0

0

0

ಈ ಲೇಖನದಲ್ಲಿ

Anger Management: ಮಕ್ಕಳಲ್ಲಿ ಕೋಪವನ್ನು ನಿರ್ವಹಿಸುವುದು ಹೇಗೆ?
71

Anger Management: ಮಕ್ಕಳಲ್ಲಿ ಕೋಪವನ್ನು ನಿರ್ವಹಿಸುವುದು ಹೇಗೆ?

ಮಕ್ಕಳ ಕೋಪದ ಪರಿಣಾಮಗಳನ್ನು ಅವರಿಗೆ ವಿವರಿಸುವುದರಿಂದ ಹಿಡಿದು ಅವರಿಗೆ ಆರೋಗ್ಯಕರ ರೀತಿಯಲ್ಲಿ ಕೋಪವನ್ನು ನಿಭಾಯಿಸುವ ತಂತ್ರಗಳನ್ನು ಕಲಿಸುವುದು ಮತ್ತು ಚಿಕಿತ್ಸೆ ನೀಡುವುದು, ಪೋಷಕರು ತಮ್ಮ ಮಕ್ಕಳ ಕೋಪವನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು.
ಮಕ್ಕಳಲ್ಲಿ ಕೋಪವನ್ನು ನಿರ್ವಹಿಸುವುದು ಹೇಗೆ?
ಚಿತ್ರ: ಅನಂತ ಸುಬ್ರಹ್ಮಣ್ಯಂ ಕೆ

ಮಕ್ಕಳಲ್ಲಿ ಕೋಪ ನಿರ್ವಹಿಸುವುದು ಹೇಗೆ ಎನ್ನುವುದನ್ನು ಈ ಘಟನೆಯ ಮೂಲಕ ತಿಳಿಯೋಣ. ಮುಂಬೈನ 12 ವರ್ಷದ ಬಾಲಕ ಯಾವಾಗಲೂ ತನ್ನ ಹೆತ್ತವರ ಮೇಲೆ ಆಗಾಗ್ಗೆ ಕೋಪಗೊಳ್ಳುವುದಲ್ಲದೇ ನಿಂದಿಸುತ್ತಿದ್ದ. ಫೋನ್ ಮುಟ್ಟದಂತೆ ಪ್ರಯತ್ನಿಸಿಲು, ಅವನ ಗಮನವನ್ನು ಬೇರೆಡೆಗೆ ಸೆಳೆದು ಪುಸ್ತಕಗಳನ್ನು ಓದುವಂತೆ ಮಾಡಿದ ಎಷ್ಟೋ ಪ್ರಯತ್ನಗಳು ವಿಫಲವಾಗಿ ಅವನು ಫೋನ್‌ಗೆ ಅಂಟಿಕೊಂಡಿದ್ದ. ಇದರಿಂದ ವಿಮುಖ ಮಾಡಲು ಪ್ರಯತ್ನಿಸಿದಷ್ಟೂ ಅವನ ಸಿಟ್ಟು ಹೆಚ್ಚಾಗುತ್ತಿತ್ತೇ ವಿನಃ ಬೇರೆ ಪ್ರಯೋಜನವಾಗಲಿಲ್ಲ.  

ಮಕ್ಕಳಲ್ಲಿ ಕೋಪವನ್ನು ನಿಯಂತ್ರಿಸುವುದು ಅನೇಕ ಪೋಷಕರನ್ನು ಕಷ್ಟಕ್ಕೆ ದೂಡುವ ವಿಷಯವಾಗಿದೆ. ಆದರೆ ಎಲ್ಲಾ ಪೋಷಕರಿಗೂ ತಮ್ಮ ಮಗುವಿನ ವಿವಿಧ ಭಾವನೆಗಳನ್ನು ನಿಭಾಯಿಸುವ ವಿಧಾನಗಳು ತಿಳಿದಿರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಮಕ್ಕಳ ಅತ್ಯುತ್ತಮ ಬೆಳವಣಿಗೆಗೆ ಕೋಪ ನಿರ್ವಹಣೆ ಅವರ ಯೋಗಕ್ಷೇಮ ಅತಿಮುಖ್ಯವಾಗಿದೆ. 

