0

0

0

ವಿಷಯಗಳಿಗೆ ಹೋಗು

ಮಕ್ಕಳಲ್ಲಿ ಉಗುರು ಕಚ್ಚುವ ಅಭ್ಯಾಸ – ಅದನ್ನು ಎಳವೆಯಲ್ಲೇ ಚಿವುಟಿ ಹಾಕಿ 
1

ಮಕ್ಕಳಲ್ಲಿ ಉಗುರು ಕಚ್ಚುವ ಅಭ್ಯಾಸ – ಅದನ್ನು ಎಳವೆಯಲ್ಲೇ ಚಿವುಟಿ ಹಾಕಿ 

ಮಕ್ಕಳಲ್ಲಿ ಕಂಡು ಬರುವ ಉಗುರು ಕಚ್ಚುವಿಕೆ ಎಂಬ ನಡವಳಿಕೆಯು ನಾವು ಅಂದುಕೊಂಡಷ್ಟು ಉಪದ್ರವಕಾರಿಯಲ್ಲ, ಆದರೆ, ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಈ ಅಭ್ಯಾಸವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು 

 ನಾನು ಯಾವಾಗ ನನ್ನ ಉಗುರುಗಳನ್ನು ಕಚ್ಚುತ್ತೇನೆ ಎಂದು ನನಗೆ ತಿಳಿದಿರುವುದಿಲ್ಲ, ಯಾರಾದರೂ ಅದನ್ನು ಹೇಳಿದಾಗ ಮಾತ್ರ ಅದು ನನಗೆ ಹೊಳೆಯುತ್ತದೆ” ಎಂದು ಬೆಂಗಳೂರಿನ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ 25 ವರ್ಷದ ಶಾರಿಕಾ ಸಂತೋಷ್ ಹೇಳುತ್ತಾರೆ. 

ಮಕ್ಕಳಲ್ಲಿ ಉಗುರು ಕಚ್ಚುವುದು ಸಾಮಾನ್ಯವಾಗಿದೆ ಆದರೆ ಹೆಚ್ಚಿನವರು ಬಾಲ್ಯದ ನಂತರವೂ ಅದನ್ನು ಮುಂದುವರಿಸುತ್ತಾರೆ. ಕೆಲವು ಜನರಲ್ಲಿ, ಇದು ಪ್ರೌಢಾವಸ್ಥೆಯಲ್ಲಿಯೂ ಮುಂದುವರಿಯುತ್ತದೆ. 

ಶಾರಿಕಾಗೆ ಉಗುರು ಕಚ್ಚುವ ಅಭ್ಯಾಸ ಅವರ ಹದಿಹರೆಯದಲ್ಲಿ ಆರಂಭವಾಗಿತ್ತು.  “ನಾನು ನನ್ನ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಬರೆಯುತ್ತಿದ್ದ ಸಮಯ, ಅಂದರೆ ಆಗ ಪರೀಕ್ಷೆಗಳು ಹತ್ತಿರವಾಗುತ್ತಿರುವ ಒತ್ತಡಕ್ಕೆ ಒಳಗಾಗಿ ಉಗುರು ಕಚ್ಚುವ ಅಭ್ಯಾಸ ಹುಟ್ಟಿಕೊಂಡಿತು” ಎಂದು ಅವರು ನೆನಪಿಸಿಕೊಳ್ಳುತ್ತಾರೆ. 

ಮತ್ತೆ  ಸ್ವಲ್ಪ ಸಮಯದಲ್ಲೆ ಶಾರಿಕಾ ಉಗುರು ಕಚ್ಚುವುದನ್ನು ನಿಲ್ಲಿಸಿದರೂ, ಅವರು ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಆ ಅಭ್ಯಾಸ ಮತ್ತೊಮ್ಮೆ ಪ್ರಾರಂಭವಾಯಿತು.  

