ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಮಕ್ಕಳ ಮೂಗಿನಲ್ಲಿ ರಕ್ತಸ್ರಾವ: ಏನು ಮಾಡಬೇಕು
4819

ಮಕ್ಕಳ ಮೂಗಿನಲ್ಲಿ ರಕ್ತಸ್ರಾವ: ಏನು ಮಾಡಬೇಕು

ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 

ಮಕ್ಕಳ ಮೂಗಿನಲ್ಲಿ ರಕ್ತಸ್ರಾವ 

ಕರ್ನಾಟಕದ ಮೈಸೂರಿನವರಾದ ಗೃಹಿಣಿ ಮೋನಿಕಾ ಕಾರ್ತಿಕ್, ತಮ್ಮ ಮಕ್ಕಳ ವೈದ್ಯರು ತಾವು ಅನುಸರಿಸುತ್ತಿರುವ ಕ್ರಮ ತಪ್ಪು ಎಂದು ಹೇಳಿ ಸರಿಪಡಿಸುವವರೆಗೂ ಅಂದರೆ ಸುಮಾರು ಒಂದು ವರ್ಷದವರೆಗೆ ತಮ್ಮ ಐದು ವರ್ಷದ ಮಗನಿಗೆ ರಕ್ತಸ್ರಾವವಾದಾಗ ಇಂಥದೇ ತಪ್ಪನ್ನು ಮಾಡಿರುವುದಾಗಿ ನೆನಪಿಸಿಕೊಳ್ಳುತ್ತಾರೆ. 

ಮೊದಲ ಬಾರಿಗೆ ನನ್ನ ಮಗನ ಮೂಗಿನಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಕಂಡಾಗ ನನಗೆ ತುಂಬಾ  ಭಯವಾಗಿತ್ತು. ರಕ್ತಸ್ರಾವವನ್ನು ನಿಲ್ಲಿಸಲು ನಾನು ಅವನ ಮೂಗನ್ನು ಗಟ್ಟಿಯಾಗಿ ಹಿಡಿದು ಅವನ ತಲೆಯನ್ನು ಹಿಂದಕ್ಕೆ ಬಾಗಿಸುವಂತೆ ಮಾಡಿದೆ. ಆದರೆ ಸ್ರಾವ ನಿಲ್ಲಲು ಸಾಕಷ್ಟು ಸಮಯ ಬೇಕಾಯಿತು ಎಂದು ಅವರು ಹೇಳುತ್ತಾರೆ. 

ಮೂಗಿನ ರಕ್ತಸ್ರಾವ, ಅಥವಾ ಎಪಿಸ್ಟಾಕ್ಸಿಸ್ ಎಂಬುದು ಮೂಗಿನ ಹೊಳ್ಳೆಗಳಿಂದ ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ರಕ್ತಸ್ರಾವವಾಗುವ ಒಂದು ಸ್ಥಿತಿ. ಈ ಸ್ಥಿತಿಯಲ್ಲಿ ಒಂದು ಹೊಳ್ಳೆಯಿಂದ ಅಥವಾ ಎರಡೂ ಹೊಳ್ಳೆಗಳಿಂದ ರಕ್ತ ಸುರಿಯಬಹುದಾಗಿದೆ. 

ಮೂಗಿನ ಹೊಳ್ಳೆಗಳಲ್ಲಿ ಕಾಣಿಸುವ ರಕ್ತಸ್ರಾವವನ್ನು ತಡೆಯುವುದು ಹೇಗೆ? 

