0

0

0

ಈ ಲೇಖನದಲ್ಲಿ

Bionic Reading: ಕ್ಷಿಪ್ರ ಓದುವಿಕೆ ಖಯಾಲಿಯೇ?
1

Bionic Reading: ಕ್ಷಿಪ್ರ ಓದುವಿಕೆ ಖಯಾಲಿಯೇ?

ಪಠ್ಯದ ಕೆಲವು ಅಕ್ಷರಗಳನ್ನು ಮಿದುಳಿನಲ್ಲೇ ಗ್ರಹಿಸಿ ಕ್ಷಿಪ್ರ ಓದುವಿಕೆ (ಬಯೋನಿಕ್ ರೀಡಿಂಗ್) ಒಂದು ಖಯಾಲಿಯೇ ಅಥವಾ ಚಂಚಲತೆ ಮತ್ತು ಅತಿ ಚಟುವಟಿಕೆಯ ಕಾಯಿಲೆ (ಎಡಿಎಚ್‌ಡಿ), ಕಲಿಕೆಯ ತೊಂದರೆ ( ಡಿಸ್ಲೆಕ್ಸಿಯಾ) ಇರುವವರು ಚೆನ್ನಾಗಿ ಓದಲು ಸಹಾಯ ಮಾಡಬಹುದೇ? 

ಪಠ್ಯದ ದೊಡ್ಡ ಭಾಗವನ್ನು ಓದಲು ನೀವು ಯಾವತ್ತಾದರೂ ಕಷ್ಟಪಟ್ಟಿದ್ದರೆ, ನಿಮಗೆ  ಬಯೋನಿಕ್ ರೀಡಿಂಗ್ ಸೂಕ್ತವಾಗಬಹುದು  ಪಠ್ಯದ ಕೆಲವು ಅಕ್ಷರಗಳನ್ನು ಮಿದುಳಿನಲ್ಲೇ ಗ್ರಹಿಸಿ ಕ್ಷಿಪ್ರ ಓದುವಿಕೆ (ಬಯೋನಿಕ್ ರೀಡಿಂಗ್) ಒಂದು ಖಯಾಲಿಯೇ ಅಥವಾ ಚಂಚಲತೆ ಮತ್ತು ಅತಿ ಚಟುವಟಿಕೆಯ ಕಾಯಿಲೆ (ಎಡಿಎಚ್‌ಡಿ), ಕಲಿಕೆಯ ತೊಂದರೆ ( ಡಿಸ್ಲೆಕ್ಸಿಯಾ) ಇರುವವರು ಚೆನ್ನಾಗಿ ಓದಲು ಸಹಾಯ ಮಾಡಬಹುದೇ? 

ಅಕ್ಷರ ವಿನ್ಯಾಸದಲ್ಲಿ ಬದಲಾವಣೆ ನಿಮ್ಮ ಬಾಳನ್ನು ಬದಲಾಯಿಸಬಹುದೇ? ಇದು ತರಲೆಯ ಪ್ರಶ್ನೆಯಲ್ಲಎಡಿಎಚ್‌ಡಿ ಮತ್ತು ಡಿಸ್ಲೆಕ್ಸಿಯಾ  ಮುಂತಾದ ಸಮಸ್ಯೆಗಳಿರುವವರು ಪಠ್ಯವನ್ನು ಓದಿ ಸುಲಭವಾಗಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಮಾಡಲು ಹಲವಾರು ವರ್ಷಗಳಿಂದ  ಸಂಶೋಧಕರು ಮತ್ತು ಬಳಕೆದಾರರ ಅನುಭವದ ವಿನ್ಯಾಸಕಾರರು ಸೂಕ್ತ  ಗುಣಲಕ್ಷಣಗಳಿರುವ ಅಕ್ಷರಶೈಲಿಗಳು ಸಿಗಲಿಕ್ಕಾಗಿ ನೋಡುತ್ತಿದ್ದಾರೆ. 