COVID-19 ಲಾಕ್‌ಡೌನ್ ನಂತರ ಶಾಲೆಯನ್ನು ಪುನರಾರಂಭಿಸಿದಾಗ ಹೆಚ್ಚುತ್ತಿರುವ ಶೈಕ್ಷಣಿಕ ಬೇಡಿಕೆಗಳು ಮತ್ತು ಪೋಷಕರ ನಿರೀಕ್ಷೆಗಳು ಹುಡುಗನ ಕೋಪದ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸಿತು. “ಅವನನ್ನು ಬೆದರಿಸಲಾಗುತ್ತಿತ್ತು. ಇದರಿಂದ ಅವನ ಕೋಪ ಇನ್ನಷ್ಟು ಉಲ್ಬಣಿಸಿತು” ಎಂದು ಅವನಿಗೆ ಚಿಕಿತ್ಸೆ ನೀಡಿದ ಮುಂಬೈನ ಮಕ್ಕಳ ಮತ್ತು ಮಹಿಳಾ ಮನಶ್ಶಾಸ್ತ್ರಜ್ಞ ಶಚೀ ದಾಲ್ವಿ (ಪಿಎಚ್‌ಡಿ) ಹೇಳುತ್ತಾರೆ. 

ಮಕ್ಕಳಲ್ಲಿ ಕೋಪ ನಿರ್ವಹಣೆ: ಪ್ರಚೋದಕಗಳನ್ನು ಗುರುತಿಸುವುದು 

ಮಕ್ಕಳ ಕೋಪ ನಿರ್ವಹಣೆಯಲ್ಲಿ ಪ್ರಮುಖ ಹಂತವೆಂದರೆ ಅವರ ಕೋಪ ಪ್ರಚೋದಕಗಳನ್ನು ಗುರುತಿಸುವುದು. ಪಾಲಕರು ತಮ್ಮ ಮಕ್ಕಳ ಬೇಡಿಕೆಗಳನ್ನು ಪೂರೈಸದಿದ್ದಾಗ, ಮಕ್ಕಳಿಗೆ ಕೋಪ ಬರುತ್ತದೆ. ಜೊತೆಗೆ, ಸುಳ್ಳು ಹೇಳಿ ಸಿಕ್ಕಿಬಿದ್ದ ನಂತರ ಅವರು ಮೂಲೆಗುಂಪಾಗಿದ್ದಾರೆಂದು ಭಾವಿಸಿದರೆ ಕೋಪಗೊಳ್ಳುತ್ತಾರೆ. ಉದಾಹರಣೆಗೆ, ಅವರು ಸತ್ಯವನ್ನು ಒಪ್ಪಿಕೊಳ್ಳುವ ಬದಲು ಕೋಪವನ್ನು ರಕ್ಷಣಾ ಕಾರ್ಯವಿಧಾನವಾಗಿ ಬಳಸಬಹುದು.. ಇದಲ್ಲದೇ ಮಗುವಿಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಲು ಹೇಳಿದರೆ ಅದೂ ಅವರ ಕೋಪವನ್ನು ಪ್ರಚೋದಿಸುತ್ತದೆ ಎಂದು ದಳವಿ ಹೇಳುತ್ತಾರೆ. 

