ನಮ್ಮ ಬಗ್ಗೆ

ನಾವು ಯಾರು?

ಹ್ಯಾಪಿಯೆಸ್ಟ್ ಹೆಲ್ತ್ ಒಂದು ಜ್ಞಾನ ಉದ್ಯಮವಾಗಿದ್ದು, ಹ್ಯಾಪಿಯೆಸ್ಟ್ ಮೈಂಡ್ಸ್‌ನ ಕಾರ್ಯಕಾರಿ ಅಧ್ಯಕ್ಷ ಅಶೋಕ್ ಸೂಟಾ ಸಂಸ್ಥಾಪಕರು . HAPPIEST HEALTH ಪ್ರಪಂಚದಾದ್ಯಂತದ ಓದುಗರಿಗೆ ಹೆಚ್ಚು ವಿಭಿನ್ನವಾದ, ವಿಶ್ವಾಸಾರ್ಹ ಆರೋಗ್ಯ ಮತ್ತು ಕ್ಷೇಮದ ಬಗ್ಗೆ ಜ್ಞಾನವನ್ನು ಒದಗಿಸುತ್ತದೆ. ಸಂಪಾದಕರು, ಪತ್ರಕರ್ತರು, ಬರಹಗಾರರು, ಗ್ರಾಫಿಕ್ ವಿನ್ಯಾಸಕರು, ಗೌರವಾನ್ವಿತ ಮಾಧ್ಯಮ ಸಂಸ್ಥೆಗಳ ಛಾಯಾಗ್ರಾಹಕರು ಮತ್ತು ಆರೋಗ್ಯ ವೃತ್ತಿಪರರನ್ನು ಒಳಗೊಂಡ ನಾಯಕತ್ವವಿದೆ. ನಮಗೆ ಅಂಕಣಕಾರರಾಗಿ
ಹೆಸರಾಂತ ವೈದ್ಯರು ಮತ್ತು ಅತಿಥಿ ಬರಹಗಾರರು ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾದ ಭಾಷೆಯಲ್ಲಿ ಸಂಕೀರ್ಣ ವೈದ್ಯಕೀಯ ಒಳನೋಟಗಳನ್ನು ಪ್ರಚುರಪಡಿಸುತ್ತಾರೆ. ಪ್ರಮುಖವಾಗಿ ಈ ಡಿಜಿಟಲ್ ಸೈಟ್ ಉಚಿತವಾಗಿರುತ್ತದೆ – ಏಕೆಂದರೆ ನಿಮ್ಮ ಆರೋಗ್ಯ ಮತ್ತು ಕ್ಷೇಮದ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ!

ನಮ್ಮ ಪ್ರಮೋಟರ್ ಯಾರು?

Ashok Soota ಅಶೋಕ್ ಸೂಟಾ, ಹ್ಯಾಪಿಯೆಸ್ಟ್ ಮೈಂಡ್ಸ್‌ನ ಕಾರ್ಯಕಾರಿ ಅಧ್ಯಕ್ಷರು ಶ್ರೀಯುತ ಅಶೋಕ್ ಸೂಟಾ ಅವರು. ಒಬ್ಬ ವಾಣಿಜ್ಯೋದ್ಯಮಿಯಾಗಿ, ಅವರು ಮಹೋನ್ನತ ವೃತ್ತಿಜೀವನವನ್ನು ಹೊಂದಿದ್ದಾರೆ – ಈ ಮೊದಲು ಅವರು ವಿಪ್ರೋವನ್ನು ಐಟಿ ದೈತ್ಯಸ್ಥಾನಕ್ಕೇರಿಸಿದ ಹಿರಿಮೆ ಅವರದ್ದು. ನಂತರ ಮೈಂಡ್‌ಟ್ರೀಯನ್ನು ಯಶಸ್ವಿ IPO ಗೆ ಕೊಂಡೊಯ್ದರು ಮತ್ತು ಮುನ್ನಡೆಸಿದರು; ನಂತರ ಅವರ ಬಹುದೊಡ್ಡ ಸಾಧನೆ ಹ್ಯಾಪಿಯೆಸ್ಟ್ ಮೈಂಡ್ಸ್‌. ಅಲ್ಲಿಯೂ ಅವರ ಸಾಧನೆಯ ಕೀರ್ತಿಪತಾಕೆ ಹಾರಿಸಿ, ಈಗ ಉತ್ಸಾಹದಿಂದ ಮತ್ತು ಸಕ್ರಿಯವಾಗಿ ಹ್ಯಾಪಿಯೆಸ್ಟ್ ಹೆಲ್ತ್ ಅನ್ನು ಯಶಸ್ವಿಗೊಳಿಸುವತ್ತ ಹೆಜ್ಜೆಯಿಟ್ಟಿದ್ದಾರೆ.

