0

0

0

0

0

0

0

0

0

ಈ ಲೇಖನದಲ್ಲಿ

ಭುಜದ ನೋವು – ನಿರ್ಲಕ್ಷಿಸಬೇಡಿ!
17062

ಭುಜದ ನೋವು – ನಿರ್ಲಕ್ಷಿಸಬೇಡಿ!

ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಭುಜದ ನೋವು ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಆಗಿರಬಹುದು. ಹಾಗಾಗಿ ನಿರ್ಲಕ್ಷಿಸಬೇಡಿ. ಕೂಡಲೇ ಚಿಕಿತ್ಸೆ ಮಾಡಿಸಿ.
ಚಿತ್ರ: ಅನಂತ ಸುಬ್ರಹ್ಮಣ್ಯಂ

ಭುಜದ ಆಘಾತ, ನೋವು ಅಥವಾ ಇಂಪಿಂಗ್ಮೆಂಟ್ಎಂಬುದು ಹೆಚ್ಚಾಗಿ ಕಡೆಗಣಿಸಲ್ಪಟ್ಟ ವೈದ್ಯಕೀಯ ಸಮಸ್ಯೆಯಾಗಿದೆ. ಭುಜದ ಸೆಳೆತ, ಮುರಿತ ಅಥವಾ ಗಾಯವನ್ನು ಭುಜದ ಇಂಪಿಗ್ಮೆಂಟ್ ಸಿಂಡ್ರೋಮ್  (ಎಸ್‌ಐಎಸ್) ಎಂದು ಕರೆಯಲಾಗುತ್ತದೆ. 

ಕೆಲವು ತಿಂಗಳ ಹಿಂದೆ, ಕರ್ನಾಟಕದ ಮಂಗಳೂರಿನಲ್ಲಿ ಐಟಿ ಉದ್ಯೋಗಿಯಾದಂತಹ 36 ವರ್ಷ ವಯಸ್ಸಿನ ಪ್ರಖ್ಯಾತ್ ಮೋಹನ್ ಅವರು ಎಸ್‌ಐಎಸ್ ಹೊಂದಿದ್ದಾರೆ ಎಂದು ಪತ್ತೆಯಾಯಿತು. ಅವರು ಮಾರ್ಷಲ್ ಆರ್ಟ್ ಮತ್ತು ಬಾಕ್ಸಿಂಗ್ ಕಲಿಯಲು ಆಸಕ್ತಿಯನ್ನು ಹೊಂದಿದ್ದ ವ್ಯಕ್ತಿ.  

ಕೋವಿಡ್ ನಂತರ ಜಿಮ್‌ಗಳೆಲ್ಲವೂ ಪುನಃ ತೆರೆದಾಗ ಮೋಹನ್ ಅವರು ಮಾರ್ಷಲ್ ಆರ್ಟ್ ಕಲಿಯಲು ಉತ್ಸಾಹದಿಂದ ಸೇರಿಕೊಂಡಿದ್ದರು, ಆದರೆ ಕೆಲವು ತಿಂಗಳುಗಳ ತರಬೇತಿಯ ನಂತರ ಅವರ ಎಡ ಭುಜದಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತು. ಆದರೆ ಈ ನೋವು ಅವರನ್ನು ತಡೆಯಲಿಲ್ಲ, ಅವರು ತಮ್ಮ ತರಬೇತಿಯನ್ನು ಮುಂದುವರಿಸಿದರು. 

ಸ್ವಲ್ಪ ನೋವು ತೊಂದರೆಯಾಗಲಾರದು ಎಂದು ನಾನು ಭಾವಿಸಿದೆ. ನಿಧಾನವಾಗಿ, ಈ ನೋವು ಬಲಭುಜಕ್ಕೂ ಹರಡಿತು. ಕೊನೆಗೆ ಅದು ತಡೆಯಲಾರದಂತಹ ನೋವಾಗಿ ಪರಿಣಮಿಸಿತು. ಶರ್ಟ್ ಧರಿಸುವುದು ಅಥವಾ ಕೂದಲನ್ನು ಬಾಚಿಕೊಳ್ಳುವುದು ಸಹ ಕಷ್ಟವಾಗುವ ಮಟ್ಟಿಗೆ ನೋವು ಹೆಚ್ಚಾಯಿತು,” ಎಂದು ಮೋಹನ್ ನೆನಪಿಸಿಕೊಳ್ಳುತ್ತಾರೆ. 

