0

0

0

ಈ ಲೇಖನದಲ್ಲಿ

ಆಸಿಡ್ ರಿಫ್ಲಕ್ಸ್: ಎದೆಯುರಿಯನ್ನು ನಿರ್ಲಕ್ಷಿಸಬೇಡಿ
18

ಆಸಿಡ್ ರಿಫ್ಲಕ್ಸ್: ಎದೆಯುರಿಯನ್ನು ನಿರ್ಲಕ್ಷಿಸಬೇಡಿ

ಆಸಿಡ್ ರಿಫ್ಲಕ್ಸ್ ಅಥವಾ ಅಸಿಡಿಟಿ (ಆಮ್ಲೀಯತೆ) ಮತ್ತೆ ಮತ್ತೆ ಆದಾಗ ಅದನ್ನು ನಿರ್ಲಕ್ಷಿಸಿದರೆ ನೀವು ತಿಳಿದಿರುವುದಕ್ಕಿಂತ ಹೆಚ್ಚಿನ ಹಾನಿಯನ್ನು ಉಂಟುಮಾಡಬಹುದು. 

ಆಸಿಡ್ ರಿಫ್ಲಕ್ಸ್

ಆಸಿಡ್ ರಿಫ್ಲಕ್ಸ್ ಗುಣಪಡಿಸಬಹುದು. ಕೆಲವರು ಆಹಾರದ ಬದಲಾವಣೆಗಳಿಂದ ಈ ಸಮಸ್ಯೆಯಿಂದ ಗುಣಮುಖರಾಗುತ್ತಾರೆ. ಆದರೆ ಕೆಲವರಿಗೆ ದೀರ್ಘಾವಧಿಯ ಔಷಧಿಗಳ ಅಗತ್ಯವಿರುತ್ತದೆ ಮತ್ತು ಔಷಧಿಗಳು ಮತ್ತು ಆಹಾರವೂ ಸಹಾಯ ಮಾಡದಿದ್ದರೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. 

 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಪ್ರಕಾರ, ಹೊಟ್ಟೆಯಲ್ಲಿನ ಪದಾರ್ಥಗಳು ಅನ್ನನಾಳಕ್ಕೆ ಹಿಂತಿರುಗಿದಾಗ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ (GER) ಅಥವಾ ಆಮ್ಲ ಹಿಮ್ಮುಖ ಹರಿವು ಸಂಭವಿಸುತ್ತದೆ. ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಡಿಸೀಸ್ (GERD) ಹೆಚ್ಚು ತೀವ್ರವಾದ ಮತ್ತು ದೀರ್ಘಕಾಲೀನ ಸ್ಥಿತಿಯಾಗಿದ್ದು, ಇದರಲ್ಲಿ GER ಪುನರಾವರ್ತಿತ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಅಥವಾ ಕಾಲಾನಂತರದಲ್ಲಿ ತೊಡಕುಗಳಿಗೆ ಕಾರಣವಾಗುತ್ತದೆ. 

 ನಮ್ಮಲ್ಲಿ ಹೆಚ್ಚಿನವರಿಗೆ ಎಣ್ಣೆಯಂಶ ಇರುವ ಆಹಾರ, ಮಸಾಲೆಯುಕ್ತ ಅಥವಾ ಭಾರೀ ಊಟದ ನಂತರ ಹೊಟ್ಟೆಯಲ್ಲಿ ಅಹಿತಕರ ಭಾವನೆ ಅಥವಾ ಎದೆಯುರಿಯಾದಂತಾಗುತ್ತದೆ.  ಒಂದು ಲೋಟ ತಣ್ಣನೆಯ ಹಾಲು ಅಥವಾ ಆಂಟಾಸಿಡ್ ತ್ವರಿತವಾಗಿ ಸರಿಪಡಿಸಬಹುದು ಎಂಬ ಸಾಮಾನ್ಯರು ನಂಬುತ್ತಾರೆ.  

