0

0

0

ಈ ಲೇಖನದಲ್ಲಿ

Insomnia Treatments: ನಿದ್ರಾಹೀನತೆಯನ್ನು ಗೆಲ್ಲುವುದು ಹೇಗೆ
47

Insomnia Treatments: ನಿದ್ರಾಹೀನತೆಯನ್ನು ಗೆಲ್ಲುವುದು ಹೇಗೆ

ಆರೋಗ್ಯಕರ ಜೀವನಶೈಲಿ, ಸರಿಯಾದ ಆಹಾರಾಭ್ಯಾಸಗಳು ಮತ್ತು ಧ್ಯಾನದಿಂದ ಬಹುತೇಕ ನಿದ್ರಾಹೀನತೆಯ ಪ್ರಕರಣಗಳನ್ನು ನಿಭಾಯಿಸಬಹುದು
ನಿದ್ರಾಹೀನತೆಯನ್ನು ಗೆಲ್ಲುವುದು ಹೇಗೆ
ಚಿತ್ರ: ಅನಂತ ಸುಬ್ರಹ್ಮಣ್ಯಂ

ನಿದ್ರಾಹೀನತೆ ಎಂಬುದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ತೀವ್ರ, ಮರುಕಳಿಸುವ ಅಥವಾ ದೀರ್ಘಕಾಲಿಕವಾಗಿ ಕಾಡುವ ಅಸ್ವಸ್ಥತೆಯಾಗಿದೆ. ಇದು ಹಲವಾರು ನಿದ್ರಾ ಅಸ್ವಸ್ಥತೆಗಳ ತಾತ್ಕಾಲಿಕ ಲಕ್ಷಣವಾಗಿರಬಹುದಾದರೂ, ಸಾಮಾನ್ಯವಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿತಿಗಳೊಂದಿಗೂ ಉಂಟಾಗುತ್ತದೆ.

“ನಿದ್ರಾಹೀನತೆಯೆಂದರೆ, ನಿದ್ರೆ ಮಾಡಲು ಕಷ್ಟವಾಗುವುದು ಅಥವಾ ರಾತ್ರಿ ಹೊತ್ತಿನಲ್ಲಿ ಎಚ್ಚರಗೊಂಡು ಮತ್ತೆ ನಿದ್ರಿಸಲು ಸಾಧ್ಯವಾಗದೇ ಇರುವುದು. ಅಲ್ಲದೇ ಬೆಳಗ್ಗೆ ನೀವು ಸಾಮಾನ್ಯವಾಗಿ ಏಳುವ ಸಮಯಕ್ಕಿಂತ ಮೊದಲೇ ಎಚ್ಚರವಾಗುವುದು ಮತ್ತು ಉತ್ತಮ ಗುಣಮಟ್ಟದ ನಿದ್ರೆ ಪಡೆಯದೇ, ಬೆಳಗ್ಗೆ ಏಳುವಾಗ ಉಲ್ಲಾಸ ಇಲ್ಲದಿರುವುದೂ ಇದನ್ನೇ ಸೂಚಿಸುತ್ತದೆ” ಎಂದು ಅಮೆರಿಕದ ನಿದ್ರಾ ಮನಶಾಸ್ತ್ರಜ್ಞೆ ಮತ್ತು ಸಮಗ್ರ ನಿದ್ರಾ ಸ್ವಾಸ್ಥ್ಯ ಕನ್ಸಲ್ಟೆಂಟ್ ಡಾ.ಸಾರಾ ಸಿಲ್ವರ್‌ಮ್ಯಾನ್ ಅವರು ಹ್ಯಾಪಿಯೆಸ್ಟ್ ಹೆಲ್ತ್‌ಗೆ ಹೇಳಿದ್ದಾರೆ.

