ಇದನ್ನು ಸೇವಿಸಬಾರದು,” ಎಂದು ದೆಬ್ಬರ್ಮ ಹೇಳುತ್ತಾರೆ. 

ನಿಮ್ಮ ಆಹಾರಕ್ರಮದಲ್ಲಿ ನೀವು ಗೆಡ್ಡೆ ಗೆಣಸನ್ನು ಸೇರಿಸಲು ಪ್ರಯತ್ನಿಸುತ್ತಿದ್ದರೆ, ಈ ಸ್ವಾದಿಷ್ಟಕರ ಸಿಹಿಖಾದ್ಯದ ರೆಸಿಪಿಯನ್ನು ಪ್ರಯತ್ನಿಸಿ. 

ತಯಾರಿಸುವ ಸಮಯ: 30 ನಿಮಿಷಗಳು  

ಎಷ್ಟು ಜನರಿಗೆ: 5 

ಕ್ಲಿಷ್ಟತಾ ಮಟ್ಟ:ಸುಲಭ 

ಪದಾರ್ಥಗಳು ಮತ್ತು ಅಳತೆ 

ಕಂದು ಸಿಪ್ಪೆಯ ಸಿಹಿಗೆಣಸು – 325ಗ್ರಾಂ 

ಹಾಲು (ಹಸುವಿನ ಹಾಲು/ತೆಂಗಿನ ಹಾಲು) – 115ಎಂಎಲ್ 

ಬೆಲ್ಲ – 50ಗ್ರಾಂ 

ಬಾದಾಮಿ – 10 ಗ್ರಾಂ 

ಗೋಡಂಬಿ – 10 ಗ್ರಾಂ 

ತುಪ್ಪ – 50 ಗ್ರಾಂ 

ಮಾಡುವ ವಿಧಾನ 

  • ಎರಡು ಅಥವಾ ಮೂರು ಸಿಹಿಗೆಣಸನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಎರಡು ವಿಶಲ್ ಕೂಗಿಸಿ  
  • ಅವುಗಳ ಸಿಪ್ಪೆತೆಗೆದು ಪುಡಿ ಮಾಡಿ, ತಣ್ಣಗಾಗಲು ಬಿಡಿ. 
  • ಒಂದು ಪ್ಯಾನ್‌ಗೆ ಒಂದು ಟೇಬಲ್‌ಸ್ಪೂನ್ ತುಪ್ಪ ಹಾಕಿ ಒಂದು ತುಂಡು ಚಕ್ಕೆ ಹಾಗೂ ಎರಡು ಏಲಕ್ಕಿ ಹಾಕಿ ಒಂದು ನಿಮಿಷ ಹುರಿಯಿರಿ. 
  • ಸ್ವಲ್ಪ ಬಾದಾಮಿ, ಗೋಡಂಬಿ ತುಂಡುಗಳನ್ನು ಈ ಮಿಶ್ರಣಕ್ಕೆ ಸೇರಿಸಿ 
  • ಪುಡಿ ಮಾಡಿದ ಸಿಹಿಗೆಣಸನ್ನು ಪ್ಯಾನ್‌ಗೆ ಸೇರಿಸಿ ಒಂದು ನಿಮಿಷ ಹುರಿಯಿರಿ 
  • ಇದಕ್ಕೆ ಕಾಯಿಸಿದ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 
  • ಬೆಲ್ಲದ ಹುಡಿ ಸೇರಿಸಿ ಮತ್ತೊಮ್ಮೆ ಮಿಶ್ರಣ ಮಾಡಿ 
  • ಉಳಿದ ತುಪ್ಪವನ್ನು ನಿಧಾನಕ್ಕೆ ಕೈಯಾಡಿಸುತ್ತಾ ಸೇರಿಸಿ  
  • ಹಲ್ವಾ ಪ್ಯಾನ್‌ನಿಂದ ತಳ ಬಿಡಲು ಆರಂಭಿಸಿದಾಗ ತೆಗೆದು ಬಡಿಸಿ. 

ಪ್ರತಿ ಸರ್ವಿಂಗ್‌ನಲ್ಲಿ ಪೋಷಕಾಂಶದ ಮೌಲ್ಯ 

ಒಟ್ಟು ಕ್ಯಾಲರಿಗಳು  235 ಕಿಲೋಕ್ಯಾಲರಿ 
ಒಟ್ಟು ಕಾರ್ಬೋಹೈಡ್ರೇಟ್‌ಗಳು  25.95ಗ್ರಾಂ 
ಒಟ್ಟು ಕೊಬ್ಬಿನಂಶ  13.28ಗ್ರಾಂ 
ನಾರಿನಂಶ  3.22ಗ್ರಾಂ 
ಪ್ರೊಟೀನ್  2.54ಗ್ರಾಂ 
ಪೊಟ್ಯಾಶಿಯಂ  326.18ಮಿಲಿಗ್ರಾಂ 
ಬೀಟಾ ಕ್ಯಾರೋಟಿನ್  3497.54ಮಿಲಿಗ್ರಾಂ 
ವಿಟಮಿನ್ ಸಿ  17.64ಮಿಲಿಗ್ರಾಂ 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