ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಮೃದುವಾದ ಆಟಿಕೆಗಳಿಂದ ನಿಮ್ಮ ಮಕ್ಕಳಿಗೆ ಅಪಾಯವಿದೆಯೇ?
58

ಮೃದುವಾದ ಆಟಿಕೆಗಳಿಂದ ನಿಮ್ಮ ಮಕ್ಕಳಿಗೆ ಅಪಾಯವಿದೆಯೇ?

ನಿಮ್ಮ ಮಕ್ಕಳು ಸದಾಕಾಲ ಬಣ್ಣಬಣ್ಣದ  ಮೃದು ಆಟಿಕೆಗಳನ್ನು ಹೊಂದಲು ಇಷ್ಟಪಡುತ್ತಾರೆ, ಆದರೆ ಅವರಂತೆಯೇ ಧೂಳಿನ ಕ್ರಿಮಿಗಳೂ ಸಹ ಅವುಗಳನ್ನೇ ಇಷ್ಟಪಡುತ್ತವೆ. 

ಚಿತ್ರಕೃಪೆ: ಅನಂತ ಸುಬ್ರಹ್ಮಣ್ಯಂ ಕೆ

ಒಬ್ಬ ತಾಯಿಯಾಗಿ, ಸ್ತುತಿ ಅಗರ್ವಾಲ್ ಯಾವಾಗಲೂ ತಮ್ಮ ಹಿರಿಯ ಮಗನಳಗೆ ಕ್ರಿಮಿಗಳಿಂದ ಉಂಟಾಗುವ ಧೂಳಿನ ಅಲರ್ಜಿಯ ಬಗ್ಗೆ ಕಾಳಜಿ ವಹಿಸುತ್ತಾರೆ.  ಅವರು ತೆಗೆದುಕೊಂಡ ಮುನ್ನೆಚ್ಚರಿಕೆಗಳಲ್ಲಿ ಒಂದು ಎಂದರೆ ತನ್ನ ಮನೆಯಲ್ಲಿ ಮೃದು ಆಟಿಕೆಗಳನ್ನು ಮಕ್ಕಳ ಕೈಗೆ ಸಿಗದಂತೆ ಇರಿಸುವುದು. ಸಾಕುಪ್ರಾಣಿಗಳು ಮತ್ತು ಕಾಡು ಪ್ರಾಣಿಗಳ ಚಿಕ್ಕ ಪ್ರತಿರೂಪವಾದ ವರ್ಣ ರಂಜಿತ ಮೃದು ಆಟಿಕೆಗಳು ಮಕ್ಕಳನ್ನು ಮಾತ್ರವಲ್ಲದೇ ಧೂಳಿನ ಕ್ರಿಮಿಗಳನ್ನು ಸಹಾ ಆಕರ್ಷಿಸುತ್ತವೆ 

ಮುಂಬೈನ ಬ್ಲಾಗರ್ ಅಗರ್ವಾಲ್ ಹೇಳುವಂತೆ ಅವರ ನಾಲ್ಕೂವರೆ ವರ್ಷದ ಮಗನಿಗೆ ಧೂಳಿನ ಕ್ರಿಮಿಗಳ ಅಲರ್ಜಿಯ ಸಮಸ್ಯೆ. ಅದಕ್ಕೆ ಸಂಬಂಧಿಸಿದ ವಿಶಿಷ್ಟ ಲಕ್ಷಣವೆಂದರೆ ಸೀನುವಿಕೆ ಮತ್ತು ಮೂಗು ಸೋರುವಿಕೆ. ನಾಲ್ಕು ವರ್ಷಗಳ ಹಿಂದೆ ಅವರ ಕುಟುಂಬವು ಹಾಂಗ್ಕಾಂಗ್‌ನಲ್ಲಿ ವಾಸಿಸುತ್ತಿದ್ದಾಗ, ಅವರ ಮಗನಿಗೆ ಪದೇ ಪದೇ ದದ್ದುಗಳು ಕಾಣಿಸಿಕೊಳ್ಳುತ್ತಿದ್ದವು ಮತ್ತು ಪೋಷಕರಿಗೆ ನಿಖರವಾದ ಸಮಸ್ಯೆ ಏನೆಂದು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಹಾಂಗ್ ಕಾಂಗ್‌ನಲ್ಲಿ ಡಾಕ್ಟರ್‌ಗಳನ್ನು ಪದೇ ಪದೇ ಸಂಪರ್ಕಿಸಲು ಸಾಧ್ಯವಿಲ್ಲ. ಒಬ್ಬ ವೈದ್ಯರನ್ನು ನಾವು ಭೇಟಿಯಾದರೂ ಸಹ ಹಾಂಗ್ ಕಾಂಗ್‌ನಲ್ಲಿ ಧೂಳಿನ ಕ್ರಿಮಿ ಅಲರ್ಜಿ ತುಂಬಾ ಸಾಮಾನ್ಯವಾಗಿದ್ದುದರಿಂದ ಅದು ದದ್ದು ಎಂಬುದನ್ನು ತಳ್ಳಿ ಹಾಕಿದರು. ಆಗ ಅವನಿಗೆ (ಮಗನಿಗೆ) ಕೇವಲ ಹತ್ತು ತಿಂಗಳ ವಯಸ್ಸಾಗಿತ್ತು. ನಾವು ಮುಂಬೈಗೆ ಬಂದಾಗ, ಸೀನುವಿಕೆ ಮತ್ತು ಮೂಗು ಸೋರುವಿಕೆಯೊಂದಿಗೆ ಸಮಸ್ಯೆ ಮತ್ತೂ ಉಲ್ಬಣಗೊಂಡಿತು. ಅದು ಧೂಳಿನ ಕ್ರಿಮಿಗಳ ಅಲರ್ಜಿ ಎಂದು ಡಾಕ್ಟರ್ ಹೇಳಿದರು,” ಎಂದು ಅವರು ಹೇಳುತ್ತಾರೆ.  

