0

0

0

ಈ ಲೇಖನದಲ್ಲಿ

ಮಗುವಿನ ಕಲಿಕೆಯ ವೇಗವನ್ನು ಸುಧಾರಿಸುವುದು ಹೇಗೆ
8

ಮಗುವಿನ ಕಲಿಕೆಯ ವೇಗವನ್ನು ಸುಧಾರಿಸುವುದು ಹೇಗೆ

ನಿಧಾನವಾಗಿ ಕಲಿಯುವವರು ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ಮನೋವಿಜ್ಞಾನಿಗಳು, ವಿಶೇಷ ಶಿಕ್ಷಕರು ಮತ್ತು ಶಿಕ್ಷಕರು ಜೊತೆಗೆ, ಪೋಷಕರು ನಾಲ್ಕನೇ ಚಕ್ರವಾಗಿ ಕಾರ್ಯನಿರ್ವಹಿಸುತ್ತಾರೆ
 ಮಗುವಿನ ಕಲಿಕೆಯ ವೇಗವನ್ನು ಸುಧಾರಿಸುವುದು ಹೇಗೆ
ಚಿತ್ರ: ಅನಂತ ಸುಬ್ರಮಣ್ಯಂ ಕೆ/ಹ್ಯಾಪಿಯೆಸ್ಟ್ ಹೆಲ್ತ್

ಜೂನ್ 2016 ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ  ತನ್ನ ಕೆಟ್ಟ ದಿನಗಳು ಶುರುವಾಯ್ತು ಎನ್ನುವ ಭಯವಿತ್ತು. ಬೋರ್ಡ್ ಪರೀಕ್ಷೆಗಳ ಬಗ್ಗೆಯೂ ಅದೇ ಭಯವಿದ್ದು ನಾನು ಪಾಸ್ ಆಗುವುದಿಲ್ಲ ಎನ್ನುವ ಭಯ ಕಾಡುತ್ತಿತ್ತು ಎಂದು 15 ವರ್ಷದ ನಿಖಿಲ್ (ಜೈಪುರ) ಅವರು ಹ್ಯಾಪಿಯೆಸ್ಟ್ ಹೆಲ್ತ್‌ಗೆ ತಿಳಿಸಿದ್ದರು. “ನಾನು ಚೆನ್ನಾಗಿ ತಯಾರಿ ಮಾಡಿದ್ದೆ. ಆದರೆ ತರಗತಿಯಲ್ಲಿ ಕಲಿಸುವ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ನನಗೆ ಯಾವಾಗಲೂ ಕಷ್ಟವಾಗುತ್ತಿತ್ತು. ಆದರೆ ಪೋಷಕರು ನನ್ನನ್ನು ನಿಧಾನವಾಗಿ ಕಲಿಯುವವನು ಎಂದು ಅರಿತುಕೊಳ್ಳದೆ, ಸಾಕಷ್ಟು ಸಮಯ ಮತ್ತು ಶ್ರಮ ವಹಿಸುತ್ತಿರಲಿಲ್ಲ” ಎಂದು ಅವರು ಹೇಳುತ್ತಾರೆ.  

 ಪದೇ ಪದೇ ಕಲಿಯಲು ಪ್ರಯತ್ನಿಸಿದರೂ ತರಗತಿಯಲ್ಲಿ ಹೇಳಿದ್ದನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುವ ಅನೇಕ ಮಕ್ಕಳಲ್ಲಿ ನಿಖಿಲ್ ಒಬ್ಬರು. “ಐಕ್ಯೂ ಪರೀಕ್ಷೆಯಲ್ಲಿ 100 ಕ್ಕಿಂತ ಹೆಚ್ಚಿನ ಮಟ್ಟವನ್ನು ಒಳ್ಳೆಯದು ಎಂದು ಕರೆಯಲಾಗುತ್ತದೆ. ನಿಧಾನವಾಗಿ ಕಲಿಯುವವರ ಐಕ್ಯೂ 70 ಮತ್ತು 85 ರ ನಡುವೆ ಇರುತ್ತದೆ. ಪರೀಕ್ಷೆಯು ಸಂಖ್ಯಾತ್ಮಕ, ತಾರ್ಕಿಕ, ಮೌಖಿಕ ಮತ್ತು ಪ್ರಾದೇಶಿಕ ಬುದ್ಧಿವಂತಿಕೆಯಲ್ಲಿ ವ್ಯಕ್ತಿಯ ಪ್ರತಿಕ್ರಿಯೆಯನ್ನು ಒಳಗೊಂಡಿರುತ್ತದೆ  ”ಎಂದು ಜೈಪುರದ ಖಾಸಗಿ ಚಿಕಿತ್ಸಾ ಅಭ್ಯಾಸವಾದ ಕೌನ್ಸಿಲರ್ ಚೇರ್‌ನ ಸೈಕೋಥೆರಪಿಸ್ಟ್ ಮತ್ತು ಸಂಸ್ಥಾಪಕರಾದ ಹರ್ಷಿಕಾ ಪರೀಕ್ ವಿವರಿಸುತ್ತಾರೆ. 