ಮಕ್ಕಳಲ್ಲಿ ಕೋಪ: ಯಾವಾಗಲೂ ಮಕ್ಕಳದ್ದೇ ತಪ್ಪು ಇರುವುದಿಲ್ಲ  

“ನಮ್ಮ ಮೆದುಳು ಎರಡು ಭಾಗಗಳನ್ನು ಹೊಂದಿದೆ: ಬಲ ಮತ್ತು ಎಡ. ಬಲ ಮೆದುಳು ಭಾವನೆಗಳೊಂದಿಗೆ ಮತ್ತು ಎಡಭಾಗವು ತರ್ಕದೊಂದಿಗೆ ಸಂಬಂಧಿಸಿದೆ. ಬಲಭಾಗವು ಎಡಭಾಗಕ್ಕಿಂತ ವೇಗವಾಗಿ ಬೆಳೆಯುತ್ತದೆ, ಇದು ಮಕ್ಕಳ ಭಾವನೆಗಳು ತಾರ್ಕಿಕವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಮೀರಿಸುತ್ತದೆ, ”ಎಂದು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗಳ ಸಲಹೆಗಾರ ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಡಾ ಸುಮೈರಾ ಕ್ವಾಜಿ ಹೇಳುತ್ತಾರೆ. “ತಾರ್ಕಿಕ ಭಾಗವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಮಯ ಮತ್ತು ಅನುಭವವನ್ನು ತೆಗೆದುಕೊಳ್ಳುತ್ತದೆ. ಪರಿಸ್ಥಿತಿಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ಮಗು ಯಾವಾಗಲೂ ಸಿದ್ಧವಾಗಿರುವುದಿಲ್ಲ.  

ದಾಲ್ವಿ ಅವರ ಪ್ರಕಾರ, ಮಕ್ಕಳು ತಮ್ಮ ಸೀಮಿತ ಶಬ್ದಕೋಶದಿಂದಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದ ಕಾರಣ ಕೋಪಗೊಳ್ಳುತ್ತಾರೆ. ಕೋಪವು ಅವರ ಭಾವನೆಗಳನ್ನು ವ್ಯಕ್ತಪಡಿಸುವ ಸಾಧನವಾಗುತ್ತದೆ. ಮಾತಿನ ವಿಳಂಬ ಹೊಂದಿರುವ ಮಕ್ಕಳು ಕೋಪದ ಸಮಸ್ಯೆಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆಯಿದೆ”. 

ಸಮಸ್ಯೆಗಳಿಗೆ ಕಾರಣವೇನು? 

  ದೀಪಾಲಿ ಬಾತ್ರಾ, ಹಿರಿಯ ಕ್ಲಿನಿಕಲ್ ಮನಶ್ಶಾಸ್ತ್ರಜ್ಞರು ಮತ್ತು ನಿರ್ದೇಶಕರು, ಮಕ್ಕಳು ಮತ್ತು ವಯಸ್ಕರಿಗೆ ಮಾನಸಿಕ-ಶೈಕ್ಷಣಿಕ-ಕಲಿಕೆ ಸೇವೆಗಳು,(Psychological-Academic-Learning Services for Children) ದೆಹಲಿ, ಮಕ್ಕಳಲ್ಲಿ ಕೋಪದ ಸಮಸ್ಯೆಗಳ ಕೆಲವು ಸಾಮಾನ್ಯ ಕಾರಣಗಳನ್ನು ಪಟ್ಟಿಮಾಡಿದ್ದಾರೆ, ಅವುಗಳೆಂದರೆ: 

 • ಆನುವಂಶಿಕ
 • ಮನೋವೈದ್ಯಕೀಯ ಪರಿಸ್ಥಿತಿಗಳು (ಎಡಿಎಚ್‌ಡಿ ಮತ್ತು ಆತಂಕದಂತಹ)
 • ಕೌಟುಂಬಿಕ ಸಮಸ್ಯೆಗಳು 
 • ಮಗು ಹಿಂಸೆ ಅನುಭವಿಸುತ್ತಿದ್ದರೆ  ಅಥವಾ ಇತರರು ಮಗುವಿನ ಎದುರು ಹಿಂಸೆ ಅನುಭವಿಸುತ್ತಿದ್ದರೆ ಆಗುವ ಪ್ರಭಾವ 
 • ಬೆದರಿಸುವಿಕೆ ಮತ್ತು ಪೀರ್ ಗುಂಪಿಗೆ ಸರಿಹೊಂದಿಸುವ ಸಮಸ್ಯೆಗಳು
 • ಕಳಪೆ ನಿದ್ರೆ ವೇಳಾಪಟ್ಟಿ ಮತ್ತು ಹಿಂಸಾತ್ಮಕ ವಿಡಿಯೋ ಗೇಮ್‌ಗಳು
 • ಆಘಾತ ಅಥವಾ ನಿಂದನೆ (ದೈಹಿಕ, ಭಾವನಾತ್ಮಕ ಅಥವಾ ಲೈಂಗಿಕ)

ಯಾವಾಗ ಸಮಸ್ಯೆಯಾಗುತ್ತದೆ? 