 ಎಡಿಎಚ್ಡಿ ಎನ್ನುವುದು ನರಗಳ ಬೆಳವಣಿಗೆಯ ಅಸ್ವಸ್ಧತೆಯಾಗಿದ್ದು ಅದನ್ನು ಏಕಾಗ್ರತೆಯ ಕೊರತೆ, ಅಸ್ತವ್ಯಸ್ತತೆ ಮತ್ತು/ಅಥವಾ ಅತಿ ಚಟುವಟಿಕೆಯ ದುಡುಕುತನದ ಪೃವ್ರತ್ತಿ (ಡಿಎಸ್‌ಎಮ್-5) ಎನ್ನುತ್ತಾರೆ. ಡಿಸ್ಲೆಕ್ಸಿಯಾ ಒಂದು ನಿರ್ದಿಷ್ಟ ಕಲಿಕಾ ಅಸ್ವಸ್ಥತೆ (ಎಸ್ಎಲ್ಡಿ) ಆಗಿದ್ದು, ಓದುವಿಕೆ ಮತ್ತು ಬರವಣಿಗೆಯ ಕಲಿಕೆಗೆ (ಎನ್ಎಚ್ಎಸ್) ಉಪಯೋಗಿಸುವ ಕೆಲವು ಸಾಮರ್ಥ್ಯಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. 

 ಎಡಿಎಚ್ಡಿಗೆ ಹೆಚ್ಚಾಗಿ ಔಷಧಗಳ ಚಿಕಿತ್ಸೆ ನೀಡಲಾಗುತ್ತದೆ ಮತ್ತು ಡಿಸ್ಲೆಕ್ಸಿಯಾ ಜೀವನದುದ್ದಕ್ಕೂ ಬಾಧಿಸುವ ಸ್ಥಿತಿಯಾಗಿದ್ದು, ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸರಳವಾದ ಅಕ್ಷರ ವಿನ್ಯಾಸದ ಉಪಯೋಗವು ಓದುವಿಕೆಯನ್ನು ಕಡಿಮೆ ಹೆದರಿಕೆಯ ಪ್ರಕ್ರಿಯೆಯಾಗಿ ಮಾಡಿ ಆಕರ್ಷಣೀಯವಾಗಿ ಮಾಡುವುದು ಸುಲಭ. 

 ಇದನ್ನು ಗಮನದಲ್ಲಿಟ್ಟುಕೊಂಡು, ಟ್ವಿಟರ್ನಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಚಿತ್ರವನ್ನು ಗಮನಿಸಿ. 

Image

 

 ಮೊದಲನೆಯದಾಗಿ ಸ್ವಲ್ಪ ಮಾಹಿತಿ:  ನೀವು ಒಂದು ವಾಕ್ಯವನ್ನು ಓದುವಾಗ, ನಿಮ್ಮ ಕಣ್ಣುಗಳು ಅದನ್ನು ಹಾಯಿಸಿಕೊಳ್ಳುತ್ತವೆ ಮತ್ತು ಒಂದು ಬಿಂದುವಿನಿಂದ ಇನ್ನೊಂದು ಬಿಂದಿನ ತನಕ ಚಲಿಸುವುದನ್ನು ಸ್ಥಿರೀಕರಣಗಳು ಎಂದು ಕರೆಯಲಾಗುತ್ತದೆ. 