ಏಪ್ರಿಲ್ 2021 ರಲ್ಲಿ, ಅಶೋಕ್ ಭಾರತದ ಮೊದಲ ಖಾಸಗಿ ವಲಯದ ನೇತೃತ್ವದ, ಲಾಭರಹಿತ ಸಂಸ್ಥೆಯಾದ SKAN ಅನ್ನು ಪ್ರಾರಂಭಿಸಿದರು, ಇದು ವಯಸ್ಸಾಗುವಿಕೆ, ನರವೈಜ್ಞಾನಿಕ ಅಸ್ವಸ್ಥತೆಗಳು ಮತ್ತು ಕರುಳಿನ ಮೈಕ್ರೋಬಯೋಮ್-ಮೆದುಳಿನ ಅಕ್ಷದ ಬಗ್ಗೆ ವೈದ್ಯಕೀಯ ಸಂಶೋಧನೆಯನ್ನು ಕೈಗೊಳ್ಳಲು ಪ್ರತ್ಯೇಕವಾಗಿ ಮೀಸಲಿಟ್ಟಿದೆ) ಅವರು 2011 ರಲ್ಲಿ ಆಶೀರ್ವಾದಂ, ಪರಿಸರ ಯೋಜನೆಗಳು ಮತ್ತು ಅಗತ್ಯವಿರುವವರಿಗೆ ಸಹಾಯಕ್ಕಾಗಿ ಟ್ರಸ್ಟ್ ಅನ್ನು ಸ್ಥಾಪಿಸಿದರು.

ಅಶೋಕ್ ಅವರು ರೂರ್ಕಿ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ (ಈಗ ಇದನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೂರ್ಕಿ ಎಂದು ಕರೆಯಲಾಗುತ್ತದೆ) ಮತ್ತು ಫಿಲಿಪೈನ್ಸ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಮಾಸ್ಟರ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪದವಿಯನ್ನು ಪಡೆದಿದ್ದಾರೆ.

“Entrepreneurship Simplified: From Idea to IPO” ನ್ಯಾಷನಲ್ ಬೆಸ್ಟ್ ಸೆಲ್ಲರ್‌ನ ಪುಸ್ತಕದ ಸಹ-ಲೇಖಕರಲ್ಲಿ ಒಬ್ಬರು. ಅವರ ಹವ್ಯಾಸಗಳು ಟ್ರೆಕ್ಕಿಂಗ್, ಹೊರಾಂಗಣ ಯೋಗ, ತೈಚಿ, ಧ್ಯಾನ ಮತ್ತು ಈಜು.

ಇದು ಡಿಜಿಟಲ್ ವೇದಿಕೆ ಮಾತ್ರವೇ?

HAPPIEST HEALTH ಈಗಾಗಲೇ ಮಾಸಿಕ ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿದೆ (ಇಲ್ಲಿ ಚಂದಾದಾರರಾಗಬಹುದು). ಇದು ಭಾರತದೊಳಗೆ ನಿಮ್ಮ ಹತ್ತಿರದ ನ್ಯೂಸ್‌ಸ್ಟ್ಯಾಂಡ್‌ನಲ್ಲಿ ಲಭ್ಯವಿದೆ. ವಿದೇಶದಲ್ಲಿರುವ ಗ್ರಾಹಕರಿಗೆ, ನೀವು ಇಲ್ಲಿ emagzter ಆವೃತ್ತಿಗೆ ಚಂದಾದಾರರಾಗಬಹುದು.ಡಿಜಿಟಲ್ ಮತ್ತು ಪ್ರಿಂಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಜ್ಞಾನವನ್ನು, ವಿವಿಧ ಆರೋಗ್ಯ ಮತ್ತು ಕ್ಷೇಮ-ಸಂಬಂಧಿತ ವಿಷಯಗಳ ಕುರಿತು ಆಳವಾದ ಮಾಹಿತಿಯೊಂದಿಗೆನ ವಿಷಯಗಳನ್ನು ಪುಸ್ತಕಗಳಾಗಿ ಪ್ರಕಟಿಸುವ ಗುರಿ ಹೊಂದಿದೆ.

ನೀವು ನಮ್ಮೊಂದಿಗೆ ಹೇಗೆ ಸಂಪರ್ಕದಲ್ಲಿರಬಹುದು?