ನಾವು ಸಂಪರ್ಕಿಸಿದ ವೈದ್ಯರು ತುಂಬಾ ಸ್ಪಷ್ಟವಾಗಿ ಮೃದು ಆಟಿಕೆಗಳಿಗೆ ಬೇಡ ಎಂದು ಹೇಳಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ತಮ್ಮ ಪತಿ ಉಡುಗೊರೆಯಾಗಿ ನೀಡಿದ ಮೃದು ಆಟಿಕೆಗಳನ್ನು ಈಗ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಹಾಕಲಾಗಿದೆ. ಮೃದು ಆಟಿಕೆಗಳು ಧೂಳು ಕ್ರಿಮಿಗಳಿಗೆ ಬಹು ದೊಡ್ಡ ಆಕರ್ಷಣೆಯಾಗಿದೆ. ತುಪ್ಪುಳಿನಂತೆ ಮೆದುವಾಗಿರುವ, ತುಂಬಾ ಆಕರ್ಷಕವಾಗಿ ಕಾಣುವ ಮೃದು ಆಟಿಕೆಗಳು ಅತ್ಯಂತ ಕೆಟ್ಟದ್ದಾಗಿದೆ. ನಾವು ನಮ್ಮ ಮಕ್ಕಳಿಗೆ ಮರದ ಆಟಿಕೆಗಳನ್ನು ನೀಡಿದ್ದೇವೆ ಮತ್ತು ಅದನ್ನು ನಾವು ಆಗಾಗ ತೊಳೆಯಬಹುದು,” ಎಂದು ಅಗರ್ವಾಲ್ ಹೇಳುತ್ತಾರೆ. 

ಮೃದು ಆಟಿಕೆಗಳನ್ನು ತೊಳೆಯುವುದು ಹೇಗೆ?

 “ಅನೇಕ ವೇಳೆ, ಮಗುವಿಗೆ ಸದಾಕಾಲ ಹತ್ತಿರವಾದ ಮೃದು ಆಟಿಕೆಗಳನ್ನು ನಾವು ಕಡೆಗಣಿಸುತ್ತೇವೆ. ಮಕ್ಕಳಲ್ಲಿ ಆಗಾಗ್ಗೆ ಕಂಡುಬರುವ ಅಲರ್ಜಿಯೊಂದಿಗೆ ಮೃದು ಆಟಿಕೆಗಳು ಮನೆಯಲ್ಲಿನ ಬಹಳಷ್ಟು ಧೂಳಿನ ಕ್ರಿಮಿಗಳನ್ನು ಹೊಂದಿರುವುದನ್ನು ಗುರುತಿಸುತ್ತೇವೆ,” ಎಂದು ಪುಣೆಯ ಅಪೋಲೋ ಕ್ಲಿನಿಕ್‌ನ ಹಿರಿಯ ಮಕ್ಕಳ ತಜ್ಞೆ ಡಾ. ಅನುಪಮಾ ಸೇನ್ ಹೇಳುತ್ತಾರೆ. ಧೂಳಿನ ಕ್ರಿಮಿಗಳಿಂದ ತುರಿಕೆ,  ದದ್ದು, ಶೀತ ಅಥವಾ ಕಣ್ಣಿನ ಸೋರುವಿಕೆಯಂತಹ ಲಕ್ಷಣಗಳು ಇರುವಂತಹ ಅಲರ್ಜಿ ಬರಬಹುದು ಅವರು ಹೇಳುತ್ತಾರೆ. 

