ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಕೋವಿಡ್ ಲಸಿಕೆ ಹಿಂತೆಗೆದುಕೊಳ್ಳಲು ಅಸ್ಟ್ರಾಜೆನೆಕಾ ನಿರ್ಧರಿಸಿದೆ
0

ಕೋವಿಡ್ ಲಸಿಕೆ ಹಿಂತೆಗೆದುಕೊಳ್ಳಲು ಅಸ್ಟ್ರಾಜೆನೆಕಾ ನಿರ್ಧರಿಸಿದೆ

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜೊತೆಗೆ ಸೇರಿ ಅಭಿವೃದ್ಧಿಪಡಿಸಿದ ವ್ಯಾಕ್ಸ್‌ಜೆವ್ರಿಯಾವನ್ನು ಮೊದಲಿಗೆ ಯಾವುದೇ ಲಾಭಾಂಶವಿಲ್ಲದೇ ನೀಡಲಾಗಿತ್ತು ಆದರೆ ಅಸ್ಟ್ರಾ 2021 ರ ಕೊನೆಯಲ್ಲಿ ಅದನ್ನು ಲಾಭಕ್ಕಾಗಿ ಮಾರಾಟ ಮಾಡಲು ನಿರ್ಧರಿಸಿತ್ತು

ಕೋವಿಡ್ ಲಸಿಕೆ ಹಿಂತೆಗೆದುಕೊಳ್ಳಲು ಅಸ್ಟ್ರಾಜೆನೆಕಾ ನಿರ್ಧರಿಸಿದೆ

2020 ರ ಮೊದಲಾರ್ಧದಲ್ಲಿ ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಕಂಪನಿ ಯಶಸ್ವಿಯಾಗಿ ಕೋವಿಡ್ -19 ಲಸಿಕೆಯನ್ನು ವೇಗವಾಗಿ ತಯಾರಿಸಿತ್ತು. ಬೇಡಿಕೆಯ ಕುಸಿತದ ನಂತರ “ವಾಣಿಜ್ಯ ಕಾರಣಗಳನ್ನು” ಉಲ್ಲೇಖಿಸಿ ಮಾರಣಾಂತಿಕ ಸಾಂಕ್ರಾಮಿಕ ರೋಗದಲ್ಲಿ ಮೊದಲ ಬಾರಿಗೆ ಉತ್ಪಾದಿಸಲಾದ ಕೋವಿಡ್ ಲಸಿಕೆ ವ್ಯಾಕ್ಸೆವ್ರಿಯಾವನ್ನು ಹಿಂತೆಗೆದುಕೊಳ್ಳುವುದಾಗಿ ಆಂಗ್ಲೋ-ಸ್ವೀಡಿಷ್ ಡ್ರಗ್ ಮೇಕರ್ ಆಸ್ಟ್ರಾಜೆನೆಕಾ ಬುಧವಾರ ಹೇಳಿಕೆ ನೀಡಿದ್ದಾರೆ.
“ಅನೇಕ ವೇರಿಯಂಟ್ ಕೋವಿಡ್-19 ಲಸಿಕೆಗಳನ್ನುಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, ಲಭ್ಯವಿರುವ ನವೀಕರಿಸಿದ ಲಸಿಕೆಗಳು ಲಭ್ಯವಿದೆ. ಇದರಿಂ ವ್ಯಾಕ್ಸ್‌ಜೆವ್ರಿಯಾಕ್ಕೆ ಬೇಡಿಕೆಯಲ್ಲಿ ಕುಸಿತ ಕಂಡಿದೆ. ಹಾಗಾಗಿ ಅದನ್ನು ಇನ್ನು ಮುಂದೆ ತಯಾರಿಸಲಾಗುವುದಿಲ್ಲ ಅಥವಾ ಸರಬರಾಜು ಮಾಡಲಾಗುವುದಿಲ್ಲ ”ಎಂದು ಅಸ್ಟ್ರಾಜೆನೆಕಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಈ ಎಡಿಷನ್ ಮತ್ತು ಕೋವಿಡ್ -19 ಸಾಂಕ್ರಾಮಿಕಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಅಧ್ಯಾಯವನ್ನು ನಾವು ಮುಕ್ತಾಯಗೊಳಿಸಲು ಬಯಸುತ್ತೇವೆ ಮತ್ತು ಸ್ಪಷ್ಟವಾದ ಹಾದಿಯಲ್ಲಿ ಮುನ್ನಡೆಯಲು ನಾವು ಈಗ ನಿಯಂತ್ರಕರೊಂದಿಗೆ ಮತ್ತು ನಮ್ಮ ಪಾಲುದಾರರೊಂದಿಗೆ ಕೆಲಸ ಮಾಡುತ್ತೇವೆ.” ಎಂದು ತಿಳಿಸಿದ್ದಾರೆ.

