0

0

0

ಈ ಲೇಖನದಲ್ಲಿ

ತೂಕ ಇಳಿಸಲು ಬರೀ ಡಯೆಟ್ ಸಾಕಾಗಲ್ಲ
12

ತೂಕ ಇಳಿಸಲು ಬರೀ ಡಯೆಟ್ ಸಾಕಾಗಲ್ಲ

ಪರಿಣಾಮಕಾರಿಯಾಗಿ ತೂಕ ಕಡಿಮೆ ಮಾಡಿಕೊಳ್ಳಲು ವ್ಯಾಯಾಮ, ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಆವಶ್ಯಕ.

ನಿಮ್ಮ ಬಾಯಿ ಚಪಲವನ್ನು ಸೂಚಿಸುವ ತೂಕ ಮಾಪಕವು, ಏರುತ್ತಿರುವ ಅಂಕಿಯನ್ನು ಪ್ರದರ್ಶಿಸುವಾಗ ಸಂಕಟವಾಗುತ್ತದೆ. ಆದರೆ, ಅಷ್ಟೊತ್ತಿಗಾಗಲೇ ನಿಮ್ಮ ದೇಹದ ಮೇಲೆ ಒಂದಷ್ಟು ಹಾನಿಯಾಗಿ ಹೋಗಿರುತ್ತದೆ, ಹೊಟ್ಟೆಯ ಬೊಜ್ಜು ಎದ್ದು ಕಾಣುತಿರುತ್ತದೆ, ದೇಹ ದ್ರವ್ಯ ಸೂಚ್ಯಂಕ ಅಂದರೆ  BMI (ಬಾಡಿ ಮಾಸ್ ಇಂಡೆಕ್ಸ್) 25 ದಾಟಿರುತ್ತದೆ.

ಇಲ್ಲಿ ನೀವು ಗ್ರಹಿಸಬೇಕಾದ ಮೊದಲ ವಿಷಯವೆಂದರೆ ನಿಮ್ಮ ಆಹಾರಕ್ರಮವನ್ನು ಮರುಪರಿಶೀಲಿಸುವುದು. ಆದರೆ ಆಹಾರವು ತೀರಾ ಕಳಪೆ ಅಥವಾ ಕಡಿಮೆ ಪ್ರಮಾಣದ್ದಾಗಿರಬಾರದು ಎಂದು ತಜ್ಞರು ಹೇಳುತ್ತಾರೆ.

ನೋಯ್ಡಾದ ಶೈಕ್ಷಣಿಕ ಸಲಹೆಗಾರರಾದ 44 ವರ್ಷದ ನಿರ್ಮಲ್ ಭಟ್ ಅವರು ತೂಕ ತಗ್ಗಿಸಿಕೊಂಡ ಕಥೆ ಹೀಗಿದೆ. ರಾತ್ರಿಯ ಊಟವನ್ನು ಬೇಗನೇ ಮುಗಿಸುವುದರೊಂದಿಗೆ, ಕರಿದ ತಿಂಡಿ, ಜಂಕ್ ಫುಡ್ ಮತ್ತು ಸಿಹಿತಿಂಡಿಗಳನ್ನು ತ್ಯಜಿಸುವುದರ ಮೂಲಕ ತೂಕ ಇಳಿಸುವ ಯೋಜನೆ ಅವರದಾಗಿತ್ತು. “ತೂಕ ತಗ್ಗಿಸುವ ನನ್ನ ಪಯಣದಲ್ಲಿ, ಆಹಾರಕ್ರಮವು ನಿರ್ಣಾಯಕ ಪಾತ್ರ ವಹಿಸಿದ್ದರೂ, ನನ್ನ ಜೀವನಶೈಲಿ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಮರುಪರಿಶೀಲಿಸಿಕೊಂಡದ್ದು ನನ್ನ ತೂಕ ಇಳಿಕೆಗೆ ಪ್ರಮುಖ ಕಾರಣವಾಯಿತು. ಇದರಿಂದ ನನ್ನ ರಕ್ತದೊತ್ತಡ ಮತ್ತು ಥೈರಾಯ್ಡ್ ಮಟ್ಟ ಕೂಡಾ ನಿಯಂತ್ರಣಕ್ಕೆ ಬರುವಂತಾಯಿತು” ಎಂದು ಅವರು ಹೇಳುತ್ತಾರೆ.