ನಾನು ಮತ್ತೆ ಉಗುರುಗಳನ್ನು ಕಚ್ಚುತ್ತಿದ್ದೇನೆ, ನಾನು ಒತ್ತಡದಲ್ಲಿದ್ದಾಗ ಇದು ಸಾಮಾನ್ಯವಾಗಿ ಸಂಭವಿಸುತ್ತದೆ” ಎಂದು ಶಾರಿಕಾ ಹೇಳುತ್ತಾರೆ. 

ಉಗುರು ಕಚ್ಚುವುದು ಯಾವಾಗ ಸಮಸ್ಯೆ ಎನಿಸಿಕೊಳ್ಳುತ್ತದೆ? 

ಒಬ್ಬ ವ್ಯಕ್ತಿಯ ಉಗುರು ಕಚ್ಚುವಿಕೆಯ ಅಭ್ಯಾಸವು, ಆತನ ಸಾಮಾಜಿಕ, ಔದ್ಯೋಗಿಕ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸಿದರೆ, ಉಗುರುಗಳಿಗೆ ಹಾನಿಯಾಗಿದ್ದರೆ ಮತ್ತು ವಿಕಾರವಾಗಿದ್ದರೆ ಮತ್ತು ಅಭ್ಯಾಸವನ್ನು ತಡೆಯಲು ಹಲವಾರು ವಿಫಲ ಪ್ರಯತ್ನಗಳು ನಡೆದಿದ್ದರೆ, ಅದು ಸಮಸ್ಯೆಯನ್ನು ಸೂಚಿಸುತ್ತದೆ” ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ಮನಶಾಸ್ತ್ರಜ್ಞ ರೋಮಾ ಕುಮಾರ್ ಹೇಳುತ್ತಾರೆ. ಗೋವಾದ 26 ವರ್ಷದ – ಬ್ಲಾಗರ್ ವೈಭವಿ ಸಾವಂತ್, ಹದಿಹರೆಯದಲ್ಲಿ ತಾನು ಉದ್ದವಾದ ಉಗುರುಗಳಿಗಾಗಿ ಹಂಬಲಿಸುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. 

ನನ್ನ ಉಗುರುಗಳು ಕೆಲವು ಇಂಚುಗಳಷ್ಟು ಬೆಳೆದ ತಕ್ಷಣ, ನಾನು ಅವುಗಳನ್ನು ಅಗಿಯುತ್ತಿದ್ದೆ, ನಾನು ಎಷ್ಟು ಪ್ರಯತ್ನಿಸಿದರೂ ನನ್ನ ಉಗುರುಗಳನ್ನು ಉದ್ದವಾಗಿ ಬೆಳೆಸಲು ನನಗೆ ಸಾಧ್ಯವಾಗಲೇ ಇಲ್ಲ” ಎಂದು ಅವರು ನೆನಪಿಸಿಕೊಳ್ಳುತ್ತಾರೆ.  

ಉಗುರು ಕಚ್ಚುವುದು – ಅದರ ಹಿಂದಿನ ಮನೋವಿಜ್ಞಾನ 

US-ಆಧಾರಿತ ಅಡ್ವೈಸರಿ ಸಂಸ್ಥೆ, TLC ಫೌಂಡೇಶನ್ ಫಾರ್ ಬಾಡಿ-ಫೋಕಸ್ಡ್ ರಿಪಿಟಿಟಿವ್ ಬಿಹೇವಿಯರ್ಸ್  ಪ್ರಕಾರ – ಉಗುರು ಕಚ್ಚುವಿಕೆ (ಅಥವಾ ಒನಿಕೊಫೇಜಿಯಾ) ಸಾಮಾನ್ಯವಾಗಿ ಉಗುರು ಕಚ್ಚುವಿಕೆಯ ಮೊದಲಿನ ಅಥವಾ ಉಗುರು  ಕಚ್ಚುವಾಗಿನ ಪ್ರಯತ್ನವನ್ನು ವಿರೋಧಿಸುವ ಒತ್ತಡ, ಕಚ್ಚುವಿಕೆಯ ನಂತರದ ಸಂತೋಷದ ಭಾವನೆಗಳು, ಉಗುರು ತಿನ್ನುವುದು ಮತ್ತು ಮಾನಸಿಕ ಯಾತನೆ ಇತ್ಯಾದಿಗಳಿಗೆ ಸಂಬಂಧಿಸಿದೆ. ಅನೇಕರು ಈ ನಡವಳಿಕೆಯನ್ನು “ಸ್ವಯಂಚಾಲಿತ” ಎಂದು ವಿವರಿಸುತ್ತಾರೆ. 