ಅಟೋಪಿಕ್ ಚರ್ಮದ ಊತ ಎಂದು ಕರೆಯಲ್ಪಡುವ ತೀವ್ರವಾದ ಒಣ ಚರ್ಮ ಹೊಂದಿರುವ ಮಕ್ಕಳು ಧೂಳಿನ ಕ್ರಿಮಿ ಅಲರ್ಜಿಗೆ ಹೆಚ್ಚು ಗುರಿಯಾಗುತ್ತಾರೆ. ಮೃದು ಆಟಿಕೆಯಲ್ಲಿರುವ ಧೂಳಿನ ಕ್ರಿಮಿಗಳಿಗೆ ಒಡ್ಡಿಕೊಂಡರೆ ಪರಿಸ್ಥಿತಿಯು ಇನ್ನೂ ಉಲ್ಬಣಗೊಳ್ಳಬಹುದು ಎಂದು ಅವರು ಸೂಚಿಸುತ್ತಾರೆ 

 “ಅಲರ್ಜಿಯು ಮುಂದುವರಿದರೆ, ಇದು ಮುಂದೆ ಅಸ್ತಮಾಕ್ಕೆ ಕಾರಣವಾಗಬಹುದು. ಮಗುವಿನ ಪರಿಸರದಲ್ಲಿರುವ ಅಲರ್ಜಿನ್‌ (ಅಲರ್ಜಿಯನ್ನು ಹುಟ್ಟುಹಾಕುವ ಅಂಶ) ಗಳಿಂದ ಉಂಟಾಗುವ ಅಲರ್ಜಿಯಿಂದ ಅಸ್ತಮಾ ಉಂಟಾಗುತ್ತದೆ. ಧೂಳಿನ ಕ್ರಿಮಿಗಳು ಮಗುವಿನ ತಳ್ಳುಗಾಡಿ, ತೊಟ್ಟಿಲು, ಹಾಸಿಗೆ ಅಥವಾ ಮ್ಯಾಟ್ರೆಸ್‌ಗಳಲ್ಲಿಯೂ ಇರಬಹುದು,” ಎಂದು ಡಾ. ಸೇನ್ ಹೇಳುತ್ತಾರೆ. ಮೃದು ಆಟಿಕೆಗಳು ಮಕ್ಕಳಲ್ಲಿ ಅಲರ್ಜಿಯ ಮೂಲವಾಗಬಹುದು ಎಂದು ಅನೇಕ ಸಮೀಕ್ಷೆಗಳು ನಿಸ್ಸಂದೇಹವಾಗಿ ಸಾಬೀತುಪಡಿಸಿವೆ ಎಂದು ಅವರು ಹೇಳುತ್ತಾರೆ.ನಾವು ಮಕ್ಕಳಿಗೆ ಮೃದು ಆಟಿಕೆಗಳನ್ನು ನೀಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಾವು ಎಲ್ಲಾ ಆಟಿಕೆಗಳನ್ನು ತೊಳೆದು, ಒಣಗಿಸಿ ಸ್ವಚ್ಛಗೊಳಿಸಬೇಕು,” ಎಂದು ಡಾ. ಸೇನ್ ಸೂಚಿಸುತ್ತಾರೆ. 