ಆಹಾರ ಕ್ರಮ ಮತ್ತು ತೂಕ ತಗ್ಗಿಸಿಕೊಳ್ಳುವುದು

ಸಮತೋಲಿತ ಆಹಾರವು ತೂಕವನ್ನು ಕಳೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ, ಆದರೆ ದೈನಂದಿನ ಆಹಾರ ಸೇವನೆಯ ಜೊತೆಗೆ, ವ್ಯಾಯಾಮವನ್ನು ಸೇರಿಸುವ ಮೂಲಕ, ಫಿಟ್‌ನೆಸ್ ಗುರಿಯತ್ತ  ನೀವು ಬಹಳ ಬೇಗ ತಲುಪಬಹುದು ಎಂದು ಪೌಷ್ಟಿಕತಜ್ಞ ಮತ್ತು ತರಬೇತುದಾರ ಹರ್ಲೀನ್ ಗುಲಾಟಿ ಹೇಳುತ್ತಾರೆ.

“ಈ ದಿನಗಳಲ್ಲಿ ತೂಕವನ್ನು ಕಡಿಮೆ ಮಾಡಲು ಇಂಟರ್‌ನೆಟ್ ನಮಗೆ ಹಲವಾರು ವಿಧಾನಗಳನ್ನು ಹೇಳುತ್ತದೆ, ಆದರೆ ನಿಯಮಿತ ಆಹಾರ ಮತ್ತು ವ್ಯಾಯಾಮವು ವಿಶ್ವಾಸಾರ್ಹವಾದ ವಿಧಾನವಾಗಿದೆ” ಎಂದು ಬೆಂಗಳೂರಿನ ಮದರ್‌ಹುಡ್ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್ ಫಿಸಿಯೋಥೆರಪಿಸ್ಟ್ ಮತ್ತು ಸರ್ಟಿಫೈಡ್ ಡಯಟ್ ಕೌನ್ಸಿಲರ್ ಡಾ ಸ್ವಾತಿ ರೆಡ್ಡಿ ಅಭಿಪ್ರಾಯಪಡುತ್ತಾರೆ.

ನಕಾರಾತ್ಮಕ ಕ್ಯಾಲೋರಿ ಸಮತೋಲನದ ಗುರಿ

ತಂತ್ರಜ್ಞಾನ-ಪ್ರೇರಕ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್, GOQii ನಲ್ಲಿ ಲೈಫ್‌ಸ್ಟೈಲ್ ಎಕ್ಸ್‌ಪರ್ಟ್ ಆಗಿರುವ ಅರೂಷಿ ಗಾರ್ಗ್, ನಕಾರಾತ್ಮಕ ಕ್ಯಾಲೋರಿ ಸಮತೋಲನದ ಗುರಿ ಇರಿಸಿಕೊಳ್ಳಬೇಕು ಎಂದು ಹೇಳುತ್ತಾರೆ. “ ಈ ವಿಧಾನದಲ್ಲಿ ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸುತ್ತೀರಿ ಮತ್ತು ಹೆಚ್ಚಿನ ಕ್ಯಾಲೊರಿಗಳನ್ನು ಕರಗಿಸುತ್ತೀರಿ ಮತ್ತು ಸಂಗ್ರಹವಾಗಿರುವ ಕೊಬ್ಬು ಚಯಾಪಚಯಗೊಳ್ಳಲು ಅವಕಾಶವನ್ನು ನೀಡುತ್ತೀರಿ”  ಎಂದು ಅವರು ಹೇಳುತ್ತಾರೆ. ದೈನಂದಿನ ಪೋಷಣೆಯ ಅವಶ್ಯಕತೆಗಳನ್ನು ಪೂರೈಸಲು ಪ್ರೋಟೀನ್-ಭರಿತ ಆಹಾರವನ್ನು ಹೆಚ್ಚಿಸುವಾಗ ದೈನಂದಿನ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಕಡಿತಗೊಳಿಸುವಂತಹ ಸಣ್ಣ ಹಂತಗಳ ಮೂಲಕ ಇದನ್ನು ಸಾಧಿಸಬಹುದು.

