ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಶ್ವಾಸಕೋಶದ ಕ್ಯಾನ್ಸರ್: ಉತ್ಸಾಹಿ ಓಟಗಾರ, ಚಾರಣಿಗನ ಕಥೆ
49

ಶ್ವಾಸಕೋಶದ ಕ್ಯಾನ್ಸರ್: ಉತ್ಸಾಹಿ ಓಟಗಾರ, ಚಾರಣಿಗನ ಕಥೆ

ಬೆಂಗಳೂರಿನ ಸುಧೀಂದ್ರ ಐತಾಳ್ ಅವರು ತಮಗೆ ಕ್ಯಾನ್ಸರ್, ಮತ್ತು ಅವರು ಪತ್ತೆಯಾದ ಮೆಲೂ ಹೇಗೆ ಸಕ್ರಿಯವಾಗಿರುತ್ತಾರೆ ಎನ್ನುವುದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ

ಶ್ವಾಸಕೋಶದ ಕ್ಯಾನ್ಸರ್: ಉತ್ಸಾಹಿ ಓಟಗಾರ, ಚಾರಣಿಗನ ಕಥೆ

ಸೆಪ್ಟೆಂಬರ್ 2023 ರಲ್ಲಿ, ನೆಟ್‌ವರ್ಕಿಂಗ್ ಕಂಪನಿಯ ಸಾಫ್ಟ್‌ವೇರ್ ನಿರ್ದೇಶಕರಾದ ಸುಧೀಂದ್ರ ಐತಾಳ್ (43) ಅವರು ತಮ್ಮ ಆಸೆಯಂತೆ ಉತ್ತರಾಖಂಡದ ಮಾಯಾಲಿ ಪಾಸ್ ಟ್ರೆಕ್ಕಿಂಗ್ ಮಾಡಿದರು. ಇದು 17,300 ಅಡಿ ಎತ್ತರದಲ್ಲಿದೆ. ಹಿಂದಿನ ವರ್ಷ, ಅಂದರೆ 2022ರಲ್ಲಿ ಅವರು ಹಿಮಾಚಲ ಪ್ರದೇಶದಲ್ಲಿ 16,000 ಅಡಿ ಎತ್ತರದಲ್ಲಿರುವ ಪಿನ್ ಭಾಬಾ ಚಾರಣ ಮಾಡಿದ್ದರು. 2021 ರಲ್ಲಿ, ಚಿಕ್ಕಮಗಳೂರಿನಲ್ಲಿ ನಡೆಯುವ ಮಲ್ನಾಡ್ ಅಲ್ಟ್ರಾ 50 ಕೆ, ಟ್ರಯಲ್ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ್ದರು. 2019 ರಲ್ಲಿ ಐತಾಳ್ ಅವರಿಗೆ 4 ನೇ ಹಂತದ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅವರದ್ದು ಅಸಾಮಾನ್ಯ ಸಾಧನೆಯಲ್ಲದೇ ಮತ್ತೇನು?

“ನಾನು 50K ಚಾರಣವನ್ನು ಪೂರ್ಣಗೊಳಿಸಬಹುದೆಂದು ಎಂದಿಗೂ ಯೋಚಿಸಿರಲಿಲ್ಲ. ನನ್ನನ್ನು ನೋಡಿದರೆ, ನನಗೆ ಶ್ವಾಸಕೋಶದ ಕ್ಯಾನ್ಸರ್ ಇದೆ ಎಂದು ತಿಳಿಯುವುದಿಲ್ಲ. ನನಗೆ ಧೂಮಪಾನದಂತಹ ಅಭ್ಯಾಸಗಲಿಲ್ಲ. ಆದರೆ ಈ ರೋಗನಿರ್ಣಯದ ಹೊರತಾಗಿಯೂ ಅನೇಕ ವಿಧಗಳಲ್ಲಿ ನನ್ನನ್ನು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಯಾಕೆಂದರೆ ಮುಖ್ಯವಾಗಿ ಇದಕ್ಕೆ ಕಿಮೊಥೆರಪಿ ಅಗತ್ಯವಿಲ್ಲ ಮತ್ತು ಚಿಕಿತ್ಸೆ ಲಭ್ಯವಿದೆ. ಹಾಗಾಗಿ ನಾನು ದಿನಕ್ಕೆ ಒಮ್ಮೆ ಮಾತ್ರೆ ತೆಗೆದುಕೊಳ್ಳುತ್ತೇನೆ. ಅಲ್ಲದೆ ಇದಕ್ಕೆ ಸಹಾಯ ಮಾಡುತ್ತಿರುವುದು ನನ್ನನ್ನು ಬೆಂಬಲಿಸುವವರು. ಅವರ ಸಹಾಯದಿಂದ ನಾನು ನನ್ನ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು. ನನ್ನ ರೋಗನಿರ್ಣಯದ ನಂತರ ನನ್ನ ದಿನಚರಿಯಲ್ಲಿ ಕನಿಷ್ಠ ಬದಲಾವಣೆಗಳಾಗಿವೆ ” ಎಂದು ಐತಾಳ್ ತಮ್ಮ ಅನುಭವವನ್ನು ಹೇಳುತ್ತಾರೆ.

