0

0

0

ವಿಷಯಗಳಿಗೆ ಹೋಗು

ಪ್ರಸವಾನಂತರ ಉತ್ತಮ ನಿದ್ರೆಗೆ ಸಲಹೆಗಳು
1

ಪ್ರಸವಾನಂತರ ಉತ್ತಮ ನಿದ್ರೆಗೆ ಸಲಹೆಗಳು

ಬಾಣಂತಿಯಿದ್ದಾಗ  ಜೀವನದಲ್ಲಿ ನಿದ್ರೆಯ ಕೊರತೆಯು ಅನಿವಾರ್ಯವೆಂದು ಅನಿಸುತ್ತದೆ. ಹೆರಿಗೆಯ ನಂತರ ನಿದ್ರಾಹೀನತೆಯನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ತಜ್ಞರು ಸಲಹೆಗಳನ್ನು ನೀಡುತ್ತಾರೆ 

ಪ್ರಸವಾನಂತರ ಉತ್ತಮ ನಿದ್ರೆಗೆ ಸಲಹೆಗಳು

ಪ್ರಸವಾನಂತರ ಮಗುವಿನ ಜನನವು ತುಂಬಾ ಸಂತೋಷವನ್ನು ತರುತ್ತದೆ. ಆದರೆ ಇದು ತಾಯಂದಿರಲ್ಲಿ ನಿದ್ರೆಯ ಕೊರತೆಗೆ ಕಾರಣವಾಗುತ್ತದೆ, ಅವರ ನಿದ್ರೆಯ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. “ಪ್ರಸವಾನಂತರ  ನವಜಾತ ಶಿಶುವಿನ ಆರೈಕೆಯ ಕರ್ತವ್ಯಗಳು, ಪ್ರಸವಾನಂತರದ ಚೇತರಿಕೆ, ಪ್ರಸವದ ಆತಂಕ ಮತ್ತು  ಒತ್ತಡದಿಂದ ನಿದ್ರೆಯ ಸಮಸ್ಯೆಗಳು ಉಂಟಾಗಬಹುದುಎಂದು ಮಂಗಳೂರಿನ, ಚೆಸ್ಟ್ ಕ್ಲಿನಿಕ್ ಪಲ್ಮನಾಲಜಿಸ್ಟ್, ಡಾ ಹರ್ಷ ಡಿ ಎಸ್ ಹೇಳುತ್ತಾರೆ. 

 ನಾನು ನನ್ನ ನವಜಾತ ಶಿಶುವನ್ನು ತಬ್ಬಿಕೊಂಡಾಗ ನನ್ನ ಕೆನ್ನೆಯ ಮೇಲೆ ಆನಂದಬಾಷ್ಪ ಹರಿಯಿತು; ಇದೊಂದು ಸಮ್ಮೋಹಕ ಭಾವನೆ. ಆದರೆ ನಿಜವಾದ ಸವಾಲು ನಂತರ ಪ್ರಾರಂಭವಾಯಿತು. ಆಹಾರ ಮತ್ತು ಔಷಧಿಗಳನ್ನು ನಿರ್ವಹಿಸುವುದು ಸುಲಭ, ಆದರೆ ನಿದ್ರೆಯ ಕೊರತೆ ಅನಿವಾರ್ಯವಾಗಿತ್ತು. ಸಾಕಷ್ಟು ನಿದ್ದೆ ಮಾಡದಿರುವುದರಿಂದ ನನಗೆ ತುಂಬಾ ಕಿರಿಕಿರಿ ಮತ್ತು ಅಹಿತಕರ ಎನ್ನಿಸುತ್ತಿತ್ತು” ಎಂದು ಮೊದಲ ಬಾರಿಗೆ ತಾಯಿಯಾದ ಇಪ್ಪತ್ತೆಂಟು ವರ್ಷದ ಬೆಳಗಾವಿಯ ಅಂಕಿತಾ ಕುಡಾಲೆ ಹೇಳುತ್ತಾರೆ. ಮಗುವಿನ ಅನಿರೀಕ್ಷಿತ ನಿದ್ರೆಯ ಮಾದರಿಗಳು ಮತ್ತು ನಿರಂತರ ಹಾಲೂಡಿಸುವಿಕೆಯ ನಡುವೆ, ಕುಡಾಲೆಗೆ ನಿದ್ರೆ ಮಾಡಲು ಸಮಯವನ್ನು ಸಿಗುತ್ತಿರಲಿಲ್ಲ. 