“ನೀವು ಕರಗಿಸಿಕೊಳ್ಳಬೇಕಾದುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸಿದರೆ, ಅಲ್ಲಿ ಯಾವುದೇ ತೂಕ ಕಡಿಮೆಯಾಗುವುದಿಲ್ಲ ” ಎಂದು ಡಾ ರೆಡ್ಡಿ ವಿವರಿಸುತ್ತಾರೆ. ಕ್ಯಾಲೋರಿ ಕರಗಿಸುವ ಆಹಾರದ ಮಾದರಿಯ ಗುರಿಯಿಟ್ಟುಕೊಳ್ಳುವಾಗ ಯಾವುದನ್ನೂ ಅತಿಯಾಗಿ ಮಾಡಬಾರದು ಎಂಬುದು ಅವರ ಎಚ್ಚರಿಕೆಯ ಮಾತು. ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಕ್ಯಾಲೊರಿಗಳನ್ನು ಕರಗಿಸುವುದರಿಂದ ಆಯಾಸ, ನಿದ್ರಾಹೀನತೆ, ಚಯಾಪಚಯ ಕ್ರಿಯೆಯಲ್ಲಿ ಇಳಿಕೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ನಾರಿನಂಶದ ಗುಣಲಕ್ಷಣಗಳು

ತೂಕ ಇಳಿಸಿಕೊಳ್ಳುವ ಹಾದಿಯಲ್ಲಿ ನಾರಿನಂಶ- ಭರಿತ ಆಹಾರಗಳು ನಿಮ್ಮ ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ನಾರಿನಂಶವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಇಂತಹ ಆಹಾರಗಳು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಇರಿಸುತ್ತವೆ.

ಉದ್ದು,ದವಸ-ಧಾನ್ಯಗಳು, ಕಿಡ್ನಿ ಬೀನ್ಸ್, ಸೌತೆಕಾಯಿಗಳು, ಹಣ್ಣುಗಳು, ಓಟ್ಸ್, ಬೀಜಗಳು, ಕುಚ್ಚಲಕ್ಕಿ ಇವು ನಾರಿನಂಶ ಮತ್ತು ಇತರ  ಆವಶ್ಯಕ  ಪೋಷಕಾಂಶಗಳನ್ನು ಹೊಂದಿರುವ ಆಹಾರಗಳು, ಈ ಆಹಾರಗಳು ನಿಮ್ಮ ಊಟದ ತಟ್ಟೆಯಲ್ಲಿರಬೇಕು.

ಸಣ್ಣ ಬದಲಾವಣೆ, ದೊಡ್ಡ ವ್ಯತ್ಯಾಸ

ಆಹಾರ ಮತ್ತು ಜೀವನಶೈಲಿಯಲ್ಲಿ ತೀವ್ರವಾದ ಬದಲಾವಣೆಗಳನ್ನು ಮಾಡುವ ಬದಲು, ಸಣ್ಣ ಮತ್ತು ನಿರಂತರವಾದ ಕ್ರಮಗಳ ಮೂಲಕ ತೂಕ ತಗ್ಗಿಸಿಕೊಳ್ಳಬಹುದು. ನಿರ್ಮಲ್ ಭಟ್ ಅವರ ವಿಷಯದಲ್ಲಿ, ಅವರ ತರಬೇತುದಾರರು ಅವರ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲು ಮಾರ್ಗದರ್ಶನ ನೀಡಿದರು – ನಿಯಮಿತವಾಗಿ ಸಲಾಡ್‌ಗಳನ್ನು ಸೇವಿಸುವುದು ಮತ್ತು 15 ನಿಮಿಷಗಳ ಪ್ರಾಣಾಯಾಮದ ಅಭ್ಯಾಸ ಸೇರಿದಂತೆ,  ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು, ಸ್ಟ್ರೆಚಿಂಗ್, ನಿಗದಿತ ಊಟದ ಸಮಯ, ರಾತ್ರಿಯ ಊಟ ಬೇಗ ಮುಗಿಸುವುದು ಇತ್ಯಾದಿ. ಭಟ್ಟರು ತನ್ನ ಚಹಾ ಸೇವನೆಯನ್ನು ಪ್ರತಿದಿನ ಎರಡು ಕಪ್‌ಗಳಿಗೆ ಇಳಿಸಬೇಕಾಗಿತ್ತು, ಸಿಹಿತಿಂಡಿಗಳು ಮತ್ತು ಜಂಕ್ ಫುಡ್‌ಗಳನ್ನು ಬಿಟ್ಟು ಬಿಡಬೇಕಾಯಿತು.