ಒಬ್ಬ ವ್ಯಕ್ತಿಗೆ ಸಾಮಾನ್ಯವಾಗಿ ಎಂಟು ಗಂಟೆಗಳ ನಿದ್ರೆಯ ಅವಶ್ಯಕತೆ ಇರುತ್ತದೆ ಎಂದು ಹೆಚ್ಚಿನ ತಜ್ಞರು ಹೇಳುತ್ತಾರೆ. ಆದರೆ ಅಮೆರಿಕನ್ ಅಕೆಡೆಮಿ ಆಫ್ ಸ್ಲೀಪ್ ಮೆಡಿಸಿನ್ ಪ್ರಕಾರ, 30-35 ಪ್ರತಿಶತದಷ್ಟು ವಯಸ್ಕರು ನಿದ್ರಾಹೀನತೆಯ ಸಂಕ್ಷಿಪ್ತ ಲಕ್ಷಣಗಳನ್ನು ಹೊಂದಿದ್ದು, 15-20 ಪ್ರತಿಶತದಷ್ಟು ಜನರು ಮೂರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ತೀವ್ರ ನಿದ್ರಾಹೀನತೆಯನ್ನು ಅನುಭವಿಸುತ್ತಿರುತ್ತಾರೆ ಮತ್ತು 10 ಪ್ರತಿಶತದಷ್ಟು ಜನರಲ್ಲಿ ಕನಿಷ್ಠ ಮೂರು ತಿಂಗಳಲ್ಲಿ ಮೂರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ದೀರ್ಘಕಾಲಿಕ ನಿದ್ರಾಹೀನತೆಯು ಉಂಟಾಗುತ್ತದೆ.

ಜರ್ನಲ್ ಆಫ್ ಕ್ಲಿನಿಕಲ್ ಸ್ಲೀಪ್ ಮೆಡಿಸಿನ್‌ನಲ್ಲಿ ಪ್ರಕಟವಾದ ಲೇಖನದಲ್ಲಿ, ಬಹುತೇಕ ನಿದ್ರಾಹೀನತೆಯ ಪ್ರಕರಣಗಳು ಚಿಕಿತ್ಸೆಯಿಲ್ಲದೆಯೇ ಗುಣವಾಗುತ್ತದೆ, ನಿದ್ರಾಹೀನತೆಯ ಲಕ್ಷಣಗಳನ್ನು ಹೊಂದಿರುವ ಇನ್ನುಳಿದ ಕೆಲವರಲ್ಲಿ (~7 ಪ್ರತಿಶತದಷ್ಟು ಜನರಲ್ಲಿ), ದೀರ್ಘಕಾಲಿಕ ನಿದ್ರಾಹೀನತೆಯ ಅಸ್ವಸ್ಥತೆಗಳು ಉಂಟಾಗಬಹುದು, ಇದನ್ನು ಕನಿಷ್ಠ ಮೂರು ತಿಂಗಳಲ್ಲಿ ವಾರಕ್ಕೆ ಕನಿಷ್ಠ ಮೂರು ರಾತ್ರಿಗಳಲ್ಲಿ ನಿದ್ರೆಯ ಸಮಸ್ಯೆ ಹೊಂದಿರುವವರು ಎಂದು ವ್ಯಾಖ್ಯಾನಿಸಲಾಗುತ್ತದೆ ಮತ್ತು ಇದಕ್ಕೆ ಚಿಕಿತ್ಯೆಯ ಅಗತ್ಯ ಇರುತ್ತದೆ. ವಿಶ್ವಾದ್ಯಂತ ಗೂಗಲ್ ಟ್ರೆಂಡ್ಸ್ ಡೇಟಾವು, ಕಳೆದ 16 ವರ್ಷಗಳಲ್ಲಿ ಸ್ಲೀಪ್ ಅಪ್ನಿಯಾ, ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್ ಮತ್ತು ನ್ಯಾಕ್ರೋಲೆಪ್ಸಿ ಎಂಬ ಮೂರು ಪ್ರಮುಖ ನಿದ್ರಾ ಅಸ್ವಸ್ಥತೆಗಳಿಗೆ ಹೋಲಿಸಿದರೆ, “ನಿದ್ರಾಹೀನತೆ” ಕುರಿತಾದ ಗೂಗಲ್ ಸರ್ಚ್ ಕ್ವೆರಿಗಳು ತೀರಾ ಹೆಚ್ಚಿರುವುದನ್ನು ತೋರಿಸಿದೆ ಎಂದು ಅಧ್ಯಯನವೊಂದು ಹೇಳಿದೆ.

