0

0

0

ಈ ಲೇಖನದಲ್ಲಿ

Diwali Safety: ನಿಮ್ಮದೇ ಕಿಟ್ ತಯಾರಿಸಿ, ಸುರಕ್ಷತೆಯಿಂದ ಹಬ್ಬ ಆಚರಿಸಿ
28

Diwali Safety: ನಿಮ್ಮದೇ ಕಿಟ್ ತಯಾರಿಸಿ, ಸುರಕ್ಷತೆಯಿಂದ ಹಬ್ಬ ಆಚರಿಸಿ

ದೀಪಾವಳಿ ಹಬ್ಬದ ಸಮಯದಲ್ಲಿ ಅವಘಡಗಳಾಗುವ ಸಾಧ್ಯತೆಗಳಿವೆ. ಅದನ್ನು ನೀವು ಮೊದಲ ಹಂತದಲ್ಲಿ ತಡೆಯುವ ಪ್ರಯತ್ನಗಳನ್ನು ಮಾಡಬಹುದು.  
ನಿಮ್ಮದೇ ಕಿಟ್ ತಯಾರಿಸಿ, ಸುರಕ್ಷತೆಯಿಂದ ಹಬ್ಬ ಆಚರಿಸಿ
ಚಿತ್ರ: ಶಿವಕುಮಾರ್ ಕೆ

ದೀಪಾವಳಿ ಎಂದರೆ ದೊಡ್ಡ ಹಬ್ಬ ಎನ್ನುವ ಮಾತಿದೆ. ದಸರಾ ಹಬ್ಬದ ಬಳಿಕ ಬರುವ ದೀಪಾವಳಿಹಬ್ಬದ ಸಡಗರ, ಸಂಭ್ರಮ ಹೆಚ್ಚೇ ಇರುತ್ತದೆ. ದೀಪಾವಳಿ ಎಂದಾಕ್ಷಣ ನೆನಪಾಗುವುದು ಎಲ್ಲೆಲ್ಲೂ ದೀಪಗಳ ಸಾಲು, ಬೆಳಗುವ ಹಣತೆಗಳು, ಆಕಾಶದೀಪ, ವಾರವಿಡೀ ಪಟಾಕಿ ಸದ್ದು, ಸಿಹಿ ತಿನಿಸುಗಳು, ಕುಟುಂಬದ ಸಂತಸದ ಕ್ಷಣಗಳು. ಈ ಹಬ್ಬ ಕಳೆಕಟ್ಟುವುದೇ ದೀಪಗಳಿಂದ ಮತ್ತು ಪಟಾಕಿಗಳಿಂದ. ಮೊದಲಿನ ಹಾಗೆ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಣೆಯನ್ನು ಮಾಡುವುದಲ್ಲದೇ ಆಧುನಿಕ ಜಗತ್ತಿಗೆ ಬೇಕಾದ ಮಾರ್ಪಾಟುಗಳೊಂದಿಗೆ ನಾವು ಹಬ್ಬವನ್ನು ಸಂಭ್ರಮಿಸುತ್ತೇವೆ. ಈಗಾಗಲೇ ನೀವು ಹಬ್ಬವನ್ನು ಆಚರಿಸಲು ಬೇಕಾದ ತಯಾರಿಗಳನ್ನು ಮಾಡಿಕೊಂಡಿರುತ್ತೀರಿ, ಅಲ್ಲವೇ? ಯಾವ ತಿನಿಸುಗಳನ್ನು ತಯಾರಿಸಬೇಕು? ಯಾರನ್ನು ಆಮಂತ್ರಿಸಬೇಕು? ಯಾವ ರೀತಿ ಆಚರಿಸಬೇಕು ಎನ್ನುವ ಸಂಪೂರ್ಣ ಪಟ್ಟಿ ನಿಮ್ಮ ಬಳಿ ಇರುವುದು ಸಾಮಾನ್ಯ. ಆದರೆ ಈ ಬಾರಿ ಹ್ಯಾಪಿಯೆಸ್ಟ್ ಹೆಲ್ತ್ ನಿಮಗಾಗಿ ಸರಳವಾಗಿ ಮತ್ತು ಸುಲಭವಾಗಿ ತಯಾರಿಸಿ ಇಟ್ಟುಕೊಳ್ಳಬಹುದಾದ ದೀಪಾವಳಿ ಕಿಟ್ಮಾಹಿತಿಯನ್ನು ನೀಡುತ್ತಿದೆ.  