 ಬಯೋನಿಕ್ ರೀಡಿಂಗ್ ಎನ್ನುವುದು ಸ್ವಿಸ್ (ಸ್ವಿಜರ್ಲೇಂಡಿನ) ಮುದ್ರಣಕಲೆ ವಿನ್ಯಾಸಕಾರ (ಟೈಪೋಗ್ರಾಫಿ ಡಿಸೈನರ್) ರೆನಾಟೊ ಕ್ಯಾಸುಟ್ ಅವರು ಆವಿಷ್ಕಾರ ಮಾಡಿದ ವಿಧಾನವಾಗಿದ್ದು, ಅದರಲ್ಲಿ ಪಠ್ಯದ ಮೆದಲ ಕೆಲವು ಅಕ್ಷರಗಳನ್ನು ಗ್ರಹಿಸಲಾಗುತ್ತದೆಬಲಭಾಗದಲ್ಲಿರುವ  ಉದಾಹರಣೆಯನ್ನು ಓದಲು ಮತ್ತು ಗ್ರಹಿಸಲು ನಿಮಗೆ ಸುಲಭವೆನಿಸಿದರೆ, ನೀವು ಇತ್ತೀಚಿನ ಬಳಕೆದಾರ ಅನುಭವದ ವಿನ್ಯಾಸದ (ಯೂಸರ್ ಎಕ್ಸ್‌ಪೀರಿಯನ್ಸ್ಯುಎಕ್ಸ್) ಉದ್ದೇಶಿತ ಗುರಿ (ಟಾರ್ಗೆಟ್ ಆಡಿಯನ್ಸ್) ಆಗಬಹುದು  ಟ್ವೀಟ್ಗೆ ಸಹಸ್ರಾರು ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಅದು ತಮ್ಮ ಮಿದುಳನ್ನು ಶೇಕಡಾ 100 ರಷ್ಟು ಮುಕ್ತವಾಗಲು (ಅನ್ಲಾಕ್ )ಸಹಾಯ ಮಾಡಿದೆ ಎಂದು ಹೇಳಿದ್ದಾರೆ. 

Image

 ಡಾ. ಜಮುನಾ ರಾಜೇಶ್ವರನ್ಮುಖ್ಯಸ್ಥರು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌ – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸಾಯೆನ್ಸಸ್) ಚಿಕಿತ್ಸಕಾ ನರವಿಜ್ಞಾನ ಮತ್ತು ಅರಿವಿನ ನರವಿಜ್ಞಾನ ಕೇಂದ್ರದ (ಕ್ಲಿನಿಕಲ್ ನ್ಯೂರೋಸೈಕಾಲಜಿ ಮತ್ತು ಕಾಗ್ನಿಟಿವ್ ನ್ಯೂರೋಸಾಯೆನ್ಸಸ್ ಸೆಂಟರ್),  ಅವರು ವಿವರಿಸುವ ಪ್ರಕಾರ ಅಂತಹ ಪ್ರಕ್ರಿಯೆ ಅಕ್ಕಿಯ  ರಾಶಿಯಿಂದ ನಮ್ಮ ಕಣ್ಣುಗಳು ಚಿಕ್ಕ ಮಣ್ಣಿನ ಉಂಡೆಯನ್ನು ಆರಿಸುವುದಕ್ಕೆ ಸಮನಾಗಿದೆ. 

“ಅರಿವಿನ ಮನೋವಿಜ್ಞಾನದ ಕ್ಷೇತ್ರದಲ್ಲಿ ಗಮನ ಮತ್ತು ಏಕಾಗ್ರತೆಯ ಪ್ರಸ್ತಾಪದ ಮೇಲಣ ಸಂಶೋಧನೆಯು, ಒಂದು  ಪ್ರಚೋದಕವು ಇನ್ನೊಂದರಿಂದ (ಬಣ್ಣ, ಗಾತ್ರ ಮತ್ತು ಶೈಲಿಗಳಲ್ಲಿನ ವ್ಯತ್ಯಾಸಗಳು) ಪ್ರತ್ಯೇಕಿಸುವ ಅಂಶಗಳನ್ನು ಹೊಂದಿರುವುದನ್ನು ಮಾನವನ  ಮನಸ್ಸು ಸ್ವಾಭಾವಿಕವಾಗಿ ಅದರತ್ತ ಗಮನ ಹರಿಸುವ ಪ್ರವೃತ್ತಿಯನ್ನು ಹೊಂದಿದೆ ಎನ್ನುವುದನ್ನು ಸಾಬೀತುಪಡಿಸಿದೆ,” ಎನ್ನುತ್ತಾರೆ ಡಾ. ರಾಜೇಶ್ವರನ್ಮಾಹಿತಿಯಲ್ಲಿರುವ ನ್ಯೂನತೆಗಳನ್ನು ತುಂಬಿಸುವ ಮಿದುಳಿನ ಸಾಮರ್ಥ್ಯವು ಕೂಡಾ ಪಾತ್ರ ಹೊಂದಬಹುದೆಂದು ಅವರು ಹೇಳುತ್ತಾರೆ. 

