0

0

0

ಈ ಲೇಖನದಲ್ಲಿ

ಮೋಡಗಳು ಔಷಧ-ನಿರೋಧಕ ಬ್ಯಾಕ್ಟೀರಿಯಾವನ್ನು ದೂರದವರೆಗೆ ಸಾಗಿಸುತ್ತವೆ
3

ಮೋಡಗಳು ಔಷಧ-ನಿರೋಧಕ ಬ್ಯಾಕ್ಟೀರಿಯಾವನ್ನು ದೂರದವರೆಗೆ ಸಾಗಿಸುತ್ತವೆ

ಕೆನಡಾ ಮತ್ತು ಫ್ರೆಂಚ್ ಸಂಶೋಧಕರ ತಂಡವು, ತಮ್ಮ ಇತ್ತೀಚಿನ ಅಧ್ಯಯನದಲ್ಲಿ ದಟ್ಟ ಮೋಡಗಳು ಔಷಧ-ನಿರೋಧಕ ಬ್ಯಾಕ್ಟೀರಿಯಾವನ್ನು ದೂರದವರೆಗೆ ಸಾಗಿಸುತ್ತವೆ ಎಂಬ ಅಂಶವನ್ನು ಕಂಡುಹಿಡಿದಿದೆ, ಆದರೆ ಈ ಪ್ರಕ್ರಿಯೆಯಲ್ಲಿ ಅಪಾಯಗಳು ಕಡಿಮೆ ಎಂದು ಅವರು ಹೇಳುತ್ತಾರೆ.

ಮೋಡಗಳು ಔಷಧಿ-ನಿರೋಧಕ ಬ್ಯಾಕ್ಟೀರಿಯಾವನ್ನು ದೂರದವರೆಗೆ ಸಾಗಿಸುತ್ತವೆ

 ಕೆನಡಿಯನ್ ಮತ್ತು ಫ್ರೆಂಚ್ ಸಂಶೋಧಕರ ತಂಡವು, ದಿಗಂತದಲ್ಲಿರುವ ದಟ್ಟ ಮೋಡಗಳು ಸಂಭಾವ್ಯ ಅಶುಭದ ಸಂಕೇತ ಎಂದು ಭಾವಿಸಲು ಕಾರಣವೇನು ಗೊತ್ತೇ? ಆ ಮೋಡಗಳು ಸೂಚಿಸುತ್ತಿದ್ದ ಚಂಡಮಾರುತ ಇದಕ್ಕೆ ಕಾರಣವಾಗಿರಲಿಲ್ಲ,  ಬದಲಾಗಿ ತಾವು ಇತ್ತೀಚೆಗೆ ಸಂಶೋಧಿಸಿದ್ದ ದಟ್ಟ ಮೋಡಗಳು ಔಷಧಿ-ನಿರೋಧಕ ಬ್ಯಾಕ್ಟೀರಿಯಾವನ್ನು ದೂರದವರೆಗೆ ಸಾಗಿಸುತ್ತವೆ ಎಂಬ ಹೊಸ ಸತ್ಯ ಕಾರಣವಾಗಿತ್ತು!

“ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಸಸ್ಯವರ್ಗದ ಎಲೆಗಳ ಮೇಲ್ಮೈಯಲ್ಲಿ ಅಥವಾ ಮಣ್ಣಿನಲ್ಲಿ ವಾಸಿಸುತ್ತವೆ” ಎಂದು ಪ್ರಮುಖ ಲೇಖಕ ಫ್ಲೋರೆಂಟ್ ರೊಸ್ಸಿ ತಮ್ಮ ಸಂದರ್ಶನದಲ್ಲಿ ಹೇಳುತ್ತಿದ್ದರು.

“ಅವು ಗಾಳಿಯಿಂದ ವಾತಾವರಣವನ್ನು ಸೇರುತ್ತವೆ, ಮತ್ತು ದೂರದವರೆಗೆ – ಪ್ರಪಂಚದಾದ್ಯಂತ – ಹೆಚ್ಚಿನ ಎತ್ತರದಲ್ಲಿ ಮೋಡಗಳಲ್ಲಿ ಸಾಗಬಹುದು ಎಂದು ನಾವು ಸಂಶೋಧಿಸಿದ್ದೇವೆ” ಎಂದು ಅವರು AFP ಗೆ ತಿಳಿಸಿದ್ದಾರೆ.

