0

0

0

ಈ ಲೇಖನದಲ್ಲಿ

ಹುಡುಗಿಯರ ಪ್ರೌಢಾವಸ್ಥೆ, ಮಾತುಕತೆ ಇರಲಿ  
477

ಹುಡುಗಿಯರ ಪ್ರೌಢಾವಸ್ಥೆ, ಮಾತುಕತೆ ಇರಲಿ  

ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಹುಡುಗಿಯರ ಪ್ರೌಢಾವಸ್ಥೆ, ಮಾತುಕತೆ ಇರಲಿ  
ನಿಮ್ಮ ಮಗಳನ್ನು ಪ್ರೌಢಾವಸ್ಥೆಗೆ ತಯಾರು ಮಾಡಿ

ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ವಾಹನ ಚಲಾಯಿಸಲು ಕಲಿಸುವುದು ಅಥವಾ ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸಲು ಅವರನ್ನು ಸಿದ್ಧಪಡಿಸುವುದು ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸುತ್ತಾರೆ. ಆದರೆ ಅವರು ತಮ್ಮ ಹೆಣ್ಣು ಮಕ್ಕಳನ್ನು ಪ್ರೌಢಾವಸ್ಥೆಗೆ ಸಿದ್ಧಪಡಿಸುವಲ್ಲಿ ಅದೇ ಮಟ್ಟದ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. 

 “ಜೀವನದಲ್ಲಿ ಇದೊಂದು ನೈಸರ್ಗಿಕ ಕ್ರಿಯೆಯಾದರೂ ಅದಕ್ಕೆ ತಯಾರಾಗಲು ಯಾರು ನಿಮಗೆ ಸಹಾಯ ಮಾಡುತ್ತಾರೆ ಎಂಬುದು ಮುಖ್ಯ. ಆ ವಯೋಮಾನದಲ್ಲಿ ಏನನ್ನು ಮತ್ತು ಹೇಗೆ ನಿರೀಕ್ಷಿಸಬಹುದು ಎಂದು ತಿಳಿದಿಲ್ಲದಿದ್ದಾಗ ಅವರಿಗೆ ಆತಂಕವಿರುತ್ತದೆ”ಎಂದು ಯುಎಸ್ಎಯ ಕಾರ್ಟ್‌ಲ್ಯಾಂಡ್‌ನ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಲೋರಿ ಎ ರೀಚೆಲ್ ಹೇಳುತ್ತಾರೆ. 

ರಿಚೆಲ್ ಅವರು ಶಾಲೆಯ ಮಾಜಿ ಆರೋಗ್ಯ ಶಿಕ್ಷಕಿ ಮತ್ತು ‘ಕಾಮನ್ ಕ್ವೆಶ್ಚನ್ಸ್ ಚಿಲ್ಡ್ರನ್ ಆಸ್ಕ್ ಅಬೌಟ್ ಪ್ಯುಬರ್ಟಿ’ ಪುಸ್ತಕದ ಲೇಖಕರಾಗಿದ್ದಾರೆ. ಪ್ರೌಢಾವಸ್ಥೆಯಲ್ಲಿ ಸಂಭವಿಸುವ ಬದಲಾವಣೆಗಳ ಕುರಿತು ಪೋಷಕರು ತಮ್ಮ ಮಕ್ಕಳೊಂದಿಗೆ ಹೇಗೆ ಮಾತನಾಡಬಹುದು ಎಂಬುದರ ಕುರಿತು ಅವರು ತಮ್ಮ ಪಾಡ್‌ಕ್ಯಾಸ್ಟ್ ಮತ್ತು YouTube ಚಾನಲ್‌ನಲ್ಲಿ ಪರಿಕರಗಳು, ಸಲಹೆಗಳು ಮತ್ತು ಸಂಪನ್ಮೂಲಗಳನ್ನು ಹಂಚಿಕೊಂಡಿದ್ದಾರೆ. ಪ್ರೌಢಶಾಲಾ ಹುಡುಗಿಯರು ತಯಾರಾಗಲು ಇಷ್ಟಪಡುತ್ತಾರೆ ಎಂದು ಅವರು ಹೇಳುತ್ತಾರೆ. “ಏನಾಗುತ್ತದೆ ಎನ್ನುವುದು ಅವರಿಗೆ ತಿಳಿದಾಗ ಅವರು ಹೆಚ್ಚು ಸಿದ್ಧರಾಗುತ್ತಾರೆ. ಋತುಚಕ್ರದ ಸಮಯದಲ್ಲಿ ಋತುಸ್ತ್ರಾವ ಎದುರಿಸುವುದು ಮತ್ತು ಮುಟ್ಟಿನ ನೈರ್ಮಲ್ಯ ಉತ್ಪನ್ನಗಳನ್ನು ಬಳಸುವುದನ್ನು ತಿಳಿಹೇಳುವುದು ಸಹಾಯಕ ” ಎನ್ನುವುದು ಅವರ ಅಭಿಪ್ರಾಯ.  