 ನಿಖಿಲ್ ಅವರ ಐಕ್ಯೂ 85 ಕ್ಕಿಂತ ಕಡಿಮೆಯಿತ್ತು ಮತ್ತು ಅವರಿಗೆ ಅರಿವಿನ ಪ್ರಕ್ರಿಯೆಯಲ್ಲಿ ತೊಂದರೆಗಳಿದ್ದವು. ಅವರು ನಿಧಾನವಾಗಿ ಕಲಿಯುತ್ತಿದ್ದರು ಎಂದು ಪರೀಕ್ ಹೇಳುತ್ತಾರೆ. ಆದರೆ ಪಠ್ಯಕ್ರಮವನ್ನು ಸರಳೀಕರಿಸುವುದು ಮತ್ತು ಪರಿಹಾರ ತರಗತಿಗಳನ್ನು ನೀಡುವುದು ಸಂಕೀರ್ಣ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. 

  ತರಗತಿಯಲ್ಲಿ ಕಲಿಸುವ ಪರಿಕಲ್ಪನೆಗಳನ್ನು ಸಹಪಾಠಿಗಳಿಗೆ ಹೋಲಿಸಿದರೆ ಮಗು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ, ಅನೇಕ ಪ್ರಯತ್ನವನ್ನು ಮಾಡಿದರೂ ಮಗುವಿನ ಕಲಿಕೆಯಲ್ಲಿ ವಿಳಂಬವಾದರೆ, ಮಗು ನಿಧಾನವಾಗಿ ಕಲಿಯುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಪರೀಕ್ ವಿವರಿಸುತ್ತಾರೆ. ಈ ಸಂದರ್ಭದಲ್ಲಿ ಆ ವಯಸ್ಸಿನ ಮಗುವಿನಿಂದ ನಿರೀಕ್ಷಿಸಿದಂತೆ ಮಾತು, ಶ್ರವಣ ಅಥವಾ ತಿಳುವಳಿಕೆ, ಮತ್ತು ಸೂಚನೆಗಳಲ್ಲಿ ವಿಳಂಬವಾಗಬಹುದು. 

  ಶೈಕ್ಷಣಿಕ ಸಾಧನೆ ಮತ್ತು ಬೆಳವಣಿಗೆಯ ಮೈಲಿಗಲ್ಲುಗಳು (ಅರಿವಿನ ಮತ್ತು ದೈಹಿಕ) ನಿಧಾನಗತಿಯ ಕಲಿಯುವವರನ್ನು ಗುರುತಿಸಲು ಸುಲಭವಾದ ಸೂಚಕಗಳಾಗಿವೆ ಎಂದು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಮಕ್ಕಳ ನರವಿಜ್ಞಾನಿಯಾದ ಡಾ.ಶ್ರುತಿ ಎನ್.ಎಂ ಹೇಳುತ್ತಾರೆ. 

 ಬೆಂಗಳೂರಿನಲ್ಲಿ ಮಕ್ಕಳಿಗೆ SEL (ಸಾಮಾಜಿಕ ಭಾವನಾತ್ಮಕ ಕಲಿಕೆ) ಸಹಾಯ ಮಾಡುವ ಸಂಸ್ಥೆಯಾದ ಐ ಸ್ಪೈ ಹೋಪ್‌ನ ಸಂಸ್ಥಾಪಕ ಮತ್ತು ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞರಾದ ಜೋಹಾ ಮರ್ಚೆಂಟ್ ಪ್ರಕಾರ, ಈ ಚಿಹ್ನೆಗಳನ್ನು ಗುರುತಿಸಲು ವೀಕ್ಷಣೆಯು ಸಹಾಯ ಮಾಡುತ್ತದೆ. 

