0

0

0

ಈ ಲೇಖನದಲ್ಲಿ

ಈಜಾಟ ಮಕ್ಕಳಲ್ಲಿ ಆಸ್ತಮಾವನ್ನು ನಿಗ್ರಹಿಸಬಹುದೇ? 
2

ಈಜಾಟ ಮಕ್ಕಳಲ್ಲಿ ಆಸ್ತಮಾವನ್ನು ನಿಗ್ರಹಿಸಬಹುದೇ? 

ಮಕ್ಕಳಲ್ಲಿ  ಪರಿಣಾಮಕಾರಿ ಮನರಂಜನಾ ಚಟುವಟಿಕೆ ಮತ್ತು ವ್ಯಾಯಾಮದ ರೂಪದಲ್ಲಿ ಈಜಾಟ ದುಪ್ಪಟ್ಟು ಲಾಭದಾಯಕವಾಗಿರುವುದರಿಂದ ಅಸ್ತಮಾ ನಿಗ್ರಹಿಸುವಲ್ಲಿ ಪ್ರಯೋಜಕಾರಿ ಎಂದು ಸಾಬೀತಾಗಿದೆ 
ಚಿಕ್ಕ ವಯಸ್ಸಿನಲ್ಲಿಯೇ ಅಸ್ತಮಾವನ್ನು ಈಜಿ ಬಂದವರು ಸುಧೀರ್ ಅಕ್ಕಿಸೆಟ್ಟಿ
ಫೋಟೋ: ಅನಂತ ಸುಬ್ರಮಣ್ಯಂ ಕೆ / ಹ್ಯಾಪಿಯೆಸ್ಟ್ ಹೆಲ್ತ್

ಸುಧೀರ್ ಅಕ್ಕಿಸೆಟ್ಟಿ ಆಕಸ್ಮಿಕವಾಗಿ ಈಜು ಕಲಿತರು. ಬಾಲ್ಯದಲ್ಲಿ, ಸುಧೀರ್ ಅಸ್ತಮಾ ಪೀಡಿತರಾಗಿದ್ದರು. ವೈದ್ಯರು ಹಲವಾರು ಚಿಕಿತ್ಸೆಗಳನ್ನು ಸೂಚಿಸಿದರು, ಆದರೆ ಯಾವುದೂ ಅವರ ಉಸಿರಾಟದ ತೊಂದರೆಗೆ ಶಾಶ್ವತ ಪರಿಹಾರ ನೀಡಲಿಲ್ಲ. ಈಜು ಕಲಿಯುವಂತೆ ಅವರ ವೈದ್ಯರು ಶಿಫಾರಸು ಮಾಡಿದರು. “ಇದು ಅವರಿಗೆ ವರವಾಗಿ ಪರಿಣಮಿಸಿತುಎಂದು ಬೆಂಗಳೂರಿನ 45 ವರ್ಷ ವಯೋಮಾನದ ಅವರು ಹೇಳುತ್ತಾರೆ. 

ಆರಂಭದಲ್ಲಿ, ನಾನು ವಾರಾಂತ್ಯದಲ್ಲಿ ಮಾತ್ರ ಈಜುತ್ತಿದ್ದೆ. ಕಿಕ್ಕಿರಿದ ಪೂಲ್ ನಿಂದಾಗಿ ಗಂಭೀರ ಕಲಿಕೆಗೆ ಅವಕಾಶ ಸಿಗುತ್ತಿರಲಿಲ್ಲವಾದ್ದರಿಂದ ಇದು ಹೆಚ್ಚಾಗಿ ಮೋಜಿನ ಸಮಯವನ್ನು ಕಳೆಯುವುದಕ್ಕೆ ಸೀಮಿತವಾಗಿತ್ತು. ಸಾಂದರ್ಭಿಕವಾಗಿ ಈಜುವುದಕ್ಕೆ ಸಮಯ ಮೀಸಲಿಡುವುದು ಯಾವುದೇ ಫಲಿತಾಂಶಗಳನ್ನು ನೀಡದಿದ್ದಾಗ, ಅವರು ವೃತ್ತಿಪರ ತರಬೇತಿ ಪಡೆಯಲು ಪ್ರಾರಂಭಿಸಿದರು ಮತ್ತು ಅಸ್ತಮಾದ ತೊಂದರೆ  ತಗ್ಗುತ್ತಿರುವುದನ್ನು ಕಂಡರು. 

