0

0

0

ಈ ಲೇಖನದಲ್ಲಿ

ಮೂತ್ರಪಿಂಡ ದಾನ ನೀಡಿದ – ದಾನ ಪಡೆದ ದಂಪತಿ ಜೀವನ ಗಾಥೆ
37

ಮೂತ್ರಪಿಂಡ ದಾನ ನೀಡಿದ – ದಾನ ಪಡೆದ ದಂಪತಿ ಜೀವನ ಗಾಥೆ

ಮೂತ್ರಪಿಂಡದ ಕಾಯಿಲೆ ಉಮಾ ಗಣೇಶ್‌ ಅವರ ಬದುಕನ್ನೇ ದುಸ್ತರಗೊಳಿಸಿತ್ತು. ಅನೇಕ ಏರಿಳಿತಗಳ ನಂತರ ಅವರು ಮೂತ್ರಪಿಂಡ ದಾನ ಪಡೆದು ಕಸಿ ಮಾಡಿಸಿಕೊಂಡರು. “ಬದುಕಿನ ಹಿನ್ನಡೆಗಳು ಮಾತ್ರ ನಿಮ್ಮನ್ನು ಬಲಪಡಿಸುತ್ತವೆ” ಎಂದು ಅವರಿಗೆ ಮೂತ್ರಪಿಂಡ ದಾನ ಮಾಡಿದ್ದ ಅವರ ಪತಿ ಗಣೇಶ್ ಹೇಳುತ್ತಾರೆ. 

ನಿಮ್ಮಲ್ಲಿ ಅತ್ಯಂತ ಕಡಿಮೆ ನಿರೀಕ್ಷೆಗಳಿದ್ದಾಗ, ನಿಮಗೆ ಜೀವನವು ಹೆಚ್ಚು ಸುರಕ್ಷಿತ ಅನ್ನಿಸಬಹುದು. ಅದೇ ರೀತಿ 38ರ ಹರೆಯದ ಗೃಹಿಣಿ ಉಮಾ ಗಣೇಶ್ ಅವರದು ಕೂಡಾ ನೆಮ್ಮದಿಯ ಜೀವನವಾಗಿತ್ತು. ಯುಎಸ್‌ನಲ್ಲಿ ಮೂರು ವರ್ಷಗಳ ದುಡಿಮೆಯ ನಂತರ, ಪತಿ ಗಣೇಶ್ ನೆರೂರ್ ಜೊತೆ ಅವರ ಕುಟುಂಬ ಅಂತಿಮವಾಗಿ ಚೆನ್ನೈನಲ್ಲಿ ನೆಲೆಸಿತ್ತು. ನೆಮ್ಮದಿಯಲ್ಲಿ ಸಾಗುತ್ತಿದ್ದ ಬದುಕಿನಲ್ಲಿ ಒಂದು ದುರಂತ ಸಂಭವಿಸಿತು. 1999 ರಲ್ಲಿ ಉಮಾ ಅವರಿಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಇರುವುದು ಪತ್ತೆಯಾಯಿತು. ತಮ್ಮ ಕುಟುಂಬದ ಸಹಾಯದಿಂದ, ಉಮಾ 16 ವರ್ಷಗಳ ಕಾಲ ರೋಗವನ್ನು ನಿರ್ವಹಿಸಿದರು. ಅವರ ಮೂತ್ರಪಿಂಡಗಳು ಸಂಪೂರ್ಣವಾಗಿ ವಿಫಲವಾಗಿವೆ ಮತ್ತು ಇನ್ನು ಮುಂದೆ ಅವರು ಡಯಾಲಿಸಿಸ್ ಮಾಡಿಸಿಕೊಳ್ಳಬೇಕೆಂದು ವೈದ್ಯರು ಸೂಚಿಸಿದರು. ಆಕೆಯ ಪತಿ  ನೆರೂರ್ ಅವರು ತಮ್ಮ ಕಿಡ್ನಿಯನ್ನು ತಮ್ಮ ಹೆಂಡತಿಗೆ ದಾನ ಮಾಡಬಹುದೆಂದು ಸಲಹೆಯನ್ನು ಕೂಡಾ ವೈದ್ಯರು ಸೂಚಿಸಿದರು. ಬದುಕಿನ ಆ ಸನ್ನಿವೇಶ ಒಂದು ಸ್ಪರ್ಧೆಯ ರೀತಿಯಲ್ಲಿತ್ತು. ಕೊನೆಗೂ ಮೂತ್ರಪಿಂಡ ಕಸಿ ಮಾಡಲಾಯಿತು. ಜೀವನವು ಅನೇಕ ಸವಾಲುಗಳನ್ನು ಹುಟ್ಟುಹಾಕುತ್ತಲೇ ಇದೆ, ಆದರೆ ದಂಪತಿಗಳು ಎಂದಿಗೂ ವಿಚಲಿತರಾಗಿಲ್ಲ. 