ಮುಂಬೈನ ಕಾರ್ಪೊರೇಟ್ ಉದ್ಯೋಗಿ ಸಾಕ್ಷಿ ಝಾ (32) ಅವರು, ಹೆರಿಗೆಯ ನಂತರ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆದ ಬದಲಾವಣೆಯಿಂದಾಗಿ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದೆ ಎಂದು ಹೇಳುತ್ತಾರೆ. “ಹೆರಿಗೆಯ ನಂತರದ ನಿದ್ದೆಯಿಲ್ಲದ ರಾತ್ರಿಗಳಿಗೆ ಹಲವಾರು ಕಾರಣಗಳಿವೆ. ತಾಯಿಯಾಗಿ, ಮಗು ಚೆನ್ನಾಗಿ ನಿದ್ರಿಸುತ್ತಿದೆಯೇ ಎಂದು ನಾನು ಚಿಂತಿತಳಾಗಿದ್ದೆ ಮತ್ತು ನನ್ನ ಮಗು ಮಲಗಿದ ನಂತರವೇ ನನ್ನ ವೈಯಕ್ತಿಕ ಕೆಲಸಗಳನ್ನು ಮುಗಿಸಲು ಸಾಧ್ಯವಾಗುತ್ತಿತ್ತು” ಎಂದು ಝಾ ಹೇಳುತ್ತಾರೆ 

“ನವಜಾತ ಶಿಶುವಿನ ಆರೈಕೆಯು ತಡೆರಹಿತ ಕೆಲಸ; ಒತ್ತಡ ಮತ್ತು ದಿನನಿತ್ಯದ ಬದಲಾವಣೆಗಳು ನಿದ್ರೆಯ ಮಾದರಿಗಳ ಮೇಲೆ ಪರಿಣಾಮ ಬೀರಬಹುದು. ಆದರೆ ನಿದ್ರೆಯ ಕೊರತೆಗೆ ಆಳವಾದ ಕಾರಣವೂ ಇರಬಹುದು” ಎಂದು ತಜ್ಞರು ವಿವರಿಸುತ್ತಾರೆ 

ಮೆಲಟೋನಿನ್ ಕೊರತೆಯೇ ಕಾರಣವೇ? 

 “ಹೆರಿಗೆಯ ನಂತರ ತಾಯಂದಿರು ಮೆಲಟೋನಿನ್ ಮಟ್ಟದಲ್ಲಿನ ಇಳಿಕೆ ಸೇರಿದಂತೆ ಹಾರ್ಮೋನುಗಳ ಬದಲಾವಣೆಗಳಿಗೆ ಒಳಗಾಗುತ್ತಾರೆ ನಿದ್ರೆಯ ಹಾರ್ಮೋನ್ ಎಂದೂ ಕರೆಯಲ್ಪಡುವ ಮೆಲಟೋನಿನ್, ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸುವ ಮೂಲಕ ನಿದ್ರೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ಮೆಲಟೋನಿನ್ನಲ್ಲಿನ ಕುಸಿತವು ನಿದ್ರೆಯ ತೊಂದರೆಗೆ ಕಾರಣವಾಗಬಹುದು” ಎಂದು ಚೆನ್ನೈನ ಅಪೊಲೊ ಮಹಿಳಾ ಆಸ್ಪತ್ರೆಯ ಸಮಾಲೋಚಕ ಸ್ತ್ರೀರೋಗತಜ್ಞೆ ಡಾ.ಅಭಿರಾಮಿ ಎಸ್ ವಿವರಿಸುತ್ತಾರೆ 

ಪ್ರಸವಾನಂತರದ ಖಿನ್ನತೆ ಮತ್ತು ನಿದ್ರಾಹೀನತೆ 

ಪ್ರಸವಾನಂತರದ ಖಿನ್ನತೆ(PPD) ಒಂದು ಗಂಭೀರವಾದ ಮನಸ್ಥಿತಿಯ ಅಸ್ವಸ್ಥತೆ ಆಗಿದ್ದು, ಹೆರಿಗೆಯ ನಂತರ ಅದು ತಾಯಿಯಲ್ಲಿ ಕಾಣಿಸಿಕೊಳ್ಳಬಹುದು. 