ಆದರೆ ಇಲ್ಲೊಂದು ಅಚ್ಚರಿಯ ಸಂಗತಿಯಿದೆ. ಜಾಗತಿಕವಾಗಿ 1.03 ಶತಕೋಟಿ ಜನರು ಈ ಸ್ಥಿತಿಯಿಂದ ಬಳಲುತ್ತಿದ್ದರೂ, ಅಧ್ಯಯನದ ಪ್ರಕಾರ ಅದರ ಜಾಗತಿಕವಾಗಿದೆ ಎನ್ನುವುದರ ಬಗ್ಗೆ ಯಾವುದೇ ಒಮ್ಮತವಿಲ್ಲ. 

ಇದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಲ್ಲದೇ  ವ್ಯಕ್ತಿಯ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ  ಕುರಿತು ಲಭ್ಯವಿರುವ ಅಂಕಿಅಂಶಗಳು ಈ ಬಗ್ಗೆ  ಜಾಗತಿಕವಾಗಿ ಹೆಚ್ಚು ಜಾಗೃತಿ ಅಗತ್ಯವಿದೆ ಎಂದು ಸೂಚಿಸುತ್ತದೆ.  

 ಆಸಿಡ್ ರಿಫ್ಲಕ್ಸ್ ನಿರ್ಲಕ್ಷಿಸಬೇಡಿ  

“ನಾನು ಸುಮಾರು ಒಂದು ವರ್ಷದಿಂದ ಆಸಿಡ್ ರಿಫ್ಲಕ್ಸ್‌ನಿಂದ ಬಳಲುತ್ತಿದ್ದೆ. ಮೊದಲು ಒಂದು ಲೋಟ ಮಜ್ಜಿಗೆ ಅಥವಾ ಬೆಲ್ಲದ ತುಂಡಿನಿಂದ ಆಸಿಡ್ ರಿಫ್ಲಕ್ಸ್‌ಗೆ ನೈಸರ್ಗಿಕ ಪರಿಹಾರಗಳ ಮೂಲಕ ಆಮ್ಲೀಯತೆಯನ್ನು (ಅಸಿಡಿಟಿ) ನಿರ್ವಹಿಸುತ್ತಿದ್ದೆ. ಆದರೆ ಸ್ವಲ್ಪ ಸಮಯದ ನಂತರ, ಆಸಿಡ್ ರಿಫ್ಲಕ್ಸ್‌ಗೆ ಮನೆಮದ್ದು ಸಾಕಾಗಲಿಲ್ಲ. ಸಮಸ್ಯೆ ಹೆಚ್ಚಾಗಿ ಆಸ್ಪತೆಗೆ ಹೋಗಬೇಕಾಯ್ತು  ”ಎಂದು ಬೆಂಗಳೂರಿನ 36 ವರ್ಷದ ಟೆಕ್ನಿಕಲ್ ರೈಟರ್ ರಂಜಿನಿ ಅಯ್ಯರ್ ನೆನಪಿಸಿಕೊಳ್ಳುತ್ತಾರೆ.ರಂಜನಿ ಅಯ್ಯರ್ ಅಂತಿಮವಾಗಿ ವೈದ್ಯರನ್ನು ಸಂಪರ್ಕಿಸಿದರು ಮತ್ತು GERD ರೋಗನಿರ್ಣಯ ಮಾಡಿದರು. 

