0

0

0

ಈ ಲೇಖನದಲ್ಲಿ

ತಂಗಳನ್ನ ಇರಿಟೇಬಲ್ ಬೋವೆಲ್ ಸಿಂಡ್ರೋಮ್ ಇರುವವರಿಗೆ ವರದಾನ
878

ತಂಗಳನ್ನ ಇರಿಟೇಬಲ್ ಬೋವೆಲ್ ಸಿಂಡ್ರೋಮ್ ಇರುವವರಿಗೆ ವರದಾನ

ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.

ತಂಗಳನ್ನ ಸೇವನೆಯಿಂದ ಚೆನ್ನೈನ 48 ವರ್ಷದ ಉಮಾಧೇಶ್ವರಿ ಅವರ ಬಹುದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಿತು. ಅವರು ಏಳು ವರ್ಷಗಳಿಂದ ಗ್ರಹಿಣಿ ಅಥವಾ ಐಬಿಎಸ್ ಸಮಸ್ಯೆಯಿಂದ ಬಳಲುತ್ತಿದ್ದು ಸರಿಯಾಗಿ ಊಟ ಮಾಡಲೂ ಆಗದ ಸ್ಥಿತಿ ತಲುಪಿದ್ದರು.

IBS ಎನ್ನುವುದು ಆಹಾರವನ್ನು ಸೇವಿಸಿದ ಕರುಳನ್ನು ಕೆರಳಿಸುವ ಸ್ಥಿತಿಯಾಗಿದ್ದು ಈ ಸ್ಥಿತಿಯಲ್ಲಿ ಮತ್ತೆ ಮತ್ತೆ ಬರುವ ಹೊಟ್ಟೆ ನೋವು ಮತ್ತು ಕರುಳಿನ ಚಲನೆಯನ್ನು ಬದಲಾಯಿಸುವುದು ಸೇರಿದಂತೆ ಅನೇಕ ಲಕ್ಷಣಗಳು ಕಂಡುಬರುತ್ತವೆ. ಇದು ಅತಿಸಾರ, ಮಲಬದ್ಧತೆ ಅಥವಾ ಎರಡನ್ನೂ ಒಳಗೊಂಡಿರುತ್ತದೆ.

ಹ್ಯಾಪಿಯೆಸ್ಟ್ ಹೆಲ್ತ್‌ನೊಂದಿಗೆ ಮಾತನಾಡುತ್ತಾ, ಉಮಾಧೇಶ್ವರಿ ಅವರು ನಾನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿ ಇರ್ತಿದ್ದೆ, ಅತಿಸಾರದ ಕಾರಣದಿಂದಾಗಿ ಆಗಾಗ್ಗೆ ವಿಸರ್ಜನೆಗೆ ಹೋಗೋದ್ರಿಂದ ನೀರಿನಂಶ ಕಡಿಮೆ ಇರ್ತಿತ್ತು. ಊಟ ಮಾಡುವಾಗ ನೆಮ್ಮದಿ ಇರ್ತಾ ಇರ್ಲಿಲ್ಲ, ಎಷ್ಟೇ ಬೇರೆ ಬೇರೆ ಆಹಾರ ಪದ್ಧತಿ, ಔಷಧಿಗಳನ್ನು ಪ್ರಯತ್ನಿಸಿದರೂ ಅವುಗಳು ತಾತ್ಕಾಲಿಕ ಪರಿಹಾರ ಅಷ್ಟೇ ನೀಡ್ತಿತ್ತು” ಎಂದು ತಿಳಿಸಿದರು.

ತಂಗಳನ್ನ:

ಪ್ರತಿದಿನ ಬೆಳಿಗ್ಗೆ ತಂಗಳನ್ನ ಸೇವನೆಯಿಂದ ಉಮಾದೇಶ್ವರಿಯ ಸಮಸ್ಯೆ ಪರಿಹಾರವಾಯ್ತು. ಎರಡು ತಿಂಗಳೊಳಗೆ ಪರಿಸ್ಥಿತಿ ಸುಧಾರಿಸಿತು. “ಕಳೆದ ಏಳು ವರ್ಷಗಳಿಂದ ಏನು ತಿನ್ನಬೇಕು ಮತ್ತು ಯಾವುದನ್ನು ತಪ್ಪಿಸಬೇಕು ಎಂಬುದರ ಕುರಿತು ನಾನು ಯಾವಾಗ್ಲೂ ಯೋಚನೆ ಮಾಡ್ತಾ ಇರ್ಬೇಕಿತ್ತು. ಈಗ ಆರು ತಿಂಗಳಾಗಿದೆ, ಲೂಸ್ ಮೋಷನ್ ಸಂಪೂರ್ಣವಾಗಿ ನಿಂತಿದೆ. ನಾನು ಮೊದಲಿಗಿಂತ ಹೆಚ್ಚು ಶಕ್ತಿಯುತವಾಗಿರುತ್ತೇನೆ. ಈಗ ತಂಗಳನ್ನ ತಿನ್ಬೇಕು ಅಂತಲ್ಲದೆ ಇದ್ರೂ ನಂಗೆ ಅದು ಇಷ್ಟ ಆಗಿದೆ” ಎಂದು ಅವರು ಹೇಳುತ್ತಾರೆ.

