0

0

0

ಈ ಲೇಖನದಲ್ಲಿ

ಗರ್ಭಕಂಠದ ಕ್ಯಾನ್ಸರ್: ಚಿಕಿತ್ಸೆ ಮತ್ತು ತಡೆಗಟ್ಟುವಿಕೆ
85

ಗರ್ಭಕಂಠದ ಕ್ಯಾನ್ಸರ್: ಚಿಕಿತ್ಸೆ ಮತ್ತು ತಡೆಗಟ್ಟುವಿಕೆ

ಆರಂಭಿಕ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ

ಗರ್ಭಕಂಠದ ಕ್ಯಾನ್ಸರ್: ಚಿಕಿತ್ಸೆ ಮತ್ತು ತಡೆಗಟ್ಟುವಿಕೆ

ಗರ್ಭಕಂಠವು ಗರ್ಭಾಶಯದ ಕುತ್ತಿಗೆಯಾಗಿದ್ದು ಇದು ಯೋನಿ ಮತ್ತು ಗರ್ಭಾಶಯವನ್ನು ಸಂಪರ್ಕಿಸುತ್ತದೆ. ಕ್ಯಾನ್ಸರ್ ಕೋಶಗಳು ಗರ್ಭಾಶಯದ ಕೆಳಭಾಗದ ಮೇಲೆ ಪರಿಣಾಮ ಬೀರಿದಾಗ ಅಥವಾ ಮಾರಣಾಂತಿಕ ಗೆಡ್ಡೆ ರೂಪುಗೊಂಡಾಗ ಅದನ್ನು ಗರ್ಭಕಂಠದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ ಪ್ರಪಂಚದಾದ್ಯಂತ ಮಹಿಳೆಯರಲ್ಲಿ 4 ನೇ ಅತ್ಯಂತ ಸಾಮಾನ್ಯ ರೀತಿಯ ಕ್ಯಾನ್ಸರ್ ಆಗಿದ್ದರೂ ಇದು ಲಸಿಕೆಗಳಿಂದ ಬಹುತೇಕ ತಡೆಗಟ್ಟಬಹುದಾದ ಮತ್ತು ಆರಂಭಿಕ ಪತ್ತೆಯಾದರೆ ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2020 ರಲ್ಲಿ ಜಾಗತಿಕವಾಗಿ ಗರ್ಭಕಂಠದ ಕ್ಯಾನ್ಸರ್  6,04,000ಆರು  ಹೊಸ ಪ್ರಕರಣಗಳು ಮತ್ತು 3,42,000 ಸಾವುಗಳು ಎಂದು ಅಂದಾಜಿಸಲಾಗಿದೆ. ಆದರೂ ಅನೇಕ ಮಹಿಳೆಯರಿಗೆ ಈ ಸ್ಥಿತಿಯ ಬಗ್ಗೆ ತಿಳಿದಿಲ್ಲ ಎನ್ನುತ್ತಾರೆ ವೈದ್ಯರು.

“ಅರಿವಿನ ಕೊರತೆಯಿಂದಾಗಿ ಆರಂಭಿಕ ಹಂತಗಳಲ್ಲಿ ಪರೀಕ್ಷೆ ಮತ್ತು ರೋಗನಿರ್ಣಯಕ್ಕೆ ಮಹಿಳೆಯರು ಬರುವುದಿಲ್ಲ” ಎನ್ನುತ್ತಾರೆ ಬೆಂಗಳೂರಿನ ಮದರ್‌ಹುಡ್ ಆಸ್ಪತ್ರೆಗಳ ಸಮಾಲೋಚಕರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಸುಹಾಸಿನಿ ಇನಾಮದಾರ್

ಗರ್ಭಕಂಠದ ಕ್ಯಾನ್ಸರ್ ಎಂದರೇನು?

