0

0

0

ಈ ಲೇಖನದಲ್ಲಿ

ಚಳಿಗಾಲದಲ್ಲಿ ಒಣ ಚರ್ಮ ಆರೈಕೆಗೆ ಸಲಹೆಗಳು
1

ಚಳಿಗಾಲದಲ್ಲಿ ಒಣ ಚರ್ಮ ಆರೈಕೆಗೆ ಸಲಹೆಗಳು

ತಾಪಮಾನ ಕಡಿಮೆಯಾದಂತೆ ಶುಷ್ಕ ಮತ್ತು ಫ್ಲಾಕಿ ಚರ್ಮವನ್ನು ನಿಭಾಯಿಸುವ ವಿಧಾನಗಳನ್ನು ತಜ್ಞರು ಪಟ್ಟಿ ಮಾಡುತ್ತಾರೆ

ಚಳಿಗಾಲದಲ್ಲಿ ಒಣ ಚರ್ಮ ಆರೈಕೆಗೆ ಸಲಹೆಗಳು

ಚಳಿಗಾಲ ಶುರುವಾದಾಗ ಮತ್ತು ಹವಾಮಾನ-ಸಂಬಂಧಿತ ಶುಷ್ಕತೆ ಮತ್ತು ತೇವಾಂಶದ ನಷ್ಟವಾದಾಗ ನಾವು ನಮ್ಮ ಚರ್ಮವನ್ನು ರಕ್ಷಿಸಬೇಕು. ಒಣ ಚರ್ಮವು ಚರ್ಮದಲ್ಲಿರುವ ನೀರಿನ ಅಂಶವನ್ನು ಹಿಡಿದಿಟ್ಟುಕೊಳ್ಳುವ ಮತ್ತು ತಡೆಗೋಡೆ-ದುರಸ್ತಿ ಮಾಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಒಣ ಚರ್ಮದ ಸೂಚನೆಗಳು ಶುಷ್ಕತೆ, ಒರಟುತನ ಮತ್ತು ಸ್ಕೇಲಿಸ್ ಒಬ್ಬರ ಚರ್ಮದಲ್ಲಿನ ಸೆರಾಮಿಡ್‌ಗಳ ಮಟ್ಟಕ್ಕೆ (ಚರ್ಮವನ್ನು ತೇವಗೊಳಿಸುವಂತಹ ಚರ್ಮದ ಕೋಶಗಳಲ್ಲಿ ಕಂಡುಬರುವ ಕೊಬ್ಬುಗಳು) ಸಂಬಂಧಿಸಿದೆ.

ಚರ್ಮವನ್ನು ತೇವವಾಗಿರಿಸಿಕೊಳ್ಳಿ

“ಚಳಿಗಾಲದಲ್ಲಿ, ಶುಷ್ಕ, ತಂಪಾದ ಗಾಳಿಯು ಚರ್ಮದ ತೇವಾಂಶವನ್ನು ತೆಗೆದುಹಾಕುತ್ತದೆ ಮತ್ತು ಚರ್ಮವು ಶುಷ್ಕತೆ ಮತ್ತು ತುರಿಕೆಗೆ ಒಳಗಾಗುತ್ತದೆ” ಎಂದು ದೆಹಲಿ ಮೂಲದ ಸೌಂದರ್ಯಶಾಸ್ತ್ರಜ್ಞರಾದ ಜೆನ್ನಿಫರ್ ನೋಸ್ಕೋರ್ ಹೇಳುತ್ತಾರೆ

ನಿಮ್ಮ ಚರ್ಮವನ್ನು ಹೈಡ್ರೀಕರಿಸಿದ ಮತ್ತು ತೇವವಾಗಿಡಲು ಅವರ ಸಲಹೆಗಳು:

ಸೌಮ್ಯವಾದ ಹೈಡ್ರೇಟಿಂಗ್ ಕ್ಲೆನ್ಸರ್ ಅನ್ನು ಬಳಸಿ: ಹೈಡ್ರೇಟಿಂಗ್ ಕ್ಲೆನ್ಸರ್ ಚರ್ಮದ ನೈಸರ್ಗಿಕ ತೇವಾಂಶವನ್ನು ತೆಗೆದುಹಾಕದೆ ಚರ್ಮದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಶುಷ್ಕ ಮತ್ತು ಬಿಗಿಯಾಗಿ ಕಾಣದಂತೆ ಮತ್ತು ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಶುದ್ಧೀಕರಣವು ರಕ್ತ ಪರಿಚಲನೆ ಸುಧಾರಿಸಲು ಮತ್ತು ವಿಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ದಿನಕ್ಕೆ ಕನಿಷ್ಠ ಎರಡು ಬಾರಿ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿ.