ನಿದ್ದೆಯ ಕೊರತೆಯು ಪ್ರಸವಾನಂತರದ ಖಿನ್ನತೆಯ ಲಕ್ಷಣಗಳಲ್ಲಿ ಒಂದಾಗಿದೆ ಎಂದು ಡಾ ಹರ್ಷ ಹೇಳುತ್ತಾರೆ. 

ಪ್ರಸವಾನಂತರದ ಖಿನ್ನತೆಯು ಸಾಮಾನ್ಯವಾಗಿ ಕೆಲವು ತಾಯಂದಿರಲ್ಲಿ ಹೆರಿಗೆಯ ನಂತರದ ಅವಧಿಯಲ್ಲಿ ಕಂಡುಬರುತ್ತದೆ, ಆದರೆ ಇದು ತಂದೆಯಲ್ಲೂ ಸಹ ಸಂಭವಿಸಬಹುದು. ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು ಅಂದರೆ, ನಿರಾಶಾವಾದಿ ಮನಸ್ಥಿತಿಗಳು, ಅಳುವುದು, ನಿದ್ರಾ ಭಂಗ, ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲದಿರುವುದು,ಹಸಿವಾಗದಿರುವುದು, ಆತಂಕ, ಆಯಾಸ ಮತ್ತು ತಾಯಿ ಮತ್ತು ತಂದೆ ಇಬ್ಬರಲ್ಲೂ ಸ್ವಯಂಹಾನಿಕಾರಕ ಆಲೋಚನೆಗಳು ಬರುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ” ಎಂದು ಡಾ ವಾಸುದೇವನ್ ಹೇಳುತ್ತಾರೆ. 

“ಈಗಾಗಲೇ ಪ್ರಸವಾನಂತರದ ಖಿನ್ನತೆಯಿಂದ ಬಳಲುತ್ತಿರುವ ಜನರಿಗೆ ನಿದ್ರೆಯ ಕೊರತೆಯು ಇನ್ನಷ್ಟು ಕೆಟ್ಟ ಪ್ರಭಾವವನ್ನು ಬೀರಬಹುದು ಮತ್ತು ಕೆಲವು ಪ್ರಕರಣಗಳಲ್ಲಿ ಪ್ರಸವಾನಂತರದ ಖಿನ್ನತೆಯನ್ನು ಪ್ರಚೋದಿಸಬಹುದು” ಎಂದು ಮೈಂಡ್ ಕ್ಲಿನಿಕ್ (ಲಲಿತಾ ಮೆಮೋರಿಯಲ್ ಪಾಲಿಕ್ಲಿನಿಕ್), ಬೆಂಗಳೂರು ಇಲ್ಲಿನ ಹಿರಿಯ ಮನೋವೈದ್ಯರಾದ, ಡಾ ಅನಿತಾ ವಾಸುದೇವನ್ ಹೇಳುತ್ತಾರೆ.. 

ಪ್ರಸವಾನಂತರ ಹಾಲೂಡಿಸುವ ಆತಂಕ 

ಮಗುವಿಗೆ ಹಾಲುಣಿಸುವುದು ಹೆಚ್ಚಿನ ತಾಯಂದಿರ ಚಿಂತೆಯಾಗಿದೆ. ಶಿಶುಗಳಿಗೆ ಚಿಕ್ಕ ಹೊಟ್ಟೆ ಇರುತ್ತದೆ, ಅಲ್ಲಿ ಹಾಲು ಬಹಳ ವೇಗವಾಗಿ ಜೀರ್ಣವಾಗುತ್ತದೆ. ಮಕ್ಕಳು ಎಚ್ಚರಗೊಳ್ಳುತ್ತಾರೆ ಅಥವಾ ಪ್ರತಿ ಎರಡು ಗಂಟೆಗಳಿಗೊಮ್ಮೆ ಆಹಾರಕ್ಕಾಗಿ ಎಚ್ಚರಗೊಳ್ಳಬೇಕು. ಕಾರಣದಿಂದಾಗಿ, ತಾಯಂದಿರು ದೀರ್ಘಕಾಲದವರೆಗೆ ಮಲಗಲು ಸಾಧ್ಯವಾಗುವುದಿಲ್ಲ. ನಿದ್ರಾಹೀನತೆಯಿಂದಾಗಿ ತಾಯಿಯ ಬುದ್ಧಿ-ಮನಸ್ಸಿಗೆ ಮಂಜುಕವಿದಂತಾಗಬಹುದು [ಗೊಂದಲ, ಮರೆವು ಮತ್ತು ಏಕಾಗ್ರತೆ ಮತ್ತು ಮಾನಸಿಕ ಸ್ಪಷ್ಟತೆಯ ಕೊರತೆಯ ಗುಣಲಕ್ಷಣವಿರುವ ಸ್ಥಿತಿ.] 