ಚೆನ್ನೈನ ಸರ್ಕಾರಿ ಸ್ಟಾನ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ ಎಸ್ ಜೆಸ್ವಂತ್, ತಂಗಳನ್ನ ತಮ್ಮ ಆಸ್ಪತ್ರೆಯ ಆಹಾರದ ಭಾಗವಾಗಿದೆ ಮತ್ತು ಅನೇಕ ರೋಗಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ ಎಂದು ಹೇಳುತ್ತಾರೆ. ಕ್ರೋನ್ಸ್ ಕಾಯಿಲೆ ಮತ್ತು ಅಲ್ಸರೇಟಿವ್ ಕೊಲೈಟಿಸ್ (UC) ನಂತಹ ಉರಿಯೂತದ ಕರುಳಿನ ಕಾಯಿಲೆಗಳಿಗೆ (IBD) ಚಿಕಿತ್ಸೆಯಲ್ಲಿ ಪ್ರೋಬಯಾಟಿಕ್‌ಗಳ (ಹುದುಗಿಸಿದ ಅಕ್ಕಿಯಲ್ಲಿ ಪ್ರಸ್ತುತ) ಪರಿಣಾಮಗಳನ್ನು ಅಧ್ಯಯನ ಮಾಡಲು ತಮಿಳುನಾಡು ಆರೋಗ್ಯ ಇಲಾಖೆಯು ತಮ್ಮ ಆಸ್ಪತ್ರೆಯಲ್ಲಿ ನಿಯೋಜಿಸಿದ ಸಂಶೋಧನಾ ಯೋಜನೆಯ ಭಾಗವಾಗಿದೆ.

ಜೊಹೊ ಸಿಇಒ ಶ್ರೀಧರ್ ವೆಂಬು ಅವರು ಇತ್ತೀಚೆಗೆ ಪಝೈಯಾ ಸೋರು (ಸಾಂಪ್ರದಾಯಿಕ ಹುದುಗಿಸಿದ ಅಕ್ಕಿ) ಅನ್ನು ಕಳೆದ ವರ್ಷ ಬೆಳಗಿನ ಉಪಾಹಾರವಾಗಿ ಸೇವಿಸಿದ್ದು ಅವರ IBS ಗೆ ಸಹಾಯ ಮಾಡಿದೆ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ತಿಳಿಸಿದ್ದಾರೆ.

“ನಮ್ಮ ಕರುಳಿನಲ್ಲಿ ಲಕ್ಷಾಂತರ ಉತ್ತಮ ಬ್ಯಾಕ್ಟೀರಿಯಾಗಳಿವೆ, ಅದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಪ್ರತಿಜೀವಕಗಳು, ರಾಸಾಯನಿಕಗಳು, ಆಹಾರ ಬಣ್ಣ ಏಜೆಂಟ್‌ಗಳು ಮತ್ತು ಮುಂತಾದವುಗಳನ್ನು ತೆಗೆದುಕೊಳ್ಳುವಾಗ, ಅವರ ಕರುಳಿನ ಮೈಕ್ರೋಬಯೋಟಾವು ತೊಂದರೆಗೊಳಗಾಗುತ್ತದೆ, ಇದು ಅಂತಿಮವಾಗಿ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು, ”ಎಂದು ಡಾ ಜೆಸ್ವಂತ್ ಹೇಳುತ್ತಾರೆ.

ತಂಗಳನ್ನ ಹೇಗೆ ಸಹಾಯ ಮಾಡುತ್ತದೆ?