ಒಂದು ಬಹುರಾಷ್ಟ್ರೀಯ ಐಟಿ ಸಂಸ್ಥೆಯ ಜಾಗತಿಕ ಬ್ಯಾಂಕಿಂಗ್ ಪ್ರ್ಯಾಕ್ಟೀಸ್‌ಗಳ ನಿವೃತ್ತ ಮುಖ್ಯಸ್ಥರೂ ಮತ್ತು ಮನಶ್ಶಾಸ್ತ್ರಜ್ಞರೂ ಆಗಿರುವ ಗಣೇಶ್ ನೆರೂರ್ ಈಗ ಮೂತ್ರಪಿಂಡ ವೈಫಲ್ಯದ ರೋಗಿಗಳಿಗೆ ತಮ್ಮ ರೋಗದ ಪರಿಣಾಮವನ್ನು ನಿಭಾಯಿಸಲು ಸಹಾಯ ಮಾಡುತ್ತಾರೆ. “ಮರಣ ಎಲ್ಲರಿಗೂ ಅನಿವಾರ್ಯ, ಆದರೆ ನೀವು ನಿಮ್ಮ ಜೀವನದಲ್ಲಿ ಏನು ಮಾಡುತ್ತೀರಿ ಎಂಬುದು ಮುಖ್ಯವೇ ಹೊರತು ನೀವು ಒಂದು ಕಿಡ್ನಿ ಅಥವಾ ಎರಡು ಕಿಡ್ನಿಗಳೊಂದಿಗೆ ಬದುಕುತ್ತೀರಾ ಎಂಬುದು ಮುಖ್ಯವಲ್ಲಎನ್ನುತ್ತಾರೆ ಗಣೇಶ್ ನೆರೂರ್. 

ಅವರ ಕಥೆಯನ್ನು ಅವರದೇ ಮಾತುಗಳಲ್ಲಿ ಕೇಳೋಣ ಬನ್ನಿ, 

 ಉಮಾ ಗಣೇಶ್, 64 ವರ್ಷದ ಗೃಹಿಣಿ 

ವಾಡಿಕೆಯ ತಪಾಸಣೆಯಲ್ಲಿ ನನಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಇದೆ ಎಂದು ತಿಳಿದುಬಂದಾಗ ನಮಗೆ ವಿಲಕ್ಷಣ ಆಘಾತವಾಗಿತ್ತು. ವಿಷಯ ಗಂಭೀರವಾಗಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ, ಪ್ರಮುಖ ಮೂತ್ರಪಿಂಡಶಾಸ್ತ್ರಜ್ಞರು ಮೂರು ವರ್ಷಗಳಲ್ಲಿ ನನ್ನ ಮೂತ್ರಪಿಂಡವು ಸಂಪೂರ್ಣವಾಗಿ ವಿಫಲವಾಗುತ್ತದೆ ಎಂದು ನಮಗೆ ಹೇಳಿದರು. ಆಗ ನನಗೆ ಕೇವಲ 41 ವರ್ಷ. ನಾನು ನನ್ನ ಆರೋಗ್ಯದ ಬಗ್ಗೆ, ನನ್ನ ಮಕ್ಕಳು ಮತ್ತು ವಯಸ್ಸಾದ ಅತ್ತೆ-ಮಾವಂದಿರ ಬಗ್ಗೆ ಚಿಂತಿಸುತ್ತಿದ್ದೆ. ಹಿರಿಯ ಸೊಸೆಯಾದ ನಾನು ಅವರನ್ನು ನೋಡಿಕೊಳ್ಳುತ್ತಿದ್ದೆ. ನಾವು ಇನ್ನೊಬ್ಬ ಮೂತ್ರಪಿಂಡ ತಜ್ಞರಿಂದ  (ನಮ್ಮ ಈಗಿನ ನೆಫ್ರಾಲಜಿಸ್ಟ್‌) ಎರಡನೇ ಅಭಿಪ್ರಾಯವನ್ನು ಕೇಳಿದೆವು, ಅವರು ಹೆಚ್ಚು ಸಕಾರಾತ್ಮಕವಾಗಿದ್ದರು ಮತ್ತು ನನಗೆ ಕಟ್ಟುನಿಟ್ಟಿನ ಚಿಕಿತ್ಸೆಯನ್ನು ನೀಡಿದರು. 

ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದ ಸಕ್ರಿಯ ವ್ಯಕ್ತಿಯಾಗಿದ್ದ ನಾನು ರೋಗಿಯಾದೆ. ದೇಹದ ತೂಕ ನಷ್ಟ, ಉಗುರುಗಳ ಬಣ್ಣ ಮಾಸುವುದು, ನಿಶ್ಯಕ್ತಿ, ಆಯಾಸ ಮತ್ತು ಹಸಿವು ಕಡಿಮೆಯಾಗುವುದು ಇವೆಲ್ಲವೂ ನನ್ನ ರೋಗಲಕ್ಷಣಗಳಾಗಿದ್ದವು. CKD ಯ ಪರಿಣಾಮವಾಗಿ ನಾನು ಅವಧಿಗೆ ಮೊದಲೇ ಋತುಬಂಧಕ್ಕೆ(ಮೆನೋಪಾಸ್) ಒಳಗಾದೆ. ವೈದ್ಯರು ಕಡಿಮೆ ಪ್ರೋಟೀನ್, ಕಡಿಮೆ ಉಪ್ಪು ಇರುವ ಆಹಾರವನ್ನು ಸೇವಿಸುವಂತೆ ಮತ್ತು ಅನೇಕ ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸದಿರುವಂತೆ ಸಲಹೆ ಮಾಡಿದರು. ತಿನ್ನುವುದನ್ನು ಬಹಳ ಇಷ್ಟಪಡುತ್ತಿದ್ದ, ನನ್ನಂತಹವರಿಗೆ ಈ ರೀತಿಯ ಹೊಂದಾಣಿಕೆ ಬಹಳ ಕಷ್ಟವಾಗಿತ್ತು. ಜೀವನ ಅನ್ನುವುದು ಔಷಧಿಗಳು, ರಕ್ತ ಪರೀಕ್ಷೆಗಳು, ವಾರಕ್ಕೊಮ್ಮೆ ಚುಚ್ಚುಮದ್ದು ಮತ್ತು ತಿಂಗಳಿಗೊಮ್ಮೆ ವೈದ್ಯರನ್ನು ಭೇಟಿ ಮಾಡುವ ಚಕ್ರದಲ್ಲಿ ಕಳೆದುಹೋಗುತ್ತಿತ್ತು. ಆದರೆ ನನ್ನ ದೊಡ್ಡ ಕುಟುಂಬದ ನಿರಂತರ ಬೆಂಬಲದಿಂದ ನನಗೆ ಸರಾಗವೆನಿಸಿತು. ನಾವು ಒಬ್ಬ ಅಡುಗೆಯವರನ್ನು ಸಹ ನೇಮಿಸಿಕೊಂಡೆವು, ಹೀಗಾಗಿ ನನಗೆ ಹೆಚ್ಚು ನನಗೆ ಒತ್ತಡವೆನಿಸಲಿಲ್ಲ. 