ನಿದ್ರೆಯ ಕೊರತೆಯಿಂದ ಉಂಟಾಗುವ ಒತ್ತಡವು ಹಾಲುಣಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಎದೆ ಹಾಲು ಪೂರೈಕೆಯನ್ನು ಕಡಿಮೆ ಮಾಡುತ್ತದೆಎನ್ನುತ್ತಾರೆ ಮಂಗಳೂರಿನ ಮಣಿಪಾಲ್ ಆಸ್ಪತ್ರೆಯ ಲ್ಯಾಕ್ಟೇಶನ್ ಸಮಾಲೋಚಕರಾದ ಮೈನಾ ಶೇಟ್. 

ತಾಯಂದಿರು ಮಗುವಿಗೆ ಬೇಡಿಕೆಯ ಮೇಲೆ ಆಹಾರವನ್ನು ನೀಡಬೇಕಾಗುತ್ತದೆ ಏಕೆಂದರೆ ಇದು ಹಾಲು ಪೂರೈಕೆಯನ್ನು ನಿಯಮಿತಗೊಳಿಸಲು ಮತ್ತು ಮಗುವಿಗೆ ಸಾಕಷ್ಟು ಹಾಲು ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆಎಂದು ಶೇಟ್ ಹೇಳುತ್ತಾರೆ. 

ಪ್ರಸವಾನಂತರದ ಅವಧಿಯ ನಿದ್ರಾಹೀನತೆಯ ನಿರ್ವಹಣೆ ಹೇಗೆ  

ಪ್ರಸವಾನಂತರದ ಅವಧಿಯ ನಿದ್ರೆಯ ಸಮಸ್ಯೆಗಳನ್ನು ಸಾಂಪ್ರದಾಯಿಕ ವಿಧಾನದಲ್ಲಿ ಪರಿಹರಿಸುವುದು ಅಸಾಧ್ಯ. ಆದರೆ, ಶಿಶುವಿನ ನಿದ್ರೆಯ ವೇಳಾಪಟ್ಟಿಯೊಂದಿಗೆ ತಾಯಿಯ ನಿದ್ರೆಯ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳುವುದರಿಂದ ಅನುಕೂಲವಾಗುತ್ತದೆ ಎಂದು ಶೇಟ್ ಹೇಳುತ್ತಾರೆ. 