“ಕೆಲವರು ಕೇವಲ ಉಗುರುಗಳನ್ನು ಕಚ್ಚಿದರೆ, ಇನ್ನು ಕೆಲವರು ಅವುಗಳನ್ನು ಅಗಿಯುತ್ತಾರೆ ಮತ್ತು ತಿನ್ನುತ್ತಾರೆ, ಜನರು ತಾವು ಕಚ್ಚಿದ ಉಗುರುಗಳನ್ನು ಸಂಗ್ರಹಿಸಿದ ಉದಾಹರಣೆಗಳೂ ಇವೆ” ಎಂದು ಕುಮಾರ್ ಹೇಳುತ್ತಾರೆ. 

ಉಗುರು ಕಚ್ಚುವಿಕೆ ಎಂಬ ಅಭ್ಯಾಸವು ಕೂದಲು ಕೀಳುವುದು, ಚರ್ಮವನ್ನು ಕೀಳುವುದು ಮತ್ತು ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್‌ನಂತಹ ಇತರ ಕಂಪಲ್ಸಿವ್ ನಡವಳಿಕೆಗಳ ಅಭ್ಯಾಸದಂತೆಯೇ ಇರಬಹುದು ಎಂದು ಕುಮಾರ್ ಸೇರಿಸುತ್ತಾರೆ. 

ಉಗುರು ಕಚ್ಚುವುದು – ಕಾರಣವೇನು? 

“ಉಗುರು ಕಚ್ಚುವಿಕೆಗೆ – ಬೇಸರ, ಜೆನೆಟಿಕ್ಸ್, ಗಮನದ ಕೊರತೆ ಹೈಪರ್ ಆಕ್ಟಿವಿಟಿ ಡಿಸಾರ್ಡರ್ (ಎಡಿಎಚ್ಡಿ), ಖಿನ್ನತೆ, ಆತಂಕ, ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ) ನಂತಹ ಮಾನಸಿಕ ಪರಿಸ್ಥಿತಿಗಳಿಂದ ಹಿಡಿದು ಹಲವಾರು ಕಾರಣಗಳು ಇರಬಹುದು” ಎಂದು ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ನವಜಾತ ಶಿಶುಗಳ ತಜ್ಞರು ಮತ್ತು ಮಕ್ಕಳ ತಜ್ಞೆಯಾಗಿರುವ ಡಾ.ಪರಿಮಳಾ ತಿರುಮಲೇಶ್ ಹೇಳುತ್ತಾರೆ. 

