0

0

0

ಈ ಲೇಖನದಲ್ಲಿ

ಡೆಂಗ್ಯೂ ಆಹಾರಕ್ರಮ: ಏನನ್ನು ತಿನ್ನಬೇಕು
12

ಡೆಂಗ್ಯೂ ಆಹಾರಕ್ರಮ: ಏನನ್ನು ತಿನ್ನಬೇಕು

ಡೆಂಗ್ಯೂ ಎಂಬುದು ಸ್ವಯಂ ಚೇತರಿಕೆಯ ಕಾಯಿಲೆಯಾಗಿದೆ. ಡೆಂಗ್ಯೂ ಪೀಡಿತರು ಕಡಿಮೆ-ಕೊಬ್ಬಿನಂಶದ ಆಹಾರ ಮತ್ತು ಹೆಚ್ಚು ದ್ರವಾಹಾರ ಸೇವನೆ ಮಾಡಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 

ಡೆಂಗ್ಯೂ ಆಹಾರಕ್ರಮ: ಏನನ್ನು ತಿನ್ನಬೇಕು

ಡೆಂಗ್ಯೂ ಜ್ವರ ಸಾಮಾನ್ಯವಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ. ಇದನ್ನು ಕಡೆಗಣಿಸಿದಲ್ಲಿ ಈ ಕಾಯಿಲೆಯು ಜೀವಕ್ಕೆ ಮಾರಕವಾಗಬಹುದು. ಈ ಜ್ವರದ ಚಿಕಿತ್ಸೆಯಲ್ಲಿ ಆಹಾರಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಹೈದರಾಬಾದ್‌ನ ಪ್ರೈಮ್ ಹೆಲ್ತ್ ಪ್ರೈವೇಟ್ ಲಿಮಿಟಡ್‌ನಲ್ಲಿ ಆಹಾರ ತಜ್ಞರಾಗಿರುವ ಡಾ ತನುಜಾ ಖುರಾನಾ ಅವರು, ಚೇತರಿಸಿಕೊಳ್ಳಲು ನಮ್ಮ ದೇಹಕ್ಕೆ ಸಮಯ, ಶಕ್ತಿ ಮತ್ತು ಸರಿಯಾದ ರೀತಿಯ ಆಹಾರ ಬೇಕಾಗುತ್ತದೆ ಎಂದು ಹೇಳುತ್ತಾರೆ. ದೇಹದ ಮೇಲೆ ಡ್ಯೆಂಗ್ಯೂ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿದುಕೊಂಡರೆ, ಚೇತರಿಸಿಕೊಳ್ಳಲು ಅಗತ್ಯವಿರುವ ಆಹಾರಕ್ರಮವನ್ನು ರೂಪಿಸಬಹುದು. 

 ಡೆಂಗ್ಯೂ ಆಹಾರಕ್ರಮ –  ಅಗತ್ಯವಾಗಿ ಇರಬೇಕಾದವುಗಳ ಪಟ್ಟಿ 

ಹಣ್ಣಿನ ರಸ 

ಸಾಕಷ್ಟು ಹೈಡ್ರೇಟ್ ಆಗಿರುವುದು ತುಂಬಾ ಮುಖ್ಯ ಎನ್ನುತ್ತಾರೆ ಡಾ ಖುರಾನಾ. ಡೆಂಗ್ಯೂ ಆಹಾರಕ್ರಮದ ಭಾಗವಾಗಿ ನೀರು ಮತ್ತು ಐಸೋಟೋನಿಕ್ ದ್ರವಗಳು ಮುಂತಾದ ದ್ರವಾಹಾರಗಳನ್ನು ಸೇವಿಸಬೇಕು. ನಿರಂತರವಾಗಿ ಹಣ್ಣಿನ ರಸ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಮತ್ತು ಫೈಬ್ರಿನೋಜೆನ್ ಮಟ್ಟ ಹೆಚ್ಚಾಗಲು ನೆರವಾಗುತ್ತದೆ. ಅಲ್ಲದೇ ಫೈಬ್ರಿನೋಜೆನ್ ಮಟ್ಟವು ಹೆಚ್ಚಾದರೆ ನಮ್ಮ ದೇಹದಲ್ಲಿ ಪೇಟ್‌ಲೆಟ್‌ಗಳು ತನ್ನಷ್ಟಕ್ಕೇ ಹೆಚ್ಚಾಗುತ್ತವೆ ಎಂದು ಅವರು ಸ್ಪಷ್ಟಪಡಿಸುತ್ತಾರೆ.  

