0

0

0

ವಿಷಯಗಳಿಗೆ ಹೋಗು

ಏನೂ ವಿಶೇಷ ಇಲ್ವಾ? ನಿತ್ಯ ಪ್ರಶ್ನೆಗೆ ಉತ್ತರ – ಮಗುಮುಕ್ತ ಜೀವನ ಶೈಲಿ
2

ಏನೂ ವಿಶೇಷ ಇಲ್ವಾ? ನಿತ್ಯ ಪ್ರಶ್ನೆಗೆ ಉತ್ತರ – ಮಗುಮುಕ್ತ ಜೀವನ ಶೈಲಿ

ಕೆಲವು ದಂಪತಿಗಳು ತಮ್ಮ ಸಂಬಂಧವನ್ನು ಅತ್ಯುತ್ತಮವಾಗಿಸುವ ಸಲುವಾಗಿ ಕೌಟುಂಬಿಕ ಮತ್ತು ಸಾಮಾಜಿಕ ನಿರೀಕ್ಷೆಗಳ ಹೊರತಾಗಿಯೂ ಮಕ್ಕಳನ್ನು ಹೊಂದದೇ ಇರಲು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುತ್ತಾರೆ. ಬೇರೆಯವರ ಸಲುವಾಗಿ ಅಲ್ಲ, ತಮ್ಮ ಸಲುವಾಗಿಯೇ ದಂಪತಿಗಳು ಮಕ್ಕಳನ್ನು ಹೊಂದಬೇಕು ಎನ್ನುತ್ತಾರೆ ಸೈಕೋಥೆರಪಿಸ್ಟ್ ತಸ್ನೀಮ್ ನಕೋಡ 

ಕೆಲವು ದಂಪತಿಗಳು ತಮ್ಮ ಸಂಬಂಧವನ್ನು ಅತ್ಯುತ್ತಮವಾಗಿಸುವ ಸಲುವಾಗಿ ಕೌಟುಂಬಿಕ ಮತ್ತು ಸಾಮಾಜಿಕ ನಿರೀಕ್ಷೆಗಳ ಹೊರತಾಗಿಯೂ ಮಕ್ಕಳನ್ನು ಹೊಂದದೇ ಇರಲು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುತ್ತಾರೆ. ಬೇರೆಯವರ ಸಲುವಾಗಿ ಅಲ್ಲ, ತಮ್ಮ ಸಲುವಾಗಿಯೇ ದಂಪತಿಗಳು ಮಕ್ಕಳನ್ನು ಹೊಂದಬೇಕು ಎನ್ನುತ್ತಾರೆ ಸೈಕೋಥೆರಪಿಸ್ಟ್ ತಸ್ನೀಮ್ ನಕೋಡ.

 ಮಕ್ಕಳಾಗಿಲ್ವಾ?, ಕ್ಷಮಿಸು. ನಿನಗೆ ಮದುವೆಯಾಗಿ 10 ವರ್ಷಗಳು ಆಗಿದ್ಯಲ್ಲಾ, ಹಾಗಾಗಿ ಕೇಳ್ದೆ ” ಎಂದು ಆಘಾತದಿಂದ ಸಂಬಂಧಿಯೊಬ್ಬರು ಕೇಳಿದರು. 

  “ಕ್ಷಮಿಸೋಕೆ ಏನಿದೆ,  ನನಗೇನೂ ಬೇಸರವಿಲ್ಲ. ಮಕ್ಕಳನ್ನು ಹೊಂದದೇ ಇರುವುದು ನಮ್ಮದೇ ಆಯ್ಕೆ” ಎಂದಷ್ಟೇ ಉತ್ತರಿಸಲು ಆ  ಕ್ಷಣಕ್ಕೆ ಹೊಳೆದಿದ್ದು. ಪ್ರತಿಯಾಗಿ, ಅವರು  ಕ್ಷಮೆಯಾಚಿಸುತ್ತಿದ್ದರು ಮತ್ತು ಸಣ್ಣ ತಿರಸ್ಕಾರದ ಭಾವನೆ ಇತ್ತು. 

ಎಲ್ಲಾ ಪೋಷಕರಂತೆ ನನ್ನ ಹೆತ್ತವರು ಕೂಡ, ಮದುವೆಯಾಗಿ ಎರಡು ವರ್ಷಗಳುಅಥವಾ ಮಧುಚಂದ್ರದ ಅವಧಿಯ ನಂತರ ತಮ್ಮ ಮಗಳಿಂದ ಶುಭ ಸಮಾಚಾರಕೇಳಲು ಉತ್ಸುಕರಾಗಿದ್ದರು ಹಾಗೂ ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ಅವರಿಗೆ ನನ್ನಿಂದ ನಿರಾಸೆಯ ಉತ್ತರವಷ್ಟೇ ಸಿಗುತ್ತಿತ್ತು. ಮೊಮ್ಮಗುವನ್ನು ಹೊಂದುವ ಅವರ ಉತ್ಸಾಹ ನನಗೆ ಅರ್ಥವಾಗಿತ್ತು. ಆದರೆ ನನ್ನ ಪತಿ ಮತ್ತು ನಾನು, ಮದುವೆಯಾಗುವ ಮೊದಲೇ ಚೆನ್ನಾಗಿ ಯೋಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. 

