0

0

0

ಈ ಲೇಖನದಲ್ಲಿ

Causes Of Dark Circles: ಡಾರ್ಕ್ ಸರ್ಕಲ್ ನಿವಾರಿಸಲು ಸುಲಭ ಉಪಾಯಗಳು  
30

Causes Of Dark Circles: ಡಾರ್ಕ್ ಸರ್ಕಲ್ ನಿವಾರಿಸಲು ಸುಲಭ ಉಪಾಯಗಳು  

ಕೆಲವು ಸರಳ ಕಣ್ಣಿನ ವ್ಯಾಯಾಮಗಳು ಮತ್ತು ನಿಮ್ಮ ಅಡುಗೆಮನೆಯಿಂದ ಕೆಲವು ನೈಸರ್ಗಿಕ ಪದಾರ್ಥಗಳ ಬಳಕೆಯಿಂದ ಡಾರ್ಕ್ ಸರ್ಕಲ್ ನಿರ್ವಹಿಸಬಹುದು 

ಡಾರ್ಕ್ ಸರ್ಕಲ್ ನಿವಾರಿಸಲು ಸುಲಭ ಉಪಾಯಗಳು   

ಬೆಳಗ್ಗೆ ನಿದ್ದೆ ಮುಗಿಸಿ ಎದ್ದಮೇಲೂ ದಣಿದ ಮುಖ, ಗುಳಿಬಿದ್ದ ಕಣ್ಣುಗಳು ಮತ್ತು ನಿಮ್ಮ ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್, ಈ ರೀತಿಯ ಆತಂಕವನ್ನು ಅನುಭವಿಸಿದ್ದೀರಾ? ಡಾರ್ಕ್ ಸರ್ಕಲ್ ತೊಂದರೆಯಲ್ಲದಿದ್ದರೂ ಮಾನಸಿಕವಾಗಿ ನಿಮ್ಮ ಮೇಲೆ ಪರಿಣಾಮ ಬೀರಬಹುದು. 

  ಡಾರ್ಕ್ ಸರ್ಕಲ್ ಯಾಕಾಗುತ್ತದೆ  

“ನಿರೀಕ್ಷಿತ ಮಟ್ಟಕ್ಕಿಂತ ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಾದಾಗ ದೇಹದಲ್ಲಿನ ಅಂಗಾಂಶಗಳು ತಮ್ಮ ಕಾರ್ಯವನ್ನು ಕಡಿಮೆಗೊಳಿಸುತ್ತವೆ. ಕಣ್ಣುರೆಪ್ಪೆಗಳ ಕೆಳಗಿರುವ ಸೂಕ್ಷ್ಮವಾದ ಫೈಬರ್ಗಳು ಸಾಮಾನ್ಯವಾಗಿ ಪರಿಣಾಮ ಬೀರುತ್ತವೆ. ಏಕೆಂದರೆ ಅವುಗಳಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿರುತ್ತದೆ. ಸೌಮ್ಯದಿಂದ ಮಧ್ಯಮ ರಕ್ತಹೀನತೆಯು ಅಂತಿಮವಾಗಿ ಡಾರ್ಕ್ ಸರ್ಕಲ್‌ಗಳಿಗೆ ಕಾರಣವಾಗುತ್ತದೆ ಎಂದು ಚೆನ್ನೈನ ಡಾ ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞರಾದ ಡಾ ರಾಜೇಶ್ವರಿ ಎಂ ಹೇಳುತ್ತಾರೆ. 