ಮೃದು ಆಟಿಕೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಡಾ, ಸೇನ್ ಅವರ ಪ್ರಕಾರ, ಉಷ್ಣ ವಾತಾವರಣದಲ್ಲಿ ಮನೆಯಲ್ಲಿನ ಮೃದು ಆಟಿಕೆಗಳನ್ನು ಸ್ವಚ್ಛಗೊಳಿಸಲು ಒಳ್ಳೆಯ ಮಾರ್ಗವೆಂದರೆ, ಅವುಗಳನ್ನು ಲಿಕ್ವಿಡ್ ಡಿಟರ್ಜೆಂಟ್‌ನೊಂದಿಗೆ ಆ್ಯಂಟಿ-ಸೆಪ್ಟಿಕ್‌ಗಳನ್ನು ಬಳಸಿ ತೊಳೆಯುವುದು ಮತ್ತು ಬಿಸಿಲಿನಲ್ಲಿ ಒಣ ಹಾಕುವುದು. ತೇವಾಂಶ ಮತ್ತು ಶಾಖದಿಂದಾಗಿ ಧೂಳಿನ ಕ್ರಿಮಿಗಳು ಉಷ್ಣವಲಯದ ವಾತಾವರಣದಲ್ಲಿ ಬೆಳೆಯುತ್ತವೆ. ಟೀಥರ್‌ಗಳು, ಗಟ್ಟಿ ಆಟಿಕೆಗಳು, ಎಳೆಯುವ ಆಟಿಕೆಗಳು, ಎಲ್ಲವನ್ನು ನಿಮ್ಮ ಮಕ್ಕಳಿಗೆ ಕೊಡುವ ಮೊದಲು ತೊಳೆಯಬೇಕು ಮತ್ತು ಸ್ವಚ್ಛವಾಗಿಡಬೇಕು. ಅದೇ ಸಮಯದಲ್ಲಿ ಸುತ್ತಲಿನ ಉಳಿದ ಜಾಗಗಳನ್ನು ವಾಕ್ಯೂಮ್‌ ಮಾಡುವ ಮೂಲಕ ಸ್ವಚ್ಛವಾಗಿಡಬೇಕು. ಮ್ಯಾಟ್ರೆಸ್ ಅನ್ನು ವಾಕ್ಯೂಮ್ ಮಾಡಬೇಕು ಮತ್ತು ಬಿಸಿಲಿನಲ್ಲಿ ಒಣಗಿಸಬೇಕು. ಸೋಂಕು ನಿವಾರಣೆಗೆ ಬಿಸಿಲಿನಲ್ಲಿ ಒಣಗಿಸುವುದು ಉತ್ತಮ ಮಾರ್ಗವಾಗಿದೆ. ಎಲ್ಲಾ ಮೃದು ಆಟಿಕೆಗಳು ಅಲರ್ಜಿಯನ್ನು ಉಂಟು ಮಾಡುವುದಿಲ್ಲ. ಮೇಲ್ಮೈ ಮೇಲೆ ಧೂಳಿನ ಕ್ರಿಮಿಗಳ ಸಂಗ್ರಹವಾದ ಆಟಿಕೆಗಳು ಅಲರ್ಜಿಯನ್ನು ಉಂಟು ಮಾಡುತ್ತವೆ. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇನ್ನೂ ಹೆಚ್ಚು ಓಡಾಡದೇ ಇರುವುದರಿಂದ ಅವರಲ್ಲಿ ಧೂಳಿನ ಕ್ರಿಮಿ ಅಲರ್ಜಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಯಾವಾಗ ಅವರು ಶಾಲೆಗೆ ಹೋಗಲು ಪ್ರಾರಂಭಿಸುತ್ತಾರೋ, ಆಗ ಇತರ ಮಕ್ಕಳೊಂದಿಗೆ ಆಟವಾಡಲು ಆರಂಭಿಸುತ್ತಾರೆ ಆದ್ದರಿಂದ ಮೃದು ಆಟಿಕೆಗಳ ಜೊತೆಗೆ ಅವರ ಸಂಪರ್ಕ ಕ್ರಮೇಣ ಕಡಿಮೆಗೊಳ್ಳುತ್ತದೆ,” ಎಂದು ಅವರು ಹೇಳುತ್ತಾರೆ. 

ಮಕ್ಕಳಿಗೆ ಆಟಿಕೆಗಳನ್ನು ನೀಡುವಾಗ ಪೋಷಕರು ಎಚ್ಚರಿಕೆಯಿಂದ ಇರಬೇಕು ಮತ್ತು 12  ತಿಂಗಳಿಗಿಂತ ಕಡಿಮೆ ವಯಸ್ಸಿನ ಅಂಬೆಗಾಲಿಡುವ ಮಕ್ಕಳು ಮಲಗುವಾಗ ತಮ್ಮ ಪಕ್ಕದಲ್ಲಿ ಯಾವುದೇ ಆಟಿಕೆಯನ್ನು ಇಟ್ಟುಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಅವರು ಉಸಿರಾಡುವಾಗ ಆಟಿಕೆಯು ಅಡ್ಡವಿದ್ದರೆ ಅವರ ಮೂಗು ಕಟ್ಟಿಕೊಳ್ಳಬಹುದು.” ಎಂದು ಡಾ. ಸೇನ್ ಹೇಳುತ್ತಾರೆ. 

ಬೆಂಗಳೂರು ಮೂಲದ ದಿವ್ಯಾ ಸೋಮಯಾಜಿ, ತಮ್ಮ ಒಂಬತ್ತು ವರ್ಷದ ಮಗಳ ಅಲರ್ಜಿಗೆ ಧೂಳಿನ ಕ್ರಿಮಿಗಳೇ ಕಾರಣ ಎಂಬುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಹೇಳುತ್ತಾರೆನನ್ನ ಮಗಳ ಕಣ್ಣುಗಳು ಆಗಾಗ ಕೆಂಪಾಗುತ್ತಿತ್ತು, ಕಣ್ಣುಗಳು ಊದಿಕೊಂಡು ನೀರಿಳಿಯುತ್ತಿತ್ತು. ನಾವು ಮೊದಲು ಇದು ಕಣ್ಣಿನ ಸಮಸ್ಯೆಯಿರಬೇಕೆಂದು ಭಾವಿಸಿ ನೇತ್ರತಜ್ಞರನ್ನು ಸಂಪರ್ಕಿಸಿದೆವು. ಅವಳಿಗೆ  ಅಲರ್ಜಿ ಇದೆ ಎಂದು ನಮಗೆ ಅಲ್ಲಿ ತಿಳಿಯಿತು. ಈ ಲಕ್ಷಣಗಳನ್ನು ಕಡಿಮೆಗೊಳಿಸುವಲ್ಲಿ ಕಣ್ಣಿನ ಡ್ರಾಪ್ ನೆರವಾಯಿತು. ನಂತರ ನಾವು ಅಲರ್ಜಿ ತಜ್ಞರನ್ನು ಸಂಪರ್ಕಿಸಿದಾಗ ಅವರು ಅನೇಕ ಪರೀಕ್ಷೆಗಳನ್ನು ನಡೆಸಿ ಇದಕ್ಕೆ ಧೂಳಿನ ಕ್ರಿಮಿ ಕಾರಣ ಎಂಬುದನ್ನು ಪತ್ತೆ ಹಚ್ಚಿದರು,” ಎಂದು ಸೋಮಯಾಜಿ ಹೇಳುತ್ತಾರೆ 