 ಅಂತರವನ್ನು ವಿಶ್ಲೇಷಿಸಿ – ನಿಧಾನವಾಗಿ ಕಲಿಯುವವರಿಗೆ ಪರೀಕ್ಷೆಗಳು 

ಬೆಂಗಳೂರಿನ ಆರು ವರ್ಷದ ಬಾಲಕ ತನಯ್, ಕೋವಿಡ್‌ನಿಂದಾಗಿ ತನ್ನ ಮೊದಲ ಎರಡು ವರ್ಷಗಳ ಶಾಲಾ ಶಿಕ್ಷಣವನ್ನು ವಾಸ್ತವಿಕವಾಗಿ (ಮನೆಯಲ್ಲಿ) ಪೂರ್ಣಗೊಳಿಸಿದನು. ಅವರ ತಾಯಿಗೆ ತನ್ನ ಭಾಷೆಯ ಹೋಮ್ ವರ್ಕ್ ಬರೆಯಲು ಮತ್ತು ಅವನಿಗೆ  ಕಥೆ ಪುಸ್ತಕಗಳನ್ನು ಓದುವಂತೆ ಮಾಡುವುದು ಸವಾಲಾಗಿತ್ತು. “ಇದು ವರ್ಚುವಲ್ ತರಗತಿಗಳ ಮಿತಿಗಳಿಂದಾಗಿ ಎಂದು ನಾವು ಭಾವಿಸಿದ್ದೇವೆ” ಎಂದು ಅವರ ತಾಯಿ, ತ್ರಿಶಾ ರಾಮನಾಥ್ (34) ನೆನಪಿಸಿಕೊಳ್ಳುತ್ತಾರೆ 

 ಸುಮಾರು ಒಂದು ವರ್ಷದ ನಿಯಮಿತ ಶಾಲಾ ಶಿಕ್ಷಣದಲ್ಲಿ, ಶಿಕ್ಷಕರು ಕೆಲವು ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳನ್ನು ಬರೆಯಲು ಮತ್ತು ಓದಲು ಅವನು ಕಷ್ಟ ಪಡುತ್ತಿದ್ದುದ್ದನ್ನು ಗುರುತಿಸಿದರು. ತಕ್ಷಣವೇ, ಶಾಲೆಯು ತಜ್ಞರ ಮಧ್ಯಸ್ಥಿಕೆಯನ್ನು ಶಿಫಾರಸು ಮಾಡಿತು. 

 ಮಗುವಿನ ಕಲಿಕೆಯ ಅಂತರವನ್ನು (ಯಾವುದಾದರೂ ಇದ್ದರೆ) ಗುರುತಿಸುವುದು ಪೋಷಕರೊಂದಿಗೆ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಶಿಕ್ಷಣ ತಜ್ಞರು ಶಿಫಾರಸು ಮಾಡುತ್ತಾರೆ. ಕಲಿಕೆ ಮತ್ತು/ಅಥವಾ ನಡವಳಿಕೆಯಲ್ಲಿನ ಸಮಸ್ಯೆಗಳ ಆರಂಭಿಕ ಗುರುತಿಸುವಿಕೆಗೆ ಇದು ಸಹಾಯ ಮಾಡುತ್ತದೆ. ಒಂದು ನಿರ್ದಿಷ್ಟ ವಯಸ್ಸಿನ ಮಗು ಅದೇ ವಯಸ್ಸಿನ ಗೆಳೆಯರೊಂದಿಗೆ ಸರಿಸಮನಾಗಿ ಸಾಧನೆ ಮಾಡಲು ಸಾಧ್ಯವಾಗದಿದ್ದಾಗ ಕಲಿಕೆಯ ಅಂತರವನ್ನು ಸುಲಭವಾಗಿ ಗುರುತಿಸಬಹುದು. 

