0

0

0

ಈ ಲೇಖನದಲ್ಲಿ

ಹೋಮಿಯೋಪತಿಯಲ್ಲಿ ಮೊಡವೆಯ ನಿರ್ವಹಣೆ
5

ಹೋಮಿಯೋಪತಿಯಲ್ಲಿ ಮೊಡವೆಯ ನಿರ್ವಹಣೆ

ಹೋಮಿಯೋಪತಿ ಔಷಧಿಗಳು ದೇಹದಲ್ಲಿನ ಅಸಮತೋಲನವನ್ನು ಸರಿಪಡಿಸಿ ಮೊಡವೆಗಳಿಗೆ ದೀರ್ಘಕಾಲಿಕ ಪರಿಹಾರ ನೀಡುತ್ತವೆ ಎಂಬುದು ತಜ್ಞರ ಅಭಿಪ್ರಾಯ

2021ರ ಪ್ರಾರಂಭದಲ್ಲಿ, 30ರ ಹರೆಯದ ಅಶುತೋಷ್ ಮೆನನ್ ಎಂಬ ಬೆಂಗಳೂರಿನ ಸ್ಟಾಫ್ಟ್‌ವೇರ್ ಉದ್ಯೋಗಿ ಅತ್ಯಂತ ಸಮರ್ಪಣಾಭಾವದಿಂದ ತಮ್ಮ ಕಚೇರಿಯ ಗುರಿಗಳನ್ನು ಸಾಧಿಸಿ ಅದರ ಪ್ರತಿಫಲಕ್ಕಾಗಿ ಅತ್ಯಂತ ಉತ್ಸಾಹ ಮತ್ತು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದರು. ಕಾತರದಿಂದ ಕಾಯುತ್ತಿದ್ದ ಆ ಸಮಯ ಬಂದೇಬಿಟ್ಟಿತು, ಆದರೆ ತಮ್ಮ ಕಠಿಣ ಪರಿಶ್ರಮದ ಶ್ರೇಯಸ್ಸು ಇನ್ನೊಬ್ಬರ ಪಾಲಾದುದನ್ನು ನೋಡಿ ಮೆನನ್‌ಗೆ ಆಘಾತವಾಯಿತು. ಗುರಿಯನ್ನು ಸಾಧಿಸಲು ಅವರು ವ್ಯಯಿಸಿದ ಅನೇಕ ದಿನಗಳ ಶ್ರಮವೆಲ್ಲವೂ ವ್ಯರ್ಥವಾಗಿತ್ತು. ಅವರು ತುಂಬಾ ನಿರಾಸೆಗೊಂಡರು, ಪರಿಣಾಮವಾಗಿ ಕೆಲಸದಲ್ಲಿನ ನೈತಿಕತೆಗೆ ಪೆಟ್ಟು ಬಿತ್ತು.

ಈ ನಿರಾಶೆಯು ಅವರನ್ನು ತಿಂಗಳುಗಳ ಕಾಲ ಕಾಡಿತು. ಕೆಲಸದಲ್ಲಿ ಮೊದಲು ಇದ್ದ ಉತ್ಸಾಹ ಈಗ ಇರಲಿಲ್ಲ.ಈ ಸಂದರ್ಭದಲ್ಲಿ ಮನಸ್ಸಿಗೆ ಉಂಟಾದ ದುಷ್ಪರಿಣಾಮವು ದೇಹದಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಗಮನಿಸಿದರು. ಅವರ ಮುಖ, ಬೆನ್ನು ಮತ್ತು ದೇಹದ ಇತರ ಭಾಗಗಳ ಮೇಲೆ ಮೊಡವೆಗಳು ಕಾಣಿಸಿಕೊಂಡವು. ಅವರು ಅನೇಕ ಔಷಧಗಳನ್ನು ಪ್ರಯತ್ನಿಸಿ ನೋಡಿದರು, ಆದರೆ ಯಾವುದೇ ಪರಿಣಾಮ ಬೀರಲಿಲ್ಲ.ಇದರಿಂದ ತುಂಬಾ ಚಿಂತಿತರಾದ ಅವರು ಹೋಮಿಯೋಪತಿ ವೈದ್ಯರನ್ನು ಭೇಟಿ ಮಾಡಿದರು.

“ಇವರ ಮಾನಸಿಕ ಸ್ಥಿತಿಯ ಮೇಲೆ ಬೀರಿದ ಪರಿಣಾಮವು ಪರಿಸ್ಥಿತಿಯನ್ನು ಉಲ್ಪಣಗೊಳಿಸಿತು. ಅವರಿಗೆ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳೆರಡಕ್ಕೂ ಔಷಧಿಯ ಅಗತ್ಯವಿತ್ತು,” ಎಂದು ಮುಂಬೈನ ಸ್ನೇಹಂ ಡಿಜಿಟಲ್ ಕ್ಲಿನಿಕ್‌ ಎಂಬ ಹೋಮಿಯೋಪತಿ ಚಿಕಿತ್ಸಾ ಕೇಂದ್ರದ ಸಂಸ್ಥಾಪಕರಾದ ಡಾ ನೇಹಾ ಭಾರದ್ವಾಜನ್ ಅವರು ಹೇಳುತ್ತಾರೆ.