ನನ್ನ ವಯಸ್ಸು ಮೂವತ್ತೈದರ ಆಸುಪಾಸಿನಲ್ಲಿದೆ ಮತ್ತು ನನ್ನ ಗಂಡನ ವಯಸ್ಸು ನಲವತ್ತೈದರ ಆಸುಪಾಸಿನಲ್ಲಿದೆ. ನಮ್ಮ ಜೀವನದ ಈ ಹಂತದಲ್ಲಿ, ನಮ್ಮ ಆದ್ಯತೆಗಳು ಭಿನ್ನವಾಗಿವೆ. ನಾವಿಬ್ಬರೂ ಮಕ್ಕಳನ್ನು ಪ್ರೀತಿಸುತ್ತೇವಾದರೂ, ನಮ್ಮದೇ ಆದ ಮಗುವನ್ನು ಹೊಂದುವುದರ ಬಗ್ಗೆ ನಾವು ಭಿನ್ನವಾದ ಆಲೋಚನೆಗಳನ್ನು ಹೊಂದಿದ್ದೇವೆ. ಜೀವನ ಮತ್ತು ದೇವರು ನಮ್ಮ ಮದುವೆ ಮೂಲಕ ಎರಡನೇ ಅವಕಾಶವನ್ನು ನೀಡಿದ್ದಾರೆ ಮತ್ತು ಹಾಗಾಗಿ ನಾವಿಬ್ಬರೂ ಈ ಜೊತೆಗಾರಿಕೆಯ ಗರಿಷ್ಠ ಆನಂದವನ್ನು ಪಡೆಯುವ ಇಚ್ಚೆಯನ್ನು ಹೊಂದಿದ್ದೇವೆ. 

ಮಾಡಬೇಕಾದವುಗಳು ಮತ್ತು ಮಾಡಬಾರದವುಗಳ ಬಗ್ಗೆ ನಮ್ಮ ಪ್ರೀತಿಪಾತ್ರರು ಹೇಳಿದ ಮಾತುಗಳನ್ನು ನಾನು ತಾಳ್ಮೆಯಿಂದ ಕೇಳಿಸಿಕೊಂಡಿದ್ದೇನೆ, ಆದರೆ ಮಗುವನ್ನು ಹೊಂದುವುದು ಮಗುವಿನ ಸಲುವಾಗಿ ಮಾತ್ರ ಎನ್ನುವುದು ನನ್ನ ಬಲವಾದ ನಂಬಿಕೆ. 

ಈ ನಿರ್ಧಾರ ಕೈಗೊಂಡ ಬಗ್ಗೆ ನನಗೆ ಮತ್ತು ನನ್ನ ಪತಿಗೆ ಯಾವುದೇ ಪಶ್ಚಾತ್ತಾಪವಿಲ್ಲ. ಪ್ರತಿ ಎರಡು ವರ್ಷಗಳಿಗೊಮ್ಮೆ ಮಗುವನ್ನು ಹೊಂದುವ ಆಲೋಚನೆಯನ್ನು ಮರುಪರಿಶೀಲಿಸುವುದು ಮತ್ತು ಈ ಬಗ್ಗೆ ನಮ್ಮ ಭಾವನೆ ಹಾಗೆಯೇ ಇದೆಯೇ ಎಂದು ಅರ್ಥಮಾಡಿಕೊಳ್ಳಲು ಪರಸ್ಪರ ಚರ್ಚಿಸುವ ಕಾರಣದಿಂದ ನಾನು ನೆಮ್ಮದಿಯಾಗಿದ್ದೇನೆ. 

ಮದುವೆಯ ನಂತರ ದಂಪತಿಗಳಿಂದ ಸಂತಾನವನ್ನು ನಿರೀಕ್ಷಿಸಲಾಗುತ್ತದೆ, ಆ ಕಾರಣಕ್ಕೆ ಅವರು ಮಕ್ಕಳನ್ನು ಹೊಂದುತ್ತಾರೆ. ಅವರು ತಮ್ಮ ಕುಟುಂಬದ ವಂಶಾವಳಿಯನ್ನು ಮುಂದುವರಿಸಲು ಬಯಸುತ್ತಾರೆ ಅಥವಾ ಮಗುವಿನ ಮೂಲಕ ತಮ್ಮ ಜೀವನದ ಅಥವಾ ಅವರ ಮದುವೆಯ ಕೊರತೆಯನ್ನು ತುಂಬಲು ಬಯಸುತ್ತಾರೆ. ದುಃಖಕರ ಸಂಗತಿಯೆಂದರೆ, ಅಂತಹ ದಂಪತಿಗಳು ಗಮನಾರ್ಹವಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ನನ್ನ ಜೀವನದ 20 ವರ್ಷಗಳನ್ನು ಸೈಕೋಥೆರಪಿಗಾಗಿ ಮೀಸಲಿಡುವ ಮೊದಲು, ನಾನು ಮಾಂಟೆಸ್ಸರಿ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿದ್ದೆ ಮತ್ತು ಅದರಲ್ಲಿ ತರಬೇತಿ ಪಡೆದಿದ್ದೆ. ನಾನು 2 ರಿಂದ 6 ವರ್ಷ ವಯಸ್ಸಿನ ಮಕ್ಕಳೊಂದಿಗೆ ಎಂಟು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ ಮತ್ತು ಅದರ ಪ್ರತಿ ಕ್ಷಣವನ್ನು ನಾನು ಪ್ರೀತಿಸುತ್ತೇನೆ. ಇದು ತಾಯಿಯಾಗಬೇಕೆಂಬ ನನ್ನ ಸುಪ್ತ ಬಯಕೆಯನ್ನು ತೃಪ್ತಿಪಡಿಸುತ್ತದೆಯೇ ಎಂದು ಕೆಲವೊಮ್ಮೆ ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ. 

