ಜಿಮ್‌ಗೆ ಹೋಗುವ ಮೊದಲು ಮಾಡಿಸಬೇಕಾದ 6 ಅಗತ್ಯ ಪರೀಕ್ಷೆಗಳು

ಹೃದಯದ ಸಮಸ್ಯೆಗಳಿದ್ದರೆ, ಅದು ವರ್ಕ್ ಔಟ್ ಸಮಯದಲ್ಲಿ ತೀವ್ರವಾದ ಹೃದಯದ ತೊಂದರೆಗಳನ್ನುಂಟುಮಾಡಬಹುದು. ಹಾಗಾಗಿ ಮಧ್ಯವಯಸ್ಕರು ಜಿಮ್ ಸೇರುವ ಮೊದಲು ಹೃದಯ-ಸ್ಕ್ರೀನಿಂಗ್ ಪರೀಕ್ಷೆಗಳನ್ನು ಮಾಡಲು ಸಲಹೆ ನೀಡಲಾಗುತ್ತದೆ.

ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ)

ನೋವುರಹಿತ ಮತ್ತು ಸರಳವಾದ ಪರೀಕ್ಷೆಯಾಗಿದ್ದು, ವಿಶ್ರಾಂತಿ ಸಮಯದಲ್ಲಿ ಹೃದಯದಲ್ಲಿನ ವಿದ್ಯುತ್ ಚಟುವಟಿಕೆಯನ್ನು ಓದುತ್ತದೆ. ರಚನಾತ್ಮಕ ಹೃದಯ ಕಾಯಿಲೆಗಳ ಸಂದರ್ಭಗಳಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ತೋರಿಸುತ್ತದೆ.

ಟ್ರೆಡ್‌ಮಿಲ್ ಪರೀಕ್ಷೆ (ಟಿಎಮ್‌ಟಿ)

ಟಿಎಂಟಿಯಲ್ಲಿ, ಇಸಿಜಿ ಮಾನಿಟರ್ ಮೂಲಕ ಹೃದಯ ಬಡಿತವನ್ನು ಗಮನಿಸಿದಾಗ ವ್ಯಕ್ತಿಯನ್ನು ಟ್ರೆಡ್‌ಮಿಲ್ ಯಂತ್ರದ ಮೇಲೆ ನಡೆಯುವಂತೆ ಮಾಡಲಾಗುತ್ತದೆ. ಇದು ದೈಹಿಕ ಪರಿಶ್ರಮಕ್ಕೆ ಹೃದಯದ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತದೆ.

ಎಕೋಕಾರ್ಡಿಯೋಗ್ರಾಮ್

 ಕವಾಟದ ಹೃದ್ರೋಗ ಅಥವಾ ಹೃದಯದ ಯಾವುದೇ ತೀವ್ರವಾದ ತೆಳುವಾಗುವಂತಹ ಯಾವುದೇ ರಚನಾತ್ಮಕ ಸಮಸ್ಯೆ ಇದೆಯೇ ಎಂದು ಕಂಡುಹಿಡಿಯಬಹುದು.

ನಿಯಮಿತ ಹೃದಯ ತಪಾಸಣೆ

35 ವರ್ಷ ವಯಸ್ಸಿನ ನಂತರ ರೊಟೀನ್ ಟೆಸ್ಟ್, ವಿಶೇಷವಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ಹೃದ್ರೋಗ ಅಥವಾ ಮಧುಮೇಹದ ಕುಟುಂಬದ ಇತಿಹಾಸ ಹೊಂದಿರುವವರಿಗೆ ಮುಖ್ಯ.

ವಾಕ್-ದಿ-ಟಾಕ್ ಟೆಸ್ಟ್

ಇದನ್ನು ಜಿಮ್ ತರಬೇತುದಾರರು ತಮ್ಮ ಗ್ರಾಹಕರ ಹೃದಯ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಅಳವಡಿಸಿಕೊಂಡಿದ್ದಾರೆ. ಟ್ರೆಡ್‌ಮಿಲ್‌ನಲ್ಲಿರುವಾಗ ಹೆಚ್ಚು ಕಷ್ಟಪಡದೇ ಮಾತನಾಡಲು ಸಾಧ್ಯವಾದರೆ ಕ್ರಮೇಣ ತೀವ್ರತೆಯನ್ನು ಹೆಚ್ಚಿಸಲಾಗುತ್ತದೆ.

ವಂಶ ಪಾರಂಪರ್ಯ 

ನಿಮ್ಮ ಕುಟುಂಬಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ,  ಜಿಮ್‌ಗೆ ಹೋಗುವ ಮೊದಲು ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ 

ಆರೋಗ್ಯಕರ ಹೃದಯಕ್ಕಾಗಿ 8 ಸಲಹೆಗಳು

Next>>