ಐಕ್ಯೂ ಪರೀಕ್ಷೆಗಳು, ಕೌಶಲ್ಯ ಪರೀಕ್ಷೆಗಳು (ಗ್ರಾಸ್-ಮೋಟಾರ್ ಸ್ಕಿಲ್ಸ್ ಮತ್ತು ಫೈನ್-ಮೋಟಾರ್ ಸ್ಕಿಲ್ ನಿರ್ಣಯಿಸುವುದು), ಗಮನ-ಸಂಬಂಧಿತ ಪರೀಕ್ಷೆಗಳು (ಎರಡರಿಂದ ಮೂರು ನಿಮಿಷಗಳ ಕಾಲ ಮಗುವಿನ ಗಮನವನ್ನು ಬೇಡುವ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ) ಮತ್ತು ಸಂವಹನ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮುಂದೆ, ಕಲಿಕೆಯಲ್ಲಿ ಅಸಮರ್ಥತೆ ಅಥವಾ ಶ್ರವಣ ಮತ್ತು ದೃಷ್ಟಿಯಂತಹ ಇತರ ದೈಹಿಕ ಸಮಸ್ಯೆಗಳಿದ್ದರೆ ಗುರುತಿಸಲಾಗುತ್ತದೆ.  

 ತನಯ್ ಅವರ ವಿಷಯದಲ್ಲಿ ಈ ಪರೀಕ್ಷೆಗಳನ್ನು ಡ್ರಾಯಿಂಗ್ ಮತ್ತು ರೈಟಿಂಗ್ ವ್ಯಾಯಾಮಗಳು, ಬಣ್ಣ ಹಾಳೆಗಳು ಮತ್ತು ಸಲಹೆಗಾರರೊಂದಿಗೆ ಇಂಗ್ಲಿಷ್‌ನಲ್ಲಿ ಸಾಂದರ್ಭಿಕ ಸಂಭಾಷಣೆಯ ಮೂಲಕ ನಡೆಸಲಾಯಿತು, “ಕಲಿಕೆಯಲ್ಲಿ ಅಸಾಮರ್ಥ್ಯವನ್ನು ಗಮನಿಸಿದ ಮೇಲೆ ಸುಮಾರು ಆರು ತಿಂಗಳ ಕಾಲ ಓದಲು ಸಹಾಯ ಮಾಡಲು ವಿಶೇಷ ಶಿಕ್ಷಕರನ್ನು ನೇಮಿಸಲಾಯಿತು. ಹೆಚ್ಚುವರಿಯಾಗಿ, ಆಕ್ಯುಪೇಷನಲ್ ಥೆರಪಿ ಸೆಷನ್‌ಗಳು ಮತ್ತು ಸ್ಪೀಚ್ ಥೆರಪಿ ಸೆಷನ್‌ಗಳನ್ನು ನೀಡಲಾಯ್ತು. ಅವನು ಕ್ರಮೇಣ ಸುಧಾರಿಸಿದ ಎಂದು ಅವರ ತಾಯಿ ತಿಳಿಸಿದ್ದಾರೆ.  

 ಸಂದಿಗ್ಧತೆಯನ್ನು ಎದುರಿಸುವುದು ಹೇಗೆ? 

ಮಾತು ಅಥವಾ ಶ್ರವಣ ದೋಷದಂತಹ ಸಮಸ್ಯೆಗಳನ್ನು ತಾಂತ್ರಿಕ ಮತ್ತು ವೈದ್ಯಕೀಯ ನೆರವಿನ ಮೂಲಕ ಸರಿಪಡಿಸಬಹುದು ಎನ್ನುತ್ತಾರೆ ಶೃತಿ. ಈ ಸಂದರ್ಭಗಳಲ್ಲಿ, ಶ್ರವಣ ಮತ್ತು/ಅಥವಾ ದೃಷ್ಟಿ ಸಮಸ್ಯೆಗಳನ್ನು ಕ್ರಮವಾಗಿ ಸರಿಪಡಿಸಲು ENT ತಜ್ಞರು ಮತ್ತು/ಅಥವಾ ನೇತ್ರಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು. 

