0

0

0

ಈ ಲೇಖನದಲ್ಲಿ

Obesity And Breathlessness: ಬೊಜ್ಜು ಮತ್ತು ಉಸಿರುಕಟ್ಟಿದ ಸ್ಥಿತಿ
24

Obesity And Breathlessness: ಬೊಜ್ಜು ಮತ್ತು ಉಸಿರುಕಟ್ಟಿದ ಸ್ಥಿತಿ

ನಿಮ್ಮ ಎದೆಯ ಭಿತ್ತಿಯ ಮೇಲಿನ ಹೆಚ್ಚುವರಿ ಕೊಬ್ಬಿನ ಶೇಖರಣೆಗಳು ಉಸಿರಾಟ ವ್ಯವಸ್ಥೆಯ ಮೇಲೆ ಒತ್ತಡವನ್ನು ಉಂಟುಮಾಡಿ ಉಸಿರಾಟದ ಮೇಲೆ ಪರಿಣಾಮ ಬೀರುತ್ತವೆ. ತೂಕ ನಿಯಂತ್ರಣ ಮತ್ತು ಜೀವನಶೈಲಿ ಮಾರ್ಪಾಡು ಪ್ರಯೋಜನಕಾರಿಯಾಗಿವೆ.
ಬೊಜ್ಜು ಮತ್ತು ಉಸಿರುಕಟ್ಟಿದ ಸ್ಥಿತಿ ನಡುವಿನ ಸಂಬಂಧ

ಬೊಜ್ಜು ಮತ್ತು ಉಸಿರುಕಟ್ಟಿದ ಸ್ಥಿತಿಯು ಸಾಮಾನ್ಯವಾಗಿ ಒಟ್ಟಿಗೆ ಕಂಡುಬರುತ್ತವೆ. ಆದರೆ, ಈ ಹೆಚ್ಚುವರಿ ದೇಹದ ತೂಕವು ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್ (OHS) ಎಂಬ ತೊಡಕಿನ ರೂಪದಲ್ಲಿ ನಿಮ್ಮ ಉಸಿರಾಟದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಎದೆಯ ಭಿತ್ತಿಯ ಮೇಲಿನ ಹೆಚ್ಚುವರಿ ಕೊಬ್ಬಿನ ಶೇಖರಣೆಗಳು ನಿಮ್ಮ ಉಸಿರಾಟದ ವ್ಯವಸ್ಥೆಯ ಮೇಲೆ, ಪ್ರಮುಖವಾಗಿ ಶ್ವಾಸಕೋಶದ ಮೇಲೆ ಒತ್ತಡವನ್ನು ಬೀರಬಹುದು. ಇದು ನಿಮ್ಮ ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರುವುದರೊಂದಿಗೆ ನಿಮ್ಮ ರಕ್ತದಲ್ಲಿ ಇಂಗಾಲದ ಡೈಆಕ್ಸೈಡ್ ರಚನೆಯಾಗಲು ಕೂಡ ಕಾರಣವಾಗಬಹುದು. ವೈದ್ಯಕೀಯ ವಲಯಗಳಲ್ಲಿ ಜನಪ್ರಿಯವಾಗಿ ಪಿಕ್‌ವಿಕಿಯನ್ ಸಿಂಡ್ರೋಮ್ ಎಂದು ಕರೆಯಲ್ಪಡುವ ಇದು ಚಾರ್ಲ್ಸ್ ಡಿಕನ್ಸ್‌ನ ದಿ ಪಿಕ್‌ವಿಕ್ ಪೇಪರ್ಸ್‌ನ ತೀವ್ರ ಬೊಜ್ಜು ಮತ್ತು ಅತಿಯಾದ ನಿದ್ರಾಹೀನತೆ ಸೇರಿದಂತೆ OHS ನಿಂದ ಬಳಲುತ್ತಿರುವವರ ಸಾಮಾನ್ಯ ಲಕ್ಷಣಗಳನ್ನು ಹೊಂದಿರುವ ಶ್ರೀಸಾಮಾನ್ಯನನ್ನು ನೆನಪಿಸುತ್ತದೆ.

ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್ ಅನ್ನು ಬೊಜ್ಜು (ಎದೆಯ ಗೋಡೆಗಳಲ್ಲಿ ಅತಿಯಾದ ಕೊಬ್ಬಿನ ಶೇಖರಣೆ), ಹೈಪರ್‌ಕ್ಯಾಪ್ನಿಯಾ (ರಕ್ತದಲ್ಲಿ ಹೆಚ್ಚುವರಿ ಇಂಗಾಲದ ಡೈಆಕ್ಸೈಡ್) ಮತ್ತು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಸಮಸ್ಯೆ ಎಂಬ ಮೂರು ಅಂಶಗಳ ಟ್ರಯಾಡ್ ಎಂದು ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ಮೆಡಿಕಲ್ ಸೆಂಟರ್, ಇಂಟರ್ನಲ್ ಮೆಡಿಸಿನ್, ಪಲ್ಮನಾಲಜಿ, ಸಲಹೆಗಾರರಾದ ಡಾ. ರವಿಚಂದ್ರ ಎಂಆರ್‌ಕೆ ವ್ಯಾಖ್ಯಾನಿಸಿದ್ದಾರೆ.

“ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್ ಶ್ವಾಸಕೋಶದ ಅಸ್ವಸ್ಥತೆಯಲ್ಲ”. ಇದು ಶರೀರಾಂತರ್ಗತ ಅಸ್ವಸ್ಥತೆಯಾಗಿದ್ದು, ಅದರ ಮೂಲ ಕಾರಣ ಶ್ವಾಸಕೋಶಗಳು ಮತ್ತು ಮಾನವ ದೇಹದ ಇತರ ಅಂಗಗಳ ಮೇಲೆ ಪರಿಣಾಮ ಬೀರುವ ಬೊಜ್ಜು ಆಗಿದೆ ಎಂದು ಎಂದು ಡಾ. ಚಂದ್ರು ಒತ್ತಿಹೇಳುತ್ತಾರೆ.

ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್ ಎಂದರೇನು?

“ಹೆಚ್ಚಿನ ದೇಹದ ತೂಕವು ಎದೆಯ ಭಿತ್ತಿಯ ಮೇಲೆ ಒತ್ತಡವನ್ನು ಉಂಟುಮಾಡಿ ಸಾಮಾನ್ಯವಾಗಿ ಸ್ಥೂಲಕಾಯದವರಿಗೆ ಉಸಿರಾಡಲು ಕಷ್ಟವಾಗುವಂತಹ ಸ್ಥಿತಿಗೆ ಕಾರಣವಾದಾಗ ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್ ಸಂಭವಿಸುತ್ತದೆ. ಪಿಕ್ವಿಕಿಯನ್ ಸಿಂಡ್ರೋಮ್‌ನಿಂದ ಬಳಲುತ್ತಿರುವವರು  ಹೈಪರ್‌ಕ್ಯಾಪ್ನಿಯಾದ ಸಮಸ್ಯೆಯನ್ನೂ ಎದುರಿಸುತ್ತಾರೆ” ಎಂದು ಆಂಧ್ರಪ್ರದೇಶದ ವಿಜಯವಾಡದ ಮಣಿಪಾಲ್ ಆಸ್ಪತ್ರೆಯ ಎಂಡೋಕ್ರೈನಾಲಜಿಸ್ಟ್ ಡಾ. ಗಿರಿಧರ್ ಅಡಪ ಹೇಳುತ್ತಾರೆ.

ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್ ಉಂಟಾಗಲು ಕಾರಣವೇನು?

ಬೊಜ್ಜುಯು ಎದೆಯ ಭಿತ್ತಿಗಳಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ ಎಂದು ಡಾ. ಚಂದ್ರ ವಿವರಿಸುತ್ತಾರೆ. ಇದು ಎದೆಯ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಉಸಿರಾಡುವಾಗ ವಿಸ್ತರಿಸುವ ಎದೆಯ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ.

ಕೊಬ್ಬಿನ ಶೇಖರಣೆಯಿಂದಾಗಿ ಎದೆಯ ಭಿತ್ತಿಯು ಭಾರವಾದಾಗ, ಅದು ಹೈಪೋವೆಂಟಿಲೇಷನ್‌ಗೆ ಕಾರಣವಾಗುತ್ತದೆ. ಪರಿಣಾಮವಾಗಿ, ಆ ಸಮಸ್ಯೆಯಿಂದ ಬಳಲುತ್ತಿರುವವರು ಉಸಿರಾಡಲು ಪ್ರಯತ್ನಿಸಿದಾಗ ಎದೆಯ ಭಿತ್ತಿಯು ಪರಿಣಾಮಕಾರಿಯಾಗಿ ಗಾಳಿಯನ್ನು ಸ್ಥಳಾಂತರಿಸುವುದಿಲ್ಲ. ಇದರಿಂದಾಗಿ ರಕ್ತದಲ್ಲಿ ಆಮ್ಲಜನಕದ ಮಟ್ಟ ಕುಂಠಿತವಾಗಿ ಇಂಗಾಲದ ಡೈಆಕ್ಸೈಡ್ ಮಟ್ಟ ಹೆಚ್ಚುತ್ತದೆ. ಕಾಲಾನಂತರದಲ್ಲಿ, ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಮಟ್ಟಗಳು ರಚನೆಯಾಗಿ ರಕ್ತವನ್ನು ಹೆಚ್ಚು ಆಮ್ಲೀಯವಾಗಿಸುತ್ತವೆ.

ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್ ತೂಕ ಹೆಚ್ಚಲು ಕಾರಣವಾಗಬಹುದು. ರಕ್ತವು ಹೆಚ್ಚು ಆಮ್ಲೀಯವಾದಾಗ, ದೇಹವು ಇನ್ಸುಲಿನ್ ಮತ್ತು ಲೆಪ್ಟಿನ್‌ನಂತಹ ಹಾರ್ಮೋನ್‌ಗಳಿಗೆ ನಿರೋಧಕವಾಗುತ್ತದೆ. ಲೆಪ್ಟಿನ್ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ; ಆದರೆ, ಲೆಪ್ಟಿನ್ ನಿರೋಧಕತೆಯ ಸಂದರ್ಭದಲ್ಲಿ, ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್‌ನಿಂದ ಬಳಲುತ್ತಿರುವವರಿಗೆ ಎಂದಿಗೂ ಹೊಟ್ಟೆತುಂಬಿದ ಅನುಭವವಾಗುವುದಿಲ್ಲವಾದ್ದರಿಂದ ಆಹಾರ ಸೇವನೆ ಅತಿಯಾಗುತ್ತದೆ ಎಂದು ಅವರು ಹೇಳುತ್ತಾರೆ.

ಪಿಕ್ವಿಕಿಯನ್ ಸಿಂಡ್ರೋಮ್‌ನ ರೋಗಲಕ್ಷಣಗಳು

ನಿಮ್ಮ ರಕ್ತದಲ್ಲಿ ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಮಟ್ಟಗಳ ಆರಂಭಿಕ ರೋಗಲಕ್ಷಣಗಳಲ್ಲಿ ವಿಶೇಷವಾಗಿ ಬೆಳಿಗ್ಗಿನ ಸಮಯದಲ್ಲಿ ಕಂಡುಬರುವ ತಲೆಸಿಡಿತ ಒಂದಾಗಿದೆ. “ನಿದ್ರೆಯ ಅಸ್ವಸ್ಥತೆಯನ್ನು ಹೊಂದಿರುವವರು ನಿದ್ದೆ ಮಾಡುವಾಗ ಉಸಿರಾಟದ ತೊಂದರೆಯನ್ನು ಎದುರಿಸಬಹುದು” ಎಂದು ಡಾ. ಚಂದ್ರ ಹೇಳುತ್ತಾರೆ.

ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್‌ನಿಂದ ಬಳಲುತ್ತಿರುವವರು ಸಾಮಾನ್ಯವಾಗಿ BMI ಮಟ್ಟವನ್ನು 30 ಕ್ಕಿಂತ ಹೆಚ್ಚು ಮತ್ತು ಹೆಚ್ಚಿನ ಸೊಂಟ-ನಿತಂಬದ ಅನುಪಾತವನ್ನು ಹೊಂದಿರುತ್ತಾರೆ. ಪಿಕ್ವಿಕಿಯನ್ ಸಿಂಡ್ರೋಮ್‌ನಿಂದ ಬಳಲುತ್ತಿರುವವರು ಅಬ್‌ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ , ತೀವ್ರ ನಿದ್ರಾಹೀನತೆ, ಉಸಿರಾಟದ ತೊಂದರೆ ಮತ್ತು ತೀವ್ರ ಗೊರಕೆ ಸೇರಿದಂತೆ ಸಾಮಾನ್ಯ ರೋಗಲಕ್ಷಣಗಳನ್ನು ಅನುಭವಿಸಬಹುದು ಎಂದು ಡಾ. ಅಡಪ ಹೇಳುತ್ತಾರೆ.

OHS (Obesity hypoventilation syndrome) ಒಂದು ಗಂಭೀರ ಸ್ಥಿತಿಯೇ?

ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್ ದೇಹದ ಮೇಲೆ ತೀವ್ರವಾದ ಚಯಾಪಚಯ ಒತ್ತಡವನ್ನು ಉಂಟುಮಾಡುತ್ತದೆ. ಹೃದಯ ಮತ್ತು ಮೆದುಳಿಗೆ ನಿರಂತರವಾಗಿ ಕೆಲಸ ಮಾಡಲು ಹೆಚ್ಚಿನ ಮಟ್ಟದ ಆಮ್ಲಜನಕದ ಅಗತ್ಯವಿರುತ್ತದೆ, ಈ ಸ್ಥಿತಿಯು ಹೈಪೋಕ್ಸಿಕ್ ಒತ್ತಡಕ್ಕೆ ಕಾರಣವಾಗಿ (ಕಡಿಮೆ ಆಮ್ಲಜನಕದ ಮಟ್ಟ) ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುವ ಮೂಲಕ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು ಎಂದು ಡಾ. ಚಂದ್ರ ವಿವರಿಸುತ್ತಾರೆ.