ಐತಾಳ್‌ಗೆ, ಫಿಟ್‌ ಆಗಿ ಉಳಿಯಲು ಪ್ರಮುಖ ಪ್ರೇರಣೆಯೆಂದರೆ ಓಟವನ್ನು ಮುಂದುವರಿಸುವುದು ಮತ್ತು ಚಾರಣ ಮಾಡುವುದು. ಮ್ಯಾರಥಾನ್‌ಗಳು ಮತ್ತು ಇತರ ಹೊರಾಂಗಣ ಚಟುವಟಿಕೆಗಳಲ್ಲಿ ಸ್ನೇಹಿತರೊಂದಿಗೆ ಭಾಗವಹಿಸುವುದು. “ಯಾವುದೇ ಕಾರಣಕ್ಕೂ ನಾನು ಓಡುವುದನ್ನು ನಿಲ್ಲಿಸುವುದಿಲ್ಲ” ಎಂದು ಅವರು ಹೇಳುತ್ತಾರೆ.

ರೋಗನಿರ್ಣಯ

ಜುಲೈ 2019 ರಲ್ಲಿ, ವಾಂತಿ ಶುರುವಾಗಿ, ಸರಿಯಾಗಿ ನಡೆಯಲು ಸಾಧ್ಯವಿಲ್ಲದೇ ಮತ್ತು ದಿಕ್ಕು ತೋಚದಂತಾಗಿ ಐತಾಳ್ ಅವರನ್ನು ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಸಾಗಿಸಲಾಯಿತು. ಇದಕ್ಕೂ ಮೊದಲು ಕೆಲವು ತಿಂಗಳುಗಳಿಂದ ಅವರಿಗೆ ಕುತ್ತಿಗೆ ನೋವು, ತಲೆನೋವು, ವಾಕರಿಕೆ ಮತ್ತು ತಲೆಸುತ್ತು ಇತ್ತು.

ಕ್ರಾನಿಯಲ್ CT ಸ್ಕ್ಯಾನ್ ಮೂಲಕ ಅವರ ಕುತ್ತಿಗೆಯಲ್ಲಿ ಕ್ಯಾನ್ಸರ್ ಗಾಯಗಳಾಗಿರುವುದು ತಿಳಿಯಿತು ಮತ್ತು PET ಸ್ಕ್ಯಾನ್ ಮಾರಣಾಂತಿಕತೆಯನ್ನು ದೃಢಪಡಿಸಿತು.

