0

0

0

ಈ ಲೇಖನದಲ್ಲಿ

Skin Care Routine: ಆರೋಗ್ಯಕರ ತ್ವಚೆ ಆರೈಕೆಯ ದಿನಚರಿಗಳು
13

Skin Care Routine: ಆರೋಗ್ಯಕರ ತ್ವಚೆ ಆರೈಕೆಯ ದಿನಚರಿಗಳು

ನಿಮ್ಮ ಚರ್ಮದ ಆರೈಕೆಯಿಂದಾಗಿ ಅದರ ಬಾಹ್ಯ ಸ್ವರೂಪ ಸುಧಾರಿಸುವುದರೊಂದಿಗೆ ಆರೋಗ್ಯಕರ ಚರ್ಮದ ತಡೆಗೋಡೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ

ಆರೋಗ್ಯಕರ ತ್ವಚೆ ಆರೈಕೆಯ ದಿನಚರಿಗಳು

ಪರಿಸರದ ಒತ್ತಡಕಾರಕಗಳು ಮತ್ತು ಜೀವನಶೈಲಿ ಅಭ್ಯಾಸಗಳಿಗೆ ನಮ್ಮ ಚರ್ಮವನ್ನು ನಿರಂತರವಾಗಿ ಒಡ್ಡಿಕೊಳ್ಳುವುದರ ಸುಂಕವನ್ನು ಅದರ ಬಾಹ್ಯ ಸ್ವರೂಪ ತೆರಬೇಕಾಗಬಹುದು. ಉತ್ತಮವಾಗಿ ಕಾರ್ಯನಿರ್ವಹಿಸುವ ಸ್ಕಿನ್‌ಕೇರ್ ಉತ್ಪನ್ನ ಯಾವುದು ಎಂದು ತಿಳಿದುಕೊಳ್ಳಲು ಅದನ್ನು ಪದೇ ಪದೇ ಬದಲಾಯಿಸುವುದರಿಂದ ಅಗಾಧ ಪರಿಣಾಮವುಂಟಾಗಿ ಪಿಗ್ಮೆಂಟೇಶನ್, ಸುಕ್ಕುಗಳು ಮತ್ತು ಕುಗ್ಗುವಿಕೆ ಎಲ್ಲವನ್ನೂ ಎದುರಿಸಬೇಕಾಗಬಹುದು.

ನಮ್ಮಲ್ಲಿ ಅನೇಕರಿಗೆ ನಾವು ನಮ್ಮ ಚರ್ಮಕ್ಕೆ ಹಾನಿಯುಂಟುಮಾಡಿಕೊಳ್ಳುತ್ತಿರುವುದು ತಪ್ಪು ಅಭ್ಯಾಸಗಳ ಚಿಹ್ನೆಗಳು ಗೋಚರಿಸುವವರೆಗೂ ಅರಿವಿಗೆ ಬರುವುದಿಲ್ಲ. ಹ್ಯಾಪಿಯೆಸ್ಟ್ ಹೆಲ್ತ್ ಸಾಮಾನ್ಯ ತ್ವಚೆಯ ಸಮಸ್ಯೆಗಳು ಮತ್ತು ಅವುಗಳನ್ನು ನಿಯಂತ್ರಿಸುವ ವಿಧಾನಗಳನ್ನು ಡಿಕೋಡ್ ಮಾಡಲು ತಜ್ಞರೊಂದಿಗೆ ಚರ್ಚಿಸಿದೆ.

