ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಮಧುಮೇಹ ನಿರ್ವಹಣೆಯಲ್ಲಿ ಬೇವಿನ ಎಲೆ ಉಪಯೋಗ
13

ಮಧುಮೇಹ ನಿರ್ವಹಣೆಯಲ್ಲಿ ಬೇವಿನ ಎಲೆ ಉಪಯೋಗ

ಬೇವಿನ ಎಲೆಗಳಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕಗಳು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಮಧುಮೇಹ ನಿರ್ವಹಣೆಯಲ್ಲಿ ಬೇವಿನ ಎಲೆ ಉಪಯೋಗ
ಚಿತ್ರ: ಅನಂತ ಸುಬ್ರಮಣ್ಯಂ ಕೆ/ಹ್ಯಾಪಿಯೆಸ್ಟ್ ಹೆಲ್ತ್

ಬೇವು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಬಳಸುವ ಔಷಧೀಯ ಸಸ್ಯವಾಗಿದೆ. ಇದು ವಿವಿಧ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕೂಡ ಸೇರಿದೆ. ಆರೋಗ್ಯಕರ ಆಹಾರ ಮತ್ತು ಸಕ್ರಿಯ ಜೀವನಶೈಲಿಯೊಂದಿಗೆ, ಮಧುಮೇಹ ನಿರ್ವಹಣೆಯಲ್ಲಿ ಬೇವಿನ ಎಲೆ ಪಾತ್ರವನ್ನು ವಹಿಸುತ್ತವೆ ಎಂದು ಮಧುಮೇಹ ತಜ್ಞರು ಮತ್ತು ಪೌಷ್ಟಿಕತಜ್ಞರು ಸೂಚಿಸುತ್ತಾರೆ. ಬೇವು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ ಎಂದು ಸೂಚಿಸಲಾಗಿದೆ.

ಮಧುಮೇಹಕ್ಕೆ ಬೇವಿನ ಪ್ರಯೋಜನಗಳು

“ಬೇವಿನ ಎಲೆಗಳು ಈ ಚಯಾಪಚಯ ಅಸ್ವಸ್ಥತೆಗೆ( metabolic disorder) ಪರಿಹಾರವಲ್ಲವಾದರೂ, ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಕೆಲವು ಪ್ರಯೋಜನಗಳನ್ನು ನೀಡಬಹುದು” ಎಂದು ದೆಹಲಿ ಮೂಲದ ಆಹಾರತಜ್ಞರಾದ ಅವನಿ ಕೌಲ್ ವಿವರಿಸುತ್ತಾರೆ.

ಬೆಂಗಳೂರಿನ ಆಸ್ಟರ್ ಆರ್‌ವಿ ಆಸ್ಪತ್ರೆಯ ಮುಖ್ಯ ಪೌಷ್ಟಿಕತಜ್ಞರಾದ ಸೌಮಿತಾ ಬಿಸ್ವಾಸ್ ಅವರ ಪ್ರಕಾರ, ಬೇವಿನ ಎಲೆಗಳ ಮಧುಮೇಹ ವಿರೋಧಿ ಗುಣಲಕ್ಷಣಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇದು ಸ್ನಾಯುಗಳು ಮತ್ತು ಇತರ ಜೀವಕೋಶಗಳಲ್ಲಿ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.

“ಬೇವು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹದ ಆಕ್ರಮಣವನ್ನು ವಿಳಂಬಗೊಳಿಸುವಲ್ಲಿ ಪಾತ್ರ ವಹಿಸುತ್ತದೆ. ಬೇವಿನ ಎಲೆ ಮತ್ತು ತೊಗಟೆ ರಕ್ತದಲ್ಲಿ ಉತ್ಕರ್ಷಣ ನಿರೋಧಕ ಮಟ್ಟವನ್ನು ಹೆಚ್ಚಿಸುತ್ತದೆ” ಎನ್ನುತ್ತಾರೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಅಂತಃಸ್ರಾವಶಾಸ್ತ್ರದ ಸಹಾಯಕ ಸಲಹೆಗಾರ್ತಿ ಡಾ.ಅನುಷಾ ನಾಡಿಗ್.