  ಸೂರ್ಯನ ಬೆಳಕಿಗೆ ಒಗ್ಗಿಕೊಂಡಷ್ಟೂ ಚರ್ಮದಲ್ಲಿ ಹೆಚ್ಚು ಮೆಲನಿನ್ ಉತ್ಪಾದನೆಯಾಗುತ್ತದೆ. ಹೆಚ್ಚಿದ ಮೆಲನಿನ್  ಜೊತೆಗೆ ರಕ್ತದ ಹರಿವು ಕಡಿಮೆಯಾಗುವುದರಿಂದ ಕಣ್ಣುಗಳ ಸುತ್ತಲಿನ ಚರ್ಮವು ಕಪ್ಪಾಗುತ್ತದೆ. ಆದರೆ ವ್ಯಕ್ತಿಯು ಅನುಭವಿಸುತ್ತಿರುವ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಅವಲಂಬಿಸಿ ಅದರ ಪ್ರಮಾಣವು ಬದಲಾಗುತ್ತದೆ. 

  ಕೊಯಮತ್ತೂರಿನ 42 ವರ್ಷದ ಐಟಿ ಉದ್ಯೋಗಿ ವನಿತಾ ಪಿ, ಕೆಲಸದಲ್ಲಿ ಲ್ಯಾಪ್‌ಟಾಪ್ ಅನ್ನು ದೀರ್ಘಕಾಲ ಬಳಸುತ್ತಿರುವುದರಿಂದ ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಸ್ಪಷ್ಟವಾಗಿ ಕಾಣುತ್ತಿವೆ ಎಂದು ಹೇಳುತ್ತಾರೆ.  ಲ್ಯಾಪ್‌ಟಾಪ್‌ಗಳ ಹಾನಿಕಾರಕ ನೀಲಿ ಬೆಳಕಿನ ಹೊರಸೂಸುವಿಕೆಯಿಂದಾಗಿ ಕಣ್ಣುಗಳಿಗೆ ಒತ್ತಡವಾಗಬಹುದು.  

  ಪಿಗ್ಮೆಂಟ್ ಡಿಸಾರ್ಡರ್ಸ್ ಸೊಸೈಟಿಯ ಅಧಿಕೃತ ಪ್ರಕಟಣೆಯಾದ ಪಿಗ್ಮೆಂಟ್ ಇಂಟರ್‌ನ್ಯಾಷನಲ್‌ನಲ್ಲಿ ಪ್ರಕಟವಾದ 2018 ರ ಅಧ್ಯಯನವು ದೂರದರ್ಶನವನ್ನು ನೋಡುವುದರಿಂದ ಅಥವಾ ಮೊಬೈಲ್ ಅನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಮತ್ತು ದಿನಕ್ಕೆ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಕಣ್ಣುಗಳಿಗೆ ಅಸಮರ್ಪಕ ವಿಶ್ರಾಂತಿಯಿಂದ   ಡಾರ್ಕ್ ಸರ್ಕಲ್ ಹೆಚ್ಚಾಗುತ್ತದೆ ಎಂದು ಕಂಡುಹಿಡಿದಿದೆ. ದಣಿದ ಕಣ್ಣಿನ ಸ್ನಾಯುಗಳು ಡಾರ್ಕ್ ಸರ್ಕಲ್ ಉಂಟಾಗಲು ಪ್ರಮುಖ ಪಾತ್ರವಹಿಸುತ್ತವೆ. 

 ಡಾರ್ಕ್ ಸರ್ಕಲ್ ನಿರ್ವಹಿಸಲು ಸರಳ ವಿಧಾನಗಳು 

ಕೊಯಮತ್ತೂರಿನ ಮಾರುತಿ ಸಿದ್ಧ ಚಿಕಿತ್ಸಾಲಯದ ಸಿದ್ಧ ತಜ್ಞ ಡಾ ಕೆ ಅನ್ಬರಸನ್ ಅವರು ಡಾರ್ಕ್ ಸರ್ಕಲ್‌ಗಳನ್ನು ಹೋಗಲಾಡಿಸಲು ಈ ಕೆಳಗಿನ ಸಲಹೆಗಳನ್ನು ನೀಡುತ್ತಾರೆ: 