ಚರ್ಮ ಹಾನಿಯ ಸಾಮಾನ್ಯ ಕಾರಣಗಳು

ಚಿಕ್ಕ ವಯಸ್ಸಿನಲ್ಲಿ ಸೂಕ್ತವಾದ ಸನ್ ಪ್ರೊಟೆಕ್ಷನ್‌ಗಳನ್ನು ಬಳಸದಿರುವುದು ಚರ್ಮಕ್ಕೆ ಹಾನಿ, ವಯಸ್ಸಾಗುವಿಕೆ, ಪಿಗ್ಮೆಂಟೇಶನ್ ಸಮಸ್ಯೆಗಳು ಮತ್ತು ಅಸ್ವಸ್ಥತೆಗಳಿಗೆ ಕಾರಣವಾಗಬಹುದು ಎಂದು ಮುಂಬೈನ ಎಲಿಮೆಂಟ್ಸ್ ಆಫ್ ಎಸ್ತಟಿಕ್ಸ್ ಚೈನ್ ಆಫ್ ಕ್ಲಿನಿಕ್‌ನ ಮುಖ್ಯ ಚರ್ಮರೋಗ ತಜ್ಞೆ ಮತ್ತು ವೈದ್ಯಕೀಯ ನಿರ್ದೇಶಕಿಯಾದ ಡಾ. ಸ್ತುತಿ ಖರೆ ಶುಕ್ಲಾ ಅವರು ಎಚ್ಚರಿಸಿದ್ದಾರೆ. ಚರ್ಮರೋಗ ತಜ್ಞರನ್ನು ಸಂಪರ್ಕಿಸಿ ಮತ್ತು ಕಾಡಿಗೆ, ಐಲೈನರ್, ಲಿಪ್‌ಸ್ಟಿಕ್ ಮತ್ತು ಹೇರ್ ಡೈಯಂತಹ ಸೌಂದರ್ಯವರ್ಧಕಗಳಲ್ಲಿ ಕಂಡುಬರುವ ಹಾನಿಕಾರಕ ಲೋಹಗಳು ಅದರಲ್ಲೂ ಸೀಸದಂತಹ ಧಾತುಗಳನ್ನು ಒಳಗೊಂಡಿರುವ ಉತ್ಪನ್ನಗಳ ಬಳಕೆಯಿಂದಾಗಿ ಚರ್ಮದ ಕ್ಯಾನ್ಸರ್‌ನ ಅಪಾಯ ಹೆಚ್ಚುವುದರಿಂದಾಗಿ, ಅವುಗಳ ಉಪಯೋಗವನ್ನು ಆದಷ್ಟು ಮಾಡದಿರುವಂತೆ ಅವರು ಸಲಹೆ ನೀಡುತ್ತಾರೆ.

ಕೊಚ್ಚಿಯ ಅಮೃತಾ ಆಸ್ಪತ್ರೆಯ ಚರ್ಮಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಸೌಮ್ಯ ಜಗದೀಶನ್ ಅವರು ಚರ್ಮದ ಹಾನಿಗೆ ಈ ಕೆಳಗಿನ ಐದು ಕಾರಣಗಳನ್ನು ಸೂಚಿಸುತ್ತಾರೆ ಮತ್ತು ಅದನ್ನು ನಿಯಂತ್ರಿಸುವ ಮಾರ್ಗಗಳನ್ನು ಸೂಚಿಸುತ್ತಾರೆ:

ಸೂರ್ಯ ಮತ್ತು ನೇರಳಾತೀತ ಕಿರಣಗಳಿಗೆ ಒಡ್ಡಿಕೊಳ್ಳುವುದು

ಸನ್‌ಸ್ಕ್ರೀನ್‌ಗಳ ಸರಿಯಾದ ಅನ್ವಯವು ಸೂರ್ಯ ಮತ್ತು ನೇರಳಾತೀತಕ್ಕೆ ಒಡ್ಡಿಕೊಳ್ಳುವುದರ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಔದ್ಯೋಗಿಕ ಪ್ರೊಫೈಲ್ ಮತ್ತು ಕ್ಲೈಮ್ಯಾಕ್ಟಿಕ್ ಪರಿಸ್ಥಿತಿಗಳಿಗೆ ಸೂಕ್ತವಾಗುವ ಸನ್‌ಸ್ಕ್ರೀನ್‌ಗಳನ್ನು ಆಯ್ಕೆ ಮಾಡಲು ಮತ್ತು ಬದಲಾಯಿಸಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮವಾಗಿದೆ.