“ಬೇವಿನ ಎಲೆಗಳು ಫ್ಲೇವನಾಯ್ಡ್‌ಗಳು, ಗ್ಲೈಕೋಸೈಡ್‌ಗಳು ಮತ್ತು ಟ್ರೈಟರ್‌ಪೆನಾಯ್ಡ್‌ಗಳಂತಹ ವಿವಿಧ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತವೆ, ಇದು ಅವುಗಳ ಮಧುಮೇಹ-ವಿರೋಧಿ ಗುಣಲಕ್ಷಣಗಳಿಗೆ ಕೊಡುಗೆ ನೀಡುತ್ತದೆ. ಈ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಕಾರ್ಯವನ್ನು ಸುಧಾರಿಸುತ್ತದೆ” ಎಂದು ಕೌಲ್ ವಿವರಿಸುತ್ತಾರೆ.

ಬೆಂಗಳೂರು ಮೂಲದ ಮಧುಮೇಹ ತಜ್ಞೆ ಡಾ ಅಶ್ವಿತಾ ಶ್ರುತಿ ದಾಸ್ ಅವರು “ತಮ್ಮ ಯಾವುದೇ ಗ್ರಾಹಕರು ಬೇವನ್ನು ಚಿಕಿತ್ಸೆಯಾಗಿ ತೆಗೆದುಕೊಳ್ಳದಿದ್ದರೂ, ಕುಟುಂಬ ಮತ್ತು ಸ್ನೇಹಿತರು ಸೂಚಿಸಿದಾಗ ಅವರು ನೈಸರ್ಗಿಕ ಚಿಕಿತ್ಸೆಯಾಗಿ ಪ್ರಯತ್ನಿಸಿದರು. ಅದಾದ ಬಳಿಕ ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಸ್ವಲ್ಪ ಇಳಿಕೆಯಾದದನ್ನು ಗಮನಿಸಿದ್ದಾರೆ” ಎಂದು ವಿವರಿಸಿದರು

ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಬೇವಿನ ಎಲೆಗಳು ಹೇಗೆ ಸಹಾಯ ಮಾಡುತ್ತವೆ

ವಿವಿಧ ಕಾರ್ಯವಿಧಾನಗಳ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಬೇವಿನ ಎಲೆಗಳು ಸಹಾಯ ಮಾಡುತ್ತವೆ ಎಂದು ಕೌಲ್ ವಿವರಿಸುತ್ತಾರೆ.

ಬೇವಿನ ಎಲೆಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತವೆ. ಜೀವಕೋಶಗಳು ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಅವುಗಳು ಮೇದೋಜ್ಜೀರಕ ಗ್ರಂಥಿಯ ಬೀಟಾ ಕೋಶಗಳಿಂದ(pancreatic beta cells) ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ರಕ್ತಪ್ರವಾಹಕ್ಕೆ ಇನ್ಸುಲಿನ್ ಬಿಡುಗಡೆಯನ್ನು ಉತ್ತೇಜಿಸುತ್ತದೆ.

“ಬೇವಿನ ಎಲೆಗಳು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಗ್ಲೂಕೋಸ್‌ಗೆ ವಿಭಜಿಸಲು ಕಾರಣವಾದ ಕಿಣ್ವಗಳನ್ನು ಪ್ರತಿಬಂಧಿಸುತ್ತದೆ (enzymes responsible for breaking down complex carbohydrates into glucose) ಇದರಿಂದಾಗಿ ಕರುಳಿನಿಂದ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ” ಎಂದು ಕೌಲ್ ವಿವರಿಸುತ್ತಾರೆ.

ಆಹಾರದಲ್ಲಿ ಬೇವಿನ ಎಲೆಗಳನ್ನು ಸೇರಿಸಿಕೊಳ್ಳುವುದು ಹೇಗೆ?

ಮಧುಮೇಹಿಗಳು ಬೇವಿನ ಎಲೆಗಳನ್ನು ಹಲವಾರು ರೀತಿಯಲ್ಲಿ ಸೇವಿಸಬಹುದು ಎಂದು ತಜ್ಞರು ವಿವರಿಸುತ್ತಾರೆ. ಕೌಲ್ ಪ್ರಕಾರ, ಗರಿಷ್ಠ ಪ್ರಯೋಜನಗಳಿಗಾಗಿ ಬೇವನ್ನು ಸೇವಿಸುವ ಅತ್ಯುತ್ತಮ ಮಾರ್ಗವೆಂದರೆ ಬೇವಿನ ಎಲೆಗಳೊಂದಿಗೆ ಚಹಾವನ್ನು ತಯಾರಿಸುವುದು, ಇದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುವ ಜೈವಿಕ ಸಕ್ರಿಯ ಸಂಯುಕ್ತಗಳ ಸಾಂದ್ರೀಕೃತ ಪ್ರಮಾಣವನ್ನು ಒದಗಿಸುತ್ತದೆ.