ವೃತ್ತಿಪರ ಈಜಾಟದತ್ತ ಗಮನ  

ನನ್ನ ತಂದೆ ಕೂಡ, ಒಬ್ಬ ಈಜುಗಾರರು, ವೃತ್ತಿಪರ ಈಜುಗಾರಿಕೆಯನ್ನು ಅಳವಡಿಸಿಕೊಳ್ಳುವ ಶಕ್ತಿ ನನ್ನಲ್ಲಿದೆ ಎಂದು ಅವರೇ ಗುರುತಿಸಿದರುಎಂದು ಸುಧೀರ್ ಹೇಳುತ್ತಾರೆ. ವೃತ್ತಿಪರ ಈಜುಗಾರಿಕೆಯಲ್ಲಿ ಪದವಿ ಪಡೆದ ನಂತರ, ಅವರು ಪ್ರತಿದಿನ ಪೂಲ್‌ನಲ್ಲಿ ಎಂಟು ಗಂಟೆಗಳ ಕಾಲ ತರಬೇತಿ ಪಡೆಯುತ್ತಿದ್ದರು. ಆರಂಭದಲ್ಲಿ, ನನ್ನ ಅಸ್ತಮಾ ಉಲ್ಬಣಗೊಳ್ಳಲಾರಂಭಿಸಿತು, ನನಗೆ ಉಬ್ಬಸ ಬಂದು ಹೆಚ್ಚು ಕಾಲ ಈಜಲು ಸಾಧ್ಯವಾಗುತ್ತಿರಲಿಲ್ಲ. ಒಂದು ವರ್ಷಕ್ಕೂಹೆಚ್ಚು ಕಾಲ ಸತತವಾಗಿ ತರಬೇತಿ ಪಡೆದ ನಂತರ, ಕ್ರಮೇಣ ನನ್ನ ಶ್ವಾಸಕೋಶದ ಸಾಮರ್ಥ್ಯ ಸುಧಾರಿಸುವುದನ್ನು ನಾನು ಮನಗಂಡೆಎಂದು ಅವರು ಹೇಳುತ್ತಾರೆ. 

ಸುಧೀರ್ ಅವರ ಸಾಮರ್ಥ್ಯ ವ್ಯಾಪಕವಾಗಿ ಗುರುತಿಸಲ್ಪಟ್ಟಿತು. ಅವರು ಹಲವಾರು ಈಜು ಸ್ಪರ್ಧೆಗಳನ್ನು ಗೆಲ್ಲಲು ಪ್ರಾರಂಭಿಸಿದರು. ಅವರು 18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ ಮತ್ತು ಏಷ್ಯಾಪೆಸಿಫಿಕ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.  ನಿರಂತರ ಅಭ್ಯಾಸ ಮತ್ತು ಸರಿಯಾದ ಮಾರ್ಗದರ್ಶನಕ್ಕೆ ನಿಮ್ಮನ್ನು ಒಡ್ಡಿಕೊಳ್ಳುವುದು ಮುಖ್ಯವಾಗಿದೆಎಂದು ಸುಧೀರ್ ಹೇಳುತ್ತಾರೆ. 

ಪ್ರಸ್ತುತ ಸುಧೀರ್ 70 ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ ಮತ್ತು ಅವರ ಕಲಿಕೆ ಹಾಗೂ ಅವರಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟ ಈಜುಗಾರಿಕೆ ವೃತ್ತಿ ಜೀವನದಲ್ಲಿ ಪಡೆದ ಅನುಭವಗಳನ್ನು ಮುಂದಿನ ಪೀಳಿಗೆಗೆ ರವಾನಿಸುತ್ತಿದ್ದಾರೆ. 