ಆಹಾರ, ಪೋಷಣೆ ಮತ್ತು ಹೈಡ್ರೇಷನ್

ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಅತ್ಯಂತ ಮಹತ್ವದ್ದಾಗಿದೆ. ಮೊಡವೆಯಿಂದ ಕೂಡಿದ ಚರ್ಮವನ್ನು ಹೊಂದಿರುವವರು ಡೈರಿ ಉತ್ಪನ್ನಗಳು ಮತ್ತು ಹೆಚ್ಚಿನ ಸಕ್ಕರೆ ಆಹಾರಗಳ ಸೇವನೆಯನ್ನು ನಿಗ್ರಹಿಸಬೇಕು. ನಾವು ಸಾಮಾನ್ಯವಾಗಿ ವಿಟಮಿನ್ ಡಿ, ಬಿ 12, ಕಬ್ಬಿಣ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳ ಕೊರತೆಗಳನ್ನು ಎದುರಿಸುತ್ತೇವೆ ಮತ್ತು ಸುಮ್ಮನೇ ಮಾತ್ರೆಗಳನ್ನು ನುಂಗುವ ಬದಲು ನಾವು ಆಹಾರ ಪದ್ಧತಿಗಳ ಬಗ್ಗೆ ವೈಯುಕ್ತೀಕರಿಸಿದ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮವಾಗಿದೆ.

ಹಾನಿಕರ ಸ್ಕಿನ್‌ಕೇರ್ ಅಭ್ಯಾಸಗಳು

ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಶಿ ರಾಶಿ ಉತ್ಪನ್ನಗಳು ಮತ್ತು ಇನ್‌ಪ್ಲುಯೆನ್ಸೆರ್‌ಗಳಲ್ಲಿ ಕೆಲವು ಸ್ಕಿನ್‌ಕೇರ್ ಉತ್ಪನ್ನಗಳು ಮತ್ತು ಅಭ್ಯಾಸಗಳು ಹಾನಿಯನ್ನು ಉಂಟುಮಾಡಬಹುದು. ಹೊಸ ಉತ್ಪನ್ನ ಅಥವಾ ಪದ್ಧತಿಗೆ ಬದಲಾಗುವಾಗ ನಮ್ಮ ಸುರಕ್ಷತೆ ನಮ್ಮ ಆದ್ಯತೆಯಾಗಿರಬೇಕು, ಹಾಗೆಯೇ ಎಲ್ಲಾ ಮೇಕ್ಅಪ್, ಹೈಡ್ರೇಷನ್ ಮತ್ತು ಸನ್ ಪ್ರೊಟೆಕ್ಷನ್ ಅನ್ನು ತೆಗೆದುಹಾಕುವುದರಿಂದ ಮುಖದ ಚರ್ಮವನ್ನು ಸರಿಯಾಗಿ ಸ್ವಚ್ಚಗೊಳಿಸಿಕೊಳ್ಳುವ ತನಕ ಮೂಲಭೂತ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.

ಔಷಧೋಪಚಾರ

ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಂತಹ ಆರೋಗ್ಯ ಪರಿಸ್ಥಿತಿಗಳಿಗೆ ತೆಗೆದುಕೊಳ್ಳುವ ಕೆಲವು ಔಷಧೋಪಚಾರಗಳು ಚರ್ಮದ ಶುಷ್ಕತೆಗೆ ಕಾರಣವಾಗಬಹುದು. ಇತರ ಕೆಲವು ಔಷಧೋಪಚಾರಗಳು ಪಿಗ್ಮೆಂಟೇಶನ್, ತುರಿಕೆ ಮತ್ತು ದದ್ದುಗಳನ್ನು ಉಂಟುಮಾಡಬಹುದು. ಚರ್ಮದ ಮೇಲೆ ಹಾನಿಯ ಚಿಹ್ನೆಗಳು ನಮ್ಮ ಗಮನಕ್ಕೆ ಬಂದರೆ, ನಮ್ಮ ವೈದ್ಯರೊಂದಿಗೆ ಔಷಧಿಗಳ ಸಂಭವನೀಯ ಪರಿಣಾಮಗಳ ಬಗ್ಗೆ ಚರ್ಚಿಸಬೇಕು.