“ನಾವು ಅನ್ನವನ್ನು ನೆನೆಸಿ ಬಳಸಿದಾಗ ಅದು ನಮ್ಮ ಕರುಳಿಗೆ ಸಹಾಯ ಮಾಡುವ ಸಾಕಷ್ಟು ಉತ್ತಮ ಬ್ಯಾಕ್ಟೀರಿಯಾ ಮತ್ತು ಪ್ರೋಬಯಾಟಿಕ್‌ಗಳನ್ನು ಒಳಗೊಂಡಿರುವ ಪರಿಸರದಿಂದ ಅಗತ್ಯವಾದ ಮೈಕ್ರೋಬಯೋಟಾವನ್ನು ತೆಗೆದುಕೊಳ್ಳುತ್ತದೆ. IBS ಅಥವಾ ಉರಿಯೂತ ಹೊಂದಿರುವವರಿಗೆ ಇದರಿಂದ ಬ್ಯಾಕ್ಟೀರಿಯಾವು ಕಳೆದುಹೋದ ಉತ್ತಮ ಬ್ಯಾಕ್ಟೀರಿಯಾವನ್ನು ಬದಲಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಅಸಮತೋಲನ ಸರಿಯಾಗುತ್ತದೆ ಎಂದು ಡಾ ಜೆಸ್ವಂತ್ ಹೇಳುತ್ತಾರೆ.

ಸಾಂಪ್ರದಾಯಿಕ ಚಿಕಿತ್ಸೆಯು ಯಾವುದೇ ಅಡ್ಡಪರಿಣಾಮಗಳಿಲ್ಲದೆ IBS ನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಹಲವಾರು ಜನರಿಗೆ ಸಹಾಯ ಮಾಡಿದೆ. “ನಾವು ಇದನ್ನು IBS, IBD, ಕ್ರೋನ್ಸ್ ಕಾಯಿಲೆ, ಋತುಚಕ್ರದ ನಿಯಂತ್ರಣ, ಗರ್ಭಾವಸ್ಥೆಯಲ್ಲಿ ಮತ್ತು ಇನ್ನೂ ಅನೇಕ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ಬಳಸುತ್ತೇವೆ ಎನ್ನುತ್ತಾರೆ ಜೆಸ್ವಂತ್.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಅನುರಾಗ್ ಶೆಟ್ಟಿ ಮಾತನಾಡಿ, ಹುದುಗಿಸಿದ ಆಹಾರದಲ್ಲಿ ಪ್ರೋಬಯಾಟಿಕ್ಸ್ ಹೇರಳವಾಗಿರುತ್ತದೆ. ಇದನ್ನು ಸೇವಿಸುವುದರಿಂದ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ ಮತ್ತು ಇದು ಐಬಿಎಸ್ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಹುದುಗುವಿಕೆ ಸರಿಯಾಗದೆ ಇದ್ದರೆ ಒಳ್ಳೆಯ ಬ್ಯಾಕ್ಟೀರಿಯಾಗಳ ಜೊತೆಗೆ ಕೆಟ್ಟ ಬ್ಯಾಕ್ಟೀರಿಯಾಗಳು ಸಹ ಬೆಳೆಯಬಹುದು” ಎಂದು ಅವರು ಹೇಳುತ್ತಾರೆ.

“ಮೊಸರು ಮತ್ತು ಮಜ್ಜಿಗೆಯಂತಹ ಪ್ರೋಬಯಾಟಿಕ್‌ಗಳನ್ನು ಸೇವಿಸಲು ನಾವು ಹೇಳುತ್ತೇವೆ. ಇದು ಹುಳಿಯಾಗದೇ ಇದ್ದರೆ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಇದ್ದರೆ ಇದು ಜಠರದುರಿತಕ್ಕೆ ಕಾರಣವಾಗುತ್ತದೆ. ಆದರೆ ಕೆಲವರಿಗೆ ತಂಗಳನ್ನದ ಸೇವನೆಯಿಂದ ಸೋಂಕು ಅಥವಾ ಫುಡ್ ಪಾಯ್ಸನಿಂಗ್ ಆಗುವ ಸಾಧ್ಯತೆ ಇದ್ದು ಸ್ವಚ್ಛತೆ ಕಾಪಾಡದೇ ಇದ್ದರೆ ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ”ಎಂದು ಡಾ ಶೆಟ್ಟಿ ಹೇಳುತ್ತಾರೆ.