 ಹೊಟ್ಟೆಯು ಆಹಾರವನ್ನು ಜೀರ್ಣಿಸಿಕೊಳ್ಳಲು ಉತ್ಪತ್ತಿಯಾಗುವ ಬಲವಾದ ಆಮ್ಲದಿಂದ ರಕ್ಷಿಸುವ ಒಳಪದರದಿಂದ ರಕ್ಷಿಸಲ್ಪಟ್ಟಿದೆ. ಆದರೆ ಅದು ಅನ್ನನಾಳ ಅಥವಾ ಆಹಾರ ಪೈಪ್ ಗೆ ಇಲ್ಲ. ಆದ್ದರಿಂದ ಹೊಟ್ಟೆಯ ಒಳಭಾಗವು ಅನ್ನನಾಳಕ್ಕೆ ಹಿಂತಿರುಗಿದಾಗ, ದುರ್ಬಲಗೊಂಡ ಕೆಳ ಅನ್ನನಾಳದ ಸ್ಪಿಂಕ್ಟರ್ (LES –  Lower Esophageal Sphincter), ಅಥವಾ ಹೊಟ್ಟೆಯ ಆಮ್ಲದ ಅತಿಯಾದ ಉತ್ಪಾದನೆಯಿಂದಾಗಿ, ಅವು ಅನ್ನನಾಳದ ಒಳಪದರವನ್ನು ಕಿರಿಕಿರಿಗೊಳಿಸುತ್ತವೆ ಮತ್ತು GERD (Gastroesophageal reflux disease) ಗೆ ಕಾರಣವಾಗುತ್ತವೆ. 

ಸಂಸ್ಕರಿಸದ GERD ಅನ್ನನಾಳದ ಉರಿಯೂತ, ಅನ್ನನಾಳದ ಹುಣ್ಣುಗಳು, ಅನ್ನನಾಳದ ಕ್ಯಾನ್ಸರ್ ಮತ್ತು ನ್ಯುಮೋನಿಯಾದಂತಹ ಹೆಚ್ಚಿನ ತೊಡಕುಗಳನ್ನು ಉಂಟುಮಾಡಬಹುದು. 

ಪರಿಹಾರವಿದೆಯೇ? 

“ಆಸಿಡ್ ರಿಫ್ಲಕ್ಸ್ ವಿಶಾಲ ಪರಿಧಿ ಹೊಂದಿದೆ ಆದರೆ ಜನರು ಅದನ್ನು (ಅಸಿಡಿಟಿ) ಆಮ್ಲೀಯತೆ ಎಂದು ಪರಿಗಣಿಸುತ್ತಾರೆ, ಬಹುಶಃ ಇದು ವಿಭಿನ್ನ ಸಮಸ್ಯೆಯ ಲಕ್ಷಣವಾಗಿದೆ. ಸಾಮಾನ್ಯವಾಗಿ ಜನರು ಆಂಟಾಸಿಡ್‌ಗಳು ಅಥವಾ ಆಸಿಡ್ ಬ್ಲಾಕರ್‌ಗಳ ಮೊರೆ ಹೋಗುತ್ತಾರೆ.  ಆದರೆ  ಈ ಔಷಧಿಗಳಿಂದ ರೋಗಲಕ್ಷಣಗಳು ನಿವಾರಣೆಯಾಗದಿದ್ದಾಗ ಅಥವಾ ಈ ಔಷಧಿಗಳನ್ನು ನಿಲ್ಲಿಸಿದ ನಂತರವೂ ಮರುಕಳಿಸಿದಾಗ ತಜ್ಞರ ಸಮಾಲೋಚನೆಯನ್ನು ನಾನು ಬಲವಾಗಿ ಶಿಫಾರಸು ಮಾಡುತ್ತೇವೆ, ”ಎಂದು ಸಲಹೆಗಾರರು, ಗ್ಯಾಸ್ಟ್ರೋಎಂಟರಾಲಜಿಸ್ಟ್ ಆದ ಡಾ. ರೋಹಿತ್ ಎಂ. ತಿಳಿಸುತ್ತಾರೆ.  