2020 ರ ಮೊದಲಾರ್ಧದಲ್ಲಿ ಸ್ಫೋಟಗೊಂಡ ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಯಶಸ್ವಿಯಾಗಿ ಕೋವಿಡ್ -19 ಲಸಿಕೆಯನ್ನು ಅನ್ನು ವೇಗವಾಗಿ ತಯಾರಿಸಿತ್ತು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜೊತೆಗೆ ಸೇರಿ ಅಭಿವೃದ್ಧಿಪಡಿಸಿದ ವ್ಯಾಕ್ಸ್‌ಜೆವ್ರಿಯಾವನ್ನು ಮೊದಲಿಗೆ ಯಾವುದೇ ಲಾಭಾಂಶವಿಲ್ಲದೇ ನೀಡಲಾಗಿತ್ತು ಆದರೆ ಅಸ್ಟ್ರಾ 2021 ರ ಕೊನೆಯಲ್ಲಿ ಅದನ್ನು ಲಾಭಕ್ಕಾಗಿ ಮಾರಾಟ ಮಾಡಲು ನಿರ್ಧರಿಸಿತ್ತು.

ಕ್ರಮೇಣ ಜಗತ್ತು mRNA ಲಸಿಕೆಗಳ ಕಡೆಗೆ ತಿರುಗಿತು. ಅದರಲ್ಲೂ ವಿಶೇಷವಾಗಿ US ಔಷಧಗಳ ದೈತ್ಯ ಫಿಜರ್ ಮತ್ತು ಜರ್ಮನ್ ಪೀರ್ BioNTech ಉತ್ಪಾದಿಸಿದ, ಅಸ್ಟ್ರಾನ ಜಬ್‌ನೊಂದಿಗೆ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಗಳಾಗುತ್ತಿವೆ ಎನ್ನುವ ಅನುಮಾನದ ನಂತರ ಅದನ್ನು ತೆಗೆದುಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಹಿಂಜರಿಕೆ ಹೆಚ್ಚಾಯಿತು.
ಜಾಗತಿಕವಾಗಿ ಕೋವಿಡ್ ನಿರ್ಬಂಧಗಳನ್ನು ವಿಶ್ವಾದ್ಯಂತ ಸಂಪೂರ್ಣವಾಗಿ ತೆಗೆದುಹಾಕಿದ್ದರಿಂದ ಮಾರಾಟವು ಮತ್ತಷ್ಟು ಕುಸಿಯಿತು. ಜೊತೆಗೆ ಈಗ ಜಾಗತಿಕವಾಗಿ ಕೋವಿಡ್ ಭಯಮುಕ್ತವಾಗಿದ್ದು ಮತ್ತೊಂದು ಪ್ರಾಮುಖ ಕಾರಣವಾಯ್ತು.

ಆಸ್ಟ್ರಾಜೆನೆಕಾ ವಕ್ತಾರರ ಹೇಳಿಕೆಯ ಪ್ರಕಾರ ಈಗಾಗಲೇ ಯುರೋಪ್ ಒಕ್ಕೂಟ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ (ಇಎಂಎ) ಪ್ರದೇಶದಲ್ಲಿ ಮಾರುಕಟ್ಟೆಯಿಂದ ಲಸಿಕೆಯನ್ನು ತೆಗೆದುಹಾಕುವ ಪ್ರಕ್ರಿಯೆ ಪ್ರಾರಂಭವಾಗಿದೆ.

ವ್ಯಾಕ್ಸೆವ್ರಿಯಾ ಲಸಿಕೆಗೆ ಯಾವುದೇ ಭವಿಷ್ಯದ ವಾಣಿಜ್ಯ ಬೇಡಿಕೆ ಬರುವ ನಿರೀಕ್ಷೆ ಇಲ್ಲದಿರುವುದರಿಂದ ಮಾರುಕಟ್ಟೆಯ ಅಧಿಕೃತ ಹಿಂಪಡೆಯುವಿಕೆಯನ್ನು ಪ್ರಾರಂಭಿಸಲು ಕಂಪನಿಯು ಜಾಗತಿಕವಾಗಿ ಇತರ ನಿಯಂತ್ರಕರೊಂದಿಗೆ ಕೆಲಸ ಮಾಡುತ್ತದೆ. ವಕ್ತಾರರ ಅಂದಾಜಿನ ಪ್ರಕಾರ, “ಬಳಕೆಯ ಮೊದಲ ವರ್ಷದಲ್ಲಿಯೇ 6.5 ಮಿಲಿಯನ್‌ಗಿಂತಲೂ ಹೆಚ್ಚು ಜೀವಗಳನ್ನು ಉಳಿಸಲಾಗಿದೆ” ಮತ್ತು ಜಾಗತಿಕವಾಗಿ ಮೂರು ಶತಕೋಟಿ ಡೋಸ್‌ಗಳನ್ನು ಪೂರೈಸಲಾಗಿದೆ.

“ನಮ್ಮ ಪ್ರಯತ್ನಗಳನ್ನು ಪ್ರಪಂಚದಾದ್ಯಂತದ ಸರ್ಕಾರಗಳು ಗುರುತಿಸಿವೆ ಮತ್ತು ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಿರ್ಣಾಯಕ ಅಂಶವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವಲ್ಲಿ ವಕ್ಸೆವ್ರಿಯಾ ವಹಿಸಿದ ಪಾತ್ರದ ಬಗ್ಗೆ ನಾವು ವಿಪರೀತ ಹೆಮ್ಮೆಪಡುತ್ತೇವೆ” ಎಂದು ವಕ್ತಾರರು ಹೇಳಿದ್ದಾರೆ.

 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