  •   ಜಿಝಿಫಸ್ ಅಥವಾ ಬೋರೆ ಹಣ್ಣಿನಲ್ಲಿ  ವಿಟಮಿನ್ ಎ, ಬಿ1, ಬಿ2 ಮತ್ತು ಸಿ ಮತ್ತು ಕಬ್ಬಿಣ ಮತ್ತು ರಂಜಕದಂತಹ ಬಹು ಖನಿಜಾಂಶವಿದ್ದು ಡಾರ್ಕ್ ಸರ್ಕಲ್‌ಗಳ ನಿರ್ವಹಣೆಯಲ್ಲಿ ಇದನ್ನು ವಿಶೇಷವಾಗಿ ಬಳಸಲಾಗುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಹೊಸ ಚರ್ಮದ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ ಜೊತೆಗೆ  ಕಣ್ಣುಗಳನ್ನು ತಂಪಾಗಿಡುವುದಲ್ಲದೆ, ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. 
  • ಶುಂಠಿ ಚಹಾ, ನಿಂಬೆ ಚಹಾ, ಆಮ್ಲಾ ಜ್ಯೂಸ್, ನಿಂಬೆ ರಸ ಮತ್ತು ಪಪ್ಪಾಯಿ ಸಾಮಾನ್ಯವಾಗಿ ರಕ್ತದ ನಿಶ್ಚಲತೆಯನ್ನು( blood stasis) ತಡೆದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಅವು ವಿಟಮಿನ್ ಎ, ಬಿ ಮತ್ತು ಸಿ ಅನ್ನು ಹೊಂದಿರುತ್ತವೆ, ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು  ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡುತ್ತದೆ. 
  • 25 ರಿಂದ 30 ದಿನಗಳವರೆಗೆ ದಿನಕ್ಕೆ ಎರಡು ಬಾರಿ ಟೊಮೆಟೊ ರಸವನ್ನು ಹಚ್ಚುವುದರಿಂದ ಬ್ಲಾಕ್ ಸರ್ಕಲ್ ಕಡಿಮೆಯಾಗುತ್ತದೆ. ಇದನ್ನು 5 ರಿಂದ 10 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ತೊಳೆಯಿರಿ. ಇದು ನಿದ್ರೆಯ ಕೊರತೆ ಮತ್ತು ದೀರ್ಘಾವಧಿಯ ನೇರ ಸೂರ್ಯನ ಕಿರಣಗಳಿಗೆ ಒಡ್ಡಿಕೊಂಡು ಉಂಟಾಗುವ ಸುಕ್ಕನ್ನು ತಡೆಯುತ್ತದೆ. 
  • ತಂಬಾಕಿನ ಹೊಗೆಯಲ್ಲಿರುವ ವಿಷಕಾರಿ ಅಂಶಗಳು ಕಣ್ಣಿನ ಸುತ್ತಲಿನ ಸೂಕ್ಷ್ಮ ಅಂಗಾಂಶವನ್ನು ಹಾನಿಗೊಳಿಸುತ್ತವೆ. ಇದು ಸಣ್ಣ ರಕ್ತನಾಳಗಳ ನಾಶವಾಗಿ ಡಾರ್ಕ್ ಸರ್ಕಲ್ ಆಗುತ್ತದೆ. ಧೂಮಪಾನವನ್ನು ತ್ಯಜಿಸಿದ ಮೇಲೂ  ತಂಬಾಕು ಹೊಗೆಯಿಂದಾದ ಬ್ಲಾಕ್ ಸರ್ಕಲ್ ಕಡಿಮೆಯಾಗಲು ತುರಿದ ಸೌತೆಕಾಯಿಯನ್ನು 20-25 ದಿನಗಳ ಕಾಲ ಸಂಜೆ ಒಮ್ಮೆ ಹಚ್ಚಿ, 10 ರಿಂದ 15 ನಿಮಿಷಗಳ ನಂತರ ಅದನ್ನು ತೊಳೆಯಿರಿ. 
  • ಆಲೂಗಡ್ಡೆ ರಸವು ಶೀತಕವಾಗಿ ಕಾರ್ಯನಿರ್ವಹಿಸುತ್ತದೆ; ಇದು ಕಣ್ಣುಗಳ ಸುತ್ತ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ತಿಂಗಳವರೆಗೆ ದಿನಕ್ಕೆ ಒಮ್ಮೆ ಇದನ್ನು ಮುಖದ ಮೇಲೆ ಹಚ್ಚಿ. ಇದನ್ನು 10 ರಿಂದ 15 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ಅದನ್ನು ತೊಳೆಯಿರಿ. ಆಲೂಗಡ್ಡೆಯಲ್ಲಿರುವ ಅಂಶವು ಸಿರೊಟೋನಿನ್ ಬಿಡುಗಡೆಯನ್ನು ಉತ್ತೇಜಿಸುತ್ತದೆ ಮತ್ತು ನಿದ್ರೆಯನ್ನು ಪ್ರೇರೇಪಿಸುತ್ತದೆ. ಹಾಗಾಗಿ ಒತ್ತಡದ ಕಾರಣದಿಂದಾಗಿ ನಿದ್ರೆಯ ಕೊರತೆ ಇರುವವರು ಇದನ್ನು ಬಳಸಬಹುದು. 