ಸಾಮಾನ್ಯವಾಗಿ ಪೋಷಕರು ಮತ್ತು ಆರೈಕೆ ಮಾಡುವವರು ಮೂಗಿನ ರಕ್ತಸ್ರಾವ ತಡೆಯಲು ತಪ್ಪು ಪದ್ಧತಿಯನ್ನು ಅನುಸರಿಸುತ್ತಾರೆ​. ಪೋಷಕರು ಮೂಗಿನ ತಪ್ಪು ಭಾಗವನ್ನು ಒತ್ತಿ ಹಿಡಿಯುವುದರಿಂದ, ಮುಂದಕ್ಕೆ ತಲೆ ಬಾಗಿಸುವುದರ ಬದಲಾಗಿ ಹಿಂದಕ್ಕೆ ತಲೆಯನ್ನು ಬಾಗಿಸುವುದರಿಂದ ಅಥವಾ ಸೂಕ್ತ ಸಮಯದವರೆಗೆ ನಿರಂತರ ಒತ್ತಡವನ್ನು ಹಾಕುವಲ್ಲಿ ವಿಫಲರಾಗುವುದರಿಂದ ತಮ್ಮ ಮಗುವಿನ ಮೂಗಿನ ರಕ್ತಸ್ರಾವವನ್ನು ನಿಯಂತ್ರಿಸುವಲ್ಲಿ ವಿಫಲರಾಗುತ್ತಾರೆಎಂದು ​ನಾಸಾಕ್ಲಿಪ್ ‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಸಂಸ್ಥಾಪಕರು ಹಾಗೂ ಬಾಲ್ಟಿಮೋರ್ ‌ನ  ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದಲ್ಲಿ ತುರ್ತು ಚಿಕಿತ್ಸಾ ವೈದ್ಯರು ಮತ್ತು ಅಧ್ಯಾಪಕ ಸದಸ್ಯರಾಗಿರುವ ಡಾ ಎಲಿಜಬೆತ್ ಕ್ಲೇಬೋರ್ನ್ ಅವರು ಹೇಳುತ್ತಾರೆ. 

ಗದ್ದವನ್ನು ಮೇಲಕ್ಕೆ ಎತ್ತುವಂತಹ ತಪ್ಪು ಪದ್ಧತಿಯನ್ನು ಅನುಸರಿಸಿದಾಗ ರಕ್ತವು ಮೂಗಿನ ಹಿಂಭಾಗಕ್ಕೆ ಹೋಗಿ ಗಂಟಲನ್ನು ಸೇರಿ ಉಸಿರುಗಟ್ಟುವಂತೆ ಮಾಡಬಹುದು ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗಳ ಮಕ್ಕಳ ತೀವ್ರ ನಿಗಾ ತಜ್ಞೆ ಡಾ.ಸುಪ್ರಜಾ ಚಂದ್ರಶೇಖರ್ ಹೇಳುತ್ತಾರೆ. ಈ ಮೂಲಕ ಎಲಿಜಬೆತ್ ಅವರ ಮಾತಿಗೆ ಪುಷ್ಟಿ ನೀಡುತ್ತಾರೆ. 

ಮನೆಯಲ್ಲಿ ಮಗುವಿಗೆ ರಕ್ತಸ್ರಾವವಾಗುತ್ತಿದ್ದರೆ, ಎಲ್ಲಕ್ಕಿಂತ ಮೊದಲು ಹೆಪ್ಪುಗಟ್ಟಿದ ರಕ್ತವನ್ನು ಸೀನುವ ಮೂಲಕ ಹೊರಹಾಕುವಂತೆ ಮಾಡಿ. ಆ ಮೂಲಕ ರಕ್ತ ಹೆಪ್ಪುಗಟ್ಟುವ ಅಪಾಯವನ್ನು ತಡೆಗಟ್ಟಬಹುದು ಎಂದು  ಡಾ ಕ್ಲೇಬೋರ್ನ್ ಹೇಳುತ್ತಾರೆ. “ವೈದ್ಯರು ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಶಿಫಾರಸು ಮಾಡುವ ಮೂಗು ಮುಚ್ಚಿಕೊಂಡಿರುವುದನ್ನು ಸಡಿಲಿಸುವಸ್ಪ್ರೇ (nose-congestion spray)ಯನ್ನು ಪೋಷಕರು ಬಳಸಬಹುದುಎಂದು ಅವರು ಹೇಳುತ್ತಾರೆ. “ಕನಿಷ್ಠ 10 ನಿಮಿಷಗಳ ಕಾಲ ಮೂಗಿನ ಮೇಲೆ ನಿರಂತರ ಒತ್ತಡ ಬೀಳುವಂತೆ ಹಿಡಿದುಕೊಳ್ಳಿ. ಕೈಗೆ ತಗುಲುವ ಮೂಗಿನ ಮೂಳೆ ಭಾಗಕ್ಕಿಂತ ಸ್ವಲ್ಪ ಕೆಳಗೆ ಮೂಗಿನ ಮೃದುವಾದ ಹೊಳ್ಳೆಯ ಭಾಗದ ಮೇಲೆ ಪಾಲಕರು ಬೆರಳುಗಳಿಂದ ಒತ್ತಿ ಹಿಡಿಯಬೇಕು. ಒತ್ತಡವು ಒಂದೇ ಸಮನಾಗಿರಬೇಕು ಮತ್ತು ದೃಢವಾಗಿರಬೇಕು –  ಮಗುವಿನ ಮೂಗಿನ ಮೇಲೆ ಈ ರೀತಿ ಒತ್ತಡ ಹಾಕುವುದು ಯಾರಿಗೇ ಆದರೂ ಕಷ್ಟವೆನಿಸಬಹುದು ಆದರೆ, ಸೂಕ್ತ ರೀತಿಯಲ್ಲಿ ಈ ಕ್ರಮ ಕೈಗೊಂಡರೆ, ಮೂಗಿನ ರಕ್ತಸ್ರಾವವು ನಿಲ್ಲುತ್ತದೆ. 