“ಆ ಕ್ಷಣಕ್ಕೆ ನಾನು ದಿಗ್ಭ್ರಮೆಗೊಂಡಿದ್ದೆ. ಅದನ್ನು ಒಪ್ಪಿಕೊಳ್ಳಲು ಸುಮಾರು ಸಮಯ ಬೇಕಾಯಿತು. ರೋಗನಿರ್ಣಯದ ನಂತರದ ಆರಂಭಿಕ ಕೆಲವು ವಾರಗಳು ಕಠಿಣವಾಗಿತ್ತು” ಅವರ ಪತ್ನಿ ರಮ್ಯಾ ಆರ್, ಅವರಿಬ್ಬರೂ ಆರಂಭದಲ್ಲಿ ಬಹಳ ಸಮಯ ಕಳೆದರು ಎಂದು ಐತಾಳ್ ನೆನಪಿಸಿಕೊಳ್ಳುತ್ತಾರೆ. “ನನಗೇ ಯಾಕೆ ಹೀಗಾಯ್ತು? ನಾವೇಕೆ ಅನುಭವಿಸಬೇಕು? ಎನ್ನುವ ಯೋಚನೆಗಳ ಜೊತೆ ಐತಾಳ್ ತಮ್ಮ ಕುಟುಂಬದ ಭವಿಷ್ಯ ಮತ್ತು ಆರ್ಥಿಕ ಭದ್ರತೆಯ ಬಗ್ಗೆ ಆಲೋಚಿಸುತ್ತಿದ್ದರು. ಆದರೆ ಅಗತ್ಯಗಳನ್ನು ಪ್ರಾಯೋಗಿಕ ರೀತಿಯಲ್ಲಿ ನಿಭಾಯಿಸಿದರು. ಆ ದಿನಗಳಿಂದ ಅವರು ಕಲಿತದ್ದನ್ನು ನೆನಪಿಸಿಕೊಳ್ಳುತ್ತಾ, “ನಾಲ್ಕನೇ ಹಂತದ ಕ್ಯಾನ್ಸರ್ ಇರುವ ಯಾರಾದರೂ ತಮ್ಮ ಸ್ಥಿತಿಯನ್ನು ನಿರ್ವಹಿಸಲು ಮತ್ತು ಉತ್ತಮ ಚಿಕಿತ್ಸಾ ಆಯ್ಕೆಗಳಿಗಾಗಿ ಉತ್ತಮ ಮಾರ್ಗವನ್ನು ಹುಡುಕಬೇಕು.” ಎಂದು ತಿಳಿಸುತ್ತಾರೆ.

ಟ್ಯೂಮರ್ ಮಾಲಿಕ್ಯುಲರ್ ಪ್ರೊಫೈಲಿಂಗ್ ಮಾಡುವ ಬೆಂಗಳೂರು ಮೂಲದ ನಿಖರ ಔಷಧಿ ಕಂಪನಿಯೊಂದರ ದೈಹಿಕ ಕ್ಯಾನ್ಸರ್ ತಂಡದ ಹಿರಿಯ ವಿಜ್ಞಾನಿ ರಮ್ಯಾ ಅವರು ಹೀಗೆ ಹಂಚಿಕೊಂಡಿದ್ದಾರೆ, “ಕೆಲಸದಲ್ಲಿಯೂ ಸಹ, ನಾನು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವಿರಾರು ಪ್ರಕಟಣೆಗಳನ್ನು ನಿಯಮಿತವಾಗಿ ನೋಡುತ್ತಿದ್ದೆ. ತುಂಬಾ ಭಯ ಅಥವಾ ಅಸಮಾಧಾನವಾಗುತ್ತಿತ್ತು. ಆದರೆ ಭರವಸೆಯಿತ್ತು” ಎಂದು ಅವರು ಹೇಳುತ್ತಾರೆ.

ಬೆಂಬಲ

ರಕ್ತದ ಕ್ಯಾನ್ಸರ್‌ನಿಂದ ಬದುಕುಳಿದಿದ್ದ ಕುಟುಂಬದ ಸ್ನೇಹಿತನನ್ನು ಭೇಟಿಯಾಗಿದ್ದು ಅವರ ಬದುಕಿಗೆ ಮಹತ್ವದ ತಿರುವು ನೀಡಿತು. “ಕಳೆದ ಎರಡು ವರ್ಷಗಳಿಂದ ನಾನು ಸೇವಿಸುತ್ತಿದ್ದ ಅದೇ ಔಷಧಿಯನ್ನು ಸೇವಿಸುತ್ತಿದ್ದ, ಅದೇ ರೀತಿಯ ಕ್ಯಾನ್ಸರ್ ಹೊಂದಿರುವ ವ್ಯಕ್ತಿಯ ಬಗ್ಗೆ ಅವರು ನನಗೆ ತಿಳಿಸಿದರು. ಸಮಯ ಸುದೀರ್ಘ ಎಂದೆನಿಸಿದರೂ ಇದರಿಂದ ಮಹತ್ವದ ತಿರುವು ಸಿಕ್ಕಿತು. ಯಾಕೆಂದರೆ ಅವರು ಭರವಸೆಯಿಂದ, ವರ್ತಮಾನದಲ್ಲಿ ಬದುಕುತ್ತಿದ್ದರು” ಎಂದು ಐತಾಳ್ ನೆನಪಿಸಿಕೊಳ್ಳುತ್ತಾರೆ.