ಈಜು ಮಕ್ಕಳಲ್ಲಿ ಅಸ್ತಮಾ ಕಡಿಮೆ ಆಗುವಂತೆ ಮಾಡುತ್ತದೆಯೇ? 

ಅಸ್ತಮಾ ಹೊಂದಿರುವವರಿಗೆ ಈಜು ಇತರ ರೀತಿಯ ದೈಹಿಕ ಚಟುವಟಿಕೆಗಿಂತ ಮಿಗಿಲಾದದ್ದು ಈಜಾಟ ಮಕ್ಕಳಲ್ಲಿ ಅಸ್ತಮಾ ರೋಗಲಕ್ಷಣಗಳು ಕಡಿಮೆಯಾಗಲು ಸಹಾಯ ಮಾಡುತ್ತದೆ ಎಂದು ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ಚೆಸ್ಟ್ ಫೀಸಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ಸುಲೈಮಾನ್ ಲಧಾನಿ ಅವರು ಹೇಳುತ್ತಾರೆ 

ಅಸ್ತಮಾ ಪ್ರಚೋದಿಸಬಹುದಾದ ತಂಪಾದ ಶುಷ್ಕ ವಾತಾವರಣದಲ್ಲಿ ವ್ಯಾಯಾಮ ಮಾಡುವುದಕ್ಕೆ ಹೋಲಿಸಿದರೆ ಈಜುಕೊಳದಲ್ಲಿನ ಬೆಚ್ಚಗಿನ ಮತ್ತು ಆರ್ದ್ರ ವಾತಾವರಣವು ವಾಯು ಮಾರ್ಗಗಳು ತೆರೆದಿಡಲು ಸಹಾಯಮಾಡುತ್ತದೆ, ಉಸಿರಾಟವನ್ನು ಹೆಚ್ಚಿಸುತ್ತದೆಎಂದು ಡಾಲಧಾನಿ ಹೇಳುತ್ತಾರೆ. ಒತ್ತಡ ಮತ್ತು ಆತಂಕದಂತಹ ಮಾನಸಿಕ ಅಸ್ವಸ್ಥತೆಯ ಅಂಶಗಳು ಕೂಡಾ ಅಸ್ತಮಾ ರೋಗಲಕ್ಷಣಗಳನ್ನು ಪ್ರಚೋದಿಸಬಹುದು. ಈಜು ಅಂತಹ ಪ್ರಚೋದಕಗಳನ್ನು ನಿಯಂತ್ರಿಸಿ ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸುತ್ತದೆಎಂದು ಕೂಡ ಅವರು ಹೇಳುತ್ತಾರೆ. 

ಇತರ ಹೊರಾಂಗಣ ವ್ಯಾಯಾಮಗಳಿಗೆ ಹೋಲಿಸಿದರೆ ಈಜುಗಾರಿಕೆಯಲ್ಲಿ ಪರಾಗ ಮತ್ತು ಒಣ ಹುಲ್ಲಿನಂತಹ ಅಲರ್ಜೆನ್ ಗಳಿಗೆ ಒಡ್ಡಿಕೊಳ್ಳುವುದು ಕಡಿಮೆಎಂದು ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯ ಮಕ್ಕಳ ತಜ್ಞರ ವಿಭಾಗದ ಸಹಾಯಕ ಸಲಹೆಗಾರ ಡಾ.ಹರಿದರ್ಶನ್ ಜಿಜೆ ಹೇಳುತ್ತಾರೆ. 

ಈಜು ಕೊಳಗಳನ್ನು ಸೋಂಕುರಹಿತಗೊಳಿಸಲು ಬಳಸುವ ಕ್ಲೋರಿನ್ ಬಗ್ಗೆ ಡಾ. ಲದಾನಿ ಎಚ್ಚರಿಕೆ ವಹಿಸುವಂತೆ ಹೇಳುತ್ತಾರೆ. “ಈಜುಕೊಳಗಳಲ್ಲಿ ಬಳಸುವ ಕ್ಲೋರಿನ್ ಮತ್ತು ಇತರ ರಾಸಾಯನಿಕಗಳು ಬೆವರು ಮತ್ತು ಮೂತ್ರದೊಂದಿಗೆ ಸೇರಿಕೊಂಡು ರಾಸಾಯನಿಕ ಪ್ರತಿಕ್ರಿಯೆಗಳನ್ನು ಉಂಟು ಮಾಡುತ್ತವೆ, ಇದು ವಾಯುಮಾರ್ಗಗಳನ್ನು ಕೆರಳಿಸುವ ಅನಿಲಗಳನ್ನು ಹೊರಸೂಸಿ, ಆಸ್ತಮಾ ಪ್ರಚೋದಿಸುತ್ತವೆಎಂದು ಅವರು ಹೇಳುತ್ತಾರೆ. 