ಈ ಆವಿಷ್ಕಾರವನ್ನು ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್‌ಮೆಂಟ್ ಜರ್ನಲ್‌ನ ಕಳೆದ ತಿಂಗಳ ಆವೃತ್ತಿಯಲ್ಲಿ ಪ್ರಕಟಿಸಲಾಗಿದೆ.

ಕ್ವಿಬೆಕ್ ಸಿಟಿಯ ಲಾವಲ್ ವಿಶ್ವವಿದ್ಯಾನಿಲಯ ಮತ್ತು ಮಧ್ಯ ಫ್ರಾನ್ಸ್‌ನ ಕ್ಲರ್ಮಾಂಟ್ ಆವೆರ್ಗ್ನೆ ವಿಶ್ವವಿದ್ಯಾಲಯದ ಸಂಶೋಧಕರು ಮೋಡದ ಮಾದರಿಗಳನ್ನು ಪರೀಕ್ಷಿಸಿದಾಗ, ಅವುಗಳಲ್ಲಿದ್ದ ಬ್ಯಾಕ್ಟೀರಿಯಾದಲ್ಲಿ ಆ್ಯಂಟಿಬಯಾಟಿಕ್‌-ನಿರೋಧಕ ಜೀನ್‌ಗಳ ಇರುವಿಕೆಯನ್ನು ಕಂಡು ಹಿಡಿದಿದ್ದಾರೆ.

ಸಂಶೋಧನೆಗಾಗಿ, ಸೆಪ್ಟೆಂಬರ್ 2019 ಮತ್ತು ಅಕ್ಟೋಬರ್ 2021 ರ ನಡುವೆ, ಸಮುದ್ರ ಮಟ್ಟದಿಂದ 1,465 ಮೀಟರ್ (4,806 ಅಡಿ) ಎತ್ತರದಲ್ಲಿರುವ, ಮಧ್ಯ ಫ್ರಾನ್ಸ್‌ನ ಸುಪ್ತ ಜ್ವಾಲಾಮುಖಿ ಪ್ಯೂ ಡಿ ಡೋಮ್ ಶಿಖರದ ಮೇಲಿನ, ವಾತಾವರಣ ಸಂಶೋಧನಾ ಕೇಂದ್ರದಿಂದ ಮೋಡದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

ಹೀಗೆ ಸಂಗ್ರಹಿಸಿದ ಮಂಜಿನ ವಿಶ್ಲೇಷಣೆಯಿಂದ ಪ್ರತಿ ಮಿಲಿಲೀಟರ್ ಮೋಡದ ನೀರಿನಲ್ಲಿ  330 ರಿಂದ 30,000 ಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾಗಳು ಇರುವುದು ಬಹಿರಂಗವಾಯಿತು. ಅಂದರೆ ಪ್ರತಿ ಮಿಲಿ ಲೀಟರ್‌ಗೆ ಸರಾಸರಿ 8,000 ಬ್ಯಾಕ್ಟೀರಿಯಾಗಳು ಪತ್ತೆಯಾದವು.

ಸಂಶೋಧಕರು ಬ್ಯಾಕ್ಟೀರಿಯಾದಲ್ಲಿ 29 ಉಪ-ಪ್ರಕಾರದ ಆ್ಯಂಟಿಬಯಾಟಿಕ್‌-ನಿರೋಧಕ ಜೀನ್‌ಗಳನ್ನು ಗುರುತಿಸಿದ್ದಾರೆ.

ಬ್ಯಾಕ್ಟೀರಿಯಾವು ಆ್ಯಂಟಿಬಯಾಟಿಕ್‌ಗಳಿಗೆ ಒಡ್ಡಿಕೊಂಡಾಗ ಮತ್ತು ತಲೆಮಾರುಗಳಲ್ಲಿ ಕ್ರಮೇಣ ಅವುಗಳಿಗೆ ಪ್ರತಿರಕ್ಷೆಯನ್ನು ಬೆಳೆಸಿಕೊಂಡಾಗ, ಔಷಧಿ ನಿರೋಧಕತೆಯು ಸಂಭವಿಸುತ್ತದೆ.