 ಮೀನು, ಚಿಕನ್ ಮತ್ತು ಪನೀರ್ 

ದೇಹವು ಬಲಗೊಳ್ಳಲು ಮತ್ತು ಚೇತರಿಕೆ ಹೊಂದಲು ಪ್ರೊಟೀನ್‌ಗಳು ಬೇಕಾಗುತ್ತವೆ. ಡೆಂಗ್ಯೂನಿಂದ ಚೇತರಿಸಿಕೊಳ್ಳುತ್ತಿರುವ ಮಾಂಸಾಹಾರಿಗಳಿಗೆ ಅವರು ಮೀನು, ಚಿಕನ್ ಮತ್ತು ಮೊಟ್ಟೆಯನ್ನು ಪ್ರೊಟೀನ್‌ನ ಮೂಲವಾಗಿ ಬಳಸಲು ಸೂಚಿಸುತ್ತಾರೆ. ಟೋಫು, ಪನೀರ್ ಮತ್ತು ಬೀನ್ಸ್ ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆಗಳು ಎಂದು ಅವರು ಹೇಳುತ್ತಾರೆ. ಆದರೆ, ಬಿಳಿ ಮತ್ತು ಕೆಂಪು ಬೀನ್ಸ್ ಅನ್ನು ಬಳಸಬಾರದು, ದೇಹಕ್ಕೆ ಅಗತ್ಯವಿರುವುದು ಲೀನ್ ಪ್ರೊಟೀನ್ (ಕಡಿಮೆ ಕೊಬ್ಬಿನಂಶವಿರುವ ಪ್ರೊಟೀನ್) ಎಂಬುದು ಇಲ್ಲಿ ಗಮನಾರ್ಹ.  

ಹಸಿರು ತರಕಾರಿಗಳು 

 ಪಾಲಕ್, ಕ್ಯಾಪ್ಸಿಕಂ, ಬೀನ್ಸ್ ಮತ್ತು ಶತಾವರಿಯನ್ನು ಸೇವಿಸಬೇಕು. ಇವು ಫೋಲೇಟ್ ಅನ್ನು ಹೊಂದಿದ್ದು ಆರೋಗ್ಯಕರ ಕೋಶ ಬೆಳವಣಿಗೆ ಮತ್ತು ವಿಭಜನೆಗೆ ಉತ್ತೇಜನ ನೀಡುತ್ತವೆ. ಡೆಂಗ್ಯೂನಿಂದ ಉಂಟಾಗುವ ಕಡಿಮೆ ಪ್ಲೇಟ್‌ಲೆಟ್ ಸಂಖ್ಯೆಯ ವಿರುದ್ಧ ಹೋರಾಡಲು ಇದು ತುಂಬಾ ಎಂದು ಅವರು ಹೇಳುತ್ತಾರೆ. 

ಡೆಂಗ್ಯೂ ಆಹಾರಕ್ರಮದಲ್ಲಿ ವಿಟಮಿನ್ ಕೆ ಅಧಿಕವಿರುವ ಮೊಳಕೆಕಾಳುಗಳು ಮತ್ತು ಬ್ರೂಕೋಲಿಯನ್ನು ಒಳಗೊಂಡಿರಬೇಕು. ಇದು ಡೆಂಗ್ಯೂನಲ್ಲಿ ಅತ್ಯಂತ ಪ್ರಮುಖವಾದ ರಕ್ತ ಹೆಪ್ಪುಗಟ್ಟುವಿಕೆಗೆ ನೆರವಾಗಲು ಮತ್ತು ರಕ್ತಸ್ರಾವವನ್ನು ತಡೆಗಟ್ಟಲು ಅವಶ್ಯಕ. 

 ಪಪ್ಪಾಯಿ, ಸೇಬು ಮತ್ತು ಕಿತ್ತಳೆ 

ಡಾ ಖುರಾನಾ ಅವರು ಪಪ್ಪಾಯಿ, ಕಿತ್ತಳೆ, ಪೇರ್ ಮತ್ತು ಸೇಬು ಹಣ್ಣುಗಳನ್ನು ಸೇವಿಸಲು ಸೂಚಿಸುತ್ತಾರೆ, ಇವುಗಳು ಆ್ಯಂಟಿಆಕ್ಸಿಡೆಂಟ್‌ಭರಿತವಾಗಿದ್ದು ದೇಹವು ಬೇಗನೇ ಚೇತರಿಕೆ ಹೊಂದಲು ನೆರವಾಗುತ್ತವೆ. ಪಪಾಯವು ಫೈಬ್ರಿನೋಜೆನ್ ಮಟ್ಟಗಳನ್ನು ಹೆಚ್ಚಿಸಿ ಡೆಂಗ್ಯೂಗೆ ಚಿಕಿತ್ಸೆ ನೀಡಲು ನೆರವಾಗುತ್ತದೆ ಎಂದು ಅವರು ಹೇಳುತ್ತಾರೆ. 

ಅಧಿಕ ಕೊಬ್ಬಿನಂಶವುಳ್ಳ ಬೆಣ್ಣೆ ಮತ್ತು ಬೇಕರಿ ತಿನಿಸುಗಳನ್ನು ಸೇವಿಸಬಾರದು ಎಂದು ಡಾ ಖುರಾನಾ ಅವರು ಹೇಳುತ್ತಾರೆ. ಅಲ್ಲದೇ, ಮಸಾಲೆಯುಕ್ತ ಆಹಾರ ಮತ್ತು ಕೆಫಿನ್‌ಯುಕ್ತ ಪಾನೀಯಗಳ ಸೇವನೆಯು ಡೈಯುರೆಟಿಕ್‌ನಂತೆ ವರ್ತಿಸುತ್ತದೆ, ಆದರೆ ಡೆಂಗ್ಯೂ ವಿರುದ್ಧ ಹೋರಾಡಲು ಸಾಕಷ್ಟು ನೀರಿನ ಅವಶ್ಯಕತೆ ಇದೆ. ಆದ್ದರಿಂದ ಈ ಆಹಾರಗಳು ಸಂಪೂರ್ಣ ಪ್ರಕ್ರಿಯೆಗೆ ವಿರುದ್ಧವಾಗಿ ನಿಲ್ಲುತ್ತವೆ ಎಂದೂ ಹೇಳುತ್ತಾರೆ.  