ಬೇರೆ ಹಬ್ಬಗಳಿಗಿಂತ ಈ ಹಬ್ಬದ ಆಚರಣೆಯ ಸಮಯದಲ್ಲಿ ನಾವು ಜಾಗರೂಕರಾಗಿರಬೇಕಾಗುತ್ತದೆ. ಪುಟ್ಟ ಮಕ್ಕಳಿರುವ ಮನೆಯಲ್ಲಿ ದೀಪಗಳನ್ನು ಹಚ್ಚಿದಾಗ ದೀಪದ ಉರಿಯಿಂದ ಉಂಟಾಗಬಹುದಾದ ಸುಟ್ಟ ಗಾಯಗಳು, ಮಕ್ಕಳು ಆಡುವಾಗ ಬಿದ್ದು ಅಥವಾ ಬೇರೆ ರೀತಿಯಲ್ಲಿ ಆಗುವ ಗಾಯಗಳು, ಮತ್ತು ಮನೆಯಲ್ಲಿ ವಯಸ್ಸಾದವರಿದ್ದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಪಟಾಕಿ ಹಚ್ಚುವಾಗ ಆಗಬಹುದಾದ ಸುಟ್ಟ ಗಾಯಗಳು ಹೀಗೆ ಅನೇಕ ಅವಘಡಗಳು ಆಗುವ ಸಾಧ್ಯತೆಗಳಿರುತ್ತವೆ. ಹಬ್ಬದ ಖುಷಿಯ ಆಚರಣೆಯ ಸಮಯದಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಹುಡುಕುವುದು ಸುಲಭದ ಕೆಲಸವಲ್ಲ. ನಿಮ್ಮ ಮನೆಯಲ್ಲಿ ಈಗಾಗಲೇ ನೀವು ಫಸ್ಟ್-ಏಡ್ ಬಾಕ್ಸ್ಇಟ್ಟುಕೊಂಡಿರಬಹುದು. ಆದರೆ ದೀಪಾವಳಿಗೆ ಈ ವಿಶೇಷ ತಯಾರಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ರಕ್ಷಿಸಬಲ್ಲದು. 

ಹ್ಯಾಪಿಯೆಸ್ಟ್ ಹೆಲ್ತ್ ದೀಪಾವಳಿ ಕಿಟ್‘ – ನೀವು ಸಂಗ್ರಹಿಸಬೇಕಾದ ವಸ್ತುಗಳು:  