ಇದಾದ ಬಳಿಕ ಐತಾಳ್ ಬೆಂಬಲ ನೀಡುವ ಗುಂಪುಗಳನ್ನು ಸೇರಿದರು. ಅಲ್ಲಿ ಅವರು ಅನೇಕ ಬದುಕುಳಿದವರನ್ನು ಭೇಟಿ ಮಾಡಿದರು ಮತ್ತು ಅವರ ಅನುಭವಗಳಿಂದ ಕಲಿತರು. “ಇದು ಎಲ್ಲವನ್ನೂ ಕ್ರಮೇಣವಾಗಿ ಸುಲಭಗೊಳಿಸಿತು” ಎಂದು ಹೇಳುತ್ತಾರೆ.

ಯುವ ಜನರಲ್ಲಿ ಕ್ಯಾನ್ಸರ್ ಸವಾಲುಗಳು

ಐತಾಳ್‌ಗೆ ಚಿಕಿತ್ಸೆ ನೀಡುತ್ತಿರುವ ಬೆಂಗಳೂರಿನ ಅಪೊಲೊ ಕ್ಯಾನ್ಸರ್ ಸೆಂಟರ್‌ನ ವೈದ್ಯಕೀಯ ಆಂಕೊಲಾಜಿಯ ಪ್ರಮುಖ ಮತ್ತು ಹಿರಿಯ ಸಲಹೆಗಾರ ಡಾ ವಿಜಯ್ ಅಗರ್‌ವಾಲ್, ಹೆಚ್ಚಿನ ಸಂದರ್ಭಗಳಲ್ಲಿ ಬಳಸಲಾಗುವ ಪ್ರಮಾಣಿತ ಕ್ಯಾನ್ಸರ್ ಚಿಕಿತ್ಸೆಗಳು ಐತಾಳ್‌ನಂತಹವರಿಗೆ ಸೂಕ್ತವಲ್ಲ ಎಂದು ಹೇಳುತ್ತಾರೆ. ಮೂವತ್ತು ಮತ್ತು ನಲವತ್ತರ ವಯಸ್ಸಿನಲ್ಲಿ ಜನರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುತ್ತಾರೆ. ಅವರು ಸಕ್ರಿಯ ಜೀವನವನ್ನು ಮುಂದುವರಿಸಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಬಯಸುತ್ತಾರೆ.
ಓಟದ ಬಗ್ಗೆ ಐತಾಳ್ ಅವರ ಉತ್ಸಾಹವನ್ನು ಪರಿಗಣಿಸಿ, ವೈದ್ಯರು ಅವರ ದಿನಚರಿಯ ಮೇಲೆ ಪರಿಣಾಮ ಬೀರದಹಾಗೆ ಹೇಳಿ ಮಾಡಿಸಿದ ಚಿಕಿತ್ಸೆಗಳನ್ನು ನೀಡುತ್ತಿದ್ದಾರೆ. “ನಾವು ಪ್ರಮಾಣಿತ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಯನ್ನು ಮಾರ್ಪಡಿಸಿದ್ದೇವೆ ಆದ್ದರಿಂದ ಅದು ಅವರ ನರಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅವರ ಓಡುವ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ” ಎಂದು ಡಾ ಅಗರ್ವಾಲ್ ಹೇಳುತ್ತಾರೆ.

ಶ್ವಾಸಕೋಶದ ಕ್ಯಾನ್ಸರ್ ಜೊತೆ ಬದುಕುವುದು

ಕಳೆದ ವರ್ಷದಿಂದ ಕ್ಯಾನ್ಸರ್ ಮುಂದುವರೆದಿದೆ. ಅವರ ಫಿಟ್ನೆಸ್ ಮಟ್ಟಗಳು ಕುಸಿದಿದ್ದರೂ, ಅವರು ಇನ್ನೂ ಓಡಲು ಸಮರ್ಥರಾಗಿದ್ದಾರೆ ಎಂದು ಐತಾಳ್ ಹೇಳುತ್ತಾರೆ. ಅವರು ತಮ್ಮ ವಾರ್ಷಿಕ ಚಾರಣ ಮತ್ತು ಮ್ಯಾರಥಾನ್‌ಗಳನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ. “ನಾನು ನಮ್ಮ 11 ವರ್ಷದ ಮಗಳೊಂದಿಗೆ ಹಿಮಾಲಯಕ್ಕೆ ಕುಟುಂಬ ಚಾರಣವನ್ನು ಯೋಜಿಸುತ್ತಿದ್ದೇನೆ” ಎಂದು ಅವರು ಹೇಳುತ್ತಾರೆ.