ಕುಮಾರ್ ಅವರ ಪ್ರಕಾರ, ಉಗುರು ಕಚ್ಚುವುದು ಒಂದು ಅಭ್ಯಾಸದ ಅಸ್ವಸ್ಥತೆಯಾಗಿದೆ ಮತ್ತು ಇದು ಸಾಮಾನ್ಯವಾಗಿ ಒಂದು ಕಲಿತ ಪ್ರತಿಕ್ರಿಯೆಯಾಗಿದೆ. “ಈ ಅಭ್ಯಾಸವಿರುವ ಪೋಷಕರು, ಒಡಹುಟ್ಟಿದವರು ಮತ್ತು ಗೆಳೆಯರನ್ನು ಅನುಕರಿಸುವ ಮೂಲಕ ಮತ್ತು ಸುತ್ತಲಿನ ಪರಿಸರದ ಪ್ರಭಾವದಿಂದ ಉಗುರು ಕಚ್ಚುವ ಅಭ್ಯಾಸ ಬರಬಹುದು”. “ಕೆಲವೊಮ್ಮೆ, ಜನರು ನಕಾರಾತ್ಮಕ ಭಾವನೆಗಳು, ಆತಂಕ ಮತ್ತು ಒತ್ತಡವನ್ನು ನಿಭಾಯಿಸಲು ಮತ್ತು ತಾತ್ಕಾಲಿಕ ಪರಿಹಾರವನ್ನು ಪಡೆಯಲು ಉಗುರು ಕಚ್ಚುವಿಕೆಯನ್ನು ಆಶ್ರಯಿಸುತ್ತಾರೆ. ಉಗುರು ಕಚ್ಚುವಿಕೆಯಿಂದ ಆಗುವ ಗಾಯಗಳು ಮತ್ತು ಅದರಿಂದಾಗುವ ನೋವು ಸಹ ಅವರ ಮನಸ್ಸನ್ನು ಭಾವನಾತ್ಮಕ ಯಾತನೆಯಿಂದ ದೂರವಿಡಲು ಸಹಾಯ ಮಾಡಬಹುದು” ಎಂದು ಕುಮಾರ್ ಹೇಳುತ್ತಾರೆ. 

 ಉಗುರುಗಳನ್ನು ಕಚ್ಚುವುದರಿಂದ ಉಂಟಾಗುವ ಪರಿಣಾಮಗಳು 

ಉಗುರು ಕಚ್ಚುವುದು ನಿರುಪದ್ರವಿ ಎನಿಸಿದರೂ, ಪದೇ ಪದೇ ಉಗುರು ಕಚ್ಚುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಬಲವಂತದ ಉಗುರು ಕಚ್ಚುವಿಕೆಯ ಕೆಲವು ಪರಿಣಾಮಗಳನ್ನು ಡಾ ತಿರುಮಲೇಶ್ ಹೀಗೆ ಪಟ್ಟಿ ಮಾಡುತ್ತಾರೆ: 

  • ಉಗುರು ದಿಣ್ಣೆಯ ವಿರೂಪಗಳು: ಉಗುರುಗಳು ಬೆರಳ ತುದಿಗಳನ್ನು ಮತ್ತು ಸುತ್ತಮುತ್ತಲಿನ ಅಂಗಾಂಶಗಳನ್ನು ರಕ್ಷಿಸುತ್ತವೆ. ನಿರಂತರ ಉಗುರು ಕಚ್ಚುವಿಕೆಯಿಂದ ಉಗುರಿನ ದಿಣ್ಣೆ ವಿರೂಪಗೊಳ್ಳುತ್ತದೆ, ಉಗುರಿನ ಮೇಲ್ಮೈ ವಿಸ್ತೀರ್ಣ ಕಡಿಮೆಯಾಗುತ್ತದೆ ಮತ್ತು ಉಗುರು ಬೆಳವಣಿಗೆಗೆ ತಡೆಯುಂಟಾಗುತ್ತದೆ.
  • ಸೋಂಕುಗಳು: ಬಾಯಿ ಅನೇಕ ಬ್ಯಾಕ್ಟೀರಿಯಾಗಳಿಗೆ ನೆಲೆಯಾಗಿದೆ. ಬಾಯಿಯಲ್ಲಿರುವ ರೋಗಾಣುಗಳು ಉಗುರುಗಳಿಗೆ ವರ್ಗಾವಣೆಯಾಗಿ, ಇದು ಉಗುರು ದಿಣ್ಣೆಗಳು ಮತ್ತು ಉಗುರುಗಳು ಸುತ್ತಲಿನ ಅಂಗಾಂಶಗಳು ಅಥವಾ ಅಥವಾ ಪರೋನಿಚಿಯಾ ಸೋಂಕನ್ನು ಉಂಟುಮಾಡಬಹುದು. ಮಾತ್ರವಲ್ಲ, ಉಗುರುಗಳಲ್ಲಿರುವ ಬ್ಯಾಕ್ಟೀರಿಯಾ ಬಾಯಿಯನ್ನು ಸೇರಬಹುದು. ಉಗುರು ಕಚ್ಚುವುದು ಕೈಗಳ ನೈರ್ಮಲ್ಯದ ಮೇಲೂ ಪರಿಣಾಮ ಬೀರುತ್ತದೆ.
  • ಗಾಯಗಳು: ನಿರಂತರವಾದ ಉಗುರು ಕಚ್ಚುವಿಕೆಯು ಗಾಯಗಳು, ಉಗುರಿನ ಸುತ್ತ ಊತ, ರಕ್ತಸ್ರಾವ, ಕೆಂಪಾಗುವಿಕೆ ಮತ್ತು ನೋವನ್ನು ಉಂಟುಮಾಡಬಹುದು.
  • ಹಲ್ಲಿನ ಸಮಸ್ಯೆಗಳು: ಉಗುರು ಕಚ್ಚುವಿಕೆಯಿಂದ ಒಸಡು ರೋಗಗಳು, ಹಲ್ಲು ಕೊಳೆಯುವುದು, ಬಿರುಕುಗಳಾಗುವುದು, ದವಡೆಯ ಅಸ್ವಸ್ಥತೆಗಳು, ಉಗುರು ಮತ್ತು ಹಲ್ಲಿನ ನಡುವಿನ ಘರ್ಷಣೆಯಿಂದ ಹಲ್ಲು ಚಿಪ್ಪಿಂಗ್ ಇತ್ಯಾದಿಗಳಿಗೆ ಕಾರಣವಾಗಬಹುದು.