ಹಲವಾರು ಎಸ್‌ಐಎಸ್ ಪ್ರಕರಣಗಳಿಗೆ ಚಿಕಿತ್ಸೆ ನೀಡಿದಂತಹ, ಮಂಗಳೂರಿನ ಕಸ್ತೂರಿಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆದಂತಹ ಡಾ. ಬಿಶ್ವರಂಜನ್ ದಾಸ್ ಅವರು ಮೋಹನ್ ಅವರ ನೋವಿಗೂ ಚಿಕಿತ್ಸೆ ನೀಡಿದ್ದಾರೆ.  

ಮೋಹನ್ ಅವರ ಚಿಕಿತ್ಸೆಯ ಸಂದರ್ಭದಲ್ಲಿ, ಅವರು ಯಾವುದೇ ರೀತಿಯ ಮಧ್ಯಮ ವ್ಯಾಪ್ತಿಯ ಚಲನೆಯನ್ನು (ಅಂದರೆ, 60-120 ಡಿಗ್ರಿಯಲ್ಲಿ ಕೈಯನ್ನು ಎತ್ತುವ ಅಗತ್ಯತೆಯ ಚಲನೆಗಳು) ಮಾಡಲು ಸಾಧ್ಯವಿಲ್ಲ ಎಂಬುದನ್ನು ಡಾ.ದಾಸ್ ಕಂಡುಕೊಂಡರು. ಅವರ ಭುಜದ ಮೂಳೆಗಳು ಸವೆದಿರುವುದು ಎಕ್ಸ್-ರೇನಿಂದ ದೃಢಪಟ್ಟಿತು. ಮೋಹನ್ ಅವರಿಗೆ ಮಧುಮೇಹದ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಲಾಯಿತು, ಆಗ ಅವರಿಗೆ ಮಧುಮೇಹವಿರುವುದು ತಿಳಿದುಬಂತು. 

ಮೋಹನ್ ಅವರ ಪ್ರಕರಣ ಎಸ್‌ಐಎಸ್‌ಗೆ ಒಂದು ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ, ಏಕೆಂದರೆ ಸಾಮಾನ್ಯವಾಗಿ ಎಸ್‌ಐಎಸ್‌ ಹೊಂದಿರುವ ವ್ಯಕ್ತಿಯು ಮಧುಮೇಹವನ್ನೂ ಹೊಂದಿರುವ ಸಾಧ್ಯತೆಯಿದೆ,” ಎಂದು ಡಾ. ದಾಸ್ ಹೇಳುತ್ತಾರೆ. 

ಭುಜದ ಇಂಪಿಂಗ್ಮೆಂಟ್ ಮತ್ತು ಮಧುಮೇಹದ ನಡುವಿನ ಸಂಬಂಧದ ಬಗ್ಗೆ ವಿವರಿಸುವ, ಕರ್ನಾಟಕದ ಕಲಬುರಗಿಯ ಮೂಳೆ ಶಸ್ತ್ರಚಿಕಿತ್ಸಕರಾದ ಡಾ. ಸಾಗರ್ ಉಮರ್ಜೀಕರ್, ಅನಿಯಂತ್ರಿತ ಮಧುಮೇಹವು ಸ್ನಾಯುರಜ್ಜುವಿನ ಉರಿಯೂತಕ್ಕೆ ಕಾರಣವಾಗಬಹುದು ಎಂದು ಹೇಳುತ್ತಾರೆ. ಇದು ಭುಜದ ಇಂಪಿಂಗ್ಮೆಂಟ್ ಅನ್ನು ಹೆಚ್ಚುಗೊಳಿಸುವ ಸಾಧ್ಯತೆಯಿದೆ,” ಎಂದು ಡಾ. ಉಮರ್ಜೀಕರ್ ಅಭಿಪ್ರಾಯಪಡುತ್ತಾರೆ. 

ಅನಿಯಂತ್ರಿತ ಮಧುಮೇಹವಿದಲ್ಲಿ, ತೆಳ್ಳಗಿನ ಸ್ನಾಯುವಿನ ಜಾಗದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ, ಇದು ಭುಜದ ಇಂಪಿಂಗ್ಮೆಂಟ್ ಅನ್ನು ಅಧಿಕಗೊಳಿಸುತ್ತದೆ,” ಎಂಬುದಾಗಿ ಡಾ, ದಾಸ್ ವಿವರಿಸುತ್ತಾರೆ. 

ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಎಂದರೇನು? 

ಭುಜದ ಇಂಪಿಂಗ್ಮೆಂಟ್‌ನಲ್ಲಿ, ಆವರ್ತನ ಪಟ್ಟಿಯ ಸ್ನಾಯುಗಳು ಮತ್ತು ಸ್ನಾಯುರಜ್ಜುಗಳು ಮುರಿದಿರುತ್ತದೆ ಅಥವಾ ಬಾಧೆಗೊಳಗಾಗಿರುತ್ತವೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸುಪ್ರಾಸ್ಪಿನಾಟಸ್ ಸ್ನಾಯುರಜ್ಜು (ಆವರ್ತನ ಪಟ್ಟಿಯಲ್ಲಿರುವ ಸ್ನಾಯುಗಳಲ್ಲಿ ಒಂದು) ಹೆಚ್ಚು ಬಾಧೆಗೊಳಗಾಗುವ ಸ್ನಾಯುರಜ್ಜುವಾಗಿದೆ. 