ಗರ್ಭಾಶಯದ ಬಾಯಿಯಲ್ಲಿ ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯೊಳಗೆ ಅಸಹಜ ಜೀವಕೋಶದ ಬೆಳವಣಿಗೆಯು ಗರ್ಭಕಂಠದ ಕ್ಯಾನ್ಸರ್ ಆರಂಭಿಕ ಹಂತವಾಗಿದೆ. WHO ಹೇಳುವಂತೆ, 95% ಕ್ಕಿಂತ ಹೆಚ್ಚು ಗರ್ಭಕಂಠದ ಕ್ಯಾನ್ಸರ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV) ನಿಂದ ಉಂಟಾಗುತ್ತದೆ. ಅಲ್ಲದೆ, HPV, ಲೈಂಗಿಕವಾಗಿ ಹರಡುವ ಸೋಂಕು ಸಂತಾನೋತ್ಪತ್ತಿ ಪ್ರದೇಶದಲ್ಲಿ ಸಂಭವಿಸುವ ಸಾಮಾನ್ಯ ಸೋಂಕು ಕೂಡ ಕಾರಣವಾಗುತ್ತದೆ.

ಗರ್ಭಕಂಠದ ಕ್ಯಾನ್ಸರ್ ಗರ್ಭಕಂಠದ ಅಂಗಾಂಶದಲ್ಲಿನ ಅಸಹಜ ಕೋಶ ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ ಈ ಜೀವಕೋಶಗಳು ಕ್ಯಾನ್ಸರ್ ಕೋಶಗಳಾಗಿ ಪರಿವರ್ತನೆಗೊಳ್ಳಬಹುದು.

ಗರ್ಭಕಂಠದ ಕ್ಯಾನ್ಸರ್ ಸಂಭವನೀಯ ಲಕ್ಷಣಗಳು

“ಗರ್ಭಕಂಠದ ಕ್ಯಾನ್ಸರ್ ಸಾಮಾನ್ಯವಾಗಿ ಆರಂಭಿಕ ಹಂತದಲ್ಲಿ ಯಾವುದೇ ಗಮನಾರ್ಹ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಮಹಿಳೆಯರು ಹೆಚ್ಚು ಮುಂದುವರಿದ ಹಂತವನ್ನು ತಲುಪಿದಾಗ ಮಾತ್ರ ಲಕ್ಷಣಗಳು ಕಾಣಿಸುತ್ತವೆ ಆದರೆ ಆಗ ತುಂಬಾ ತಡವಾಗಿರಬಹುದು, ”ಎಂದು ಡಾ ಇನಾಮದಾರ್ ವಿವರಿಸುತ್ತಾರೆ.

ಭಾರತೀಯ ಕ್ಯಾನ್ಸರ್ ಸೊಸೈಟಿಯು ಗರ್ಭಕಂಠದ ಕ್ಯಾನ್ಸರ್‌ನ ಮುಂದುವರಿದ ಹಂತಗಳಲ್ಲಿ ಕೆಲವು ರೋಗಲಕ್ಷಣಗಳನ್ನು ಉಲ್ಲೇಖಿಸುತ್ತದೆ, ಅವುಗಳೆಂದರೆ:

  • ಅನಿಯಮಿತ, ಅಂತರ-ಮುಟ್ಟಿನ (ಋತುವಿನ ನಡುವೆ) ರಕ್ತಸ್ರಾವ
  • ಲೈಂಗಿಕ ಸಂಭೋಗ ಮತ್ತು ಶ್ರೋಣಿಯ ಪರೀಕ್ಷೆಯ (ಪೆಲ್ವಿಕ್) ನಂತರ ಅಸಹಜ ಯೋನಿ ರಕ್ತಸ್ರಾವ
  • ಋತುಬಂಧದ ನಂತರ ರಕ್ತಸ್ರಾವ
  • ಯೋನಿಯ ಅಸ್ವಸ್ಥತೆ ಅಥವಾ ಯೋನಿಯಿಂದ ವಾಸನೆಯ ಸ್ರವಿಸುವಿಕೆ, ಸ್ರವಿಸುವಿಕೆಯು ಸ್ವಲ್ಪ ರಕ್ತವನ್ನು ಹೊಂದಿರಬಹುದು ಮತ್ತು
  • ಅವಧಿಗಳ ನಡುವೆ ಅಥವಾ ಋತುಬಂಧದ ನಂತರ ಸಂಭವಿಸಬಹುದು.
  • ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವು
  • ಬೆನ್ನು, ಕಾಲು ಅಥವಾ ಪೆಲ್ವಿಕ್ ನೋವು
  • ಆಯಾಸ, ತೂಕ ಕಡಿಮೆಯಾಗುವುದು, ಹಸಿವಾಗದೆ ಇರುವುದು
  • ಒಂದು ಕಾಲಿನಲ್ಲಿ ಊತ

