ಈ ವಿಡಿಯೋ ನೋಡಿ

0

0

0

0

0

0

0

0

0

ಈ ಲೇಖನದಲ್ಲಿ

ಅಕಾಲಿಕ ಮತ್ತು ತಡವಾದ ಸ್ಖಲನ: ಕಾರಣಗಳು ಮತ್ತು ನಿರ್ವಹಣೆ
10

ಅಕಾಲಿಕ ಮತ್ತು ತಡವಾದ ಸ್ಖಲನ: ಕಾರಣಗಳು ಮತ್ತು ನಿರ್ವಹಣೆ

ಒತ್ತಡ, ಆತಂಕ ಮತ್ತು ಸಂಬಂಧದ ಸಮಸ್ಯೆಗಳಂತಹ ಮಾನಸಿಕ ಅಂಶಗಳು ಅಕಾಲಿಕ ಮತ್ತು ತಡವಾದ ಸ್ಖಲನ ಉಂಟಾಗಲು ಸಾಮಾನ್ಯ ಕಾರಣವಾಗಿರಬಹುದು.

ಒತ್ತಡ, ಆತಂಕ ಮತ್ತು ಸಂಬಂಧದ ಸಮಸ್ಯೆಗಳಂತಹ ಮಾನಸಿಕ ಅಂಶಗಳು ಅಕಾಲಿಕ ಮತ್ತು ತಡವಾದ ಸ್ಖಲನ ಉಂಟಾಗಲು ಸಾಮಾನ್ಯ ಕಾರಣವಾಗಿರಬಹುದು.

ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮಾತ್ರವಲ್ಲ, ಅಕಾಲಿಕ ಮತ್ತು ತಡವಾದ ಸ್ಖಲನದಂತಹ ಪರಿಸ್ಥಿತಿಗಳು ಕೂಡ ಪುರುಷರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅಕಾಲಿಕ ಸ್ಖಲನ (Premature Ejaculation) ಒಂದು ಸ್ಥಿತಿಯಾಗಿದ್ದು, ಸಂಭೋಗದ ಸ್ವಲ್ಪ ಸಮಯದ ನಂತರ ಅಥವಾ ಮೊದಲು ಸ್ಖಲನವಾಗುತ್ತದೆ. ಇದು ಅವರಿಗೆ ಅಥವಾ ಅವರ ಸಂಗಾತಿಗೆ ತೊಂದರೆ ಉಂಟುಮಾಡುತ್ತದೆ ಎಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿರುವ ಮೂತ್ರಶಾಸ್ತ್ರಜ್ಞರು ಮತ್ತು ಪುರುಷರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ತಜ್ಞ ಡಾ. ಹ್ಯಾಪಿಯೆಸ್ಟ್ ಹೆಲ್ತ್‌ನೊಂದಿಗೆ ಇಮೇಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ತಡವಾದ ಸ್ಖಲನ (Delayed Ejaculation ) ಎಂದರೆ ಸ್ಖಲನವಾಗಲು ಅಗತ್ಯಕ್ಕಿಂತಲೂ ಹೆಚ್ಚು ತಡವಾಗುವುದು ಅಥವಾ ಸ್ಖಲನವಾಗದೇ ಇರುವುದು.

ಅಕಾಲಿಕ ಸ್ಖಲನ ಮತ್ತು ತಡವಾದ ಸ್ಖಲನದ ನಡುವಿನ ವ್ಯತ್ಯಾಸ

ಅಕಾಲಿಕ ಸ್ಖಲನ (Premature Ejaculation)