“ಆಹಾರ ಕ್ರಮಕ್ಕೆ ಬದ್ಧವಾಗಿರುವುದು ಮತ್ತು ನನ್ನ ದೇಹಕ್ಕೆ ನಾನು ನೀಡುವ ಆಹಾರವನ್ನು ಪರಿಶೀಲಿಸುವ ಮೂಲಕ 82 ಕಿಲೋಗಳಿಂದ 61 ಕಿಲೋಗಳನ್ನು ತಲುಪಲು ನನಗೆ ಸಾಧ್ಯವಾಯಿತು” ಎಂದು ಭಟ್ ಹೇಳುತ್ತಾರೆ. “ತೂಕವನ್ನು ನಿರ್ವಹಿಸುವಲ್ಲಿ ಡಯಟ್ ಖಂಡಿತವಾಗಿಯೂ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದರೆ, ಸೂಕ್ತವಾದ ತರಬೇತಿ ಅಥವಾ ದೈಹಿಕ ಚಟುವಟಿಕೆಯಿಲ್ಲದೆ, ನೀವು ಕಳೆದುಕೊಂಡಿರುವ ಯಾವುದೇ ತೂಕವು ಮತ್ತೆ ಹಿಂದಿರುಗುವ ಸಾಧ್ಯತೆ ಇದೆ. ದೈಹಿಕ ಚಟುವಟಿಕೆಗಳ ಜೊತೆ ಜೊತೆಗೆ ಕ್ಯಾಲೊರಿಗಳನ್ನು ಕರಗಿಸಿಕೊಳ್ಳಬೇಕು ಆ ಮೂಲಕ ತೆಳ್ಳಗಿನ ಸ್ನಾಯುಗಳನ್ನು ಪಡೆಯಬೇಕು. ತೂಕ ನಿರ್ವಹಣೆಯ ತರಬೇತಿಯ ಮೂಲಕ ಇದನ್ನು ಸಾಧಿಸಬಹುದು ”ಎಂದು ಗಾರ್ಗ್ ಹೇಳುತ್ತಾರೆ.

ವ್ಯಾಯಾಮ ಸೀಮಿತವಾದಾಗ

ಗಾಯ, ಮೊಣಕಾಲು ಶಸ್ತ್ರಚಿಕಿತ್ಸೆ, ಸಂಧಿವಾತ ಅಥವಾ ರಕ್ತದ ಕಡಿಮೆ ಸಕ್ಕರೆ ಮಟ್ಟಗಳ ಕಾರಣದಿಂದಾಗಿ ದೈಹಿಕ ಚಟುವಟಿಕೆ ಸೀಮಿತಗೊಂಡಿರುವ ವ್ಯಕ್ತಿಗಳು  ಉತ್ತಮ ಆಹಾರಾಭ್ಯಾಸಗಳ ಕಾರಣದಿಂದಾಗಿ ತೂಕವನ್ನು ಕಳೆದುಕೊಳ್ಳುವ ವರ್ಗಕ್ಕೆ ಸೇರುತ್ತಾರೆ.

 ಯಾವುದನ್ನು ಸೇವಿಸಬೇಕು?