 ಮಗುವು ಸೌಮ್ಯದಿಂದ ಮಧ್ಯಮ ಅರಿವಿನ ದುರ್ಬಲತೆಗಳನ್ನು ಹೊಂದಿದ್ದರೆ (ತಿಳುವಳಿಕೆ, ಕಲಿಕೆ, ಸ್ಮರಣೆ ಅಥವಾ ಗುರುತಿಸುವಿಕೆಯಲ್ಲಿ ತೊಂದರೆ), ಇದಕ್ಕೆ ಕ್ಲಿನಿಕಲ್ ಮನಶ್ಶಾಸ್ತ್ರಜ್ಞರು ಮತ್ತು ವಿಶೇಷ ಶಿಕ್ಷಕರ ಹಸ್ತಕ್ಷೇಪದ ಅಗತ್ಯವಿರುತ್ತದೆ. 

ನಿಧಾನವಿದ್ದರೆ ತೊಂದರೆಯಿಲ್ಲ, ಆದರೆ ಸ್ವೀಕಾರವು ನಿರ್ಣಾಯಕವಾಗಿದೆ 

ನಿಧಾನವಾಗಿ ಕಲಿಯುವವರು ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ಮನೋವಿಜ್ಞಾನಿಗಳು, ವಿಶೇಷ ಶಿಕ್ಷಕರು ಮತ್ತು ಶಿಕ್ಷಕರು ಜೊತೆಗೆ, ಪೋಷಕರು ನಾಲ್ಕನೇ ಚಕ್ರವಾಗಿ ಕಾರ್ಯನಿರ್ವಹಿಸುತ್ತಾರೆ.  

  • ಪೋಷಕರಿಗೆ ಸ್ವೀಕಾರವು ಮೊದಲ ನಿರ್ಣಾಯಕ ಹಂತವಾಗಿದೆ. 
  • ಸ್ಥಿರವಾದ ಬಲವರ್ಧನೆಯು ಮುಂದಿನ ಹಂತವಾಗಿದೆ. 
  • ಶಾಲೆಯಲ್ಲಿ ಅಳವಡಿಸಿಕೊಂಡಿರುವ ಅದೇ ಬೋಧನಾ ಶೈಲಿಯನ್ನು ಅರ್ಥಮಾಡಿಕೊಳ್ಳಿ ಮತ್ತು ಅಳವಡಿಸಿಕೊಳ್ಳಿ. 
  • ಸೂಚನೆಗಳನ್ನು ಪುನರಾವರ್ತಿಸಿ ಮತ್ತು ಸೂಚನೆಗಳನ್ನು ಸಂಕೀರ್ಣದಿಂದ ಸರಳೀಕರಿಸಿ . 
  • ಶಿಕ್ಷಕರೂ ಈ ವಿಷಯದಲ್ಲಿ ಸಮಾನ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಾರೆ 
  • ಮಗುವು ಶಾಲೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದನ್ನು ಪರಿಗಣಿಸಿ, ಶಿಕ್ಷಕರ ಒಳಗೊಳ್ಳುವ ವಿಧಾನವು ನಿಧಾನವಾಗಿ ಕಲಿಯುವವರಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. 

  ವೈಯಕ್ತಿಕಗೊಳಿಸಿದ ಬೆಂಬಲ ಅತ್ಯಗತ್ಯ. ಪರೀಕ್ ಹೇಳುತ್ತಾರೆ, “ದೃಶ್ಯ, ಶ್ರವಣೇಂದ್ರಿಯ ಮತ್ತು ಸಂವಾದಾತ್ಮಕ ಸೂಚನೆಗಳನ್ನು ಒದಗಿಸುವುದು ಉತ್ತಮ ಅಭ್ಯಾಸವಾಗಿದೆ. ನಿಖಿಲ್‌ನ ಕಲಿಕೆಯು ಸಂವಾದಾತ್ಮಕ ಸೂಚನೆಗಳ ಜೊತೆಗೆ ಸಂಬಂಧಿತ ದೃಶ್ಯ ಸಾಧನಗಳೊಂದಿಗೆ ಬೆಂಬಲಿತವಾಗಿದೆ ಅದು ಅವರಿಗೆ ಪರಿಕಲ್ಪನೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. 

ಸಮಗ್ರ ಪಠ್ಯಕ್ರಮದ ಆಧಾರದ ಮೇಲೆ ಸರಳವಾದ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವುದು ಪ್ರಮುಖವಾಗಿದೆ. 