೧. ಸುಟ್ಟಗಾಯಗಳಿಗೆ ಚಿಕಿತ್ಸೆ: ದೀಪಗಳನ್ನು ಹಚ್ಚುವಾಗ, ಪಟಾಕಿಗಳನ್ನು ಸಿಡಿಸುವಾಗ ಗಾಯಗಳಾಗುವ ಸಾಧ್ಯತೆಗಳಿವೆ. ಸಣ್ಣ ಪ್ರಮಾಣದ ಸುಟ್ಟಗಾಯಕ್ಕೆ (ಮೈನರ್ ಬರ್ನ್) ಯಾವುದೇ ಚಿಕಿತ್ಸೆಯ ಅಗತ್ಯವಿರುವುದಿಲ್ಲ ಮತ್ತು ಸಿಲ್ವರ್ ಸಲ್ಫಾಡಿಯಾಜಿನ್ ಹಚ್ಚಿದರೆ ಸಾಕಾಗುತ್ತದೆ ಎಂದು ಡಾ. ಕುಮಾರ್, (ಅಸೋಸಿಯೇಷನ್ ಆಫ್ ಎಮರ್ಜೆನ್ಸಿ ಫಿಸಿಶಿಯನ್ಸ್ ಆಫ್ ಇಂಡಿಯಾದ ಸದಸ್ಯರು) ಅವರು ತಿಳಿಸುತ್ತಾರೆ. ಸುಟ್ಟ ಭಾಗವನ್ನು 15 ರಿಂದ 20 ನಿಮಿಷಗಳ ಕಾಲ ತಣ್ಣನೆಯ ಅಥವಾ ಟ್ಯಾಪ್ ನೀರಿನ ಅಡಿಯಲ್ಲಿ ಇಡಿ. ಆ ಕ್ಷಣದ ಆತಂಕವನ್ನು ತಪ್ಪಿಸಲು ನೀವು ಮನೆಯಲ್ಲಿ ಒಂದು ಬಕೆಟ್ ನೀರನ್ನು ತುಂಬಿಸಿ ಇಟ್ಟುಕೊಳ್ಳುವುದು ಉತ್ತಮ ಕ್ರಮ. ಇದರ ಜೊತೆಗೆ ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಅಲೋವೆರಾ ಜೆಲ್ ಮತ್ತು ಆಂಟಿ ಸೆಪ್ಟಿಕ್ ಕ್ರೀಮ್ ನಿಮ್ಮ ಡಬ್ಬಿಯಲ್ಲಿರಲಿ.  
೨. ಶಬ್ದ ಮಾಲಿನ್ಯ: ನಗರ ಪ್ರದೇಶಗಳನ್ನೂ ಸೇರಿದಂತೆ ಎಲ್ಲಾ ಭಾಗಗಳಲ್ಲಿಯೂ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿಸುವಾಗ ಉಂಟಾಗುವ ಸದ್ದು ಚಿಕ್ಕ ಮಕ್ಕಳು, ವೃದ್ಧರಿಗೆ ಹಾನಿ ಉಂಟುಮಾಡಬಹುದು. ಹಬ್ಬದ ಸಮಯದಲ್ಲಿ ನೀವು ಈ ಸದ್ದಿನಿಂದ ತಪ್ಪಿಸಿಕೊಳ್ಳಲು ಸಾಧ್ಯವವಿಲ್ಲವಾದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಕಿವಿಗೆ ಹತ್ತಿಯ ಉಂಡೆಗಳನ್ನು ಬಳಸಬಹುದು ಮತ್ತು ಇಯರ್ ಪ್ಲಗ್ ಧರಿಸಬಹುದು.  

೩. ಪಟಾಕಿ ಸಿಡಿಸುವಾಗ ಬೇಕಾಗುವ ಮುಂಜಾಗೃತಾ ವಸ್ತುಗಳು:  

ಕೈಗವಸುಗಳು: ಪಟಾಕಿ ಸಿಡಿಸುವ ಮೊದಲು ಅಗತ್ಯವಿದ್ದರೆ ಕೈಗವಸುಗಳನ್ನು ಧರಿಸಿ.  

ಕಣ್ಣಿನ ರಕ್ಷಣೆ- ಪಟಾಕಿಗಳನ್ನು ಸಿಡಿಸುವಾಗ ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಿ. ಐ ಡ್ರಾಪ್ ಅನ್ನು ಮೊದಲೇ ಸಂಗ್ರಹಿಸಿ.  

ಸಾಧ್ಯವಾದಷ್ಟೂ ಹತ್ತಿ ಬಟ್ಟೆಗಳನ್ನು ಧರಿಸಿ. ನಿಮ್ಮ ಧಿರಿಸುಗಳು ಆರಾಮದಾಯಕವಾಗಿರಲಿ.  