  • ಅರಿಶಿನದೊಂದಿಗೆ ಮೊಸರನ್ನು ಸೇರಿಸಿ ತಿಂಗಳಿಗೊಮ್ಮೆ ಹಚ್ಚುವುದರಿಂದ ಅದರ ಉತ್ಕರ್ಷಣ ನಿರೋಧಕ ಗುಣದಿಂದಾಗಿ ನಿಧಾನವಾಗಿ ಬ್ಲಾಕ್ ಸರ್ಕಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಕಣ್ಣುಗಳ ಬಳಿ ಹಚ್ಚಿ ಮತ್ತು 10 ನಿಮಿಷಗಳ ನಂತರ ನಿಮ್ಮ ಮುಖವನ್ನು ತೊಳೆಯಿರಿ. ಮೊಸರಿನಲ್ಲಿ ಇರುವ ಕೊಬ್ಬು ಅರಿಶಿನದೊಂದಿಗೆ ಸಂಯೋಜಿಸುತ್ತದೆ ಮತ್ತು ಹೊರಚರ್ಮದ ಪದರಗಳಿಂದ ಸುಲಭವಾಗಿ ಹೀರಲ್ಪಡುತ್ತದೆ. 
  • ತಮಿಳುನಾಡಿನ ಪೊಲ್ಲಾಚಿಯ ಅಕ್ಯುಪಂಕ್ಚರ್ ಥೆರಪಿಸ್ಟ್ ಕಲೈಕೀರ್ತಿ ಜೆ ಅವರ ಪ್ರಕಾರ “ಮನಸ್ಸು ಮತ್ತು ದೇಹವು ಪರಸ್ಪರ ಅವಲಂಬಿತವಾಗಿದೆ. ನಿದ್ರೆಯ ಕೊರತೆಯಿಂದಾಗಿ ಯಾವುದೇ ಮಾನಸಿಕ ಒತ್ತಡವು ಡಾರ್ಕ್ ಸರ್ಕಲ್ ತರುತ್ತದೆ ಮತ್ತು ಆಯಾಸದಂತಹ ಲಕ್ಷಣಗಳನ್ನು ತೋರಿಸುತ್ತದೆ. ಕಣ್ಣು ತೊಳೆಯುವ ವ್ಯಾಯಾಮವು ಕಣ್ಣುಗಳನ್ನು ಆರಾಮವಾಗಿರಿಸುತ್ತದೆ. 
  • ಮಡಕೆ ಅಥವಾ ಬೋರ್‌ವೆಲ್‌ನಿಂದ ಶುದ್ಧ ನೀರಿನಿಂದ ತುಂಬಿದ ಅಗಲವಾದ ಬಟ್ಟಲನ್ನು ಬಳಸಿ. ನಿಮ್ಮ ಸೊಂಟದ ಎತ್ತರದಲ್ಲಿ ಬೌಲ್ ಅನ್ನು ನಿಮ್ಮ ಮುಂದೆ ಇರಿಸಿ. ನಿಮ್ಮ ನಾಲಿಗೆಯನ್ನು ಹೊರಗೆ ಹಾಕಿ ಮತ್ತು ನೀವು ಉಸಿರಾಡುವಂತೆ ನಿಧಾನವಾಗಿ ಬೌಲ್ ಕಡೆಗೆ ಬಾಗಿ. ನೀರು ಗಲ್ಲದವರೆಗೆ ಹಣೆಯ ಮಟ್ಟದಲ್ಲಿರಬೇಕು. ಕಣ್ಣು, ಮೂಗು ಮತ್ತು ಬಾಯಿ ಮೂರರಿಂದ ಐದು ಸೆಕೆಂಡುಗಳ ಕಾಲ ನೀರಿನೊಳಗೆ ಇರಬೇಕು, ಆದರೆ ಕಿವಿಗಳು ಅಗತ್ಯವಾಗಿರುವುದಿಲ್ಲ. ಐದು ಸೆಕೆಂಡುಗಳ ನಂತರ ವಿಶ್ರಾಂತಿ ಮತ್ತು ನಾಲಿಗೆಯನ್ನು ವಿಶ್ರಾಂತಿ ಸ್ಥಾನಕ್ಕೆ ತನ್ನಿ. 
  • “ಚೀನೀ ಸಾಂಪ್ರದಾಯಿಕ ವಿಧಾನದ ವ್ಯಾಯಾಮದಿಂದ (Gazing exercise)  ಕಣ್ಣುಗಳಲ್ಲಿ ಶಕ್ತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಪ್ರತಿಬಿಂಬಿತ ಸೂರ್ಯನ ಬೆಳಕನ್ನು ಬೆಳಿಗ್ಗೆ 10 ನಿಮಿಷಗಳ ಕಾಲ ನೋಡುವುದರಿಂದ ಕಣ್ಣುಗಳ ನರಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಕಣ್ಣುಗಳನ್ನು ವಿಶ್ರಾಂತಿ ಮಾಡಲು, 10 ನಿಮಿಷಗಳ ಕಾಲ ಸಂಪೂರ್ಣ ಕತ್ತಲೆಯಲ್ಲಿ ನೋಡಿ. ಇದು ಕಣ್ಣುಗಳ ಸುತ್ತ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ದೃಷ್ಟಿ ಸುಧಾರಿಸುತ್ತದೆ.   