ಮನೆನ್‌ರ ವೈದ್ಯಕೀಯ ಇತಿಹಾಸ ಮತ್ತು ಚರ್ಮದ ಸಮಸ್ಯೆಯನ್ನು ವಿವರವಾಗಿ ತಿಳಿದುಕೊಂಡ ನಂತರ, ಡಾ ಭಾರದ್ವಾಜನ್ ಅವರು ಮಾನಸಿಕ ಆರೋಗ್ಯಕ್ಕಾಗಿ ಕೆಲವು ಸೂಚನೆಗಳನ್ನು ನೀಡುವುದರೊಂದಿಗೆ ಔಷಧಗಳು ಮತ್ತು ಪಥ್ಯಗಳನ್ನು ಸೂಚಿಸಿದರು.

“ಔಷಧಿಗಳನ್ನು ಪ್ರಾರಂಭಿಸಿದ ಮೂರು ತಿಂಗಳ ಒಳಗಾಗಿ ನಾನು ಸುಧಾರಣೆಯನ್ನು ಗಮನಿಸಿದೆ. ನಾನು ಅವುಗಳನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿದ್ದೆ” ಎಂದು ಮೆನನ್ ಹೇಳುತ್ತಾರೆ.

ಮೊಡವೆ ಎಂದರೇನು?

ಚರ್ಮವು ತನ್ನ ತೇವಾಂಶ ಮಟ್ಟವನ್ನು ಕಾಪಾಡಿಕೊಳ್ಳಲು ಸೀಬಮ್ (sebum) ಎಂಬ ಒಂದು ತೈಲಯುಕ್ತ ಪದಾರ್ಥವನ್ನು ಉತ್ಪಾದಿಸುತ್ತದೆ. ಮೊಡವೆಯು ದೀರ್ಘಕಾಲಿಕ ಚರ್ಮದ ಸ್ಥಿತಿಯಾಗಿದ್ದು, ಇದು ಹೆಚ್ಚಿದ ಸೀಬಮ್ ಉತ್ಪಾದನೆ, ಉರಿಯೂತ, ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ಚರ್ಮದ ಉದುರುವಿಕೆಯಲ್ಲಿನ ಬದಲಾವಣೆಗೆ ಸಂಬಂಧಿಸಿದ್ದಾಗಿದೆ. ಇದು ಚರ್ಮದ ಮೇಲೆ ಸಣ್ಣ ಕೆಂಪು ಹುಣ್ಣಿನಂತೆ ಇದ್ದು ಕೆಲವೊಮ್ಮೆ ಕೀವು ತುಂಬಿರುತ್ತದೆ.

ಈ ಕೆಳಗಿನ ಅಂಶಗಳಿಂದ ಮೊಡವೆಗಳು ಉಂಟಾಗಬಹುದು ಎಂದು ಫ್ರಾಂಟಿಯರ್ಸ್ ಇನ್ ಪಬ್ಲಿಕ್ ಹೆಲ್ತ್ ಎಂಬ ಜರ್ನಲ್‌ನಲ್ಲಿ ಪ್ರಕಟಿಸಲಾದ ಸಂಶೋಧನೆಯೊಂದು ಹೇಳಿದೆ:

  • ಕುಟುಂಬದ ಇತಿಹಾಸ
  • ಬೊಜ್ಜು
  • ಎಣ್ಣೆ ಅಥವಾ ಮಿಶ್ರ ಪ್ರಕಾರದ ಚರ್ಮ
  • ಹಾರ್ಮೋನಲ್ ಬದಲಾವಣೆಗಳು
  • ಸಕ್ಕರೆಯುಕ್ತ, ಜಿಡ್ಡಿನ ಮತ್ತು ಹಾಲಿನ ಉತ್ಪನ್ನಗಳ ಸೇವನೆ
  • ಧೂಮಪಾನ
  • ಸೌಂದರ್ಯವರ್ಧಕಗಳ ಅಸಮರ್ಪಕ ಬಳಕೆ
  • ಇಲೆಕ್ಟ್ರಾನಿಕ್‌ಗಳ ದೀರ್ಘಕಾಲಿಕ ಬಳಕೆ
  • ಗುಣಮಟ್ಟದ ನಿದ್ರೆಯ ಕೊರತೆ
  • ಒತ್ತಡ
  • ಹೆಚ್ಚಿದ ಬಾಹ್ಯ ತಾಪಮಾನ
  • ವಾಯು ಮಾಲಿನ್ಯ