ಡಾ ರೆಡ್ಡಿ ಅವರ ಪ್ರಕಾರ,

  • ಕಾರ್ಬೋಹೈಡ್ರೇಟ್‌ಗಳು (ಧಾನ್ಯಗಳು, ರಾಗಿ), ಪ್ರೋಟೀನ್ (ಇಡೀ ಧಾನ್ಯಗಳು, ಬೀಜಗಳು, ಸಮುದ್ರಾಹಾರ ಮತ್ತು ತೆಳು ಮಾಂಸ, ಇತ್ಯಾದಿ) ವಿಟಮಿನ್‌ಗಳು ಮತ್ತು ಖನಿಜಗಳನ್ನು (ತಾಜಾ ಹಣ್ಣುಗಳು ಮತ್ತು ತರಕಾರಿಗಳು) ಒಳಗೊಂಡಿರುವ ಸಮತೋಲಿತ, ಪೌಷ್ಟಿಕ ಆಹಾರವನ್ನು ಸೇವಿಸುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಅತ್ಯುತ್ತಮ ವಿಧಾನವಾಗಿದೆ.
  • ಹಸಿರು, ಸೊಪ್ಪುಗಳು, ವೈವಿಧ್ಯಮಯ ತರಕಾರಿಗಳು ಮತ್ತು ಹಣ್ಣುಗಳು, ಉತ್ತಮ-ಗುಣಮಟ್ಟದ ಕಾರ್ಬೋಹೈಡ್ರೇಟ್‌ ಮತ್ತು ಕೊಬ್ಬಿನ ಜೊತೆಗೆ ಅದ್ಭುತಗಳನ್ನು ಮಾಡಬಹುದು. ಪ್ರೋಟೀನ್‌ಗಳು, ನಾರಿನಂಶ ಮತ್ತು ಸೂಕ್ಷ್ಮ ಪೋಷಕಾಂಶಗಳು ನಿಮ್ಮ ಆರೋಗ್ಯಕ್ಕೆ ಹೆಚ್ಚುವರಿ ಬಲವನ್ನು ನೀಡಬಲ್ಲವು ಮತ್ತು ತೂಕ ತಗ್ಗಿಸುವ ಯೋಜನೆಗೆ ಇವು ಅತ್ಯುತ್ತಮ ಆಯ್ಕೆಯಾಗಬಲ್ಲವು.
  • ಪ್ರತಿ ದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ.
  • ಊಟಕ್ಕೆ ಮೊದಲು ಅರ್ಧದಿಂದ ಒಂದು ಲೀಟರ್ ನೀರು ಕುಡಿಯುವುದು ಒಟ್ಟು ಕ್ಯಾಲೋರಿ ಕರಗಿಸಲು  ಸಹಾಯಕ. ಊಟಕ್ಕೆ ಮೊದಲು ನೀರು ಸೇವಿಸುವ ಜೊತೆಗೆ ಹೈಪೋ ಕ್ಯಾಲೋರಿಕ್ ಆಹಾರ ಸೇವನೆ ತೂಕ ಇಳಿಸುವ ನಿಟ್ಟಿನಲ್ಲಿ ಅತ್ಯುತ್ತಮ ವಿಧಾನ.
  • USA ನ ಹ್ಯೂಮನ್ ನ್ಯೂಟ್ರೀಷನ್ ವಿಭಾಗದ, ಎಲಿಜಬೆತ್ ಎ ಡೆನ್ನಿಸ್ ನೇತೃತ್ವದ ಅಧ್ಯಯನವು 12 ವಾರಗಳ ಕಾಲ ಎರಡು ಹೈಪೋಕ್ಯಾಲೋರಿಕ್ ಗುಂಪುಗಳನ್ನು ವಿಶ್ಲೇಷಿಸಿದೆ. ಹೈಪೋಕ್ಯಾಲೋರಿಕ್ ಆಹಾರ (ಕಡಿಮೆ ಕ್ಯಾಲೊರಿಯುಳ್ಳ ಆಹಾರ)  ಮತ್ತು ಊಟಕ್ಕೆ ಮೊದಲು 500 ಮಿಲಿಯಷ್ಟು ನೀರು ಸೇವಿಸಿದ ಗುಂಪು ಹೆಚ್ಚುವರಿ ಎರಡು ಕಿಲೋಗಳನ್ನು ತಗ್ಗಿಸಿಕೊಂಡಿತ್ತು ಎಂಬುದನ್ನು ಈ ಅಧ್ಯಯನವು ಬಹಿರಂಗಪಡಿಸಿದೆ. ಅಂದರೆ ಈ ಗುಂಪು ಹೈಪೋಕ್ಯಾಲೋರಿಕ್ ಆಹಾರದಲ್ಲಿ ಮಾತ್ರ ಇರುವ ಮತ್ತೊಂದು ಗುಂಪಿಗಿಂತ 44 ಪ್ರತಿಶತ ಹೆಚ್ಚು ತೂಕವನ್ನು ತಗ್ಗಿಸಿಕೊಂಡಿತ್ತು.
  • ಅಧಿಕ ತೂಕವಿರುವ ಮಹಿಳೆಯರಲ್ಲಿ ನಡೆಸಿದ ಮತ್ತೊಂದು ಅಧ್ಯಯನವು, ಒಂದು ಲೀಟರ್‌ಗಿಂತ ಹೆಚ್ಚು ನೀರಿನ ಸೇವನೆಯ ಪರಿಣಾಮವನ್ನು ಪರಿಶೀಲಿಸಿದ್ದು, ಈ ಅಧ್ಯಯನದಲ್ಲಿ ಭಾಗವಹಿಸಿದ್ದ ಪ್ರಯೋಗಾರ್ಥಿಗಳು, 12 ತಿಂಗಳ ಅವಧಿಯಲ್ಲಿ ಹೆಚ್ಚುವರಿ ಎರಡು ಕಿಲೋಗಳನ್ನು ಇಳಿಸಿಕೊಂಡಿದ್ದರು.