ನನ್ನ ಸ್ವಂತ ಮಕ್ಕಳಿದ್ದರೆ ಜೀವನ ಹೇಗಿರುತ್ತಿತ್ತು? ನಾನು ಒಳ್ಳೆಯ, ತಾಳ್ಮೆಯ ತಾಯಿಯಾಗಿರುತ್ತಿದ್ದೆನೇ ಅಥವಾ ನನ್ನ ಮಗುವಿಗೆ ನಾನು ಯಾವಾಗಲೂ ಬೈಯುತ್ತಿದ್ದೆನೇ? ನಾನು ಕಂಟ್ರೋಲ್ ಫ್ರೀಕ್ ಆಗಿರುತ್ತಿದ್ದೆನೇ? ಎಂದು ಯೋಚಿಸುತ್ತೇನೆ. ಆದರೆ ಈ ಅನಿಶ್ಚಿತತೆಯ ಭಾವನೆಯ ಅವಧಿ ಚಿಕ್ಕದು.   ನಾನು ಬೇಗನೆ ವಾಸ್ತವಕ್ಕೆ ಮರಳುತ್ತೇನೆ, ನಾನು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎನ್ನುವುದನ್ನು ತೃಪ್ತಿಯ ನಗುವಿನೊಂದಿಗೆ ಅರ್ಥಮಾಡಿಕೊಳ್ಳುತ್ತೇನೆ. 

ಮಕ್ಕಳಿಲ್ಲದ ದಂಪತಿಗಳು ಸಾಮಾನ್ಯವಾಗಿ ಧೃಡವಾದ ಸ್ನೇಹ ಮತ್ತು ಸಂಬಂಧಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಮೂಲಕ ಆ ಕೊರತೆಯನ್ನು ಸರಿದೂಗಿಸುತ್ತಾರೆ. ಆಸರೆಗಾಗಿ ಮಕ್ಕಳಿಲ್ಲದ ವೃದ್ಧಾಪ್ಯಕ್ಕೆ ನಾವು ಸಿದ್ಧರಾಗಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಮತ್ತೊಂದೆಡೆ, ನಿಮಗೆ ಅವರ ಅಗತ್ಯವಿದ್ದಾಗ ಮಕ್ಕಳು ನಿಮ್ಮ ಸುತ್ತಲೂ ಇರುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಇದು ಕಹಿ ಸತ್ಯವಾಗಿದ್ದು, ಅನೇಕರು ಇದನ್ನು ಎದುರಿಸಲೇಬೇಕು. 

ಈ ಗಂಭೀರ ಮತ್ತು ಮಹತ್ವದ ನಿರ್ಧಾರದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಕುಟುಂಬ, ಸಮಾಜ ಮತ್ತು ದೇಹದ ನೈಸರ್ಗಿಕ ವ್ಯವಸ್ಥೆಯ ಒತ್ತಡವನ್ನು ನಿರ್ಲಕ್ಷಿಸುವುದು ಸುಲಭವಲ್ಲ. ಆದರೆ, ಮಗುವನ್ನು ಹೊಂದಲು ನಿಜವಾದ ಕಾರಣಗಳನ್ನು ಪರಿಗಣಿಸುವುದು ಬಹಳ ಮುಖ್ಯವಾಗಿದೆ. 

ಇಂದು, ನನ್ನ ಕುಟುಂಬವು ನಮ್ಮ ನಿರ್ಧಾರವನ್ನು ಔದಾರ್ಯದಿಂದ ಒಪ್ಪಿಕೊಂಡಿದೆ ಮತ್ತು ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ನನ್ನ ಪತಿ ಮತ್ತು ನಾನು ವಿವಾಹಿತ ಜೋಡಿಯಾಗಿ ಪರಿಪೂರ್ಣವಾಗಿದ್ದೇವೆ ಎಂದು ನಾನು ನಿಶ್ಚಿತವಾಗಿ ಹೇಳಬಲ್ಲೆ. 

 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