ತಂಗಳನ್ನ – ತಯಾರಿಸುವ ವಿಧಾನ

ಬೇಯಿಸಿದ ಅನ್ನವನ್ನು ಮಣ್ಣಿನ ಪಾತ್ರೆಯಲ್ಲಿ ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಇಡಬೇಕು. ಬೇಸಿಗೆಯಲ್ಲಿ ಎಂಟು ಗಂಟೆಗಳ ಕಾಲ ಮತ್ತು ಚಳಿಗಾಲದಲ್ಲಿ 12 ಗಂಟೆಗಳ ಕಾಲ ಇಡುವುದು ಒಳ್ಳೆಯದು. ಮಾರನೇ ದಿನ ಇದನ್ನು ಸರಳವಾಗಿ ಅಥವಾ ಭಕ್ಷ್ಯದೊಂದಿಗೆ ಸೇವಿಸಬಹುದು ಏಕೆಂದರೆ ಇದು ಹಿತವಾದ ಪರಿಣಾಮವನ್ನು ನೀಡುತ್ತದೆ. ನೀರಿನ ಬದಲು ಮಜ್ಜಿಗೆಯಲ್ಲೂ ನೆನೆಸಬಹುದು. ದಿನದ ಮೊದಲ ಊಟವಾಗಿ ಇದನ್ನೇ ಸೇವಿಸಿದಾಗ ಇದು ಉತ್ತಮ ಫಲಿತಾಂಶ ನೀಡುತ್ತದೆ ಎಂದು ಡಾ ಜೆಸ್ವಂತ್ ಹೇಳುತ್ತಾರೆ.

ಯಾವುದೇ ಪಾತ್ರೆಯಲ್ಲಿ ಹುದುಗುವಿಕೆ ಮಾಡಬಹುದು. ಆದರೆ ಮಣ್ಣಿನ ಮಡಕೆಯಲ್ಲಿ ನಡೆಸಿದಾಗ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಎಂದು ಉಮಾದೇಶ್ವರಿ ಹೇಳುತ್ತಾರೆ.
ಪ್ರತಿ ದಿನ ಸೇವಿಸಿದರೆ, IBS ನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು ಮೂರು ತಿಂಗಳಿಂದ ಎರಡು ವರ್ಷಗಳವರೆಗೆ ತೆಗೆದುಕೊಳ್ಳುತ್ತದೆ, ಎನ್ನುವುದು ಡಾ ಜೆಸ್ವಂತ್ ಅಭಿಪ್ರಾಯ.

ಸಾರಾಂಶ

  • ತಂಗಳನ್ನದ ಸೇವನೆಯಿಂದ ಐಬಿಎಸ್ ಇರುವವರಲ್ಲಿ ಮೈಕ್ರೋಬಯೋಟಾ ಅಸಮತೋಲನವನ್ನು ಸರಿಮಾಡಲು ಇದು ಸಹಾಯ ಮಾಡುತ್ತದೆ.
  • ಹುದುಗಿಸಿದ ಅನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಸಮಸ್ಯೆಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ
  • ಖಾಲಿ ಹೊಟ್ಟೆಯಲ್ಲಿ ಮತ್ತು ಬೆಳಗ್ಗೆ ಅದನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.
  • ಮಣ್ಣಿನ ಪಾತ್ರೆಯಲ್ಲಿ ಅನ್ನವನ್ನು ನೆನೆಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಏಕೆಂದರೆ ಇದು ಆಹಾರದ ಆಮ್ಲೀಯ ಮೌಲ್ಯವನ್ನು ತಟಸ್ಥಗೊಳಿಸುತ್ತದೆ ಮತ್ತು ಅದಕ್ಕೆ ನೈಸರ್ಗಿಕ ಖನಿಜಗಳನ್ನು ಸೇರಿಸುತ್ತದೆ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತೃಪ್ತಿಕರವಾದ ನಿಕಟ ಸಂಬಂಧಗಳನ್ನು ಆನಂದಿಸಬೇಕಾದರೆ ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತಜ್ಞರು ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಕಡಿಮೆ-ತಿಳಿದಿರುವ ಸಲಹೆಗಳನ್ನು ನೀಡಿದ್ದಾರೆ.  
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು, ಸೋಡಿಯಂ ಮತ್ತು ಪೊಟ್ಯಾಸಿಯಮ್ ಕಡಿಮೆ ಇರುವಂತಹ ಆಹಾರ ಸೇವನೆಯತ್ತ ಗಮನ ಕೇಂದ್ರೀಕರಿಸಿ. ಆದರೆ, ಉತ್ತಮ ಗುಣಮಟ್ಟದ ಪ್ರೋಟೀನ್ ಜೊತೆಗೆ  ಇವನ್ನು ಸೇವಿಸುವುದು ಮುಖ್ಯ ಎಂದು ತಜ್ಞರು ಸೂಚಿಸುತ್ತಾರೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