 ಅಯ್ಯರ್ ಆ್ಯಸಿಡ್ ಅನ್ನು ತಟಸ್ಥಗೊಳಿಸಲು ಆಂಟಿಸಿಡ್‌ಗಳನ್ನು ಮತ್ತು ಹೊಟ್ಟೆಯಲ್ಲಿ ಆಮ್ಲದ ಉತ್ಪಾದನೆಯನ್ನು ಕಡಿಮೆ ಮಾಡಲು H2 ಬ್ಲಾಕರ್‌ಗಳನ್ನು ಶಿಫಾರಸು ಮಾಡಲಾಗಿತ್ತು, . ವೈದ್ಯರು ಕೂಡ ಆಕೆಯ ಆಹಾರ ಪದ್ಧತಿಯನ್ನು ಬದಲಾಯಿಸಲು ಸಲಹೆ ನೀಡಿದರು. 

 “ಆಸಿಡ್ ರಿಫ್ಲಕ್ಸ್ ಗುಣಪಡಿಸಬಹುದಾಗಿದೆ. ಕೆಲವರು ಆಹಾರದ ಬದಲಾವಣೆಗಳಿಂದ ಈ ಸಮಸ್ಯೆಯಿಂದ ಗುಣಮುಖರಾಗುತ್ತಾರೆ. ಆದರೆ ಕೆಲವರಿಗೆ ದೀರ್ಘಾವಧಿಯ ಔಷಧಿಗಳ ಅಗತ್ಯವಿರುತ್ತದೆ ಮತ್ತು ಔಷಧಿಗಳು ಮತ್ತು ಆಹಾರವೂ ಸಹಾಯ ಮಾಡದಿದ್ದರೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ” ಎನ್ನುತ್ತಾರೆ ಡಾ ರೋಹಿತ್ ಎಂ. 

 “ಆರಂಭದಲ್ಲಿ ನನಗೆ ಹೆಚ್ಚು ಗೊಂದಲವಾಗಿದ್ದೇನೆಂದರೆ ನನಗ್ಯಾಕೆ ಆಸಿಡ್ ರಿಫ್ಲಕ್ಸ್ ಸಮಸ್ಯೆ ಬಂದು ಎಂದಾಗಿತ್ತು. ನಾನು ತಕರಿದ ಪದಾರ್ಥ ಅಥವಾ ಮಸಾಲೆಯುಕ್ತ ಆಹಾರವನ್ನು ನಿಯಮಿತವಾಗಿ ಸೇವಿಸುತ್ತಿರಲಿಲ್ಲ ಮತ್ತು ಕಟ್ಟುನಿಟ್ಟಾದ ಸಸ್ಯಾಹಾರಿಯಾದ್ದೆ” ಎಂದು ಅಯ್ಯರ್ ಹೇಳುತ್ತಾರೆ.  ವೈದ್ಯರ ಬಳಿಗೆ ಹೋದಮೇಲೆ ತಿಳಿದದ್ದೇನೆಂದರೆ ಆಕೆಯ ಹಿಮ್ಮುಖ ಹರಿವಿಗೆ ಕಾರಣ ಅತಿಯಾದ ಕೆಫೀನ್ ಸೇವನೆ ಮತ್ತು ಊಟದ ನಡುವಿನ ದೀರ್ಘ ಅಂತರ. 

 ಬೆಂಗಳೂರಿನ ಹಿರಿಯ ಆಹಾರ ತಜ್ಞರಾದ ಮುಬಾರರ್ ಪಾಲನಪುರವಾಲಾ ಅವರ ಪ್ರಕಾರ, ಆಸಿಡ್ ರಿಫ್ಲಕ್ಸ್ ಚಿಕಿತ್ಸೆಯನ್ನು ನಿರ್ವಹಿಸುವಲ್ಲಿ ಆಹಾರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.  ಇದು ಕರಿದ ಅಥವಾ ಎಣ್ಣೆ ಪದಾರ್ಥಗಳು ಮತ್ತು ಮಸಾಲೆಯುಕ್ತ ಆಹಾರದ ಬಗ್ಗೆ ಮಾತ್ರವಲ್ಲದೆ  ಆಲ್ಕೋಹಾಲ್, ಕಾಫಿ, ಕಾರ್ಬೊನೇಟೆಡ್ ಪಾನೀಯಗಳು ಮತ್ತು ಸಿಟ್ರಸ್ ರಸಗಳು ಕೂಡ ಪ್ರಚೋದಿಸಬಹುದು. 