ಈ ಸ್ನಾಯುರಜ್ಜು ಅಕ್ರಾಮಿಯೋನ್ ಮೂಲಕ (ಭುಜದ ತುದಿಯಲ್ಲಿ ಸಮತಟ್ಟಾದ ಎಲುಬಿನ ಬೆಳವಣಿಗೆ) ಕ್ಲಾವಿಕಲ್‌ವರೆಗೆ (ಕುತ್ತಿಗೆಯ ಮೂಳೆ) ಸಾಗಿರುತ್ತದೆ. ಗಾಯ ಅಥವಾ ಮುರಿತದ ವೇಳೆ, ತಲೆಯಿಂದ ಮೇಲೆ ಕೈಯನ್ನು ಎತ್ತುವಂತಹ ಚಟುವಟಿಕೆಯನ್ನು ಮಾಡಿದಾಗ ಈ ಸ್ನಾಯು ಅಕ್ರೋಮಿಯನ್ ಅನ್ನು ಒತ್ತುತ್ತದೆ,” ಎಂದು ಡಾ. ದಾಸ್ ವಿವರಿಸುತ್ತಾರೆ. 

ಭುಜದ ಇಂಪಿಂಗ್ಮೆಂಟ್‌ನ ಆರಂಭಿಕ ಲಕ್ಷಣಗಳ ಕುರಿತು ಮಾತನಾಡುವಾಗ, ಆವರ್ತನ ಪಟ್ಟಿಯು ಗಾಯಗೊಂಡರೆ ಅಥವಾ ಮುರಿದ ಸಂದರ್ಭದಲ್ಲಿ, ಅಕ್ರಾಮಿಯಾನ್‌ನ ಕೆಳಗಿರುವ ಬರ್ಸಾ ಎಂದು ಕರೆಯಲ್ಪಡುವ ಅಂಗಾಂಶದಲ್ಲಿ ಉರಿಯೂತ ಉಂಟಾಗುತ್ತದೆ ಎಂದು ಡಾ. ಉಮರ್ಜೀಕರ್ ವಿವರವಾಗಿ ತಿಳಿಸುತ್ತಾರೆ. 

ಭುಜದ ಹೆಪ್ಪುಗಟ್ಟುವಿಕೆಗಿಂತ ಇದು ಹೇಗೆ ಭಿನ್ನ? 

ಇಂಪಿಂಗ್ಮೆಂಟ್ ಮುಂದೆ ಭುಜದ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದಾದರೂ, ಎರಡು ಸನ್ನಿವೇಶಗಳು ಬೇರೆಬೇರೆ ರೀತಿಯ ರೋಗಲಕ್ಷಣಗಳನ್ನು ಹೊಂದಿವೆ, ಎಂದು ಡಾ. ದಾಸ್ ಹೇಳುತ್ತಾರೆ  

ಭುಜವು 360-ಡಿಗ್ರಿ ಚಲನಾ ಸಾಮರ್ಥ್ಯವನ್ನು ಹೊಂದಿರುವ ಸಕ್ರಿಯ ಕೀಲಾಗಿದೆ. ಅಸ್ಥಿಪಂಜರದ ಸ್ನಾಯುಗಳ ಚಲನೆಯನ್ನು ಸುಗಮವಾಗಿಸಲು ಭುಜದ ವಿವಿಧ ಸ್ನಾಯುಗಳು ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. 

ಭುಜದ ಚಲನೆಯ ಡಿಗ್ರಿಯನ್ನು ಮೂರು ಹಂತಗಳಾಗಿ ವಿಭಾಗಿಸುವುದಾದರೆ (ಡಿಗ್ರಿಗಳಲ್ಲಿ ಅಂದಾಜಿಸಲಾಗಿದೆ) ): 0-60 ಡಿಗ್ರಿ, 60-120 ಡಿಗ್ರಿ, ಮತ್ತು 120-180 ಡಿಗ್ರಿ ಎಂದು ಹೇಳಬಹುದು. 