ಡಾ ಕ್ವಾಜಿಯವರ ಪ್ರಕಾರ, ವಾರದಲ್ಲಿ ಎಂಟರಿಂದ ಒಂಬತ್ತು ಸಂದರ್ಭಗಳಲ್ಲಿ ಕೋಪೋದ್ರೇಕಗಳು ಸ್ವೀಕಾರಾರ್ಹ. ಆದರೆ ಸಣ್ಣ ಕಾರಣಗಳಿಗಾಗಿ ಆಗಾಗ್ಗೆ ಕೋಪ ಮಾಡಿಕೊಳ್ಳುವುದು,  ತೀವ್ರವಾದ ಪ್ರತಿಕ್ರಿಯೆ ಮತ್ತು  ಅನುಚಿತ ಕೋಪವನ್ನು ಪರಿಹರಿಸಬೇಕು. 

ಎಡಿಎಚ್‌ಡಿಯಂತಹ ಮನೋವೈದ್ಯಕೀಯ ಪರಿಸ್ಥಿತಿ ಹೊಂದಿರುವವರಿಗೆ, ಕೋಪವು ನಿದ್ರಾ ಭಂಗ, ಹಸಿವು ಬದಲಾವಣೆಗಳು, ಏಕಾಗ್ರತೆಯ ಸಮಸ್ಯೆಗಳು ಮತ್ತು ಅವರ ಅತ್ಯುತ್ತಮ ಕಾರ್ಯನಿರ್ವಹಣೆಯಲ್ಲಿನ ಕಡಿತದಂತಹ ರೋಗಲಕ್ಷಣಗಳೊಂದಿಗೆ ಇರುತ್ತದೆ ಎಂದು ಬಾತ್ರಾ ಹೇಳುತ್ತಾರೆ. 

ಮಕ್ಕಳಲ್ಲಿ ಕೋಪ ನಿಯಂತ್ರಿಸುವುದು ಹೇಗೆ?

ಮಕ್ಕಳಲ್ಲಿ ಕೋಪವನ್ನು ಹೇಗೆ ನಿಯಂತ್ರಿಸುವುದು ಎಂಬುದರ ಕುರಿತು ವಿವರಿಸುತ್ತಾ ದಲ್ವಿ, ಮಗುವಿನ ಕೋಪವನ್ನು ಒಪ್ಪಿಕೊಂಡು, ಮನುಷ್ಯರಿಗೆ ಸಹಜವಾಗಿ ನಕಾರಾತ್ಮಕ ಭಾವನೆಗಳು ಇರುತ್ತವೆ ಎಂದು ಅರ್ಥ ಮಾಡಿಸಬೇಕು ಎನ್ನುತ್ತಾರೆ. ಕೋಪಗೊಂಡ ಮಗುವನ್ನು ಸರಿ ದಾರಿಗೆ ತರಲು ನಾಲ್ಕು-ಹಂತದ ತಂತ್ರವನ್ನು ಅವರು ಪಟ್ಟಿ ಮಾಡುತ್ತಾರೆ: 