ಲಾಸ್ ಏಂಜಲೀಸ್‌ನ 35 ವರ್ಷದ ವ್ಯಕ್ತಿಯೊಬ್ಬರಿಗೆ ಸಂಭೋಗ ಶುರುವಾದ ಒಂದೇ ನಿಮಿಷದಲ್ಲಿ ಸ್ಖಲನವಾಗುತ್ತಿತ್ತು. ಅವರಿಗೆ ಅಕಾಲಿಕ ಸ್ಖಲನದ ಸಮಸ್ಯೆಯಿದ್ದು ಸುಮಾರು ಒಂದು ವರ್ಷ ಈ ಸಮಸ್ಯೆ ಇತ್ತು. ಇದರಿಂದ ಅವರ ವೈವಾಹಿಕ ಜೀವನಕ್ಕೆ ಸಮಸ್ಯೆಯಾಗಿತ್ತು. ಆದರೆ ಇದಕ್ಕೂ ಮೊದಲು ಯಾವುದೇ ಗಮನಾರ್ಹ ವೈದ್ಯಕೀಯ ಇತಿಹಾಸವಿರಲಿಲ್ಲ. “ಇದಕ್ಕೆ ಚಿಕಿತ್ಸೆ ನೀಡಲು, ನಾವು ವರ್ತನೆಯ ಚಿಕಿತ್ಸೆ ಮತ್ತು ಅಲ್ಪಾವಧಿಯ ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್ಗಳ (SSRI), ಖಿನ್ನತೆ-ಶಮನಕಾರಿಗಳ ಸಂಯೋಜನೆಯನ್ನು ಬಳಸಿದೆವು, ಇದು ಗಮನಾರ್ಹ ಸುಧಾರಣೆಗೆ ಕಾರಣವಾಯಿತು” ಎಂದು ಹೌಮನ್ ಹೇಳಿದರು.

ಅಕಾಲಿಕ ಸ್ಖಲನವನ್ನು ಇಂಟ್ರಾವಾಜಿನಲ್ ಇಜಾಕ್ಯುಲೇಶನ್ ಲ್ಯಾಟೆನ್ಸಿ ಟೈಮ್ (ಐಇಎಲ್‌ಟಿ) ಎಂಬ ವಿಧಾನದಿಂದ ಅಳೆಯಲಾಗುತ್ತದೆ. ಇದು ಸಂಭೋಗದ ಸಮಯದಲ್ಲಿ ಸ್ಖಲನಗೊಳ್ಳಲು ತೆಗೆದುಕೊಳ್ಳುವ ಸಮಯ ಎಂದು ಬೆಂಗಳೂರಿನ ಅಂಕುರ್ ಹೆಲ್ತ್‌ಕೇರ್‌ನ ನಿರ್ದೇಶಕ, ಯುರೋ-ಆಂಡ್ರೊಲಾಜಿಸ್ಟ್ ಡಾ.ವಾಸನ್ ಎಸ್‌ಎಸ್ ಹೇಳುತ್ತಾರೆ. ಇದು ವ್ಯಕ್ತಿಯಲ್ಲಿ ದೀರ್ಘಕಾಲದವರೆಗೆ ಇರುವ ಸ್ಥಿತಿಯಾಗಿರಬಹುದು ಅಥವಾ ಸನ್ನಿವೇಶಕ್ಕೆ ತಕ್ಕಂತೆ ಅಕಾಲಿಕ ಸ್ಖಲನವಾಗಿರಬಹುದು. ಇದು ಆತಂಕ ಮತ್ತು ಒತ್ತಡದ ಕಾರಣದಿಂದಾಗಿರಬಹುದು ಎಂದು ಹೌಮನ್ ಹೇಳುತ್ತಾರೆ.

ತಡವಾದ ಸ್ಖಲನ (Delayed Ejaculation)

“50 ವರ್ಷದ ವ್ಯಕ್ತಿಯೊಬ್ಬರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಇತಿಹಾಸವನ್ನು ಹೊಂದಿದ್ದವರು ನನ್ನ ಬಳಿ ಬಂದಿದ್ದರು. ಅವರಿಗೆ ಸ್ಖಲನವಾಗುತ್ತಿರಲಿಲ್ಲ ಎನ್ನುವುದು ಸಮಸ್ಯೆಯಾಗಿತ್ತು. ನಂತರ ನಾವು ಆಂಟಿಹೈಪರ್ಟೆನ್ಸಿವ್ಸ್ (ರಕ್ತದೊತ್ತಡದ ಔಷಧಿಗಳು) ಮತ್ತು ಖಿನ್ನತೆ-ಶಮನಕಾರಿಗಳನ್ನು ನೀಡಿದೆವು. ಸಮಾಲೋಚನೆ, ಆಹಾರ ಮತ್ತು ವ್ಯಾಯಾಮದ ಮೂಲಕ ತಮ್ಮ ಮಧುಮೇಹವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ ಎಂದು ಅವರು ಅರಿತರು. ಈಗ ಅವರ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ” ಎಂದು ಹೌಮನ್ ಉಲ್ಲೇಖಿಸಿದ್ದಾರೆ.