ಎಲ್ಲ ಕ್ರಮಗಳನ್ನು ಕೈಗೊಂಡರೂ ರಕ್ತಸ್ರಾವ ಕಡಿಮೆಯಾಗದಿದ್ದರೆ, ಪೋಷಕರು ಐಸ್ ಪ್ಯಾಕ್ ನ ಬಳಕೆಗೆ ಮುಂದಾಗಬಹುದು ಅಥವಾ ಮಂಜಿನ ಒಂದು ತುಂಡನ್ನು ಕರವಸ್ತ್ರದಲ್ಲಿ ಸುತ್ತಿ  ಮೂಗಿನ ಎಲುಬಿನ ಭಾಗದ ಮೇಲೆ ಇರಿಸಬಹುದು. ಕ್ರಮಗಳಿಂದಲೂ ಯಾವುದೇ ಪರಿಹಾರ ದೊರೆಯದಿದ್ದರೆ, ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವುದು ಅವಶ್ಯಕವಾಗುತ್ತದೆ ಎಂದು ಹರಿಯಾಣದ ಫರಿದಾಬಾದ್ ಅಮೃತಾ ಆಸ್ಪತ್ರೆಯ ಇ ಎನ್ ಟಿ (ಕಿವಿ ಗಂಟಲು ಮೂಗು) ವಿಭಾಗದ ಮುಖ್ಯಸ್ಥರಾದ ಡಾ.ನೀರಜ್ ನಾರಾಯಣ ಮಾಥುರ್ ಹೇಳುತ್ತಾರೆ. 

ಮೂಗಿನಿಂದ ರಕ್ತ ಸ್ರವಿಸುವುದು ಗಂಭೀರ ವಿಷಯವೇನಲ್ಲ  

ಮೂಗಿನಿಂದ ರಕ್ತ ಸೋರುವುದು ಎಚ್ಚರಿಕೆ ಗಂಟೆಯಾಗಿರಬಹುದು, ಆದರೆ ಹೆಚ್ಚಿನ ಭಾಗ ಅವು ಗಂಭೀರವಾಗಿರುವುದಿಲ್ಲ ಎಂದು ಡಾ ಕ್ಲೇಬೋರ್ನ್ ಹೇಳುತ್ತಾರೆ. 

ಸುಮಾರು ಶೇಕಡಾ 60 ರಷ್ಟು ಜನರು ತಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಮೂಗಿನಿಂದ  ರಕ್ತ ಸೋರುವ ಸ್ಥಿತಿಯನ್ನು ಅನುಭವಿಸುತ್ತಾರೆಎಂದು ಡಾ ಕ್ಲೇಬೋರ್ನ್ ಹೇಳುತ್ತಾರೆ. “2 ರಿಂದ 10 ವರ್ಷ ವಯಸ್ಸಿನ ಮಕ್ಕಳು ಮತ್ತು 55 ರಿಂದ 80 ವರ್ಷ ವಯಸ್ಸಿನ ವೃದ್ಧರು ಹೆಚ್ಚಾಗಿ ಮೂಗಿನ ರಕ್ತಸ್ರಾಕ್ಕೆ ಗುರಿಯಾಗುತ್ತಾರೆ. ರಕ್ತದ ಕಾಯಿಲೆಗಳು, ಅಧಿಕ ರಕ್ತದೊತ್ತಡ ಅಥವಾ ಬ್ಲಡ್ ತಿನ್ನರ್ ಮಾತ್ರೆ ತೆಗೆದುಕೊಳ್ಳುವವರಲ್ಲಿ [ಮೂಗಿನ ರಕ್ತಸ್ರಾವ] ಸರ್ವೇ ಸಾಮಾನ್ಯವಾಗಿರುತ್ತದೆ. 