“ಬೇವಿನ ಚಹಾವನ್ನು ತಯಾರಿಸಲು, ಸುಮಾರು 10-15 ತಾಜಾ ಅಥವಾ ಒಣಗಿದ ಬೇವಿನ ಎಲೆಗಳನ್ನು 5-10 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ನಂತರ ಮಿಶ್ರಣವನ್ನು ಸೋಸಿಕೊಳ್ಳಿ ಮತ್ತು ಬೆಚ್ಚಗಿರುವಾಗ ಚಹಾವನ್ನು ಕುಡಿಯಿರಿ” ಎಂದು ಕೌಲ್ ಹೇಳುತ್ತಾರೆ.

ಸ್ಮೂಥಿಗಳು, ಜ್ಯೂಸ್‌ಗಳು ಅಥವಾ ಸೂಪ್‌ಗಳಂತಹ ಪಾನೀಯಗಳಿಗೆ ಬೇವಿನ ಎಲೆಯ ಪುಡಿಯನ್ನು ಸೇರಿಸಲು ಅವರು ಸಲಹೆ ನೀಡುತ್ತಾರೆ, ಆದರೆ ಚಹಾವನ್ನು ಸಿಹಿಗೊಳಿಸುವುದು ಅಥವಾ ಅದರ ಕಹಿಯಿಂದಾಗಿ ಅದನ್ನು ಹೆಚ್ಚು ರುಚಿಕರವಾಗಿಸಲು ಇತರ ಪದಾರ್ಥಗಳೊಂದಿಗೆ ಪುಡಿಯನ್ನು ಬೆರೆಸುವುದು ಅಗತ್ಯವಾಗಬಹುದು.
ಬಿಸ್ವಾಸ್ ಪ್ರಕಾರ, ಬೇವಿನ ಎಲೆಗಳನ್ನು ಅಡುಗೆ ತಯಾರಿಕೆಯಲ್ಲಿ ಸೇರಿಸಿಕೊಳ್ಳಬಹುದು ಅಥವಾ ಕೆಲವು ಮಸಾಲೆಗಳೊಂದಿಗೆ ಹದಗೊಳಿಸಬಹುದು ಮತ್ತು ಸೈಡ್ ಡಿಶ್ ಆಗಿ ಸೇವಿಸಬಹುದು.

ಡಾ ನಾಡಿಗ್ ಅವರ ಪ್ರಕಾರ, ಮಧುಮೇಹಿಯು ಅದರ ಪ್ರಯೋಜನಗಳನ್ನು ಪಡೆಯಲು ಬೆಳಿಗ್ಗೆ ನಾಲ್ಕರಿಂದ ಐದು ಎಲೆಗಳನ್ನು ಅಗಿಯಬಹುದು, ಆದರೆ ಅದಕ್ಕೂ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

ಹಲ್ಲಿನ ಆರೈಕೆಗಾಗಿ ಬೇವಿನ ಕಡ್ಡಿ ತಪ್ಪಿಸಿ

ಹಲ್ಲಿನ ಆರೈಕೆಯಲ್ಲಿ ಬೇವಿನ ಕಡ್ಡಿಗಳನ್ನು ಬಳಸಲಾಗಿದ್ದರೂ, ಮಧುಮೇಹ ಇರುವವರು ಜಾಗರೂಕರಾಗಿರಬೇಕು. ಏಕೆಂದರೆ ಅವು ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳ ಏರಿಳಿತದಿಂದ ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಮತ್ತು ಒಸಡಿನ ಮೂಗೇಟುಗಳಿಗೆ ಕಾರಣವಾಗಬಹುದು ಎಂದು ಕೌಲ್ ಸೂಚಿಸುತ್ತಾರೆ.