ಅಸ್ತಮಾ ಶ್ವಾಸಕೋಶದ ಸಾಮರ್ಥ್ಯವನ್ನು ವೃದ್ಧಿಸುತ್ತದೆ  

ಈಜುಗಾರರು ಮತ್ತು ಓಟಗಾರರಲ್ಲಿ ಶ್ವಾಸಕೋಶದ ಕಾರ್ಯಗಳ ಬಗ್ಗೆ ನಡೆಸಲಾದ 2012 ತುಲನಾತ್ಮಕ ಅಧ್ಯಯನವು ಓಟಗಾರರಿಗಿಂತ ಈಜುಗಾರರಲ್ಲಿ ಹೆಚ್ಚಿನ ಶ್ವಾಸಕೋಶದ ಸಾಮರ್ಥ್ಯವಿರುವುದಾಗಿ ತೋರಿಸಿದೆ. ಈಜುವಾಗ, ನಿಮ್ಮ ಹೃದಯಬಡಿತ ಹೆಚ್ಚಾಗುತ್ತದೆ ಮತ್ತು ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ವೃದ್ಧಿಸುವ ಮೂಲಕ ನೀವು ವೇಗವಾಗಿ ಉಸಿರಾಡುತ್ತೀರಿ,” ಎಂದು ಮಾಹಿಮ್ ನಲ್ಲಿರುವ ಫೋರ್ಟಿಸ್ ಪಾಲುದಾರ ಆಸ್ಪತ್ರೆಯಾದ ಎಸ್ ಎಲ್ ರಹೇಜಾ ಆಸ್ಪತ್ರೆಯ ಪಲ್ಮನಾಲಜಿ ವಿಭಾಗದ ಸಲಹೆಗಾರ ಡಾಕ್ಟರ್ ಸಾರ್ಥಕ್ ರಸ್ತೋಗಿ ಹೇಳುತ್ತಾರೆ 

ಹೃದಯ ರಕ್ತನಾಳದ ಆರೋಗ್ಯ ಮತ್ತು ಸಾಮರ್ಥ್ಯ ಸುಧಾರಣೆ ಜೊತೆಗೆ ನೀವು ಉಸಿರಾಟದ ಮೇಲೆ  ಉತ್ತಮ ನಿಯಂತ್ರಣವನ್ನು ಸಹ ಪಡೆಯುತ್ತೀರಿಎಂದು ಡಾ.ರಸ್ತೋಗಿ ಹೇಳುತ್ತಾರೆ. ಮನರಂಜನೆಗಾಗಿ ಈಜುವುದು ರೋಗಲಕ್ಷಣಗಳನ್ನು ಇನ್ನಷ್ಟು ಉಲ್ಬಣಿಸಬಹುದು. “ದೀರ್ಘಾವಧಿಯ ಈಜು ಕ್ರಮೇಣ ನಿಮ್ಮ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆಎಂದು ಡಾ ಹರಿದರ್ಶನ್ ಹೇಳುತ್ತಾರೆ. 