ಒಂದು ವೇಳೆ ಭುಜವು ಅಡ್ಡಿಪಡಿಸಿದರೆ, ಮಧ್ಯಮವ್ಯಾಪ್ತಿಯ ಚಲನೆಯ ಮೇಲೆ (60-120 ಡಿಗ್ರಿ) ಪರಿಣಾಮ ಬೀರುತ್ತದೆ. ಮಧ್ಯಮ-ವ್ಯಾಪ್ತಿಯಲ್ಲಿ ನೋವಿನ ಬಾಗುವಿಕೆ ಇರುವುದರಿಂದ, ಇದನ್ನು ನೋವಿನಿಂದ ಕೂಡಿದ ಆರ್ಕ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. 

ಒಂದು ವೇಳೆ ಭುಜವು ಹೆಪ್ಪುಗಟ್ಟಿದರೆ, ಈ ಎಲ್ಲಾ ವ್ಯಾಪ್ತಿಗಳಿಗೂ ಪರಿಣಾಮ ಬೀರುತ್ತದೆ ಮಾತ್ರವಲ್ಲದೇ ಭುಜದ ಚಲನೆಯೇ ಇಲ್ಲವಾಗುತ್ತದೆ,” ಎಂದು ಡಾ. ದಾಸ್ ಹೇಳುತ್ತಾರೆ. 

ಸೂಚನೆ ಮತ್ತು ಲಕ್ಷಣಗಳು 

ಆರಂಭಿಕ ಸೂಚನೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು, ಪ್ರಾರಂಭದಲ್ಲಿಯೇ ರೋಗವನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆಯಲು ನೋವಿರುವ ಪ್ರತಿ ವ್ಯಕ್ತಿಯೂ ವೈದ್ಯರನ್ನು ಸಂಪರ್ಕಿಸಬೇಕು,” ಎಂದು ಡಾ. ಉಮರ್ಜೀಕರ್ ಸಲಹೆ ನೀಡುತ್ತಾರೆ.  

ಅವರು ಸೂಚನೆಗಳನ್ನು ಈ ರೀತಿಯಾಗಿ ಪಟ್ಟಿ ಮಾಡುತ್ತಾರೆ: 

  • ಯಾವುದೇ ಮೊದಲಿನ ಗಾಯದ ಇತಿಹಾಸವಿಲ್ಲದೇ, 1-3 ತಿಂಗಳುಗಳ ಕಾಲ ಮಂದವಾದ, ನಡುಕವುಳ್ಳ ಮತ್ತು ನಿರಂತರವಾದ ನೋವು. 
  • ಶರ್ಟ್ ಧರಿಸುವಾಗ, ಕೂದಲನ್ನು ಬಾಚುವಾಗ/ಕಟ್ಟಿಕೊಳ್ಳುವಾಗ ಅಥವಾ ಶೆಲ್ಫ್ ಮೇಲಿರುವ ಯಾವುದೇ ವಸ್ತುಗಳನ್ನು ತೆಗೆಯಲು ಪ್ರಯತ್ನಿಸಿದಾಗ ಒಟ್ಟಾರೆಯಾಗಿ ಕೈಯನ್ನು ತಲೆಯಿಂದ ಮೇಲೆ ತೆಗೆದುಕೊಂಡು ಹೋಗಬೇಕಾದ ಸಂದರ್ಭದಲ್ಲಿ ನೋವು ಕಾಣಿಸಿಕೊಳ್ಳುವಿಕೆ. 

2005 ರಲ್ಲಿ, ವಂಡರ್‌ಬಿಲ್ಟ್ ಶೋಲ್ಡರ್ ಸೆಂಟರ್, ವಂಡರ್‌ಬಿಲ್ಟ್ ಸ್ಪೋರ್ಟ್ ಮೆಡಿಸಿನ್ ನ್ಯಾಶ್‌ವಿಲ್, ಟೆನೆಸ್ಸೀ, ಯುಎಸ್‌ನ ಮೈಕೆಲ್ ಸಿ ಕೋಸ್ಟರ್, ಮೈಕೆಲ್ ಎಸ್ ಜಾರ್ಜ್ ಮತ್ತು ಜಾನ್ ಇ ಕುಹ್ನ್ ಎಂಬ ಸಂಶೋಧಕರು ಈ ಕೆಳಗಿನ ಪರಿಸ್ಥಿತಿಗಳನ್ನು ಹೊಂದಿರುವ ಜನರು ಇದನ್ನು ಅನುಭವಿಸಬಹುದು ಎಂದು ಹೇಳಿದ್ದರು: 

  • ರಾತ್ರಿ ನಿದ್ರಿಸಿದ ಸಂದರ್ಭದಲ್ಲಿ ಅಧಿಕ ನೋವು (ನೋವಿರುವ ಭುಜದ ಆಧಾರದ ಮೇಲೆ ಮಲುಗುವುದರಿಂದ, ಅಥವಾ ಕೈಯನ್ನು ತಲೆಯಿಂದ ಮೇಲೆ ಇರಿಸಿ ಮಲಗುವುದರಿಂದ) 
  • ಸಾಮಾನ್ಯವಾಗಿ ವಯಸ್ಸಾದಂತೆ ಶಕ್ತಿ ಮತ್ತು ಸಾಮರ್ಥ್ಯದ ನಷ್ಟ, ಮತ್ತು ಕೆಲವು ಪ್ರಕರಣಗಳು 40 ವರ್ಷ ವಯಸ್ಸಿನ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಕಂಡುಬರುತ್ತವೆ. 