 • ಮೊದಲನೆಯದಾಗಿ, ಪೋಷಕರು ತಮ್ಮ ಮಗುವಿನ ನಡವಳಿಕೆಯಿಂದಾಗುವ ಪರಿಣಾಮಗಳನ್ನು ಗಮನಿಸಿ ಅದನ್ನು ಅವರಿಗೆ ಪ್ರೀತಿಯಿಂದ ವಿವರಿಸಬೇಕು. ಉದಾಹರಣೆಗೆ, ನಿರ್ದಿಷ್ಟ ಕಾಲಾವಧಿಯವರೆಗೆ ಮಾತನಾಡುವುದಿಲ್ಲ ಎಂದು ಎಚ್ಚರಿಸಿ ಅವರು ಶಾಂತವಾಗಿ ತಮ್ಮ ತಪ್ಪಿಗೆ ಕ್ಷಮೆಯಾಚಿಸುವವರೆಗೆ ಪೋಷಕರಿಬ್ಬರೂ ಮಗುವಿನೊಂದಿಗೆ ಮಾತನಾಡಬಾರದು. 
 • ವಾತ್ಸಲ್ಯ ಮತ್ತು ನಿಷ್ಠುರತೆಯ ಕಟು ಭಾವ ಮಕ್ಕಳಿಗೆ ಅರಿವಿರಲಿ. ಕಟ್ಟುನಿಟ್ಟಾದ ದನಿ ಏರಿಳಿತ ಮತ್ತು ದೇಹ ಭಾಷೆಗೆ ಸೀಮಿತಗೊಳಿಸಿ. ಆದರೆ ಮಗುವಿಗೆ ಹೊಡೆದು ಬಡಿದು ದೌರ್ಜನ್ಯ ಮಾಡಬೇಡಿ. 
 • ಈ ವಿಧಾನ ಕೆಲಸ ಮಾಡದಿದ್ದರೆ, ಪೋಷಕರು ಸಂಪೂರ್ಣವಾಗಿ ಕಠಿಣ ವಿಧಾನವನ್ನು ಅಳವಡಿಸಿಕೊಳ್ಳಬೇಕು.
 • ಕೊನೆಯದಾಗಿ ಅವರು ತಮ್ಮ ಅನುಸರಣೆ ಈ ಫಲಿತಾಂಶಕ್ಕೆ ಕಾರಣವಾಯಿತು ಎಂದು ತಿಳಿಸುವ ಮೂಲಕ ಪೂರ್ವನಿರ್ಧರಿತ ಪರಿಣಾಮದ ಮೇಲೆ ಕಾರ್ಯನಿರ್ವಹಿಸಬೇಕು. ಅವರು ತಮ್ಮ ತಪ್ಪನ್ನು ಅರಿತುಕೊಳ್ಳುವವರೆಗೆ ಮತ್ತು ನಡವಳಿಕೆಯನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡುವವರೆಗೆ ಅವರು ಮಗುವಿನೊಂದಿಗೆ ಮಾತನಾಡಬಾರದು.

“ಮಗುವಿನ ಕ್ಷಮೆ ಕೇಳಿದ ತಕ್ಷಣ ಪೋಷಕರು ಒಪ್ಪಬಾರದು. ಮಕ್ಕಳನ್ನು ಆತ್ಮಾವಲೋಕನ ಮಾಡಿಕೊಳ್ಳಲು ಸಮಯವನ್ನು ನೀಡಿ, ನಂತರ ಅವರು ಬದಲಾದರೆ ದ್ವಿಗುಣವಾಗಿ ಪ್ರೀತಿಯಿಂದ ವರ್ತಿಸಬಹುದು, ”ಎಂದು ದಳವಿ ಹೇಳುತ್ತಾರೆ. ತಕ್ಷಣವೇ ಒಪ್ಪಿಗೆ ನೀಡದಿರುವುದು ಸ್ಪಷ್ಟವಾದ ಗಡಿಯನ್ನು ಅರ್ಥಮಾಡಿಸಲು ಸಹಾಯ ಮಾಡುತ್ತದೆ. 

  ಮಗುವನ್ನು ಶಿಸ್ತುಗೊಳಿಸಲು ಬಳಸುವ ಪದಗಳು ಅಥವಾ ಪದಗುಚ್ಛಗಳ ಬಗ್ಗೆ ಪೋಷಕರು ಜಂಟಿಯಾಗಿ ನಿರ್ಧರಿಸಬೇಕು  (ಉದಾಹರಣೆಗೆ, ‘ಶಾಂತವಾಗಿರಿ, ಶಾಂತವಾಗಿರಿ’). ಅದೇ ನುಡಿಗಟ್ಟುಗಳ ಪುನರಾವರ್ತಿತ ಬಳಕೆ ಮಗುವಿಗೆ ಅರ್ಥವಾಗಲು ಸಹಾಯ ಮಾಡುತ್ತದೆ. ಗೊಂದಲವಿಲ್ಲದ ಸ್ಪಷ್ಟ ಸಂದೇಶವನ್ನು ರವಾನಿಸಿ. “ ಈ ಸಮಯದಲ್ಲಿ ಪೋಷಕರು ಒಂದೇ ರೀತಿ ವರ್ತಿಸಬೇಕು. ಒಬ್ಬ ಪೋಷಕರು ನಿಷ್ಠುರರಾಗಿದ್ದರೆ, ಇನ್ನೊಬ್ಬರು ಪ್ರೀತಿಯಿಂದ ಇರಬಾರದು. ಇಬ್ಬರೂ ಇಂದೇ ರೀತಿಯ ವರ್ತನೆ ಅನುಸರಿಸಬೇಕು” ಎಂದು ದಲ್ವಿ ಹೇಳುತ್ತಾರೆ 