ಚರ್ಮವನ್ನು ವಯಸ್ಸಾಗುವಿಕೆಯಿಂದ ರಕ್ಷಿಸುವುದು

ವಯಸ್ಸಾಗುವಿಕೆ ನಿರೋಧಕ ಚಿಕಿತ್ಸೆಗಳಾದ ಟಾಪಿಕಲ್ ರೆಟಿನಾಯ್ಡ್‌ಗಳು, ವಿಟಮಿನ್ ಸಿ, ಲೇಸರ್‌ಗಳು, ಪೀಲ್‌ಗಳು ಮತ್ತು ಚುಚ್ಚುಮದ್ದುಗಳು ಚರ್ಮದ ಹಾನಿಯನ್ನು ತಡೆಗಟ್ಟಲು ಸಹಾಯಕವಾಗಿವೆ ಎನ್ನುವುದು ಡಾ.ಜಗದೀಸನ್ ಅವರ ಅಭಿಪ್ರಾಯವಾಗಿದೆ. ಪ್ರತಿ ಉತ್ಕರ್ಷಕ-ಭರಿತ ಆಹಾರಗಳು ನಮ್ಮ ಆಹಾರಕ್ರಮದ ಭಾಗವಾಗಿರಲಿ ಎಂದು ಅವರು ಸಲಹೆ ನೀಡುತ್ತಾರೆ.

ವಿಟಮಿನ್ ಸಿ ವರ್ಣದ್ರವ್ಯದ ಉತ್ಪಾದನೆಯನ್ನು ನಿರ್ಬಂಧಿಸುವ ಮೂಲಕ ಕಪ್ಪು ಕಲೆಗಳು ಉಂಟಾಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಿಟಮಿನ್ ಸಿ ಸುಕ್ಕುಗಳನ್ನು ಸುಧಾರಿಸುತ್ತದೆ ಎಂದು ಕೆಲವು ಕ್ಲಿನಿಕಲ್ ಅಧ್ಯಯನಗಳಿಂದ ಸಾಬೀತಾಗಿದೆ.  ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಕ್ಯಾಲಿಫೋರ್ನಿಯಾದ ಲಾ ಜೊಲ್ಲಾದಲ್ಲಿ ಡರ್ಮಟಾಲಜಿ ವಿಭಾಗದ MD ಆಗಿರುವ ರಿಚರ್ಡ್ ಇ ಫಿಟ್ಜ್‌ಪ್ಯಾಟ್ರಿಕ್ ಮತ್ತು ಅವರ ತಂಡ ನಡೆಸಿರುವ ಅಧ್ಯಯನದ ಪ್ರಕಾರ ಕನಿಷ್ಠ ಮೂರು ತಿಂಗಳ ಕಾಲ ವಿಟಮಿನ್ ಸಿ ಸೂತ್ರೀಕರಣದ ದೈನಂದಿನ ಬಳಕೆಯು ಮುಖ ಮತ್ತು ಕತ್ತಿನ ಸಣ್ಣ ಮತ್ತು ದೊಡ್ಡ ಸುಕ್ಕುಗಳ ಸ್ವರೂಪವನ್ನು ಸುಧಾರಿಸುತ್ತದೆ. ಒಟ್ಟಾರೆ ಚರ್ಮದ ರಚನೆ ಮತ್ತು ಬಾಹ್ಯ ಸ್ವರೂಪವನ್ನು ಸುಧಾರಿಸಲು ಸಹ ಇದು ಸಹಾಯಕವಾಗಿದೆ.