ಗರ್ಭಕಂಠದ ಕ್ಯಾನ್ಸರ್ ಕಾರಣಗಳು

“ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗಿದೆ ಮತ್ತು ಇದು HPV ಎಂಬ ವೈರಸ್‌ನಿಂದ ಉಂಟಾಗುತ್ತದೆ, ಇದು ಗರ್ಭಾಶಯದ ಬಾಯಿ ಅಥವಾ ಗರ್ಭಕಂಠದ ಮೇಲೆ ಪರಿಣಾಮ ಬೀರುತ್ತದೆ” ಎಂದು ಸ್ಪರ್ಶ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ನಿರ್ದೇಶಕಿ ಮತ್ತು ಪ್ರಮುಖ ಸಲಹೆಗಾರರಾದ ಡಾ.ಪ್ರತಿಮಾ ರೆಡ್ಡಿ ಹೇಳುತ್ತಾರೆ.

“ಧೂಮಪಾನದ ಇತಿಹಾಸ, ವೈದ್ಯಕೀಯ ಚಿಕಿತ್ಸೆಗಳಿಂದ ದುರ್ಬಲಗೊಂಡ ರೋಗನಿರೋಧಕ ಶಕ್ತಿ ಅಥವಾ ಎಚ್‌ಐವಿ ಸೋಂಕು ಈ ರೀತಿಯ ಅಂಶಗಳು ಈಗಾಗಲೇ ಇದ್ದರೆ ಗರ್ಭಕಂಠದ ಕ್ಯಾನ್ಸರ್‌ಗೆ ಹೆಚ್ಚು ಗುರಿಯಾಗುವಂತಹ ಸಾಧ್ಯತೆ ಹೆಚ್ಚು. 25 ರಿಂದ 49 ವರ್ಷ ವಯಸ್ಸಿನ ಮಹಿಳೆಯರು ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ಯಾಪ್ ಸ್ಮೀಯರ್ ಪರೀಕ್ಷೆಗೆ ಒಳಗಾಗಬೇಕು, ಅಪಾಯಕಾರಿ ಅಂಶಗಳಿರುವವರು ಪ್ಯಾಪ್ ಸ್ಮೀಯರ್ ಪರೀಕ್ಷೆಗಳನ್ನು ಪುನಾರಾವರ್ತಿಸಬೇಕು” ಎನ್ನುತ್ತಾರೆ ಡಾ ಇನಾಮದಾರ್.

ಸೆಲ್ ಬದಲಾವಣೆಗಳನ್ನು ಪರಿಶೀಲಿಸಲು ಸ್ಕ್ರೀನಿಂಗ್

ಗರ್ಭಕಂಠದ ಕ್ಯಾನ್ಸರ್ ಪರೀಕ್ಷಿಸಲು ಮುಖ್ಯ ಪರೀಕ್ಷೆಗಳಿವೆ – ಪ್ಯಾಪ್ ಪರೀಕ್ಷೆ ಮತ್ತು HPV ಪರೀಕ್ಷೆ.