ಉಗುರು ಕಚ್ಚುವಿಕೆಯಿಂದ ಸ್ವಾಭಿಮಾನದ ಮೇಲೆ ಪರಿಣಾಮ: 

“ವಿರೂಪಗೊಂಡ ಉಗುರುಗಳಿಂದ ವ್ಯಕ್ತಿಯು ಮುಜುಗರಕ್ಕೊಳಗಾಗಬಹುದು, ದೇಹದ ಸ್ವರೂಪ ಸಮಸ್ಯೆಗಳು, ಸ್ವಾಭಿಮಾನ ತಗ್ಗುವುದು ಮತ್ತು ಸಾಮಾಜಿಕ ಹಿಂತೆಗೆದುಕೊಳ್ಳುವಿಕೆಗೆ ಕಾರಣವಾಗಬಹುದು” ಎಂದು ಕುಮಾರ್ ಹೇಳುತ್ತಾರೆ. 

ಉಗುರು ಕಚ್ಚುವ  ನಡವಳಿಕೆಗಾಗಿ ಬಾಲ್ಯದಲ್ಲಿನ ತನ್ನ ಹೆತ್ತವರು ತನ್ನನ್ನು ದೂಷಿಸುತ್ತಿದ್ದುದನ್ನು ವೈಭವಿ ನೆನಪಿಸಿಕೊಳ್ಳುತ್ತಾರೆ. 

ಉಗುರು ಕಚ್ಚುವವರು ತಮ್ಮ ನಡವಳಿಕೆಯ ಕಾರಣದ ನಿರಂತರ ಅಸಮ್ಮತಿ ಮತ್ತು ತಮ್ಮ ಮೇಲೆ ನಿಯಂತ್ರಣದ ಕೊರತೆಯ ಕಾರಣಕ್ಕಾಗಿ ಅಪರಾಧಿ ಪ್ರಜ್ಞೆಯಿಂದ ಬಳಲಬಹುದು ಎಂದು ಡಾ ತಿರುಮಲೇಶ್ ಹೇಳುತ್ತಾರೆ. 

ಮಕ್ಕಳಲ್ಲಿ ಉಗುರು ಕಚ್ಚುವುದನ್ನು ನಿಲ್ಲಿಸುವುದು ಹೇಗೆ? 