ಆರೋಗ್ಯಕರ ನಿಭಾಯಿಸುವ ತಂತ್ರಗಳನ್ನು ಕಲಿಸುವುದು 

ಡಾ ಕ್ವಾಜಿ ಪ್ರಕಾರ, ಪೋಷಕರು ತಮ್ಮ ಮಗುವಿನ ಕೋಪೋದ್ರೇಕಗಳಿಗೆ ತಾವೂ ಕೋಪದಿಂದ ಪ್ರತಿಕ್ರಿಯಿಸಬಾರದು. “ಪೋಷಕರಿಗೆ ಸಿಟ್ಟು ಬಂದರೆ ದೂರವಿರಬಹುದು ಮತ್ತು ಕೋಪ ಕಡಿಮೆಯಾದ ಬಳಿಕ ಮಗುವಿನ ಹತ್ತಿರ ಹೋಗಬಹುದು. ಈ ರೀತಿನೀವು ಮಗುವಿಗೆ ಆರೋಗ್ಯಕರವಾಗಿ ಕೋಪವನ್ನು ನಿಭಾಯಿಸುವ ತಂತ್ರಗಳನ್ನು ಕಲಿಸುತ್ತಿದ್ದೀರಿ ಎಂದು ಮನದಟ್ಟು ಮಾಡಿಕೊಳ್ಳಿ.  ಒಂದುವೇಳೆ ನೀವೂ ಕೋಪದಿಂದ ಪ್ರತಿಕ್ರಿಯಿಸಿದರೆ, ವಿಷಯದ ತೀವ್ರತೆ ಮಕ್ಕಳಿಗೆ ಅರಿವಾಗುವುದಿಲ್ಲ”. 

ಸಣ್ಣ ಮಗುವಾಗಿದ್ದರೆ ಡ್ರಾಯಿಂಗ್, ಸ್ಕ್ರಿಬ್ಲಿಂಗ್ ಅಥವಾ ಅವರನ್ನು ವಾಕ್‌ಗೆ ಕರೆದೊಯ್ಯುವಂತಹ ಚಟುವಟಿಕೆಗಳ ಮೂಲಕ ಮಗುವನ್ನು ಶಾಂತಗೊಳಿಸಲು ಪ್ರಯತ್ನಿಸಿ. ಮಗು ದೊಡ್ಡದಾಗಿದ್ದರೆ ಪಾಲಕರು ಸಹ ಜರ್ನಲಿಂಗ್ ಅನ್ನು ಪ್ರೋತ್ಸಾಹಿಸಬಹುದು. 

“ಅನೇಕ ಬಾರಿ, ಕೋಪದ ಕಾರಣ ಪೋಷಕರ ಗಮನದ ಕೊರತೆ. ಮಗು ಪೋಷಕರು ತನ್ನ ಕಡೆ ಗಮನ ನೀಡುತ್ತಿಲ್ಲ ಎನ್ನುವ ಯೋಚನೆಗೆ ಸಿಕ್ಕಿದರೆ ಆ ಭಾವನೆಯಿಂದ ಹೊರಬರಲು   ಕೋಪದಿಂದ ಪೋಷಕರ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತದೆ. ಪಾಲಕರು ತಮ್ಮ ಗಮನವನ್ನು ಮಗುವಿಗೆ ವಿನಿಯೋಗಿಸುವ ನಿರ್ದಿಷ್ಟ ಸಮಯವನ್ನು ಗೊತ್ತುಪಡಿಸಬೇಕು, ಈ ಗೊಂದಲಗಳನ್ನು ನಿವಾರಿಸಲು ಪಾಲಕರು  ಬೋರ್ಡ್ ಆಟಗಳನ್ನು ಆಡುತ್ತಾ ಶಾಲೆಯ ಬಗ್ಗೆ, ಸ್ನೇಹಿತರ ಬಗ್ಗೆ ಹೀಗೆ  ಮಗುವಿನ ಭಾವನೆಗಳಿಗೆ ಕಿವಿ,ಯಾಗಬಹುದು ”ಎಂದು ಡಾ ಕ್ವಾಜಿ ವಿವರಿಸುತ್ತಾರೆ. 