OHS ಗೆ ಚಿಕಿತ್ಸೆ ನೀಡದಿದ್ದರೆ, ಅದು ಶ್ವಾಸಕೋಶದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವುದಲ್ಲದೇ ಬಲಭಾಗದ ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಡಾ. ಅಡಪ ಹೇಳುತ್ತಾರೆ.

ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್‌ನ ನಿರ್ವಹಣೆ

ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವುದು ಪಿಕ್ವಿಕಿಯನ್ ಸಿಂಡ್ರೋಮ್ ಅಪಾಯವನ್ನು ತಡೆಗಟ್ಟುವ ಮೊದಲ ಹೆಜ್ಜೆಯಾಗಿದೆ ಎಂದು ಡಾ. ಅಡಪ ಹೇಳುತ್ತಾರೆ.

ದಿನಚರಿಯಲ್ಲಿ ವ್ಯಾಯಾಮವನ್ನು ಸೇರಿಸುವುದು, ಸಾಕಷ್ಟು ವಿಶ್ರಾಂತಿ ದೊರೆಯುವಂತೆ ಅಡಚಣೆಯಿಲ್ಲದ ನಿದ್ರೆಯನ್ನು ಮಾಡುವುದು, ಆಹಾರದ ನಿಯಂತ್ರಣ ಮತ್ತು ಆರೋಗ್ಯಕರ ಆಹಾರದ ಯೋಜನೆಯನ್ನು ಸಿದ್ಧಪಡಿಸಲು ಆಹಾರ ತಜ್ಞರು ಅಥವಾ ಪೌಷ್ಟಿಕತಜ್ಞರ ನೆರವನ್ನು ಪಡೆದುಕೊಳ್ಳುವುದು ಮುಂತಾದ ಜೀವನಶೈಲಿಯ ಮಾರ್ಪಾಡುಗಳನ್ನು ಅಧಿಕ BMI ಹೊಂದಿರುವ ವ್ಯಕ್ತಿಗಳು ತೂಕವನ್ನು ಇಳಿಸಲು ಅನುಸರಿಸಬೇಕು ಎಂದು ಡಾ. ಚಂದ್ರ ಅಭಿಪ್ರಾಯಪಡುತ್ತಾರೆ.

CPAP ಯಂತ್ರದಿಂದ ಉಸಿರಾಟಕ್ಕೆ ನೆರವನ್ನು ಪಡೆದುಕೊಳ್ಳುವುದು ರಾತ್ರಿಯ ಸಮಯದಲ್ಲಿ ಸಾಕಷ್ಟು ಆಮ್ಲಜನಕದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ. ಇದರಲ್ಲಿ ನಿದ್ರೆ ಮಾಡುವಾಗ ಮೂಗು ಮತ್ತು ಬಾಯಿಯ ಮೇಲೆ ಮಾಸ್ಕ್ ಧರಿಸಬೇಕಾಗುತ್ತದೆ. ಮಾಸ್ಕ್ ಅನ್ನು CPAP ಯಂತ್ರಕ್ಕೆ ಜೋಡಿಸಲಾಗುತ್ತದೆ, ಇದು OHS ನಿಂದ ಬಳಲುತ್ತಿರುವವರ ಉಸಿರಾಟದ ನಿರಂತರ ಟ್ರ್ಯಾಕ್ ಅನ್ನು ಇರಿಸುತ್ತದೆ ಮತ್ತು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸ್ಥಿರವಾದ ಗಾಳಿಯ ಒತ್ತಡವನ್ನು ಒದಗಿಸುವ ಮೂಲಕ ಉತ್ತಮವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

ಸಾರಾಂಶ

ಒಬೆಸಿಟಿ ಹೈಪೋವೆಂಟಿಲೇಷನ್ ಸಿಂಡ್ರೋಮ್ ಅಥವಾ ಪಿಕ್ವಿಕಿಯನ್ ಸಿಂಡ್ರೋಮ್ ಅಧಿಕ ತೂಕ ಮತ್ತು ಉಸಿರಾಟ-ಸಂಬಂಧಿತ ನಿದ್ರಾಹೀನತೆಯಿಂದ ಉಂಟಾಗುವ ತೀವ್ರ ವ್ಯಾಧಿಯಾಗಿದೆ. ಆದರೆ, ಜೀವನಶೈಲಿಯ ಮಾರ್ಪಾಡುಗಳ ಮೂಲಕ ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವುದು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

10 + twelve =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