ತನ್ನ ಮಗಳು ಆಟಿಕೆಯೊಂದಿಗೆ ಆಡುವಾಗ ಯಾವಾಗಲೂ ಎಚ್ಚರಿಕೆಯಿಂದ ಇರುತ್ತಾಳೆ ಹಾಗೂ ಅವಳ ಎಲ್ಲಾ ಆಟಿಕೆಗಳನ್ನು ತೊಳೆದು ಸ್ವಚ್ಛವಾಗಿ ಇಡಲಾಗಿದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ ಎಂದು ಸೋಮಯಾಜಿ ಹೇಳುತ್ತಾರೆ. ಅದೃಷ್ಟವಶಾತ್ ನನ್ನ ಮಗಳು ಮೃದು ಆಟಿಕೆಗಳನ್ನು ಅತಿಯಾಗಿ ಇಷ್ಟಪಡುವುದಿಲ್ಲ. ಆದರೆ ಅವಳು ಅದರೊಂದಿಗೆ ಆಟವಾಡುವಾಗ ನಾವು ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತೇವೆ,” ಎಂದು ಅವರು ಹೇಳುತ್ತಾರೆ. ಅದಲ್ಲದೇ ಮನೆಯಲ್ಲಿ ಧೂಳನ್ನು ಆದಷ್ಟೂ ಕಡಿಮೆಗೊಳಿಸಲು ದಿನಾಲೂ ಒರೆಸಲಾಗುತ್ತದೆ ಎಂದು ಅವರು ಹೇಳಿದರು. 

ದಿವ್ಯಾ ಅವರ ಮಗಳಿಗೆ ಚಿಕಿತ್ಸೆ ನೀಡುತ್ತಿರುವ ಬೆಂಗಳೂರಿನ ಕಾಂಗರೂಕೇರ್ ಆಸ್ಪತ್ರೆಯ ಮಕ್ಕಳ ಶ್ವಾಸಕೋಶ ತಜ್ಞೆ ಮತ್ತು ಅಲರ್ಜಿ ತಜ್ಞೆಯಾದ ಡಾ. ಸೌಮ್ಯ ಆರುಡಿ ನಾಗರಾಜನ್ ಅವರು, ಆ ಬಾಲಕಿಗೆ ಪುಷ್ಪ ಧೂಳಿ ಮತ್ತು ಧೂಳಿನ ಕ್ರಿಮಿಗಳ ಅಲರ್ಜಿಯಿದೆ ಎಂದು ಹೇಳುತ್ತಾರೆ. ಧೂಳಿನ ಕ್ರಿಮಿಗಳು ಮಾನವನ ಸತ್ತ ಚರ್ಮವನ್ನು ತಿನ್ನುವ ಸೂಕ್ಷ್ಮ ಜೀವಿಗಳಾಗಿವೆ. ಅವು ದಿಂಬುಗಳು, ಹಾಸಿಗೆಗಳು, ಸೋಫಾ ಕುಶನ್‌ಗಳಂತಹ ಬೆಚ್ಚಗಿರುವ ಪರಿಸರದಲ್ಲಿ ಅಭಿವೃದ್ಧಿ ಹೊಂದುತ್ತವೆೆ. ನಿಜವಾದ ಧೂಳಿನ ಅನುಪಸ್ಥಿತಿಯಲ್ಲಿಯೂ ಸಹ ಧೂಳಿನ ಕ್ರಿಮಿಗಳು ಬೆಳೆಯುತ್ತವೆ. ಅನೇಕ ಜನರು ಧೂಳನ್ನೇ  ಧೂಳಿನ ಕ್ರಮಿಗಳು ಎಂದು ತಪ್ಪಾಗಿ ಭಾವಿಸುತ್ತಾರೆ,” ಎಂದು ಡಾ. ನಾಗರಾಜನ್ ಹೇಳುತ್ತಾರೆ. ಧೂಳಿನ ಕ್ರಿಮಿಗಳ ಪ್ರೋಟೀನ್ ಮಲವು ಅಲರ್ಜಿಯನ್ನು ಉಂಟುಮಾಡುವ ವಸ್ತುವಾಗಿದೆ ಎಂಬುದನ್ನೂ ಅವರು ಹೇಳುತ್ತಾರೆ. 