ಆಸ್ಟ್ರೇಲಿಯದ ಮೆಲ್ಬೋರ್ನ್ ಮೂಲದ ಲಾಭರಹಿತ ಆರೋಗ್ಯ ಪ್ರಚಾರ ಚಾರಿಟಿ ಆಧಾರಿತ ಸ್ಲೀಪ್ ಹೆಲ್ತ್ ಫೌಂಡೇಶನ್ ಪ್ರಕಾರ—ನಿದ್ರಾಹೀನತೆಯು ಈ ಕೆಳಗಿನ ಕಾರಣಗಳಿಂದಾಗಿ ಉಂಟಾಗಬಹುದು:

  • ಕೆಲವು ಔಷಧಗಳು (ಉದಾಹರಣೆಗೆ, ಅಸ್ತಮಾ ಅಥವಾ ರಕ್ತದೊತ್ತಡದ ಔಷಧೋಪಚಾರ), ಕೆಫೀನ್, ಆಲ್ಕೋಹಾಲ್ ಅಥವಾ ಧೂಮಪಾನ
  • ದೀರ್ಘಕಾಲಿಕ ನೋವು ಮತ್ತು ತ್ರಾಸದಾಯಕ ಅಸ್ವಸ್ಥತೆಗಳು
  • ವ್ಯಕ್ತಿಯ ಕೆಲಸ ಕಾರ್ಯದಲ್ಲಿ ಅಥವಾ ವೈಯುಕ್ತಿಕ ಜೀವನದಲ್ಲಿನ ಕೆಲಸದೊತ್ತಡ
  • ಖಿನ್ನತೆ
  • ಆತ್ಮೀಯರ ಅಥವಾ ಪ್ರೀತಿಪಾತ್ರರ ಮರಣ
  • ಉದ್ವಿಗ್ನತೆ ಮತ್ತು ಚಿಂತೆ, ಸಾಕಷ್ಟು ನಿದ್ರೆ ಇಲ್ಲದಿರುವುದರ ಕುರಿತಾದ ಚಿಂತೆ
  •  ಕೆಲವೊಮ್ಮೆ ನಿದ್ರಾಹೀನತೆಗೆ ಯಾವುದೇ ಸ್ಪಷ್ಟ ಕಾರಣ ಇರುವುದಿಲ್ಲ, ಇದಕ್ಕೆ ಪ್ರಾಥಮಿಕ ನಿದ್ರಾಹೀನತೆ ಎಂದು ಕರೆಯಲಾಗುತ್ತದೆ.

ನಿದ್ರಾಹೀನತೆಯ ಇನ್ನೂ ಕೆಲವು ಕಾರಣಗಳು

ಅನುವಂಶಿಕತೆ: ಕೆಲವರು ಅನಿಯಮಿತ ಅಥವಾ ನಿದ್ರೆಗೆ ಅಡಚಣೆ ಉಂಟುಮಾಡುವ ವಂಶವಾಹಿಗಳನ್ನು ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುತ್ತಾರೆ.

ಬೆಳಕಿನ ಮಾಲಿನ್ಯ: ಮಲಗುವ ಸ್ಥಳದಲ್ಲಿ ಕತ್ತಲಿಗೆ ಬದಲಾಗಿ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಿದ್ರೆಯ ಗುಣಮಟ್ಟಕ್ಕೆ ತೊಂದರೆಯಾಗಬಹುದು.