ಯಾವುದೇ ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳಿಗೆ, ಚಿಕ್ಕ ವಯಸ್ಸಿನಿಂದಲೇ ಸನ್‌ಸ್ಕ್ರೀನ್ ಮತ್ತು ರೆಟಿನಾಲ್ ಅನ್ನು ಬಳಸುವ ಸಲಹೆಯನ್ನು ಡಾ. ಶುಕ್ಲಾ ನೀಡುತ್ತಾರೆ. “20 ರ ವಯಸ್ಸಿನಲ್ಲೇ ಕೊಲಾಜೆನ್ ಅನ್ನು ತೆಗೆದುಕೊಳ್ಳಲು ಪ್ರಾರಂಭಿಸಿ ಮತ್ತು ಗ್ಲುಟಾಥಯೋನ್‌ನಂತಹ ಕೆಲವು ಪ್ರತಿ ಉತ್ಕರ್ಷಕಗಳು ಚರ್ಮವನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ ಮತ್ತು ವಯಸ್ಸಾಗುವಿಕೆ ನಿರೋಧಕದ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ” ಎಂದು ಅವರು ಹೇಳುತ್ತಾರೆ.

ಕೊಲಾಜೆನ್ ಸಂಯೋಜಕ ಅಂಗಾಂಶದ ಅತ್ಯಗತ್ಯ ಅಂಶವಾಗಿದೆ ಮತ್ತು ದೇಹದ ಜೀವಕೋಶಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದು ಚರ್ಮಕ್ಕೆ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಸಹ ಒದಗಿಸುತ್ತದೆ. 2019 ರ ಅಧ್ಯಯನದ ಪ್ರಕಾರ, ಕೊಲಾಜೆನ್ ಪೂರಕವು ಚರ್ಮದ ಹೈಡ್ರೇಷನ್, ಸ್ಥಿತಿಸ್ಥಾಪಕತ್ವ, ಒರಟುತನ ಮತ್ತು ಸಾಂದ್ರತೆಯನ್ನು ಸುಧಾರಿಸುತ್ತದೆ.

ಚರ್ಮದ ಮೇಲೆ ಧೂಮಪಾನದ ಪರಿಣಾಮ

ಧೂಮಪಾನವು ಚರ್ಮದ ಕೊಲಾಜೆನ್ ಮೇಲೆ ಪರಿಣಾಮ ಬೀರುತ್ತದೆ. “ಧೂಮಪಾನವು ಕೊಲಾಜೆನ್‌ಗೆ ಅಡ್ಡಿಯುಂಟುಮಾಡಿ ಚರ್ಮವು ಅದರ ಸ್ಥಿತಿಸ್ಥಾಪಕತ್ವ ಮತ್ತು ಬಿಗಿತವನ್ನು ಕಳೆದುಕೊಳ್ಳುವಂತೆ ಮಾಡುವುದರಿಂದ ಸುಕ್ಕುಗಳು ಮತ್ತು ಚರ್ಮವು ಜೋತುಬೀಳುವುದಕ್ಕೆ ಕಾರಣವಾಗುತ್ತದೆ” ಎನ್ನುತ್ತಾರೆ ಡಾ ಶುಕ್ಲಾ. ಧೂಮಪಾನವನ್ನು ತ್ಯಜಿಸುವುದು ಉತ್ತಮ ಆಯ್ಕೆಯಾಗಿದೆ; ಆದರೆ, ಒಮ್ಮೆಗೇ ಧೂಮಪಾನವನ್ನು ತ್ಯಜಿಸುವುದು ಸಾಧ್ಯವಾಗದಿದ್ದರೆ, ಪೂರ್ತಿಯಾಗಿ ನಿಲ್ಲಿಸುವವರೆಗೆ ಸಾಧ್ಯವಾಗುವಷ್ಟು ಕಡಿಮೆ ಮಾಡುತ್ತಾ ಬನ್ನಿ ಎಂದು ಡಾ.ಜಗದೀಸನ್ ಅವರು ಸಲಹೆ ನೀಡುತ್ತಾರೆ.