ಚಂಚಲತೆ ಹಾಗೂ ಅತಿ ಚಟುವಟಿಕೆಯ ಕಾಯಿಲೆ (ಎಡಿಎಚ್ಡಿ) ಇರುವವರಿಂದ ಈ ವಿಧಾನದ ಮೇಲೆ ಗಣನೀಯ ಆಸಕ್ತಿ ಕಂಡುಬಂದಿದೆ.   ವಿಶ್ವದಾದ್ಯಂತ (ಆಫ್ರಿಕಾವನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರದೇಶಗಳಲ್ಲಿ ನಡೆಸಲಾದ ಅಧ್ಯಯನಗಳ ಮಾಹಿತಿಯ ಪ್ರಕಾರ ) ಶೇಕಡಾ 5.9 ರಷ್ಟು ಯುವಕರು ಮತ್ತು  ಶೇಕಡಾ 2.9 ರಷ್ಟು ವಯಸ್ಕರಲ್ಲಿ ಇಂತಹ ಪರಿಸ್ಥಿತಿ ಇರಬಹುದು ಎಂದು ಅಂದಾಜಿಸಲಾಗಿದೆಎಡಿಎಚ್ಡಿ ಹೊಂದಿರುವವರು ಸಾಮಾನ್ಯವಾಗಿ ಸ್ವರೂಪೀಕರಣಗೊಳಿಸದ (ನಾನ್-ಫಾರ್ಮಾಟೆಡ್) ಪಠ್ಯದ ಬಹಳಷ್ಟು ಭಾಗಗಳನ್ನು ಓದಲು ಅನೇಕ ಬಾರಿ ಕಷ್ಟಪಡುತ್ತಾರೆ ಮತ್ತು ಅಂತಹವರಿಗೆ ಬಯೋನಿಕ್ ರೀಡಿಂಗ್‌  ಮೂಲಕ ಸುಲಭವಾಗುವ ಭರವಸೆ ಸಿಗುತ್ತದೆ. 

ವಿಧಾನದ ಬಗ್ಗೆ ಅಷ್ಟೇನು ಸಂಶೋಧನೆ ಲಭ್ಯವಿರದಿದ್ದರೂ, ಪಠ್ಯದ ಭಾಗಗಳನ್ನು ಬಣ್ಣದಿಂದ ಎತ್ತಿತೋರಿಸಿದರೆ ಎಡಿಎಚ್ಡಿ ಇರುವವರಿಗೆ ಓದುವಿಕೆ ಸುಲಭಸಾಧ್ಯವೆಂದು ಅಧ್ಯಯನಗಳು ದೃಡೀಕರಿಸಿವೆ2000ನೇ ಇಸವಿಯಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಗಮನದ ಕೊರತೆ ಹೊಂದಿರುವ ವಿದ್ಯಾರ್ಥಿಗಳು ಅವರು ಮಾಡುವ ಕೆಲಸಗಳಲ್ಲಿನವೀನತೆಯನ್ನು ಸೇರಿಸಿದಾಗ” ಉತ್ತಮವಾಗಿ ಗಮನವಿರಿಸಿಕೊಳ್ಳಲು ಶಕ್ತರಾಗುತ್ತಾರೆ ಎಂದು ಕಂಡುಕೊಂಡಿದೆ.   ಎಡಿಎಚ್ಡಿ ಇದ್ದರೂ ಮತ್ತಿತರ ಸಹವರ್ತಿ ನ್ಯೂನತೆಗಳಿಲ್ಲದ ವಿದ್ಯಾರ್ಥಿಗಳಿಗೆ ಮಾನಸಿಕ ಉತ್ತೇಜಕ ಔಷಧಗಳನ್ನು ಸೇವಿಸುವುದರಿಂದ  ಪ್ರಯೋಜನವಾಗಿಲ್ಲ ಆದರೆ ಓದುವ ಮತ್ತು ಗಣಿತದ ವಿಷಯಗಳಲ್ಲಿ ದೃಶ್ಯ ಉತ್ತೇಜನ ಇದ್ದಾಗ ಉತ್ತಮ ಓದುವಿಕೆಯ ಅಂಕಗಳನ್ನು ಪಡೆಯಬಹುದು ಎಂದು 2012 ಸಾಲಿನ ಸಾಹಿತಿಕ ವಿಮರ್ಶೆಯಲ್ಲಿ (ಲಿಟರೇಚರ್ ರಿವ್ಯೂ) ಹೇಳಲಾಗಿದೆ.  