ಮೂಗಿನ ರಕ್ತಸ್ರಾವದ ವಿವಿಧ ಪ್ರಕಾರಗಳು  

ಮೂಗಿನ ರಕ್ತಸ್ರಾದಲ್ಲಿ ಎರಡು ವಿಧಗಳಿವೆ ಎಂದು ಅಮೇರಿಕನ್ ಕಾಲೇಜ್ ಆಫ್ ಎಮರ್ಜೆನ್ಸಿ ಫಿಸಿಶಿಯನ್ಸ್ ಸದಸ್ಯರೂ ಆಗಿರುವ ಡಾ ಕ್ಲೇಬೋರ್ನ್ ಹೇಳುತ್ತಾರೆ: 

  • ಬಹುತೇಕ ಮೂಗಿನ ರಕ್ತಸ್ರಾವ ಮೂಗಿನ ಮುಂಭಾಗದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಇದರಲ್ಲಿ, ಮೂಗಿನ ಒಳಪದರಿನಲ್ಲಿರುವ ತೆಳುವಾದ ಪೊರೆ ಅಂದರೆ ಮ್ಯೂಕೋಸಾ ಸವೆಯುವುದರಿಂದ  ಧಮಣಿಗಳು ಸುರಕ್ಷತಾ ಪರದೆ ಇಲ್ಲದ ಕಾರಣ ತೆರೆದುಕೊಳ್ಳುತ್ತವೆ. ಹೀಗಾಗಿ ಅವು ಹರಿದು, ಮೂಗಿನ ಮುಂಭಾಗದಲ್ಲಿ ರಕ್ತಸ್ರಾವ ಕಂಡುಬರುತ್ತದೆ. 
  • ಹಿಂಭಾಗದ ಮೂಗಿನ ರಕ್ತಸ್ರಾವ ಗಂಭೀರ ಸ್ಥಿತಿಯದ್ದಾಗಿರುತ್ತದೆ. ಮೂಗಿನ ಹಿಂಭಾಗದ ಆಳದಲ್ಲಿ  ಪಂಪ್ ಮಾಡುವ ರೂಪದಲ್ಲಿ ಅಪಧಮನಿಯ ಹೇರಳವಾದ ರಕ್ತಸ್ರಾವವನ್ನು ಇದರಲ್ಲಿ ಕಾಣಬಹುದು 

ಮೂಗಿನ ರಕ್ತಸ್ರಾವಕ್ಕೆ ಕಾರಣವೇನು? 