ಬಾಯಿಯ ಮೂಲಕ ಸೇವಿಸುವ ಔಷಧ

ಯಾವುದೇ ಆರೋಗ್ಯ ಸ್ಥಿತಿಯಿರಲಿ, ಅದು ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೋಮಿಯೋಪತಿಯು ನಂಬುತ್ತದೆ. ಅಂತಹ ಹೋಮಿಯೋಪತಿ ವೈದ್ಯರಾಗಿ ಮೊಡವೆಗಳಿಗೆ ಬಾಹ್ಯ ಲೇಪನಗಳನ್ನು ಹಚ್ಚುವುದರ ಬದಲಾಗಿ ಆಂತರಿಕವಾಗಿ ಅಥವಾ ಮೌಖಿಕವಾಗಿ ಔಷಧಗಳನ್ನು ಸೇವಿಸುವ ಮೂಲಕ ಅವುಗಳನ್ನು ನಿರ್ವಹಿಸಲು ಬಯಸುತ್ತೇವೆ ಎಂದು ಮುಂಬೈನ ಡಾ ಅಜಯ್ಸ್ ಹೋಮಿಯೋಪತಿ ಕ್ಲಿನಿಕ್‌ನ ಸಲಹೆಗಾರರಾದ ಡಾ ಅಜಯ್ ಅವರು ಹೇಳುತ್ತಾರೆ.

“ಔಷಧಿಗಳು ಆಂತರಿಕ ಅಸಮತೋಲನವನ್ನು ಸರಿಪಡಿಸುತ್ತವೆ ದೇಹದ ಗುಣಪಡಿಸುವ ಸಾಮರ್ಥ್ಯವನ್ನು ಹೆಚ್ಚಿಸಿ ಸಮಸ್ಯೆಯನ್ನು ನಿವಾರಿಸುತ್ತವೆ. ಮೊಡವೆಯು ಯಾವುದೇ ದೈಹಿಕ ಅಥವಾ ಮಾನಸಿಕ ಅಂಶಗಳಿಂದ ಉಂಟಾಗಿದೆಯೇ ಎಂಬುದನ್ನು ಕಂಡುಕೊಂಡ ನಂತರ ಸೂಕ್ತ ನಿರ್ವಹಣಾ ಯೋಜನೆಯನ್ನು ಆಯ್ಕೆ ಮಾಡಲಾಗುತ್ತದೆ” ಎಂದು ಅವರು ಹೇಳುತ್ತಾರೆ.

ಔಷಧಿಗಳು ಮೊಡವೆಯನ್ನು ನಿಗ್ರಹಿಸಿ ಅದರ ಮರುಕಳಿಸುವಿಕೆಗೆ ಕಾರಣವಾಗುವ ಬದಲಿಗೆ ದೀರ್ಘಕಾಲಿಕ ಪರಿಹಾರವನ್ನು ಒದಗಿಸುತ್ತವೆ ಎಂದು ಡಾ ಯಾದವ್ ಅವರು ಹೇಳುತ್ತಾರೆ.

ವ್ಯಕ್ತಿಯು ಆರೋಗ್ಯಕರ ಆಹಾರಕ್ರಮವನ್ನು ಪಾಲಿಸಬೇಕು, ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಒತ್ತಡ ನಿರ್ವಹಣೆಯನ್ನು ಬೆಳೆಸಿಕೊಳ್ಳಬೇಕು ಎಂದು ಡಾ ಭಾರದ್ವಾಜನ್ ಹೇಳುತ್ತಾರೆ.

ಮೊಡವೆಯು ಚರ್ಮದ ಚಿಮ್ಮುವಿಕೆಗೆ (skin eruptions) ಕಾರಣವಾಗುವುದರಿಂದ ಇದು ವ್ಯಕ್ತಿಯ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು ಎಂದು ಡಾ ಯಾದವ್ ಹೇಳುತ್ತಾರೆ. ಅಮೆರಿಕನ್ ಅಕಾಡೆಮಿ ಆಫ್ ಡರ್ಮೆಟಾಲಜಿ ಪ್ರಕಾರ, ಮೊಡವೆಯನ್ನು ಹೊಂದಿರವರು ಅದರಲ್ಲೂ ವಿಶೇಷವಾಗಿ ಹದಿಹರೆಯದವರು ಬೇಗನೆ ಮುಜುಗರಕ್ಕೆ ಒಳಗಾಗುತ್ತಾರೆ ಮತ್ತು ಸಾಮಾಜಿಕವಾಗಿ ಬೆರೆಯುವುದನ್ನು ತಪ್ಪಿಸುತ್ತಾರೆ. ಆದ್ದರಿಂದ ಅವರಲ್ಲಿ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸುವ ಮೂಲಕ ಅವರಿಗೆ ಮಾನಸಿಕ ಬೆಂಬಲ ನೀಡುವುದು ಮುಖ್ಯವಾಗುತ್ತದೆ.