ತಡವಾಗಿ ಸ್ಖಲನಗೊಳ್ಳುವ ವ್ಯಕ್ತಿಯು ಎರಡರಿಂದ ಮೂರು ನಿಮಿಷಗಳ ಕಾಲ ಸಂಭೋಗದ ನಂತರವೂ ಸ್ಖಲನ ಅಥವಾ ಪರಾಕಾಷ್ಠೆಯನ್ನು ತಲುಪಲು ವಿಫಲರಾಗುತ್ತಾರೆ ಎಂದು ಸಲಹೆಗಾರ ಮೂತ್ರಶಾಸ್ತ್ರಜ್ಞ, ಆಂಡ್ರೊಲೊಜಿಸ್ಟ್ ಮತ್ತು ಪುನರ್ನಿರ್ಮಾಣ ಶಸ್ತ್ರಚಿಕಿತ್ಸಕ ಡಾ ಅಮರ್ ಕುಮಾರ್ ಕೆ ವಿವರಿಸುತ್ತಾರೆ. ಅಕಾಲಿಕ ಅಥವಾ ಆರಂಭಿಕ ಸ್ಖಲನಕ್ಕೆ ಹೋಲಿಸಿದರೆ, ತಡವಾದ ಸ್ಖಲನವು ಲೈಂಗಿಕ ಅಪಸಾಮಾನ್ಯ ಕ್ರಿಯೆಗಳಲ್ಲಿ ಒಂದಾಗಿದ್ದು ಇದಕ್ಕೆ ಚಿಕಿತ್ಸೆ ನೀಡಲು ಕಷ್ಟಕರವಾಗುತ್ತದೆ.

ಅಕಾಲಿಕ ಸ್ಖಲನ ಮತ್ತು ತಡವಾದ ಸ್ಖಲನದ ಕಾರಣಗಳು

ಅಕಾಲಿಕ ಸ್ಖಲನದ ರೋಗನಿರ್ಣಯವು ಆವರ್ತನ, ಸಮಯ, ಸ್ಖಲನದ ಮೇಲಿನ ನಿಯಂತ್ರಣದ ಮಟ್ಟ ಮತ್ತು ಭಾವನಾತ್ಮಕ ಮತ್ತು ಸಂಬಂಧಿತ ಪ್ರಭಾವವನ್ನು ಒಳಗೊಂಡಿರುತ್ತದೆ. ಕೆಲವೊಮ್ಮೆ ದೈಹಿಕ ಪರೀಕ್ಷೆ ಅಥವಾ ಪ್ರಯೋಗಾಲಯ ಪರೀಕ್ಷೆಗಳನ್ನು ಆಧಾರವಾಗಿರುವ ಪರಿಸ್ಥಿತಿಗಳನ್ನು ತಳ್ಳಿಹಾಕಲು ನಡೆಸಲಾಗುತ್ತದೆ. ಒತ್ತಡ, ಆತಂಕ ಮತ್ತು ಸಂಬಂಧದ ಸಮಸ್ಯೆಗಳಂತಹ ಮಾನಸಿಕ ಅಂಶಗಳು PE ಮತ್ತು DE ಎರಡಕ್ಕೂ ಸಾಮಾನ್ಯ ಕಾರಣವಾಗಿರಬಹುದು.