  

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  
ಲೇಖನ
ತಂಗಳನ್ನದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಮೈಕ್ರೋಬಯೋಟಾ ಅಸಮತೋಲನವನ್ನು ಸರಿಗೊಳಿಸುತ್ತವೆ.
ಲೇಖನ
ಹುಡುಗಿಯರ ಪ್ರೌಢಾವಸ್ಥೆ  ಸಮಯದಲ್ಲಿ ಗೊಂದಲ ಹೆಚ್ಚು. ಪೋಷಕರೊಂದಿಗೆ ಮುಕ್ತ ಸಂಭಾಷಣೆಗಳು ಈ ಪರಿವರ್ತನೆಗೆ ಅವರನ್ನು ತಯಾರಾಗಲು ಸಹಾಯ ಮಾಡುತ್ತದೆ 
ಲೇಖನ
ಜಾಗತಿಕವಾಗಿ ಕನಿಷ್ಠ 5.4 ಲಕ್ಷ ಹೃದಯ ಸಂಬಂಧಿ ಸಾವುಗಳಿಗೆ ಟ್ರಾನ್ಸ್-ಫ್ಯಾಟಿ ಆಸಿಡ್‌ಗಳಿಂದ ತುಂಬಿದ ಸಂಸ್ಕರಿಸಿದ ಆಹಾರ ಕಾರಣ ಎಂದು ಭಾರತ ಸರ್ಕಾರ ಹೇಳುತ್ತದೆ

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