ಮೂತ್ರಪಿಂಡದ ಸಮಸ್ಯೆ ಇರುವವರು ಅಥವಾ ವಿಟಮಿನ್ ಕೆ-ನಿರ್ಬಂಧಿತ ಆಹಾರದಲ್ಲಿರುವವರು ಬೇವನ್ನು ಸೇವಿಸಬಾರದು ಎಂದು ಬಿಸ್ವಾಸ್ ಸೂಚಿಸುತ್ತಾರೆ. “ಇದನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ಸೇವಿಸಬೇಕು, ಏಕೆಂದರೆ ಮಧುಮೇಹಿಗಳು ಬೇವಿನ ಎಲೆಗಳನ್ನು ಅತಿಯಾಗಿ ಸೇವಿಸುವುದರಿಂದ ಹೈಪೊಗ್ಲಿಸಿಮಿಯಾವನ್ನು ಅನುಭವಿಸಬಹುದು” ಎಂದು ಅವರು ಎಚ್ಚರಿಸಿದ್ದಾರೆ.

ಕೌಲ್ ಪ್ರಕಾರ, ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ಸಹ ಬೇವಿನ ಗರ್ಭನಿರೋಧಕ ಮತ್ತು ಗರ್ಭಪಾತದ ಗುಣಲಕ್ಷಣಗಳಿಂದ ದೂರವಿರಬೇಕು.

ಬೇವಿನ ಎಲೆಗಳು ಇಮ್ಯುನೊಸಪ್ರೆಸೆಂಟ್ಸ್, ಆಂಟಿಡಯಾಬಿಟಿಕ್ ಡ್ರಗ್ಸ್ ಅಥವಾ ರಕ್ತ ತೆಳುಗೊಳಿಸುವಿಕೆಯಂತಹ ಕೆಲವು ಔಷಧಿಗಳೊಂದಿಗೆ ಅಡ್ಡ ಪರಿಣಾಮ ಬೀರಬಹುದು ಮತ್ತು ಕೆಲವರಿಗೆ ಬೇವಿನ ಎಲೆಗಳಿಗೆ ಅಲರ್ಜಿಯಾಗಬಹುದು ಎಂದು ಕೌಲ್ ವಿವರಿಸುತ್ತಾರೆ.

“ನೀವು ಮಧುಮೇಹ ಹೊಂದಿದ್ದರೆ, ನಿಮ್ಮ ದಿನಚರಿಯಲ್ಲಿ ಬೇವು ಅಥವಾ ಇತರ ಯಾವುದೇ ಗಿಡಮೂಲಿಕೆ ಪರಿಹಾರಗಳನ್ನು ಸೇರಿಸುವ ಮೊದಲು ನಿಮ್ಮ ಆಹಾರ ತಜ್ಞರನ್ನು ಸಂಪರ್ಕಿಸಿ” ಎಂದು ಕೌಲ್ ಎಚ್ಚರಿಸಿದ್ದಾರೆ.

ಸಾರಾಂಶ

ಮಧುಮೇಹ ನಿರ್ವಹಣೆಯಲ್ಲಿ ಬೇವಿನ ಎಲೆಗಳು ಪಾತ್ರವಹಿಸುತ್ತವೆ. ಅವು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತವೆ, ಜೀವಕೋಶಗಳು ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಅವು ರಕ್ತಪ್ರವಾಹಕ್ಕೆ ಇನ್ಸುಲಿನ್ ಬಿಡುಗಡೆಯನ್ನು ಉತ್ತೇಜಿಸುತ್ತಾರೆ.
ಮಧುಮೇಹ ಹೊಂದಿರುವವರು ತಮ್ಮ ಆಹಾರದಲ್ಲಿ ಹಲವಾರು ವಿಧಗಳಲ್ಲಿ ಬೇವನ್ನು ಸೇರಿಸಿಕೊಳ್ಳಬಹುದು, ಆದರೆ ತಮ್ಮ ದಿನಚರಿಯಲ್ಲಿ ಬೇವು ಅಥವಾ ಇತರ ಯಾವುದೇ ಗಿಡಮೂಲಿಕೆ ಪರಿಹಾರಗಳನ್ನು ಸೇರಿಸುವ ಮೊದಲು ತಮ್ಮ ಆಹಾರ ತಜ್ಞರನ್ನು ಸಂಪರ್ಕಿಸಬೇಕು.

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