  ಪ್ರೌಢಾವಸ್ಥೆಯಲ್ಲಿ ಮಾತು: ಒಂದು ಅವಶ್ಯಕತೆ 

ನವ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ಸಲಹೆಗಾರ ಮನಶ್ಶಾಸ್ತ್ರಜ್ಞರಾದ ಡಾ ರೋಮಾ ಕುಮಾರ್, ಪ್ರೌಢಾವಸ್ಥೆಯಲ್ಲಿ ದೇಹವು ಹಲವಾರು ಹಾರ್ಮೋನ್ ಬದಲಾವಣೆಗಳಿಗೆ ಒಳಗಾಗುತ್ತದೆ ಎಂದು ಹೇಳುತ್ತಾರೆ. ಇದು ಗೊಂದಲಮಯ ಮತ್ತು ಒತ್ತಡದ ಸಮಯವಾಗಿರಬಹುದು. ಕೆಲವೊಮ್ಮೆ ಹುಡುಗಿಯರು ಬದಲಾವಣೆಗಳ ಬಗ್ಗೆ ಮಾತನಾಡಲು ಮುಜುಗರಪಡುತ್ತಾರೆ ಏಕೆಂದರೆ ಅದು ಅಸ್ವಾಭಾವಿಕ ಎಂದು ಅವರು ಭಾವಿಸುತ್ತಾರೆ ಮತ್ತು ಅವರು ಮಾತ್ರ ಅದನ್ನು ಅನುಭವಿಸುತ್ತಿದ್ದಾರೆ ಎಂದುಕೊಳ್ಳುತ್ತಾರೆ.  

 ತಾಯಂದಿರಿಗೆ ಪ್ರೌಢಾವಸ್ಥೆಯ ಬಗ್ಗೆ ಸಾಕಷ್ಟು ಜ್ಞಾನವಿಲ್ಲದಿದ್ದರೆ, ಅವರ ಹೆಣ್ಣುಮಕ್ಕಳೊಂದಿಗೆ ಅದರ ಬಗ್ಗೆ ಸಂಭಾಷಣೆ ನಡೆಸುವುದು ಸವಾಲಿನ ಸಂಗತಿಯಾಗಿದೆ ಎಂದು ಅವರು ಹೇಳುತ್ತಾರೆ. ಪ್ರೌಢಾವಸ್ಥೆಯ ಬಗ್ಗೆ ನಿಮ್ಮ ಮಗಳೊಂದಿಗೆ ಮಾತನಾಡುವ ಮೊದಲು ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳುವುದು ಮುಖ್ಯ. ಅವರು ಪ್ರಭಾವಶಾಲಿಗಳು ಎಂಬುದನ್ನು ನೆನಪಿನಲ್ಲಿಡಿ. ಅವರು ನಿಮ್ಮ ಸ್ವಂತ ನಂಬಿಕೆಗಳು ಮತ್ತು ಭಾವನೆಗಳನ್ನು ಪ್ರತಿಬಿಂಬಿಸುತ್ತಾರೆ ”ಎಂದು  ಹೇಳುತ್ತಾರೆ ಡಾ ರೋಮಾ ಕುಮಾರ್ 