ಕ್ರಮೇಣ, ನಾವು ಬದಲಾದ ಜೀವನಶೈಲಿಗೆ ಒಗ್ಗಿಕೊಂಡೆವು. ನನ್ನ ಗಂಡ ಮತ್ತು ನಾನು, ನನ್ನ ಕಾಯಿಲೆಯ ಬಗ್ಗೆ ಮಾತನಾಡಿದ್ದು ಬಹಳ ಅಪರೂಪ, ಭವಿಷ್ಯದ ಬಗ್ಗೆ ನಾವು ಹೆಚ್ಚು ಚಿಂತಿಸಲಿಲ್ಲ. “ಇವತ್ತು ಮತ್ತು ಈ ದಿನದ ಬಗ್ಗೆ ಮಾತ್ರ ಯೋಚನೆ ಮಾಡಬೇಕು” -ಇದು ನಮ್ಮ ಜೀವನ ಮಂತ್ರವಾಗಿತ್ತು. 2016 ರಲ್ಲಿ, ನಾನು ಮೂತ್ರಪಿಂಡ ಕಸಿ ಮಾಡಿಸಿಕೊಂಡೆ, ತಮ್ಮ ಒಂದು ಮೂತ್ರಪಿಂಡವನ್ನು ನನಗೆ ದಾನ ಮಾಡಿದ ಪತಿಗೆ ನನ್ನ ಧನ್ಯವಾದಗಳು. ನಾನು ಡಯಾಲಿಸಿಸ್‌ನ ಮಧ್ಯಂತರ ಹಂತವನ್ನು ಸಂಪೂರ್ಣವಾಗಿ ತಪ್ಪಿಸಿದ್ದೆ ಈ ಡಯಾಲಿಸಿ ಅನ್ನುವ ಪ್ರಕ್ರಿಯೆ ದುಬಾರಿ ಮಾತ್ರವಲ್ಲ, ಕಿರಿಕಿರಿ ಕೂಡ. ಶಸ್ತ್ರಚಿಕಿತ್ಸೆಯ ನಂತರ, ನಾನು ನಾಲ್ಕು ದಿನಗಳ ಕಾಲ ಐಸಿಯುನಲ್ಲಿದ್ದೆ ಮತ್ತು ನಂತರ ಸಂಪೂರ್ಣ ಸೋಂಕುನಿರೋಧಕ ಸ್ಥಿತಿಯಲ್ಲಿ 21-ದಿನ ಕ್ವಾರಂಟೈನ್‌ನಲ್ಲಿದ್ದೆ. ಅದೊಂದು ಏಕಾಂಗಿತನದ ಕ್ಷಣಗಳಾಗಿದ್ದವು, ಆದರೆ ನಿಭಾಯಿಸಬಹುದಾಗಿತ್ತು. ಒಳ್ಳೆಯ ಸಮಾಚಾರ ಏನಾಗಿತ್ತು ಅಂದರೆ, ನನ್ನ ಮೂತ್ರಪಿಂಡದ ಪ್ರಮಾಣಕಗಳು(ಪ್ಯಾರಮೀಟರ್ಗಳು) ಸಹಜವಾಗಿದ್ದವು. ನಾನು ಮನೆಗೆ ಬಂದೆ, ಮನೆಯಲ್ಲಿ ಮತ್ತೆ ಮೂರು ತಿಂಗಳ ಕಾಲ ಕ್ವಾರಂಟೈನ್‌ನಲ್ಲಿದ್ದೆ. ಸುಮಾರು ಆರು ತಿಂಗಳ ಒಳಗೆ, ಔಷಧಿಗಳೊಂದಿಗೆ ಬಹುತೇಕ ನಾನು ನನ್ನ ಸಾಮಾನ್ಯ ಜೀವನಕ್ಕೆ ಮರಳಿದೆ. ನನ್ನ ಶಸ್ತ್ರಚಿಕಿತ್ಸೆ ನಡೆದು ಆರು ವರ್ಷಗಳಾಗಿವೆ, ತೀವ್ರ ಮೂಳೆ ದೌರ್ಬಲ್ಯದ (ಆಸ್ಟಿಯೊಪೊರೋಸಿಸ್) ಆರೋಗ್ಯ ಸಮಸ್ಯೆ ಇದ್ದರೂ ಕೂಡ, ಪ್ರಯಾಣವೂ ಸೇರಿದಂತೆ, ನಾನೀಗ ನನ್ನ ಇಷ್ಟದ ಕೆಲಸಗಳನ್ನು ಸಂತೋಷದಿಂದ ಮಾಡಬಲ್ಲೆ. ಕಸಿ ಮಾಡಿದ ನನ್ನ ಮೂತ್ರಪಿಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ದೀರ್ಘಕಾಲೀನ ಕಾಯಿಲೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ನಿಮ್ಮ ಸಕಾರಾತ್ಮಕ ಮನೋಭಾವ, ನಿಮ್ಮ ವೈದ್ಯರನ್ನು ನಂಬುವುದು ಮತ್ತು ನಿಮ್ಮ ಕುಟುಂಬವು ನೀಡುವ ಪ್ರೀತಿಯ ಬೆಂಬಲವು ವಿಶೇಷ ಪ್ರಭಾವವನ್ನು ಬೀರುತ್ತದೆ ಎಂದು ನಾನು ನಂಬುತ್ತೇನೆ. 