 ಅಧಿಕ ದೃಶ್ಯ ಉತ್ತೇಜಕ ಪಠ್ಯದ ಮೂಲಕ “ಬಯೋನಿಕ್  ರೀಡಿಂಗ್” ತನ್ನ ಉದ್ದೇಶವನ್ನು ಪೂರೈಸುತ್ತಿದೆಯೇ ಕುರಿತು ಇನ್ನೂ ನಿರ್ಧಾರ  ಅಸ್ಪಷ್ಟ.  ಆದರೆ ಹಲವಾರು ಮಂದಿ ಎಡಿಎಚ್ಡಿ ಟ್ವಿಟರ್ನಲ್ಲಿ ಈ ವಿಧಾನದ ಬಗ್ಗೆ ಪ್ರಮಾಣೀಕರಿಸುತ್ತಾರೆ ಮಾತ್ರವಲ್ಲದೆ ಅದನ್ನು ಕಿಂಡಲ್ ತರದ ಓದುವಿಕೆಯ  ಆಪ್ (ಅಪ್ಲಿಕೇಶನ್) ಗಳೊಂದಿಗೆ ಸಂಯೋಜಿಸಬೇಕೆಂದು ಆಗ್ರಹಿಸುತ್ತಾರೆ. ಆದರೆ, ಇದು ಎಡಿಎಚ್ಡಿಗೆ ಸಹಾಯ ಮಾಡಬಹುದೇ ಎನ್ನುವುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ. 

 ಎಡಿಎಚ್ಡಿ ಓದುವಿಕೆಯ ಏಕಾಗ್ರತೆಯ ಮೇಲೆ ಬೀರುವಷ್ಟು ಗ್ರಹಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಡಾ. ರಾಜೇಶ್ವರನ್ ಹೇಳುತ್ತಾರೆ.   ʻʻಎಡಿಎಚ್ಡಿ ವಿಚಾರವು ಡಿಸ್ಲೆಕ್ಸಿಯಾಕ್ಕಿಂತ ತುಂಬಾ ಭಿನ್ನವಾಗಿದೆ. ಎಡಿಎಚ್ಡಿಯಲ್ಲಿ ವ್ಯಕ್ತಿಗಿರುವ ಒಂದು ದೊಡ್ಡ ಸವಾಲೆಂದರೆ ಒಂದು ಕೆಲಸದ ಮೇಲೆ ಕೇಂದ್ರೀಕರಿಸುವುದನ್ನು  ಸಾಧ್ಯವಾಗುವಂತೆ ಮಾಡುವುದು. ಒಮ್ಮೆ ಹೀಗೆ ಕೇಂದ್ರೀಕರಿಸಿದರೆ,  ಆ ವ್ಯಕ್ತಿಗೆ ಸಾಮಾನ್ಯವಾಗಿ ಲಿಖಿತ  ವಸ್ತುವನ್ನು (ಸಾಮಗ್ರಿಯನ್ನು)  ಸಂಸ್ಕರಿಸುವುದರಲ್ಲಿ (ತಿಳಿದುಕೊಳ್ಳಲು/ಅರಿತುಕೊಳ್ಳಲು) ಯಾವುದೇ ಸಮಸ್ಯೆಗಳಿರುವುದಿಲ್ಲ,ʼʼ ಎಂದು ಅವರ ಅಭಿಪ್ರಾಯ. 