ಪ್ರಮುಖ ನಿದ್ರಾ ಅಸ್ವಸ್ಥತೆಗಳು

ನಿದ್ರಾಹೀನತೆ: ವ್ಯಕ್ತಿಗೆ ರಾತ್ರಿಯಲ್ಲಿ ನಿದ್ರೆ ಮಾಡಲು ಸಾಧ್ಯವಾಗದಿರುವುದು ಅಥವಾ ಸಾಕಷ್ಟು ನಿದ್ರೆ ಮಾಡಲು ತೊಂದರೆಯಾಗುವುದು ನಿದ್ರಾಹೀನತೆಯ ಲಕ್ಷಣವಾಗಿದೆ.

ಶಿಫ್ಟ್ ಕೆಲಸದಿಂದಾಗಿ ನಿದ್ರಾ ಅಸ್ವಸ್ಥತೆ: ವ್ಯಕ್ತಿಯು ಬೇರೆ ಬೇರೆ ಶಿಫ್ಟ್‌ನಲ್ಲಿ ಕೆಲಸ ಮಾಡುವುದರಿಂದ, ನಿದ್ರೆಯ ವೇಳಾಪಟ್ಟಿಗೆ ಹೊಂದಿಕೊಳ್ಳಲು ಸಾಧ್ಯವಾಗದಿರುವುದು. ಇದರಿಂದ ಅವರಿಗೆ ಯಾವುದೇ ಸ್ಥಿರವಾದ ಸಮಯದಲ್ಲಿ ಸಾಕಷ್ಟು ನಿದ್ರೆಗೆ ಕೊರತೆ ಉಂಟಾಗುವುದು.

ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್:  ವ್ಯಕ್ತಿಯು ರಾತ್ರಿಯಲ್ಲಿ ಅನಿಯಂತ್ರಿತವಾಗಿ ಕಾಲುಗಳನ್ನು (ಕೆಲವೊಮ್ಮೆ ತೋಳುಗಳು) ಆಡಿಸುವುದು. ಇದರಿಂದ ನೋವು ಉಂಟಾಗಿ ನಿದ್ರೆಗೆ ತೊಂದರೆಯಾಗುವುದು.

ನ್ಯಾಕ್ರೋಲೆಪ್ಸಿ: ಇಲ್ಲಿ ವ್ಯಕ್ತಿಗೆ ಹಗಲು ತೂಕಡಿಕೆ ಉಂಟಾಗುವುದು. ಹೀಗೆ ಅವನು ಚಟುವಟಿಕೆಯಿಂದ ಇರುವ ವೇಳೆ ಅನೇಕ ಬಾರಿ ‘ನಿದ್ರಾಘಾತಗಳನ್ನು’ ಹೊಂದಬಹುದು.

ನಿದ್ರಾಹೀನತೆಯನ್ನು ಗೆಲ್ಲುವುದು ಹೇಗೆ

ಜೀವನಶೈಲಿ: ಆರೋಗ್ಯಕರ ಮತ್ತು ಸುಸ್ಥಿರ ಜೀವನಶೈಲಿಯು ಉತ್ತಮ ನಿದ್ರಾಭ್ಯಾಸವನ್ನು ಹೊಂದುವಲ್ಲಿ ನೆರವಾಗುತ್ತದೆ. ಇದು ನಿಮ್ಮ ಹೃದಯ ಬಡಿತವನ್ನು ದೇಹಕ್ಕೆ ಅರ್ಥಮಾಡಿಸುವಲ್ಲಿ ನೆರವಾಗುತ್ತದೆ.

ಆಹಾರಾಭ್ಯಾಸಗಳು: ರಾತ್ರಿಯ ವೇಳೆ ಲಘುವಾದ ಆಹಾರ ತೆಗೆದುಕೊಳ್ಳಿ, ಕೆಫೀನ್ ಸೇವಿಸದಿರಿ. ಯಾವ ಆಹಾರದಿಂದ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ ಎಂಬುದನ್ನು ಗಮನಿಸಿ, ಸಂಜೆಯ ನಂತರ ಅಂತಹ ಆಹಾರಗಳನ್ನು ಸೇವಿಸದಿರಿ.