ಬೇಗ ಪ್ರಾರಂಭಿಸುವುದರ ಪ್ರಯೋಜನಗಳು 

ಬಾಲ್ಯದಲ್ಲಿ ಹೊಸ ಕೌಶಲ್ಯವನ್ನು  ರೂಢಿಸಿಕೊಳ್ಳುವ ಸಾಮರ್ಥ್ಯ ಹೆಚ್ಚಾಗಿರುತ್ತದೆ ಮತ್ತು ಸುಲಭ ಸಾಧ್ಯವಾಗಿರುತ್ತದೆಆದ್ದರಿಂದ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್‌ನ ಕಾರ್ಯದರ್ಶಿ ಸತೀಶ್ ಕುಮಾರ್,ಬಾಲ್ಯದಲ್ಲಿ ಈಜು ಕಲಿಯುವುದನ್ನು ಶಿಫಾರಸು ಮಾಡುತ್ತಾರೆ. ಏಕೆಂದರೆ ಮೆದುಳು ಆಗ ಇನ್ನೂ ಅಭಿವೃದ್ಧಿ ಹೊಂದುತ್ತಿರುತ್ತದೆ ಮತ್ತು ಹೊಸ ಮಾಹಿತಿಯನ್ನು ಗ್ರಹಿಸಿಕೊಳ್ಳುವ ಹೆಚ್ಚೆಚ್ಚು  ಸಾಮರ್ಥ್ಯ ಹೊಂದಿರುತ್ತದೆ. ನಿರರ್ಗಳತೆ ಮತ್ತು ಲಯವನ್ನು ವಯಸ್ಕರಿಗಿಂತ ಮಕ್ಕಳು ಉತ್ತಮವಾಗಿ ಕರಗತ ಮಾಡಿಕೊಳ್ಳಬಲ್ಲರುಎಂದು ಅವರು ಸೂಚಿಸುತ್ತಾರೆ. 

ಈಜಾಟ ಪ್ರಾರಂಭಿಸಲು ಸೂಕ್ತವಾದ ವಯಸ್ಸಿನ ಮೇಲೆ ಬೆಳಕು ಚೆಲ್ಲುವ ಅವರು, “ಮಗುವಿಗೆ ಆರು ತಿಂಗಳ ವಯಸ್ಸಿನಲ್ಲೇ ಪ್ರಾರಂಭಿಸಬಹುದು, ಕನಿಷ್ಠ 5-6 ವರ್ಷಗಳವರೆಗೆ ತರಗತಿಗಳನ್ನು ಪ್ರಾರಂಭಿಸುವುದು ಪ್ರಯೋಜನಕಾರಿ ಮತ್ತು ಪ್ರೌಢಾವಸ್ಥೆಯಲ್ಲಿ ಉತ್ತಮ ಆರೋಗ್ಯ ಹೊಂದಲು ಸಹಾಯ ಮಾಡುತ್ತದೆಎನ್ನುತ್ತಾರೆ ವಯಸ್ಸಾದಂತೆ, ನೀರಿನ ಭಯವನ್ನು ಹುಟ್ಟಿಕೊಳ್ಳುವ ಸಾಧ್ಯತೆಗಳಿವೆ. ಅಂತಹ ಭಯ ಪ್ರಾರಂಭವಾಗುವ ಮೊದಲು ಈಜು ಕಲಿಯುವುದು ಉತ್ತಮ ಕಲಿಕೆಗೆ ಸಹಾಯ ಮಾಡುತ್ತದೆ ಮತ್ತು ಭವಿಷ್ಯದಲ್ಲಿ ಭೀತಿ ಹುಟ್ಟಿಕೊಳ್ಳುವುದಂತೆ ತಡೆಯುತ್ತದೆಎಂದು ಡಾ ಲಧಾನಿ ಹೇಳುತ್ತಾರೆ. 

ಅಸ್ತಮಾವುಳ್ಳವರಿಗೆ ಈಜುಗಾರಿಕೆ ಬಗ್ಗೆ ಮುನ್ನೆಚ್ಚರಿಕೆಗಳು 

ಈಜುಗಾರಿಕೆ ಅಸ್ತಮಾ ರೋಗ ಲಕ್ಷಣಗಳಿಗೆ ಸಹಾಯ ಮಾಡುತ್ತದೆ, ಆದರೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದಾಗಿದೆ. 

ಡಾ.ರಸ್ತೋಗಿ ಈಜಲು ಹೋಗುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನುಪಟ್ಟಿಮಾಡಿದ್ದಾರೆ. 