ಅಪಾಯ ಅಂಶಗಳು 

ಡಾ. ದಾಸ್ ಹೇಳುತ್ತಾರೆ ಎಸ್‌ಐಎಸ್ ಈ ಕೆಳಗಿನವರಲ್ಲಿ ಅಧಿಕವಾಗಿ ಕಂಡುಬರುತ್ತದೆ: 

  • ತಲೆಗಿಂತ ಕೈಯನ್ನು ಮೇಲೆತ್ತುವ ಚಟುವಟಿಕೆಯನ್ನು ಹೊಂದಿರುವ ಕೆಲವು ಆಟಗಳಾದ ಬಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಮತ್ತು ಈಜು ಇಂತಹ ಕ್ರೀಡಾಪಟುಗಳಲ್ಲಿ ಇದು ಕಂಡುಬರುತ್ತದೆ. 
  • ದೇಹದ ಅಧಿಕ ತೂಕವನ್ನು ಹೊಂದಿರುವ ಕಾರಣದಿಂದ, ಚಟುವಟಿಕೆರಹಿತ ಜೀವನ ನಡೆಸುತ್ತಿರುವವರು ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟವರು. 
  • ದುರ್ಬಲ ಭುಜವನ್ನು ಹೊಂದಿರುವ 40 ವರ್ಷಕ್ಕಿಂತ ಮೇಲ್ಪಟ್ಟವರು. 
  • ನಿಯಂತ್ರಿತ ಮತ್ತು ಅನಿಯಂತ್ರಿತ ಮಧುಮೇಹವನ್ನು ಹೊಂದಿರುವವರು 

40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗಿಂತ ಮಹಿಳೆಯರಲ್ಲಿ ಇದು ಅಧಿಕವಾಗಿ ಕಾಣಿಸಿಕೊಳ್ಳುತ್ತದೆ ಎಂದು ಡಾ.ದಾಸ್ ಸೇರಿಸುತ್ತಾರೆ 

ಋತುಬಂಧದಂತಹ ಹಾರ್ಮೋನುಗಳ ಬದಲಾವಣೆಯಿಂದಾಗಿ ಪುರುಷರಿಗಿಂತ ಮಹಿಳೆಯರು ಭುಜಗಳಲ್ಲಿ ದೌರ್ಬಲ್ಯಗಳನ್ನು ಹೊಂದಿರುವ ಸಾಧ್ಯತೆಯು ಹೆಚ್ಚು ಎಂಬುದು ಆಧಾರಸಹಿತ ತರ್ಕವಾಗಿದೆ. 

ಎರಡನೆಯದಾಗಿ, ಅವರು ಮಧ್ಯಮ-ವ್ಯಾಪ್ತಿಯ ಭುಜದ ಚಲನೆಯನ್ನು ಒಳಗೊಂಡಿರುವ ಮನೆ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಕಾರಣ, ಅವರಲ್ಲಿ ಸವೆತವು ಹೆಚ್ಚಾಗಿ ಕಂಡುಬರುತ್ತದೆ. 

ಜರ್ಮನಿಯ ಅಗಾಥರೀಡ್ ಆಸ್ಪತ್ರೆ ಹೌಶಮ್‌ನಲ್ಲಿನ ನೋವು, ಭುಜ ಮತ್ತು ಕೈ ಶಸ್ತ್ರ ಚಿಕಿತ್ಸೆ ವಿಭಾಗವು ನಡೆಸಿದ ಸಂಶೋಧನೆ ಪ್ರಕಾರ, 60 ವರ್ಷ ವಯಸ್ಸಿನ ನಂತರ ಎಸ್‌ಐಎಸ್ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. 