ಶಾಲೆಗೆ ಹೋಗುವ ಮಕ್ಕಳಲ್ಲಿ ಮೂಗಿನ ರಕ್ತಸ್ರಾವ ಹೆಚ್ಚಾಗಿ ಕಂಡುಬರುತ್ತದೆ. ಇದಲ್ಲದೆ ಆರ್ದ್ರತೆ ಕಡಿಮೆಯಿರುವ ಋತುಗಳಲ್ಲಿ ಅಂದರೆ ತಾಪಮಾನ ಕಡಿಮೆ ಇರುವಂತಹ ಚಳಿಗಾಲ ಅಥವಾ ತಾಪಮಾನ ಹೆಚ್ಚಾಗಿರುವಂತಹ ಬೇಸಿಗೆಯಲ್ಲಿ ಮೂಗಿನ ರಕ್ತಸ್ರಾವ ಸಂಭವಿಸುತ್ತವೆ ಎಂದು ಡಾ ಮಾಥುರ್ ಹೇಳುತ್ತಾರೆ. “ಲಿಟಲ್ಸ್ ಪ್ರದೇಶ ಎಂದು ಕರೆಯಲಾಗುವ ಸೆಪ್ಟಮ್ ಮುಂಭಾಗ (ಮೂಗಿನ ಹೊಳ್ಳೆಗಳ ನಡುವಿನ ಪ್ರದೇಶ) ದಿಂದ ಮೂಗಿನ ರಕ್ತಸ್ರಾವ ಸಂಭವಿಸುತ್ತದೆ ಮತ್ತು ಸುಲಭವಾಗಿ ಮನೆಯಲ್ಲಿಯೇ ಶೇಕಡಾ 99.9 ರಷ್ಟು ಮೂಗಿನ ರಕ್ತಸ್ರಾವಕ್ಕೆ ಚಿಕಿತ್ಸೆ ನೀಡಬಹುದುಎಂದು ಅವರು ಹೇಳುತ್ತಾರೆ. ಅವರ ಪ್ರಕಾರ, ಕೆಲವೊಮ್ಮೆ ಬೆರಳಿನ ಉಗುರಿನಿಂದ ಮೂಗಿನ ಹೊರಪದರಕ್ಕೆ ಅಂಟಿಕೊಂಡ ಕಲ್ಮಶವನ್ನು ಕಿತ್ತಿದಾಗ ಗೀರುಗಳು ಬಿದ್ದು ಮಕ್ಕಳಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಹುದು. 

ಹವಾಮಾನ ಬದಲಾವಣೆ ಕೂಡ ಇದಕ್ಕೆ ಕಾರಣವಾಗಬಹುದು ಎಂದು ಡಾ ಕ್ಲೇಬೋರ್ನ್ ಹೇಳುತ್ತಾರೆ. “ಶರತ್ಕಾಲದಲ್ಲಿ ಮತ್ತು ಚಳಿಗಾಲದುದ್ದಕ್ಕೂ ಸಾಮಾನ್ಯವಾಗಿ ಮುಂಭಾಗದ ಮೂಗಿನ ರಕ್ತಸ್ರಾವ ಕಂಡುಬರುತ್ತದೆ. ಏಕೆಂದರೆ ಈ ಸಮಯದಲ್ಲಿ ಗಾಳಿಯು ತಂಪಾಗಿರುತ್ತದೆ ಮತ್ತು ಶುಷ್ಕವಾಗಿರುತ್ತದೆ ಅಲ್ಲದೆ ಜನರು ಬೆಚ್ಚಗೆ ಮನೆಯೊಳಗೆ ಇರಲು ಬಸುತ್ತಾರೆ, ಇದರಿಂದ ಮೂಗು ಮತ್ತಷ್ಟು ಒಣಗಿ ಮೂಗಿನಿಂದ ರಕ್ತಸ್ರವಿಸಲು ಆರಂಭವಾಗುತ್ತದೆಋತುಮಾನದಲ್ಲಾಗುವ ಅಲರ್ಜಿಗಳು ಸಮಯದಲ್ಲಿ ಉದ್ರೇಕಗೊಳ್ಳುತ್ತವೆ. ಇದರಿಂದಾಗಿ ಮೂಗಿನ ಲೋಳೆಪೊರೆಯಲ್ಲಿ  ಕಿರಿ ಕಿರಿ ಉಂಟಾಗುತ್ತದೆ. ‘ಮೂಗಿನಿಂದ ರಕ್ತಸ್ರಾವವಾಗುವಂತಹ ಸಮಯದಲ್ಲಿಬಾಧಿತರಿಗೆ  ವಾರಕ್ಕೊಮ್ಮೆ ಮೂಗು ಸೋರುವುದನ್ನು ಕಾಣಬಹುದು ಅಥವಾ ತಿಂಗಳಿಗೆ ಮೂರು ಅಥವಾ ನಾಲ್ಕು ಬಾರಿ ಮೂಗು ಸೋರುವುದು ಸಾಮಾನ್ಯವಾಗಿರುತ್ತದೆ. 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ತೃಪ್ತಿಕರವಾದ ನಿಕಟ ಸಂಬಂಧಗಳನ್ನು ಆನಂದಿಸಬೇಕಾದರೆ ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತಜ್ಞರು ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಕಡಿಮೆ-ತಿಳಿದಿರುವ ಸಲಹೆಗಳನ್ನು ನೀಡಿದ್ದಾರೆ.  

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