ಪೀಡಿಯಾಟ್ರಿಕ್ ಅಲರ್ಜಿ ಇಮ್ಯುನಾಲಜಿ ಎಂಬ ಜರ್ನಲ್‌ನಲ್ಲಿ ಪ್ರಕಟವಾದ 2011 ರ ಸಂಶೋಧನಾ ಪ್ರಬಂಧವು ಮೃದು ಆಟಿಕೆಗಳು ಮನೆಯ ಧೂಳಿನ ಕ್ರಿಮಿಗಳು (HDM) ಮತ್ತು HDM ಅಲರ್ಜಿನ್‌ಗಳ ಪ್ರಮುಖ ಮೂಲವಾಗಿದೆ ಮತ್ತು ಮೃದು ಆಟಿಕೆಗಳೊಂದಿಗೆ ಮಲಗುವುದು ಎಚ್‌ಡಿಎಂ ಸಂವೇದನೆಗೆ ಅಪಾಯಕಾರಿಯಾದ ಗಮನಾರ್ಹ ಅಂಶವಾಗಿದೆ ಎಂದು ಹೇಳುತ್ತದೆ. ಸಂಶೋಧಕರು ಮೃದು ಆಟಕೆಗಳಿಂದ ಎಚ್‌ಟಿಎಂ ಅನ್ನು ತೊಡೆದುಹಾಕಲು ಮೂರು ತಂತ್ರಗಳನ್ನು ಅಧ್ಯಯನ ಮಾಡಿದರು, ಅವುಗಳೆಂದರೆ ಫ್ರೀಜ್ ಮಾಡುವಿಕೆ, ಬಿಸಿ ಟಂಬಲ್ ಒಣಗಿಸುವಿಕೆ, ಮತ್ತು ನೀಲಗಿರಿ ಎಣ್ಣೆಯಿಂದ ತೊಳೆಯುವಿಕೆ. ಸಂಶೋಧನೆಯ ಪ್ರಕಾರ, ‘ಮೂವತ್ತಾರು ಆಟಿಕೆಗಳನ್ನು (ಪ್ರತಿ ಸಂಸ್ಕರಣೆ ಗುಂಪಿನಲ್ಲಿ 12 ರಂತೆ) ರಾತ್ರಿಯಿಡೀ ಫ್ರೀಜ್ ಮಾಡುವ ಮೊದಲು ಮತ್ತು ನಂತರ ಉಷ್ಣ ಬಿಡುಗಡೆ ವಿಧಾನದ ಮೂಲಕ ಲೈವ್ HDM ಲೆಕ್ಕ ಹಾಕಲಾಯಿತು, ಬಿಸಿ ಟಂಬಲ್ ಅನ್ನು ಒಂದು ಗಂಟೆ ಒಣಗಿಸಿ ಮತ್ತು 0.2 ರಿಂದ 0.4 ಪ್ರತಿಶತದಷ್ಟು ನೀಲಗಿರಿ ಎಣ್ಣೆಯಲ್ಲಿ ತೊಳೆಯಲಾಗುತ್ತದೆ. ಫ್ರೀಜ್ ಮಾಡುವುದು, ಬಿಸಿಯಾದ ಟಂಬಲ್ ಒಣಗಿಸುವುದು ಮತ್ತು ನೀಲಗಿರಿ ಎಣ್ಣೆಯಿಂದ ತೊಳೆಯುವುದರಿಂದ ಲೈವ್ HDM ಗಳಲ್ಲಿ ಗಮನಾರ್ಹವಾದ ಇಳಿಕೆ, ಅಂದರೆ ಕ್ರಮವಾಗಿ 95.1 ಪ್ರತಿಶತ, 89.1 ಪ್ರತಿಶತ ಮತ್ತು 95.1 ಪ್ರತಿಶತ ಇಳಿಕೆ ಕಂಡುಬಂದಿತು. 

ಧೂಳಿನ ಕ್ರಿಮಿಗಳು ದಿಂಬಿನಲ್ಲಿ ಮತ್ತು ಎಸಿ ಫಿಲ್ಟರ್‌ಗಳನ್ನು ಅಡಗಿರುತ್ತವೆಯೇ? 