ಅಕಾಲಿಕ ಸ್ಖಲನವು ಅಸಹಜ ಹಾರ್ಮೋನ್ ಮಟ್ಟಗಳು, ಉರಿಯೂತ, ಪ್ರಾಸ್ಟೇಟ್ ಅಥವಾ ಮೂತ್ರನಾಳದ ಸೋಂಕು ಮತ್ತು ಆನುವಂಶಿಕ ಗುಣಲಕ್ಷಣಗಳಿಂದ ಉಂಟಾಗಬಹುದು. ಮತ್ತೊಂದು ಕಾರಣವಾಗುವ ಅಂಶವೆಂದರೆ ಶಿಶ್ನದ ಮುಂಭಾಗದ ಗ್ರಂಥಿಗಳ ಅತಿಸೂಕ್ಷ್ಮತೆ. “ಈ ಸೂಕ್ಷ್ಮತೆಯು ಶಿಶ್ನದ ತಳದಲ್ಲಿ ಇರುವ ಬಲ್ಬೋಸ್ಪಾಂಜಿಯೋಸಸ್ ಸ್ನಾಯುವಿನ ಸಂಕೋಚನದ ಕಾರಣದಿಂದಾಗಿರುತ್ತದೆ” ಎಂದು ಡಾ ವಾಸನ್ ಹೇಳುತ್ತಾರೆ.

ವಿಳಂಬವಾದ ಸ್ಖಲನವು ಔಷಧಿಗಳು, ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳು, ಶಸ್ತ್ರಚಿಕಿತ್ಸೆಗಳು ಮತ್ತು ಹಾರ್ಮೋನ್ ಅಸಮತೋಲನದ ಕಾರಣದಿಂದಾಗಿರಬಹುದು. “PE ನಂತೆ, ರೋಗನಿರ್ಣಯವು ವೈದ್ಯಕೀಯ ಮತ್ತು ಲೈಂಗಿಕ ಇತಿಹಾಸವನ್ನು ಆಧರಿಸಿದೆ, ವಿಳಂಬದ ಸ್ಥಿರತೆ, ಸಂಬಂಧಿತ ಭಾವನೆಗಳು ಮತ್ತು ಲೈಂಗಿಕ ತೃಪ್ತಿಯ ಮೇಲಿನ ಪರಿಣಾಮಗಳಂತಹ ಅಂಶಗಳನ್ನು ಪರಿಗಣಿಸುತ್ತದೆ. ಆದ್ದರಿಂದ, ದೈಹಿಕ ಮತ್ತು ನರವೈಜ್ಞಾನಿಕ ಪರೀಕ್ಷೆಗಳು ಬೇಕಾಗಬಹುದು” ಎನ್ನುತ್ತಾರೆ ಡಾ ಹೌಮನ್

ಅಕಾಲಿಕ ಸ್ಖಲನ ಮತ್ತು ವಿಳಂಬವಾದ ಸ್ಖಲನವನ್ನು ನಿರ್ವಹಿಸುವುದು

ಎಲ್ಲಾ ಮೂರು ತಜ್ಞರು PE ಮತ್ತು DE ಅನ್ನು ನಿರ್ವಹಿಸಲು ಕೆಳಗಿನ ತಂತ್ರಗಳನ್ನು ಶಿಫಾರಸು ಮಾಡುತ್ತಾರೆ:

ಸ್ಟಾಪ್-ಸ್ಟಾರ್ಟ್ ತಂತ್ರ
ಇದು ನಡವಳಿಕೆಯ ತಂತ್ರವಾಗಿದ್ದು, ವ್ಯಕ್ತಿಯು ಸಂಭೋಗವನ್ನು ನಡೆಸುವಾಗ ಸ್ಖಲನವಾಗುತ್ತದೆ ಎನಿಸಿದಾಗ ಬ್ರೇಕ್ ತೆಗೆದುಕೊಂಡು ಮತ್ತೆ ಮುಂದುವರೆಸುವುದು. ಈ ರೀತಿ ಎರಡು ಮೂರು ಬಾರಿ ಮಾಡುವುದರಿಂದ ಸ್ಖಲನದ ಮೊದಲು ಮತ್ತೆ ಸಮಯವು ನಿಯಂತ್ರಣವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಸ್ಕ್ವೀಜ್ ತಂತ್ರ
ಈ ತಂತ್ರದಲ್ಲಿ, ವ್ಯಕ್ತಿಯು ಸ್ಖಲನಗೊಳ್ಳಲು ಮುಂದಾದಾಗ ಶಿಶ್ನದ ತುದಿಯನ್ನು ಹಿಂಡಲಾಗುತ್ತದೆ. ಸ್ಖಲನ ಸಂಭವಿಸುವ ಮೊದಲು ಈ ಪ್ರಕ್ರಿಯೆಯನ್ನು ಹಲವಾರು ಬಾರಿ ಮಾಡಬಹುದು.

ಸಮಾಲೋಚನೆ ಅಥವಾ ಮಾನಸಿಕ ಚಿಕಿತ್ಸೆ
ಕೆಲವರು ತಮ್ಮ ಸಮಸ್ಯೆ ಅಥವಾ ಅವರ ಸಂಗಾತಿಯ ಕಾರಣದಿಂದ ಸ್ಖಲನಕ್ಕೆ ಹಿಂಜರಿಯಬಹುದು. ಸಮಾಲೋಚನೆ ಮತ್ತು ಮಾನಸಿಕ ಚಿಕಿತ್ಸೆಯ ಮೂಲಕ ವ್ಯಕ್ತಿಯ ಒತ್ತಡ ಮತ್ತು ಪ್ರತಿಬಂಧಕಗಳನ್ನು ಕಡಿಮೆ ಮಾಡಬಹುದು.

SSRI ಬಳಕೆ
ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್‌ಗಳಂತಹ ಖಿನ್ನತೆ-ಶಮನಕಾರಿಗಳನ್ನು ಅಕಾಲಿಕ ಸ್ಖಲನದ ನಿರ್ವಹಣೆಯಲ್ಲಿ ಬಳಸಲಾಗುತ್ತದೆ.

ಆದರೆ ಅಕಾಲಿಕ ಸ್ಖಲನಕ್ಕಿಂತ ತಡವಾದ ಸ್ಖಲನ ವಿಭಿನ್ನವಾಗಿದ್ದು ಚಿಕಿತ್ಸೆ ನೀಡಲು ಕಷ್ಟವಾಗಬಹುದು. ಆದರೆ ಮಾನಸಿಕ ಸಮಾಲೋಚನೆ, ಆಧಾರವಾಗಿರುವ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದು ಮತ್ತು ಕೆಲವೊಮ್ಮೆ ಸ್ಖಲನಕ್ಕೆ ಸಹಾಯ ಮಾಡುವ ಔಷಧಿಗಳನ್ನು ಬಳಸುವುದರ ಮೂಲಕ ನಿರ್ವಹಿಸಬಹುದು ಎಂದು ತಜ್ಞರು ಹೇಳುತ್ತಾರೆ.

ಸಾರಾಂಶ

ಅಕಾಲಿಕ ಸ್ಖಲನವು ಒಂದು ಸ್ಥಿತಿಯಾಗಿದ್ದು, ಸ್ಖಲನವು ಅಪೇಕ್ಷಿತಕ್ಕಿಂತ ಬೇಗ ಸಂಭವಿಸುತ್ತದೆ. ಆದರೆ ತಡವಾದ ಸ್ಖಲನದಲ್ಲಿ ಸ್ಖಲನವಾಗಲು ಸಮಯ ಹೆಚ್ಚು ತೆಗೆದುಕೊಳ್ಳುತ್ತದೆ.
PE ಮತ್ತು DE ಜೈವಿಕ, ಮಾನಸಿಕ ಮತ್ತು ನರವೈಜ್ಞಾನಿಕ ಅಂಶಗಳಿಂದ ಉಂಟಾಗಬಹುದು.
PE ಯನ್ನು ನಿರ್ವಹಿಸಲು ಸ್ಟಾರ್ಟ್-ಸ್ಟಾಪ್ ಮತ್ತು ಸ್ಕ್ವೀಜ್‌ನಂತಹ ನಡವಳಿಕೆಯ ತಂತ್ರಗಳನ್ನು ಬಳಸಬಹುದಾದರೂ, DE ಯನ್ನು ಮಾನಸಿಕ ಸಮಾಲೋಚನೆಯ ಮೂಲಕ ನಿರ್ವಹಿಸಬಹುದು.