 ಪಾಲಕರ ಪ್ರಯತ್ನಗಳು: 

ಮೇಲೆ ತಿಳಿಸಲಾದ ಹುಡುಗನ ಪ್ರಕರಣದಲ್ಲಿ, ಹುಡುಗನ ತಂದೆ ಮೌಖಿಕವಾಗಿ ನಿಂದಿಸುತ್ತಿದ್ದರು ಮತ್ತು ಅಶ್ಲೀಲ ಮಾತುಗಳನ್ನು ಆಡುತ್ತಿದ್ದರು ಎಂದು ತಿಳಿದುಬಂತು “ತಂದೆಯನ್ನು ಮಾದರಿ ಎಂದು ಪರಿಗಣಿಸಿದ ಹುಡುಗ, ತನ್ನ ತಂದೆ ಬಳಸುತ್ತಿದ್ದ ಪದಗಳನ್ನೇ ಆಯ್ದುಕೊಂಡಿದ್ದ” ಎಂದು ದಳವಿ ಹೇಳುತ್ತಾರೆ. 

ಬಾತ್ರಾ ಅವರ ಪ್ರಕಾರ, ಪೋಷಕರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕು.  ಇದರಿಂದ ಅವರು ಮಗುವನ್ನು ಪೂರ್ವಭಾವಿಯಾಗಿ ಸಂಪರ್ಕಿಸಬಹುದು. ಸಕ್ರಿಯ ಆಲಿಸುವಿಕೆ ಮತ್ತು ಸಂವಹನವು ಆರೋಗ್ಯಕರ ಪೋಷಕ-ಮಕ್ಕಳ ಸಂಬಂಧವನ್ನು ಸ್ಥಾಪಿಸುವ ಮೂಲಾಧಾರವಾಗಿದೆ 

“ಪೋಷಕರು ಮಗುವನ್ನು ಟೀಕಿಸುವುದು, ಬೆದರಿಸುವುದನ್ನು ಮಾಡುವ ಬದಲು  ಮಗು ಸುರಕ್ಷಿತವೆಂದು ಭಾವಿಸುವ ಮತ್ತು ಸಹಕರಿಸುವ ಸಂವಹನದ ಮಾರ್ಗ ನೀಡಬೇಕು” ಎಂದು ಅವರು ಹೇಳುತ್ತಾರೆ. 

 ಚಿಕಿತ್ಸೆಯನ್ನು ಹುಡುಕುವುದು 

 ಮೇಲಿನ ಪ್ರಕರಣದಲ್ಲಿ ಮಗುವಿನ ಕೋಪ ನಿಯಂತ್ರಿಸಲು ಹುಡುಗನ ತಂದೆಗೆ ಬದಲಾಗುವಂತೆ ಸೂಚಿಸಲಾಯ್ತು. ತಂದೆ ಬದಲಾದಾಗ ಅದು ಮಗುವಿನ ನಡವಳಿಕೆಯಲ್ಲೂ ಪ್ರತಿಫಲಿಸುತ್ತದೆ ಎನ್ನುವುದು ಇದರ ಉದ್ದೇಶವಾಗಿತ್ತು. “ಮಗುವಿನ ಚಿಕಿತ್ಸೆಯಲ್ಲಿ  ಧ್ಯಾನ ವ್ಯಾಯಾಮಗಳು ಒಳಗೊಂಡಿತ್ತು. ಎರಡು ತಿಂಗಳಲ್ಲಿ, ಮಗುವಿನ ಕೋಪದ ಸಮಸ್ಯೆಗಳು ಗಮನಾರ್ಹವಾಗಿ ಸುಧಾರಿಸಿದವು, ”ಡಾಲ್ವಿ ಹೇಳುತ್ತಾರೆ. 