 ಅಕ್ಷರಶೈಲಿಯ ವಿನ್ಯಾಸದಲ್ಲಿ ಹೆಚ್ಚಾಗಿ ಅಲಂಕಾರ ಮಾಡುವುದರಿಂದ ಓದಲು ಕೆಲವರಿಗೆ ಕಷ್ಟಕರ ಎನಿಸಬಹುದಾದರೂಒಬ್ಬರು ಓದಲು ಹೆಚ್ಚು ಸಮಯ ತೆಗೆದುಕೊಂಡಷ್ಟೂ ಹೆಚ್ಚು  ಮನನ ಮಾಡಿಕೊಳ್ಳುತ್ತಾರೆ ಎಂದು ಸಂಶೋಧನೆಯಿಂದ  ತಿಳಿದುಬಂದಿದೆ.  2018 ಸಾಲಿನಲ್ಲಿ ಆಸ್ಟ್ರೇಲಿಯಾದ ಆರ್ಎಂಐಟಿ ಸಂಸ್ಥೆಯ ಸಂಶೋಧಕರು ಕೆಲವು ಅಕ್ಷರಗಳ ಭಾಗಗಳು ಕಾಣಿಸದಂತೆ ತೋರುವಂತಹ್ಗ ಅಕ್ಷರಗಳನ್ನು ವಿನ್ಯಾಸಗೊಳಿಸಿದರು.  ಈ ಲೋಪವಿದ್ದರೂ ಓದಲು ಸಾಧ್ಯವಾಯಿತು, ಏಕೆಂದರೆ ಈ ಲೋಪಗಳನ್ನು ಮಿದುಳು ತುಂಬಿಕೊಳ್ಳುತ್ತಿತ್ತು.  “ಸ್ಯಾನ್ಸ್ ಫೊರ್ಗೆಟಿಕಾ”  ಅಕ್ಷರ ವಿನ್ಯಾಸವುಅಪೇಕ್ಷಣೀಯ ತೊಂದರೆ ಎಂಬ ಸಿದ್ಧಾಂತದ  ಮೇಲೆ ಅದರ ಪ್ರಕಾರ ಕಲಿಕಾ ವಿಧಾನದಲ್ಲಿ ಓದಲು ಬೇಕಾಗುವಷ್ಟೇ ಶ್ರಮ ಹಾಕುವಂತೆ ಮಾಡಲು ಪ್ರತಿರೋಧಕಗಳನ್ನು ಅಳವಡಿಸಲಾಗಿದ್ದು, ಅದು ಜ್ಞಾಪಕಶಕ್ತಿ ವರ್ಧನೆಗೆ ಅನುಕೂಲವಾಗಿ ಆಳವಾದ  ಅರಿವಿನ ಪ್ರಕ್ರಿಯೆಗೆ ಉತ್ತೇಜನ ದೊರೆಯುತ್ತದೆ.” 

ಡಿಸ್ಲೆಕ್ಸಿಯಾ ಇರುವವರಿಗೆ ಬಯೋನಿಕ್ ರೀಡಿಂಗ್ ಸಹಾಯ ಮಾಡುತ್ತದೆ ಎಂದು ಕ್ಯಾಸುಟ್ ಅವರ ವೆಬ್ಸೈಟ್ ಹೇಳಿಕೊಂಡಿದೆ. “ಬಯೋನಿಕ್ ರೀಡಿಂಗ್ ಸೇವೆಯಿಂದಾಗಿ ತಾವು ಓದಿದ ಹಲವಾರು ಪಠ್ಯಗಳು ಮೊದಲ ಬಾರಿ ಓದಿದಾಗಲೇ ತಮಗೆ ಅರ್ಥವಾದವುಬಯೋನಿಕ್ ರೀಡಿಂಗ್ ಇಲ್ಲದಿದ್ದರೆ  ನಮಗೆ ಅದು ಅಸಾಧ್ಯವಾಗುತ್ತಿತ್ತು ಎಂದು ಸಮಸ್ಯೆಯಿಂದ ಪೀಡಿತರಾದವರಿಂದ ನಮಗೆ ಪ್ರತಿಕ್ರಿಯೆ ದೊರೆತಿದೆ..” 