  • ವ್ಯಕ್ತಿಯ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರಾಮುಖ್ಯತೆಯನ್ನು ತಜ್ಞರು ಒತ್ತಿಹೇಳುತ್ತಾರೆ. ಡಾ ಅಭಿರಾಮಿ ಅವರ ಪ್ರಕಾರ, ಪ್ರಸವಾನಂತರದ ಖಿನ್ನತೆಯನ್ನು ನೋಡಿಕೊಳ್ಳಲು ವೈದ್ಯರೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸುವುದು ಸೂಕ್ತವಾಗಿದೆ. 
  • ಆಹಾರದ ಸೇವನೆಯ  ನಂತರ ವಾಕಿಂಗ್, ಆದರೆ ಚುರುಕಾದ ನಡಿಗೆಯಂತಹ ಲಯಬದ್ಧ ಚಟುವಟಿಕೆಗಳು ಸ್ನಾಯುಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. 
  • ಉಸಿರಾಟದ ವ್ಯಾಯಾಮಗಳು ಮತ್ತು ಮೃದುವಾದ ಸ್ಟ್ರೆಚಿಂಗ್ ಒತ್ತಡವನ್ನು ಕಡಿಮೆ ಮಾಡಬಹುದು. “ಮಾತೃತ್ವವು ಬಹಳಷ್ಟು ಬದಲಾವಣೆಗಳು ಮತ್ತು ಹೊಸ ಅನುಭವಗಳೊಂದಿಗೆ ಬರುತ್ತದೆ; ಇದು ತಾಯಿಗೆ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಬಹುದು. ಧ್ಯಾನದ ಜೊತೆಗೆ ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡುವುದರಿಂದ ಹೆರಿಗೆಯ ನಂತರ ಮಹಿಳೆಯರು ವಿಶ್ರಾಂತಿ ಪಡೆಯುತ್ತಾರೆಎಂದು ಮಂಗಳೂರಿನ ಯೋಗ ತಜ್ಞೆ ರೇಷ್ಮಾ ಕಾರ್ಯಪ್ಪ ಸಲಹೆ ನೀಡುತ್ತಾರೆ. ಅಭ್ಯಾಸ ಮಾಡಬಹುದಾದ ಕೆಲವು ಪ್ರಾಣಾಯಾಮಗಳೆಂದರೆ ಉಜ್ಜಾಯಿ ಪ್ರಾಣಾಯಾಮ, ಅನುಲೋಮ ವಿಲೋಮ ಪ್ರಾಣಾಯಾಮ ಮತ್ತು ಭ್ರಾಮರಿ ಪ್ರಾಣಾಯಾಮ. 
  • ನಿದ್ರೆಯ ಕೊರತೆಯು ತಾಯಂದಿರಲ್ಲಿ ಒತ್ತಡವನ್ನು ಉಂಟುಮಾಡುತ್ತಿದ್ದರೆ, ಅವರು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. 

ಸಾರಾಂಶ 

  • ನವಜಾತ ಶಿಶುವಿನ ಆರೈಕೆಯ ಕರ್ತವ್ಯಗಳು, ಚಿಂತೆ ಮತ್ತು ತಾಯಿಯಾಗುತ್ತಿರುವ ಹೊಸ ಅನುಭವ ಮತ್ತು ಒತ್ತಡವು ಹೆರಿಗೆಯ ನಂತರದ ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು.
  • ನಿದ್ರೆಯ ಕೊರತೆಯು ಪ್ರಸವಾನಂತರದ ಖಿನ್ನತೆಯ (PPD) ಲಕ್ಷಣಗಳಲ್ಲಿ ಒಂದಾಗಿರಬಹುದು.
  • ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು ಅಂದರೆ ನಿರಾಶಾವಾದಿ ಮನಸ್ಥಿತಿಗಳು, ಅಳುವುದು, ನಿದ್ರಾ ಭಂಗಗಳು, [ದೈನಂದಿನ ಚಟುವಟಿಕೆಗಳಲ್ಲಿ] ಆಸಕ್ತಿಯ ಕೊರತೆ, ಹಸಿವಿನ ಕೊರತೆ, ಆತಂಕ, ಆಯಾಸ ಮತ್ತು ಸ್ವಯಂ-ಹಾನಿಕಾರಕ ಆಲೋಚನೆಗಳನ್ನು ಒಳಗೊಂಡಿರುತ್ತವೆ.
  • ನಿದ್ರೆಯ ಕೊರತೆಯ ಕಾರಣದ ಒತ್ತಡವು ಹಾಲೂಡಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಎದೆ ಹಾಲು ಪೂರೈಕೆಯನ್ನು ಕಡಿಮೆ ಮಾಡುತ್ತದೆ.
  • ಉಸಿರಾಟದ ವ್ಯಾಯಾಮ ಮತ್ತು ಮೃದುವಾದ ಸ್ಟ್ರೆಚಿಂಗ್ ಅನ್ನು ಅಭ್ಯಾಸ ಮಾಡುವುದರಿಂದ ಪ್ರಸವಾನಂತರದ ಒತ್ತಡವನ್ನು ಕಡಿಮೆ ಮಾಡಬಹುದು.
  • ಪ್ರಸವಾನಂತರದ ಖಿನ್ನತೆಯನ್ನು ತಗ್ಗಿಸಿಕೊಳ್ಳಲು ವೈದ್ಯರಿಂದ ನಿಯಮಿತ ಸಲಹೆಗಳನ್ನು ಪಡೆಯಿರಿ.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