ನಿಮ್ಮ ಅನುಭವ /ಕಾಮೆಂಟ್‌ಗಳನ್ನು ಹಂಚಿಕೊಳ್ಳಿ

კომენტარის დატოვება

თქვენი ელფოსტის მისამართი გამოქვეყნებული არ იყო. აუცილებელი ველები მონიშნულია *

ಟ್ರೆಂಡಿಂಗ್

ಲೇಖನಗಳು

ಲೇಖನ
ಭುಜದ ಇಂಪಿಂಗ್ಮೆಂಟ್ ಸಿಂಡ್ರೋಮ್ ಅನ್ನು ಗುಣಪಡಿಸಲು ಸಾಧ್ಯ, ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಲೇಖನ
ಅಜೀರ್ಣ ಅಥವಾ ಅಸಿಡಿಟಿ ಎಂದು ಬಹುತೇಕ ತಪ್ಪಾಗಿ ಗ್ರಹಿಸಲಾಗುವ ಈ ಗ್ಯಾಸ್ಟ್ರೈಟಿಸ್‌ಗೆ ಹೆಚ್ಚಾಗಿ ಯಾರೂ ಚಿಕಿತ್ಸೆ ಪಡೆಯುವುದಿಲ್ಲ 
ಲೇಖನ
ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪಾಲಿಸುವುದು ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಸಂಗಾತಿಯ ಆದ್ಯತೆಗಳ ಬಗ್ಗೆ ಚರ್ಚಿಸುವುದು ಈ ಸಮಯದ ಅನ್ಯೋನ್ಯತೆಯನ್ನು ಉತ್ತಮಗೊಳಿಸುತ್ತದೆ
ಲೇಖನ
ಮಗುವಿನ ಮೂಗಿನಲ್ಲಿ ರಕ್ತಸ್ರಾವವಾದಾಗ​, ಅವರ ತಲೆಯನ್ನು ​ಯಾವಾಗಲೂ ಮುಂದಕ್ಕೆ​ ಬಾಗಿಸುವಂತೆ ​ಮಾಡಿ, ಹಿಂದಕ್ಕೆ ಅಲ್ಲ. ಹಿಂದಕ್ಕೆ ಬಾಗಿದರೆ ರಕ್ತವು ಗಂಟಲಿಗೆ ಇಳಿಯುತ್ತದೆ ಮತ್ತು ಇದರಿಂದ ಉಸಿರುಗಟ್ಟುವಂಥ ಪರಿಸ್ಥಿತಿ ಎದುರಾಗಬಹುದು ಎಂದು ವೈದ್ಯರು ಹೇಳುತ್ತಾರೆ. 
ಲೇಖನ
9 ಮತ್ತು 12 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ ನೀಡುವುದು ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ 
ಲೇಖನ
ಉಚ್ಛ್ವಾಸ ಮತ್ತು ನಿಶ್ವಾಸವನ್ನು ಸರಿಯಾಗಿ ಮಾಡುವ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ 

0

0

0

0

0

0

0

0

0

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient

Opt-in To Our Daily Healthzine

A potion of health & wellness delivered daily to your inbox

Personal stories and insights from doctors, plus practical tips on improving your happiness quotient
We use cookies to customize your user experience, view our policy here

ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.

ಹ್ಯಾಪಿಯೆಸ್ಟ್ ಹೆಲ್ತ್ ತಂಡವು ನಿಮ್ಮನ್ನು ಆದಷ್ಟು ಬೇಗ ತಲುಪುತ್ತದೆ