ಅಧ್ಯಯನಗಳು ವಿವರಿಸಿರುವ ಈ ರೂಪಾಂತರಿಗಳ ಬಗ್ಗೆ ಆರೋಗ್ಯ ಅಧಿಕಾರಿಗಳು “ವಿಶ್ವಾದ್ಯಂತದ ಪ್ರಮುಖ ನೈರ್ಮಲ್ಯ ಕಾಳಜಿ” ಎಂಬುದಾಗಿ ಮತ್ತೆ ಮತ್ತೆ ಎಂದು ಎಚ್ಚರಿಸುತ್ತಿದ್ದಾರೆ.  ಆರೋಗ್ಯ ರಕ್ಷಣಾ ವಲಯ ಮತ್ತು ಕೃಷಿ ಕ್ಷೇತ್ರದಲ್ಲಿ ಆ್ಯಂಟಿಬಯಾಟಿಕ್‌ಗಳ ಬಳಕೆಯು ಹೆಚ್ಚುತ್ತಿರುವ ಕಾರಣ ಕೆಲವು ಬ್ಯಾಕ್ಟೀರಿಯಾ ಸೋಂಕುಗಳಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ ಮಾತ್ರವಲ್ಲ ಕೆಲವು ಸಂದರ್ಭಗಳಲ್ಲಿ ಅಸಾಧ್ಯವಾಗಿದೆ.

ಆ್ಯಂಟಿಬಯೋಟಿಕ್-ನಿರೋಧಕ ಬ್ಯಾಕ್ಟೀರಿಯಾದ ವಾತಾವರಣದಲ್ಲಿ ಹರಡುವ ಸಂಭಾವ್ಯ ಆರೋಗ್ಯ ಪರಿಣಾಮಗಳ ಬಗ್ಗೆ ಅಧ್ಯಯನವು ಯಾವುದೇ ತೀರ್ಮಾನಗಳನ್ನು ನೀಡಿಲ್ಲ – ಆದರೆ ಕೇವಲ ಐದು ಪ್ರತಿಶತದಿಂದ 50 ಪ್ರತಿಶತದಷ್ಟು ಜೀವಿಗಳು ಜೀವಂತವಾಗಿರಬಹುದು ಮತ್ತು ಸಮರ್ಥವಾಗಿ ಸಕ್ರಿಯವಾಗಿರಬಹುದು ಎಂದು ಅಂದಾಜಿಸಲಾಗಿದೆ.

“ಆ ಜೀನ್‌ಗಳು ಇತರ ಬ್ಯಾಕ್ಟೀರಿಯಾಗಳಿಗೆ ಹರಡುತ್ತವೆಯೇ ಎಂಬ ಅಂಶ ಇನ್ನಷ್ಟೇ ಸ್ಪಷ್ಟವಾಗಬೇಕಿದೆ, ಆದರೆ ಅಪಾಯಗಳು ಕಡಿಮೆ” ಎಂದು ರೊಸ್ಸಿ ಹೇಳುತ್ತಾರೆ.

“ವಾತಾವರಣವು ಬ್ಯಾಕ್ಟೀರಿಯಾಕ್ಕೆ ಬಹಳ ಒತ್ತಡವನ್ನುಂಟುಮಾಡುತ್ತದೆ, ಮತ್ತು ನಮಗೆ ಸಿಕ್ಕಂತಹ ಹೆಚ್ಚಿನವುಗಳು ಪರಿಸರ ಬ್ಯಾಕ್ಟೀರಿಯಾಗಳಾಗಿದ್ದು, ಇವು ಮನುಷ್ಯರಿಗೆ ಹೆಚ್ಚು ಹಾನಿಕರವಲ್ಲ, ಹಾಗಾಗಿ ಜನರು ಮಳೆಯಲ್ಲಿ ನಡೆಯಲು ಭಯಪಡಬಾರದು” ಎಂದು ಅವರು ವಿವರಿಸುತ್ತಾರೆ.

“ಕೋವಿಡ್-19 ಮತ್ತು ಇತರ ರೋಗಕಾರಕಗಳ ಮೂಲವನ್ನು ಕಂಡುಹಿಡಿಯಲು, ತ್ಯಾಜ್ಯ ನೀರನ್ನು ಪರೀಕ್ಷಿಸುವಂತೆಯೇ, ವಾತಾವರಣದ ಆಗು-ಹೋಗುಗಳ ಮೇಲಿನ ನಿಗಾ ವಹಿಸುವಿಕೆಯು, ಔಷಧ-ನಿರೋಧಕ ಬ್ಯಾಕ್ಟೀರಿಯಾದ ಮೂಲಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.  ಈ ಮೂಲಕ ಅವುಗಳ ಪ್ರಸರಣವನ್ನು ಮಿತಿಗೊಳಿಸಬಹುದು” ಎನ್ನುವುದು ಸಂಶೋಧಕರ ಅಭಿಪ್ರಾಯ.

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

11 − nine =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