ಭುಜದ ಇಂಪಿಂಗ್ಮೆಂಟ್‌ನೊಂದಿಗೆ ಉಂಟಾಗುವ ಇತರ ಸಹವರ್ತಿ ರೋಗಗಳು 

ಡಾ. ಉಮರ್ಜೀಕರ್ ಹೇಳುವ ಪ್ರಕಾರ ಇಂಪಿಂಗ್ಮೆಂಟ್ ಇತರ ರೋಗಗಳೊಂದಿಗೆ ಉಂಟಾಗಬಹುದು 

  • ವಯಸ್ಕರಲ್ಲಿ ಉಂಟಾಗುವ ಸಂಧಿವಾತದಂತಹ ಬದಲಾವಣೆಗಳು ಭುಜದ ಸ್ನಾಯುಗಳು, ಮೂಳೆ ಮತ್ತು ಮೃದ್ವಸ್ಥಿಗಳಿಗೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು. 
  • ಪೆರಿಯಾಥ್ರೈಟಿಸ್ (ಕೀಲುಗಳ ಸುತ್ತ ನೋವಿನ ಊತವನ್ನು ಹೊಂದಿರುವಂತಹ ಸ್ಥಿತಿ). ಇದು ಮಧುಮೇಹ ರೋಗಿಗಳಲ್ಲಿ ಸರ್ವೇಸಾಮಾನ್ಯವಾಗಿದೆ. 

ಎಸ್‌ಐಎಸ್‌ಗೆ ಚಿಕಿತ್ಸೆ 

ಸೀಮಿತ ಚೌಕಟ್ಟಿನಲ್ಲಿ ಕೆಲಸ:

ವಂಡರ್‌ಬಿಲ್ಡ್ ಶೋಲ್ಡರ್ ಸೆಂಟರ್, ವಂಡರ್‌ಬಿಲ್ಡ್ ಸ್ಪೋರ್ಟ್ ಮೆಡಿಸಿನ್ ನಡೆಸಿದ 2005 ಅಧ್ಯಯನವು ರೋಗಲಕ್ಷಣಗಳು ಕಡಿಮೆಯಾಗುವವರೆಗೆ ಕೈ ತಲೆ ಮೇಲೆತ್ತಿ ನಡೆಸುವ ಚಟುವಟಿಕೆಗಳನ್ನು ತಪ್ಪಿಸಬೇಕು ಎಂಬುದನ್ನು ಬಲವಾಗಿ ಸೂಚಿಸುತ್ತದೆ. 

 “ಸೀಮಿತ ಚೌಕಟ್ಟಿನಲ್ಲಿ ಕೆಲಸಎಂಬುದರಲ್ಲಿ, ನೋವಿನಿಂದ ಬಳಲುತ್ತಿರುವವರು ಪ್ರಜ್ಞಾಪೂರ್ವಕವಾಗಿ ಯಾವುದೇ ಚಟುವಟಿಕೆಯ ಸಮಯದಲ್ಲಿ ತಮ್ಮ ಕೈಗಳನ್ನು ತಮ್ಮ ದೇಹದ ಮುಂಭಾಗದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಚೌಕಟ್ಟುಎಂದರೆ ಎದೆಯಿಂದ ಸೊಂಟದವರೆಗೆ 2 ರಿಂದ 3 ಅಡಿ ಅಗಲವಾಗಿರಬೇಕು, ರೋಗಿಯು ತಮ್ಮ ಕೈಗಳನ್ನು ತಲೆಯಿಂದ ಮೇಲೆ, ದೇಹದಿಂದ ದೂರಕ್ಕೆ, ಅಥವಾ ಬೆನ್ನ ಹಿಂದೆ, ತೆಗೆದುಕೊಂಡು ಹೋಗುವುದನ್ನು, ಒಟ್ಟಿನಲ್ಲಿ ಅವರ ರೋಗಲಕ್ಷಣಗಳನ್ನು ಉಲ್ಬಣಗೊಳಿಸುವಂತಹ ಯಾವುದೇ ಚಟುವಟಿಕೆಯನ್ನು ತಪ್ಪಿಸಲಾಗುತ್ತದೆ. 

 ಈ ಮೇಲಿನ ವಿಧಾನದ ಜೊತೆಗೆ, ಫಿಸಿಯೋಥೆರಪಿ ಮತ್ತು ಸ್ಟಿರಾಯ್ಡ್‌ಗಳನ್ನು ಸಹ ಶಿಫಾರಸು ಮಾಡಲಾಗುತ್ತದೆ (ಎರಡನೆಯದು ಪ್ರಕರಣದ ತೀವ್ರತೆಯ ಮೇಲೆ ಅವಲಂಬಿತವಾಗಿದೆ) ಎಂದು ಡಾ. ದಾಸ್ ಹೇಳುತ್ತಾರೆ. 