ಗಣೇಶ್ ನೆರೂರ್, 68 ವರ್ಷ ಮನ:ಶಾಸ್ತ್ರಜ್ಞರು 

ನನ್ನ ಹೆಂಡತಿಗೆ ಮೂತ್ರಪಿಂಡ ಕಾಯಿಲೆ ಇದೆ ಎಂದು ಪತ್ತೆಯಾದಾಗ, ಆ ಸುದ್ದಿ ನಮ್ಮ ಕುಟುಂಬ ಮತ್ತು ಸ್ನೇಹಿತರಲ್ಲಿ ಭಯ ಮೂಡಿಸಿತು. ಆದರೆ ನಾನು ನನ್ನ ಸಹಜ ಜವಾಬ್ದಾರಿಯನ್ನು ವಹಿಸಲು ಸಿದ್ದನಾದೆ. CKD ಕುರಿತು ಮಾಹಿತಿಯನ್ನು ಸಂಗ್ರಹಿಸಲು ಮತ್ತು ನನ್ನನ್ನು ನಾನು ಸಜ್ಜುಗೊಳಿಸಲು ನಿರ್ಧರಿಸಿದೆ. ಒಮ್ಮೆ ಮೂತ್ರಪಿಂಡಗಳು ವಿಫಲಗೊಳ್ಳಲು ಪ್ರಾರಂಭಿಸಿದಾಗ, ಅವು ಕ್ರಮೇಣ ಹದಗೆಡುತ್ತವೆ ಮತ್ತು ಅಂತಿಮವಾಗಿ ಮೂತ್ರಪಿಂಡದ ಕೊನೆಯ ಹಂತದ ಕಾಯಿಲೆಎಂದು ಕರೆಯಲಾಗುವ ಸ್ಥಿತಿಯನ್ನು ತಲುಪುತ್ತವೆ ಎಂದು ನಾನು ತಿಳಿದುಕೊಂಡೆ. ಯಾರಾದರೂ ಆ ಹಂತವನ್ನು ತಲುಪಿದರೆ, ನಂತರ ಬದುಕಿಗಾಗಿ ಅವರು ಡಯಾಲಿಸಿಸ್ ಅಥವಾ ಕಸಿ ಮಾಡಿಸಿಕೊಳ್ಳುವುದು ಅನಿವಾರ್ಯ. ಕೆಲವು ಸ್ನೇಹಿತರು ಮತ್ತು ಸಂಬಂಧಿಕರು ಕಾಯಿಲೆಗೆ ಪರ್ಯಾಯ ಚಿಕಿತ್ಸೆಗಳಿಂದ ಹಿಡಿದು ವಿಲಕ್ಷಣ ಪರಿಹಾರಗಳವರೆಗೆ ಎಲ್ಲವನ್ನೂ ಸೂಚಿಸಿದರು. ಆದರೆ ನಾವು ಮೂತ್ರಪಿಂಡ ತಜ್ಞರ ಮಾತಿಗಷ್ಟೇ ಗಮನ ಕೊಡಲು ನಿರ್ಧರಿಸಿದೆವು ಮತ್ತು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ರೋಗವನ್ನು ನಿರ್ವಹಿಸುವತ್ತ ಗಮನಹರಿಸಿದೆವು. 