ಪಿಹೆಚ್ ಕೋಡ್ ಅನ್ನು ಭೇದಿಸುವುದು ಕಷ್ಟ. ದೇಹದ pH ಅನ್ನು ಬದಲಾಯಿಸುವುದು ತುಂಬಾ ಕಷ್ಟವಾದರೂ, ಕ್ಷಾರೀಯ ಆಹಾರಗಳ ಸೇವನೆಯು ಒಟ್ಟಾರೆ ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಆಮ್ಲೀಯ ಮತ್ತು ಕ್ಷಾರೀಯ ಆಹಾರಗಳ ಸೇವನೆಯು ಸಮತೋಲನದಲ್ಲಿರಬೇಕು ಮತ್ತು ದೈಹಿಕ ಚಟುವಟಿಕೆಯೂ ಇರಬೇಕು. ಅತಿಯಾದ ವ್ಯಾಯಾಮದಿಂದ ನಿರ್ಜಲೀಕರಣಗೊಳ್ಳುವುದು ಅಥವಾ ತುಂಬಾ ಜಡ ಜೀವನಶೈಲಿ ಅನುಸರಿಸುವರಿಂದ ದೇಹದಲ್ಲಿ pH ಅಸಮತೋಲನವಾಗಬಹುದು. ಅದು  ಆಸಿಡ್ ರಿಫ್ಲಕ್ಸ್ ಅನ್ನು ಪ್ರಚೋದಿಸುತ್ತದೆ.  

 ಜೀವನಶೈಲಿಯ ಬದಲಾವಣೆಗಳೆಂದರೆ ಸಣ್ಣ ಪ್ರಮಾಣದ ಆಹಾರ ಸೇವನೆ, ರಾತ್ರಿಯ ಊಟ ಮತ್ತು ನಿದ್ರೆಯ ಸಮಯದ ನಡುವೆ ಹೆಚ್ಚಿನ ಅಂತರ ಕೊಡುವುದು, ಅನ್ನನಾಳಕ್ಕೆ ಆಮ್ಲ ಒಡ್ಡುವಿಕೆಯನ್ನು ಕಡಿಮೆ ಮಾಡಲು ಎಡಭಾಗದಲ್ಲಿ ಮಲಗುವುದು, ಮಲಗುವಾಗ ತಲೆಯನ್ನು ಮೇಲಕ್ಕೆತ್ತಿ ಮಲಗುವುದು ಮತ್ತು  ಧೂಮಪಾನವನ್ನು ತಪ್ಪಿಸುವುದು ಉತ್ತಮ ಎನ್ನುತ್ತಾರೆ ಪಲನ್‌ಪುರ್‌ವಾಲಾ  

“ಆಸಿಡ್ ರಿಫ್ಲಕ್ಸ್ ಸಮಸ್ಯೆಗೆ ಹೋಮಿಯೋಪತಿಯಲ್ಲಿ ಚಿಕಿತ್ಸೆ ಪರಿಣಾಮಕಾರಿಯಾಗಿರುತ್ತದೆ. “ಒತ್ತಡವು ಹೆಚ್ಚಾಗಿ ಆಸಿಡ್ ರಿಫ್ಲಕ್ಸ್ ಅನ್ನು ಪ್ರಚೋದಿಸುತ್ತದೆ. ನಮ್ಮ ಚಿಕಿತ್ಸೆಯು ವ್ಯಕ್ತಿಯ ವ್ಯಕ್ತಿತ್ವವನ್ನು ಪರಿಗಣಿಸುತ್ತದೆ. ಈ ರೀತಿಯಾಗಿ ನಾವು ದೈಹಿಕ ದೂರುಗಳನ್ನು ಪರಿಣಾಮಕಾರಿಯಾಗಿ ಗಮನಿಸುತ್ತೇವೆ”ಎಂದು ಬೆಂಗಳೂರಿನ ಕನ್ಸಲ್ಟಿಂಗ್ ಹೋಮಿಯೋಪತಿ ಮತ್ತು ನ್ಯೂಟ್ರಿಜೆನೆಟಿಕ್ ಸಲಹೆಗಾರ ಡಾ ಶೆರೆಬಾನು ಎಂ ಮಿಲ್ಕಿ ಹೇಳುತ್ತಾರೆ. 