  ಪ್ರೌಢಾವಸ್ಥೆಯಲ್ಲಿ ಬದಲಾವಣೆಗಳು 

” ನಿಮ್ಮ ಮಗಳು ಋತುಚಕ್ರ ಶುರುವಾಗುವ ಹಂತದಲ್ಲಿದ್ದಾಳೆ ಎಂದು ನೀವೇ ಯೋಚಿಸುತ್ತಾ ಇರಬೇಡಿ. ಕೆಲವು ಹುಡುಗಿಯರು ರಕ್ತಸ್ರಾವದಿಂದ ಸಾಯುತ್ತೇವೆ ಎಂದು ಭಾವಿಸುತ್ತಾರೆ. ಹುಡುಗಿಯರಿಗೆ ಇದೊಂದು  ನೈಸರ್ಗಿಕ ಪ್ರಕ್ರಿಯೆ ಎಂದು ಯಾರೂ ವಿವರಿಸದಿದ್ದರೆ ಅರ್ಥವಾಗುವುದಾದರೂ ಹೇಗೆ? ನಿಮ್ಮ ಮಗಳಲ್ಲಿ ನೀವು ಬದಲಾವಣೆಗಳನ್ನು ಕಾಣಲು ಪ್ರಾರಂಭಿಸಿದರೆ, ಖಂಡಿತವಾಗಿಯೂ ಮಾತನಾಡಲು ಪ್ರಾರಂಭಿಸಿ”ಎಂದು ರೀಚೆಲ್ ಹೇಳುತ್ತಾರೆ. 

“ಋತುಚಕ್ರ ಪ್ರಾರಂಭವಾಗುವ ಎರಡು ವಾರಗಳ ಮೊದಲು, ಜಾರು ದ್ರವದ ವಿಸರ್ಜನೆ ಇರುತ್ತದೆ. ಇದು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಅಂಡಾಶಯದಿಂದ ಮೊಟ್ಟೆಯು ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಹೆಣ್ಣು ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಪ್ರೌಢಾವಸ್ಥೆಗೆ ಬರುವ ಹುಡುಗಿಯರಲ್ಲಿ ದೈಹಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಮಾನಸಿಕ ಬದಲಾವಣೆಗಳು ಸಂಭವಿಸುತ್ತವೆ ಎಂದು ರೀಚೆಲ್ ಹೇಳುತ್ತಾರೆ. 

 • ದೈಹಿಕ ಬದಲಾವಣೆಗಳು 
 • ತೂಕ ಹೆಚ್ಚುವುದು  
 • ಬೆಳವಣಿಗೆ  
 • ಋತುಚಕ್ರ ಅಥವಾ ಋತುಚಕ್ರದ ಆರಂಭ (ಸಾಮಾನ್ಯವಾಗಿ ಸುಮಾರು 10-13 ವರ್ಷ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ) 
 • ಸ್ತನ ಬೆಳವಣಿಗೆ (ಕೆಲವು ಹುಡುಗಿಯರಿಗೆ ಈ ಸಮಯದಲ್ಲಿ  ಸ್ವಲ್ಪ ನೋವು ಅಥವಾ ಸ್ವಲ್ಪ ತುರಿಕೆಯಾಗಬಹುದು) 
 • ಪ್ಯುಬಿಕ್ ಕೂದಲಿನ ಬೆಳವಣಿಗೆ ಮತ್ತು ಕಪ್ಪಾಗುವುದು 
 • ಕಂಕುಳಿನಲ್ಲಿ ಕೂದಲು 
 • ಮೊಡವೆ ಮತ್ತು ದೇಹದ ವಾಸನೆ. 

  ಡಾ ಕೆ ಜಾನ್ ವಿಜಯ್ ಸಾಗರ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮಕ್ಕಳ ಮತ್ತು ಹದಿಹರೆಯದವರ ಮನೋವೈದ್ಯಶಾಸ್ತ್ರ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ-ಸೈನ್ಸ್ (ನಿಮ್ಹಾನ್ಸ್), ಬೆಂಗಳೂರಿನ ಕೆಲವು ಬದಲಾವಣೆಗಳನ್ನು ಸೂಚಿಸುತ್ತಾರೆ: 