ಶಾರಿಕಾ ತನ್ನ ಉಗುರುಗಳನ್ನು ಕಚ್ಚದಂತೆ ತಡೆಯಲು ನಿಯಮಿತವಾಗಿ ಉಗುರುಗಳನ್ನು ಕತ್ತರಿಸುತ್ತಾರೆ. ” ಆ ಕ್ರಿಯೆಯಲ್ಲಿ ನನ್ನನ್ನು ನಾನು ಹಿಡಿದಾಗ, ನಾನು ತಕ್ಷಣ ನನ್ನ ಕೈಯನ್ನು ತಡೆಯುತ್ತೇನೆ” ಎಂದು ಅವರು ಹೇಳುತ್ತಾರೆ. 

ಮಕ್ಕಳಿಗೆ ಉಗುರು ಕಚ್ಚುವ ಅಭ್ಯಾಸವನ್ನು ತೊಡೆದುಹಾಕಲು ಸಹಾಯ ಮಾಡುವ ಕೆಲವು ವಿಧಾನಗಳನ್ನು ಡಾ ತಿರುಮಲೇಶ್ ಹೀಗೆ ಪಟ್ಟಿ ಮಾಡಿದ್ದಾರೆ: 

  • ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವ ಮೂಲಕ ಅವರ ಕೈಗಳಿಗೆ ಕೆಲಸ ಕೊಡಿ.
  • ಕಹಿ ರುಚಿಯ ನೇಲ್ ಪಾಲಿಷ್, ಬೇವಿನೆಣ್ಣೆ ಅಥವಾ ಹಾಗಲಕಾಯಿ ರಸವನ್ನು ಹಚ್ಚುವುದರಿಂದ ಉಗುರು ಕಚ್ಚುವ ಬಗ್ಗೆ ಹೇವರಿಕೆ ಉಂಟಾಗುತ್ತದೆ.
  • ಕೃತಕ ಅಥವಾ ಅಕ್ರಿಲಿಕ್ ಉಗುರುಗಳನ್ನು ಪಡೆಯುವುದು.
  • ಪ್ಲೇ ಥೆರಪಿ ಮತ್ತು ಕಾಗ್ನಿಟಿವ್ ಬಿಹೇವಿಯರಲ್ ಥೆರಪಿಯಂತಹ ಮಾನಸಿಕ ಪ್ರಕ್ರಿಯೆಗಳು.
  • ಒತ್ತಡ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕುಮಾರ್ ಶಿಫಾರಸು ಮಾಡುತ್ತಾರೆ.

ಸಾರಾಂಶ: 

ಮಕ್ಕಳಲ್ಲಿ ಉಗುರು ಕಚ್ಚುವುದು ಸಾಮಾನ್ಯವಾಗಿದ್ದರೂ, ಅದರ ನಿರಂತರ ಅಭ್ಯಾಸವು ಕಳವಳಕ್ಕೆ ಕಾರಣವಾಗಬಹುದು ಮತ್ತು ಉಗುರು ಹಾನಿ, ಸೋಂಕುಗಳು ಮತ್ತು ಸ್ವಾಭಿಮಾನದ ಸಮಸ್ಯೆಗಳಿಗೆ ಕಾರಣವಾಗಬಹುದು. ಕಹಿ ನೇಲ್ ಪಾಲಿಷ್ ಅನ್ನು ಹಚ್ಚುವುದು ಮತ್ತು ಈ ಅಭ್ಯಾಸಕ್ಕೆ ಕಾರಣವಾಗಿರುವ ಮಗುವಿನ ಆತಂಕವನ್ನು ಬಗೆಹರಿಸಿಕೊಳ್ಳುವ ಮೂಲಕ ಉಗುರು ಕಚ್ಚುವ ಅಭ್ಯಾಸವನ್ನು ತೊಡೆದುಹಾಕಬಹುದು. 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