ಪಂಚತಾರಾ ಹೋಟೆಲ್‌ಗಳು ಸೇರಿದಂತೆ ಎಲ್ಲೆಂದರಲ್ಲಿ ಧೂಳಿನ ಕ್ರಿಮಿಗಳ ಕಂಡುಬರುತ್ತವೆ ಎಂದು ಡಾ. ನಾಗರಾಜನ್ ಹೇಳುತ್ತಾರೆ. ಕೆಲವು ಪ್ರಕರಣಗಳಲ್ಲಿ, ಮಕ್ಕಳು ರಜೆಯಲ್ಲಿನ ಪ್ರವಾಸದಿಂದ ಹಿಂತಿರುಗಿದ ತಕ್ಷಣ ಅಲರ್ಜಿಯಾಗುತ್ತದೆ. ಇದರ ವಿಶಿಷ್ಟ ಲಕ್ಷಣಗಳಾದ ಸೀನುವಿಕೆ ಮತ್ತು ಕಣ್ಣಿನಲ್ಲಿ ನೀರು ಬರುವಿಕೆಯನ್ನು ಒಳಗೊಂಡಿರುತ್ತದೆ. ಹೋಟೆಲ್‌ನಲ್ಲಿನ ದಿಂಬಿನ ಕವರ್‌ಗಳನ್ನು ಬದಲಾಯಿಸಿರಬಹುದು ಆದರೆ ದಿಂಬನ್ನು ಬದಲಾಯಿಸದೇ ಇರುವುದರಿಂದ ಅವುಗಳು (ಧೂಳಿನ ಕ್ರಿಮಿಗಳು) ಅಲ್ಲಿಯೇ ಒಳಗಡೆ ಇರುತ್ತವೆ. ಎಂದು ಅವರು ಹೇಳುತ್ತಾರೆ.  

 “ಎಸಿ ಫಿಲ್ಟರ್‌ಗಳು, ವಿಶೇಷವಾಗಿ ಕಾರಿನಲ್ಲಿ ಬಳಸುವಂತವುಗಳು ಧೂಳಿನ ಕ್ರಿಮಿಗಳ ಮೂಲಗಳಾಗಿವೆ ಮತ್ತು ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು,” ಎಂದು ಡಾ. ನಾಗರಾಜನ್ ಹೇಳುತ್ತಾರೆ.ಹವಾ ನಿಯಂತ್ರಣದಲ್ಲಿನ ತಂಪಾದ ವಾತಾವರಣವು ಧೂಳಿನ ಕ್ರಿಮಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ,” ಎಂದು ಅವರು ಸೇರಿಸುತ್ತಾರೆ 

ರೋಗನಿರ್ಣಯ 

ಧೂಳಿನ ಕ್ರಿಮಿ ಅಲರ್ಜಿಯ ರೋಗ ನಿರ್ಣಯವು ಬದಲಾಗಬಹುದು ಮತ್ತು ಅಲರ್ಜಿಯನ್ನು ಗುರುತಿಸುವುದು ನಿರ್ಮೂಲನೆಯ ಪ್ರಕ್ರಿಯೆಯಾಗಿದೆ. ನಿರ್ಮೂಲನೆಯ ಪ್ರಕ್ರಿಯೆಯಲ್ಲಿ, ಮಗುವು ಏನನ್ನು ತಿಂದಿದೆ ಮತ್ತು ಕುಡಿದಿದೆ, ಮಗುವು ಯಾವ ಮೇಲ್ಮೈಯನ್ನು ಮುಟ್ಟಿದೆ ಮತ್ತು ಯಾವ ಬಟ್ಟೆಯನ್ನು ಧರಿಸಿದೆ ಎಂಬುದನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕು,” ಎಂದು ಡಾ, ಸೇನ್ ಅವರು ಹೇಳುತ್ತಾರೆ. ಅಲರ್ಜಿಯನ್ನು ಹೊಂದಿರುವ ಮಕ್ಕಳ ಪೋಷಕರು ಅಲರ್ಜಿಯನ್ನು ಹುಟ್ಟುಹಾಕುವ ಅಲರ್ಜಿನ್‌ಗಳ ಸಂಭವನೀಯತೆ ಮತ್ತು ಪ್ರಚೋದಕಗಳನ್ನು ಕಂಡು ಹಿಡಿಯಲು ಮತ್ತು ಮಕ್ಕಳು ಏನನ್ನು ತಿನ್ನುತ್ತಾರೆ ಮತ್ತು ಯಾವುದಕ್ಕೆ ಒಡ್ಡಿಕೊಂಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ಡೈರಿಯನ್ನು ನಿರ್ವಹಿಸಬೇಕು ಎಂದು ಅವರು ಹೇಳುತ್ತಾರೆ.  