 • ಭಾವನಾತ್ಮಕ ಬದಲಾವಣೆಗಳು 
 • ಮನಸ್ಥಿತಿಯ ಏರು ಪೇರು 
 • ಪ್ರಣಯ ಭಾವನೆಗಳು ಮತ್ತು ದೈಹಿಕ ಆಕರ್ಷಣೆಯ ಅಭಿವೃದ್ಧಿ. 
 • ಸಾಮಾಜಿಕ ಬದಲಾವಣೆಗಳು 
 • ಗೆಳೆಯರ ಒತ್ತಡ ಮತ್ತು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದು  
 • ಚಿಕ್ಕದಾದ ಪೀರ್ ಗುಂಪುಗಳು. 
 • ಬೌದ್ಧಿಕ ಬದಲಾವಣೆಗಳು 
 • ಮಾನಸಿಕ ಪ್ರಬುದ್ಧತೆ 
 • ಪೋಷಕರ ಬೆಂಬಲ ಕಡಿಮೆ ಮಾಡಿಕೊಂಡು ಹೆಚ್ಚು ಸ್ವತಂತ್ರವಾಗಿ  ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗುವುದು  
 • ಸಮಸ್ಯೆ-ಪರಿಹರಿಸುವುದು, ನಿರ್ಧಾರ ತೆಗೆದುಕೊಳ್ಳುವುದು, ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು. 

ಹತ್ತು ವರ್ಷದ ಮಗುವಿನ ತಾಯಿ ಬೆಂಗಳೂರಿನ ಪ್ರಿಯಾಂಕಾ ಜಿ ಅವರು ತಮ್ಮ ಮಗುವಿನೊಂದಿಗೆ ಮಾತನಾಡಲು ಬಯಸುತ್ತೇನೆ ಎಂದು ಹೇಳುತ್ತಾರೆ. “ನನ್ನ ಬಾಲ್ಯದಲ್ಲಿ ಪ್ರೌಢಾವಸ್ಥೆ ಮತ್ತು ಮುಟ್ಟಿನ ಬಗ್ಗೆ ಮಾತನಾಡುವುದನ್ನು ನನ್ನ ಮನೆಯಲ್ಲಿ ನಿಷೇಧಿಸಲಾಗಿತ್ತು. ಆಗ ಆಗುತ್ತಿದ್ದ ಬದಲಾವಣೆಗಳ ಬಗ್ಗೆ ನನಗೆ ಸುಳಿವು ಇರಲಿಲ್ಲ. ಆದ್ದರಿಂದ, ನನ್ನ ಮಗಳ ಮೊದಲ ಅವಧಿಗೆ ತಯಾರಿ ಮಾಡಲು ನಾನು ಅವಳ ಜೊತೆ ಮಾತನಾಡಲು ಬಯಸುತ್ತೇನೆ ಎಂದು ಪ್ರಿಯಾಂಕಾ ಹ್ಯಾಪಿಯೆಸ್ಟ್ ಹೆಲ್ತ್‌ಗೆ ಹೇಳುತ್ತಾರೆ. 

 “ಮಾತು” ಪ್ರಾರಂಭಿಸುವುದು ಹೇಗೆ? 

ಪೋಷಕರು ತಮ್ಮನ್ನು ಕಾಳಜಿಯಿಂದ ಮತ್ತು ಪ್ರೀತಿಯಿಂದ ತೋರಿಸಿದರೆ, ಮಕ್ಕಳು ಸ್ವೀಕರಿಸುತ್ತಾರೆ ಎಂದು ರೀಚೆಲ್ ಹೇಳುತ್ತಾರೆ. ಮಗುವಿನಿಂದ ಹದಿಹರೆಯದವರಾಗಿ ಮತ್ತು ನಂತರ ವಯಸ್ಕರಾಗಿ ಬೆಳೆಯುವ ನೈಸರ್ಗಿಕ ಪ್ರಕ್ರಿಯೆಯ ಕುರಿತು ಪೋಷಕರು ಸಂಭಾಷಣೆಯನ್ನು ಹೊಂದಿರಬೇಕು. ದೈನಂದಿನ ವಿಷಯಗಳನ್ನು ಬಳಸಿಕೊಂಡು ಸಂಭಾಷಣೆಯನ್ನು ಪ್ರಾರಂಭಿಸಬಹುದು. ಒಂದು ಹುಡುಗಿ ಪ್ಯಾಡ್‌ಗಳು, ಟ್ಯಾಂಪೂನ್‌ಗಳು ಅಥವಾ ಮುಟ್ಟಿನ ಕಪ್‌ಗಳಂತಹ ಮುಟ್ಟಿನ ಉತ್ಪನ್ನಗಳನ್ನು ಬಾತ್‌ರೂಮ್‌ನಲ್ಲಿ ಮರೆಮಾಚುವ ಬದಲು ನೋಡಿದರೆ ಸಹಜ ಎನಿಸುತ್ತದೆ.  ಆಗ ಅದರ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು.ಲೈಂಗಿಕ ಸಂತಾನೋತ್ಪತ್ತಿಯ ವಿಷಯ ಬಂದಾಗ, ಸುರಕ್ಷಿತ, ಆರೋಗ್ಯಕರ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಕೂಡ ಅವರಿಗೆ ಅರಿವು ಮೂಡಿಸಬೇಕು ಎಂದು ರೀಚೆಲ್ ತಿಳಿಸುತ್ತಾರೆ.  