ಮೊಹಾಲಿಯಲ್ಲಿನ ಮ್ಯಾಕ್ಸ್ ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್‌ನ ಮುಖ್ಯ ಕ್ಲಿನಿಕಲ್ ಪೌಷ್ಠಿಕ ತಜ್ಞರಾದ ಆಸ್ಥಾ ಖುಂಗರ್ ಅವರು ಡೆಂಗ್ಯೂ ಆಹಾರಕ್ರಮದ ಭಾಗವಾಗಿ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಈ ಕೆಳಗಿನವುಗಳನ್ನು ಸೂಚಿಸುತ್ತಾರೆ 

  ಬೆಳಗ್ಗಿನ ತಿಂಡಿಗೆ ಗೋಧಿ ನುಚ್ಚು ಅಥವಾ ಓಟ್ಸ್ ಸೇವಿಸಬಹುದು. ಹೈಡ್ರೇಟ್ ಆಗಿರಲು ನಿಂಬೆ ಪಾನಕವನ್ನು ಸೇವಿಸಬೇಕು, ಆದರೆ ಬ್ರೆಡ್ ಅನ್ನು ಸೇವಿಸಬಾರದು ಎಂದು ಅವರು ಹೇಳುತ್ತಾರೆ. 

ಮಧ್ಯಾಹ್ನದ ಊಟಕ್ಕೆ ಸೂಪ್ ಮತ್ತು ಪನೀರ್ ಅಥವಾ ಸಿರಿಧಾನ್ಯದ ಕಿಚಡಿಯನ್ನು ಶಿಫಾರಸು ಮಾಡುತ್ತಾರೆ. 

ರಾತ್ರಿ ಊಟಕ್ಕೆ ದಾಲ್ ಮತ್ತು ಅನ್ನವನ್ನು ಸೇವಿಸಬಹುದು. ನಂತರ ಕ್ಯಾಲೊರಿಗಾಗಿ ಕಸ್ಟರ್ಡ್ ಅನ್ನೂ ಸೇವಿಸಬೇಕು ಎಂದು ಅವರು ಹೇಳುತ್ತಾರೆ. 

ಸೋಂಕು ತಗುಲಿದ 3 ರಿಂದ 5 ದಿನಗಳ ನಡುವೆ ನಮ್ಮ ಯಕೃತ್ತು ಸೋಂಕಿನ ವಿರುದ್ಧ ಹೋರಾಡಲು ಶ್ರಮಿಸುತ್ತದೆ.ಇದರ ಪರಿಣಾಮವಾಗಿ ಯಕೃತ್ತು ಊದಿಕೊಂಡು ಹಸಿವು ಕಡಿಮೆಯಾಗುತ್ತದೆ ಮತ್ತು ವಾಕರಿಕೆ ಉಂಟಾಗುತ್ತದೆ ಎಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್‌ನ ಸಲಹೆಗಾರರಾದ ಡಾ ಪ್ರಮೋದ್ ವಿ ಸತ್ಯ ಅವರು ಹೇಳುತ್ತಾರೆ. ಎಣ್ಣೆಯಲ್ಲಿ ಕರಿದ ತಿನಿಸುಗಳು ಅಥವಾ ಅಧಿಕ ಕೊಬ್ಬಿನಂಶವುಳ್ಳ ಆಹಾರಗಳನ್ನು ಸೇವಿಸದಂತೆ ಎಚ್ಚರಿಸುತ್ತಾರೆ, ಯಾಕೆಂದರೆ ಇದನ್ನು ಜೀರ್ಣಗೊಳಿಸಲು ಯಕೃತ್ತು ಅನವಶ್ಯಕವಾಗಿ ಶ್ರಮಿಸಬೇಕಾಗುತ್ತದೆ. 

ಡೆಂಗ್ಯೂ ಎಂಬುದು ಸ್ವಯಂ-ಚೇತರಿಸಿಕೊಳ್ಳುವ ಕಾಯಿಲೆಯಾಗಿದ್ದು, ಇದರಿಂದ ಬಾಧಿತರಾದವರು ಕಡಿಮೆ ಕೊಬ್ಬಿನಂಶವುಳ್ಳ ಆಹಾರ ಮತ್ತು ಅಧಿಕ ದ್ರವಾಹಾರವನ್ನು ಸೇವಿಸಬೇಕು ಎಂಬುದನ್ನು ಒತ್ತಿ ಹೇಳುತ್ತಾರೆ. 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

eighteen − 5 =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