ಆರೋಗ್ಯಕರ ಚರ್ಮದ ತಡೆಗೋಡೆಗಾಗಿ ಸಲಹೆಗಳು 

ಆರೋಗ್ಯಕರ ಚರ್ಮದ ತಡೆಗೋಡೆ ಚರ್ಮವು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ ಮತ್ತು ಮಾಲಿನ್ಯ, ನೇರಳಾತೀತ ಕಿರಣಗಳು ಮತ್ತು ಕಠಿಣ ಹವಾಮಾನದಂತಹ ಪರಿಸರದ ಒತ್ತಡಗಳಿಂದ ರಕ್ಷಿಸುತ್ತದೆ. ಹಗಲಿನ ಸಮಯದಲ್ಲಿ ಸ್ವಚ್ಚಗೊಳಿಸಿಕೊಂಡು ಮಾಯಿಶ್ಚರೈಸರ್ ಮತ್ತು ಸನ್‌ಸ್ಕ್ರೀನ್ ಅನ್ನು ಹಚ್ಚಿಕೊಳ್ಳಲು ಮತ್ತು ಸಂಜೆ ಕ್ಲೆನ್ಸರ್ ಮತ್ತು ಮಾಯಿಶ್ಚರೈಸರ್ ಅನ್ನು ಬಳಸಲು ಡಾ. ಶುಕ್ಲಾ ಅವರು  ಶಿಫಾರಸು ಮಾಡುತ್ತಾರೆ. “ ಪಿಗ್ಮೆಂಟೇಶನ್‌ನಿಂದ ಬಳಲುತ್ತಿರುವವರು ಚರ್ಮವನ್ನು ಬಿಳುಪಾಗಿಸುವ ಸೀರಮ್‌ಗಳು ಮತ್ತು ರೆಟಿನಾಲ್ ಅನ್ನು ವಯಸ್ಸಾಗುವಿಕೆ ನಿರೋಧಕ ಚಿಕಿತ್ಸೆಯಲ್ಲಿ ಬಳಸಬಹುದು.  ರಾತ್ರಿಯ ಸಮಯದಲ್ಲಿ ಯಾವಾಗಲೂ ಸಕ್ರಿಯ ಪದಾರ್ಥವನ್ನು ಬಳಸಬೇಕು, ಏಕೆಂದರೆ ನಿದ್ರೆಯ ಸಮಯದಲ್ಲಿ ನಮ್ಮ ಚರ್ಮವು ಸ್ವದುರಸ್ತಿಗೆ ಒಳಗಾಗುತ್ತದೆ” ಎನ್ನುತ್ತಾರೆ ಅವರು.

2019 ರಲ್ಲಿ ನಡೆಸಲಾದ ಪುನರ್ಪರಿಶೀಲನೆಯು ಟಾಪಿಕಲ್ ರೆಟಿನಾಯ್ಡ್‌ಗಳು ಮೊಡವೆ ಚಿಕಿತ್ಸೆಯಲ್ಲಿ ಬಳಸಬಹುದಾದ ಸುರಕ್ಷಿತ ಮತ್ತು ವಿಶ್ವಾಸಾರ್ಹ ಪರಿಹಾರವಾಗಿದೆ ಎಂದು ಸೂಚಿಸಿದೆ. ಅದೇ ಪುನರ್ಪರಿಶೀಲನೆಯ ಸಂಶೋಧನೆಗಳು ರೆಟಿನಾಲ್ ಕೊಲಾಜೆನ್ ರಚನೆ ಮತ್ತು ಜೀವಕೋಶದ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದು ಬಹಿರಂಗಪಡಿಸಿದೆ.

“ಶುಚಿಗೊಳಿಸಿ, ಹೈಡ್ರೇಷನ್, ರಕ್ಷಿಸು ಎಂಬುದು ಅನುಸರಿಸಬೇಕಾದ ಮಂತ್ರವಾಗಿದೆ. ತಜ್ಞರ ಸಲಹೆಯ ಪ್ರಕಾರ ರೆಟಿನಾಲ್, ವಿಟಮಿನ್ ಸಿ ಅಥವಾ ಗ್ಲೈಕೋಲಿಕ್‌ನಂತಹ ಸಕ್ರಿಯ ಪದಾರ್ಥಗಳನ್ನು ಬಳಸಿ, ”ಎಂದು ಡಾ ಜಗದೀಸನ್ ಅವರು ಸೂಚಿಸುತ್ತಾರೆ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

eighteen − ten =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