ನನ್ನ ಪತ್ನಿ ತುಂಬಾ ಒಳ್ಳೆಯ ರೋಗಿ. ಮೊದಲಿನಿಂದಲೂ, ಅವರು ಔಷಧಿಗಳನ್ನು ತೆಗೆದುಕೊಳ್ಳುವಲ್ಲಿ ಜಾಗರೂಕರಾಗಿದ್ದರು ಮತ್ತು ಅವರ ವೈದ್ಯರ ಸಲಹೆಯನ್ನು ಅನುಸರಿಸಿದರು. ಇದು ಆಕೆಗೆ 16 ವರ್ಷಗಳ ಕಾಲ ರೋಗವನ್ನು ನಿಭಾಯಿಸಲು ಸಹಾಯ ಮಾಡಿತು. 2015 ರಲ್ಲಿ, ವೈದ್ಯರು ಅನಿವಾರ್ಯವಾದ ಡಯಾಲಿಸಿಸ್‌ಗೆ, ಅಂದರೆ ಯಂತ್ರದ ಮೂಲಕ ರಕ್ತದಲ್ಲಿನ ತ್ಯಾಜ್ಯಗಳನ್ನು ತೆಗೆದುಹಾಕುವ ಪ್ರಕ್ರಿಯೆಗೆ ತಯಾರಾಗಲು ಹೇಳಿದರು. ವೈದ್ಯರು ನನ್ನ ಪತ್ನಿಯನ್ನು ಪರೀಕ್ಷಿಸುತ್ತಿದ್ದಾಗ, “ನನ್ನ ಮೂತ್ರಪಿಂಡವನ್ನು ನಾನು ದಾನ ಮಾಡಬಹುದಲ್ಲವೇ?” ನಾನು ಇದ್ದಕ್ಕಿದ್ದಂತೆ ಕೇಳಿದೆ. 

ದಾನ ಮಾಡಲು ನಾನು ಅರ್ಹನೇ ಎಂಬುದನ್ನು ನಿರ್ಧರಿಸಲು ಪ್ರಕ್ರಿಯೆಯಗಳನ್ನು ನಡೆಸಲಾಯಿತು ಮತ್ತು ಅದು ಹೊಂದಾಣಿಕೆಯಾಗುತ್ತಿತ್ತು. ದಾನಿಯಾಗಿ ನನ್ನ ಪಯಣ ಆರಂಭವಾಗಿದ್ದು ಹೀಗೆ. ಒಂದೇ ಕಿಡ್ನಿ ಹೊಂದಿದ್ದೂ, ಆರೋಗ್ಯವಾಗಿರುವ ಜನರ ಬಗ್ಗೆ ನಾನು ತಿಳಿದಿರುವ ಕಾರಣ, ನಾನು ಆತಂಕ ಅಥವಾ ಚಿಂತೆ ಮಾಡಲಿಲ್ಲ. ನನ್ನ ಆರೋಗ್ಯಕ್ಕೆ ಅಪಾಯವಿದ್ದಿದ್ದರೆ, ಮೂತ್ರಪಿಂಡಶಾಸ್ತ್ರಜ್ಞರು ಅಂಗಾಂಗವನ್ನು ದಾನ ಮಾಡುವಂತೆ ನನಗೆ ಎಂದೂ ಸಲಹೆ ನೀಡುತ್ತಿರಲಿಲ್ಲ ಅವರನ್ನೂ ಸಹ ನಾನು ನಂಬಿದ್ದೇನೆ. ಇದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಏಕೆಂದರೆ ನನ್ನ ಹೆಂಡತಿಯ ಜೀವನದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಡಯಾಲಿಸಿಸ್ಗೆ ಆಕೆ ಒಳಗಾಗಬೇಕಿಲ್ಲ. ಇದಲ್ಲದೆ, ಹಲವು ವರ್ಷಗಳ ಕಾಯುವಿಕೆಯೂ ಸೇರಿದಂತೆ ಮೂತ್ರಪಿಂಡವನ್ನು ದಾನವಾಗಿ ಪಡೆಯುವುದು ಅಂದರೆ ಅದೊಂದು ತೊಡಕಿನ ಪ್ರಕ್ರಿಯೆ ಕೂಡಾ ಹೌದು  