 ಜನರಲ್ಲಿ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಒಂದು ಪರಿಣಾಮಕಾರಿ ನೈಸರ್ಗಿಕ ಆಮ್ಲೀಯತೆಯ ಪರಿಹಾರಗಳು ಯೋಗದ ಮೂಲಕ ಇರಬಹುದು ಎಂದು ಸಂಶೋಧನೆ ಸೂಚಿಸುತ್ತದೆ. 

 “ಜೀರ್ಣಾಂಗ ವ್ಯವಸ್ಥೆಯು ಪ್ಯಾರಾಸಿಂಪಥೆಟಿಕ್ ನರಮಂಡಲದಿಂದ ಧನಾತ್ಮಕವಾಗಿ ಪ್ರಭಾವಿತವಾಗಿರುತ್ತದೆ ಮತ್ತು ಶೀತಲೀ ಪ್ರಾಣಾಯಾಮ, ಶೀಟ್ಕರಿ ಪ್ರಾಣಾಯಾಮ, ಸದಾಂತ ಮತ್ತು ಬ್ರಾಹ್ಮರೀ ಪ್ರಾಣಾಯಾಮಗಳಂತಹ ಯೋಗ ಅಭ್ಯಾಸಗಳು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಉತ್ತೇಜಿಸಲು ಉಪಯುಕ್ತವಾಗಿವೆ” ಎಂದು ಯೋಗ ವಿಭಾಗದ ಸಹಾಯಕ ವೈದ್ಯಕೀಯ ಅಧಿಕಾರಿ/ ಉಪನ್ಯಾಸಕ ಡಾ ವಿ ವೇಣುಗೋಪಾಲ್ ಹೇಳುತ್ತಾರೆ.  

ಸಾರಾಂಶ  

  • ಆಸಿಡ್ ರಿಫ್ಲಕ್ಸ್ ಗುಣಪಡಿಸಬಹುದಾಗಿದೆ 
  • ಚಿಕಿತ್ಸೆ ನೀಡದಿದ್ದರೆ ಇದು GERD ಮತ್ತು ಇತರ ಗಂಭೀರ ತೊಡಕುಗಳಿಗೆ ಕಾರಣವಾಗಬಹುದು 
  • ಔಷಧಿ, ಆಹಾರ, ಒತ್ತಡ ಮತ್ತು ಜೀವನಶೈಲಿ ನಿರ್ವಹಣೆಯು ಆಸಿಡ್ ರಿಫ್ಲಕ್ಸ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ 
  • ಯೋಗ ಮತ್ತು ಹೋಮಿಯೋಪತಿಯಂತಹ ಪರ್ಯಾಯ ಚಿಕಿತ್ಸೆಗಳು ಮತ್ತು ಚಿಕಿತ್ಸೆಗಳು ಸಹ ಪ್ರಯೋಜನಕಾರಿ 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಲೇಖನ
ಜಾಗತಿಕವಾಗಿ ಕನಿಷ್ಠ 5.4 ಲಕ್ಷ ಹೃದಯ ಸಂಬಂಧಿ ಸಾವುಗಳಿಗೆ ಟ್ರಾನ್ಸ್-ಫ್ಯಾಟಿ ಆಸಿಡ್‌ಗಳಿಂದ ತುಂಬಿದ ಸಂಸ್ಕರಿಸಿದ ಆಹಾರ ಕಾರಣ ಎಂದು ಭಾರತ ಸರ್ಕಾರ ಹೇಳುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