ಸುಸ್ತು: ದಿನದ ಅಂತ್ಯದಲ್ಲಿ ನಿಮಗೆ ಸುಸ್ತಾದಾಗ ರಾತ್ರಿ ತನ್ನಷ್ಟಕ್ಕೆ ನಿದ್ರೆ ಬರುವುದು. ನಿದ್ರಾ ಸಮಸ್ಯೆಗಳಿಗೆ ಇದು ವಾಸ್ತವ ಪರಿಹಾರವಾಗಿದೆ. ನಿಮ್ಮ ಕಾರ್ಯ ಸ್ಥಳದಲ್ಲಿ ಚಟುವಟಿಕೆಯಿಂದಿರಿ ಅಥವಾ ನಿಮ್ಮ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿ

ಧ್ಯಾನ: ನಿದ್ರೆಯ ಸಮಸ್ಯೆಗಳಿಗೆ ಇದೊಂದು ನಿತ್ಯನೂತನ ಮತ್ತು ಪುರಾತನ ಪರಿಹಾರ. ಧ್ಯಾನವು ಉಸಿರಾಟದ ಗತಿಯನ್ನು ಸರಿಪಡಿಸಿ ಒತ್ತಡವನ್ನು ನಿವಾರಿಸುತ್ತದೆ. ನಿಯಮಿತವಾಗಿ ಧ್ಯಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ.

ಮಸಾಜ್: ಮಲಗುವುದಕ್ಕೆ ಮುನ್ನ ದೇಹಕ್ಕೆ ಮಸಾಜ್ ನೀಡಿ. ಇದರಿಂದ ಸ್ನಾಯುಗಳ ಚಲನೆ ಮತ್ತು ವಿಶ್ರಾಂತಿಗೆ ಸಹಕಾರಿಯಾಗುತ್ತದೆ.

ಸ್ವಯಂ ಔಷಧೋಪಚಾರ ಬೇಡ, ನಿದ್ರಾ ತಜ್ಞರನ್ನು ಸಂಪರ್ಕಿಸಿ: ನಿದ್ರಾಹೀನತೆಗೆ ನಿಮ್ಮಷ್ಟಕ್ಕೆ ಔಷಧಗಳನ್ನು ಮಾಡದಿರಿ. ಉತ್ತಮ ಪರಿಹಾರಕ್ಕಾಗಿ ವೈದ್ಯರನ್ನು ಭೇಟಿ ಮಾಡಿ.

ತಜ್ಞರಲ್ಲಿ ಸಮಾಲೋಚಿಸಿ

ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಕೆಲವೊಂದು ಸಂದರ್ಭಗಳಲ್ಲಿ, ವೈದ್ಯರು ಬೆಳಕಿಗೆ ಒಡ್ಡಿಕೊಳ್ಳುವ ಚಿಕಿತ್ಸೆಯನ್ನು ನಡೆಸುತ್ತಾರೆ. ಅನೇಕರಿಗೆ ನಿದ್ರಾಹೀನತೆ ಮತ್ತು ನಿದ್ರೆಯ ಅಭಾವ ಜೊತೆಯಾಗಿರುತ್ತವೆ (ಬಾಕ್ಸ್ ನೋಡಿ). ಆದ್ದರಿಂದ, ಇಂತಹ ಸಮಸ್ಯೆಗಳಿಗೆ ವೈದ್ಯರನ್ನು ಭೇಟಿಯಾಗುವುದರಿಂದ ಅವರು ಸಮಸ್ಯೆಯ ಆಳವನ್ನು ಅರಿತು, ಉತ್ತಮ ಚಿಕಿತ್ಸೆಯನ್ನು ನೀಡುತ್ತಾರೆ.

 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

9 + 7 =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