ನನಗೆ ಆಗಿದ್ದು ಸಾಮಾನ್ಯ ರೀತಿಯ ಶಸ್ತ್ರಚಿಕಿತ್ಸೆ, ಆದರೆ ನಂತರದ ಎರಡು ಮೂರು ದಿನಗಳವರೆಗೆ ನನಗೆ ಹೊಟ್ಟೆಯಲ್ಲಿ ಅಸಹನೀಯ ನೋವು ಇತ್ತು. ಆದರೆ ನಾನು ಚೆನ್ನಾಗಿ ಚೇತರಿಸಿಕೊಂಡೆ ಮತ್ತು ಮೂತ್ರಪಿಂಡ ಕಸಿಯ ನಂತರ ನನ್ನ ಪತ್ನಿ ಕೂಡ ಉತ್ತಮ ರೀತಿಯಲ್ಲಿ ಚೇತರಿಸಿಕೊಂಡರು 

ಈಗ, ನಾನು CKD (ದೀರ್ಘಕಾಲೀನ ಮೂತ್ರಪಿಂಡದ ಕಾಯಿಲೆ) ಬಗ್ಗೆ ಜನರಿಗೆ ಶಿಕ್ಷಣ ನೀಡುವುದನ್ನು ನನ್ನ ಧ್ಯೇಯವನ್ನಾಗಿ ಮಾಡಿಕೊಂಡಿದ್ದೇನೆ. ನಾನೀಗ ಮೂತ್ರಪಿಂದ ಕಾಯಿಲೆಗೆ ಕಾರಣ ಮತ್ತು ಸಲಹೆಗಳನ್ನು ನೀಡುವಕಿಡ್ನಿ ವಾರಿಯರ್ಸ್ ಫೌಂಡೇಶನ್‌ನ ಸದ್ಯಸ್ಯನಾಗಿದ್ದೇನೆ ಮಾತ್ರವಲ್ಲ ರೋಗದ ಬಗ್ಗೆ ಕಿರುಪುಸ್ತಕವನ್ನು ಸಹ ಬರೆದಿದ್ದೇನೆ. ನನ್ನ ಸ್ವಂತ ಅನುಭವವನ್ನು ರೋಗಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಮೂತ್ರಪಿಂಡದ ಕಾಯಿಲೆಯಿಂದ ಬಾಧಿತರಾಗಿರುವವರಿಗೆ ಅದನ್ನು ನಿಭಾಯಿಸಲು ಸಹಾಯ ಮಾಡುತ್ತಿದ್ದೇನೆ. 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತೃಪ್ತಿಕರವಾದ ನಿಕಟ ಸಂಬಂಧಗಳನ್ನು ಆನಂದಿಸಬೇಕಾದರೆ ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತಜ್ಞರು ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಕಡಿಮೆ-ತಿಳಿದಿರುವ ಸಲಹೆಗಳನ್ನು ನೀಡಿದ್ದಾರೆ.  
ಲೇಖನ
ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು, ಸೋಡಿಯಂ ಮತ್ತು ಪೊಟ್ಯಾಸಿಯಮ್ ಕಡಿಮೆ ಇರುವಂತಹ ಆಹಾರ ಸೇವನೆಯತ್ತ ಗಮನ ಕೇಂದ್ರೀಕರಿಸಿ. ಆದರೆ, ಉತ್ತಮ ಗುಣಮಟ್ಟದ ಪ್ರೋಟೀನ್ ಜೊತೆಗೆ  ಇವನ್ನು ಸೇವಿಸುವುದು ಮುಖ್ಯ ಎಂದು ತಜ್ಞರು ಸೂಚಿಸುತ್ತಾರೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