ಚರ್ಮದ ಚುಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಂತಹ ಪರೀಕ್ಷೆಯಲ್ಲಿ ಅಲರ್ಜಿಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಅಲರ್ಜಿನ್‌ಗಳು ಅಥವಾ ಅಲರ್ಜಿಯನ್ನು ಉಂಟು ಮಾಡುವ ಪದಾರ್ಥಗಳಿಗೆ ಒಡ್ಡಲಾಗುತ್ತದೆ ಮತ್ತು ಅಲರ್ಜಿಯ ಪ್ರತಿಕ್ರಿಯೆಯ ರೂಪದಲ್ಲಿ ತಕ್ಷಣ ಕಂಡುಬರುವ ಲಕ್ಷಣಗಳನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಗಮನಿಸಲಾಗುತ್ತದೆ. 

ಚಿಕಿತ್ಸೆಯು ಆ್ಯಂಟಿಹಿಸ್ಟಮೈನ್‌ಗಳು  ಮತ್ತು ಅಲರ್ಜಿ ನಿರೋಧಕ ಔಷಧಿ ರೂಪದಲ್ಲಿ ಇರುತ್ತವೆ. ಆ್ಯಂಟಿಹಿಸ್ಟಮೈನ್‌ಗಳೊಂದಿಗಿನ ಪ್ರಾಥಮಿಕ ಚಿಕಿತ್ಸೆಯು ಯಾವುದೇ ರೀತಿಯ ಉತ್ತಮ ಫಲಿತಾಂಶವನ್ನು ನೀಡದಿದ್ದಾಗ ಚರ್ಮದ ಚುಚ್ಚು ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಲ್ಲದೇ, ಅಲರ್ಜಿಯು ಮಧ್ಯಮದಿಂದ ತೀವ್ರವಾಗಿದ್ದರೆ, ನಾವು ಚರ್ಮದ ಚುಚ್ಚು ಪರೀಕ್ಷೆಯೊಂದಿಗೆ ಮುಂದುವರಿಯುತ್ತೇವೆ ಎಂದು ಡಾ. ನಾಗರಾಜನ್ ಹೇಳುತ್ತಾರೆ.  

ಅಲರ್ಜಿ ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ:

ಆಗಾಗ್ಗೆ ಉಂಟಾಗುವ ಅಲರ್ಜಿಯ ಲಕ್ಷಣಗಳು ಮಗುವಿನ ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಲರ್ಜಿಯಿಂದ ಬಳಲುತ್ತಿರುವ ಮಕ್ಕಳ ಪೋಷಕರು ಹೇಳುತ್ತಾರೆ.  

ಋತುವಿನ ಬದಲಾವಣೆಯೊಂದಿಗೆ ತಮ್ಮ ಮಗನ ಧೂಳಿನ ಕ್ರಿಮಿಯ ಅಲರ್ಜಿಯು ಉಲ್ಬಣಗೊಳ್ಳುತ್ತದೆ ಮತ್ತು ಅದು ಅವನ ಏಕಾಗ್ರತೆಯ ಮೇಲೆ ಪರಿಣಾಮಬೀರುತ್ತದೆ ಎಂದು ಅಗರ್ವಾಲ್ ಹೇಳುತ್ತಾರೆ. ನಾವು ಅನೇಕ ವೈದ್ಯರನ್ನು ಸಂಪರ್ಕಿಸಿದ್ದೇವೆ. ಮೂಗಿನ ಸ್ಪ್ರೇ ಅವನಿಗೆ ಸಹಾಯ ಮಾಡಿದೆ. ಆದರೆ ಇದನ್ನು ಯಾವಾಗಲೂ ಮುಂದುವರಿಸಬೇಕಾಗುತ್ತದೆಯೇ ಎಂಬುದು ನಮಗೆ ತಿಳಿದಿಲ್ಲ. ಪ್ರಕೃತಿ ಚಿಕಿತ್ಸೆಯಲ್ಲಿ ಲವಣ ಚಿಕಿತ್ಸೆಯಂತಹ ಚಿಕಿತ್ಸೆಯನ್ನೂ ಸಹ ನಾವು ಮಾಡುತ್ತಿದ್ದೇವೆ. ಆದರೆ ಧೂಳನ್ನು ತಪ್ಪಿಸುವುದು ದೊಡ್ಡ ಸವಾಲಾಗಿದೆ,” ಎಂದು ಅಗರ್ವಾಲ್ ಅವರು ಹೇಳುತ್ತಾರೆ. ಮಗನ ಅಲರ್ಜಿಯ ಹೊರತಾಗಿಯೂ ಕೆಸರು ಮತ್ತು ಮಣ್ಣಿನಲ್ಲಿ ಆಡಲು ಅವನನ್ನು ಪ್ರೋತ್ಸಾಹಿಸುತ್ತೇನೆ, ಇದರಿಂದ ಅವನು ರೋಗ ನಿರೋಧಕ ಶಕ್ತಿಯನ್ನು ಪಡೆಯುತ್ತಾನೆ ಎಂದು ಅಗರ್ವಾಲ್ ಹೇಳುತ್ತಾರೆ. 

 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