 ೪. ಪ್ರಾಥಮಿಕ ಪ್ರಥಮ ಚಿಕಿತ್ಸೆ: ಈ ಡಬ್ಬಿಯಲ್ಲಿ ಬ್ಯಾಂಡ್-ಏಡ್, ಗಾಜ್ ಮತ್ತು ಪ್ಲ್ಯಾಸ್ಟರ್‌ಗಳು ಇರಲಿ. ಗಾಯವಾದಾಗ ಒರೆಸಲು ಬೇಕಾಗುವ ಹತ್ತಿ, ಕತ್ತರಿ ಮತ್ತು ಗಾಯಕ್ಕೆ ಹಾಕುವ ಪೌಡರ್‌ಗಳನ್ನು ಸಂಗ್ರಹಿಸಿ. ಅಗತ್ಯವಾದ ನೋವು ನಿವಾರಕಗಳು(ಪೈನ್-ಕಿಲ್ಲರ್) ತಲೆನೋವು, ಜ್ವರವಿದ್ದಾಗ ನೀವು ತೆಗೆದುಕೊಳ್ಳುವ ಔಷಧಿಗಳನ್ನು ಮರೆಯಬೇಡಿ. ನಿಯಮಿತವಾಗಿ ನೀವು ಬಳಸುವ ಯಾವುದೇ ಔಷಧಿಗಳನ್ನು ಹೆಚ್ಚುವರಿ ಸಂಗ್ರಹಿಸಿ.  

೫. ತುರ್ತು ಸಂಖ್ಯೆಗಳು: ಯಾವುದೇ ಅವಘಡಗಳು ಸಂಭವಿಸಿದಾಗ ನೀವು ಕರೆಮಾಡಬೇಕಾದ ದೂರವಾಣಿ ಸಂಖ್ಯೆಗಳನ್ನು ಪಟ್ಟಿ ಮಾಡಿ ಈ ಡಬ್ಬಿಯಲ್ಲಿದೆ. ಆ ಪಟ್ಟಿಯಲ್ಲಿ ನಿಮ್ಮ ಫ್ಯಾಮಿಲಿ ಡಾಕ್ಟರ್, ಹತ್ತಿರದ ಆಸ್ಪತ್ರೆಗಳ ಸಂಖ್ಯೆ, ಅಂಬ್ಯುಲೆನ್ಸ್, ಅಗ್ನಿಶಾಮಕದಳದ ಸಂಖ್ಯೆಗಳನ್ನೂ ಸೇರಿಸಿ.  

 ಸಾರಾಂಶ:  

ದೀಪಾವಳಿ ಹಬ್ಬದ ಸಮಯದಲ್ಲಿ ಅವಘಡಗಳಾಗುವ ಸಾಧ್ಯತೆಗಳಿವೆ. ಅದನ್ನು ನೀವು ಮೊದಲ ಹಂತದಲ್ಲಿ ತಡೆಯುವ ಪ್ರಯತ್ನಗಳನ್ನು ಮಾಡಬಹುದು.  

ಪಟಾಕಿ ಸಿಡಿಸುವ ಮುನ್ನ ರಕ್ಷಣಾತ್ಮಕ ಕನ್ನಡಕವನ್ನು ಧರಿಸಿ 

ಪ್ರಾಥಮಿಕ ಚಿಕಿತ್ಸೆಗೆ ಅಗತ್ಯವಿರುವ  ಬ್ಯಾಂಡ್-ಏಡ್, ಗಾಜ್ ಮತ್ತು ಪ್ಲ್ಯಾಸ್ಟರ್‌ಗಳು, ಗಾಯವಾದಾಗ ಒರೆಸಲು ಬೇಕಾಗುವ ಹತ್ತಿ, ಕತ್ತರಿ ಮತ್ತು ಗಾಯಕ್ಕೆ ಹಾಕುವ ಪೌಡರ್‌ ಸಂಗ್ರಹಿಸಿ.  

ಯಾವುದೇ ತುರ್ತು ಸಮಯಕ್ಕೆ ಬೇಕಾಗುವ ದೂರವಾಣಿ ಸಂಖ್ಯೆಗಳನ್ನು ಮೊದಲೇ ಬರೆದು ಪಟ್ಟಿ ತಯಾರಿಸಿ, ಡಬ್ಬಿಯಲ್ಲಿರಿಸಿ.  

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

1 × four =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