ಫಿಸಿಯೋಥೆರಪಿ: ಅಲ್ಟ್ರಾಸೌಂಡ್ ಥೆರಪಿ ಬರ್ಸಾ ಅಂಗಾಂಶದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ ಎಂದು ಡಾ. ದಾಸ್ ಅಭಿಪ್ರಾಯಪಟ್ಟಿದ್ದಾರೆ. ಈ ಚಿಕಿತ್ಸೆಯು ಶಾಖದಿಂದ (ಥರ್ಮಲ್ ರೆಗ್ಯುಲೇಶನ್) ಪೀಡಿತ ಅಂಗಾಂಶಗಳ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ.  

ಕೊಲ್ಯಾಜನ್ ಪೂರಕಗಳು:

ಇದು ವೈದ್ಯಕೀಯ ವಿಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆ ಎಂಬುದನ್ನು ಡಾ. ದಾಸ್ ತಿಳಿಸಿದರು. ಸರಿಯಾದ ಮೇಲ್ವಿಚಾರಣೆಯಲ್ಲಿ ಇದನ್ನು ನಿರ್ವಹಿಸಿದಾಗ ಸ್ನಾಯುರಜ್ಜುಗಳು ವೇಗವಾಗಿ ಸರಿಹೋಗಲು ಮತ್ತು ಪುನಃ ತುಂಬಿಕೊಳ್ಳಲು ಸಹಾಯ ಮಾಡುತ್ತದೆ. 

ಸ್ಟಿರಾಯ್ಡ್‌ಗಳು ಮತ್ತು ಶಸ್ತ್ರಚಿಕಿತ್ಸೆ:

ಫಿಸಿಯೋಥೆರಪಿ ಒಂದರಿಂದ ಮಾತ್ರ ಉರಿಯೂತವನ್ನು ಕಡಿಮೆ ಮಾಡಲು ಸಾಧ್ಯವಾಗದಿದ್ದಾಗ ಕೇವಲ 20-30 ಪ್ರತಿಶತದಷ್ಟು ಜನರಲ್ಲಿ ಸ್ಟಿರಾಯ್ಡ್‌ನಿಂದ ಇದನ್ನು ನಿರ್ವಹಿಸಬಹುದಾಗಿದೆ ಎಂದು ಡಾ. ಉಮರ್ಜಿಕರ್ ಹೇಳಿದರು. 

ಇವುಗಳಲ್ಲಿ ಶಸ್ತ್ರಚಿಕಿತ್ಸೆಯ ಅನಿವಾರ್ಯತೆಯು ಕೇವಲ 10 ಪ್ರತಿಶತಕ್ಕಿಂತ ಕಡಿಮೆ ಜನರಿಗೆ ಮಾತ್ರ ಇರಬಹುದಾಗಿದೆ. ಇದು ಅಕ್ರೋಮಿಯಾಪ್ಲಾಸ್ಟಿ (ಅಕ್ರೋಮಿಯಾನ್ ಅನ್ನು ಕತ್ತರಿಸುವ ಪ್ರಕ್ರಿಯೆಯನ್ನು ಹೊಂದಿರುವ ಶಸ್ತ್ರಚಿಕಿತ್ಸೆ) ಅಥವಾ ಸಬ್‌ಅಕ್ರೋಮಿಯಾಲ್ ಡಿಕಂಪ್ರೇಶನ್ (ಭುಜದ ಇಂಪಿಂಗ್ಮೆಂಟ್ ಅನ್ನು ಕಡಿಮೆಗೊಳಿಸಲು ವಿನ್ಯಾಸಗೊಳಿಸಲಾದ ಆರ್ತೋಸ್ಕೋಪಿಕ್ ವಿಧಾನ)  

ಹ್ಯಾಪಿಯಸ್ಟ್ ಹೆಲ್ತ್‌ಗೆ ಡಾ. ಡಾಸ್ ಅವರು ಹೇಳುವ ಪ್ರಕಾರ, ಮೋಹನ್ ಅವರ ಪ್ರಕರಣದಲ್ಲಿ ಚಿಕಿತ್ಸೆಯ ಮೊದಲ ಭಾಗ, ಎಂಡೋಕ್ರಿನಾಲೋಜಿಸ್ಟ್ ಅವರನ್ನು ಸಂಪರ್ಕಿಸಿ ಮಧುಮೇಹವನ್ನು ನಿಯಂತ್ರಿಸುವುದು. ಇದರ ನಂತರ ತಲೆಯಿಂದ ಮೇಲೆ ಕೈಯನ್ನು ತೆಗೆದುಕೊಂಡು ಹೋಗುವಂತಹ ಚಟುವಟಿಕೆಯನ್ನು ತಪ್ಪಿಸುವುದು, ಆವರ್ತಕ ಪಟ್ಟಿಯ ಸ್ನಾಯುಗಳನ್ನು ಬಲಪಡಿಸುವುದು, ಆಹಾರದ ಕುರಿತು ಕೆಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ಜೀವನಶೈಲಿಯ ಬದಲಾವಣೆಯನ್ನು ತರುವುದು.  