HPV ವೈರಸ್‌ನ ಉಪಸ್ಥಿತಿ ಮತ್ತು ಗರ್ಭಕಂಠದ ಅಂಗಾಂಶದಲ್ಲಿನ ಜೀವಕೋಶದ ಬದಲಾವಣೆಗಳನ್ನು HPV ಪರೀಕ್ಷೆಯ ಮೂಲಕ ಪರಿಶೀಲಿಸಬಹುದು.
ಪ್ಯಾಪ್ ಪರೀಕ್ಷೆಗಳು ಗರ್ಭಕಂಠದ ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಪ್ಯಾಪ್ ಸ್ಮೀಯರ್ ಪರೀಕ್ಷೆಯನ್ನು 25 ಮತ್ತು 64 ರ ನಡುವಿನ ಎಲ್ಲಾ ಮಹಿಳೆಯರಿಗೆ ನೀಡಲಾಗುತ್ತದೆ.
“ಪ್ಯಾಪ್ ಸ್ಮೀಯರ್ (ಗರ್ಭಕಂಠದ ಸ್ಮೀಯರ್) ಗರ್ಭಕಂಠದ ಅಥವಾ ಗರ್ಭಾಶಯದ ಬಾಯಿಯ ಪರೀಕ್ಷೆಯಾಗಿದೆ. ನಿಮ್ಮ ವೈದ್ಯರು ಗರ್ಭಕಂಠದಿಂದ ಜೀವಕೋಶಗಳ ಮಾದರಿಯನ್ನು ತೆಗೆದುಕೊಳ್ಳುತ್ತಾರೆ, ನಂತರ ಅದನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ರೋಗಶಾಸ್ತ್ರಜ್ಞರು ಪರೀಕ್ಷಿಸುತ್ತಾರೆ. ಆದರೆ ಪ್ಯಾಪ್ ಸ್ಮೀಯರ್ ಅನ್ನು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಕ್ಯಾನ್ಸರ್ ಪತ್ತೆಹಚ್ಚಲು ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಡಾ ರೆಡ್ಡಿ ಹೇಳುತ್ತಾರೆ.

ಚಿಕಿತ್ಸೆ

ಗರ್ಭಕಂಠದ ಕ್ಯಾನ್ಸರ್‌ಗೆ ನೀಡುವ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿರುತ್ತದೆ. ಅಲ್ಲಿ ಮಾರಣಾಂತಿಕ ಗೆಡ್ಡೆ ಮತ್ತು ಸುತ್ತಮುತ್ತಲಿನ ಅಂಗಾಂಶಗಳನ್ನು ತೆಗೆದುಹಾಕಲಾಗುತ್ತದೆ. ಗರ್ಭಕಂಠದಲ್ಲಿನ ಕ್ಯಾನ್ಸರ್ ಸ್ಥಿತಿಯನ್ನು ಅವಲಂಬಿಸಿ ಪೀಡಿತ ಮಹಿಳೆಯರು ಗರ್ಭಾಶಯವನ್ನು ತೆಗೆದುಹಾಕಲು ಸಹ ಒಳಗಾಗಬಹುದು (ಗರ್ಭಕಂಠ). ಕೆಲವು ಸಂದರ್ಭಗಳಲ್ಲಿ, ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ.

ನಿರೋಧಕ ಕ್ರಮಗಳು

“HPV ವ್ಯಾಕ್ಸಿನೇಷನ್ ಮೂಲಕ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಯಬಹುದು, ನಿಯಮಿತ ಸ್ಕ್ರೀನಿಂಗ್ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ, ಇದು ಚಿಕಿತ್ಸೆಯ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುತ್ತದೆ” ಎಂದು ಡಾ ಇನಾಮದಾರ್ ಹೇಳುತ್ತಾರೆ.

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9 ರಿಂದ 14 ವರ್ಷ ವಯಸ್ಸಿನ ಹುಡುಗಿಯರಿಗೆ ಶಿಫಾರಸು ಮಾಡಲಾದ ಲಸಿಕೆಗಳಲ್ಲಿ ಒಂದಾಗಿ ಭಾರತ ಸರ್ಕಾರವು HPV ವ್ಯಾಕ್ಸಿನೇಷನ್ ಅನ್ನು ಪಟ್ಟಿ ಮಾಡಿದೆ.

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ತೃಪ್ತಿಕರವಾದ ನಿಕಟ ಸಂಬಂಧಗಳನ್ನು ಆನಂದಿಸಬೇಕಾದರೆ ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತಜ್ಞರು ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಕಡಿಮೆ-ತಿಳಿದಿರುವ ಸಲಹೆಗಳನ್ನು ನೀಡಿದ್ದಾರೆ.  
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