  ಸಾರಾಂಶ: 

ಪ್ರೌಢಾವಸ್ಥೆಯಲ್ಲಿ ಹುಡುಗಿಯರು ಅನೇಕ ದೈಹಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಬೌದ್ಧಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ನಿಮ್ಮ ಮಗಳೊಂದಿಗಿನ ಸಂಭಾಷಣೆಗಾಗಿ ಡಾ.ಕುಮಾರ್ ಈ ಕೆಳಗಿನ ಸಲಹೆಗಳನ್ನು ಶಿಫಾರಸು ಮಾಡುತ್ತಾರೆ: 

 • ಮುಕ್ತ, ದ್ವಿಮುಖ, ಲಘುವಾದ ಸಂಭಾಷಣೆಯನ್ನು ಹೊಂದಿರಿ. 
 • ನಿಮಗೆ ಅಹಿತಕರ ಅಥವಾ ವಿಚಿತ್ರವಾದ ಭಾವನೆಯನ್ನು ಉಂಟುಮಾಡುವ ಪ್ರಶ್ನೆಗಳನ್ನು ತಪ್ಪಿಸಬೇಡಿ. 
 • ಇವರಿಗೆ ಪ್ರೌಢಾವಸ್ಥೆಯು ವಿಭಿನ್ನ ಅನುಭವವಾಗಿದೆ ಎಂಬ ಕಲ್ಪನೆಯನ್ನು ಸಾಮಾನ್ಯಗೊಳಿಸಿ 
 • ಸ್ಪೋರ್ಟ್ಸ್ ಬ್ರಾ, ಟ್ಯಾಂಪೂನ್‌ಗಳು ಮತ್ತು ಪ್ಯಾಡ್‌ಗಳು: ನಿಮ್ಮ ಹೆಣ್ಣುಮಕ್ಕಳಿಗೆ ಅಗತ್ಯವಿರುವ ವಸ್ತುಗಳ ಬಗ್ಗೆ ತಿಳಿಸಿ. ಅವುಗಳನ್ನು ಸರಿಯಾಗಿ ಬಳಸುವುದು ಹೇಗೆ ಎಂದು ಕಲಿಸಿ. 
 • ನಿಮ್ಮ ಮಗಳನ್ನು ಮೋಜಿನ ಶಾಪಿಂಗ್ ವಿನೋದಕ್ಕಾಗಿ ಕರೆದುಕೊಂಡು ಹೋಗಿ ಮತ್ತು ಆಕೆಗೆ ಶೀಘ್ರದಲ್ಲೇ ಬೇಕಾಗಬಹುದಾದ ವಸ್ತುಗಳನ್ನು ಸಂಗ್ರಹಿಸಿ. 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ತೃಪ್ತಿಕರವಾದ ನಿಕಟ ಸಂಬಂಧಗಳನ್ನು ಆನಂದಿಸಬೇಕಾದರೆ ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತಜ್ಞರು ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಕಡಿಮೆ-ತಿಳಿದಿರುವ ಸಲಹೆಗಳನ್ನು ನೀಡಿದ್ದಾರೆ.  
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