ಎರಡು ತಿಂಗಳ ಅವಧಿಯಲ್ಲಿ, ಮೋಹನ್ ಅವರ ಭುಜದ ಇಂಪಿಂಗ್ಮೆಂಟ್ ಅನ್ನು ಗುಣಪಡಿಸಲಾಯಿತು. ಆದಾಗ್ಯೂ, ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರೀಕ್ಷಿಸುವುದು, ಸರಿಯಾದ ಆಹಾರ ಕ್ರಮವನ್ನು ಅನುಸರಿಸುವುದು ಹಾಗೂ ಜೀವನಪೂರ್ತಿ ಎಸ್‌ಐಎಸ್ ಅನ್ನು ತಡೆಗಟ್ಟಲು ನಿಯಮಿತ ವ್ಯಾಯಾಮವನ್ನು ಅವರಿಗೆ ಸಲಹೆ ನೀಡಲಾಯಿತು.  

ಕ್ರಿಡಾಪಟುಗಳು ಮತ್ತು ಯುವಜನತೆ:

ಈ ಯುವಜನತೆಯು ವಿವಿಧ ಕ್ರೀಡೆಗಳನ್ನು ಆಡುವುದರಿಂದ ಉಂಟಾಗುವ ಗಾಯದ ಕಾರಣದಿಂದಾಗಿ ಎಸ್‌ಐಎಸ್‌ನಿಂದ ಬಳಲುತ್ತಿರುತ್ತಾರೆ. ನೋವನ್ನು ತಡೆದುಕೊಳ್ಳುವ ಸಾಮರ್ಥ್ಯ ಅವರಲ್ಲಿ ಅಧಿಕವಾಗಿರುವ ಕಾರಣ, ಅವರು ನೋವನ್ನು ನಿರ್ಲಕ್ಷಿಸುತ್ತಾರೆ. ಬದಲಿಗೆ, ತಕ್ಷಣ ಸಹಾಯವನ್ನು ಕೋರಿ ಅಂದರೆ, ನಿರ್ದಿಷ್ಟ ರೋಗನಿರ್ಣಯ, ಫಿಸಿಯೋಥೆರಪಿ, ಸೌಮ್ಯವಾದ ಔಷಧಿಗಳನ್ನು ಬಳಸಿದರೆ ಅವರ ನೋವಿಗೆ ಇವು ಅದ್ಭುತಗಳನ್ನು ಸೃಷ್ಟಿಸಬಹುದು ಅಂದರೆ ಅತಿವೇಗದಲ್ಲಿ ನೋವನ್ನು ನಾಶಪಡಿಸಬಹುದು.” ಎಂದು ಡಾ. ಉಮರ್ಜೀಕರ್ ಹೇಳುತ್ತಾರೆ. 

ಮಧುಮೇಹ ಮತ್ತು ಭುಜದ ಇಂಪಿಂಗ್ಮೆಂಟ್:

ಮಧುಮೇಹವನ್ನು ನಿಯಂತ್ರಿಸುವ ಮೂಲಕ ವಯಸ್ಕರಲ್ಲಿ ಎಸ್‌ಐಎಸ್ ಅನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 

ವ್ಯಾಯಾಮಗಳು ಮತ್ತು ಸಾಮರ್ಥ್ಯ ತರಬೇತಿ/ಸ್ಟ್ರೆಂಥ್ ಟ್ರೈನಿಂಗ್ :

ಮಧುಮೇಹ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪೆರಿಯಾಥ್ರೈಟಿಸ್ ಅನ್ನು ತಪ್ಪಿಸಲು ಕೆಲವು ಚಲನೆಯಿಂದ ಕೂಡಿದ ವ್ಯಾಯಾಮಗಳು ಸಹಾಯಕಾರಿಯಾಗಿವೆ. ಆವರ್ತನ ಪಟ್ಟಿಯನ್ನು ಬಲಪಡಿಸುವ ವ್ಯಾಯಾಮಗಳು ಸಹ ಪ್ರಯೋಜನಕಾರಿ.” ಎಂದು ಡಾ. ಉಮರ್ಜೀಕರ್ ಸಲಹೆ ನೀಡುತ್ತಾರೆ. 

 

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ತೃಪ್ತಿಕರವಾದ ನಿಕಟ ಸಂಬಂಧಗಳನ್ನು ಆನಂದಿಸಬೇಕಾದರೆ ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತಜ್ಞರು ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಕಡಿಮೆ-ತಿಳಿದಿರುವ ಸಲಹೆಗಳನ್ನು ನೀಡಿದ್ದಾರೆ.  

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