 • ನಿಮ್ಮ ಮಗುವು ಅಸ್ತಮಾ ಲಕ್ಷಣಗಳನ್ನು ಹೊಂದಿದ್ದರೆ ಈಜಲು ಬಿಡಬೇಡಿ. ನಿಮ್ಮ ಮಗುವಿನ ಅಸ್ತಮಾ ಲಕ್ಷಣಗಳು ತಪಾಸಣೆಯಲ್ಲಿದ್ದರೆ ಮಾತ್ರ ಈಜು ಕೊಳ ಪ್ರವೇಶಿಸಿ.
 • ವ್ಯಾಯಾಮದಿಂದ ಪ್ರಚೋದನೆಗೊಳಗಾಗುವ ಅಸ್ತಮಾದಿಂದ ಪಾರಾಗಲು ಸೂಚಿಸಲಾದ ಔಷಧಿಗಳು ಮತ್ತು ಇನ್ಹೇಲರ್ ಗಳನ್ನುನಿಯಮಿತವಾಗಿ ತೆಗೆದುಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ
 • ಅಸ್ತಮಾ ರೋಗ ಲಕ್ಷಣಗಳನ್ನು ಉಲ್ಬಣಗೊಳಿಸುವಂತಹ ಕ್ಲೋರಿನ್ ಮತ್ತು ಇತರ ರಾಸಾಯನಿಕಗಳ ಹಾನಿಯನ್ನು ತಪ್ಪಿಸಲು ಸ್ಥಳವು ಚೆನ್ನಾಗಿ ಗಾಳಿಯಾಡುವಂತಿದೆ ಎಂದು ಖಚಿತಪಡಿಸಿಕೊಳ್ಳಿ.
 • ಈಜು ಕೊಳದ ನೀರಿನಲ್ಲಿ ಬಳಸುವ ರಾಸಾಯನಿಕಗಳಲ್ಲಿ ಅಸಮತೋಲನವಾಗದಂತೆ ಖಚಿತಪಡಿಸಿಕೊಳ್ಳಿ.
 • ಸುರಕ್ಷತೆಗಾಗಿ ಇನ್ಹೇಲರ್ ಅನ್ನುಕೈಗೆಟುಕುವಂತೆ ಇಡಿ ಮತ್ತು ಈಜುವ ಮೊದಲು ಅದನ್ನು ಬಳಸಿ.
 • ಈಜುವ ಮೊದಲು ವಾರ್ಮ ಅಪ್ ಮತ್ತು ಈಜಿನ ನಂತರ ದೇಹ ಸಹಜ ತಾಪಮಾನಕ್ಕೆ ಬರುವಂತೆ ನೋಡಿಕೊಳ್ಳಿ.
 • ಈಜುವ ಮೊದಲು ಸ್ನಾನ ಮಾಡಿ.

ಸಾರಾಂಶ   

 • ಈಜುಕೊಳಗಳ ಬೆಚ್ಚಗಿನ ಮತ್ತು ಆರ್ದ್ರ ವಾತಾವರಣವು ಅಸ್ತಮಾ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
 • ನೀರಿನಲ್ಲಿರುವ ಕ್ಲೋರಿನ್ ಅಸಮತೋಲನವು ಅಸ್ತಮಾವನ್ನು ಪ್ರಚೋದಿಸುವ ಅನಿಲಗಳನ್ನು ಹೊರಸೂಸುತ್ತದೆ.
 • ಬಾಲ್ಯದಲ್ಲಿ ಈಜುವುದನ್ನು ಕಲಿಯುವುದು ಪ್ರೌಢಾವಸ್ಥೆಯಲ್ಲಿ ಕಲಿಯುವುದಕ್ಕೆ ಹೋಲಿಸಿದರೆ ವೇಗವಾಗಿರುತ್ತದೆ ಮತ್ತು ಸುಲಭವಾಗಿರುತ್ತದೆ.
 • ಅಸ್ತಮಾ ರೋಗ ಲಕ್ಷಣಗಳನ್ನು ಹೊಂದಿರುವಾಗ ಈಜಲು ಹೋಗಬೇಡಿ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

one × four =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