ಸನ್‌ಸ್ಕ್ರೀನ್ ಅತ್ಯಗತ್ಯ: ನಮ್ಮ ಚರ್ಮಕ್ಕೆ ಎಲ್ಲಾ ಋತುಗಳಲ್ಲಿ ಸನ್‌ಸ್ಕ್ರೀನ್ ಅಗತ್ಯವಿದೆ. ವರ್ಷದ ಯಾವುದೇ ಸಮಯದಲ್ಲಿ UV ಕಿರಣಗಳಿಂದ ಚರ್ಮವು ಹಾನಿಗೊಳಗಾಗಬಹುದು. ಖನಿಜ ಆಧಾರಿತ SPF ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೈಲುರಾನಿಕ್ ಆಮ್ಲ ಆಧಾರಿತ ಉತ್ಪನ್ನಗಳನ್ನು ಬಳಸಿ: ಹೈಲುರಾನಿಕ್ ಆಮ್ಲವು ಹೆಚ್ಚಿನ ನೀರನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಅದರ ಪ್ರಮುಖ ಪಾತ್ರವು ಜಲಸಂಚಯನ ಮತ್ತು ಸ್ಥಿತಿಸ್ಥಾಪಕತ್ವವಾಗಿದೆ (hydration and elasticity).

ಬಾಡಿ ಬಟರ್ ಬಳಸಿ: ಶಿಯಾ ಮತ್ತು ಕೋಕೋದಂತಹ ಪದಾರ್ಥಗಳೊಂದಿಗೆ ದೇಹ ಬೆಣ್ಣೆಯು ಚರ್ಮವನ್ನು ಹೈಡ್ರೀಕರಿಸುತ್ತದೆ. ಅವುಗಳ ದಪ್ಪ ಕೆನೆ ಸ್ಥಿರತೆ ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಚಳಿಗಾಲದಲ್ಲಿ ಶುಷ್ಕ ಚರ್ಮಕ್ಕೆ ಉತ್ತಮವಾಗಿದೆ.

ತುಟಿಗಳು ಮತ್ತು ಕಣ್ಣಿನ ಕೆಳಗಿನ ಆರೈಕೆ: ಒಣ ತುಟಿಗಳು ಚಳಿಗಾಲದಲ್ಲಿ ಕಂಡುಬರುವ ಮೊದಲ ಚಿಹ್ನೆಗಳಲ್ಲಿ ಒಂದು. ಇದರ ಅರ್ಥ ಚರ್ಮವು ಕಡಿಮೆ ಹೈಡ್ರೀಕರಿಸಲ್ಪಟ್ಟಿದೆ ಮತ್ತು ತೇವಾಂಶದ ಕೊರತೆಯಿದೆ ಎನ್ನುವುದಾಗಿದೆ. ಮಾಯಿಶ್ಚರೈಸಿಂಗ್ ಲಿಪ್ ಬಾಮ್ ಗಳಿಂದ ತುಟಿಗಳನ್ನು ಆರೈಕೆ ಮಾಡಬಹುದು. ಕಣ್ಣಿನ ಕೆಳಗಿನ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ ಮತ್ತು ಹಗಲು ಮತ್ತು ರಾತ್ರಿಯಲ್ಲಿ ಬಳಸಬಹುದಾದ ಹೈಡ್ರೇಟಿಂಗ್ ಐ ಕ್ರೀಮ್‌ಗಳನ್ನು ಬಳಸಿ ಕಣ್ಣುಗಳ ಕೆಳಗೆ ಆರೈಕೆ ಮಾಡಿಕೊಳ್ಳಬಹುದು.

ಯಾವುದು ಸೂಕ್ತ?