ಬಾತ್ರಾ ಪ್ರಕಾರ, ಪೋಷಕರು ತಮ್ಮ ಮಗುವಿಗೆ ಲೇಬಲ್ ಮಾಡಬಾರದು ಅಥವಾ ಅವರೇ ಸಮಸ್ಯೆ ಎಂದು ಭಾವಿಸಬಾರದು. “ಪೋಷಕರು ‘we we approach’  ಹೊಂದಿರಬೇಕು, ಅಂದರೆ ತಮ್ಮನ್ನೂ ಒಳಗೊಂಡಂತೆ ಮಗು ಮತ್ತು ಪೋಷಕರನ್ನೂ ಒಳಗೊಂಡ ಚಿಕಿತ್ಸೆಯಿದ್ದಾಗ ಅಲ್ಲಿ ಇಬ್ಬರ  ಅವರ ಸಂಬಂಧವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ.” 

ಮಕ್ಕಳಲ್ಲಿ ಕೋಪವನ್ನು ನಿರ್ವಹಿಸುವ ಚಿಕಿತ್ಸಕ ಮಧ್ಯಸ್ಥಿಕೆಗಳು(Therapeutic intervention) ಮಕ್ಕಳ ವರ್ತನೆಯ ಚಿಕಿತ್ಸೆಯನ್ನು ಒಳಗೊಂಡಿರುತ್ತವೆ, ಅಲ್ಲಿ ಪೋಷಕರು ತಮ್ಮ ನಡವಳಿಕೆಯನ್ನು ಬದಲಾಯಿಸುವುದರಿಂದ ಅವರ ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಯನ್ನು ಹೇಗೆ ಉಂಟುಮಾಡಬಹುದು ಎಂಬುದರ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. 

  ಸಾರಾಂಶ: 

 • ಮಕ್ಕಳಲ್ಲಿ ಕೋಪದ ಸಮಸ್ಯೆಗಳು ಆಧಾರವಾಗಿರುವ ಮನೋವೈದ್ಯಕೀಯ ಪರಿಸ್ಥಿತಿಗಳು,ಕೌಟುಂಬಿಕ ಸಮಸ್ಯೆಗಳು, ಪೋಷಕರ ಹಿಂಸೆ ಮತ್ತು ಬೆದರಿಸುವಿಕೆಯಂತಹ ಅಂಶಗಳಿಂದ ಉಂಟಾಗಬಹುದು.
 • ಪೋಷಕರು ತಮ್ಮ ಮಗುವಿನ ಕೋಪವನ್ನು ಒಪ್ಪಿಕೊಳ್ಳುವುದು ಮತ್ತು ನಕಾರಾತ್ಮಕ ಭಾವನೆಗಳನ್ನು ಅನುಭವಿಸುವುದು ಸಹಜವೆಂದು ಅರ್ಥ ಮಾಡಿಸುವುದು ಮುಖ್ಯವಾಗಿದೆ.
 • ಪೋಷಕರು ತಮ್ಮ ಮಕ್ಕಳ ಮೇಲೆ ಕೋಪಿಸಿಕೊಂಡರೆ ಅವರನ್ನು ಸಂಪರ್ಕಿಸಬಾರದು. ತಮ್ಮ ಕೋಪ ಕಡಿಮೆಯಾಗುವವರೆಗೂ ದೂರವಿದ್ದು ನಂತರ ಮಗುವಿನೊಂದಿಗೆ ಮಾತನಾಡಬೇಕು. ಇದು ಮಗುವಿನಲ್ಲಿ ಆರೋಗ್ಯಕರ ನಿಭಾಯಿಸುವ ತಂತ್ರಗಳನ್ನು ಕಲಿಸುತ್ತದೆ.

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

two × three =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