 ಕೆಲವು ವಿನ್ಯಾಸಕಾರರು ಈಗಾಗಲೇ  ವಿಸ್ತರಣೆಗಳನ್ನು ರಚಿಸಿದ್ದು ಅವುಗಳಿಂದ  ನಿಮ್ಮ ಬ್ರೌಸರ್ನಲ್ಲಿ ಹಾಗೂ ಪಿಡಿಎಫ್ ರೀಡರ್ಗಳಲ್ಲಿ ಮತ್ತು ಕೆಲವು ಐಒಎಸ್ (ಐಫೋನ್ಆಪರೇಟಿಂಗ್ಸಿಸ್ಟಮ್‌) ಅಪ್ಲಿಕೇಶನ್ಗಳಲ್ಲಿ ಬಯೋನಿಕ್ ರೀಡಿಂಗ್ ಪ್ರಯತ್ನಿಸಲು ನಿಮಗೆ ಅನುಕೂಲವಾಗುತ್ತದೆ. 

 ಅಕ್ಷರಶೈಲಿಯ ವಿನ್ಯಾಸಗಳು ಡಿಸ್ಲೆಕ್ಸಿಯಾ ಹೊಂದಿರುವವರಲ್ಲಿ ಪರಿಣಾಮ ಬೀರಬಹುದೇಡಚ್ ವಿನ್ಯಾಸಕಾರ ಕ್ರಿಶ್ಚಿಯನ್ ಬೋಯರ್ ಅವರು ”ಡಿಸ್ಲೆಕ್ಸಿ” ಎನ್ನುವ ಅಕ್ಷರಶೈಲಿಯ ವಿನ್ಯಾಸದಿಂದ ಇದನ್ನು ಸಾಧಿಸಲು ಪ್ರಯತ್ನಿಸಿದರು.  ಅದು ವಿನ್ಯಾಸದ ಅಂಶಗಳಿಂದ ತುಂಬಿಕೊಂಡಿದ್ದು ಅಕ್ಷರಗಳ ಕೆಳಭಾಗವು ದಪ್ಪನೆಯದಾಗಿದ್ದು, ಅವುಗಳನ್ನು ಡಿಸ್ಲೆಕ್ಸಿಯಾ ಬಾಧಿತರು ವಿಶಿಷ್ಟ ತೆರನಾದ ಅಕ್ಷರಗಳೊಂದಿಗೆ ಬೆರಸುವ ಸಾಧ್ಯತೆ ಕಡಿಮೆ. ಸಮಸ್ಯೆಯುಳ್ಳವರು ಮೂರು ಆಯಾಮದ  – ಪದಗಳು ಮತ್ತು ಅಕ್ಷರಗಳನ್ನು ಸ್ಥಳಾಂತರಗೊಳ್ಳುವ ಸಮೂಹದ, ಸಮತಲವಾಗಿ ಮತ್ತು ಲಂಬವಾಗಿ ತಿರುಗಿಸುವ ಹಾಗೂ ಇದರಿಂದಾಗಿ ಸಮಾನ ಗಾತ್ರದ ಇಂಗ್ಲಿಷ್ ”ಬಿಮತ್ತು”ಡಿಅಕ್ಷರಗಳನ್ನು ಗುರುತಿಸಲು ಕಷ್ಟವಾಗುವಂತಹಚಿಂತನೆಗೆ ಒಳಗಾಗುವ ಪ್ರಮೇಯ ಹೆಚ್ಚಾಗಿದೆ 