ಡಾ ಕಿಂಬರ್ಲಿ ಶಾವೋ, MD, ಸಾಮಾನ್ಯ ಚರ್ಮರೋಗಗಳ ವೈದ್ಯರು, ಡೇಟನ್, ಓಹಿಯೋ ಪ್ರಕಾರ “ನೀವು ಚಳಿಗಾಲದಲ್ಲಿ ರೆಟಿನಾಯ್ಡ್ಗಳ ಬಳಕೆಯ ಆವರ್ತನವನ್ನು ಕಡಿತಗೊಳಿಸಲು ಬಯಸಬಹುದು. ಮಾಯಿಶ್ಚರೈಸರ್ ಸ್ಯಾಂಡ್‌ವಿಚ್ ವಿಧಾನವನ್ನು ಬಳಸಲು ಅವರು ಸಲಹೆ ನೀಡುತ್ತಾರೆ. (ಚರ್ಮದಲ್ಲಿ ತೇವಾಂಶವನ್ನು ಹಿಡಿಯಲು ಲೇಯರಿಂಗ್ ಉತ್ಪನ್ನಗಳು). ರೆಟಿನಾಯ್ಡ್‌ಗಳು ವಿಟಮಿನ್-ಆಧಾರಿತ ಅಪ್ಲಿಕೇಶನ್‌ಗಳಾಗಿವೆ. ಇದು ಮೇಲ್ಮೈ ಚರ್ಮದ ಜೀವಕೋಶಗಳು ಮತ್ತು ಕಾಲಜನ್‌ನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ತೆಳ್ಳಗಿನ, ಲೋಷನ್-ಆಧಾರಿತ ಮಾಯಿಶ್ಚರೈಸರ್‌ಗಳಿಂದ ಭಾರವಾದ ಎಮೋಲಿಯಂಟ್ ಅಥವಾ ಆಕ್ಲೂಸಿವ್‌ಗೆ ಬದಲಾಯಿಸಲು ಡಾ ಶಾವೊ ಸೂಚಿಸುತ್ತಾರೆ. ಇದು ನೀರಿನ ನಷ್ಟವನ್ನು ತಡೆಯಲು ಚರ್ಮದ ಮೇಲೆ ಭೌತಿಕ ತಡೆಗೋಡೆಯನ್ನು ಸೃಷ್ಟಿಸುತ್ತದೆ. “ನಿಮ್ಮ CTM (ಶುದ್ಧೀಕರಣ, ಟೋನಿಂಗ್, ಮಾಯಿಶ್ಚರೈಸರ್) ದಿನಚರಿಯಲ್ಲಿ ಆಲ್ಕೋಹಾಲ್-ಆಧಾರಿತ ಟೋನರನ್ನು ಬಿಟ್ಟುಬಿಡಿ, ಏಕೆಂದರೆ ಇದು ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ” ಎಂದು ನೋಸ್ಕೋರ್ ಹೇಳುತ್ತಾರೆ.
ಅತ್ಯಂತ ಶೀತ ಪ್ರದೇಶಗಳಲ್ಲಿ ವಾಸಿಸುವವರಿಗೆ ರೂಮ್ ಹೀಟರ್ ಬಳಸುವಾಗ ಆರ್ದ್ರಕವನ್ನು(humidifier) ಬಳಸಲು ಶಾವೊ ಸಲಹೆ ನೀಡುತ್ತಾರೆ. ಹೀಟರ್ ಕೇವಲ ಬೆಚ್ಚಗಿಡುವುದಲ್ಲದೆ ತುಂಬಾ ಶುಷ್ಕ ಗಾಳಿಯನ್ನು ಉತ್ಪಾದಿಸುತ್ತದೆ. ಆದರೆ ಹುಮಿಡಿಫೈಯರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ” ಎಂದು ಶಾವೋ ಹೇಳುತ್ತಾರೆ.
ವಿಶೇಷವಾಗಿ ಚಳಿಗಾಲದಲ್ಲಿ ನಾವು ಕಡಿಮೆ ನೀರು ಕುಡಿಯುತ್ತೇವೆ. ವಾಸ್ತವದಲ್ಲಿ ಚಳಿಗಾಲದಲ್ಲಿ ಹೆಚ್ಚುನೀರನ್ನು ಸೇವಿಸುವುದು ಮುಖ್ಯ ಎಂದು ನೋಸ್ಕೋರ್ ಹೇಳುತ್ತಾರೆ. ಹವಾಮಾನವು ತಂಪಾಗಿದ್ದರೂ ಸಹ ಅತಿಯಾದ ಬಿಸಿ ನೀರಿನ ಸ್ನಾನವನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಇದು ಚರ್ಮವನ್ನು ಒಣಗಿಸಲು ಕಾರಣವಾಗಬಹುದು.
“ಬಿಸಿನೀರಿನ ಸ್ನಾನಕ್ಕಿಂತ ಹೆಚ್ಚು ಆರಾಮದಾಯಕವಾದದ್ದು ಯಾವುದೂ ಇಲ್ಲ. ಆದರೆ ಆ ಬಿಸಿನೀರು ನಿಮ್ಮ ತ್ವಚೆಯ ನೈಸರ್ಗಿಕ ತೈಲಗಳನ್ನು ತೆಗೆದುಹಾಕಬಹುದು ಮತ್ತು ಹೆಚ್ಚು ಶುಷ್ಕತೆಗೆ ಕಾರಣವಾಗಬಹುದು. ಆದ್ದರಿಂದ, ಬಿಸಿ ಸ್ನಾನವನ್ನು ತಪ್ಪಿಸಬೇಕು.
“ನಿಮ್ಮ ಆಹಾರಕ್ರಮದ ಮೇಲೆ ನಿಗಾ ಇರಿಸಿ. ನೀವು ಪೌಷ್ಟಿಕಾಂಶದ ಮೌಲ್ಯದಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ. ಒಣ ತುಟಿಗಳಿಗೆ ಸರಳ ಪೆಟ್ರೋಲಿಯಂ ಜೆಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ. ವಿಶೇಷವಾಗಿ ನೀವು ಮಲಗುವ ಮೊದಲು ದಪ್ಪ ಪದರ ಲೇಪಿಸಿದರೆ ನಿಮ್ಮ ತುಟಿಗಳು ಒಡೆದು ಒಣಗದಂತೆ ತಡೆಯುತ್ತದೆ. ಚಳಿಗಾಲದಲ್ಲಿ ಮ್ಯಾಟ್ ಲಿಪ್‌ಸ್ಟಿಕ್, ಕ್ರೀಮ್ ಲಿಪ್‌ಸ್ಟಿಕ್ ಮತ್ತು ಗ್ಲಾಸ್ ಧರಿಸುವುದನ್ನು ತಪ್ಪಿಸಿ ಎಂದು ನೋಸ್ಕೋರ್ ಹೇಳುತ್ತಾರೆ.