ಮೊಡವೆ ನಿರ್ವಹಣೆಗೆ ಸಲಹೆಗಳು

  • ಎಣ್ಣೆಯಲ್ಲಿ ಕರಿದ, ಎಣ್ಣೆಯುಕ್ತ, ಮಸಾಲೆಯುಕ್ತ, ಸಕ್ಕರೆಯುಕ್ತ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೇವಿಸಬೇಡಿ. ನಿಮ್ಮ ಆಹಾರದಲ್ಲಿ ಹಣ್ಣು ತರಕಾರಿಗಳ ಸೇವನೆಯನ್ನು ಹೆಚ್ಚಿಸಿ.
  • ಪ್ರತಿದಿನ 2-3 ಲೀಟರ್‌ಗಳಷ್ಟು ನೀರು ಕುಡಿಯಿರಿ. ಆಗಾಗ್ಗೆ ನಿಮ್ಮ ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ.
  • ಚರ್ಮದ ಸ್ವಚ್ಛತೆಯನ್ನು ಕಾಯ್ದುಕೊಳ್ಳಿ. ನಿಮ್ಮ ಚರ್ಮಕ್ಕೆ ಸೂಕ್ತವಾದ ಸೌಮ್ಯವಾದ ಕ್ಲೆನ್ಸರ್ ಬಳಸಿ ಹಾಗೂ ನಿಯಮಿತವಾಗಿ ಚರ್ಮದ ತೇವಾಂಶವನ್ನು ಕಾಯ್ದುಕೊಳ್ಳಿ. ಜಿಡ್ಡು-ಮುಕ್ತ ಸೌಂದರ್ಯವರ್ಧಕಗಳನ್ನು ಬಳಸಿ. ಮೊಡವೆಯಿರುವ ಭಾಗವನ್ನು ಮುಟ್ಟುವುದು, ಉಜ್ಜುವುದು ಮಾಡಬೇಡಿ, ಇದು ಮೊಡವೆಯನ್ನು ಉಲ್ಪಣಗೊಳಿಸಬಹುದು. ಕೈಗಳನ್ನು ತೊಳೆಯದೇ ಮುಖವನ್ನು ಮುಟ್ಟಿಕೊಳ್ಳುವುದರಿಂದ ಬ್ಯಾಕ್ಟೀರಿಯಾ ಸೋಂಕಿಗೆ ಕಾರಣವಾಗಬಹುದು. ಇದೇ ಕಾರಣಕ್ಕಾಗಿ, ಮೊಡವೆಯನ್ನು ಚುಚ್ಚಬಾರದು ಅಥವಾ ಒಡೆಯಬಾರದು.
  • ನಿಯಮಿತವಾಗಿ ನಿದ್ರಿಸಿ. ಪ್ರತಿದಿನ 8 ಗಂಟೆಗಳ ಕಾಲ ನಿದ್ರಿಸಿ.
  • ನಿಮ್ಮ ಚರ್ಮಕ್ಕೆ ಹಿತವಾಗುವ ಉಡುಪುಗಳನ್ನು ಧರಿಸಿ
  • ಭಾವನಾತ್ಮಕವಾಗಿ ಕುಗ್ಗದಿರಿ. ಚಿಕಿತ್ಸಕರು ಅಥವಾ ಮಾನಸಿಕ ಆರೋಗ್ಯ ವೃತ್ತಿಪರರ ನೆರವು ಪಡೆಯಿರಿ
  • ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಿ.

 

ಸಂಬಂಧಿತ ಟ್ಯಾಗ್ ಗಳು
ಸಂಬಂಧಿತ ಪೋಸ್ಟ್ ಗಳು

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

17 − 2 =

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 
ಲೇಖನ
ಮೂತ್ರ ವಿಸರ್ಜನೆಗಾಗಿ ರಾತ್ರಿ ಅನೇಕ ಬಾರಿ ಏಳುವುದು ನಿದ್ರೆಯ ನಮೂನೆಯನ್ನು (ಸ್ಲೀಪ್ ಪ್ಯಾಟರ್ನ್) ಹಾಳು ಮಾಡಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಖಿನ್ನತೆಗೂ ಕಾರಣವಾಗಬಹುದು.  

0

0

0

Opt-in To Our Daily Newsletter

* Please check your Spam folder for the Opt-in confirmation mail

Opt-in To Our
Daily Newsletter

We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