ನಮ್ಮ ವೆಬ್‌ಸೈಟ್ ಕುರಿತು ನೀವು ಯಾವುದೇ ಅಭಿನಂದನೆಗಳನ್ನು ಸಲ್ಲಿಸುವುದಿದ್ದರೆ, ಅಥವಾ ದೂರುಗಳನ್ನು ಹೊಂದಿದ್ದರೆ feedback@happiesthealth.com ನಲ್ಲಿ ನಮಗೆ ಬರೆಯಬಹುದು. ನಿಮ್ಮ ಆರೋಗ್ಯ ಮತ್ತು ವೆಲ್ ನೆಸ್ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ನೀವು ಬಯಸಿದರೆ mystory@happiesthealth.com ನಲ್ಲಿ ನಮಗೆ ಬರೆಯಬಹುದು; ಅದನ್ನು ಮುಂದುವರೆಸಲು ನಮ್ಮ ತಂಡದ ಸದಸ್ಯರಲ್ಲಿ ಒಬ್ಬರು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ. ನೀವು ಅನಾಮಿಕರಾಗಿರಲು ಬಯಸಿದರೆ, ನಿಮ್ಮ ಗುರುತನ್ನು ಮುಚ್ಚಿಡಲು ಬೇಕಾದ ಮುನ್ನೆಚ್ಚರಿಕೆಗಳನ್ನು ನಾವು ತೆಗೆದುಕೊಳ್ಳುತ್ತೇವೆ.

ನೀವು ನಮ್ಮೊಂದಿಗೆ ಹೇಗೆ ಭಾಗವಹಿಸಬಹುದು?

HAPPIEST HEALTH ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು ಪ್ರಪಂಚದಾದ್ಯಂತ ಓದುಗರಿಗೆ ಸೇವೆ ಸಲ್ಲಿಸುತ್ತದೆ ಏಕೆಂದರೆ ಇದು ಸಾಂಪ್ರದಾಯಿಕ ಕಿಂಡರ್ ಮತ್ತು ಸರಳ ಚಿಕಿತ್ಸೆಗಳು ಸೇರಿದಂತೆ ಕ್ರಿಯಾಶೀಲ ಜ್ಞಾನ ಮತ್ತು ಇತ್ತೀಚಿನ ವೈಜ್ಞಾನಿಕ ಆವಿಷ್ಕಾರಗಳು ಮತ್ತು ಸಮಗ್ರ ಔಷಧಗಳನ್ನು ಪರಿಚಯಿಸುತ್ತದೆ.

ಸಾಂಕ್ರಾಮಿಕ ಸಮಯದಲ್ಲಿ ಆತಂಕ, ಒತ್ತಡ ಮತ್ತು ಇತರ ವೈದ್ಯಕೀಯ ಸಮಸ್ಯೆಗಳು ಹೆಚ್ಚಾದಂತೆ, ಆರೋಗ್ಯದ ವಿಷಯದಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲವೆಂದೇ ಭಾವಿಸಬಹುದು. ವೆಲ್ ನೆಸ್/ಕ್ಷೇಮ ವಲಯವು ಪ್ರಪಂಚದಾದ್ಯಂತ ಸ್ಫೋಟಕ ಬೆಳವಣಿಗೆಗೆ ಸಾಕ್ಷಿಯಾಗುವುದರಲ್ಲಿ ಆಶ್ಚರ್ಯವಿಲ್ಲ. ಆದ್ದರಿಂದ ಹ್ಯಾಪಿಯೆಸ್ಟ್ ಹೆಲ್ತ್ ಪ್ಲಾಟ್‌ಫಾರ್ಮ್, ಆರೋಗ್ಯ ಪೂರೈಕೆದಾರರು ಮತ್ತು ಆಸ್ಪತ್ರೆಗಳು ಅಥವಾ ಗ್ರಾಹಕರು, ವಿಮೆ ಮತ್ತು ಅನೇಕ ಕೈಗಾರಿಕಾ ವಲಯಗಳ ಬಗ್ಗೆ ಆಸಕ್ತಿ ಹೊಂದಿದೆ.

ಬನ್ನಿ, ಈ ಪ್ರಯಾಣದ ಭಾಗವಾಗಿ. ಮಾತನಾಡಿ.
ನಿಮ್ಮ ಬ್ರ್ಯಾಂಡ್‌ಗಾಗಿ ಕಸ್ಟಮೈಸ್ ಮಾಡಿದ ಪರಿಹಾರಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು.

PAN-ಇಂಡಿಯಾ ಪರಿಹಾರಗಳಿಗಾಗಿ: ಟೀನಾ ಮಿತ್ರಾ
+91 9833376866
tina.mitra@happiesthealth.com

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ: ತಬ್ರಿಜ್ ಅಹ್ಮದ್
+91 9886333367
Tabriz.ahmed@happiesthealth.com

ನಮ್ಮ ಲೀಡರ್‌ಶಿಪ್ ತಂಡವನ್ನು ಭೇಟಿ ಮಾಡಿ Right arrow

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