ಕಿಂಬರ್ಲಿ ಶಾವೊ ಅವರ ಕೆಲವು ಸಲಹೆಗಳು

  • ನಿಮ್ಮ ಬ್ಯಾಗ್‌ನಲ್ಲಿ, ಕಾರಿನಲ್ಲಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಯಿಶ್ಚರೈಸಿಂಗ್ ಕ್ರೀಮ್ ಇಟ್ಟುಕೊಳ್ಳಿ ಮತ್ತು ಅವುಗಳನ್ನು ನಿಯಮಿತವಾಗಿ ಬಳಸಿ
  • ಗ್ಲಿಸರಿನ್, ಸೆರಾಮಿಡ್‌ಗಳು ಮತ್ತು ಡೈಮೆಥಿಕೋನ್‌ನಂತಹ ಪದಾರ್ಥಗಳನ್ನು ಹೊಂದಿರುವ ಉತ್ಪನ್ನಗಳು ತೇವಾಂಶವನ್ನು ಸೆಳೆಯಲು ಮತ್ತು ಚರ್ಮದ ತಡೆಗೋಡೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ
  • ಪಾತ್ರೆಗಳನ್ನು ತೊಳೆಯುವಾಗ ಅಥವಾ ಬಟ್ಟೆ ಒಗೆಯುವಾಗ ಕೈಗವಸುಗಳನ್ನು ಧರಿಸಿ
  • ಮುಖಕ್ಕೆ ಬಳಸುವ ಮಾಸ್ಕ್ ಅಥವಾ ಸ್ಕಾರ್ಫ್‌ಗಳನ್ನು ನಿಯಮಿತವಾಗಿ ಶುಚಿಗೊಳಿಸಿ
    ಸ್ಕ್ರಬ್ಬಿಂಗ್ (ಎಕ್ಸ್‌ಫೋಲಿಯೇಟಿಂಗ್) ಪ್ರಯೋಜನಕಾರಿಯಾಗಿದ್ದರೂ, ಅತಿಯಾಗಿ ಉಜ್ಜಬೇಡಿ (ಎಕ್ಸ್‌ಫೋಲಿಯೇಟ್ ಮಾಡಬೇಡಿ)

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ತೃಪ್ತಿಕರವಾದ ನಿಕಟ ಸಂಬಂಧಗಳನ್ನು ಆನಂದಿಸಬೇಕಾದರೆ ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತಜ್ಞರು ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಕಡಿಮೆ-ತಿಳಿದಿರುವ ಸಲಹೆಗಳನ್ನು ನೀಡಿದ್ದಾರೆ.  
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