  ಅಕ್ಷರಶೈಲಿಯ ವಿನ್ಯಾಸವನ್ನು ಸಾವಿರಾರು ಜನರು ಡೌನ್ಲೋಡ್ಮಾಡಿದ್ದರೂ, 2017 ರಲ್ಲಿ ಮಾಡಲಾದ ಅಧ್ಯಯನದಲ್ಲಿ ಅದನ್ನು ಉಪಯೋಗಿಸಿದ ಡಿಸ್ಲೆಕ್ಸಿಯಾ ಬಾಧಿತ ಮಕ್ಕಳು ಮತ್ತು ಉಪಯೋಗಿಸದ ಮಕ್ಕಳ ಓದುವ ಸಾಮರ್ಥ್ಯದಲ್ಲಿ  ಯಾವುದೇ ವ್ಯತ್ಯಾಸವನ್ನು ಕಂಡುಬರಲಿಲ್ಲ ಎಂದು ಹೇಳಲಾಗಿದೆ.  ಕೆಲವು ಅಧ್ಯಯನಗಳಲ್ಲಿ ಪ್ರಮಾಣಿತವಾದʼಟೈಮ್ಸ್ ನ್ಯೂ ರೋಮನ್ʼ’ ಅಕ್ಷರಶೈಲಿಯನ್ನು ಉಪಯೋಗಿಸಿ ಅಕ್ಷರಗಳ ನಡುವಣ ಅಂತರವನ್ನಷ್ಟೇ  ಹೆಚ್ಚಿಸುವ ಮೂಲಕ ಹೆಚ್ಚು ಸುಲಭ ಮಾಡಬಹುದೆಂಬುದು ಕೂಡಾ ತಿಳಿದುಬಂದಿದೆ. 

 ಇದನ್ನು ಒಪ್ಪಿಕೊಳ್ಳುವ  ಡಾ. ರಾಜೇಸ್ವರನ್ ಹೇಳುತ್ತಾರೆ: ಡಿಸ್ಲೆಕ್ಸಿಯಾದ ಕುರಿತ ವಿಜ್ಞಾನವು ಇನ್ನೂ ಪರಿಪೂರ್ಣವಾಗಿಲ್ಲ ಮತ್ತು ಸಮಾಪನೆಯ ಕಾನೂನು (ಮಾಹಿತಿಯಲ್ಲಿನ ಕೊರತೆಗಳನ್ನು ಮಿದುಳು ತುಂಬಿಸಿಕೊಳ್ಳುವುದು) ಕಲಿಕಾ ನ್ಯೂನತೆಗಳಿರುವವರಿಗೆ ಹೇಗೆ ಸಮಾನವಾಗಿ ಅನ್ವಯವಾಗುತ್ತದೆ ನಾವಿನ್ನೂ ಅರಿತುಕೊಂಡಿಲ್ಲ 

 ಇದು ವೇಗವಾಗಿ ಓದುವ ವಿಧಾನಗಳಲ್ಲಿ ನಿಮ್ಮಲ್ಲಿ ಆಸಕ್ತಿ ಉಂಟುಮಾಡಿದರೆ, ನೀವು “ಕ್ಷಿಪ್ರ ಓದುವಿಕೆ” (ಸ್ಪೀಡ್ ರೀಡಿಂಗ್)  ಬಗ್ಗೆ ತಿಳಿದುಕೊಳ್ಳಲು ಬಯಸಬಹುದು ಅದು ಓದುವ ಮತ್ತು ಮಾಹಿತಿಯನ್ನು ಗ್ರಹಿಸುವ ಸಾಮರ್ಥ್ಯವನ್ನು ಹೆಚ್ಚಿಸಿ ಅಧಿಕ ಪ್ರಯೋಜನ ಪಡೆಯುವುದಕ್ಕೆ ಮೀಸಲಾದವರ ಕೂಟವಾಗಿದೆಪದಗಳ ನಡುವಣ ಅಂತರದ ಮೇಲೆ ಗಮನ ಹರಿಸಿ ಓದುವ “ಸ್ಪೇಸ್ ರೀಡಿಂಗ್” (ಅಂತರ ಓದುವಿಕೆ)  ವಿಧಾನದಿಂದ ಪದದಿಂದ ಪದಕ್ಕೆ ಕಣ್ಣಾಡಿಸುವುದಕ್ಕೆಸ್ಯಾಕ್ಕೇಡ್ ಎಂದು ಕರೆಯಲ್ಪಡಲಾಗಿದ್ದು, ಅದರಿಂದ ಕ್ಷಿಪ್ರ ಚಲನೆಗಳಲ್ಲಿ ಪಠ್ಯಗಳ ಸಾರವನ್ನು ಹೀರಿಕೊಳ್ಳಲು ಹೆಚ್ಚು ಸುಲಭವಾಗಿ ನಿಮಗೆ ಅನುವು ಮಾಡಿಕೊಡುತ್ತದೆ. 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

two + five =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