ಆದರೆ ಅವರ ಪರಿಸ್ಥಿತಿಗಳು ಅವರು ತಿಳಿದ ಹಾಗೆಯೇ ಇರುವುದಿಲ್ಲ. ಕೆಲವೊಮ್ಮೆ ಅವು ವೇಗವಾಗಿ ಬದಲಾಗುತ್ತವೆ. “ಫಿಟ್ನೆಸ್ ಅದರ ಒಂದು ಅಂಶವಾಗಿದೆ. ನಾನು ಆರು ಅಥವಾ ಎಂಟು ತಿಂಗಳುಗಳವರೆಗೆ ಯೋಜಿಸಬಹುದೇ ಎಂದು ನನಗೆ ತಿಳಿದಿಲ್ಲ ”ಎಂದು ಐತಾಳ್ ಹೇಳುತ್ತಾರೆ.

ಆಶಾದಾಯಕವಾಗಿರುವುದು

ಕಳೆದ ವರ್ಷ ಕಠಿಣವಾಗಿದ್ದರೂ, ದಂಪತಿಗಳು ಆಶಾವಾದಿಯಾಗಿದ್ದಾರೆ. ಜೀವನದ ಸದಾ ಬದಲಾಗುತ್ತಿರುವ ಸ್ವಭಾವದ ಬಗ್ಗೆ ರಮ್ಯಾ ತಮ್ಮ ಒಪ್ಪಿಗೆಯನ್ನು ಹಂಚಿಕೊಳ್ಳುತ್ತಾರೆ. “ಕ್ಯಾನ್ಸರ್ ಕಣ್ಮರೆಯಾಗುವುದಿಲ್ಲ ಎಂದು ನನಗೆ ತಿಳಿದಿದೆ, ಏಕೆಂದರೆ ಇದೊಂದು ಸ್ಥಿರವಾದ ಕಾಯಿಲೆ. ಆದ್ದರಿಂದ, ನಾನು ಮುಂದಿನ ಅತ್ಯುತ್ತಮ ವಿಷಯಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದು ಅವರ ಪತ್ನಿ ಹೇಳುತ್ತಾರೆ.

ಪ್ರತಿಯೊಬ್ಬರ ಪ್ರಯಾಣವು ಅನನ್ಯವಾಗಿದ್ದರೂ, ಇಲ್ಲಿಯವರೆಗೆ ಐತಾಳ್ ಅವರಿಗೆ ಸಹಾಯ ಮಾಡಿದ ಒಂದು ವಿಷಯವೆಂದರೆ ಭರವಸೆ. “ನನ್ನ ಮಗಳೊಂದಿಗೆ ಸಮಯ ಕಳೆಯಲು ಮತ್ತು ಆಕೆಯ ಬೆಳವಣಿಗೆಯನ್ನು ವೀಕ್ಷಿಸಲು ಬಯಸುವುದು ನನಗೆ ಒಂದು ಪ್ರಮುಖ ಪ್ರೇರಕ ಅಂಶವಾಗಿದೆ” ಎಂದು ಅವರು ಹೇಳುತ್ತಾರೆ.

ಐತಾಳ್ ಅವರು ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. “ನಾನು ಸಾಧ್ಯವಾದಷ್ಟು ಸಾಮಾನ್ಯವಾಗಿ ಬದುಕಲು ಪ್ರಯತ್ನಿಸುತ್ತೇನೆ. ಸಕ್ರಿಯವಾಗಿರುತ್ತೇನೆ ಮತ್ತು ಇಷ್ಟಪಡುವುದನ್ನು ಮುಂದುವರಿಸುತ್ತೇನೆ” ಎನ್ನುವ ಐತಾಳ್ ಸ್ಫೂರ್ತಿಯಂತೆ ಗೋಚರಿಸುತ್ತಾರೆ.

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