ಯಾವುದನ್ನು ತ್ಯಜಿಸಬೇಕು?

  • ಸಿಹಿ ಪಾನೀಯಗಳು, ತಂಪು ಪಾನೀಯಗಳು, ಕೋಲಾಗಳು, ಮಸಾಲೆ ಸಾಸ್‌ಗಳು ಮತ್ತು ಎನರ್ಜಿ ಡ್ರಿಂಕ್‌ಗಳಿಗೆ  ಕಟ್ಟುನಿಟ್ಟಾಗಿ ‘ಇಲ್ಲ’  ಎಂದು ಹೇಳಬೇಕು. ಏಕೆಂದರೆ ಅವುಗಳಲ್ಲಿ ಯಾವುದೇ ಪೌಷ್ಟಿಕಾಂಶವಿರುವುದಿಲ್ಲ ಕೇವಲ ಕ್ಯಾಲೊರಿಗಳು ಮಾತ್ರವೇ ಇರುತ್ತವೆ. ಈ ಆಹಾರಗಳು ದೇಹದಿಂದ ವೇಗವಾಗಿ ಹೀರಲ್ಪಡುತ್ತವೆ ಮತ್ತು ಹೆಚ್ಚುವರಿ ಕ್ಯಾಲೊರಿಗಳು ಕೊಬ್ಬಿನಂತೆ ಸಂಗ್ರಹವಾಗುತ್ತವೆ. ಸಿಹಿ ಪಾನೀಯಗಳಿಗೂ, ಚಯಾಪಚಯ ಕ್ರಿಯೆಯ ತಗ್ಗುವಿಕೆಗೂ ಸಂಬಂಧವಿದೆ- ದೇಹದಲ್ಲಿ ಆಹಾರವು ಯಾವ ಕ್ರಮದಲ್ಲಿ ಜೀರ್ಣವಾಗುತ್ತದೆ ಮತ್ತು ಕ್ರಿಯಾಶೀಲವಾಗುತ್ತದೆ ಎಂಬುದನ್ನು ಸಂಶೋಧನೆಗಳು ತೋರಿಸಿವೆ.
  • ಆರೋಗ್ಯಕರವೆಂದು ಗ್ರಹಿಸಲಾದ ಪ್ಯಾಕ್ ಮಾಡಲಾದ ಹಣ್ಣಿನ ರಸಗಳು ವಾಸ್ತವವಾಗಿ ಹಾಗಿರುವುದಿಲ್ಲ: ಅವುಗಳು ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಸಕ್ಕರೆಯನ್ನು ಹೊಂದಿರುತ್ತವೆ – 250 ಮಿಲಿ ರಸದಲ್ಲಿ ಸುಮಾರು 30 ಗ್ರಾಂ ಸೇರಿಸಿದ ಸಕ್ಕರೆ ಇರುತ್ತದೆ (ಏಳು ಟೀ ಚಮಚಗಳು).

 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

fourteen − thirteen =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