ಚಟುವಟಿಕೆ ಆಧಾರಿತ ಸೂಚನಾ ಶೈಲಿಯು ಅತ್ಯಂತ ಸೂಕ್ತವಾಗಿದೆ. “ಆರು ವರ್ಷದ ಮಗುವಿಗೆ ಕೂಡುವುದನ್ನು ಕಲಿಸಬೇಕಾದರೆ, ಚೆಂಡುಗಳು ಅಥವಾ ಹಣ್ಣುಗಳು ಅಥವಾ ಬೆರಳು ಎಣಿಕೆಯಂತಹ ಪರಿಕರಗಳನ್ನು ಬಳಸುವುದು ಸಹಾಯ ಮಾಡುತ್ತದೆ 

ಮಗುವನ್ನು ಶ್ಲಾಘಿಸಿ ಮತ್ತು ಎಂದಿಗೂ ಹೋಲಿಸಬೇಡಿ 

ನಿಧಾನವಾಗಿ ಕಲಿಯುವವರು ತಮ್ಮ ಗೆಳೆಯರಿಗಿಂತ ಕಲಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ಪರೀಕ್ ಹೇಳುತ್ತಾರೆ. ನಿಧಾನವಾಗಿ ಕಲಿಯುವವರು ಕಲಿಯಲು ಸಾಧ್ಯವಿಲ್ಲವೆಂದಲ್ಲ. “ಶಿಕ್ಷಕರು ಮತ್ತು ಪೋಷಕರು ತಮ್ಮ ಪ್ರಶ್ನೆಗಳನ್ನು ತಮಾಷೆ ಎಂದು ಪರಿಗಣಿಸಬಾರದು, ಏಕೆಂದರೆ ಇದು ಮುಂದಿನ ಪ್ರಶ್ನೆಗಳಿಂದ ಅವರನ್ನು ನಿರುತ್ಸಾಹಗೊಳಿಸುತ್ತದೆ.” 

 “ಚಿತ್ರಗಳೊಂದಿಗೆ ಕಲಿಸಿದಾಗ ತನಯ್ ಯಾವುದೇ ಪರಿಕಲ್ಪನೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ. ಅವನು ನಿಧಾನ, ಆದರೆ ನಾವು ಅವನಿಗೆ ಸಮಯವನ್ನು ನೀಡುತ್ತೇವೆ ಎಂದು ರಾಮನಾಥ್ ನೆನಪಿಸಿಕೊಳ್ಳುತ್ತಾರೆ 

  ಸಾರಾಂಶ: 

  • ಕೆಲವು ಮಕ್ಕಳು ಇತರರಿಗಿಂತ ನಿಧಾನವಾಗಿ ಕಲಿಯುತ್ತಾರೆ, ಅದರಲ್ಲಿ ತಪ್ಪೇನಿಲ್ಲ  
  • ದೃಶ್ಯ, ಶ್ರವಣೇಂದ್ರಿಯ ಮತ್ತು ಸಂವಾದಾತ್ಮಕ ಸೂಚನೆಗಳೊಂದಿಗೆ ವೈಯಕ್ತಿಕ ಬೆಂಬಲದ ಮೇಲೆ ಕೇಂದ್ರೀಕರಿಸಿ. 
  • ಚಟುವಟಿಕೆ ಆಧಾರಿತ ಬೋಧನೆ ನಿಧಾನವಾಗಿ ಕಲಿಯುವವರಿಗೆ ಹೆಚ್ಚು ಸಹಾಯ ಮಾಡುತ್ತದೆ. 
  • ಮೆಚ್ಚುಗೆ ಮತ್ತು ಧನಾತ್ಮಕ ಬಲವರ್ಧನೆಯು ಉತ್ತೇಜನಕಾರಿಯಾಗಿದೆ. 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಲೇಖನ
ಜಾಗತಿಕವಾಗಿ ಕನಿಷ್ಠ 5.4 ಲಕ್ಷ ಹೃದಯ ಸಂಬಂಧಿ ಸಾವುಗಳಿಗೆ ಟ್ರಾನ್ಸ್-ಫ್ಯಾಟಿ ಆಸಿಡ್‌ಗಳಿಂದ ತುಂಬಿದ ಸಂಸ್ಕರಿಸಿದ ಆಹಾರ ಕಾರಣ ಎಂದು ಭಾರತ ಸರ್ಕಾರ ಹೇಳುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